ಅಪಘಾತ
ಪ್ರಕರಣ :
ಆಳಂದ ಠಾಣೆ : ದಿನಾಂಕ 19/10/2019 ರಂದು ಶ್ರೀ ಮಹಾಂತೇಶ ತಂದೆ ಶಂಕರ ಬನಶೆಟ್ಟಿ ಸಾ||ಝಳಕಿ[ಕೆ] ತಾ||ಆಳಂದ ಜಿಲ್ಲೆ|| ಕಲಬುರಗಿ ರವರ ಕಿರಿಯ ಮಗ ಶಂಕರ್ ಇತನಿಗೆ ಆರಾಮವಿಲ್ಲದ ಕಾರಣ ನಾನು ನನ್ನ ಹೆಂಡತಿ ಸುರೇಖಾ ಇಬ್ಬರೂ ಕೂಡಿ ನನ್ನ ಮೋಟಾರ್ ಸೈಕಲ್ ನಂ ಕೆಎ 32 ಇಸಿ 4309 ನೇದ್ದರ ಮೇಲೆ ಮಗನಿಗೆ ಕರೆದುಕೊಂಡು ಆಳಂದಕ್ಕೆ ಬಂದು ಮಕ್ಕಳ ಆಸ್ಪತ್ರೆಯಲ್ಲಿ ಮಗನಿಗೆ ಉಪಚಾರ ಮಾಡಿಕೊಂಡು ಮರಳಿ ಊರಿಗೆ ಹೋಗುವ ಸಲುವಾಗಿ ಅದೇ ಮೋಟಾರ್ ಸೈಕಲ್ ಮೇಲೆ ಕುಳಿತುಕೊಂಡು ಆಳಂದ ಹಳೆಯ ಚೆಕ್ ಪೋಸ್ಟ ಹತ್ತಿರ ಜಿಡಗಾ ಕಡೆಗೆ ನಾನು ಮೋಟಾರ್ ಸೈಕಲ್ ತಿರುವು ತೆಗೆದುಕೊಳ್ಳುವಾಗ ವಾಗ್ದರ್ಗಿ ರಿಬ್ಬನಪಲ್ಲಿ ರಸ್ತೆಯ ಜಿಡಗಾ ಕಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟಾರ್ ಸೈಕಲ್ ಮೇಲಿಂದ ಪುಟಿದು ಹೊರಗೆ ಬಿದ್ದಿದ್ದು ಹೆಂಡತಿ ಹಾಗೂ ಮಗ ಶಂಕರ ಇಬ್ಬರೂ ಲಾರಿ ಟೈರ್ ಕೆಳಗೆ ಸಿಕ್ಕಿಬಿದ್ದು ಲಾರಿ ಟೈರ್ ಅವರ ಮೇಲಿಂದ ಹಾದು ಹೋಗಿದ್ದು ಲಾರಿ ಚಾಲಕ ತನ್ನ ಲಾರಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದಾಗ ಅಲ್ಲೆ ಚೆಕ್ ಪೋಸ್ಟ ಹತ್ತಿರ ಇದ್ದ ನಮ್ಮ ಅಣ್ಣ-ತಮ್ಮಕೀಯ ಭೀಮಾಲಿಂಗ ಬನಶಟ್ಟಿ ಹಾಗೂ ಚೆಕ್ ಪೋಸ್ಟ ಹತ್ತಿರವಿದ್ದ ಇನ್ನ ಕೆಲವು ಜನರು ಕೂಡಿ ಹೆಂಡತಿ ಹಾಗೂ ಮಗನಿಗೆ ಲಾರಿ ಕೆಳಗಿನಿಂದ ತೆಗೆದು ನೋಡಲಾಗಿ ನನ್ನ ಹೆಂಡತಿಯ ತಲೆಗೆ ಭಾರಿ ರಕ್ತಗಾಯ, ಬಲಗೈ ರಟ್ಟೆಯಿಂದ ಹಸ್ತದವರೆಗೆ ಭಾರಿ ರಕ್ತಗಾಯವಾಗಿ ಎಲಬು ಮಾಂಸಖಂಡ ಹೊರಗೆ ಬಂದಿರುತ್ತದೆ, ಬಲಾಗಲು ಮೊಳಕಾಲಿನಿಂದ ಪಾದದವರೆಗೆ ಎಲಬು ಮಾಂಸಖಂಡ ಹೊರಗೆ ಬಂದಿರುತ್ತದೆ. ಎಡಗೈ ಮೊಳಕೈ ಕೆಳಗೆ ಎಡಕಾಲ ಪಾದದ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಂತೆ ಕಂಡುಬಂದಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗ ಶಂಕರನಿಗೆ ಸೊಂಟದಿಂದ ಕೆಳಗೆ ಭಾರಿ ರಕ್ತಗಾಯವಾಗಿ ಮಾಂಸ ಎಲುಬು ಹೊರಗೆ ಬಂದು ನರಳಾಡುತ್ತಿದ್ದು ನನಗೆ ಅಷ್ಟೆನು ಗಾಯವಾಗಿರುವುದಿಲ್ಲಾ. ಅಪಘಾತಪಡಿಸಿದ ಲಾರಿ ನಂ. ನೋಡಲಾಗಿ ಕೆಎ-22 ಸಿ-0726 ಅಂತಾ ಇದ್ದು ಅದರ ಚಾಲಕ ಅಲ್ಲಿಂದ ಓಡಿಹೋಗಿರುತ್ತಾನೆ ಆತನಿಗೆ ನೋಡಿದರೆ ಗುರ್ತಿಸುತ್ತೆನೆ, ನಂತರ ಭೀಮಾಲಿಂಗ ಇತನು 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನನ್ನ ಹೆಂಡತಿ ಸುರೇಖಾ ಹಾಗೂ ಮಗ ಶಂಕರ್ ಇಬ್ಬರಿಗೆ 108 ವಾಹನದಲ್ಲಿ ಹಾಕಿಕೊಂಡು ಆಳಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರ ಕುರಿತು ಅದೇ ವಾಹನದಲ್ಲಿ ಕಲಬುರಗಿಗೆ ತರುವಾಗ ಮಾರ್ಗ ಮಧ್ಯದಲ್ಲಿ ಸಾಯಂಕಾಲ್ 05-30 ಗಂಟೆಯ ಸುಮಾರಿಗೆ ನನ್ನ ಮಗ ಶಂಕರ್ ಇತನು ಮೃತಪಟ್ಟಿದ್ದು ಇರುತ್ತದೆ. ನನ್ನ ಹೆಂಡತಿಗೆ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ರಾತ್ರಿ 08-13 ಪಿ,ಎಮ್ ಕ್ಕೆ ನನ್ನ ಹೆಂಡತಿ ಸುರೇಖಾ ಇವಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment