ಅಪಘಾತ ಪ್ರಕರಣಗಳು :
ಜೇವರಗಿ
ಠಾಣೆ : ಶ್ರೀ ದರೆಪ್ಪ ಸಿ.ಹೆಚ್.ಸಿ.
254 ಜೇವರಗಿ ಠಾಣೆ ರವರು ಕಲಬುರಗಿ ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು
ಮೈಹಿಬೂಬ ಇತನಿಗೆ ವಿಚಾರಿಸಿದಾಗ ಅವನು
ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದರಿಂದ ಗಾಯಾಳುವಿನ ತಮ್ಮ ನಾದ ಇಮಾಮ ಈತನು ಕೊಟ್ಟ ಪೀರ್ಯಾದಿ ಅರ್ಜಿ ಸ್ವೀಕೃತ
ಮಾಡಿಕೊಂಡು ಮರಳಿ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಪೀರ್ಯಾದಿ ಸಾರಾಂಶವೆನೆಂದರೆ “ನಾನು
ಶ್ರೀ ಇಮಾಮ ತಂದೆ ಹುಸೇನಭಾಷ
ಮುಲ್ಲಾ ಸಾ// ಶಾಸ್ರ್ತೀ ಚೌಕ ಜೇವರಗಿ ರವರ ಅಣ್ಣ ಮಹಿಬೂಬ ಹುಸೇನಭಾಷ ಮುಲ್ಲಾ ಇತನು ರಿಲಾಯನ್ಸ ಪೆಟ್ರೋಲ್ ಬಂಕ ಹತ್ತಿರ
ಇರುವ ಬಾಬಾ ತಂದೆ ನಜೀರ ಅಹ್ಮದ ಇನಾಮದಾರ ಇವರ
ಪಂಚರ ತೆಗೆಯುವ ಅಂಗಡಿಯಲ್ಲಿ ಪಂಚರ ತೆಗೆಯುವ ಕೂಲಿ ಕೆಲಸ ಮಾಡುತ್ತಿದ್ದಾನೆ. ದಿನಾಂಕ 04.04.2020
ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಮಹಿಬೂಬ ಇತನು ಸತ್ತಾರ ಸಾಬ ಪೆಟ್ರೋಲ ಬಂಕಗೆ
ಹೋಗಿ ಮೋಟಾರ ಸೈಕಲ್ ಗೆ ಪೆಟ್ರೋಲ್ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಮೋಟಾರ ಸೈಕಲ್
ನಂ KA-32 EN-9857 ನೇದ್ದರ ಮೇಲೆ ಹೋಗಿರುತ್ತಾನೆ. ನಂತರ ಸಾಯಂಕಾಲ 5-30 ಗಂಟೆಯ
ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮೂರಿನ
ಜಾಕೀರ ತಂದೆ ಅಬ್ದುಲ್ ಜಾಫರ ವಡಗೇರಿ ಇತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಜೇವರಗಿ-ಶಹಾಪೂರ ರೋಡಿಗೆ ಇರುವ ಮಿರ್ಚಿ ವೇ ಬ್ರೀಡ್ಜ ಹತ್ತಿರ ರೊಡಿನಲ್ಲಿ ನೀನ್ನ ಅಣ್ಣನ ಮೊಟಾರ್ ಸೈಕಲಕ್ಕೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಅಫಘಾತವಾಗಿರುತ್ತದೆ ಎಂದು ತಿಳಿಸಿದನು. ವಿಷಯ
ಗೊತ್ತಾದ ಕೂಡಲೆ
ನಾನು ಗಾಬರಿಯಾಗಿ ಮತ್ತು ನನ್ನ ಗೆಳೆಯನಾದ ಮೊಯಿದ್ದಿನ ಇನಾಮದಾರ ಇಬ್ಬರು ಕೂಡಿಕೊಂಡು ಘಟನೆ
ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನ ಮೋಟಾರ ಸೈಕಲ ನಂ KA-32-EN-9857 ಬಿದ್ದಿದ್ದು ಮತ್ತು ಒಂದು ಕೆಂಪು ಬಣ್ಣದ MASSEY FERGUSON
ಟ್ರಾಕ್ಟರ ನಿಂತಿತ್ತು.
ನನ್ನ ಅಣ್ಣನಿಗೆ ಚಿಕಿತ್ಸೆ ಕುರಿತು ಜೇವರಗಿ ಸರಕಾರಿ
ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ಗೊತ್ತಾಗಿ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಅಣ್ಣ ಮಹಿಬೂಬ ಇತನು
ಚಿಕಿತ್ಸೆಯಲ್ಲಿದ್ದು ಅವನ ತಲೆಗೆ ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿದ್ದು ಅವನು ಮಾತನಾಡುವ
ಸ್ಥತಿಯಲ್ಲಿ ಇರಲಿಲ್ಲ. ಅಲ್ಲಿಯೇ ಇದ್ದ ಜಾಕೀರ ತಂದೆ ಅಬ್ದುಲ್ ಜಾಫರವಡಗೇರಿ
ಇತನು ತಿಸಿದ್ದೆನೆಂದರೆ ನಿನ್ನ ಅಣ್ಣ ಮಹಿಬೂಬ ಇತನು ಮೋಟಾರ ಸೈಕಲ್ ನಂ KA-32-EN-9857 ನೇದ್ದರ ಮೆಲೆ ಜೇವರಗಿ ಕಡೆಯಿಂದ
ಸಾಯಂಕಾಲ ಶಹಾಪೂರ ರೋಡಿಗೆ ಇರುವ ಸತ್ತಾರಸಾಬ
ಪೆಟ್ರೋಲ್ ಬಂಕ ಕಡೆಗೆ ಹೋಗುತ್ತೀರುವಾಗ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಟ್ರಾಕ್ಟರ ಚಾಲಕ
ತನ್ನ ವಶದಲ್ಲಿರುವ ಟ್ರಾಕ್ಟರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸಂಚಾರಿ ನಿಯಮ ಪಾಲಿಸದೆ (ಇಂಡಿಕೇಟರ ಹಾಕದೆ )ಎಕಾಎಕಿಯಾಗಿ ಒಮ್ಮೆಲೆ ತನ್ನ ಟ್ರಾಕ್ಟರನ್ನು ರೋಡಿನ ಬಲಬದಿಗೆ ಇರುವ
ಮಿರ್ಚಿ ವೇ. ಬ್ರಿಡ್ಜ ಕಡೆಗೆ ತಿರಿವಿ ಮಹಿಬೂಬ ಈತನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದನು. ಈ ಘಟನೆಯ ನಂತರ ಸದರಿ ಟ್ರಾಕ್ಟರ ಚಾಲಕ ಟ್ರಾಕ್ಟರನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿರುತ್ತಾನೆ ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಮುಂದೆ ಅವನಿಗೆ
ನೋಡಿದರೆ ಗುರುತಿಸುತ್ತೇನೆ ನಂತರ ಮೈಹಿಬೂಬ
ಈತನಿಗೆ ನಾನು ಮತ್ತು ಶಬ್ಬಿರ ಇಬ್ಬರು ಕೂಡಿಕೊಂಡು 108 ಅಂಬುಲೇನ್ಸ್ ವಾಹನದಲ್ಲಿ
ಹಾಕಿಕೊಂಡು ಚಿಕಿತ್ಸೆ ಕುರಿತು ಜೇವರಗಿ ಆಸ್ಪತ್ರೆಗೆ ತಂದಿರುತ್ತೆವೆ ಎಂದು ತಿಳಿಸಿದ್ದರಿಂದ ನನಗೆ
ಗೊತ್ತಾಗಿರುತ್ತದೆ. ನಂತರ ನಾನು ನನ್ನ ಗೆಳೆಯರಾದ ಮೋಯಿದ್ದೀನ ಇನಾಮದಾರ ,ಅಮೀನಸಾಬ ಮುಜಾವರ, ಶಬ್ಬೀರ ಇನಾಮದಾರ ಮೂವರು ಕೂಡಿ ನನ್ನ
ಅಣ್ಣನಿಗೆ ಹೆಚ್ಚಿನ ಚಿಕಿತ್ಸೆಗಾಗಿ108 ಅಂಬುಲೇನ್ಸ ವಹಾನದಲ್ಲಿ ಹಾಕಿಕೊಂಡು ಜೇವರಗಿ
ಆಸ್ಪತ್ರೆಯಿಂದ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ. ಅವನು ಸದ್ಯ
ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಮೇಲೆ ನಮೂದಿಸಿದ
ಟ್ರಾಕ್ಟರ ಇಂಜಿನ ನಂಬರ JHS337A99010
ಚೆಸ್ಸಿನಂ. MEA661E5JH2161201 ನೇದ್ದರ ಚಾಲಕನು ಯಾವುದೇ ಸಂಚಾರಿ ನಿಯಮ ಪಾಲಿಸದೆ (ಇಂಡಿಕೇಟರ
ಹಾಕದೆ ) ಎಕಾಎಕಿಯಾಗಿ ಒಮ್ಮೆಲೆ ತನ್ನ ಟ್ರಾಕ್ಟರನ್ನು
ರೋಡಿನ ಬಲಬದಿಗೆ ಇರುವ ಮಿರ್ಚಿ ವೇ. ಬ್ರಿಡ್ಜ
ಕಡೆಗೆ ತಿರಿವಿ ನನ್ನ ಅಣ್ಣನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದರಿಂದ ಈ ರಸ್ತೆ ಅಫಘಾತ
ಜರುಗಿರುತ್ತದೆ. ನನ್ನ ಅಣ್ಣ ಮಹಿಬೂಬ ಹುಸೇನಭಾಷ
ಮುಲ್ಲಾ ಈತನು ದಿನಾಂಕ 04.04.2020 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಜೇವರಗಿ- ಶಹಾಪೂರ
ರೋಡ ಸತ್ತಾರ ಸಾಬ ಪೆಟ್ರೋಲ ರೊಡಿನಲ್ಲಿ ಹೋಗುವಾಗ ನಮ್ಮ ಅಣ್ಣನ ಮೋಟಾರ
ಸೈಕಲ್ ನಂ KA-32 EN-9857 ನೇದ್ದಕ್ಕೆ MASSEY
FERGUSON ಟ್ರಾಕ್ಟರ
ಇಂಜಿನ ನಂಬರ JHS337A99010 ಚೆಸ್ಸಿನಂ. MEA661E5JH2161201
ನೇದ್ದರ ಚಾಲಕನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದರಿಂದ
ನನ್ನ ಅಣ್ಣನಿಗೆ ಬಾರಿಗಾಯವಾಗಿ ಬೇವೊಸ್ ಆಗಿದ್ದರಿಂದ
ಅವನಿಗೆ ಕಲಬುರಗಿ ಯುನೈಟೇಡ್ ಆಸ್ಪತ್ರೆಯಲ್ಲಿ ಸಿರಿಕೆ ಮಾಡಿದ್ದು ಅವನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಾ
ಅಘಘಾತದಲ್ಲಿ ಆದ ಗಾಯದಿಂದ ಗುಣಮುಖ ಹೊಂದದೆ ಇಂದು ದಿನಾಂಕ
05/04/2020 ರಂದು ಮದ್ಯಾಹ್ನ 12.45 ಗಂಟೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ
ಠಾಣೆ : ಶ್ರೀಮತಿ ಶ್ರೀಮತಿ ಗುಂಡಮ್ಮ
ಗಂಡ ಚಂದ್ರಕಾಂತ ಕುಂಬಾರ,
ಸಾ:ಭೈರಮಡಗಿ ಗ್ರಾಮ, ತಾ:ಅಫಜಲಪೂರ ರವರ ಗಂಡನಾದ
ಚಂದ್ರಕಾಂತ ತಂದೆ ವಿಠಲ್ ಕುಂಬಾರ ಇವರು ದಿನಾಂಕ: 27/03/2020 ರಂದು
ನನ್ನ ತವರು ಮನೆ ಬೋದನ ಗ್ರಾಮದಲ್ಲಿ ಕೆಲಸವಿದೆ ಅಂತಾ ಹೇಳಿ ಹೋಗಿರುತ್ತಾನೆ. ದಿನಾಂಕ:28/03/2020 ರಂದು ಬೆಳಿಗ್ಗೆ 10-00 ಗಂಟೆಗೆ ನನಗೆ ನನ್ನ ಅಣ್ಣನಾದ ಉಮೇಶ
ತಂದೆ ಶಿವರುಧ್ರಪ್ಪಾ ಕುಂಬಾರ ಇವರು ನನ್ನ ಮೊಬೈಲಗೆ ಫೋನಮಾಡಿ ನಿನ್ನೆ ನಾನು ಹಾಗೂ ನನ್ನ ಗಂಡನಾದ
ಚಂದ್ರಕಾಂತ ಇಬ್ಬರು ಕಡಗಂಚಿ ಯಿಂದ ಬೋದನ ಗ್ರಾಮಕ್ಕೆ ಬರುವಾಗ ನರೋಣಾ ಮತ್ತು ಬೋದನ ಗ್ರಾಮದ ಮದ್ಯ
ಇರುವ ಫೂಲಿನ ಹತ್ತಿರ ಜಂಪನಲ್ಲಿ ಮೊಟಾರ್ ಸೈಕಲ್ ನಾನು ಚಲಾಯಿಸುತ್ತಿದ್ದಾಗ ಚಂದ್ರಕಾಂತನು ಹಿಂದೆ
ಕುಳಿತ್ತಿದ್ದನು ಜಂಪಾಗಿ ಮೊಟಾರ್ ಸೈಕಲನಿಂದ ಕೆಳಗೆ ಬಿದ್ದಿರುತ್ತಾನೆ. ಆತನ ತಲೆಗೆ ಸ್ವಲ್ಪ
ರಕ್ತಗಾಯವಾಗಿದ್ದು ಮತ್ತೆ ಇಬ್ಬರು ಅದೇ ಮೊಟಾರ್ ಸೈಕಲ್ ಮೇಲೆ ಊರಿಗೆ ಬಂದಿದ್ದು ಇಂದು ಬೆಳಿಗ್ಗೆ
ಚಂದ್ರಕಾಂತನು ಗಾಯದ ಬಾದೆ ಹೆಚ್ಚಾಗಿ ಹಾಸಿಗೆ ಹಿಡಿದಿರುತ್ತಾನೆ. ಅವನಿಗೆ ಉಪಚಾರಕ್ಕಾಗಿ
ಕಲಬುರಗಿಗೆ ಒಯ್ಯುತ್ತಿದ್ದೇವೆ. ನೀವು ಕಲಬುರಗಿಗೆ ಬಾಅಂತ ತಿಳಿಸಿದ್ದು. ನಾನು ದಿನಾಂಕ:28/03/2020 ರಂದು ಕಲಬುರಗಿಗೆ ಬಂದು ಮೊಹಾನರಾಜ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ನನ್ನ ಗಂಡನಿಗೆ
ನೋಡಿದಾಗ ಆತನ ತಲೆಯ ಹಿಂಭಾಗಗಕ್ಕೆ ಭಾರಿ ರಕ್ತಗಾಯವಾಗಿದ್ದು ಆತನು ಸರಿಯಾಗಿ ಮಾತನಾಡಲು
ಬರುತ್ತಿರಲಿಲ್ಲ ಇದರ ಬಗ್ಗೆ ನನ್ನ ಅಣ್ಣನಾದ ಉಮೇಶನಿಗೆ ವಿಚಾರಿಸಿದಾಗ ದಿನಾಂಕ:27/03/2020 ರಂದು ರಾತ್ರಿ 8-30 ಗಂಟೆಗೆ ಚಂದ್ರಕಾಂತನು
ಕಡಗಂಚಿಯಲ್ಲಿದ್ದು, ಬೋದನ ಕಡೆಗೆ ಯಾವುದೇ ವಾಹನದ ಸೌಕರ್ಯ ಇಲ್ಲದ ಕಾರಣ
ಇಲ್ಲೆ ನಿಂತಿರುತ್ತೇನೆ ಅಂತಾ ತಿಳಿಸಿದಾಗ ನಾನು ಆತನಿಗೆ ಕರೆದುಕೊಂಡು ಬರಲು ಮೊಟಾರ್ ಸೈಕಲ್ ನಂ
ಕೆಎ32-ಇಕೆ-0765 ನೇದ್ದನ್ನು ತಗೆದುಕೊಂಡು
ಕಡಗಂಚಿಗೆ ಹೋಗಿ ಇಬ್ಬರು ಸೇರಿ ಮರಳಿ ಬೋದನ ಕಡೆಗೆ ಬರುವಾಗ ನಾನು ಮೊಟಾರ್ ಸೈಕಲ್
ನಡೆಸುತ್ತಿದ್ದು. ರಾತ್ರಿ 9-30 ಗಂಟೆಗೆ ನರೋಣಾ ಮತ್ತು ಬೋದನ ಮದ್ಯ
ಇರುವ ಫೋಲ ಹತ್ತಿರ ಜಂಪಿನಲ್ಲಿ ಒಮ್ಮಲೇ ಮೊಟಾರ್ ಸೈಕಲ್ ಬ್ಯಾಲೆನ್ಸ್ ತಪ್ಪಿದ್ದರಿಂದ
ಕುಳಿತ್ತಿದ್ದ ಚಂದ್ರಕಾಂತನು ಕೆಳಗೆ ಬಿದ್ದಿರುತ್ತಾನೆ. ಆತನಿಗೆ ರಕ್ತಗಾಯ ಆಗಿದ್ದರಿಂದ ಆತನ
ತಲೆಗೆ ಸುಣ್ಣ ವತ್ತಿ ಮತ್ತೆ ಮೊಟಾರ್ ಸೈಕಲ್ ಮೇಲೆ ಕುಳಿತುಕೊಂಡು ಬೋದನ ಗ್ರಾಮಕ್ಕೆ ಕರೆದುಕೊಂಡು
ಹೋಗಿರುತ್ತೇನೆ. ದಿನಾಂಕ:28/03/2020ರ ಬೆಳಿಗ್ಗೆವರೆಗೆ ಚನ್ನಾಗಿದ್ದು
ಆನಂತರ ಹಾಸಿಗೆ ಹಿಡಿದಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಅದೇ ದಿನ ನಾವು ನನ್ನ ಗಂಡನಿಗೆ
ಹೆಚ್ಚಿನ ಉಪಚಾರಕ್ಕಾಗಿ ಧನ್ವಂತ್ರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನನ್ನ ಅಣ್ಣನಾದ
ಉಮೇಶನು ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ನನ್ನ ಗಂಡನು
ಮೊಟಾರ್ ಸೈಕಲ ಮೇಲಿಂದಾ ಬಿದ್ದಿರುತ್ತಾನೆ. ತಾವು ಉಮೇಶ ತಂದೆ ಶಿವರುಧ್ರಪ್ಪಾ ಕುಂಬಾರ ಸಾ:ಬೋದನ
ಈತನು ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment