POLICE BHAVAN KALABURAGI

POLICE BHAVAN KALABURAGI

06 October 2011

Gulbarga District Reported Crimes

ವರದಕ್ಷಣಿ ಕಿರುಕಳ ನೀಡಿ ಪತ್ನಿಗೆ ಬೆಂಕಿ ಹಚ್ಚಿದ ಪತಿ :
ಮಹಿಳಾ ಠಾಣೆ :ಶ್ರೀಮತಿ ಶಶಿಕಲಾ ಗಂಡ ಅಂಬಾರಾಯ ಬಿರಾದಾರ ಸಾ
;ರಾಜೀವ ಗಾಂಧಿ ನಗರ ಗುಲಬರ್ಗಾ ರವರ ಮದುವೆಯು ಈಗ 5 ವರ್ಷಗಳ ಹಿಂದೆ ರಾಜು ಗಾಂಧಿ ನಗರ ಫೀಲ್ಟರ್ ಬೆಡ್ ಗುಲಬರ್ಗಾದವನಾದ ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಇತನೊಂದಿಗೆ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ 5 ತೋಲೆ ಬಂಗಾರ ,ಮತ್ತು 1,00,000-00 ರೂ. ಮದುವೆ ಖರ್ಚಗೆಂದು ಕೊಟ್ಟಿದ್ದು, ಮದುವೆಯಾದ ಸ್ವಪ್ಪ ದಿನ ಚನ್ನಾಗಿ ನೋಡಿಕೊಂಡು ನಂತರ 1)ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ರಾಜುಗಾಂಧಿ ನಗರ ಗುಲಬರ್ಗಾ. 2.ಪುತಳಾಬಾಯಿ ಗಂಡ ದೇವಿಂದ್ರಪ್ಪ ಬಿರಾದಾರ ಸಾ:ಆಲೂರ ತಾ;ಆಳಂದ 3.ದೇವಿಂದ್ರಪ್ಪ ತಂದೆ ಗುರುಲಿಂಗಪ್ಪಾ 4.ರಾಜಕುಮಾರ ತಂದೆ ದೇವಿಂದ್ರಪ್ಪ 5.ವಿಜಮ್ಮ ಗಂಡ ರಾಜಕುಮಾರ 6.ಸವಿತಾ ಗಂಡ ಶಿವಪುತ್ರ 7)ಚಂದ್ರಕಾಂತ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ಎಲ್ಲರೂ ಫೀಲ್ಟರ್ ಬೆಡ್ ರಾಜು ಗಾಂಧಿ ನಗರ ಗುಲಬರ್ಗಾ. ಎಲ್ಲರು ಕೋಡಿಕೊಂಡು ತವರುಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಪಿಡಿಸಿ ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಕಿರುಕಳ ಕೊಡುತ್ತಾ ಬಂದು ದಿನಾಂಕ 29-09-20111 ರಂದು ಮಧ್ಯಾಹ್ನ ವಿಜಮ್ಮ ಹೋಳಿಗೆ ಹಿಟ್ಟು ಕೇಳಿದ್ದು, ನಾನು ಇಲ್ಲ ಅಂತಾ ಹೇಳಿದಾಗ ಎಲ್ಲರು ಸೇರಿ ಜಗಳ ತೆಗೆದು ಹೊಡೆಬಡೆ ಮಾಡಿದ್ದು ಸಂಜೆ 5-00 ಗಂಟೆಗೆ ನನ್ನ ಗಂಡ ಮನೆಗೆ ಬಂದ ಮೇಲೆ ಇಲ್ಲ ಸಲ್ಲದ ಮಾತು ಹೇಳಿದ್ದರಿಂದ ನನ್ನ ಗಂಡ ನನಗೆ ಜಗಳ ತೆಗೆದು ಈಕೆಗೆ ಸುಟ್ಟು ಹಾಕು ಅಂದಾಗ ನನ್ನ ಗಂಡ ನನ್ನ ಮೇಮೇಲೆ ಸೀಮೆಎಣ್ಣೆ ಸುರುವಿದ ಆಗ ವಿಜಮ್ಮ ಬೆಂಕಿ ಹಚ್ಚಿದಳು ನಾನು ಗಾಬರಿಗೊಂಡು ಗಾದಿ ತೆಗೆದುಕೊಂಡು ಸುರಳಿ ಹೊಡೆದುಕೊಂಡೆನು. ಅಷ್ಟರಲ್ಲಿ ನನ್ನ ಗಂಡ ಬಂದು ಪೂರ್ತಿ ಆರಿಸಿದನು. ನನಗೆ ಸಾಯಿಸಬೇಕು ಅಂತಾ ಆಲೂರಕ್ಕೆ ತೆಗೆದುಕೊಂಡು ಹೋದರು. ನನ್ನ ಅತ್ತೆ, ಮಾವ ಈ ರಂಡಿಯನ್ನು ಇಲ್ಲಿಗೇಕೆ ತಂದೀರಿ ಅಲ್ಲೇ ಸಾಯಿಸಬೇಕಿತ್ತು ಅಂತಾ ಒಂದು ರೂಮಿನಲ್ಲಿ ಹಾಕಿದರು. ಮರುದಿನ ನಮ್ಮ ಕಾಕ ಶಂಕರ ಇವರು ಊರಿಗೆ ಬಂದು ನನಗೆ ಗುಲಬರ್ಗಾಕ್ಕೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದರು. ನನಗೆ ನನ್ನ ಗಂಡನ ಮನೆಯವರು ಅಂಜಿಸಿದ್ದಕ್ಕೆ ನಾನು ಸ್ಟೋ ಬ್ಲಾಸ್ಟ್ ಆಗಿದೆ ಅಂತಾ ಸುಳ್ಳು ಹೇಳಿದ್ದೆನೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 05-10-2011 ರಂದು ಶ್ರೀ ನವೀನಕುಮಾರ ತಂದೆ. ಶಿವಶರಣಪ್ಪ ರಾಜೆ ಸಾ:-ಎಲ್ ಐ.ಜಿ 3 ಮನೆ ನಂ 04 ಆದರ್ಶನಗರ ಗುಲಬರ್ಗಾ ಮತ್ತು ತನ್ನ ಗೆಳೆಯ ಮಜಿರೋದಿನ್‌ ಪಟೇಲ ಇವರ ಸಂಬಂಧಿಕರ ಮನೆಯಲ್ಲಿ ಕಾರ್ಯಾಕ್ರಮಕ್ಕೆ ಹೋಗಿ ಕಾರ್ಯ ಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಗೆಳೆಯರೊಂದಿಗೆ ಕಾರ ನಂ ಕೆಎ -05 ಎಮ್‌ಜಿ 171 ನೇದ್ದರಲ್ಲಿ ಕುಳಿತು ಹೊರಟಿದ್ದು ರಿಂಗ ರೋಡ ಜಲಶುದ್ದೀಕರಣ ಘಟಕ ಹತ್ತಿರ ಕಾರ ಚಲಾಯಿಸುತ್ತಿದ್ದ ಮಜೀರೊ ದ್ದೀನ ಪಟೇಲ ಇತನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಜಲಶುದ್ದೀಕರಣ ಘಟಕದ ಹತ್ತಿರ ಹೋಗುತ್ತಿದ್ದಾಗ ಎದುರಿಗೆ ಎಮ್ಮೆ ಬಂದಾಗ ಒಮ್ಮೇಲೆ ಕಟ್‌ ಮಾಡಿದ್ದ ರಿಂದ ನಾವು ಕುಳಿತು ಹೊರಟ ಕಾರ ಪಲ್ಟಿಯಾಗಿ ಅದರಲ್ಲಿ ನನಗೆ ಹಾಗೂ ಅತನ ಗೆಳೆಯರಿಗೆ ಬಾರಿಗಾಯ ಹಾಗೂ ಸಾದಾಗಾಯ ವಾಗಿರುತ್ವೆ ಅಂತಾ ಸಲ್ಲಿಸಿದ ದೂರು ಸಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 October 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಸಿದ್ದಣ್ಣಾ ತಂದೆ ಗುರಲಿಂಗಪ್ಪಾ ದೇವರನಡಗಿ ಸಾ:ಫರಹತಾಬಾದ ರವರು, ನಮ್ಮ ಹೊಲದಲ್ಲಿ ಕೆಲಸ ಮಾಡುವ ಸಲುವಾಗಿ ನಮ್ಮೂರಿನ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ ಮೂಲಕ ರಸ್ತೆಯ ಎಡಗಡೆಯಿಂದ ಎಸ್.ಎಲ್.ವಿ ಧಾಬಾದ ಮುಂದಿನ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಜೇವರ್ಗಿ ಕಡೆಯಿಂದ ಟಾವೆರಾ ಕಾರ ಕೆಎ-32 ಎಮ್-5677 ನೇದ್ದರ ಚಾಲಕ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಲಗಶೇಟಿ ಸಾ: ಶೇಳ್ಗಿ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಬಲಗಡೆಯ ರಸ್ತೆ ಬದಿಯಲ್ಲಿ ಬಂದು ನನಗೆ ಅಪಘಾಪಡಿಸಿದ್ದರಿಂದ ಗಾಯವಾಗಿರುತ್ತದೆ. ಚಾಲಕನು ಅಪಘಾತಪಡಿಸಿ ಕಾರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ :
ಶ್ರೀ, ಶಿವಕಾಂತ ತಂದೆ ಚಂದ್ರಕಾಂತ ಮಹಾಜನ ವ|| 37 ಉ|| ಕಾಂಟ್ರ್ಯಾಕ್ಟರ್ ಸಾ|| ಆನಂದ ನಗರ ಎಸ್.ಬಿ. ಕಾಲೇಜ ರಸ್ತೆ ಗುಲಬರ್ಗಾ ಇವರು ದಿನಾಂಕ 26.09.2011 ರಂದು ಸೂರ್ಯಕಾಂತ ತಂದೆ ರೇವಣಸಿದ್ದಪ್ಪ ಹುಗಾರ ಸಾ|| ಭೋಪಾಲ ತೆಗನೂರ ತಾ| ಜಿ|| ಗುಲಬರ್ಗಾ ಇತನು ಫಿರ್ಯಾದಿಯು ಮನೆಯಲ್ಲಿ ಇಲ್ಲಾದಾಗ ಡೆಬಿಟ್ ಕಾರ್ಡ ಕಳವು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಡೆಬಿಟ್ ಕಾರ್ಡ ಉಪಯೋಗಿಸಿ ಪೆಟ್ರೋಲ, ಖರೀದಿ ಮತ್ತು ಎರಡು ಮೊಬೈಲ್ ಖರೀದಿ ಮಾಡಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ದಿನಾಂಕ 3/10/2011 ರಂದು ಸಾಯಂಕಾಲ ಶ್ರೀ ಶ್ರೀಶೈಲ ತಂದೆ ಮಲ್ಲಿಕಾರ್ಜುನ ಸ್ಥಾವರಮಠ ಸಾ:ಗುಬ್ಬಿ ಕಾಲೋನಿ ಗುಲ್ಬರ್ಗಾ ರವರು ತನ್ನ ಸೋದರ ಮಾವನೊಂದಿಗೆ ಹುಮನಾಬಾದ ರಿಂಗ ರೋಡದಲ್ಲಿ ಶ್ರೀರಾಮ ಪೈನಾನ್ಸ್‌‌ ಮುಂದಿನ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಹುಮನಾಬಾದ ರಿಂಗ ರೋಡ ಕಡೆಯಿಂದ ಆಟೋ ನಂ ಕೆಎ 32 8135 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಗೆ ಹಾಯಿಸಿದ್ದು ಅದರಿಂದ ಬಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯ ಮಾಡಲು ಅಡೆ ತಡೆ ಮಾಡಿದ ಪ್ರಕರಣ :

ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 04-10-2011 ರಂದು ಶ್ರೀ ವಿ.ಎಂ. ಹಾಗರಗಿ ಚೇರಮನ್ ಕೃಷ್ಣಾ ಗ್ರಾಮೀಣ ಬ್ಯಾಂಕ್ ಆನಂದ ನಗರ ಗುಲಬರ್ಗಾ ಇವರು ಪಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆಂದರೆ ದಿನಾಂಕ 03-10-2011 ರಂದು 01:30 ಪಿ.ಎಂ. ಕ್ಕೆ ಮತ್ತು 04-10-2011 ರಂದು 09:15 ಎ.ಎಂ. ಕ್ಕೆ ಪಿರ್ಯಾದಿದಾರರಿಗೆ ಆರೋಪಿತನಾದ ಬಿ.ಆರ್ ರಾಮಪುರೆ ಇತನು ಮೊಬೈಲ ಮೂಲಕ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಇಂದು ದಿನಾಂಕಃ 04/10/2011 ರಂದು 03:02 ಪಿ.ಎಂ. ಕ್ಕೆ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಖ್ಯ ಕಛೇರಿಗೆ ಬಂದು ಕರ್ತವ್ಯಕ್ಕೆ ಅಡೆ ತಡೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.