ರಸ್ತೆ ಅಪಘಾತ
ಮರಣಾಂತಿಕ:-
ಯಡ್ರಾಮಿ
ಪೊಲೀಸ ಠಾಣೆ
ದಿನಾಂಕ:01-09-2020 ರಂದು 10-30 ಪಿ ಎಮ್ ಕ್ಕೆ ಫಿರ್ಯಾದಿ ದೇವಕ್ಕಿ ಗಂಡ ಬಸವರಾಜ @ ಬಸಪ್ಪ
ದೊಡ್ಡಮನಿ ವಯ:45 ವರ್ಷ ಸಾ:ಮಾಣಶಿವಣಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:01-09-2020 ರಂದು ಹರನೂರ
ಗ್ರಾಮದಲ್ಲಿ ನಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ನಾನು ನನ್ನ ಗಂಡ ನಮ್ಮ EXCEL ಮೋಟಾರ ಸೈಕಲ ನಂಬರ KA-28 L-7604 ನೇದ್ದನು ತೆಗೆದುಕೊಂಡು ಹೋಗಿ ಮರಳಿ ಬರುವಾಗ ನಮ್ಮ ಮೋಟರ ಸೈಕಲ ಕೆಟ್ಟಿದ್ದರಿಂದ ಮುತ್ತಕೊಡ ಗ್ರಾಮದಲ್ಲಿ ಇಟ್ಟು ಬಂದಿರುತ್ತೆವೆ, ಇಂದು ನನ್ನ ಗಂಡ ಮೋಟರ ಸೈಕಲ ತೆಗೆದುಕೊಂಡು ಬರುತ್ತೆನೆಂದು 4 ಗಂಟೆಗೆ ಮನೆಯಿಂದ ಹೋದನು ನಂತರ 8 ಪಿ ಎಮ್ ಸುಮಾರಿಗೆ ನಮ್ಮ ಊರ ಮಹಾದೇವಪ್ಪ ಕೂಡಿ ಇವರ ಹೋಲದ ಹತ್ತಿರ ರಸ್ತೆಯ ಮೇಲೆ ನನ್ನ ಗಂಡನ ಮೋಟರ ಸೈಕಲ ಅಪಘಾತವಾಗಿ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತಾ ವಿಷಯ ತಿಳಿದ್ದರಿಂದ ನಾನು, ಮತ್ತು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ರಸ್ತೆಯ ಮೇಲೆ ನನ್ನ ಗಂಡ ಮೃತ ಪಟ್ಟು ಬಿದ್ದಿದ್ದನು, ಅವನನ್ನು ನೋಡಲಾಗಿ ಎಡ ಕಣ್ಣಿನ ಹತ್ತಿರ ಹಣೇಯ ಮೇಲೆ ಬಾರಿ ರಕ್ತಗಾಯವಾಗಿ ಮೂಗಿನಿಂದ ಮತ್ತು ಕೀವಿಗಳಿಂದ ರಕ್ತ ಸೋರುತ್ತಿತ್ತು, ನನ್ನ ಗಂಡನ ಮೋಟರ ಸೈಕಲ ಸ್ಥಳದಲ್ಲೇ ಬಿದ್ದಿತ್ತು ನನ್ನ ಗಂಡನಿಗೆ ಅಪಘಾತ ಪಡಿಸಿದ್ದ ಮೋಟರ ಸೈಕಲ ಕೂಡಾ ಸ್ಥಳದಲ್ಲಿಯೇ ಬಿದ್ದಿದ್ದು ಅದರ ನಂಬರ:KA-28 EM-0200 ನೇದ್ದು ಇದ್ದು. ಅಪಘಾತ
ಪಡಿಸಿದ್ದ ವ್ಯಕ್ತಿಗೆ ನೋಡಲಾಗಿ ಎಡ ತಲೆಯ ಹತ್ತಿರ ರಕ್ತಗಾಯವಾಗಿದ್ದು ಅವನ ಹೆಸರು ಕೇಳಿದ್ದಾಗ ಮೂರಾರ್ಜಿ ತಂ ನಿಂಗಣ್ಣ ಹುಡೆದ ಸಾ:ಸುಂಗಠಾಣ ತಾ:ಸಿಂದಗಿ ತಿಳಿಸಿದನು. ಕಾರಣ ನನ್ನ ಗಂಡ ಮೋಟರ ಸೈಕಲ ತಗೆದುಕೊಂಡು ಊರಿಗೆ ಬರುವಾಗ 8 ಪಿ ಎಮ್ ಸುಮಾರಿಗೆ ನಮ್ಮ ಊರಿನ ಮಹಾದೇವಪ್ಪ ಕೂಡಿ ರವರ ಹೋಲದ ಹತ್ತಿರ ಎದುರುಗಡೆಯಿಂದ ಮೂರಾರ್ಜಿ ಎಂಬುವವನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ನನ್ನ ಗಂಡನ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಹೋಡೆದಿದ್ದರಿಂದ ನನ್ನ ಗಂಡ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅವನ ವಿರುದ್ದ ಕ್ರಮ ಕೈಗೋಳ್ಳಬೇಕು ಅಂತಾ ದೂರು ಹಾಜರು
ಪಡಿಸಿದ್ದರ ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಮಟಕಾ ಜೂಜಾಟ:-
ಅಫಜಲಪೂರ
ಪೊಲೀಸ ಠಾಣೆ
ದಿನಾಂಕ 01-09-2020 ರಂದು 8:00 ಪಿ,ಎಮ್ ಕ್ಕೆ ಅಫಜಲಪೂರ
ಪಟ್ಟಣದ ಸಿದ್ರಾಮೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ
ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ
ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದಿದ್ದರಿಂದ
ಪಿಎಸ್ಐ ಸಂತೋಷ ತಟ್ಟೆಪಳ್ಳಿ, ಹಾಗು ಸಿಬ್ಬಂದಿ ಜನರಾದ ಸುರೇಶ ಹೆಚ್,ಸಿ-394, ಸಂತೋಷ ಹೆಚ್.ಸಿ-439, ಆದಿಗೊಂಡ ಪಿಸಿ-1247 ಎಲ್ಲರೂ ಕೂಡಿಕೊಂಡ ಪಂಚ ಜನರೊಂದಿಗೆ ಅಫಜಲಪೂರ ಪಟ್ಟಣದ ಪೋಸ್ಟ ಆಫೀಸ್ ಹತ್ತೀರ ನಮ್ಮ
ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಸಿದ್ರಾಮೇಶ್ವರ ಗುಡಿಯ
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ
ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ ಆತನು ತನ್ನ ಹೆಸರು ಮಹೇಶ ತಂದೆ ಮಲ್ಲಪ್ಪ
ಹೆಗ್ಗಿ ವಯ||32 ವರ್ಷ ಜಾ|| ಲಿಂಗಾಯತ ಉ||ಕಾರ ಚಾಲಕ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1)
4520/- ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ಇವುಗಳನ್ನು
ಜಪ್ತಿ ಪಂಚನಾಮೆ ಪ್ರಕಾರ ವಶಕ್ಕೆ ತೆಗೆದುಕೊಂಡಿದ್ದರಿಂದ ಆರೋಪಿನ ವಿರುದ್ದ ಅಫಜಲಪೂರ ಪೊಲೀಸ
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಜಾತಿ ನಿಂದನೆ
ಪ್ರಕರಣ:-
ಮುಧೋಳ
ಪೊಲೀಸ ಠಾಣೆ
ದಿನಾಂಕ 01-09-2020 ರಂದು ಸಾಯಂಕಾಲ
05.30 ಗಂಟೆಗೆ ಪಿರ್ಯಾದಿ ಶ್ರೀಶೈಲ ತಂದೆ ಮಲ್ಲಪ್ಪ ಮಾಲಾ ವ|| 22 ಉ|| ಕೂಲಿ ಜಾ|| ಮಾದಿಗ ಸಾ||
ರಿಬ್ಬನಪಲ್ಲಿ ತಾ|| ಸೇಡಂ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದರ
ಸಾರಾಂಶವೇನೆಂದರೆ, ಈಗ ಸುಮಾರು 3-4 ದಿವಸಗಳ ಹಿಂದೆ ನಮ್ಮೂರಿನ ವೆಂಕಟಪ್ಪ ತಂದೆ ಆಶಪ್ಪ ಬದಿಗಾ
ಇವರ ಮತ್ತು ನಮ್ಮೂರಿನ ರಾಜು ತಂದೆ ಬಾಲಚಂದ್ರಪ್ಪ ಇರಡಪಲ್ಲಿ ಇವರ ಮದ್ಯದಲ್ಲಿ ಜಗಳ ತಂಟೆ ತಕರಾರು
ಆಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿರುತ್ತವೆ. ಈ
ಜಗಳಕ್ಕೆ ಮತ್ತು ನನಗೆ ಯಾವುದೇ ಸಂಬಂದ ಇರುವದಿಲ್ಲಾ. ಆದರೇ ನಿನ್ನೆ ದಿನಾಂಕ 31-08-2020 ರಂದು
ನಾನು 04.30 ಪಿಎಮ್ ಸುಮಾರಿಗೆ ನಮ್ಮೂರಿನ ಅಂಗನವಾಡಿ ಕೇಂದ್ರದ ಹತ್ತಿರ ಇರುವ ಕಟ್ಟೆಯ ಮೇಲೆ
ಕುಳಿತ್ತಿದ್ದಾಗ ನಮ್ಮೂರಿನ ಮಾರುತಿ ತಂದೆ ಆಶಪ್ಪ
ಬದಿಗಾ ಅವನ ತಮ್ಮನಾದ ವೆಂಕಟಪ್ಪ ಬದಿಗಾ ಹಾಗೂ ಅವರ ತಂದೆ ಆಶಪ್ಪ ಬದಿಗಾ ಇವರು 3 ಜನರು
ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ “ ಏ ಮಾದಿಗ ಸೂಳೆ ಮಗನೇ ನಿನಗೆ ಬಹಳ ಸೊಕ್ಕು ಬಂದಿದೆ
ರಂಡಿ ಮಗನೇ ನೀನೆ ನಮ್ಮ ಜಾತಿಯ ಹುಡುಗರೊಂದಿಗೆ ಓಡಾಡಿ ಅವರ ತಲೆ ಕೆಡಿಸಿ ಅವರೆಲ್ಲರೂ
ನಮ್ಮೊಂದಿಗೆ ಜಗಳ ಮಾಡುವಂತೆ ಮಾಡಿದ್ದಿಯಾ, ಸುಳೆ
ಮಗನೇ “ ಅಂತಾ ಅಂದು ಕೈಯಿಂದ, ರಾಡಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ, ನಂತರ 3
ಜನರು ನನಗೆ ಮತ್ತೆ ಮಾದಿಗ ಸೂಳೆ ಮಗನೆ ನೀನು ಇಂದು ಉಳಿದಿದ್ದಿ ಇನ್ನು ಮುಂದೆ ನೀನು ನಮ್ಮ ಜಾತಿಯ
ಹುಡುಗರೊಂದಿಗೆ ದೋಸ್ತಿ ಮಾಡಿ ಅವರೊಂದಿಗೆ ಓಡಾಡುವದು ಕಂಡು ಬಂದರೆ ನಿನಗೆ ಜೀವ ಸಹಿತ
ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ
ನೀಡಿದ ಫಿರ್ಯಾದು ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಇಸ್ಪೇಟ ಜೂಜಾಟ:-
ಶಹಾಬಾದ ನಗರ
ಪೊಲೀಸ ಠಾಣೆ
ದಿನಾಂಕ
01/09/2020 ರಂದು 7-00 ಪಿಎಮ್ ಕ್ಕೆ ಶ್ರೀ ತಿರುಮಲೇಶ ಪಿ ಎಸ್ ಐ (ಕಾಸು) ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಆರೋಪಿತರು ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ
ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಇಂದು
ದಿನಾಂಕ: 01/09/2020 ರಂದು ದೇವನ ತೆಗನೂರ
ಗ್ರಾಮದ ಸೇವಾಲಾಲ ಗುಡಿಯ ಮುಂದೆಗಡೆ ಖುಲ್ಲಾ
ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಇಸ್ಪೇಟಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ
ಮಾಹಿತಿ ಬಂದ ಮೇರೆಗೆ ನಾನು, ಸಿಬ್ಬಂದಿ ಮತ್ತು
ಪಂಚಜನರೊಂದಿಗೆ ದೇವನ ತೆಗನೂರ ಗ್ರಾಮಕ್ಕೆ ಹೋಗಿ ಒಂದು ಮನೆಯ ಗೊಡೆಯ ಮರೆಯಾಗಿ ನಿಂತು ನೋಡಲಾಗಿ ಸೇವಾಲಾಲ
ಗುಡಿಯ ಮುಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ
ಇಸ್ಪೇಟಾ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ
ಪಂಚರ ಸಮಕ್ಷಮದಲ್ಲಿ 5-15 ಪಿ.ಎಮ್ ಕ್ಕೆ ದಾಳಿ ಆರೋಪಿತರಾದ
ಸೈನಪತಿ ಗಂದೆ ಸುಭಾಷ ಚವ್ಹಾಣ ಸಂಗಡ 07
ಜನರು ಸಾ: ದೇವನ ತೆಗನೂರ ಮತ್ತು ಮುತ್ತಾಗಾ ಒಟ್ಟು 08 ಜನರಿಗೆ ಹಿಡಿದು ಅವರಿಂದ ಇಸ್ಪೇಟಾ ಜೂಜಾಟಕ್ಕೆ ಸಂಬಂಧ ಪಟ್ಟ
ನಗದು ಹಣ 4440-00 ರೂ ಹಾಗೂ 52 ಇಸ್ಪೇಟಾ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು
ಮರಳಿ ಠಾಣೆಗೆ ಬಂದಿದ್ದು ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಸಾರಾಂಶ ಮೇಲಿಂದ ಶಹಾಬಾದ
ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
No comments:
Post a Comment