POLICE BHAVAN KALABURAGI

POLICE BHAVAN KALABURAGI

28 October 2019

KALABURAGI DISTRICT REPORTED CRIMES

ಆಕ್ರಮವಾಗಿ ಇಟ್ಟುಕೊಂಡಿದ್ದ ಪಿಸ್ತುಲ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ: 27-10-2019 ರಂದು ಕಲಬುರಗಿಯಿಂದ ಅಫಜಲಪೂರ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಅಬ್ದುಲಖಾದರ ತಂದೆ ಅಬ್ದುಲ ಸತ್ತರ ಸಾ|| ಇಸ್ಲಾಮಬಾದ ಕಾಲೋನಿ ಮಿಲ್ಲತ್ ನಗರ ಕಲಬುರಗಿ ಎಂಬುವ ವ್ಯೆಕ್ತಿ ಅಕ್ರಮ ಪಿಸ್ತೂಲು ಇಟ್ಟುಕೊಂಡು ಬರುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಶ್ರೀ ತುಳಜಪ್ಪ ತಂದೆ ಶಂಕ್ರೆಪ್ಪ ಸುಲ್ಫಿ ಡಿ.ಎಸ್.ಪಿ. ಆಳಂದ ರವರು ಹಾಗು ಅಫಜಲಪೂರದ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ  ಅಫಜಲಪೂರ ಬಸ್ ನಿಲ್ದಾಣದಲ್ಲಿ ಕಲಬುರಗಿಯಿಂದ ಬರುವ ಬಸ್ಸುಗಳನ್ನು ನೋಡುತ್ತಾ ಕಾಯುತ್ತಾ ನಿಂತುಕೊಂಡಾಗ 4:00 ಪಿ.ಎಮ್ ಸುಮಾರಿಗೆ ಕಲಬುರಗಿಯಿಂದ ಬಂದ  ಒಂದು ಬಸ್ಸಿನಿಂದ ಇಳಿದು ಸಂಶಾಸ್ಪದ ರೀತಿಯಲ್ಲಿ ಬರುತ್ತಿದ್ದನು. ನಮಗೆ ಸದರಿಯವನ ಮೇಲೆ ಬಲವಾದ ಸಂಶಯ ಬಂದಿದ್ದರಿಂದ, ಸದರಿಯವನನ್ನು ಹಿಡಿದು ವಿಚಾರ ಮಾಡಬೆಕೆಂದು ಹತ್ತಿರ ಹೋಗುತ್ತಿದ್ದಾಗ ಸದರಿ ವ್ಯೆಕ್ತಿ ನಮ್ಮನ್ನು ನೋಡಿ ಬಸ್ ನಿಲ್ದಾಣದ ಎಡಭಾಗದ ಕಂಪೌಂಡ ಕಡೆಗೆ ಓಡ ಹತ್ತೀದನು. ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿಯಬೆಕೆಂದು ಹೋಗುತ್ತಿದ್ದಾಗ ಸದರಿ ವ್ಯೆಕ್ತಿ ಬಸ್ ನಿಲ್ದಾಣದ ಕಂಪೌಂಡ ಗೋಡೆ ಹಾರುತ್ತಿದ್ದಾಗ ಅವನ ಸೋಂಟದಿಂದ ಒಂದು ಪಿಸ್ತೂಲು ಕೆಳಗೆ ಬಿದ್ದಿತು. ನಾವು ಸದರಿ ವ್ಯೆಕ್ತಿಯನ್ನು ಹಿಡಿಯಬೆಕೆನ್ನುವಷ್ಟರಲ್ಲಿ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋದನು. ನಂತರ ನಾವು ಸದರಿ ವ್ಯೆಕ್ತಿ ಕಂಪೌಂಡ ಗೋಡೆ ಹಾರುವಾಗ ಅವನ ಸೊಂಟದಿಂದ ಬಿದ್ದ ಪಿಸ್ತೂಲನ್ನು ನಮ್ಮ ಜೋತೆಗೆ ಇದ್ದ ಪಂಚರ ಸಮಕ್ಷಮ ಚೆಕ್ ಮಾಡಿ ನೋಡಲಾಗಿ ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಪಿಸ್ತೂಲ ಮ್ಯಾಗ್ಜಿನ್ ಬಿಚ್ಚಿ ನೊಡಲು ಅದರಲ್ಲಿ ಒಂದು ಜಿವಂತ ಗುಂಡು ಇತ್ತು. ನಂತರ ಸದರಿ ಪಿಸ್ತೂಲನ್ನು ಮತ್ತು ಗುಂಡನ್ನು ಪಂಚರ ಸಮಕ್ಷಮ  ಜಪ್ತಿ ಪಂಚನಾಮೆ ಮೂಲಕ ಸದರಿ 1) ಒಂದು ನಾಡ ಪಿಸ್ತೂಲನ್ನು ಅಕಿ-30,000/- ರೂ 2) ಒಂದು ಜಿವಂತ ಗುಂಡು ಅಕಿ-100/- ರೂ ನೇದ್ದವುಗಳನ್ನು ಪ್ರತ್ಯಕವಾಗಿ ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಶೀಲ ಮಾಡಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಜಪ್ತ ಮಾಡಿಕೊಂಡ ಮುದ್ದೆ ಮಾಲಿನೊಂದಿಗೆ ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಪಿಸ್ತೂಲು ಇಟ್ಟುಕೊಂಡಿದ್ದ ಅಬ್ದುಲಖಾದರ ತಂದೆ ಅಬ್ದುಲ ಸತ್ತರ ಸಾ|| ಇಸ್ಲಾಮಬಾದ ಕಾಲೋನಿ ಮಿಲ್ಲತ್ ನಗರ ಕಲಬುರಗಿ ಈತನ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ವಾಡಿ ಠಾಣೆ : ಶ್ರೀಮತಿ ಶಾಂತಾ ಗಂಡ ಸುಭಾಷ ಕಟಬಾರ ಸಾ.ಹಿಪ್ಪರಗಾ (ಎಸ್.ಎನ್) ತಾ.ಜೇವರ್ಗಿ ಜಿ.ಕಲಬುರಗಿ ರವರು ಗಂಡನು ಮೀನು ಹೀಡಿಯುವ ಕೆಲಸ ಮಾಡುತ್ತಾನೆ ನಾವು ಮೂರು ನಾಲ್ಕು ವರ್ಷಗಳಿಂದ ನನ್ನ ತವರು ಊರಾದ ಸನ್ನತ್ತಿ ಗ್ರಾಮದಲ್ಲಿ ಬಂದು ವಾಸವಾಗಿರುತ್ತೇನೆ ನನ್ನ ಗಂಡನು ಮೀನುಗಳನ್ನು ಸನ್ನತ್ತಿಯ ನದಿಯಲ್ಲಿ ಹೀಡಿದು ತಂದು ಮಾರಾಟ ಮಾಡಿಕೊಂಡು ಉಪಜೀವಿಸುತ್ತೇನೆ ನನ್ನ ಗಂಡನು ಆಗಾಗ ಮಧ್ಯಪಾನ ಮಾಡುವ ಚಟದವನು ಇರುತ್ತಾನೆ. ದಿನಾಂಕ 26/10/2019 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನನ್ನ ಗಂಡನು ಸ್ವಲ್ಪ ಮಧ್ಯಪಾನ ಮಾಡಿ ಮನೆಗೆ ಬಂದು ವಿನಾಕಾರಣ ನನ್ನೊಂದಿಗೆ ಜಗಳ ಮಾಡಿಕೊಂಡು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು ಬೆಳಗ್ಗೆ ದಿನಾಂಕ-27/10/2019 ರಂದು 05.00 ಗಂಟೆಗೆ ಸುಮಾರಿಗೆ ನನ್ನ ಗಂಡನು ತಂಬಿಗೆ ತೆಗೆದುಕೊಂಡು ಸಂಡಾಸ್ ಗೆ ಹೋಗಿ ಬರುತ್ತೇನೆ ಅಂತಾ ಹೊದವನು ಮರಳಿ ಮನೆಗೆ ಬರದೆ ಇರುವದರಿಂದ ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ನನ್ನ ಗಂಡನಿಗೆ ಹೂಡುಕಾಡುತ್ತಾ ಹೋದಾಗ ನಮ್ಮರ ಸಮೀಪದಲ್ಲಿ ಇರುವ ಸರಕಾರಿ ಗೈರಾಣಿ  ಜಾಗದಲ್ಲಿ ಇರುವ ಹುಣಸೇ ಮರಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದು ಕಂಡು ಹತ್ತಿರ ಹೋಗಿ ನೋಡಿ ಗುರುತಿಸಲಾಗಿ ಆತನು ನನ್ನ ಗಂಡ ಸುಭಾಷ ಇತನೆ ಇರುತ್ತಾನೆ ಅಂತಾ ಖಚಿತ ಪಡಿಸಿಕೊಂಡು ನನ್ನ ಊರ ಜನರು ಸಹ ಬಂದು ನೋಡಿದ್ದು ನನ್ನ ಗಂಡ ಜೀವಂತ ಇರಬಹುದು ಅಂತಾ ತಿಳದು ಹೂರಲು ಹಾಕಿಕೊಂಡಿದ್ದನ್ನು ತೆಗೆದು ನೆಲದ ಮೇಲೆ ಹಾಕಿ ಪರಶೀಲಿಸಿ ನೋಡಲಾಗಿ ನನ್ನ ಗಂಡನು ಮರಣ ಹೊಂದಿದ್ದನು ಈ ಘಟನೆ ಅಂದಾಜು ಬೆಳಗ್ಗೆ 05.00 ಗಂಟೆಗೆ ಆಗಿರುತ್ತದೆ.ನನ್ನ ಗಂಡನು ನಿನ್ನೆ ದಿವಸ ವಿನಾಕಾರಣ ನನ್ನೊಂದಿಗೆ ತಂಟೆ ತಕರಾರು ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಮೇಶ್ವರ ತಂದೆ ಶಂಕರೆಪ್ಪ ಮಾಲಿ ಪಾಟೀಲ ಸಾ: ಗುಡ್ಡೇವಾಡಿ ಹಾ: ಹಸರಗುಂಡಗಿ ಗ್ರಾಮ ನಿವಾಸಿತನಿದ್ದು ದಿನಾಂಕ:26/10/2019 ರಂದು ಬೆಳಿಗ್ಗೆ ಹರಗುಂಡಗಿ ಗ್ರಾಮದಿಂದ ಗುಡ್ಡೆವಾಡಿ ಗ್ರಾಮದ ನಮ್ಮ ಹೊಲಕ್ಕೆ ನಾನು ಮತ್ತು ನನ್ನ ಮಗನಾದ ಚೇತನ ಇಬ್ಬರು ಕೂಡಿಕೊಂಡು ಬಂದು ಸಾಯಂಕಾಲ 4-00 ಪಿ,ಎಮ್,ಸುಮಾರಿಗೆ ನಾನು ಮತ್ತು ನನ್ನ ಮಗ ಚೇತನ ಇಬ್ಬರು ಕೂಡಿಕೊಂಡು ನಮ್ಮ ಹೊಲ ಸರ್ವೆ ನಂಬರ 42 ನೆದ್ದರಲ್ಲಿ ಇದ್ದ ತೊಗರಿ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿದ್ದಾಗ  ಚೇತನ ಈತನು ನನ್ನಿಂದ ಅಂದಾಜು 10-15 ಪೀಟ ಅಂತರದಲ್ಲಿದ್ದನು ಆಗ ಚೇತನ ಈತನು ಒಮ್ಮೆಲೆ ಹಾವು ಕಡಿತು ಅಂತ ಚಿರಿದನು ಅವನ ಹತ್ತೀರ ಹೋಗಿ ನೋಡಲು ಅವನ ಬಲಗಾಲಿನ ಹಿಮ್ಮಡಿ ಮೇಲೆ ಸಣ್ಣ ಸಾಸಿವೆ ಕಾಳಿನಷ್ಟು ಚೂರಿದ ಗಾಯದಂತೆ ಆಗಿರುವದು ಕಂಡು ಬಂತು ನಂತರ ಹಾವು ನೋಡಲು ಸಿಗಲಿಲ್ಲ ಆಗ ನಾನು ನಮ್ಮ ಗ್ರಾಮದ ಬಸವರಾಜ ತಂದೆ ಭಾಗಪ್ಪ ಚಾಂದಕವಟೆ ಮತ್ತು ಈರಣ್ಣ ತಂದೆ ದತ್ತಪ್ಪ ಹಂದರಕಿ ರವರಿಗೆ ಪೋನ ಮಾಡಿ ನಮ್ಮ ಹೊಲಕ್ಕೆ ಕರೆಯಿಸಿಕೊಂಡು ನನ್ನ ಮಗನಿಗೆ ಆಸ್ಪತ್ರೇಗೆ ಕರದುಕೊಂಡು ಹೋಗಲು ಮನೆಗೆ ತಂದಿದ್ದು ನಂತರ ಕತ್ತಲಾಗಿದ್ದರಿಂದ ಬೆಳಿಗ್ಗೆ ಆಸ್ಪತ್ರೇ ಕರೆದುಕೊಂಡು ಹೋಗಬೇಕೆಂದು ರಾತ್ರಿ ಮನೆಯಲ್ಲಿ ಗೌಟಿ ಔಷದಿ ಕೊಟ್ಟಿದ್ದು ಇರುತ್ತದೆ ನಂತರ ದಿನಾಂಕ:27/10/2019 ರಂದು 1-00 ,ಎಮ್,ಕ್ಕೆ ನನ್ನ ಮಗನು ಮೃತ ಪಟ್ಟಿರುತ್ತಾನೆ.ಕಾರಣ ನನ್ನ ಮಗನು ನಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಚ್ಚಿದ್ದರಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: