ಜಾತಿ ನಿಂದನೆ ಪ್ರಕರಣ:-
ಮಹಾಗಾಂವ ಪೊಲೀಸ ಠಾಣೆ
ದಿನಾಂಕ: 29.08.2020 ರಂದು ಸಾಯಂಕಾಲ 04.00 ಗಂಟೆಗೆ
ಅರ್ಜಿದಾರನಾದ ಶ್ರೀ ರಮೇಶ ತಂದೆ ರಾಣಪ್ಪ ಸಾ: ಬೆಳಕೋಟಾ ತಾ: ಕಮಲಾಪೂರ ಇವರು ಠಾಣೆಗೆ ಹಾಜರಾಗಿ
ತನ್ನದೊಂದು ಅರ್ಜಿ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ದಿನಾಂಕ: 29.08.2020 ರಂದು ರಾತ್ರಿ
12.00 ಗಂಟೆ ಸುಮಾರಿಗೆ ನಮ್ಮ ಗ್ರಾಮದಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಕೆಲವು ಜನರೊಂದಿಗೆ ರಮೇಶ
ನಂದ್ಯಾಳ ಇವರ ಕಿರಾಣಿ ಅಂಗಡಿ ಹತ್ತಿರ ಕುಳಿತುಕೊಂಡಾಗ ಆರೋಪಿತರಾದ ಶ್ರೀ ವಿವೇಕ ತಂದೆ
ಶಿವಶರಣಪ್ಪ ಪಾಟೀಲ ಸಾ: ಬೆಳಕೋಟಾ ಹಾಗೂ ಸುಜೀತ ತಂದೆ ಸುಭಾಷ ಬಿರಾದಾರ, ಹಾಗೂ ಬಸವರಾಜ
ಚಿಗ್ಗೋಣಿ ಮಾಜಿ ಗ್ರಾಮ ಪಂಚಾಯತ ಸದಸ್ಯ ಕಮಲಾಪೂರ ಸಿದ್ದಪ್ಪ ಗೋಣಿ ಎಲ್ಲರೂ ಕಮಲಾಪೂರ ಇವರೆಲ್ಲರೂ
ಸೇರಿಕೊಂಡು ಉದ್ದೇಶ ಪೂರಕವಾಗಿ ವಿವೇಕ ಪಾಟೀಲ ಇತನು ಸರಾಯಿ ಕುಡಿದು ಬಂದು ಕುಡಿದ ಮತ್ತಿನಲ್ಲಿ ಈ
ಸೂಳೆ ಮಗಾ ಇಂತಹ ಹಬ್ಬ ಪೊಲೀಸರಿಂದ ರಕ್ಷಣೆ ತೊಗುಂಡು ಮಾಡುತ್ತಾನೆ. ಇವನನ್ನು ಮೊದಲು ಒದೆಯಬೇಕು.
ಈ ಹೊಲ್ಯಾ ಭೋಸಡಿ ಮಗನಿಗೆ ಸೊಕ್ಕು ಬಾಳದ ಎಂದು ಬೈಯುತ್ತಾ ಸುಜೀತ ಬಿರಾದಾರ ಕಮಲಾಪೂರ ರವರನ್ನು
ಫೋನ ಮಾಡಿ ಕರೆಯಿಸಿ, ರಾತ್ರಿ
ಸುಮಾರು 01.00 ಗಂಟೆಗೆ ಬಸವರಾಜ ಚಿಗೋಣಿ ಮಾಜಿ ಗ್ರಾಮ ಪಂಚಾಯತ ಸದಸ್ಯನು ಹಾಗೂ ಸಿದ್ದಪ್ಪ ಗೋಣಿ
ಇವರೊಂದಿಗೆ ಬಂದು. ಅವರಲ್ಲಿ ಸುಜೀತ ಬಿರಾದಾರ ಈತನು ನನಗೆ ನೇರವಾಗಿ ರಂಡಿ ಮಗನೆ ಹೊಲ್ಯಾ ಜ್ಯಾತಿ
ಸೂಳೆ ಮಗನೆ ನಿನಗೆ ದಿಮಾಕ್ ಬಹಳ ಅದ ನಮಗೆ ಎದುರು ಮಾತಾಡತಿ, ಅಂತಾ ಅನ್ನುತ್ತಲೇ ಏಕಾಏಕಿ ನನ್ನ ಎದೆಗೆ ತನ್ನ ಕೈಯಿಂದ ಹೊಡೆದು, ಎಡ ಕೆನ್ನೆಗೆ
ಕೈಯಿಂದ ಹೊಡೆದು ಮತ್ತು ನನ್ನ ತೊಡೆಯ ಹಿಂಬಾಗಕ್ಕೆ ಕಾಲಿನಿಂದ ಒದ್ದು ನಂತರ ಎಲ್ಲರೂ ಸೇರಿಕೊಂಡು ಮಗನೆ
ನೀನಗೆ ಖಲಾಸ ಮಾಡುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ
ಹೋಗಿರುತ್ತಾರೆ. ಕಾರಣ ಈ ಮೇಲೆ ತಿಳಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ನನಗೆ ಜೀವ ರಕ್ಷಣೆ ನ್ಯಾಯ
ಒದಗಿಸಿ ಕೊಡಬೇಕೆಂದು ಅರ್ಜಿ ಸಾರಾಂಶದ ಮೇಲಿಂದ ಮಹಾಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಇರುತ್ತದೆ.
ಮುಧೋಳ ಠಾಣೆ
ದಿನಾಂಕ 29-08-2020 ರಂದು ಸಾಯಂಕಾಲ 7-00
ಪಿ.ಎಂ ಕ್ಕೆ ಪಿರ್ಯಾಧಿ ಸಾಯಿಲು ತಂದೆ ಬಾಲಚಂದ್ರ ಮಡಿವಾಳ ವ|| 26 ವರ್ಷ ಜಾ|| ಮಡಿವಾಳ ಉ|| ಕೂಲಿ ಕೆಲಸ ಸಾ||
ರಿಬ್ಬನಪಲ್ಲಿ ಗ್ರಾಮ ಇವರು ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾಧಿ ಹೇಳಿಕೆಯನ್ನು ನೀಡಿದ್ದರ
ಸಾರಂಶವೆನೆಂದರೆ, ಈಗ ಸುಮಾರು 3 ತಿಂಗಳ ಹಿಂದೆ ನಾನು ಮತ್ತು ನಮ್ಮ
ಮನೆಯವರೆಲ್ಲರೂ ಕೂಲಿಕೆಲಸಕ್ಕಾಗಿ ಹೈದ್ರಾಬಾದಕ್ಕೆ ದುಡಿಯಲು ಹೋಗಿದ್ದು, ಊರಿನಲ್ಲಿ ನಮ್ಮ ತಂದೆ ಬಾಲಚಂದ್ರ ಇವರು ಒಬ್ಬರೇ ಇದ್ದರು.
ದಿನಾಂಕ 10-08-2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 11-08-2020 ರಂದು
ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮನೆ ಮತ್ತು ತಮ್ಮೂರ
ಮಲ್ಲಮ್ಮಾ ರಾಸೂರ ಇವರ ಮನೆಯ ಬಾಗಿಲು ಕೀಲಿ ಮುರಿದು ಒಳಹೋಗಿ ಮನೆಯಲ್ಲಿದ್ದ ಸುಮಾರು 1,84,000
ರೂ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿ ಸಾಮಾನುಗಳು ಹಾಗು ನಗದು ಹಣ 8,000 ರೂ. ಹೀಗೆ
ಒಟ್ಟು 1,92,000 ರೂ, ಕಿಮ್ಮತ್ತಿನ ಸಾಮಾನುಗಳು ಹಾಗು ನಗದು ಹಣವನ್ನು ಯಾರೋ ಕಳ್ಳರು
ಕಳವು ಮಾಡಿಕೊಂಡು ಹೋಗಿದ್ದು, ಮುಂದಿನ ಕಾನುನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ
ಫಿರ್ಯಾದಿ ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಇರುತ್ತದೆ.
1. ನರೋಣ ಪೊಲೀಸ ಠಾಣೆ
ದಿನಾಂಕ:29/08/2020 ರಂದು ಫಿರ್ಯಾದಿ ವಿಶಾಲ್ ತಂದೆ ತುಳಿಸರಾಮ್ ಸುಗಂಧಿ, ವಯಾ:25 ವರ್ಷ, ಜಾತಿ:ಮರಾಠ, ಉ:ಹೊಟೇಲ್ ಕೆಲಸ, ಸಾ:ಚೌಡಾಪುರ, ತಾ:ಅಫಜಲಪೂರ ಇವರು ದೂರು ನೀಡಿದ ಸಾರಾಂಶವೇನಂದರೆ, ದಿನಾಂಕ:27/08/2020 ರಂದು ಬೆಳಿಗ್ಗೆ ನಾನು ಹಾಗೂ ನನ್ನ ಅಣ್ಣನಾದ ಶಶಿಕುಮಾರ ತಂದೆ ತುಳಿಸಿರಾಮ್ ಸುಗಂಧಿ ಇಬ್ಬರು ಸೇರಿ ನನ್ನ ಅಣ್ಣನ ಮೊಟಾರ್ ಸೈಕಲ್ ನಂಬರ್ ಕೆಎ32- ಇಕ್ಯೂ-6251 ನೇದ್ದರ ಮೇಲೆ ನಮ್ಮೂರಿನಿಂದ ಗೋಳಾ(ಬಿ) ಗ್ರಾಮದ ಶ್ರೀ.ಲಕ್ಕಮ್ಮದೇವಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿರುತ್ತೇವೆ. ಮರಳಿ ಅದೇ ಮೊಟಾರ್ ಸೈಕಲ್ ಮೇಲೆ ನಮ್ಮೂರಿನ ಕಡೆಗೆ ಹೊರಟಾಗ ಸದರಿ ಮೊಟಾರ್ ಸೈಕಲನ್ನು ನನ್ನ ಅಣ್ಣನೆ ಚಲಾಯಿಸುತ್ತಿದ್ದನು. ಅಂದಾಜು ಮಧ್ಯಾಹ್ನ 4-00 ಗಂಟೆ ಸುಮರಿಗೆ ಗೋಳಾ(ಬಿ) ಕ್ರಾಸನಿಂದ ಕಡಗಂಚಿ ಗ್ರಾಮಕ್ಕೆ ಹೋಗುವ ಮುಖ್ಯ ಡಾಂಬರ್ ರೋಡಿನ ಮೇಲೆ ಬ್ರಿಡ್ಜ್ ಹತ್ತಿರ ನನ್ನ ಅಣ್ಣನು ಮೊಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ಮೊಟಾರ್ ಸೈಕಲ್ ಸ್ಕಿಡ್ಡಾಗಿ ಮೊಟಾರ್ ಬಿದ್ದು ಅಪಘಾತವಾಗಿದ್ದು, ಸದರಿ ಅಪಘಾತದಲ್ಲಿ ನನ್ನ ಎಡಗಾಲಿಗೆ ಮೊಳಕಾಲು ಹತ್ತಿರ, ಮತ್ತು ಪಾದದ ಹತ್ತಿರ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ಆಗಿ ಕಾಲು ಮುರಿದಂತೆ ಆಗಿರುತ್ತದೆ. ಮತ್ತು ಮುಖಕ್ಕೆ, ಗದ್ದಕ್ಕೆ, ಬಲಗೈ ಭುಜ ಮತ್ತು ಮೊಳಕೈ ಹತ್ತಿರ ಗಂಬೀರ ರಕ್ತಗಾಯಗಳು ಆಗಿರುತ್ತವೆ. ನನ್ನ ಅಣ್ಣನಿಗೂ ಕೂಡ ಅಲಲ್ಲಿ ಸಣ್ಣಪುಟ್ಟ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ. ಮುಂದಿನ ಕಾನೀನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ
2. ನರೋಣ ಪೊಲೀಸ ಠಾಣೆ
ದಿನಾಂಕ:29/08/2020 ರಂದು 2030 ಗಂಟೆಗೆ ಫಿರ್ಯಾದಿ ಅಮೃತ ತಂದೆ
ಈರಣ್ಣಾ ಮಲಶೆಟ್ಟಿ, ವಯಾ:50 ವರ್ಷ, ಜಾತಿ:ಲಿಂಗಾಯತ, ಉ:ಕೂಲಿಕೆಲಸ, ಸಾ:ಧುತ್ತರಗಾಂವ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನಂದರೆ, ದಿನಾಂಕ:05/08/2020 ರಂದು ನಾನು ನಮ್ಮುರಿನಿಂದ ಕಲಬುರಗಿಗೆ ಎ.ಪಿ.ಎಂ.ಸಿ ಯಲ್ಲಿ ಕೂಲಿ ಕೆಲಸಕ್ಕಾಗಿ
ಹೋಗಲು ಕಡಗಂಚಿ ಬಸ್ ನಿಲ್ದಾಣದ ಹತ್ತಿರ 08-00 ಎ.ಎಂಕ್ಕೆ ಬಸ್ಸಿಗಾಗಿ ಕಾಯುತ್ತಾ ನಿಂತಾಗ ಬಸ್
ನಿಲ್ದಾಣದ ಮುಂದೆ ರೋಡಿನ ಮೇಲೆ ನಮ್ಮೂರಿನ ಅಂಬರೀಷ ತಂದೆ ದೌಲತ್ರಾಯ ಈತನು ಒಂದು ಮೊಟಾರ್ ಸೈಕಲ್
ನಂ ಕೆಎ-32 ಇಯು-5033 ನೇದ್ದು ತಗೆದುಕೊಂಡು ಹೊರಟಿದ್ದು ನಾನು ಆತನಿಗೆ ನಾನು ಕೂಡ ಕಲಬುರಗಿ
ಕಡೆಗೆ ಬರುವುದಾಗಿ ಕೈಮಾಡುತ್ತಿದ್ದಾಗ ಆತನು ಒಮ್ಮಲೇ ಅತೀವೇಗ ಮತ್ತು ನಿಷ್ಕಾಳಜಿತನದಿಂದ
ನಡೆಸಿಕೊಂಡು ನನಗೆ ಡಿಕ್ಕಿಹೊಡೆದು ಅಪಘಾತ ಪಡಿಸಿದ್ದು ಆಗ ನಾನು ಕೆಳಗೆ ಬಿದ್ದಿದ್ದು
ಅಪಘಾತದಲ್ಲಿ ನನ್ನ ಬಲಗೈಗೆ ಭಾರಿಒಳಪೆಟ್ಟಾಗಿ ಮುರಿದಂತೆ ಆಗಿರುತ್ತದೆ. ಕಾರಣ ನಮ್ಮೂರಿನ ಅಂಬರೀಷ
ತಂದೆ ದೌಲತ್ರಾಯ ಈತನ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡ ಮೇರೆಗೆ ಸದರಿ
ದೂರಿನ ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು ಇರುತ್ತದೆ
ಅಫಜಲಪೂರ ಪೊಲೀಸ ಠಾಣೆ
ದಿನಾಂಕ 29-08-2020 ರಂದು 18:45 ಗಂಟೆಗೆ ಫೀರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ ಮುದ್ರಿತ ದೂರನ್ನು
ಪಡೆದುಕೊಂಡು ಸದರಿ ದೂರಿನ ಸಾರಾಂಶವೇನೆಂದರೆ ನಾನು ಅಂದರೆ ಶ್ರೀ ಸಿದ್ರಾಮಪ್ಪ ತಂದೆ
ರೇವಣಸಿದ್ದಪ್ಪ ಭೂಸ್ತೆ ವಯ||
70 ವರ್ಷ ಜಾ|| ಮಾಲಗಾರ ಉ|| ಒಕ್ಕಲುತನ ಸಾ||
ಮಾಶಾಳ ತಾ|| ಅಫಜಲಪೂರ ಆಗಿದ್ದು, ಮಾಶಾಳ ಗ್ರಾಮದ ಸೀಮಾಂತರದಲ್ಲಿ ನನ್ನ ಹೆಸರಿಗೆ 445/1 ರಲ್ಲಿ 3 ಎಕರೆ 04 ಗುಂಟೆ ಕೃಷಿ ಭೂಮಿ ಇರುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಇವರು ದಿನಾಂಕ 27-05-2016 ರಂದು ನನಗೆ ಗೊತ್ತಿಲ್ಲದ ಹಾಗೆ ನನ್ನ ಖೊಟ್ಟಿ ಸಹಿ ಮಾಡಿ ಸದರಿ ನನ್ನ ಹೆಸರಿನಲ್ಲಿದ್ದ
ಜಮೀನಿನ ಮೇಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ದಲ್ಲಿ 42,000/- ರೂ ಸಾಲ ಹಾಕಿಕೊಂಡು,
ಹಣವನ್ನು ತಾನೆ ಪಡೆದುಕೊಂಡು ನನಗೆ ಮೋಸ ಮಾಡಿರುತ್ತಾನೆ.
2017-18 ನೇ ಸಾಲಿನಲ್ಲಿ
ಮಾನ್ಯ ಸಿದ್ರಾಮಯ್ಯ ನವರ ಅವದಿಯಲ್ಲಿ ಕರ್ನಾಟಕ ಸರ್ಕಾರ ಸಹಾಕಾರ ಇಲಾಖೆಯ ಸಂಘದ ಸಾಲವನ್ನು ಮನ್ನಾ
ಮಾಡಿರುತ್ತಾರೆ,
ಸದರಿ ಮನ್ನಾ ಮಾಡಿದ ಯಾದಿಯಲ್ಲಿ ಕ್ರ ಸಂ 773 ರಲ್ಲಿ ನನ್ನ ಹೆಸರು ಸಹ ಇರುವುದು ನನಗೆ ಗೊತ್ತಾಗಿರುತ್ತದೆ. ನಾನು ಸಾಲ ಮಂಜೂರಾತಿನೆ
ಮಾಡಿಕೊಂಡಿರುವುದಿಲ್ಲ. ಸಾಲ ಮನ್ನಾ ಆಯಿತು ಎಂಬ ಬಗ್ಗೆ ತಿಳಿದುಕೊಂಡಾಗ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘ (ನಿ) ಮಾಶಾಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ
ಪ್ರಧಾನಿ ಇವರು ನನ್ನ ಖೊಟ್ಟಿ ಸಹಿ ಮಾಡಿ 42,000/- ರೂ ಸಾಲವನ್ನು ತಾವೆ ಹಾಕಿಕೊಂಡು, ಸದರಿ ಹಣವನ್ನು ಸಹ ತಾವೆ
ತಮ್ಮ ಸ್ವಂತಕ್ಕೆ ಬಳಸಿಕೊಂಡಿರುವುದು ನನಗೆ ಗೊತ್ತಾಗಿರುತ್ತದೆ. ಇದೆ ರೀತಿ ಸದರಿ ವಿಜಯಕುಮಾರ
ಇವರು ಇನ್ನು ಹಲವಾರು ಜನರ ಹೆಸರಿನಲ್ಲಿ ಸಾಲವನ್ನು ಪಡೆದು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು
ರೈತರಿಗೆ ಮೋಸ ಮಾಡಿರುತ್ತಾರೆ.
ಕಾರಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
(ನಿ) ಮಾಶಾಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಸಾ|| ಮಾಶಾಳ ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನನ್ನ ಖೋಟ್ಟಿ ಸಹಿ ಮಾಡಿ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನನ್ನ ಜಮೀನಿನ ಮೇಲೆ 42,000/- ರೂ ಬೇಳೆ ಸಾಲ ಪಡೆದುಕೊಂಡು ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿ ಹಾಗೂ ಮನ್ನಾ ಆದ ಸಾಲದ
ಹಣವನ್ನು ಸಹ ನನಗೆ ಮರಳಿಸದೆ ನನಗೂ ಮತ್ತು ಸರ್ಕಾರಕ್ಕೂ ಮೋಸ ಮಾಡಿರುತ್ತಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡ
ಮೇರೆಗೆ ಸದರಿ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ
ವಾಡಿ ಪೊಲೀಸ ಠಾಣೆ
ದಿನಾಂಕಃ
29/08/2020 ರಂದು 4.00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಅಹ್ಮದಿ ಬೇಗಂ ಗಂಡ
ಸೈಯದ ಮಶಾಕ ಸಾಃ ಛೋಟಾರೋಜ ಕಲಬುರಗಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ್ದು ಸಾರಾಶಂವೆನೆಂದರೆ, ವಾಡಿಯಲ್ಲಿ ನಮ್ಮ ಅತ್ತೆ ಜಾಹೀದಾ ಬೇಗಂ, ನನ್ನ ಗಂಡನ ಅಣ್ಣಂದಿರಾದ ಸೈಯದ ಖಾಜಾ ,
ಸೈಯದ ಇಸ್ಮಾಯಿಲ್
ರವರು ವಾಡಿಯಲ್ಲಿ ವಾಸವಿರುತ್ತಾರೆ. ನಿನ್ನೆ ದಿನಾಂಕಃ 28/08/2020 ರಂದು ನನ್ನ ಗಂಡ ಸೈಯದ ಮಶಾಕ ರವರು ವಾಡಿಯಲ್ಲಿರುವ ತನ್ನ ತಾಯಿಯ ಹತ್ತಿರ
ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ 5.00 ಪಿ.ಎಮ್. ಸುಮಾರಿಗೆ ಹೋಗಿರುತ್ತಾರೆ. ಇಂದು ರಾತ್ರಿ 1.00 ಎ.ಎಮ. ಸುಮಾರಿಗೆ ನಮ್ಮ ಭಾವನಾದ ಸೈಯದ ಇಸ್ಮಾಯಿಲ ರವರು ಫೋನ ಮಾಡಿ ನನಗೆ
ತಿಳಿಸಿದ್ದೇನೆಂದರೆ, ನಿನ್ನೆ
11.00 ಪಿ.ಎಮ್. ಸುಮಾರಿಗೆ ರಾವೂರ ಕ್ರಾಸ ಹತ್ತಿರ ನಿನ್ನ ಗಂಡನಿಗೆ
ರಸ್ತೆ ಅಪಘಾತವಾಗಿ ಮೃತಪಟ್ಟಿರುತ್ತಾನೆ ಅಂತಾ ಹೇಳಿದ್ದರಿಂದ ಕಲಬುರಗಿಯಿಂದ ನಾವು ವಾಡಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನಿಗೆ ನೋಡಲಾಗಿ ನನ್ನ ಗಂಡನಿಗೆ
ತಲೆಗೆ ಭಾರಿ ಪೆಟ್ಟಾಗಿ ಮೃತಪಟ್ಟಿದ್ದನು.
ನನ್ನ ಅತ್ತೆ ಮತ್ತು ಭಾವಂದಿಗೆ ಕೇಳಲಾಗಿ ಗೊತ್ತಾಗಿದ್ದೇನೆಂದರೆ,
ನನ್ನ ಗಂಡನಿಗೆ ರಾವೂರ ಕ್ರಾಸನಲ್ಲಿ ಶಹಾಬಾದ ಕಡೆಯಿಂದ ಬರುವ ಯಾವುದೊ ಒಂದು ಅಪರಿಚಿತ
ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು
ಬಂದು ಡಿಕ್ಕಿಪಡಿಸಿದ್ದರಿಂದ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಕಾರಣ ನನ್ನ ಗಂಡನ ಮೋ.ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನ ಸಮೇತ ಓಡಿ ಹೋದ ವಾಹನ ಚಾಲಕನ ಮೇಲೆ ಕಾನೂನು
ಕ್ರಮ ಜರುಗಿಸಬೇಕು
ಅಂತಾ ದೂರಿನ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ
ಮಾಡಬೂಳ ಪೊಲೀಸ ಠಾಣೆ
ದಿನಾಂಕ 30/08/2020 ರಂದು 8.30 ಎ.ಎಮಕ್ಕೆ ಫಿರ್ಯಾದಿ ಶ್ರೀಮತಿ ರೇಷ್ಮಾ ಗಂಡ
ಅಲ್ಲಾಭಕ್ಷ್ಯಾ ಕೋರವಿ ಸಾಃ ಕಲಗುರ್ತಿ ತಾ: ಕಾಳಗಿ ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ
ಕಂಪ್ಯೂಟರದಲ್ಲಿ ಕನ್ನಡದಲ್ಲಿ ಟೈಪ ಮಾಡಿದ ಲಿಖಿತ ದೂರು ಸಲ್ಲಿಸಿದ್ದು, ಸಾರಾಂಶವೆನೆಂದರೆ, ನಮಗೆ ಐಷಾಸಿದ್ದಿಕಾ ವಯಾಃ 05 ವರ್ಷ, ಅಖೀಲ ವಯಾಃ 03 ವರ್ಷ, ಅಪ್ಸಾಫಾತಿಮಾ ವಃ 08 ತಿಂಗಳು ಹೀಗೆ ಒಟ್ಟು ಮೂರು ಜನ ಮಕ್ಕಳಿರುತ್ತಾರೆ. ನಾವು ವಾಸವಾಗಿರುವ ಮನೆಯ ಮುಂದೆ ರೋಡಿನ
ಅಚೆಗೆ ಇನ್ನೊಂದು ನಮ್ಮದೇ ವಿಶ್ರಾಂತಿ ಕೋಣೆ ಇದ್ದು, ಆ ಕೊಣೆಯಲ್ಲಿ ನಾವು ವಿಶ್ರಾಂತಿಗಾಗಿ ಟಿವಿ
ಹಾಗೂ ಒಂದು ಮಂಚ ಹಾಕಿರುತ್ತೇವೆ. ಹೀಗಿದ್ದು ದಿನಾಂಕ 29/08/2020 ರಂದು 5.30 ಪಿ.ಎಮದ ಸುಮಾರಿಗೆ ನಮ್ಮ ಓಣಿಯ ಆರೀಪ ತಂದೆ
ಮಹಿಬೂಬಸಾಬ ಬುಡಾಣ ಈತನು ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಮನೆಯ ವಿಶ್ರಾಂತಿ
ಕೊಣೆಯಲ್ಲಿ ಟಿವಿ ನೋಡುತ್ತಾ ಕುಳಿತ್ತಿರುವ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಐಷಾ ಸಿದ್ದಿಕಾ
ವಯಾಃ 05 ವರ್ಷ ಇವಳಿಗೆ ಬೆತ್ತಲು ಮಾಡಿ ಮೈ, ಕೈ ಮುಟ್ಟಿ ಜಬರಿ ಸಂಭೋಗ ಮಾಡಲು ಪ್ರಯತ್ನಿಸಿರುತ್ತಾನೆ. ಕಾರಣ ಆರೀಪ ತಂದೆ ಮಹಿಬೂಬಸಾಬ
ಬುಡಾಣ ಸಾಃ ಕಲಗುರ್ತಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕೆಂದು ವಗೈರೆ ನೀಡಿದ
ದೂರಿನ ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.