POLICE BHAVAN KALABURAGI

POLICE BHAVAN KALABURAGI

17 June 2011

GULBARGA DISTRICT REPORTED CRIMES

ದರೋಡೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಪ್ರವೀಣ ಕುಮಾರ ತಂದೆ ಹಣಮಂತರಾವ ಹೇರೂರ ಸಾ|| ರಾಜಾಪೂರ ಗುಲಬರ್ಗಾ ರವರು ನಾನು ಮತ್ತು ಪ್ರಿಯಾಂಕ ಶಹಾಬಾದ ಇಬ್ಬರೂ ಕೂಡಿಕೊಂಡು ಕಮಲಾಫೂರಕ್ಕೆ ಡಿ.ಎಡ್ ಪ್ರವೇಶದ ಅರ್ಜಿಗಳನ್ನು ತರುವ ಕುರಿತು ಮೋಟಾರ ಸೈಕಲ್ ಮೇಲೆ ದಿನಾಂಕ 16/06/2011 ರಂದು ಹೋಗುವಾಗ, ಹುಮನಾಬಾದ ರೋಡಿನ ಬಿರಾದಾರ ಪೆಟ್ರೋಲ್ ಸಮೀಪ ಒಂದು ಆಟೋದಲ್ಲಿ 5 -6 ಜನರು ಬಂದವರೆ, ನಮ್ಮ ಮೋಟಾರ ಸೈಕಲನ್ನು ತಡೆದು ಅವರೆಲ್ಲರೂ ನಮ್ಮ ಬಳಿ ಇರುವ ಸಾಮಾನುಗಳನ್ನು ಕೊಡುವದಕ್ಕೆ ಹೇಳುತ್ತಾ ಅದರಲ್ಲಿ ಒಬ್ಬನು ನನ್ನ ಗಾಡಿಯ ಕೀಯನ್ನು ತೆಗೆದುಕೊಂಡು ಮತ್ತೊಬ್ಬನ ನನ್ನ ಬಲಗೈ ಹಿಡಿದು ತೀರುವಿ ಗುಪ್ತಗಾಯಗೊಳಿಸಿ ಜಬರದಸ್ತಿಯಿಂದ ನನ್ನ ಹತ್ತಿರ ಇರುವ ಮೊಬಾಯಿಲ್ ಹಾಗು ನಗದು ಹಣ 1000 /- ರೂ. ಹೀಗೆ ಒಟ್ಟು ಎಲ್ಲಾ ಸೇರಿ 3000 /- ರೂ. ಕಿಮ್ಮತ್ತಿನದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ, ಅವರೆಲ್ಲರೂ ಸುಮಾರು 20 ರಿಂದ 25 ವರ್ಷದವರು ಇರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಶಹಾಬಾದ ನಗರ ಠಾಣೆ :ಶ್ರೀ ಅಂಬುಬಾಯಿ ಗಂಡ ಶಂಕರ ರಾಠೋಡ ಸಾ|| ದೇವನ ತೆಗನೂರ ತಾಂಡ ನಾನು ನನ್ನ ಗಂಡ ಮಕ್ಕಳೊಂದಿಗೆ ದಿನಾಂಕ:14/06/2011 ರಂದು ರಾತ್ರಿ ಕೋಣೆಗೆ ಬೀಗ ಹಾಕಿ ಪಕ್ಕದ ರೂಮನಲ್ಲಿ ಮಲಗಿಕೊಂಡಿದ್ದು, ಬೆಳಗ್ಗೆ ಎದ್ದು ನೋಡಲಾಗಿ, ಮನೆಯ ಬಾಗಿಲು ತೆಗೆದಿದ್ದು ಇರುವುದು ಕಂಡು ಗಾಬರಿಯಾಗಿ ಒಳಗೆ ಹೋಗಿ ನೊಡಲಾಗಿ, ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಮನೆಯ ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಒಟ್ಟು 96,000/- ರೂ ಬೆಲೆ ಉಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ರಾಮಾಚಾರ್ಯ ತಂದೆ ರಾಘವೇಂದ್ರಚಾರ್ಯ ಸಾ|| ವೆಂಕಟೇಶ ನಗರ ಗುಲಬರ್ಗಾ ರವರು ನಾನು ದಿನಾಂಕ: 13-06-2011 ರಂದು ಮನೆಯಲ್ಲಿ ಮಲಗಿದ್ದಾಗ ಯಾರೋ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಚಾರ್ಚಿಗೆ ಹಚ್ಚಿದ ಒಂದು ನೊಕಿಯಾ ಮೊಬಾಯಿಲ್, ನಗದು ಹಣ 6040/- ಮತ್ತು ಬೆಳ್ಳಿ ಸಾಮಾನುಗಳು ಹೀಗೆ ಒಟ್ಟು 31,040/- ನೇದ್ದುವಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ಎಸ.ಬಿ ಪತಂಗಿ ಪ್ರಾಚಾರ್ಯರು ಶಂಕರಗೌಡ ಪೊಲೀಸ್ ಪಾಟೀಲ್ ಅಂದೋಲಾ ಇಂಡಿಪೆಡೆಂಟ್ ಪಿಯು ಕಾಲೇಜ ಗುಲಬರ್ಗಾ ರವರು ನಮ್ಮ ಕಾಲೇಜಿನ ರೂಮಿನ ಬಾಗೀಲ ಕೀಲಿ ಮುರಿದು ಯಾರೋ ಕಳ್ಳರು ಪಿ.ವಿ.ಸಿ ಕೇಬಲ್ 20,000/- ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: