POLICE BHAVAN KALABURAGI

POLICE BHAVAN KALABURAGI

18 June 2011

GULBARGA DISTRICT REPORTED CRIMES

ಕಳವು ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಚಂದ್ರಶೇಖರ ಕೋಬಾಳ ಸಾ|| ಶಹಾಬಾದ ತಾ|| ಚಿತ್ತಾಪೂರ ಗುಲಬರ್ಗಾ ರವರು, ದಿನಾಂಕ: 14-04-2011 ರಂದು ಮದ್ಯಾಹ್ನ ತಮ್ಮ ಹಿರೋ ಹೊಂಡಾ ಕೆಎ 32 ಜೆ 8851 ಅಂದಾಜು ಕಿಮ್ಮತ್ತು 20,000-00 ನೇದ್ದು, ಜವಳಿ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿದಾಗ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ, ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :
ವಾಡಿ ಠಾಣೆ :
ಶ್ರೀಮತಿ ಸುಭದ್ರಭಾಯಿ ಗಂಡ ಗೋವಿಂದ ಕೈತಾಪೂರಕರ ಸಾ|| ಮರಗಮ್ಮ ಗುಡಿ ಹತ್ತಿರ ವಾಡಿ ಗುಲಬರ್ಗಾ ರವರು ನನ್ನ ಮಗನಾದ ಹಣಮಂತ @ ಪಾಪ್ಯಾ ಇತನು ತಾನು ಪ್ರೀತಿಸಿದ ಹುಡುಗಿಗೆ ಮದುವೆಯಾಗುದಕ್ಕೆ ಬೇಡ ಅಂದಿದಕ್ಕೆ, ತಾನು ಕೊರ್ಟ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ನನ್ನ ಮಗಳ ಮದುವೆ ಪ್ರಯುಕ್ತ ಮದುವೆಗೆ ಬರಲು ಹೇಳಿ ಬಂದಿರುತ್ತೆನೆ. ದಿನಾಂಕ : 17-06-2011 ರಂದು ಹಣಮಂತ ಇತನು ತನ್ನ ಹೆಂಡಿತ ಭಾರತಿ, ಅತ್ತೆ ಸುಶೀಲಭಾಯಿ ರವರೊಂದಿಗೆ ನಾವಿರುವ ಮನೆಗೆ ಬಂದು ನಮಗೆ ಮನೆಯಿಂದ ಹೊರಗಡೆ ಹಾಕಿ ಮತ್ತೆ ಮದುವೆಗೆ ಕರೆಯುವದಕ್ಕೆ ಬಂದಿದ್ದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದು ನನಗೆ ಕೆಳಗೆ ಕೆಡವಿದಾಗ ನನ್ನ ಮತ್ತೊಬ್ಬ ಮಗ ಲಕ್ಷ್ಮಣ ಇತನು ಯಾಕೊ ತಾಯಿಗೆ ಹೊಡೆತಿಯಾ ಅಂದಿದಕ್ಕೆ ಹಣಮಂತ ಇತನು ಹೆಂಡತಿ ಮತ್ತು ಅತ್ತೆ ಪ್ರಚೋದನೆಯಿಂದ ಲಕ್ಷ್ಮಣನ ಕುತ್ತಿಗಿಗೆ ಹಿಡಿದು ಎದೆಗೆ ಜೋರಾಗಿ ಗುದ್ದಿದರಿಂದ ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಮಾದನ ಹಿಪ್ಪರಗಾ ಠಾಣೆ: ಶ್ರೀಮಂತ ತಂದೆ ಶಾಂತಪ್ಪಾ ಹೊಸಳ್ಳಿ ಸಾ|| ಝಳಕಿ (ಬಿ) ರವರು ನಾನು ದಿನಾಂಕ: 15-06-2011 ರಂದು ಮನೆಯಲ್ಲಿದ್ದಾಗ ಚಿದಾನಂದ ಹೊಸಳಿ, ಮದುಕರನ, ಸುದಾಕರ, ಪ್ರಭಾಕರ, ಮಹಾದೇವಿ ಸಾ|| ಎಲ್ಲರೂ ಝಳಕಿ ರವರು ನನ್ನ ತಂದೆಗೆ ಮತ್ತು ನನ್ನ ಹೆಂಡತಿಗೆ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 June 2011

GULBARGA DISTRICT REPORTED CRIMES

ದರೋಡೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಪ್ರವೀಣ ಕುಮಾರ ತಂದೆ ಹಣಮಂತರಾವ ಹೇರೂರ ಸಾ|| ರಾಜಾಪೂರ ಗುಲಬರ್ಗಾ ರವರು ನಾನು ಮತ್ತು ಪ್ರಿಯಾಂಕ ಶಹಾಬಾದ ಇಬ್ಬರೂ ಕೂಡಿಕೊಂಡು ಕಮಲಾಫೂರಕ್ಕೆ ಡಿ.ಎಡ್ ಪ್ರವೇಶದ ಅರ್ಜಿಗಳನ್ನು ತರುವ ಕುರಿತು ಮೋಟಾರ ಸೈಕಲ್ ಮೇಲೆ ದಿನಾಂಕ 16/06/2011 ರಂದು ಹೋಗುವಾಗ, ಹುಮನಾಬಾದ ರೋಡಿನ ಬಿರಾದಾರ ಪೆಟ್ರೋಲ್ ಸಮೀಪ ಒಂದು ಆಟೋದಲ್ಲಿ 5 -6 ಜನರು ಬಂದವರೆ, ನಮ್ಮ ಮೋಟಾರ ಸೈಕಲನ್ನು ತಡೆದು ಅವರೆಲ್ಲರೂ ನಮ್ಮ ಬಳಿ ಇರುವ ಸಾಮಾನುಗಳನ್ನು ಕೊಡುವದಕ್ಕೆ ಹೇಳುತ್ತಾ ಅದರಲ್ಲಿ ಒಬ್ಬನು ನನ್ನ ಗಾಡಿಯ ಕೀಯನ್ನು ತೆಗೆದುಕೊಂಡು ಮತ್ತೊಬ್ಬನ ನನ್ನ ಬಲಗೈ ಹಿಡಿದು ತೀರುವಿ ಗುಪ್ತಗಾಯಗೊಳಿಸಿ ಜಬರದಸ್ತಿಯಿಂದ ನನ್ನ ಹತ್ತಿರ ಇರುವ ಮೊಬಾಯಿಲ್ ಹಾಗು ನಗದು ಹಣ 1000 /- ರೂ. ಹೀಗೆ ಒಟ್ಟು ಎಲ್ಲಾ ಸೇರಿ 3000 /- ರೂ. ಕಿಮ್ಮತ್ತಿನದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ, ಅವರೆಲ್ಲರೂ ಸುಮಾರು 20 ರಿಂದ 25 ವರ್ಷದವರು ಇರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಶಹಾಬಾದ ನಗರ ಠಾಣೆ :ಶ್ರೀ ಅಂಬುಬಾಯಿ ಗಂಡ ಶಂಕರ ರಾಠೋಡ ಸಾ|| ದೇವನ ತೆಗನೂರ ತಾಂಡ ನಾನು ನನ್ನ ಗಂಡ ಮಕ್ಕಳೊಂದಿಗೆ ದಿನಾಂಕ:14/06/2011 ರಂದು ರಾತ್ರಿ ಕೋಣೆಗೆ ಬೀಗ ಹಾಕಿ ಪಕ್ಕದ ರೂಮನಲ್ಲಿ ಮಲಗಿಕೊಂಡಿದ್ದು, ಬೆಳಗ್ಗೆ ಎದ್ದು ನೋಡಲಾಗಿ, ಮನೆಯ ಬಾಗಿಲು ತೆಗೆದಿದ್ದು ಇರುವುದು ಕಂಡು ಗಾಬರಿಯಾಗಿ ಒಳಗೆ ಹೋಗಿ ನೊಡಲಾಗಿ, ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಮನೆಯ ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಒಟ್ಟು 96,000/- ರೂ ಬೆಲೆ ಉಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ರಾಮಾಚಾರ್ಯ ತಂದೆ ರಾಘವೇಂದ್ರಚಾರ್ಯ ಸಾ|| ವೆಂಕಟೇಶ ನಗರ ಗುಲಬರ್ಗಾ ರವರು ನಾನು ದಿನಾಂಕ: 13-06-2011 ರಂದು ಮನೆಯಲ್ಲಿ ಮಲಗಿದ್ದಾಗ ಯಾರೋ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಚಾರ್ಚಿಗೆ ಹಚ್ಚಿದ ಒಂದು ನೊಕಿಯಾ ಮೊಬಾಯಿಲ್, ನಗದು ಹಣ 6040/- ಮತ್ತು ಬೆಳ್ಳಿ ಸಾಮಾನುಗಳು ಹೀಗೆ ಒಟ್ಟು 31,040/- ನೇದ್ದುವಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ಎಸ.ಬಿ ಪತಂಗಿ ಪ್ರಾಚಾರ್ಯರು ಶಂಕರಗೌಡ ಪೊಲೀಸ್ ಪಾಟೀಲ್ ಅಂದೋಲಾ ಇಂಡಿಪೆಡೆಂಟ್ ಪಿಯು ಕಾಲೇಜ ಗುಲಬರ್ಗಾ ರವರು ನಮ್ಮ ಕಾಲೇಜಿನ ರೂಮಿನ ಬಾಗೀಲ ಕೀಲಿ ಮುರಿದು ಯಾರೋ ಕಳ್ಳರು ಪಿ.ವಿ.ಸಿ ಕೇಬಲ್ 20,000/- ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 June 2011

GULBARGA DISTRICT REPORTED CRIME

ಅಪಘಾತ ಪ್ರಕರಣ :

ಆಳಂದ ಠಾಣೆ : ಶ್ರೀ ಮಹಾಂತಪ್ಪಾ ತಂದೆ ಶ್ರೀಮಂತರಾವ ಸಾ|| ಮೋಘಾ (ಕೆ) ತಾ|| ಆಳಂದ ರವರು ನನ್ನ ಅಣ್ಣನಾದ ಚಂದ್ರಾಮಪ್ಪಾ ಇವರು ಮೋಘಾ (ಕೆ) ಗ್ರಾಮಕ್ಕೆ ಹೋಗುವ ಕುರಿತು ಆಳಂದ ಬಸ್ ನಿಲ್ದಾಣದ ಪ್ಲಾಟ ಪಾರ್ಮದಲ್ಲಿ ನಿಂತಿದ್ದಾಗ ಸರ್ಕಾರಿ ಬಸ್ ನಂ: ಕೆಎ 32 ಎಪ್- 1208 ಏದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಚಂದ್ರಮಪ್ಪಾ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಲದಲ್ಲಿಯೇ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.