ವರದಕ್ಷಣಿ ಕಿರುಕಳ ನೀಡಿ ಪತ್ನಿಗೆ ಬೆಂಕಿ ಹಚ್ಚಿದ ಪತಿ :
ಮಹಿಳಾ ಠಾಣೆ :ಶ್ರೀಮತಿ ಶಶಿಕಲಾ ಗಂಡ ಅಂಬಾರಾಯ ಬಿರಾದಾರ ಸಾ;ರಾಜೀವ ಗಾಂಧಿ ನಗರ ಗುಲಬರ್ಗಾ ರವರ ಮದುವೆಯು ಈಗ 5 ವರ್ಷಗಳ ಹಿಂದೆ ರಾಜು ಗಾಂಧಿ ನಗರ ಫೀಲ್ಟರ್ ಬೆಡ್ ಗುಲಬರ್ಗಾದವನಾದ ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಇತನೊಂದಿಗೆ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ 5 ತೋಲೆ ಬಂಗಾರ ,ಮತ್ತು 1,00,000-00 ರೂ. ಮದುವೆ ಖರ್ಚಗೆಂದು ಕೊಟ್ಟಿದ್ದು, ಮದುವೆಯಾದ ಸ್ವಪ್ಪ ದಿನ ಚನ್ನಾಗಿ ನೋಡಿಕೊಂಡು ನಂತರ 1)ಅಂಬಾರಾಯ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ರಾಜುಗಾಂಧಿ ನಗರ ಗುಲಬರ್ಗಾ. 2.ಪುತಳಾಬಾಯಿ ಗಂಡ ದೇವಿಂದ್ರಪ್ಪ ಬಿರಾದಾರ ಸಾ:ಆಲೂರ ತಾ;ಆಳಂದ 3.ದೇವಿಂದ್ರಪ್ಪ ತಂದೆ ಗುರುಲಿಂಗಪ್ಪಾ 4.ರಾಜಕುಮಾರ ತಂದೆ ದೇವಿಂದ್ರಪ್ಪ 5.ವಿಜಮ್ಮ ಗಂಡ ರಾಜಕುಮಾರ 6.ಸವಿತಾ ಗಂಡ ಶಿವಪುತ್ರ 7)ಚಂದ್ರಕಾಂತ ತಂದೆ ದೇವಿಂದ್ರಪ್ಪ ಬಿರಾದಾರ ಸಾ:ಎಲ್ಲರೂ ಫೀಲ್ಟರ್ ಬೆಡ್ ರಾಜು ಗಾಂಧಿ ನಗರ ಗುಲಬರ್ಗಾ. ಎಲ್ಲರು ಕೋಡಿಕೊಂಡು ತವರುಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಪಿಡಿಸಿ ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಕಿರುಕಳ ಕೊಡುತ್ತಾ ಬಂದು ದಿನಾಂಕ 29-09-20111 ರಂದು ಮಧ್ಯಾಹ್ನ ವಿಜಮ್ಮ ಹೋಳಿಗೆ ಹಿಟ್ಟು ಕೇಳಿದ್ದು, ನಾನು ಇಲ್ಲ ಅಂತಾ ಹೇಳಿದಾಗ ಎಲ್ಲರು ಸೇರಿ ಜಗಳ ತೆಗೆದು ಹೊಡೆಬಡೆ ಮಾಡಿದ್ದು ಸಂಜೆ 5-00 ಗಂಟೆಗೆ ನನ್ನ ಗಂಡ ಮನೆಗೆ ಬಂದ ಮೇಲೆ ಇಲ್ಲ ಸಲ್ಲದ ಮಾತು ಹೇಳಿದ್ದರಿಂದ ನನ್ನ ಗಂಡ ನನಗೆ ಜಗಳ ತೆಗೆದು ಈಕೆಗೆ ಸುಟ್ಟು ಹಾಕು ಅಂದಾಗ ನನ್ನ ಗಂಡ ನನ್ನ ಮೇಮೇಲೆ ಸೀಮೆಎಣ್ಣೆ ಸುರುವಿದ ಆಗ ವಿಜಮ್ಮ ಬೆಂಕಿ ಹಚ್ಚಿದಳು ನಾನು ಗಾಬರಿಗೊಂಡು ಗಾದಿ ತೆಗೆದುಕೊಂಡು ಸುರಳಿ ಹೊಡೆದುಕೊಂಡೆನು. ಅಷ್ಟರಲ್ಲಿ ನನ್ನ ಗಂಡ ಬಂದು ಪೂರ್ತಿ ಆರಿಸಿದನು. ನನಗೆ ಸಾಯಿಸಬೇಕು ಅಂತಾ ಆಲೂರಕ್ಕೆ ತೆಗೆದುಕೊಂಡು ಹೋದರು. ನನ್ನ ಅತ್ತೆ, ಮಾವ ಈ ರಂಡಿಯನ್ನು ಇಲ್ಲಿಗೇಕೆ ತಂದೀರಿ ಅಲ್ಲೇ ಸಾಯಿಸಬೇಕಿತ್ತು ಅಂತಾ ಒಂದು ರೂಮಿನಲ್ಲಿ ಹಾಕಿದರು. ಮರುದಿನ ನಮ್ಮ ಕಾಕ ಶಂಕರ ಇವರು ಊರಿಗೆ ಬಂದು ನನಗೆ ಗುಲಬರ್ಗಾಕ್ಕೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದರು. ನನಗೆ ನನ್ನ ಗಂಡನ ಮನೆಯವರು ಅಂಜಿಸಿದ್ದಕ್ಕೆ ನಾನು ಸ್ಟೋ ಬ್ಲಾಸ್ಟ್ ಆಗಿದೆ ಅಂತಾ ಸುಳ್ಳು ಹೇಳಿದ್ದೆನೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 05-10-2011 ರಂದು ಶ್ರೀ ನವೀನಕುಮಾರ ತಂದೆ. ಶಿವಶರಣಪ್ಪ ರಾಜೆ ಸಾ:-ಎಲ್ ಐ.ಜಿ 3 ಮನೆ ನಂ 04 ಆದರ್ಶನಗರ ಗುಲಬರ್ಗಾ ಮತ್ತು ತನ್ನ ಗೆಳೆಯ ಮಜಿರೋದಿನ್ ಪಟೇಲ ಇವರ ಸಂಬಂಧಿಕರ ಮನೆಯಲ್ಲಿ ಕಾರ್ಯಾಕ್ರಮಕ್ಕೆ ಹೋಗಿ ಕಾರ್ಯ ಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಗೆಳೆಯರೊಂದಿಗೆ ಕಾರ ನಂ ಕೆಎ -05 ಎಮ್‌ಜಿ 171 ನೇದ್ದರಲ್ಲಿ ಕುಳಿತು ಹೊರಟಿದ್ದು ರಿಂಗ ರೋಡ ಜಲಶುದ್ದೀಕರಣ ಘಟಕ ಹತ್ತಿರ ಕಾರ ಚಲಾಯಿಸುತ್ತಿದ್ದ ಮಜೀರೊ ದ್ದೀನ ಪಟೇಲ ಇತನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಜಲಶುದ್ದೀಕರಣ ಘಟಕದ ಹತ್ತಿರ ಹೋಗುತ್ತಿದ್ದಾಗ ಎದುರಿಗೆ ಎಮ್ಮೆ ಬಂದಾಗ ಒಮ್ಮೇಲೆ ಕಟ್ ಮಾಡಿದ್ದ ರಿಂದ ನಾವು ಕುಳಿತು ಹೊರಟ ಕಾರ ಪಲ್ಟಿಯಾಗಿ ಅದರಲ್ಲಿ ನನಗೆ ಹಾಗೂ ಅತನ ಗೆಳೆಯರಿಗೆ ಬಾರಿಗಾಯ ಹಾಗೂ ಸಾದಾಗಾಯ ವಾಗಿರುತ್ವೆ ಅಂತಾ ಸಲ್ಲಿಸಿದ ದೂರು ಸಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment