POLICE BHAVAN KALABURAGI

POLICE BHAVAN KALABURAGI

23 December 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ರಾಜಕುಮಾರ ಪೊಲೀಸ್ ಪೇದೆ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ನಾನು ದಿನಾಂಕ: 23/12/2011 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ತಹಶೀಲ ಕಾರ್ಯಾಲಯದ ಹತ್ತಿರ 7-00 ಗಂಟೆಯ ಸುಮಾರಿಗೆ ಹೋದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಕಾರಣ ಇಲ್ಲದೆ ಹೋಗಿ ಬರುವ ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೋದಂತೆ ಮಾಡುವದು, ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವನನ್ನು ಹಿಡಿದು ಹೆಸರು ವಿಚಾರಿಸಲಾಗಿ ಕುಪ್ಪಣ್ಣ ತಂದೆ ದುರ್ಗಪ್ಪ ಆನಗಳಿ, ವಯ 26, ಉ ಕೂಲಿ ಕೆಲಸ, ಸಾ ಪಾಶಾಪೂರ ಯಾದುಲ್ಲಾ ಕಾಲೋನಿ ಗುಲಬರ್ಗಾ ಅಂತಾ ತಿಳಿದು ಬಂದ ಮೇರೆಗೆ ಠಾಣೆಗ ಕರೆ ತಂದು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 122/2011 ಕಲಂ 324, 504, 307 ಐಪಿಸಿ ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಚಿತ್ತಾಪೂರ ಠಾಣೆ:
ಶ್ರೀ ಮೊಹಮ್ಮದ ಅಯ್ಯುಬ ತಂಧೆ ಅಬ್ದುಲ್ಲಾ ಮೆಮಾರ ವ-44 ಸಾ ತೀನ ಮಳಗಿ ಚಿತ್ತಾಪೂರ ರವರು ನಾನು ಮತ್ತು ನನ್ನ ತಮ್ಮ ಹಾಗು ಮಗನ ಸಂಗಡ ಫಾರೂಕ ಬಾಜೆ ರವರ ಮನೆಯ ಮುಂದೆ ರೋಡಿನ ಮೇಲೆ ನಿಂತಾಗ ಯೂಸೂರ್ಫ ತಂದೆ ಖಾಸಿಂಸಾಬ ಗೌಂಡಿ ಯೂನೂಸ್ ತಂದೆ ಖಾಸಿಂಸಾಬ ಗೌಂಡಿ, ಯಾಸೀನ @ ಪಪ್ಪು ತಂದೆ ಸತ್ತಾರಗೌಂಡಿ ರವರು ಅವಾಚ್ಯವಾಗಿ ಬೈದು ನೀನು ನಿನ್ನೆ ನನ್ನ ಹೆಂಡತಿಗೆ ನಿನ್ನ ಹೆಂಡತಿ ಕಡೆಯಿಂದ ಬೈಸುತ್ತೀ ಇವತ್ತು ನಿನಗೆ ಬಿಡುವದಿಲ್ಲಾ ಅಂತ ಯೂಸೂಫ್ ನು ತಕ್ಕೆಯಲ್ಲಿ ಹಿಡಿದಿದ್ದು ಯೂನೂಸ್ ಇವನು ಚಾಕುವಿನಿಂದ ಅಯ್ಯುಬ ಮತ್ತು ಅಬ್ದುಲ ವಾಹೇದ ರವರಿಗೆ ಚಾಕುವಿನಿಂದ ಹೊಡೆದು ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಮತ್ತು ಅಬ್ದುಲ ಮಲಿಕ ಇವನಿಗೆ ಕಲ್ಲಿನಿಂದ ಹೊಡೆದು ತಲೆಗೆ ಪೆಟ್ಟುಪಡಿಸಿದ್ದು ಸದರಿಯವರು ಹೆಣ್ಣು ಮಕ್ಕಳು ನೀರು ತುಂಬವಲ್ಲಿ ಜಗಳ ಮಾಡಿದ್ದಕ್ಕೆ ವೈಷಮ್ಯ ಬೆಳೆಸಿ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ 122/2011 ಕಲಂ 324,504,307 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸೋಮಯ್ಯ ತಂದೆ ಲಿಂಗಯ್ಯ ಹಿರೇಮಠ ಸಾಃ ಮಹಾಲಕ್ಷ್ಮೀ ಲೇಔಟ್ ಗುಲಬರ್ಗಾರವರು ನಾನು ದಿನಾಂಕ: 23-12-2011 ರಂದು ಸಾಯಂಕಾಲ 4-15 ಗಂಟೆಯ ಸುಮಾರಿಗೆ ಚೌಕ್ ಸರ್ಕಲ್ ದಿಂದ ಮದನ ಟಾಕೀಜ್ ಕಡೆಗೆ ಹೋಗುವ ರೋಡಿಗೆ ಬರುವ ಸತ್ಯಮ್ ಟೇಲರ್ ಅಂಗಡಿ ಎದುರುಗಡೆ ರೋಡಿನ ಮೇಲೆ ಗುಡುಸಾಬ ತಂದೆ ಖಾಸಿಂ ಈತನು ತನ್ನ ಟಾಟಾ ಸುಮೋ ನಂ : KA 28 – 5683 ನೇದ್ದನ್ನು ಚೌಕ್ ಸರ್ಕಲ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಕಾರ ನಂ : KA 32 – N – 0115 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರಿನ ಹಿಂಭಾಗ ಹಾನಿಗೊಳಿಸಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ನಂ: 78/2011 ಕಲಂ 279 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ.
ಶ್ರೀ ಪರಶುರಾಮ ತಂದೆ ಅಣ್ಣಪ್ಪ ದೊಡ್ಡ ಮನಿ ಸಾ: ಚಲಗೇರಾ ಗುಲಬರ್ಗಾರವರು ಅಶ್ವಿನಿ ರುಗ್ನಾಲಯ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಸಾರಾಂಸವೆನೆಂದರೆ ನಾನು ಮತ್ತು ಮಾರುತಿ ತಂದೆ ಶರಣಪ್ಪ ದೊಡ್ಡಮನಿ ರವರು ದಿನಾಂಕ;21/12/2011 ರಂದು ಮಧ್ಯಾನ ಖಾಸಗಿ ಕೇಲಸದ ನಿಮಿತ್ಯವಾಗಿ ದುದನಿಗೆ ಹೊಗಬೇಕಾಗಿದ್ದರಿಂದ ಬಸ ನಿಲ್ದಾಣದ ಹತ್ತಿರ ಬಂದು ಮಾದನ ಹಿಪ್ಪರಗಾ ಕಡೆಯಿಂದ ಒಂದು ಮ್ಯಾಕ್ಸ ಜೀಪ್ ಪ್ಯಾಸೆಂಜರ್ ತುಂಬಿಕೊಂಡು ಚಲಗೇರಾ ಬಸ್ಸ ನಿಲ್ದಾಣದ ಹತ್ತಿರ ಬಂದಾಗ ನಾನು ಜೀಪ ಚಾಲಕನಿಗೆ ಕೈ ಮಾಡಿ ಜೀಪ ನಿಲ್ಲಿಸಿ ಜೀಪ್ ಹತ್ತಲು ಹೋದಾಗ ಜೀಪ ನಂ ಕೆ,ಎ-25 – 3408 ಚಾಲಕನು ಜೀಪ ಪುಲ್ಲ ಆಗಿದೆ, ಜೀಪಿನ ಟಾಪ ಮೇಲೆ ಕುಳಿತು ಕೋಳ್ಳಿರಿ ಅಂತಾ ಹೇಳಿದನು ನನಗೆ ಅರ್ಜೇಂಟೆ ದುದನಿಗೆ ಹೋಗಬೆಕಾಗಿದ್ದರಿಂದ ಸದರಿ ಜೀಪ್ ಟಾಪ ಮೇಲೆ ಎರಿ ಕುಳಿತುಕೊಂಡೆನು ಜೀಪ ನಿಂಬಾಳ ದುದನಿ ರೊಡ ಅಂದಾಜು 1 ಕಿ.ಮೀ.ಅಂತರ ರೊಡಿನಲ್ಲಿ ದುದನಿಕಡೆ ಹೊಗುವ ರಸ್ತೆಯಲ್ಲಿ ಜೀಪ ಚಾಲಕನು ಅತಿವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ನಾನು ಜೀಪಿನ ಮೇಲಿಂದ ಕೇಳೆಗೆ ಬಿದ್ದೆನು ರಕ್ತಗಾಯವಾಗಿರುತ್ತದೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 77/2011 ಕಲಂ 279,337 ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮುನೀರಾಬೇಗಂ ಗಂಡ ಮಹಿಬೂಬ ಪಟೇಲ ಪೋಲೀಸ ಪಾಟೀಲ ಸಾ ಹುಲಸಗೂಡ ತಾ : ಚಿಂಚೋಳಿ ಹಾಃ ವಃ ಮಹಮದಿಯಾ ಮಜೀದ ಅಬುಬಕರ ಕಾಲೋನಿ ಗುಲಬರ್ಗಾ ರವರು ನನ್ನ ಗಂಡನು ದಿನಾಂಕ 18/12/2011 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ತನ್ನ ತಾಯಿ ಮನೆಗೆ ಹೋಗಿ ಮನೆಯಲ್ಲಿ ಚಾಹ ಕುಡಿಯಲು ಸ್ಟೋಗೆ ಹವಾ ಹಾಕಲು ಸ್ಟೋದ ಸೀಮೆ ಎಣ್ಣೆ ಹೊರಗೆ ಬರದ ಕಾರಣ ಜೋರಾಗಿ ಹವಾ ಹಾಕಿ ಪಿನ್‌ ಮಾಡಿದಾಗ ಸೀಮೆಎಣ್ಣೆ ಚಿಮ್ಮಿ ಮೈಮೇಲೆ ಧರಿಸಿದ ಬಟ್ಟೆಯ ಮೇಲೆ ಬಿದ್ದಿದ್ದು ಒಮ್ಮೇಲೆ ಕಡ್ಡಿ ಕೊರೆದು ಸ್ಟೋ ಬೆಂಕಿ ಹಚ್ಚಿದಾಗ ಊರಿ ಬಟ್ಟೆಗೆ ಹತ್ತಿದ್ದರಿಂದ ಪೂರ್ತಿ ಮೈಸುಟ್ಟಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 35/2011 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಸೆಮೀಮ ತಂದೆ ಮಹಮ್ಮದ ಸಲೀಮ ಸಾ; ನಿಯರ ಗುಲಶನ ಚೌಕ ಮದಿನಾ ಕಾಲೂನಿ ಎಂ.ಎಸ್.ಕೆ.ಮಿಲ್ಲ್ ಗುಲಬರ್ಗಾರವರು ನಾನು ಆಳಂದ ಚೆಕ್ಕ ಪೋಸ್ಟ ರಿಂಗರೋಡ ಹತ್ತಿರ ನಾನು ನನ್ನ ಹೀರೊಹೊಂಡಾ ಫ್ಯಾಶನ ಮೋಟಾರ ಸೈಕಲ್ ನಂ.ಕೆ.ಎ.32 ಡಬ್ಲೂ. 7710 ನೆದ್ದರ ಮೇಲೆ ಹೋಗುತ್ತಿರುವಾಗ ಆಳಂದ ಕಡೆಯಿಂದ ಕೆ.ಎಸ್.ಆರ್.ಟಿ. ಬಸ್ಸ ನಂ.ಕೆ.ಎ.32ಎಫ್.1498 ನೆದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ನನಗೆ ಮತ್ತು ಹಿಂದೆ ಕುಳಿತಿದ್ದ ಮಹಮ್ಮದ ಹಲೀಮ ಇಬರಿಗೆ ಗಾಯಗೊಳಿಸಿ ಬಸ್ಸ ನಿಲ್ಲಿಸಿದ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ 277/2011 ಕಲಂ 279 337 338 ಐಪಿಸಿ ಸಂ/ 187 ಐಎಂವಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ದಲಾಗಿದೆ.

22 December 2011

GULBARGA DIST REPORTED CRIME

ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಕೀಶನ ತಂದೆ ವಿಟ್ಟು ಪವಾರ ಉ: ಎನ.ಈ ಕೆ.ಎಸ್.ಆರ್.ಟಿ.ಸಿ ಡಿವಿಜನ ಆಪೀಸ ಗುಲಬರ್ಗಾ ಕಛೇರಿ ಖಾಸಗಿ ಭದ್ರತಾ ರಕ್ಷಕರು ಹಾವ ಮನೆ ನಂ 11-1791/4 ವಿದ್ಯಾನಗರ ಗುಲಬರ್ಗಾ ರವರು ನಾನು ವಿಭಾಗೀಯ ಕಛೇರಿಯಲ್ಲಿ ಕೆಲಸದಲ್ಲಿ ನಿರತನಾಗಿದ್ದಾಗ ಶಿವಶರಣಪ್ಪ ನಾಯಿಕೊಡಿ ಚಾಲಕ ಪಿ ಸಂ 5713 ಘಟಕ 2 ಇತನು ಬಂದು ನನಗೆ ಏಕ ವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಟೇಬಲನ್ನು ಜಗ್ಗಾಡಿ ಕೆಲಸಕ್ಕೆ ಅಡೆತಡೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದನು. ಈ ಘಟನೆಯನ್ನು ತಡೆಯುವದಕ್ಕಾಗಿ ಪಿ.ಎನ್ ಕೆಂಬಾವಿ ಸಹಾಯಕ ಭದ್ರತಾ ನಿರೀಕ್ಷಕರು ಹಾಗೂ ಗುಂಡಪ್ಪ ಭದ್ರತಾ ಹವಾಲ್ದಾರ ಇವರುಗಳು ನೋಡಿ ಶಿವಶರಣಪ್ಪ ಚಾಲಕನಿಗೆ ಬುದ್ದಿ ಹೇಳಿದರು ಸಹಿತ ಕೇಳಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 215/2011 ಕಲಂ 353, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ದರೋಡೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
:ಶ್ರೀ ಪ್ರಮೋದ ತಂದೆ ದೇವಿಂದ್ರಪ್ಪ ಚಿಂಚನಸೂರ ಸಾ: ಕಡಗಂಚಿ ತಾ:ಆಳಂದ ಜಿ: ಗುಲಬರ್ಗಾರವರು ನಾನು ದಿನಾಂಕ 21-12-11 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅನ್ನಪೂರ್ಣ ಕ್ರಾಸದಿಂದ ಕೇಂದ್ರ ಬಸ ನಿಲ್ದಾಣಕ್ಕೆ ಹೋಗುವ ಕುರಿತು ಕೈ ಮಾಡಿ ಆಟೋರಿಕ್ಷಾ ಕೆಎ 32 7326 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು ಆಟೋದಲ್ಲಿ ಆಟೋ ಚಾಲಕ ಮತ್ತು ಹಿಂದೆ ಕುಳಿತ ಇನ್ನೊಬ್ಬ ಇಬ್ಬರು 25-30 ವರ್ಷ ವಯಸ್ಸಿನವರು ರಾತ್ರಿ 8-30 ಗಂಟೆ ಸುಮಾರಿಗೆ ಕೇಂದ್ರ ಬಸ ನಿಲ್ದಾಣದ ಹತ್ತಿರ ಬಂದಾಗ ಆಟೋ ನಿಲ್ಲಿಸಲು ಹೇಳಿದಾಗ, ಆಟೋದ ಹಿಂದೆ ಕುಳಿತ ವ್ಯಕ್ತಿ ಸುಮ್ಮನೆ ಕೂಡು ಸೂಳೇ ಮಗನೇ ಅಂತಾ ಬೈದು ಮುಷ್ಟಿ ಮಾಡಿ ಮುಖಕ್ಕೆ ಹೊಡೆದು ಬಾಯಿ ಒತ್ತಿ ಹಿಡಿದು ಮುಂದೆ ಕಣ್ಣಿ ಮಾರ್ಕೆಟ ಹತ್ತಿರ ಆಟೋ ಸ್ವಲ್ಪ ಸ್ಲೋ ಮಾಡಿ ಆಟೋ ಚಾಲಕ ಮತ್ತು ಹಿಂದೆ ಕುಳಿತವನು ನಿನ್ನ ಹತ್ತಿರ ಎಷ್ಣು ಹಣ ಇದೆ ತೆಗೆ ಅಂತಾ ಹೇಳಿ ಶರ್ಟ ಮತ್ತು ಪ್ಯಾಂಟ ಜೇಬಿನಲ್ಲಿ ಕೈ ಹಾಕಿ ಲಾವಾ ಕಂಪನಿಯ ಮೋಬಾಯಿಲ ಕಿತ್ತುಕೊಂಡರು. ಹೀರಾಪೂರ ರಿಂಗ ರೋಡ ಮೊಲಕ ಚೋರ ಗುಮ್ಮಜ ಗುಡ್ಡದ ಹತ್ತಿರ ಆಟೋ ನಿದಾನಗತಿಯಲ್ಲಿದ್ದಾಗ ಒಬ್ಬನ್ನು ಕೆಳೆಗೆ ಹಾರಿದನು. ಆಗ ಇಬ್ಬರು ಬಂದು ಮತ್ತೆ ನನಗೆ ಜಬರ ದಸ್ತಿಯಿಂದ ಆಟೋದಲ್ಲಿ ಕೂಡಿಸಿಕೊಂಡು ಆಳಂದ ಚೆಕ್ಕ ಪೋಸ್ಟ ಮೊಲಕ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ ಒಳಗೆ ಕರೆದುಕೊಂಡು ಹೋಗಿ ನನಗೆ ಇಳಿಸಿ ಕೈಯಿಂದ ಪ್ಲಾಸ್ಟಿಕ ಪೈಪದಿಂದ ಬಲ ಮೊಳಕೈ ಬೆನ್ನಿಗೆ ಹೊಡೆದು ದು:ಖಾಪತಗೊಳಿಸಿ ಪ್ಯಾಂಟಿನ ವಾಚ ಪಾಕೇಟದಲ್ಲಿದ್ದ 3100/- ರೂ. ಜಬರ ದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 375/2011 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ ಸದಾನಂದ ತಂದೆ ಮಲ್ಲಿಕಾರ್ಜುನ @ ಮಲ್ಕಪ್ಪ ವಾಲೀಕರ ಉ:ಟಂಟಂ ಕೆಎ 32 ಎ 9151 ಚಾಲಕ ಸಾ:ಯಳವಂತಗಿ ತಾ:ಜಿ: ಗುಲಬರ್ಗಾ ರವರು ನನಗೆ ನನ್ನ ಸಂಬಂಧಿಕರು ಹುಮನಾಬಾದ ರಿಂಗ ರೋಡಿಗೆ ಬರುವಂತೆ ಹೇಳಿದ್ದರಿಂದ ನಾನು ಅಲ್ಲಿಗೆ ಹೋಗಿ ಅವರೆಲ್ಲರನ್ನೂ ಕೂಡಿಸಿಕೊಂಡು ಉಪಳಾಂವ ಕ್ರಾಸ ದಾಟಿ ಬಿರಾದಾರ ಕಂಕರ ಮಶೀನ ಎದುರು ರೋಡಿನ ಮೇಲೆ ನನ್ನ ಸೈಡ ಹಿಡಿದು ನಾನು ಚಲಾಯಿಸುತ್ತಿದ್ದಾಗ ಹುಮನಾಬಾದ ರೋಡ ಕಡೆಯಿಂದ ಲಾರಿ ಕೆಎ 32 ಬಿ 5826 ಚಾಲಕ ಪ್ರಕಾಶ ತಂದೆ ಲಕ್ಕಪ್ಪ ಫಿರಂಗಿ ಸಾ: ಗೌನಳ್ಳಿ ತಾ:ಚಿಂಚೋಳಿ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಟಂಟಂ ಕೆಎ 32 ಎ 9151 ನೇದ್ದಕ್ಕೆ ಡಿಕ್ಕಿ ಪಡಿಸಿ ಲಾರಿ ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 376/2011 ಕಲಂ 279, 337, 338 ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.