POLICE BHAVAN KALABURAGI

POLICE BHAVAN KALABURAGI

18 March 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 17-03-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಾಶಾಳ ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಗ್ರಾಮಕ್ಕೆ ಹೋಗಿ ಬಸನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಶ್ರೀಶೈಲ ತಂದೆ ಜೋತಿಬಾ ಕ್ಷತ್ರಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 530/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 17-03-2020 ರಂದು ಜೇವರಗಿ ಪೊಲೀಸ ಠಾಣಾ ವ್ಯಾಪ್ತಿಯ ಬಿರಾಳ (ಬಿ) ಗ್ರಾಮದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಜೇವರಗಿ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಿ 5 ಜನ ಆರೋಪಿತನ್ನು ಹಿಡಿದು ಅವರ ಹೆಸರು ವಿಳಾಸ ಕೇಳಲು 1. ಮಾನಪ್ಪ ತಂದೆ ಲಕ್ಷ್ಮಣ ನಾಯಿಕೋಡಿ ಸಾ|| ಬಿರಾಳ ಬಿ 2. ಈರಣ್ಣಗೌಡ ತಂದೆ ಸಂಗಪ್ಪಹಳಿಮನಿ ಸಾ|| ಗಂವ್ಹಾರ್.  3. ರವಿ ತಂದೆ ಭಿಮಣ್ಣ ಬೋವಿ ಸಾ|| ಗಂವ್ಹಾರ್. 4. ಲಕ್ಷ್ಮಣ ತಂದೆ ರಂಗಪ್ಪ ಟಣಕೇದಾರ ಸಾ|| ಬಿರಾಳ ಬಿ 5. ಶಂಕರ ತಂದೆ ಗಣಪತಿ ರಾಠೋಡ ಸಾ|| ಬಿರಾಳ ಬಿ. ಅಂತಾ ತಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1070/- ರೂ ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿವರೊಂದಿಗೆ ಜೇವರಗಿ  ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಇಸ್ಮಾಯಿಲ್ ತಂದೆ ಮೌಲಾಸಾಬ ಗೌಂಡಿ ರವರು  ದಿನಾಂಕ 20-07-2016 ರಂದು ರೂ 4,00,000/- ರೂಪಾಯಿ ಸಾಲವನ್ನು ಮನೆ ನಿರ್ಮಾಣಕ್ಕಾಗಿ ತಗೆದುಕೊಂಡಿರುತ್ತಾರೆ. ಮತ್ತು ಸದರಿ ಮೇಲೆ ತೋರಿಸಿದ ಮನೆ ನಂಬರ 1-4-16/2 ನ್ನು ನಮ್ಮ ಬ್ಯಾಂಕಿಗೆ ಸಬ್ ರಜೀಸ್ಟಾರ ಅಫಜಲಪೂರ ಇವರಲ್ಲಿ ನಮ್ಮ ಬ್ಯಾಂಕಿನ ಹೆಸರಿಗೆ ಹಕ್ಕು ಬದಲಾವಣೆ ಮಾಡಿರುತ್ತಾರೆ ಮತ್ತು ಸದರಿ ಮನೆಯ ಮೂಲ ದಾಖಲಾತಿಗಳನ್ನು ಬ್ಯಾಂಕಿಗೆ ಜಮಾ ಮಾಡಿರುತ್ತಾರೆ ಹಕ್ಕು ಬದಲಾವಣೆ ಮೂಲ ನಂ 1555/2016/2017  ದಿನಾಂಕ 18-07-2016 ನಂತರ ಈ ಮೇಲೆ ತಿಳಿಸಿದ ವ್ಯಕ್ತಿಯೂ ಸಾಲ ಮರು ಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡಲಿಲ್ಲ ಆದ್ದರಿಂದ ಈಗ ಆ ಸಾಲವು ಆರ್.ಬಿ.ಐ ಪ್ರಕಾರ ಕಟ್ ಬಾಕಿ ಆಗಿದ್ದು ಇದೆ. ನಂತರ ಶ್ರೀ ಇಸ್ಮಾಯಿಲ್ ತಂದೆ ಮೌಲಾಸಾಬ ಇವರು ಸದರಿ ಆಸ್ತಿಯನ್ನು ಶ್ರೀಮತಿ ಜಯಶ್ರೀ ಗಂಡ ಈರಣ್ಣ ಮಗ್ಗಿ ಸಾ: ಅಫಜಲಪೂರ ಇವರಿಗೆ ಎರಡು ಹಂತದಲ್ಲಿ ಮಾರಾಟ ಮಾಡಿದ್ದು ಸದರಿ ಮಾರಾಟ ಸಂಖ್ಯೆ 03077-2016-2017 ದಿನಾಂಕ 25-10-2016 ಮತ್ತು 02937-2017-2018  ದಿನಾಂಕ 14-11-2017 ಸಬ್ ರಜೀಸ್ಟರ ಅಫಜಲಪೂರ ಇವರಲ್ಲಿ ನೊಂದಣಿ ಆಗಿದೆ ಆದ್ದರಿಂದ ಶ್ರೀ ಇಸ್ಮಾಯಿಲ್ ತಂದೆ ಮೌಲಾಸಾಬ ಇವರು ನಮ್ಮ ಶಾಖೆಗೆ ವಂಚನೆ ಮಾಡಿರುತ್ತಾರೆ ಇದರಿಂದ ನಮ್ಮ ಶಾಖೆಗೆ ಬೇಕು ಅಂತಾನೆ ವಂಚನೆ ಮಾಡಿರುತ್ತಾರೆ ಆದ್ದರಿಂದ ತಾವುಗಳು  ಇಸ್ಮಾಯಿಲ್ ತಂದೆ ಮೌಲಾಸಾಬ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಚಂದ್ರಕಾಂತ ತಂದೆ ಸೋಮಶೇಖರ ಹಿರೇಮಠ ಕೆ.ಬಿ.ಎಸ್. ಬ್ಯಾಂಕ ಮ್ಯಾನೇಜರ ಚೌಡಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ  ಗೌರಾಬಾಯಿ ಗಂಡ  ಶಂಕ್ರು ಚವ್ಹಾಣ ಸಾ// ನಾಗರಹಳ್ಳಿ ತಾ// ಜೇವರಗಿ  ರವರ ಮಗಳಾದ ರೇಣುಕಾ ಇವಳಿಗೆ ಈಗ  ಸುಮಾರು10 ವರ್ಷಗಳ ಹಿಂದೆ  ಜೇವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದ  ಮಂಗಲು  ತಂದೆ ಗೋಪು ರಾಠೋಡ ಇತನೊಂದಿಗೆ ಮದುವೆ ಮಾಡಿ ಕೊಟ್ಟಿರುತ್ತೇವೆ. ಅಳಿಯ ಮಂಗಲು ಇತನು  ಮದುವೆಯಾದ ಸುಮಾರು 4 ವರ್ಷಗಳ ವರೆಗೆ  ನನ್ನ ಮಗಳು  ರೇಣುಕಾ  ಇವಳೊಂದಿಗೆ  ಚನ್ನಾಗಿದ್ದನು  ನಂತರದ  ದಿನಗಳಲ್ಲಿ  ಅವನು  ನನ್ನ ಮಗಳಿಗೆ  ನಿನಗೆ   ಸರಿಯಾಗಿ ಅಡಿಗೆ ಮಾಡಲು  ಬರುವದಿಲ್ಲಾ  ಕೂಲಿ ಕೆಲಸಕ್ಕೆ ಹೊಗುವದಿಲ್ಲಾ  ಅಂತಾ ಮಾನಸಿಕ ಮತ್ತು ದೈಹಿಕ  ಹಿಂಸೆ ಕೊಡಲು  ಆರಂಭಿಸಿದ್ದು  ವಿಷಯ ನಮ್ಮ ಮಗಳು  ನಮಗೆ ತಿಳಿಸಿದಾಗ  ನಾನು ಮತ್ತು  ನನ್ನ ಮಗ  ರಾಜು  ಹಾಗೂ  ನಮ್ಮ ತಾಂಡಾದ ಹಿರಿಯರಾದ ಕಿರಣಕುಮಾರ ರಾಠೋಡ ,ಜೈಯರಾಮ ಚವ್ಹಾಣ ಎಲ್ಲರೂ ಕೂಡಿ  ಗಂವ್ಹಾರ ಗ್ರಾಮಕ್ಕೆ ಹೋಗಿ ನನ್ನ ಅಳಿಯ ಮಂಗಲು ಇತನಿಗೆ ರೀತಿ ಹೆಂಡ್ತಿಯೊಂದಿಗೆ  ವಿನಾಕಾರಣ ಕಿರಿಕಿರಿ ಮಾಡಬೇಡ  ಹೆಂಡ್ತಿಯೊಂದಿಗೆ  ಚನ್ನಾಗಿ ಇದ್ದು  ಸಂಸಾರ ಮಾಡು ಅಂತ  ಬುದ್ದಿ ಮಾತು  ಹೇಳಿ  ಬಂದಿರುತ್ತೇವೆ. ಆದರೂ ಕೂಡಾ  ನನ್ನ ಅಳಿಯ ಮಂಗಲು  ಈತನು  ಬದಲಾಗದೆ  ಈ ಮೊದಲಿನಂತೆ  ನನ್ನ ಮಗಳೊಂದಿಗೆ  ಕಿರಿಕಿರಿ  ಮಾಡುತ್ತಾ  ಮತ್ತು ಅವನು  ಯಾವುದೇ ಕೆಲಸ ಮಾಡದೆ  ಊರಲ್ಲಿ ಇಸ್ಪೆಟ ಆಡುವದು ಮತ್ತು ಸರಾಯಿ ಕುಡಿಯುವದು ಮಾಡುತ್ತಾ ಹೆಂಡ್ತಿಯೊಂದಿಗೆ ಜಗಳ ಮಾಡುವದ  ಮುಂದುವರಿಸಿದ್ದು ಆದರೂ ಕೂಡಾ  ನನ್ನ ಮಗಳು ರೇಣುಕಾ ಇವಳು  ಗಂಡನ ಹಿಂಸೆ ತಾಳೀ ಕೊಂಡು ಗಂಡನ ಮನೆಯಲ್ಲಿಯೇ ಇದ್ದು ಜೀವನ ಮಾಡಿದ್ದು ಅವಳಿಗೆ ಮೂರು ಜನ ಗಂಡು ಮಕ್ಕಳು  ಹುಟ್ಟಿರುತ್ತಾರೆ.  ದಿನಾಂಕ: 10/03/2020 ರಂದು  ಹೊಳಿ ಹುಣಿಮೇ ಹಬ್ಬದ  ದಿನದಂದ್ದು  ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ  ನನ್ನ ಅಳಿಯ ಮಂಗಲು ಇತನು ಸರಾಯಿ  ಕುಡಿದ ಅಮಲಿನಲ್ಲಿ ಈ ಮೊದಲಿನಂತೆ ತನ್ನ ಹೆಂಡ್ತಿಯೊಂದಿಗೆ ಜಗಳಾ ತಗೆದು ಮಾನಸಿಕ ಮತ್ತು ದೈಹಿಕ ಕಿರುಕುಳ  ನೀಡಿದ್ದರಿಂದ ನನ್ನ ಮಗಳು ರೇಣುಕಾಳು ತನ್ನ ಗಂಡನ ಹಿಂಸೆ ತಾಳರಾದೆ ದಿನಾಂಕ:10/03/2020 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ  ಗಂವ್ಹಾರ  ಗ್ರಾಮದ ತನ್ನ ಮನೆಯಲ್ಲಿ  ಮೈ ಮೇಲೆ  ಸೀಮೆ ಎಣ್ಣೆ ಸುರಿದುಕೊಂಡು ಮೈಯಿಗೆ ಬೆಂಕಿ ಹಚ್ಚಿಕೊಂಡಾಗ ಇದನ್ನು  ನೋಡಿ  ಅವಳ  ಮಾವ ಗೋಪು ರಾಠೋಡ  ಹಾಗೂ  ಪಕ್ಕದ ಮನೆಯವರಾದ  ವಿನಾಯಕ ತಂದೆ ಬಾನು ನಾಯಕ ರಾಠೋಡ  ಹಾಗೂ ಇತರರು ನನ್ನ ಮಗಳು  ರೇಣುಕಾಗೆ  ಚಿಕಿತ್ಸೆಗಾಗಿ  ಬಸವೇಶ್ವರ  ಆಸ್ಪತ್ರೆ ಕಲಬುರಗಿಗೆ  ತಂದು  ಸೇರಿಕೆ ಮಾಡಿರುತ್ತಾರೆ. ನಂತರ ಅಂದು ರಾತ್ರಿ ವಿಷಯ ತಿಳಿದು ನಾನು ಮತ್ತು ನನ್ನ ಗಂಡ ಹಾಗೂ ಮಗ ರಾಜು  ಬಸವೇಶ್ವರ ಆಸ್ಪತ್ರೆ  ಕಲಬುರಗಿಗೆ ಬಂದು ನೋಡಲಾಗಿ ವಿಷಯ  ನಿಜ ವಿದ್ದು  ನನ್ನ ಮಗಳು  ರೇಣುಕಾ  ಇವಳಿಗೆ ಮೈಯಲ್ಲಾ ಸುಟ್ಟ ಗಾಯಗಳಾಗಿದ್ದು ಅವಳು ಚಿಕಿತ್ಸೆ ಪಡೆಯುತ್ತಿದ್ದು ಮಾತನಾಡುವ ಸ್ದಿತಿಯಲ್ಲಿ ಇರುವುದಿಲ್ಲಾ ನನ್ನ ಮಗಳು  ಚಿಕಿತ್ಸ ಪಡೆಯುತ್ತಾ  ಗುಣಮುಖಳಾಗದೆ  ಇಂದು ದಿನಾಂಕ: 17/03/2020 ರಂದು  ರಾತ್ರಿ 1-50  ಗಂಟೆಗೆ ಬಸವೇಶ್ವರ ಆಸ್ಪತ್ರೆ  ಕಲಬುರಗಿಯಲ್ಲಿ ಮೃತಪಟ್ಟಿರುತ್ತಾಳೆ . ನನ್ನ ಮಗಳು ರೇಣುಕಾ ಇವಳು ತನ್ನ ಗಂಡ ನೀಡುತ್ತಿರುವ ಮಾನಸಿಕ ಮತ್ತು ದೈಹಿಕ  ಕಿರುಕುಳಕ್ಕೆ ಬೇಸತ್ತು ಮೈಯಿಗೆ ಬೆಂಕಿ ಹಚ್ಚಿಕೊಂಡು ಚಿಕಿತ್ಸೆಯಲ್ಲಿಗುಣಮುಖಳಾಗದೆ ಮೃತಪಟ್ಟಿರುತ್ತಾಳೆ.  ಕಾರಣ ಮಾನ್ಯರು ನನ್ನ ಮಗಳು  ರೇಣುಕಾ ಇವಳ ಸಾವಿಗೆ  ದುಸ್ಪ್ರೇರಣೆ  ನೀಡಿ ಈ ಘಟನೆಗೆ  ಕಾರಣನಾದ  ನನ್ನ  ಅಳಿಯ  ಮಂಗಲು ತಂದೆ ಗೋಪು  ರಾಠೋಡ  ಸಾ// ಗಂವ್ಹಾರ ಈತನ ವಿರುದ್ದ ಸೂಕ್ತ  ಕಾನೂನು ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀಮತಿ ಆಯಿಷಾ ಗಂಡ ಅನ್ವರಖಾನ ಸಾ:ನಾಲವಾರ ರವರು ಈ ಹಿಂದೆ ಕುಂಬಾರಹಳ್ಳಿಯ ಸಾಬಣ್ಣಾ ದೊರಿ ಎನ್ನುವರ ಮಗಳಿದ್ದು ನಾನು ಸುಮಾರು 06 ವರ್ಷಗಳ ಹಿಂದೆ ನಾಲವಾರ ಸ್ಟೇಷನದಲ್ಲಿರುವ ಅನ್ವರಖಾನ ತಂದೆ ಇಸ್ಮಾಯಿಲ್ ಖಾನ ಇತನೊಂದಿಗೆ ಆತನ ಒಪ್ಪಿಗೆಯ ಪ್ರಕಾರ ಮುಸ್ಲಿಂ ಸಂಪ್ರದಾಯದಂತೆ ನಾಲವಾರ ಸ್ಟೇಷನದಲ್ಲಿ ಮದುವೆ ಮಾಡಿಕೊಂಡಿದ್ದು ನಂತರ ನಾವು ಅಳ್ಳೊಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆವು. ನನ್ನ ಗಂಡ ಅನ್ವರಖಾನ ಇತನು ಕುಡಿದ ಅಮಲಿನಲ್ಲಿ ವಿನಾಕಾರಣ ನನ್ನೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿದ್ದರಿಂದ ಅಳ್ಳೊಳ್ಳಿಯಲ್ಲಿ ಮನೆ ಖಾಲಿ ಮಾಡಿಕೊಂಡು ನಾಲವಾರ ಗ್ರಾಮದಲ್ಲಿ ಒಂದೆರಡು ಕಡೆ ಬಾಡಿಗೆ ಮನೆ ಮಾಡಿಕೊಂಡಿದ್ದು ಅಲ್ಲಿಯು ಸಹ ನನ್ನ ಗಂಡ ನನಗೆ ಕಿರಕುಳ ಕೊಡುತ್ತಿದ್ದರಿಂದ ಒಂದುವರೆ ವರ್ಷದ ಹಿಂದೆ ನಾಲವಾರ ಗ್ರಾಮದ ಸಾಬಣ್ಣಾ ಟೀಚರ್ ಎನ್ನುವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆವು. ನನ್ನ ಗಂಡ ಯಾವದೇ ಕೆಲಸ ಮಾಡದೇ ನಾನು ಕೂಲಿಗೆ ಹೋದ ಹಣದಿಂದ ಕುಡಿದು ನನ್ನೊಂದಿಗೆ ಜಗಳ ಮಾಡುತ್ತಿದ್ದನು. ನಾನು ಇಂದಿಲ್ಲಾ ನಾಳೆ ಸರಿಹೋಗಬಹದು ಅಂತಾ ಆತನು ಕೊಟ್ಟ ಕಿರಕುಳವನ್ನು ತಾಳಿ ಜೀವನ ಸಾಗಿಸುತ್ತ ಬಂದಿರುತ್ತೆನೆ. ನನ್ನ ಗಂಡನ ಹೆಸರಿನಲ್ಲಿ ನಮ್ಮೂರ ಸೀಮಾಂತರದಲ್ಲಿ 05 ಎಕರೆ ಜಮೀನು ಇರುತ್ತದೆ.  ದಿನಾಂಕ 16/03/2020 ರಂದು ಮದ್ಯಾಹ್ನ 12-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ನನ್ನ ಗಂಡ ಹೊರಗಡೆ ಹೋದವನು ಮದ್ಯಪಾನ ಮಾಡಿದ ಅಮಲಿನಲ್ಲಿ ಮನೆಗೆ ಬಂದು ನನ್ನೊಂದಿಗೆ ವಿನಾಕಾರಣ ಜಗಳ ತೆಗೆದು ‘’ ರಾಂಡ ತೂ ಕಾಲಿ ಹೇ ತು ಇಸ ಘರ ಮೇ ನಹಿ ರಹೇನಾ ಅಂತಾ ಬೈದು ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡ ಹತ್ತಿದನು.ಆಗ ನಾನು ವಿನಾಕಾರಣ ನನಗೆ ಏಕೆ ಹೊಡೆಯುತ್ತಿ ಅಂತ ಕೇಳಿದ್ದಕ್ಕೆ ಮತ್ತೆ ನನ್ನ ಗಂಡ ‘’ ರಾಂಡ ತೂ ಇಸ ಘರ ಮೇ ನಹಿ ರಹೇನಾ ಅಂತಾ ಬೈದು ನನ್ನ ತಲೆಯ ಕೂದಲು ಹಿಡಿದು ಜಗ್ಗಾಡಿ ಮನೆಯ ಹೊರಗಡೆ ಹಾಕಿದನು. ಆಗ  ಮನೆಯ ಮಾಲಿಕರಾದ ಸಾಬಮ್ಮ ಟೀಚರ ಮತ್ತು ಸಾಬಣ್ಣಾ ಜಾಲಗಾರ ರವರು ಬಂದು ಜಗಳ ಬಿಡಿಸಿದರು. ಆಗ ನನ್ನ ಗಂಡನು ‘’ರಾಂಡ ತೂ ಇಸ ಘರ ಕೋ ಆಯಾ ತೋ ತೆರೆ ಕೋ ಜಾನ ಸೇ ಮಾರತಾ ಅಂತಾ ಬೈಯುತ್ತ ಮನೆಯಿಂದ ಹೊರಟು ಹೋಗಿರುತ್ತಾನೆ ನನ್ನ ಗಂಡ ಅನ್ವರಖಾನ ಇತನು ಸುಮಾರು 2-3 ವರ್ಷಗಳಿಂದ ನನಗೆ ವಿನಾಕಾರಣ ಕಿರಕುಳ ಕೊಟ್ಟು ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡಿದ್ದು ಅಲ್ಲದೇ ಇಂದು ಸಹ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಆತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: