ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ರಾಘವೇಂದ್ರ ತಂದೆ ರಂಗರಾವ ದೇಶಪಾಂಡೆ ರವರು ಸಾ: ರೈಲ್ವೆ ಸ್ಷೇಷನ ಹತ್ತಿರ ಶಹಾಬಾದ ರವರು ನನ್ನ ತಮ್ಮನಾದ ದನಂಜಯ ಇತನು ಮೊಟಾರ ಸೈಕಲ ನಂ: ಕೆಎ-32 ಎಸ್.3128 ನೇದ್ದರ ಮೇಲೆ ಶಹಾಬಾದದಿಂದ ಜಗಜೀವನರಾಮ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೊಟಾರ ಸೈಕಲ ಮೇಲಿಂದ ಬಿದ್ದು ಬಲಗಣ್ಣಿನ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ. ಬಲಗಣ್ಣಿನ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿ ಅವನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇರುವದರಿಂದ ಹೈದ್ರಾಬಾದದ ಕಾಮಿನೆನಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಪ್ರೇಮಕುಮಾರ ತಂದೆ ಗೋಪಾಲ ಚವ್ಹಾಣ ರವರು ಸಾ: ನಿಂಬರ್ಗಾ ತಾಂಡಾ ಹಾ.ವ: ರೂಮ ನಂ. 33 ಕೊಕಣ ವಸಾದ ಬಿರ್ಲಾ ಕಾಲೇಜ ರೋಡ ಕಲ್ಯಾಣವ (ಪೂರ್ವ) ಜಿ: ಠಾಣೆ (ಮಹಾರಾಷ್ಟ್ರ ರಾಜ್ಯ) ರವರು ನ್ಯೂಜ ಪೇಪರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಲಬರ್ಗಾದಲ್ಲಿ ಬಸ್ ಡ್ರೈವರ ಮತ್ತು ಬಸ್ ಕಂಡಕ್ಟರ್ ಹುದ್ದೆಗೆ ಅರ್ಜಿ ಹಾಕುವ ಸಲುವಾಗಿ ಗುಲಬರ್ಗಾಕ್ಕೆ ಬಂದು ನನ್ನ ಪರಿಚಯದವರಾದ ಕಿಶನ್ ರಾಠೋಡ ರವರಿಗೆ ಕರೆಯಿಸಿದಾಗ ಅವರು ಮದ್ಯಾಹ್ನ ಸುಮಾರಿಗೆ ಜೇವರ್ಗಿ ಕ್ರಾಸ (ರಾಷ್ಟ್ರಪತಿ ಸರ್ಕಲ್) ಹತ್ತಿರ ಬಂದು ಕೆ. ಎಸ್.ಆರ್.ಟಿ.ಸಿ. ಸ್ಲೀಪ್ ಕೊಟ್ಟರು. ನಂತರ ನಾನು ನಮ್ಮ ಸ್ವಗ್ರಾಮ ನಿಂಬರ್ಗಾ ತಾಂಡಾಕ್ಕೆ ಹೋಗಲು ಬಸ್ ಸ್ಟ್ಯಾಂಡ ಕಡೆಗೆ ಬರುತ್ತಿರುವಾಗ 2-30 ಗಂಟೆ ಸುಮಾರಿಗೆ ಸಂಗಮೇಶ್ವರ ಆಸ್ಪತ್ರೆ ಎದುರುಗಡೆ ರಸ್ತೆಯ ಮೇಲೆ ಇಬ್ಬರು ಅಪರಿಚಿತ 25 ರಿಂದ 30 ವಯಸ್ಸಿನ ವ್ಯಕ್ತಿಗಳು ಹಿಂದಿಯಲ್ಲಿ ಮಾತಾಡುತ್ತಾ ಬಂದವರೇ ಒಮ್ಮೇಲೆ ನನ್ನನ್ನು ತಡೆದು ನಿಲ್ಲಿಸಿ ಚಾಕುವಿನಿಂದ ಬಲಗೈ ರಟ್ಟೆಗೆ ಹೊಡೆದರು. ಮತ್ತು ಇನ್ನೊಬ್ಬ ಕೈ ಮುಷ್ಟಿ ಮಾಡಿ ಎದೆಗೆ ಗುದ್ದಿ " ನಿಕಾಲಬೇ ಸಾಲೆ ಕಿತನೇ ಹೈ ಪೈಸೆ " ಅಂತಾ ಅಂದವರೇ ಜಬರ ದಸ್ತಿಯಿಂದ ಜೇಬಿನಲ್ಲಿ ಕೈ ಹಾಕಿ ಪರ್ಸನಲ್ಲಿದ್ದ 1500=00 ರೂ. ಮತ್ತು ಒಂದು ಸೋನಿ ಎರೇಕ್ಷನ್ ಕಂಪನಿಯ ಮೋಬಾಯಿಲ್ ಫೋನ್ ಸಿಮ್ ನಂ. 09987462597 ಅ.ಕಿ. 5,000/- ರೂ. ನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಫರಹತಾಬಾದ ಠಾಣೆ : ಮಾಳಪ್ಪಾ ತಂದೆ ಸಾಯಬಣ್ಣಾ ಪೂಜಾರಿ ಸಾ: ಜೋಗೂರ ರವರು ನಾನು ಮನೆಯಲ್ಲಿ ಇದ್ದಾಗ ಅಮೋಗಿ ತಂದೆ ಸಾಯಬಣ್ಣಾ ಪೂಜಾರಿ ಸಂಗಡ ಒಬ್ಬರು ಇಬ್ಬರೂ ಸಾ: ಜೋಗೂರ ರವರು ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಸೂಳೆ ಮಗನೇ ಹೋಲ ಕೇಳುತ್ತಿ ಅಂತಾ ಬೈದು ತನ್ನ ಕೈಯಿಲ್ಲಿದ್ದ ಒಡ ಕಟ್ಟಿಗೆಯಿಂದ ನನ್ನ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು ಇನ್ನೊಬರು ಇವರಿಗೆ ಬಹಳ ಸೋಕ್ಕು ಬಂದಿದೆ ಅಂತಾ ಬೈದು ಕೂದಲು ಹಿಡಿದು ಜಗ್ಗಾಡಿದರು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಅಪಹರಣ ಪ್ರರಕಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ : ಮಹ್ಮದ ಅಜರ ಅವನ ಗೆಳೆಯರಾದ ಮಹ್ಮದ ಮೊಬಿನ್ ಹಾಗು ಫರೀದ ಮೂವರು ಕೂಡಿಕೊಂಡು ಶಟ್ಟಿಫನ್ ಟಾಕೀಸ್ ನಲ್ಲಿ ಸಿನೆಮಾ ನೋಡಲು ಹೋದಾಗ, ರಾತ್ರಿ 11 ಗಂಟೆಯ ಸುಮಾರಿಗೆ 8-10 ಜನರ ಗುಂಪು ಒಮ್ಮೆಲೆ ಕೂಗಾಡುತ್ತಾ, ಚಿರಾಡುತ್ತಾ ಟಾಕೀಸ ಒಳಗೆ ಬಂದು, ಅವರಲ್ಲಿಯ ಒಬ್ಬನು " ಭೋಸಡಿ ಮಗನ್ಯಾ ನನಗೆ ಏಕೆ ಗುರಾಯಿಸಿ ನೋಡುತ್ತಿ" ಅಂತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗಳಕ್ಕೆ ಬಿದ್ದು, ಹೊಡೆ ಬಡೆ ಮಾಡ ಹತ್ತಿದರು. ಆಗ ನನ್ನ ಗೆಳೆಯ ಮಹ್ಮದ ಮೊಬಿನ್ ಮತ್ತು ಫರೀದ ಇವರು ಬಿಡಸಲು ಬಂದಾಗ ಅವರನ್ನು ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ, ತಲವಾರದಿಂದ ಮಹ್ಮದ ಮುಬೀನ ಇವನ ತಲೆಯ ಹಿಂಬದಿಗೆ ಹೊಡೆಯಲು, ಅವನ ತಲೆಗೆ ರಕ್ತಗಾಯವಾಗಿ ರಕ್ತ ಸೋರ ಹತ್ತಿತು. ಅವರಲ್ಲಿ ಕಲವರು ಕೈಗಳಿಗೆ ಪಂಚ್ ಹಾಕಿಕೊಂಡು ಬೆನ್ನಿಗೆ ಹಾಗು ಟೊಂಕಕ್ಕೆ ಹೊಡೆದರು, ನಂತರ ಅವರೆಲ್ಲರೂ ಕೂಡಿಕೊಂಡು ಫರೀದ ಎಂಬುವವನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅವನಿಗೆ ಒಂದು ಜೀಪಿನಲ್ಲಿ ಒತ್ತಾಯದಿಂದ ಹಾಕಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಭೀಮಾಶಂಕರ ತಂದೆ ಶಿವಶರಣಪ್ಪಾ ಸಕಪಾಲ ಸಾ|| ನಂದಿಕೂರ ರವರು ನಾನು ಪೆಟ್ರೊಲ ಪಂಪದಲ್ಲಿ ಕ್ಯಾಸಿಯರ್ ಕೆಲಸ ಮಾಡುತ್ತಿದ್ದು ನನ್ನ ಜೊತೆಯಲ್ಲಿ ಮಹೇಶ, ಸಿದ್ದಾರೂಢ, ಸಿದ್ದು, ಚಂದ್ರಕಾಂತ ಹೆಲ್ಪರ ಇವರು ಸಹ ಇದ್ದರು. ಆಗ ಒಂದು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಮೊಟರ ಸೈಕಲ ಮೇಲೆ ಛೋಟ್ಯ ಸಂಗಡ ಇನ್ನೊಬ್ಬ ಪೆಟ್ರೊಲ ಹಾಕುವಂತೆ ಹೇಳಿದರು ಆಗ ನಾನು 80 ರೂಪಾಯಿ ಪೆಟ್ರೊಲ ಹಾಕಿದ್ದೆ, ಆಗ ಅವನು 500 ರೂಪಾಯಿ ನೋಟ ಕೊಟ್ಟಿದನು. ಆಗ ನಾನು ಚಿಲ್ಲರ ಇಲ್ಲಾ ಅಂತಾ ಹೇಳಿ ಪೆಟ್ರೊಲ ಪಂಪ ಆಫೀಸ ಒಳಗಡೆ ಹೊದಾಗ ಅವನು ಕೈಯಲ್ಲಿ ತಲವಾರ ತೆಗೆದುಕೊಂಡು ಬಂದವನೇ ನನಗೆ ತಲವಾರದಿಂದ ಹೆದರಿಸಿ ತಾನು ಕೊಟ್ಟಿದ್ದ 500 ರೂಪಾಯಿ ನೊಟ ಜಬರ ದಸ್ತಿಯಿಂದ ನನ್ನ ಜೇಬಿನಲ್ಲಿ ಕೈ ಹಾಕಿ ಪೆಟ್ರೊಲ/ಡಿಸಲ್ ಕಲೇಕ್ಷನ ಹಣ ಕಸಿದುಕೊಂಡು ಹೊಗಿರುತ್ತಾರೆ. ಜೇಬಿನಲ್ಲಿ 500, 100, 50, 10 ರೂಪಾಯಿ ನೊಟಗಳು ಇದ್ದು ಒಟ್ಟು ಅಂದಾಜು 3000/- ರೂಪಾಯಿ ಇರುತ್ತವೆ. ನನ್ನ ಹತ್ತಿರ ಹಣ ಕಸಿದುಕೊಂಡ ನಂತರ ನಮ್ಮ ಪಂಪದಲ್ಲಿ ಪೆಟ್ರೊಲ ಎಣ್ಣೆ ಹಾಕಿಸಿಕೊಳ್ಳಲು ಬಂದಿದ್ದ ಒಬ್ಬ ಗ್ರಾಹಕರಿಗೆ ತಲವಾರದಿಂದ ಹೊಡೆದು ಗಾಯಗೊಳಿಸಿ ಅವನ ಕೊರಳಲ್ಲಿರುವ ಬಂಗಾರದ ಚೈನನ್ನು ಕಿತ್ತುಕೊಂಡು ಹೊಗಿರುತ್ತಾರೆ. ಇಬ್ಬರು ಹುಡುಗರು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಗಾಡಿ ನಂ. ಕೆಎ 32-ಎಕ್ಸ-8038 ರ ಮೇಲೆ ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳ್ಳತನ :
ಮಾದನ ಹಿಪ್ಪರಗಾ ಠಾಣೆ :ಶ್ರೀ ಅಂಕುಶ ತಂದೆ ಪಾಂಡು ಖರಾತ ಉ: ಕುರಿ ಕಾಯುವದು ಸಾ: ಅರಕೇರಿ ತಾ: ಬಿಜಾಪೂರ್ ಜಿಲ್ಲಾ ರವರು ನಾವು ಬಿಜಾಪೂರದ ನಮ್ಮೂರಿನಿಂದ ಕುರಿಗಳು ಮೆಯಿಸುತ್ತಾ ಜೇವರ್ಗಿ, ಗುಲಬರ್ಗಾ ಸಿಮಾಂತರದಲ್ಲಿ ಕುರಿಗಳು ಮೇಯಿಸಿಕೊಂಡು ಆಳಂದ ತಾಲೂಕಿನ ಸಿಮಾಂತರದಲ್ಲಿ ಕುರಿ ಮೆಯಿಸುತ್ತಾ ನಮ್ಮ ಸ್ವಂತ ಊರಿಗೆ ಹೊಗಲು ಹೊರಟಿದ್ದೆವು ಹಿಗಿದ್ದು ದಿನಾಂಕ; 22/08/2011 ರಂದು ನಾವು ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದ ಬೊಗೇಶ್ವರ ಗುಡಿಯ ಹತ್ತಿರ ಇರುವು ವಾರಿಯಲ್ಲಿ ರಾತ್ರಿ ವಸತಿ ಮಾಡಿದೆವು ನಮ್ಮ ಕುರಿಗಳು ಒಟ್ಟಿಗೆ ಕೂಡಿಸಿದೆವು ನಾವು ರಾತ್ರಿ ಊಟ ಮಾಡಿ ಕುರಿಗಳು ಇದ್ದಲ್ಲಿಯೆ ಮಲಗಿಕೊಂಡೆವು ನಾವು ಮಲಗಿಕೊಂಡು ನಿದ್ದೆ ಮಾಡುವಾಗ ರಾತ್ರಿ ಸುಮಾರಿಗೆ ನಮ್ಮ ಹತ್ತಿರ ಇರುವ ನಾಯಿಗಳು ಬೊಗಳುತ್ತಿದ್ದ ಸಪ್ಪಳ ಕೇಳಿ ನನಗೆ ಎಚ್ಚರವಾಗಿ ನೊಡಲು ಕುರಿಗಳು ಎದ್ದು ನಿಂತಿದ್ದವು ನಂತರ ನಾನು ಮಲಗಿಕೊಂಡೆನು ಮುಂಜಾನೆ ನಮ್ಮ ಕುರಿಗಳು ಬೇರೆ ಮಾಡಿಕೊಂಡು ಲೆಕ್ಕ ಮಾಡಲಾಗಿ ನನ್ನ 14 ಕುರಿಗಳು ಇದ್ದಿರಲ್ಲಿಲ್ಲಾ ಯಾರೋ ಕಳ್ಳರು ರಾತ್ರಿ ನಮಗೆ ನಿದ್ರೆ ಹತ್ತಿದಾಗ ನನ್ನ 14 ಕುರಿಗಳು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment