ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಪ್ರಕಾಶ ತಂದೆ ಕಾಶಿನಾಥ ಮೋರೆ ಸಾ:ದಹಿವಡ ಗ್ರಾಮ, ತಾ:ದೇವಲಾ, ಜಿಲ್ಲಾ:ನಾಶಿಕ, ರಾಜ್ಯ ಮಹಾರಾಷ್ಟ್ರ ರವರು ದಿನಾಂಕ:02/09/2019 ರಂದು ನಾನು ಹಾಗೂ ನಮ್ಮೂರಿನ ಶ್ರೀ.ಸಂತೋಷ ವಾಗ, ಬಾಪು ತಂದೆ ನಥು ಐರೆ, ಅರುಣ ತಂದೆ ಭಗವಾನೆ ದೆವಡೆ, ಎಲ್ಲರೂ ಕೂಡಿಕೊಂಡು ಸಂತೋಷ ಇವರ ಖಾಸಗಿ ಕೆಲಸದ ನಿಮತ್ಯ ಮಹೇಂದ್ರ ಕ್ವಾಂಟೋ ಜೀಪ್ ನಂ ಎಂಹೆಚ್04-ಜಿಎಂ1059 ನೇದ್ದರಲ್ಲಿ ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ:03/09/2019 ರಿಂದ ದಿನಾಂಕ:05/09/2019 ವರೆಗೆ ನಾವೆಲ್ಲರೂ ಅಲ್ಲಿಯೇ ಇದ್ದು, ಸಂತೋಷ ಇವರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಅದೇ ಜೀಪನಲ್ಲಿ ಮರಳಿ ದಿನಾಂಕ:05/09/2019 ರಂದು ಸಾಯಂಕಾಲ 5-00 ಗಂಟೆಗೆ ಬೆಂಗಳೂರಿನಿಂದ ನಮ್ಮೂರಿಗೆ ಹೊರಟು ಕಲಬುರಗಿ ಮಾರ್ಗವಾಗಿ ಆಳಂದ ಕಡೆಗೆ ಹೊರಟಾಗ ವಾಹನವನ್ನು ಅರುಣ ಈತನು ಚಲಾಯಿಸುತ್ತಿದ್ದನು, ಆತನ ಪಕ್ಕದ ಸೀಟಿನಲ್ಲಿ ಬಾಪು ಈತನು ಕುಳಿತ್ತಿದ್ದು ಅವರ ಹಿಂದಿನ ಸೀಟಿನಲ್ಲಿ ನಾನು ಕುಳಿತ್ತಿದ್ದೇನು, ಲಾಡಚಿಂಚೋಳಿ ಕ್ರಾಸ್ ದಾಟಿ ಆಳಂದ ಕಡೆಗೆ ರಾಜ್ಯ ಹೆದ್ದಾರಿ ಸಂಖ್ಯೆ 10ರ ಮೇಲೆ ನಮ್ಮ ವಾಹನದ ಮುಂದೆ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಾ ಆಳಂದ ಕಡೆ ಹೊರಟಿದ್ದು ನಮ್ಮ ವಾಹನದ ಚಾಲಕನಾದ ಅರುಣನು ಕೂಡ ತನ್ನ ವಶದಲ್ಲಿದ್ದ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಲಾರಿಯ ಹಿಂಭಾಗದಲ್ಲಿ ಹೊರಟಾಗ ದಿನಾಂಕ:06/09/2019 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ಲಾಡಚಿಂಚೋಳಿ ತಾಂಡಾ ಕ್ರಾಸ್ ಇನ್ನು ಸ್ವಲ್ಪ ಮುಂದೆ ಇರುವಾಗ ರೋಡಿನ ಮೇಲೆ ಇರುವ ರೋಡ್ ಬ್ರೆಕ್ ಹತ್ತಿರ ಬಂದಾಗ ನಮ್ಮ ವಾಹನದ ಮುಂದೆ ಇದ್ದ ಲಾರಿಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಚಲಾಯಿಸಿ ಒಮ್ಮಿಂದ್ದೊಮ್ಮಲೆ ನಿಷ್ಕಾಳಜಿತನಿಂದ ಬ್ರೆಕ್ ಹಾಕಿದ್ದರಿಂದ ಲಾರಿಯ ಹಿಂದೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದ ಅರುಣನು ತನ್ನ ವಶದಲ್ಲಿದ್ದ ಮಹೇಂದ್ರ ಕ್ವಾಂಟೋ ಜೀಪ್ ನಂಬರ್ ಎಂ.ಹೆಚ್04-ಜಿಎಂ1059 ನೇದ್ದನ್ನು ಲಾರಿಯ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು. ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಆಳಂದ ಕಡೆಗೆ ಹೋದನು ಅಪಘಾತ ಕಾಲಕ್ಕೆ ಲಾರಿಯ ಹಿಂಭಾಗದ ಬಿಡಿಭಾಗ ಮತ್ತು ನಂಬರ್ ಪ್ಲೇಟ್ ಮುರಿದು ಬಿದ್ದಿರುತ್ತವೆ. ಅಪಘಾತದಲ್ಲಿ ನನಗೆ ಎಡಗೈ ಮದ್ಯ ಭಾಗದಲ್ಲಿ ಹಾಗೂ ಮುಷ್ಠಿಮೇಲೆ ತರಚಿದ ರಕ್ತಗಾಯವಾಗಿದ್ದು ಮುಂದೆ ಕುಳಿತಂತಹ ಅರುಣ ಮತ್ತು ಬಾಪು ಇಬ್ಬರು ವಾಹನದ ಮುಂಭಾಗ ನುಜ್ಜುಗುಜ್ಜಾಗಿದ್ದರಿಂದ ಜೀಪಿನೋಳಗೆ ಸಿಕ್ಕಿಕೊಂಡಿದ್ದರು. ನಾನು ಜೀಪನಿಂದ ಹೊರಗೆ ಬಂದು ಹೋಗಿಬರುವ ವಾಹನಗಳಿಗೆ ಕೈಮಾಡಿ ನಿಲ್ಲಿಸಿದಾಗ ಒಂದೆರಡು ವಾಹನಗಳ ಚಾಲಕರು ತಮ್ಮ ವಾಹನ ನಿಲ್ಲಿಸಿ ಕೆಳಗಿಳಿದು ಬಂದಿದ್ದು, ನಾವೆಲ್ಲರೂ ಸೇರಿ ಜೀಪಿನಲ್ಲಿ ಸಿಕ್ಕಿಹಾಕೊಂಡಿದ್ದ ಅರುಣ ಮತ್ತು ಬಾಪು ಇಬ್ಬರಿಗೆ ಜೀಪಿನಿಂದ ಹೊರಗೆ ತಗೆದು ನೋಡಿದಾಗ ಅರುಣನಿಗೆ ತಲೆಯ ಎಡಭಾಗಕ್ಕೆ ಗಂಭೀರ ರಕ್ತಗಾಯ ಹಾಗೂ ಎಡಗೈ ಮುಷ್ಠಿಮೇಲೆ ತರಚಿದ ರಕ್ತಗಾಯ, ಬಾಪು ಈತನಿಗೆ ಎಡಗಣ್ಣಿನ ಮೇಲ್ಭಾಗ, ಹಣೆಗೆ ಗಂಭೀರ ರಕ್ತಗಾಯ, ಎಡಕಣ್ಣಿನ ಪಕ್ಕ ಭಾರಿ ರಕ್ತಗಾಯ, ತಲೆಯ ಹಿಂಭಾಗಕ್ಕೆ ಭಾರಿ ಗುಪ್ತಗಾಯ ಕುತ್ತಿಗೆ ಭಾಗದಲ್ಲಿ ಸಾದಾ ತರಚಿದ ಗಾಯಗಳಾಗಿದ್ದು, ಇಬ್ಬರು ಭೇಹೊಷ ಸ್ಥಿತಿಯಲ್ಲಿದ್ದರು ನಾನು ನನ್ನ ಮೊಬೈಲದಿಂದ ಪಟ್ಣಣ ಟೋಲ್ನಾಕಾ ಅಂಬ್ಯೂಲೆನ್ಸ್ ವಾಹನಕ್ಕೆ ಕರೆಮಾಡಿ ತಿಳಿಸಿರುತ್ತೇನೆ, ಅಂಬ್ಯೂಲೆನ್ಸ್ ಬರುವತನಕ ನಾವೆಲ್ಲರೂ ಸೇರಿ ರೋಡಿನ ಮೇಲೆ ಬಿದ್ದಿದ್ದ ಲಾರಿ ಹಿಂಭಾಗದ ಲಾರಿಯ ಬಿಡಿಭಾಗ, ನಂಬರ್ ಪ್ಲೇಟ್, ಪರಿಶೀಲಿಸಿ ನೋಡಿದಾಗ ಲಾರಿ ನಂಬರ್ ಎಂ.ಹೆಚ್25ಬಿ9630 ಅಂತಾ ಇರುತ್ತದೆ. ಸ್ವಲ್ಪ ಹೊತ್ತಿನಲ್ಲಿ ಅಂಬ್ಯೂಲೆನ್ಸ್ ಸಿಬ್ಬಂದಿಯವರು ಸ್ಥಳಕ್ಕೆ ಬಂದಿದ್ದು. ನಾನು ಸದರಿ ಅಂಬ್ಯೂಲೆನ್ಸ್ ವಾಹನದಲ್ಲಿ ಅರುಣ ಮತ್ತು ಬಾಪು ಇವರಿಗೆ ಹಾಕಿಕೊಂಡು ಉಪಚಾರಕ್ಕಾಗಿ ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ತರುವಾಗ ಬೆಳಿಗ್ಗೆ 06-30ರ ಸುಮಾರಿಗೆ ಕಲಬುರಗಿ ನಗರ ಹತ್ತಿರ ಮಾರ್ಗ ಮದ್ಯದಲ್ಲಿ ಬಾಪು ಈತನು ಮೃತ ಪಟ್ಟಿರುತ್ತಾನೆ. ನಾನು ಮತ್ತು ಅರುಣ ಇಬ್ಬರು ಉಪಚಾರಕ್ಕಾಗಿ ಯುನೈಟೇಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೇವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ರಾಜು ಬಿರಾದಾರ, ಮುಕ್ಕಾಂ-ಹಸರಗುಂಡಗಿ, ತಾ|| ಅಫಜಲಪೂರ ರವರು ಮತ್ತು ಗಂಡ ವ್ಯವಸಾಯ ಮಾಡಿಕೊಂಡು ಉಪಜೀವಿಸುತ್ತಿದ್ದೇವೆ. ಹೀಗಿದ್ದು ನನ್ನ ಗಂಡನ ಹೆಸರಿಗೆ ಹಸರಗುಂಡಗಿ ಗ್ರಾಮ ಸೀಮಾತಂರದಲ್ಲಿ ಹೊಲ ಸರ್ವೇ ನಂ-8/1 ರಲ್ಲಿ 04 ಎಕರೆ ಜಮೀನಿದ್ದು, ಆ ಜಮೀನಿಗೆ ನೀರಾವರಿ ಸಲುವಾಗಿ ಮತ್ತು ಕೃಷಿಗಾಗಿ ನನ್ನ ಗಂಡ ಎಸ್.ಬಿ.ಐ ಸಾಗನೂರ ಶಾಖೆಯಲ್ಲಿ 7,00,000 (ಏಳು ಲಕ್ಷ) ರೂ ಸಾಲ ಮಾಡಿದ್ದು, ಹೊಲದಲ್ಲಿ ಬೆಳೆ ಬೆಳೆದು ಸಾಲ ತೀರಿಸುವದಾಗಿ ಅಂದು ಕೊಂಡಿದ್ದು ಇರುತ್ತದೆ. ಹೀಗಿದ್ದು ಹೋದ ವರ್ಷ ಮಳೆ ಸರಿಯಾಗಿ ಬಾರದ ಕಾರಣ ನಮ್ಮ ಹೊಲದಲ್ಲಿ ಯಾವುದೇ ಬೇಳೆ ಬೆಳೆದಿರುವದಿಲ್ಲ. ಈ ವರ್ಷವೂ ಸಹ ನಾವು ಅಲ್ಲಲ್ಲಿ ನನ್ನ ಗಂಡ ಕೈಗಡ ರೂಪದಲ್ಲಿ ಹಣ ತೆಗೆದುಕೊಂಡು ಬೀಜ ಗೊಬ್ಬರ ಬಿತ್ತನೆ ಮಾಡಿದ್ದು, ಮಳೆ ಸರಿಯಾಗಿ ಬಾರದಕ್ಕೆ ಬೆಳೆ ಸರಿಯಾಗಿ ನಾಟಿಗೆಯಾಗಿಲ್ಲದದ್ದರಿಂದ ನನ್ನ ಗಂಡ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಎದೆ ಗುಂದಿ ನಾನು ಸಾಲ ಹೇಗೆ ಮುಟ್ಟಿಸಲಿ..? ನಾನು ಸತ್ತರೆ ಸರಿಯಾಗಿ ಆಗುತ್ತದೆ ಅಂತಾ ನನ್ನ ಮುಂದೆ ನೊಂದು ಹೇಳಿದ್ದರಿಂದ ನಾವು ಅವರಿಗೆ ದೈರ್ಯ ಹೇಳಿರುತ್ತೇವೆ. ಹೀಗಿದ್ದು ಇಂದು ದಿನಾಂಕ 06-09-2019 ರಂದು ಬೆಳಗ್ಗೆ 06-00 ಗಂಟೆಗೆ ನನ್ನ ಗಂಡ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ನಮಗೆ ಹೇಳಿ ಹೋಗಿದ್ದು ಇರುತ್ತದೆ. ನಂತರ 07-00 ಗಂಟೆ ಸುಮಾರಿಗೆ ನನ್ನ ಭಾವನಾದ ಸಿದ್ದರಾಮ ಇವರು ವಾಪಸ್ ಮನೆಗೆ ಬಂದು ರಾಜು ಈತನು ನಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ತೀರಿಕೊಂಡಿರುತ್ತಾನೆ ಅಂತಾ ತಿಳಿಸಿದ್ದರಿಂದ ಹೊಲಕ್ಕೆ ಹೋಗಿ ನೋಡಲಾಗಿ,
ನನ್ನ ಗಂಡ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ತಿರಿಕೊಂಡಿದ್ದು ನಿಜವಿರುತ್ತದೆ. ಕಾರಣ ನನ್ನ ಗಂಡ ಕೃಷಿಗಾಗಿ ಎಸ್.ಬಿ.ಐ ಬ್ಯಾಂಕ್ ಸಾಗನೂರದಲ್ಲಿ ಹಾಗೂ ವಿಎಸ್.ಎಸ್.ಎನ್ ಹಸರಗುಂಡಗಿಯಲ್ಲಿ ಸಾಲ ತೆಗೆದು ಮಳೆ ಸರಿಯಾಗಿ ಆಗದ್ದಕ್ಕೆ ಬೆಳೆ ಬೆಳೆಯದ ಕಾರಣ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 06-09-2019 ರಂದು ಬೆಳಗ್ಗೆ 06-30 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿನ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ತೀರಿಕೊಂಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಕುಮಾರಿ ಸುಭದ್ರಮ್ಮ ತಂದೆ ಭೀಮಣ್ಣಾ ಬಡಿಗೇರ ಮು:ಹುಳಂಡಗೇರಾ ರವರು ಹುಟ್ಟಿದಾಗಿನಿಂದ ಬಲಗೈ ಅಂಗವಿಕಲವಾಗಿರುತ್ತದೆ. ನಾನು ಬಿ.ಎ ವರೆಗೆ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಈಗ ಸುಮಾರು 2-3 ವರ್ಷಗಳಿಂದ ಧರ್ಮಸ್ಥಳದ ಗ್ರಾಮ ಅಭಿವೃದ್ದಿ ಯೋಜನೆ ಎಂಬ ಸಂಸ್ಥೆಯಲ್ಲಿ ಸೇವಾ ಪ್ರತಿನಿಧಿ ಅಂತಾ ನೌಕರಿ ಮಾಡಿಕೊಂಡಿದ್ದು ತಿಂಗಳಿಗೆ 03 ಸಾವಿರ ರೂಪಾಯಿ ಸಂಬಳ ಕೊಡುತ್ತಾರೆ. ನನಗೆ ಇನ್ನೂ ಮದುವೆಯಾಗಿರುವದಿಲ್ಲ. ನಾನು ನನಗೆ ಬಂದ ಸಂಬಳವನ್ನು ಮನೆಗೆ ಖರ್ಚಿಗೆ ಕೊಡುತ್ತೆನೆ. ಅಲ್ಲದೇ ಸದರಿ ಸಂಘದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದು ನಮ್ಮ ತಂದೆಗೆ ಕೊಟ್ಟಿರುತ್ತೆನೆ. ಆ ಹಣವನ್ನು ಮರಳಿ ನಮ್ಮ ತಂದೆ ಕೊಟ್ಟಿರುವದಿಲ್ಲ. ಈ ವಿಷಯದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ತಕರಾರು ಮಾಡಿ ನನಗೆ ಬೈದು ಮನೆಯ ಹೊರಗಡೆ ಹಾಕಿದ್ದರಿಂದ ಸುಮಾರು 03 ತಿಂಗಳಿನಿಂದ ಬೇರೆ ಮನೆ ಮಾಡಿಕೊಂಡು ಒಬ್ಬಳೆ ವಾಸವಾಗಿರುತ್ತೆನೆ. ಅಂದಿನಿಂದ ನಮ್ಮ ತಂದೆ ತಾಯಿಯವರು ನನ್ನೊಂದಿಗೆ ಜಗಳ ಮಾಡುತ್ತ ಬಂದಿರುತ್ತಾರೆ. ಅಲ್ಲದೇ 04 ತಿಂಗಳ ಹಿಂದೆ ನಮ್ಮ ಅಕ್ಕ ಅಯ್ಯಮ್ಮಳು ನಮ್ಮೂರಿಗೆ ಬಂದಿದ್ದರಿಂದ ಅವಳಿಗೆ ಹೊಸ ಬಟ್ಟೆಯನ್ನು ನಮ್ಮ ತಾಯಿ ಹಾಗೂ ನಾನು ಕೂಡಿಕೊಂಡು ಸನ್ನತಿ ಗ್ರಾಮದ ಬಟ್ಟೆ ಅಂಗಡಿಯಿಂದ 800 ರೂಪಾಯಿಗೆ ಖರೀದಿ ಮಾಡಿಕೊಂಡು ಬಂದಿದ್ದು ಆ ಹಣವನ್ನು ನಮ್ಮ ತಾಯಿ ಕೊಡುತ್ತೆನೆ ಅಂತಾ ಹೇಳಿ ತಂದಿರುತ್ತಾಳೆ. ಹೀಗಿರುವಾಗ ನಿನ್ನೆ ದಿನಾಂಕ 05/09/2019 ರಂದು ಬೆಳಗ್ಗೆ 07-00 ಗಂಟೆ ಸುಮಾರು ಸನ್ನತಿ ಗ್ರಾಮದ ಬಟ್ಟೆ ಅಂಗಡಿಯ ಲಕ್ಷ್ಮೀ ಎನ್ನುವಳು ನನ್ನ ಮನೆಗೆ ಬಂದು ನಿಮ್ಮ ತಾಯಿ ಖರೀದಿ ಮಾಡಿದ ಬಟ್ಟೆಗಳ ಹಣವನ್ನು ಇನ್ನು ಕೊಟ್ಟಿರುವದಿಲ್ಲ ಅಂತಾ ನನ್ನ ಸಂಗಡ ತಕರಾರು ಮಾಡುತ್ತಿದ್ದಾಗ ನಮ್ಮ ತಾಯಿ ಹಣ ಕೊಡುತ್ತಾಳೆ ನಡಿ ಅಂತಾ ಅವಳನ್ನು ಕರೆದುಕೊಂಡು ನಮ್ಮ ತಾಯಿ ಮನೆಯ ಹತ್ತಿರ ಹೋಗಿ ನಮ್ಮ ತಾಯಿಗೆ ಕರೆದು ಲಕ್ಷ್ಮೀ ಇವರಿಗೆ ಹಣ ಕೊಡಲು ಹೇಳಿದಾಗ ‘’ ಏ ರಂಡಿ ಬೋಸಡಿ ಹಣ ನಿನ್ನ ಕೈಯಲ್ಲಿ ಕೊಟ್ಟಿದ್ದೆನೆ ನೀನು ಅವಳಿಗೆ ಏಕೆ ಹಣ ಕೊಟ್ಟಿರುವದಿಲ್ಲ ಅಂತಾ’ನನ್ನೊಂದಿಗೆ ಜಗಳಕ್ಕೆ ಬಿದ್ದು ಮನೆಯಲ್ಲಿದ್ದ ನಮ್ಮ ತಂಗಿಯರಾದ ಸುರ್ವಣ ಗಂಡ ತಿಮಪ್ಪ, ಶೋಭಾ ತಂದೆ ಭೀಮಣ್ಣಾ ಮತ್ತು ನಮ್ಮ ತಂದೆ ಭೀಮಣ್ಣಾ ರವರು ಕೂಡಿಕೊಂಡು ಬಂದು ನನ್ನೊಂದಿಗೆ ಜಗಳ ತೆಗೆದು ‘’ರಂಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ಬೈದು ಶೋಭಾ ಇವಳು ಅಲ್ಲೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಕಾಲುಗಳಿಗೆ ಮತ್ತು ತಲೆಯ ಹಿಂದೆ ಹೊಡೆದು ಗುಪ್ತಗಾಯಪಡಿಸಿದಳು.ನಮ್ಮ ತಾಯಿ ಅಕ್ಕ ನಾಗಮ್ಮ ಇವಳು ಕೈ ಮುಷ್ಠಿ ಮಾಡಿ ಮುಖಕ್ಕೆ ಹಾಗೂ ಬಾಯಿ ಮೇಲೆ ಹೊಡೆದು ಗುಪ್ತಗಾಯಪಡಿಸಿರುತ್ತಾಳೆ. ನಮ್ಮ ತಂದೆ ಹೊಡೆಯರಿ ಬೋಸಡಿಗೆ ನಮಗೆ ವಿನಾಕಾರಣ ತ್ರಾಸ ಕೊಡುತ್ತಿದ್ದಾಳೆ ಅಂತಾ ಬೈದು ಈ ಊರಲ್ಲಿ ಕಾಣಿಸಿದರೆ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
No comments:
Post a Comment