POLICE BHAVAN KALABURAGI

POLICE BHAVAN KALABURAGI

02 September 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ರಾಘವೇಂದ್ರ ತಂದೆ ರಂಗರಾವ ದೇಶಪಾಂಡೆ ರವರು ಸಾ: ರೈಲ್ವೆ ಸ್ಷೇಷನ ಹತ್ತಿರ ಶಹಾಬಾದ ರವರು ನನ್ನ ತಮ್ಮನಾದ ದನಂಜಯ ಇತನು ಮೊಟಾರ ಸೈಕಲ ನಂ: ಕೆಎ-32 ಎಸ್.3128 ನೇದ್ದರ ಮೇಲೆ ಶಹಾಬಾದದಿಂದ ಜಗಜೀವನರಾಮ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೊಟಾರ ಸೈಕಲ ಮೇಲಿಂದ ಬಿದ್ದು ಬಲಗಣ್ಣಿನ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ. ಬಲಗಣ್ಣಿನ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿ ಅವನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇರುವದರಿಂದ ಹೈದ್ರಾಬಾದದ ಕಾಮಿನೆನಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ : ಪ್ರೇಮಕುಮಾರ ತಂದೆ ಗೋಪಾಲ ಚವ್ಹಾಣ ರವರು ಸಾ: ನಿಂಬರ್ಗಾ ತಾಂಡಾ ಹಾ.ವ: ರೂಮ ನಂ. 33 ಕೊಕಣ ವಸಾದ ಬಿರ್ಲಾ ಕಾಲೇಜ ರೋಡ ಕಲ್ಯಾಣವ (ಪೂರ್ವ) ಜಿ: ಠಾಣೆ (ಮಹಾರಾಷ್ಟ್ರ ರಾಜ್ಯ) ರವರು ನ್ಯೂಜ ಪೇಪರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಲಬರ್ಗಾದಲ್ಲಿ ಬಸ್ ಡ್ರೈವರ ಮತ್ತು ಬಸ್ ಕಂಡಕ್ಟರ್ ಹುದ್ದೆಗೆ ಅರ್ಜಿ ಹಾಕುವ ಸಲುವಾಗಿ ಗುಲಬರ್ಗಾಕ್ಕೆ ಬಂದು ನನ್ನ ಪರಿಚಯದವರಾದ ಕಿಶನ್ ರಾಠೋಡ ರವರಿಗೆ ಕರೆಯಿಸಿದಾಗ ಅವರು ಮದ್ಯಾಹ್ನ ಸುಮಾರಿಗೆ ಜೇವರ್ಗಿ ಕ್ರಾಸ (ರಾಷ್ಟ್ರಪತಿ ಸರ್ಕಲ್) ಹತ್ತಿರ ಬಂದು ಕೆ. ಎಸ್.ಆರ್.ಟಿ.ಸಿ. ಸ್ಲೀಪ್ ಕೊಟ್ಟರು. ನಂತರ ನಾನು ನಮ್ಮ ಸ್ವಗ್ರಾಮ ನಿಂಬರ್ಗಾ ತಾಂಡಾಕ್ಕೆ ಹೋಗಲು ಬಸ್ ಸ್ಟ್ಯಾಂಡ ಕಡೆಗೆ ಬರುತ್ತಿರುವಾಗ 2-30 ಗಂಟೆ ಸುಮಾರಿಗೆ ಸಂಗಮೇಶ್ವರ ಆಸ್ಪತ್ರೆ ಎದುರುಗಡೆ ರಸ್ತೆಯ ಮೇಲೆ ಇಬ್ಬರು ಅಪರಿಚಿತ 25 ರಿಂದ 30 ವಯಸ್ಸಿನ ವ್ಯಕ್ತಿಗಳು ಹಿಂದಿಯಲ್ಲಿ ಮಾತಾಡುತ್ತಾ ಬಂದವರೇ ಒಮ್ಮೇಲೆ ನನ್ನನ್ನು ತಡೆದು ನಿಲ್ಲಿಸಿ ಚಾಕುವಿನಿಂದ ಬಲಗೈ ರಟ್ಟೆಗೆ ಹೊಡೆದರು. ಮತ್ತು ಇನ್ನೊಬ್ಬ ಕೈ ಮುಷ್ಟಿ ಮಾಡಿ ಎದೆಗೆ ಗುದ್ದಿ " ನಿಕಾಲಬೇ ಸಾಲೆ ಕಿತನೇ ಹೈ ಪೈಸೆ " ಅಂತಾ ಅಂದವರೇ ಜಬರ ದಸ್ತಿಯಿಂದ ಜೇಬಿನಲ್ಲಿ ಕೈ ಹಾಕಿ ಪರ್ಸನಲ್ಲಿದ್ದ 1500=00 ರೂ. ಮತ್ತು ಒಂದು ಸೋನಿ ಎರೇಕ್ಷನ್ ಕಂಪನಿಯ ಮೋಬಾಯಿಲ್ ಫೋನ್ ಸಿಮ್ ನಂ. 09987462597 ಅ.ಕಿ. 5,000/- ರೂ. ನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಫರಹತಾಬಾದ ಠಾಣೆ :
ಮಾಳಪ್ಪಾ ತಂದೆ ಸಾಯಬಣ್ಣಾ ಪೂಜಾರಿ ಸಾ: ಜೋಗೂರ ರವರು ನಾನು ಮನೆಯಲ್ಲಿ ಇದ್ದಾಗ ಅಮೋಗಿ ತಂದೆ ಸಾಯಬಣ್ಣಾ ಪೂಜಾರಿ ಸಂಗಡ ಒಬ್ಬರು ಇಬ್ಬರೂ ಸಾ: ಜೋಗೂರ ರವರು ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಸೂಳೆ ಮಗನೇ ಹೋಲ ಕೇಳುತ್ತಿ ಅಂತಾ ಬೈದು ತನ್ನ ಕೈಯಿಲ್ಲಿದ್ದ ಒಡ ಕಟ್ಟಿಗೆಯಿಂದ ನನ್ನ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು ಇನ್ನೊಬರು ಇವರಿಗೆ ಬಹಳ ಸೋಕ್ಕು ಬಂದಿದೆ ಅಂತಾ ಬೈದು ಕೂದಲು ಹಿಡಿದು ಜಗ್ಗಾಡಿದರು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಅಪಹರಣ ಪ್ರರಕಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ
: ಮಹ್ಮದ ಅಜರ ಅವನ ಗೆಳೆಯರಾದ ಮಹ್ಮದ ಮೊಬಿನ್ ಹಾಗು ಫರೀದ ಮೂವರು ಕೂಡಿಕೊಂಡು ಶಟ್ಟಿಫನ್ ಟಾಕೀಸ್ ನಲ್ಲಿ ಸಿನೆಮಾ ನೋಡಲು ಹೋದಾಗ, ರಾತ್ರಿ 11 ಗಂಟೆಯ ಸುಮಾರಿಗೆ 8-10 ಜನರ ಗುಂಪು ಒಮ್ಮೆಲೆ ಕೂಗಾಡುತ್ತಾ, ಚಿರಾಡುತ್ತಾ ಟಾಕೀಸ ಒಳಗೆ ಬಂದು, ಅವರಲ್ಲಿಯ ಒಬ್ಬನು " ಭೋಸಡಿ ಮಗನ್ಯಾ ನನಗೆ ಏಕೆ ಗುರಾಯಿಸಿ ನೋಡುತ್ತಿ" ಅಂತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗಳಕ್ಕೆ ಬಿದ್ದು, ಹೊಡೆ ಬಡೆ ಮಾಡ ಹತ್ತಿದರು. ಆಗ ನನ್ನ ಗೆಳೆಯ ಮಹ್ಮದ ಮೊಬಿನ್ ಮತ್ತು ಫರೀದ ಇವರು ಬಿಡಸಲು ಬಂದಾಗ ಅವರನ್ನು ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ, ತಲವಾರದಿಂದ ಮಹ್ಮದ ಮುಬೀನ ಇವನ ತಲೆಯ ಹಿಂಬದಿಗೆ ಹೊಡೆಯಲು, ಅವನ ತಲೆಗೆ ರಕ್ತಗಾಯವಾಗಿ ರಕ್ತ ಸೋರ ಹತ್ತಿತು. ಅವರಲ್ಲಿ ಕಲವರು ಕೈಗಳಿಗೆ ಪಂಚ್ ಹಾಕಿಕೊಂಡು ಬೆನ್ನಿಗೆ ಹಾಗು ಟೊಂಕಕ್ಕೆ ಹೊಡೆದರು, ನಂತರ ಅವರೆಲ್ಲರೂ ಕೂಡಿಕೊಂಡು ಫರೀದ ಎಂಬುವವನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅವನಿಗೆ ಒಂದು ಜೀಪಿನಲ್ಲಿ ಒತ್ತಾಯದಿಂದ ಹಾಕಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ : ಭೀಮಾಶಂಕರ ತಂದೆ ಶಿವಶರಣಪ್ಪಾ ಸಕಪಾಲ ಸಾ|| ನಂದಿಕೂರ ರವರು ನಾನು ಪೆಟ್ರೊಲ ಪಂಪದಲ್ಲಿ ಕ್ಯಾಸಿಯರ್‌ ಕೆಲಸ ಮಾಡುತ್ತಿದ್ದು ನನ್ನ ಜೊತೆಯಲ್ಲಿ ಮಹೇಶ, ಸಿದ್ದಾರೂಢ, ಸಿದ್ದು, ಚಂದ್ರಕಾಂತ ಹೆಲ್ಪರ ಇವರು ಸಹ ಇದ್ದರು. ಆಗ ಒಂದು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಮೊಟರ ಸೈಕಲ ಮೇಲೆ ಛೋಟ್ಯ ಸಂಗಡ ಇನ್ನೊಬ್ಬ ಪೆಟ್ರೊಲ ಹಾಕುವಂತೆ ಹೇಳಿದರು ಆಗ ನಾನು 80 ರೂಪಾಯಿ ಪೆಟ್ರೊಲ ಹಾಕಿದ್ದೆ, ಆಗ ಅವನು 500 ರೂಪಾಯಿ ನೋಟ ಕೊಟ್ಟಿದನು. ಆಗ ನಾನು ಚಿಲ್ಲರ ಇಲ್ಲಾ ಅಂತಾ ಹೇಳಿ ಪೆಟ್ರೊಲ ಪಂಪ ಆಫೀಸ ಒಳಗಡೆ ಹೊದಾಗ ಅವನು ಕೈಯಲ್ಲಿ ತಲವಾರ ತೆಗೆದುಕೊಂಡು ಬಂದವನೇ ನನಗೆ ತಲವಾರದಿಂದ ಹೆದರಿಸಿ ತಾನು ಕೊಟ್ಟಿದ್ದ 500 ರೂಪಾಯಿ ನೊಟ ಜಬರ ದಸ್ತಿಯಿಂದ ನನ್ನ ಜೇಬಿನಲ್ಲಿ ಕೈ ಹಾಕಿ ಪೆಟ್ರೊಲ/ಡಿಸಲ್‌ ಕಲೇಕ್ಷನ ಹಣ ಕಸಿದುಕೊಂಡು ಹೊಗಿರುತ್ತಾರೆ. ಜೇಬಿನಲ್ಲಿ 500, 100, 50, 10 ರೂಪಾಯಿ ನೊಟಗಳು ಇದ್ದು ಒಟ್ಟು ಅಂದಾಜು 3000/- ರೂಪಾಯಿ ಇರುತ್ತವೆ. ನನ್ನ ಹತ್ತಿರ ಹಣ ಕಸಿದುಕೊಂಡ ನಂತರ ನಮ್ಮ ಪಂಪದಲ್ಲಿ ಪೆಟ್ರೊಲ ಎಣ್ಣೆ ಹಾಕಿಸಿಕೊಳ್ಳಲು ಬಂದಿದ್ದ ಒಬ್ಬ ಗ್ರಾಹಕರಿಗೆ ತಲವಾರದಿಂದ ಹೊಡೆದು ಗಾಯಗೊಳಿಸಿ ಅವನ ಕೊರಳಲ್ಲಿರುವ ಬಂಗಾರದ ಚೈನನ್ನು ಕಿತ್ತುಕೊಂಡು ಹೊಗಿರುತ್ತಾರೆ. ಇಬ್ಬರು ಹುಡುಗರು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಗಾಡಿ ನಂ. ಕೆಎ 32-ಎಕ್ಸ-8038 ರ ಮೇಲೆ ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿ ಕಳ್ಳತನ :

ಮಾದನ ಹಿಪ್ಪರಗಾ ಠಾಣೆ :ಶ್ರೀ ಅಂಕುಶ ತಂದೆ ಪಾಂಡು ಖರಾತ ಉ: ಕುರಿ ಕಾಯುವದು ಸಾ: ಅರಕೇರಿ ತಾ: ಬಿಜಾಪೂರ್ ಜಿಲ್ಲಾ ರವರು ನಾವು ಬಿಜಾಪೂರದ ನಮ್ಮೂರಿನಿಂದ ಕುರಿಗಳು ಮೆಯಿಸುತ್ತಾ ಜೇವರ್ಗಿ, ಗುಲಬರ್ಗಾ ಸಿಮಾಂತರದಲ್ಲಿ ಕುರಿಗಳು ಮೇಯಿಸಿಕೊಂಡು ಆಳಂದ ತಾಲೂಕಿನ ಸಿಮಾಂತರದಲ್ಲಿ ಕುರಿ ಮೆಯಿಸುತ್ತಾ ನಮ್ಮ ಸ್ವಂತ ಊರಿಗೆ ಹೊಗಲು ಹೊರಟಿದ್ದೆವು ಹಿಗಿದ್ದು ದಿನಾಂಕ; 22/08/2011 ರಂದು ನಾವು ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದ ಬೊಗೇಶ್ವರ ಗುಡಿಯ ಹತ್ತಿರ ಇರುವು ವಾರಿಯಲ್ಲಿ ರಾತ್ರಿ ವಸತಿ ಮಾಡಿದೆವು ನಮ್ಮ ಕುರಿಗಳು ಒಟ್ಟಿಗೆ ಕೂಡಿಸಿದೆವು ನಾವು ರಾತ್ರಿ ಊಟ ಮಾಡಿ ಕುರಿಗಳು ಇದ್ದಲ್ಲಿಯೆ ಮಲಗಿಕೊಂಡೆವು ನಾವು ಮಲಗಿಕೊಂಡು ನಿದ್ದೆ ಮಾಡುವಾಗ ರಾತ್ರಿ ಸುಮಾರಿಗೆ ನಮ್ಮ ಹತ್ತಿರ ಇರುವ ನಾಯಿಗಳು ಬೊಗಳುತ್ತಿದ್ದ ಸಪ್ಪಳ ಕೇಳಿ ನನಗೆ ಎಚ್ಚರವಾಗಿ ನೊಡಲು ಕುರಿಗಳು ಎದ್ದು ನಿಂತಿದ್ದವು ನಂತರ ನಾನು ಮಲಗಿಕೊಂಡೆನು ಮುಂಜಾನೆ ನಮ್ಮ ಕುರಿಗಳು ಬೇರೆ ಮಾಡಿಕೊಂಡು ಲೆಕ್ಕ ಮಾಡಲಾಗಿ ನನ್ನ 14 ಕುರಿಗಳು ಇದ್ದಿರಲ್ಲಿಲ್ಲಾ ಯಾರೋ ಕಳ್ಳರು ರಾತ್ರಿ ನಮಗೆ ನಿದ್ರೆ ಹತ್ತಿದಾಗ ನನ್ನ 14 ಕುರಿಗಳು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 September 2011

GULBARGA DIST

ಗುಲಬರ್ಗಾ ಜಿಲ್ಲಾ ಪೊಲೀಸ್ ರಿಂದ 41 ಮೋಟಾರ ಸೈಕಲ್ ಗಳ ಕಳ್ಳರ ಬಂದನ

ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ ಮೂವರು ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 20 ಲಕ್ಷದ ಒಟ್ಟು 41 ವಿವಿಧ ಕಂಪನಿಯ ಮೋಟಾರ ಸೈಕಲ್ ಗಳು, ಮತ್ತು ನಗದು ಹಣ ಮೊಬಾಯಿಲ್ ಪೋನಗಳು ಮತ್ತು ನಕಲಿ ಕೀಲಿ ಕೈಗಳು ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿರುತ್ತಾರೆ .
ಶ್ರೀ ಪ್ರವೀಣ ಮಧುಕರ ಪವಾರ ಐ.ಪಿ.ಎಸ. ಪೊಲೀಸ್ ಅಧೀಕ್ಷಕರು ಗುಲಬರ್ಗಾ , ಅಪರ ಪೊಲೀಸ್ ಅಧೀಕ್ಷಕರು ಶ್ರೀ ಕಾಶೀನಾಥ ತಳಕೇರಿ ಹಾಗು ಶ್ರೀ ಹೆಚ. ತಿಮ್ಮಪ್ಪಾ ಡಿ.ಎಸ.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ದಿನಾಂಕ; 29-08-2011 ರಂದು ಬೆಳಗಿನ ಜಾವ ನಿಖರವಾದ ಮಾಹಿತಿಯಂತೆ ದಾಳಿ ಮಾಡಿ ಆರೋಪಿತರಾದ ಶ್ರೀ ಆರೀಪಖಾನ ತಂದೆ ಆಲಂಖಾನ ವ|| 40 ವರ್ಷ ಉ|| ಮೋಟಾರ ಸೈಕಲ್ ಮೇಕ್ಯಾನಿಕ್, ಶಪೀ @ ಮಹಮದ ಶಪೀಯೋದ್ದಿನ ತಂದೆ ಅಬ್ದುಲ್ ರಸೀದ ವಯ|| 38 ವರ್ಷ ಉ|| ಟಿ.ವಿ ಮೆಕ್ಯಾನಿಕ ಸಾ|| ಲೋಹರ ಗಲ್ಲಿ ಹಾ|ವ|| ಸೋನಿಯಾ ಗಾಂಧಿ ನಗರ ಇವರನ್ನು ದಸ್ತಿಗಿರ ಮಾಡಿ ತನಿಖೆಗೆ ಒಳಪಡಿಸಿದ್ದರಿಂದ ಇನ್ನೋರ್ವ ಆರೋಪಿತನಾದ ಆಸ್ಮತ ಅಲಿ ತಂದೆ ಅಬ್ದುಲ್ ಸುತಾರ ವ|| 24 ಉ|| ಮೋಟಾರ ಸೈಕಲ್ ಮೇಕಾನಿಕ್ ಸಾ|| ಅಗರಖೇಡ ತಾ|| ಇಂಡಿ ಹಾಲಿ ಮದಿನಾ ನಗರ ಇಂಡಿ ಇವರೆಲ್ಲರೂ ಕೂಡಿ ಗುಲಬರ್ಗಾ ನಗರ ಇಂಡಿ ನಗರ ಹಾಗು ಇತರೆ ಭಾಗಗಳಲ್ಲಿ ಕಳೆದ ಎರಡು ವರ್ಷಗಳಿಂದ ಮೋಟಾರ ಸೈಕಲಗಳು ಕಳ್ಳತನ ಮಾಡಿ ಬಿಜಾಪೂರ ಜಿಲ್ಲೆಯ ಇಂಡಿ, ತಾಂಬಾ, ತಡವಲಗಾ, ಜೊಡುಗುಡಿ, ಸಿಂದಗಿ ಮುಂತಾದ ಕಡೆಗಳಲ್ಲಿ ಮಾರಾಟ ಮಾಡಿದ ಬಗ್ಗೆ ತಿಳಿಸಿದ್ದು, ಹಾಗು ತನಿಖೆಯ ಕಾಲಕ್ಕೆ ಮೂರು ಜನ ಆರೋಪಿತರು ಈ ಮೋಟಾರ ಸೈಕಲಗಳು ವಿವಿಧ ಬ್ಯಾಂಕುಗಳಲ್ಲಿ ವಾಹನದ ಮಾಲಿಕರು ಸಾಲ ಪಾವತಿಸಿದ ಕಾರಣ ಬ್ಯಾಂಕಿನಿಂದ ಜಪ್ತು ಮಾಡಿದ ವಾಹನಗಳು ಇರುತ್ತವೆ. ಮೋಟಾರ ಸೈಕಲಗಳ ಕಾಗದ ಪತ್ರಗಳು ನಂತರ ತಮಗೆ ತಂದು ಕೊಡುತ್ತೆವೆ ಅಂತಾ ಜನರನ್ನು ನಂಬಿಸಿ ಕಳವು ಮಾಡಿದ ಮೋಟಾರ ಸೈಕಲ್ ಗಳ ನಂಬರ ಪ್ಲೇಟಗಳು ಸಹ ಬದಲಾಯಿಸಿದ ಮಾರಾಟ ಮಾಡಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ .

ಗುಲಬರ್ಗಾ ನಗರದ ಬ್ರಹ್ಮಪೂರ, ಅಶೋಕ ನಗರ, ಸ್ಟೆಶನ ಬಜಾರ, ಚೌಕ, ಎಂಬಿ.ನಗರ ಠಾಣೆ ಗುಲಬರ್ಗಾ ಮತ್ತು ಇಂಡಿ ಪೊಲೀಸ್ ಠಾಣೆಗಳಲ್ಲಿ ಈ ವಾಹನಗಳು ಕಳುವಾದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತೆವೆ. ಸದರಿ ಮೋಟಾರ ಸೈಕಲಗಳು ನಗರದ ಸುಪರ ಮಾರ್ಕೆಟ, ನೆಹರು ಗಂಜ್, ರೇಲ್ವೆ ನಿಲ್ದಾಣ, ಬಸ್ಸ ನಿಲ್ದಾಣ, ಹಾಗು ನಗರದ ಇತರೆ ಬಡಾವಣೆಗಳಿಂದ ಕಳ್ಳತನ ಮಾಡಿರುತ್ತಾರೆ. ಮುಖ್ಯವಾಗಿ ಹಿರೋ ಹೊಂಡಾ ಕಂಪನಿಯ ಮೋಟಾರ ಸೈಕಲಗಳು ಗುರಿಯಾಗಿಟ್ಟುಕೊಂಡು ವೃತ್ತಿ ಪರವಾಗಿ ಕಳ್ಳತನ ಮಾಡುತ್ತಿದ್ದ ಬ್ಗಗೆ ತಿಳಿಸಿದ್ದು, ಸುಮಾರು 20 ಲಕ್ಷದ ಮೌಲ್ಯದ 41 ಮೋಟಾರ ಸೈಕಲಗಳು, ನಗದು ಹಣ, ಮೊಬಾಯಿಲ್ ಪೋನಗಳು ಜಪ್ತಿ ಮಾಡಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ .

ಮಾನ್ಯ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಂ.ಬಿ. ನಗರ ಇವರ ನೇತ್ರತ್ವದಲ್ಲಿ ಪಂಡಿತ ಸಾಗರ ಪಿ.ಎಸ.ಐ ವಿಶ್ವವಿಧ್ಯಾಲಯ ಠಾಣೆ, ಶ್ರೀ ಭೊಜರಾಜ ರಾಠೋಢ ಪಿ.ಎಸ.ಐ ಫರತವಾದ ಠಾಣೆ , ಶ್ರೀ ಶಾಂತಿನಾಥ ಪಿ.ಎಸ.ಐ ಕಮಲಾಫೂರ ಠಾಣೆ , ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ ಹೆಚ.ಸಿ, ಯಲ್ಲಪ್ಪಾ ಭಜಂತ್ರಿ ಪಿಸಿ, ಅಶೋಕ ಪಿಸಿ, ಗಂಗಾಧರ ಸ್ವಾಮಿ ಪಿಸಿ, ಲೈಕೊದ್ದಿನ ಪಿಸಿ, ಹಣಮಂತ ಪಿಸಿ, ಹೇಮಂತ ಪಿಸಿ, ಚಂದ್ರಕಾಂತ ಪಿಸಿ, ಶಿವಾನಂದ ಪಿಸಿ, ಪ್ರಭಾಕರ್ ಪಿಸಿ ಮತ್ತು ಇಮ್ತಿಯಾಜ್ ಎಪಿಸಿ ರವರೆಲ್ಲರೂ ದಾಳಿಯಲ್ಲಿ ಪಾಲ್ಗೊಂಡಿದ್ದರಿಂದ ಎಸ.ಪಿ ಸಾಹೇಬರು ಅಧಿಕಾರಿ ಮತ್ತು ಸಿಬ್ಬಂಧಿಯವರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:

ಮಾಡಬೂಳ ಠಾಣೆ : ಶ್ರೀ ನಾಗಣ್ಣಾ ತಂದೆ ಸಾಬಣ್ಣಾ ತೊನಸಳ್ಳಿ ಸಾ|| ಕಲಗುರ್ತಿ ತಾ|| ಚೀತ್ತಾಪೂರ ರವರು ನಾನು ಮತ್ತು ಅಮೃತ ಹಾಗೂ ಇತರರು ಕೂಡಿಕೊಂಡು ದ್ಯಾವಣ್ಣ ತಂದೆ ಸಾಬಣ್ಣ ರಟಕಲ್ ಸಾ|| ಕಲಗುರ್ತಿ ಇವನ ಟಂಟಂ ಕೆಎ 32 ಎ 5541 ನೇದ್ದರಲ್ಲಿ ಕುಳಿತುಕೊಂಡು ಕುಲಗುರ್ತಿ ಗ್ರಾಮಕ್ಕೆ ಹೋಗುತ್ತಿರುವಾಗ ಟಂಟಂ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನಾಲಾದಲ್ಲಿ ಪಲ್ಟಿ ಮಾಡಿದ್ದು ಅಮೃತ ಇತನನ್ನು ಉಪಚಾರ ಕುರಿತು ಆಸ್ಪತ್ರೆಗೆ ಸಾಗುಸುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮೃತ ಪಟ್ಟಿರುತ್ತಾನೆ ಹಾಗು ಮಲ್ಲಿಕಾರ್ಜುನ ಸಾ|| ಬೆಳಗುಂಪಾ, ಬಸಣ್ಣ ತಂದೆ ದೆವಿಂಧ್ರಪ್ಪ ಚಿನನ್ವರ, ಬಸವರಾಜ ತಂದೆ ಗುರುಲಿಂಗಪ್ಪಾ ಪಾಟಿಲ್, ಸುರೇಶಕುಮಾರ ತಂದೆ ಶ್ಯಾಮರಾವ ಪಾಟೀಲ್ ಮತ್ತು ಹಣಮಂತಪ್ಪಾ ತಂದೆ ನರಸಪ್ಪಾ ಕುಂಬರ ಸಾ|| ಎಲ್ಲರೂ ಕಲಗುರ್ತಿ ಗ್ರಾಮದವರು ನಮ್ಮಲರಿಗೆ ಅಪಘಾತದಲ್ಲಿ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.