ಕೊಲೆ
ಪ್ರಕರಣ :
ನೆಲೋಗಿ ಠಾಣೆ : ಶ್ರೀ
ಮಲ್ಲಿಕಾರ್ಜುನ ತಂದೆ ಬಸವಂತ್ರಾಯ
ಜಗಶೆಟ್ಟಿ ಸಾ:ನೆಲೋಗಿ
ತಾ:ಜೇವರಗಿ ಜಿ:ಕಲಬುರಗಿ
ರವರ
ಅಣ್ಣನಾದ ಸಿದ್ದಾರಾಮನು ಕೂಡಾ ಒಕ್ಕಲುತನ ಕೆಲಸ ಮಾಡುತ್ತಿದ್ದು, ಅವನು ನಿನ್ನೆ ದಿನಾಂಕ:
11/09/2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ಸೊನ್ನ ರೋಡಿನ ಕಡೆಗೆ ಇರುವ ನಮ್ಮ ಮಡ್ಡಿ
ಹೊಲಕ್ಕೆ ಹೋಗುವದಾಗಿ ಹೇಳಿ ನಮ್ಮ ಮೋಟಾರ ಸೈಕಲ ತಗೆದುಕೊಂಡು ಹೋಗಿದ್ದನು. ನಂತರ ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ನನ್ನ
ಮೊಬೈಲ ಸಿಮ್ ನಂ.9901787815 ನೇದ್ದರಿಂದ ನನ್ನ ಅಣ್ಣನ ಮೊಬೈಲ ಸಿಮ್ ನಂ.9901925033
ನೇದ್ದಕ್ಕೆ ಪೋನ ಮಾಡಲು ಅವನು ಪೋನ ಎತ್ತಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಅಣ್ಣನು ವಾಪಸ್
ನನ್ನ ಮೊಬೈಲಗೆ ಪೋನಮಾಡಿ ನಾನು ಊಟಮಾಡಲು ಮನೆಗೆ ಬರುವದಿಲ್ಲ. ಹೊಲದಲ್ಲಿಯೇ ಮಲಗಿಕೊಳ್ಳುತ್ತೇನೆ.
ನೀವು ಊಟಮಾಡಿ ಮಲಗಿರಿ ಅಂತಾ ಅಂದಿದ್ದನು. ದಿನಂಪ್ರತಿ ಬೆಳಿಗ್ಗೆ 07-08 ಗಂಟೆಯ ತನಕ ಮನೆಗೆ ಬರುತ್ತಿದ್ದ
ನನ್ನ ಅಣ್ಣನು ಬೆಳಿಗ್ಗೆ 08-45 ಗಂಟಯಾದರೂ ಮನೆಗೆ ಬರದ ಕಾರಣ ಇಂದು ದಿನಾಂಕ: 12/09/2019 ರಂದು
ಮುಂಜಾನೆ 08.45 ಗಂಟೆಯ ಸುಮಾರಿಗೆ ನಾವು ಅವನ ಮೊಬೈಲಗೆ ಪೋನ ಮಾಡಲು ಮೊಬೈಲ ಸ್ವಿಚ್ಚ-ಆಪ ಇತ್ತು.
ಅನುಮಾನಗೊಂಡು ನಾನು ಮತ್ತು ನಮ್ಮೂರಿನ ರಾಜಶೇಖರ ಕೀರಣಗಿ, ವಿದ್ಯಾದರ ಚೌಡಾಪೂರ ಕೂಡಿಕೊಂಡು ನಮ್ಮ
ಹೊಲಕ್ಕೆ ಹೋಗಿ ನೋಡಲು ಹೊಲದಲ್ಲಿನ ಮನೆಯ ಹತ್ತೀರ ಮೋಟಾರ ಸೈಕಲ ಇತ್ತು. ನಮ್ಮ ಅಣ್ಣ
ಕಾಣಿಸಲಿಲ್ಲ. ನಂತರ ನಮ್ಮ ಹೊಲಕ್ಕೆ ಊರಿನಿಂದ ಜನರು ಬಂದಾಗ ನಾವೆಲ್ಲರೂ ಕೂಡಿ ನಮ್ಮ ತೊಗರಿ
ಹೊಲದಲ್ಲಿ ಮತ್ತು ಕಬ್ಬಿನ ಹೊಲದಲ್ಲಿ ಹುಡುಕಾಡಲಾಗಿ ನಮ್ಮ ತೊಗರಿ ಹೊಲದಲ್ಲಿ ನಮ್ಮ ಅಣ್ಣನು
ಸತ್ತು ಬಿದ್ದಿದ್ದನು. ಅವನ ಹತ್ತೀರ ಅವನ ಚಪ್ಪಲಿಗಳು ಇದ್ದವು. ಆದರೇ ಅವನ 2 ಮೊಬೈಲಗಳು ಹಾಗೂ
ಆತನ ಕೈಯಲ್ಲಿದ್ದ ಒಂದು ಸುತ್ತುಂಗುರ ಹಾಗೂ ಇನ್ನೊಂದು ಹರಳಿನ ಉಂಗುರ ಇರಲಿಲ್ಲ. ಅವನ ತಲೆಯ
ಹಿಂಬಾಗ ಕುತ್ತಿಗೆಯ ಹತ್ತೀರ ಮತ್ತು ಗಲ್ಲದ ಹತ್ತೀರ ಸಣ್ಣ-ಪುಟ್ಟ ಗಾಯಗಳು ಕಾಣುತ್ತಿದ್ದವು. ನಮ್ಮ
ಅಳಿಯನಾದ ಬಸವರಾಜ ತೊನಸಳ್ಳಿ ಸಾ:ಬೂಟನಾಳ ಇತನು ಊರಲ್ಲಿ ಅಲ್ಲಿ-ಇಲ್ಲಿ ಕೈಸಾಲ ಮಾಡಿದ್ದು, ತಾನು
ಮಾಡಿದ ಸಾಲದ ಹಣ ಕೊಡುವಂತೆ ಅವನು ನಮ್ಮ ಅಣ್ಣನ ಸಂಗಡ ಆಗಾಗ ಜಗಳ ಮಾಡುತ್ತಿದ್ದನು ಅದಕ್ಕೆ ನಮ್ಮ
ಅಣ್ಣನು ಅವನಿಗೆ 2 ಲಕ್ಷ ರೂಗಳು ಕೊಟ್ಟಿದ್ದು, ಅವನು ಇನ್ನೂ 3ಲಕ್ಷ ರೂಪಾಯಿ ಕೊಡುವಂತೆ
ಕಿರಿ-ಕಿರಿ ಮಾಡುತಿದ್ದು, ಇದೇ ಕಾರಣಕ್ಕಾಗಿ ನಮ್ಮ ಅಳಿಯ ಬಸವರಾಜನೇ ಅಥವಾ ಅವನ ಸಂಗಡಿಗರು
ಅಲ್ಲದೇ ಇನ್ಯಾರೋ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ನನ್ನ ಅಣ್ಣ ಸಿದ್ದಾರಾಮನಿಗೆ ಹೊಡೆಬಡೆ
ಮಾಡಿ, ಕುತ್ತಿಗೆ ಒತ್ತಿ ಅಥವಾ ಉಸಿರು ಗಟ್ಟಿಸಿ ಅಥವಾ ತಲೆಯ ಒಳಭಾಗಕ್ಕೆ ಬಲವಾದ ಪೆಟ್ಟುಗೊಳಿಸಿ ಕೊಲೆಮಾಡಿ
ಸಾಕ್ಷಿ ನಾಶಮಾಡುವ ಉದ್ದೇಶದಿಂದ ಹೆಣವನ್ನು ನಮ್ಮ ತೊಗರಿ ಹೊಲದಲ್ಲಿ ಹಾಕಿ ಹೋಗಿರುತ್ತಾರೆ. ಈ
ಕೊಲೆ ದಿನಾಂಕ: 11/09/2019 ರಂದು ರಾತ್ರಿ 8-45 ಗಂಟೆಯಿಂದ ದಿನಾಂಕ: 12/09/2019 ರಂದು
ಮುಂಜಾನೆ 08-45 ಗಂಟೆಯ ಮಧ್ಯದ ಅವದಿಯಲ್ಲಿ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ
: ಶ್ರೀ ಶರಣಮ್ಮ ಗಂಡ ತಿಪ್ಪಣಗೌಡ ಪೊಲೀಸ ಪಾಟೀಲ ಸಾ|| ಬಾಪುಗೌಡನಗರ ಶಹಾಪೂರ ರವರ ಮಗಳಾದ, ಚೈತ್ರ ಇವಳಿಗೆ ಸುಮಾರು
10 ವರ್ಷಗಳ ಹಿಂದೆ ಹುಣಚ್ಯಾಳ ಗ್ರಾಮದ ಶಾಂತಪ್ಪ ತಂದೆ ಕಲ್ಲಪ್ಪ
ಹಿಪ್ಪರಗಿ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆವೆ ಸದ್ಯ ನನ್ನ ಮಗಳು ಚೈತ್ರಾ ಮತ್ತು ಅಳಯ
ಶಾಂತಪ್ಪ ಇವರು ಶಹಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾರೆ, ದಿನಾಂಕ:11-09-2019 ರಂದು
10-00 ಎ.ಎಮ್.ಕ್ಕೆ ನಮ್ಮ ಅಳಿಯ ಮತ್ತು ಮಗಳು ಚೈತ್ರಾ ಇವಳು ನನಗೆ ಪೋನ ಮಾಡಿ ಕೆಲಸದ ನಿಮಿತ್ಯ ನಾವು ನಮ್ಮ
ಮೋಟರ ಸೈಕಲ್ ಮೇಲೆ ಹುಣಚ್ಯಾಳ ಗ್ರಾಮಕ್ಕೆ ಹೋಗುತ್ತಿದ್ದೆವೆ ಅಂತ ಹೇಳಿ ಶಹಾಪುರದಿಂದ ಹೋಗುತ್ತಾರೆ, ನಂತರ 11-30 ಎ.ಎಮ್.ಕ್ಕೆ ನಮ್ಮ ಅಳಿಯನ ಅಣ್ಣ ನಿಂಗಣ್ಣ ತಂದೆ ಕಲ್ಲಪ್ಪ ಹಿಪ್ಪರಗಿ ಇವರು ನನಗೆ ಪೋನ ಮಾಡಿ ಹೇಳಿದ್ದೇನೆಂದರೆ
ಇದಿಗ ಮಳ್ಳಿ ಗ್ರಾಮದ ಯಾರೋ ನನಗೆ ನಮ್ಮ ತಮ್ಮ ಶಾಂತಪ್ಪನ ಪೋನಿನಿಂದ ಕರೆ ಮಾಡಿ ಮಳ್ಳಿ ಗ್ರಾಮದ
ಹತ್ತಿರ ಶಿವಶರಣಪ್ಪ ಸಾಸಬಾಳ ಇವರ ಹೊಲದ ಹತ್ತಿರ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದಿರುತ್ತಾರೆ, ಮೋಟರ ಸೈಕಲ್ ಹಿಂದೆ ಒಬ್ಬ ಹೆಣ್ಣು ಮಗಳು ಕುಳಿತ್ತಿದ್ದು. ಅವರಿಗೆ ಭಾರಿ ಗಾಯವಾಗಿರುತ್ತದೆ. ಅಂತ ಹೇಳಿದು ಕೂಡಲೇ ನಾನು
ಮತ್ತು ನನ್ನ ತಮ್ಮನಾದ ಶಿವಾನಂದ ಮತ್ತು ಅಳಿಯ ಪ್ರವೀಣ ಮುರಗೇಪ್ಪ ತೆಲಕೂರ ರವರು ಕೂಡಿ ಸ್ಥಳಕ್ಕೆ
ಹೋಗಿ ನೋಡಿದಾಗ ನಮ್ಮ ತಮ್ಮ ಮತ್ತು ಅವನ ಹೆಂಡತಿ ಚೈತ್ರಾ ಇವರು ರೋಡಿನ ಕೆಳಗಡೆ ಬಿದ್ದಿದರು. ಚೈತ್ರಾಳನ್ನು ನೋಡಲಾಗಿ ಅವಳ ತಲೆಯ ಹಿಂದೆ ಭಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತ
ಸೋರುತ್ತಿತ್ತು.
ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲಾ, ನಮ್ಮ ತಮ್ಮ ಶಾಂತಪ್ಪ ಇವನಿಗೆ ನೋಡಲಾಗಿ ಎಡತಲೆಗೆ ರಕ್ತಗಾಯವಾಗಿ ಎಡಭುಜಕ್ಕೆ ಭಾರಿ
ಒಳಪೆಟ್ಟಾಗಿದ್ದು ಕೈಕಾಲಿಗೆ ತರಚಿದ ಗಾಯವಾಗಿರುತ್ತದೆ. ಸದ್ಯ ಅವರನ್ನು ಉಪಚಾರ
ಕುರಿತು
108 ವಾಹನದಲ್ಲಿ ಸಿಂದಗಿಯ ಮನಗೂಳಿಯ ಆಸ್ಪತ್ರೆಗೆ ತೋರಿಸಿ ಅಲ್ಲಿಯಿಂದ
ಹೆಚ್ಚಿನ ಉಪಚಾರ ಕುರಿತು ಬಿ.ಎಲ್.ಡಿ.ಇ.ಆಸ್ಪತ್ರೆಗೆ ಹೋಗುತ್ತಿದ್ದೆವೆ ಬೇಗ ಬನ್ನಿ ಅಂತ ಹೇಳಿದರು ನಂತರ ನಾನು ಮತ್ತು ನಮ್ಮ ತಮ್ಮ
ಶರಣಪ್ಪ ಬಾವಿಕಟ್ಟಿ ರವರು ಕೂಡಿ ಬಿ.ಎಲ್.ಡಿ.ಇ.ಆಸ್ಪತ್ರೆಗೆ ಬಂದು ನನ್ನ ಮಗಳು ಮತ್ತು ಅಳಯನಿಗೆ ನೋಡಿದ್ದು ಇರುತ್ತದೆ ಆಗ ನನ್ನ ಮಗಳು
ಮತ್ತು ಅಳಿಯ ಪ್ರಜ್ಞಾಹೀನರಾಗಿದ್ದರು. ಇಂದು ದಿನಾಂಕ: 12-09-2019 ರಂದು ಬೆಳಗಿನ ಜಾವ
3-10 ಸುಮಾರಿಗೆ ನನ್ನ ಮಗಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ
ಫಲಿಸದೇ ಮೃತ ಪಟ್ಟಿರುತ್ತಾಳೆ, ದಿನಾಂಕ:
11-09-2019 ರಂದು 11-00 ಎ.ಎಮ್.ಕ್ಕೆ ನನ್ನ ಮಗಳು ಮತ್ತು ಅಳಿಯ ತಮ್ಮ ಮೋಟರ ಸೈಕಲ್ ನಂಬರ ಕೆ.ಎ.28/ಇ.ಎಲ್.-6416
ನೇದ್ದರ ಮೇಲೆ ಶಹಾಪುರದಿಂದ ಹುಣಶ್ಯಾಳ ಗ್ರಾಮಕ್ಕೆ ಹೋಗುತ್ತಿದ್ದಾಗ
ಮಳ್ಳೀ ಗ್ರಾಮದ ನಮ್ಮ ಅಳಿಯ ಮೋಟರ ಸೈಕಲನ್ನು ಅತೀವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ
ಕಟ್ ಮಾಡಲು ಹೋಗಿ ಮೋಟರ ಸೈಕಲ್ ಕೆಡವಿರುತ್ತಾನೆ. ಈ ಅಪಘಾತದಲ್ಲಿ ನನ್ನ ಮಗಳು
ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಗೋಪಾಲ ತಂದೆ ಶಿವರಾಮ ರಾಠೋಡ
ಸಾ:ಹರ್ಜಿ ನಾಯಕ ತಾಂಡಾ ಸ್ವಂತ ರವರ ಮಗ ಅವಿನಾಶ ಇತನು ಬೇಲೂರ ತಾಂಡಾದಲ್ಲಿ ಕೆಲಸ ಇರುತ್ತದೆ
ಹೋಗಿಬರುತ್ತೇನೆ ಎಂದು ಹೇಳಿ ಮೋಟಾರ ಸೈಕಲ್ ನ್ನು ತೆಗೆದುಕೊಂಡು ತನ್ನ ಜೊತೆಯಲ್ಲಿ ನಮ್ಮ ತಾಂಡಾದ
ಆತನ ಗೆಳೆಯನಾದ ಹೀರಾಮಣ ತಂದೆ ಭೀಮಸಿಂಗ್ ರಾಠೋಡ ಇತನೊಂದಿಗೆ ಮೋಟಾರ ಸೈಕಲ ಮೇಲೆ ಹೋದರು ಮುಂದೆ
ರಾತ್ರಿಯಾದರೂ ಆತನು ಮನೆಗೆ ಬರಲಿಲ್ಲ ಆತನ ದಾರಿ ಕಾಯುತ್ತಾ ಇದ್ದೇವು. ಹೀರಾಮಣ ಬಂದಿರುತ್ತಾನೆ
ಹೇಗೆ ಎಂದು ನೋಡಲಾಗಿ ಆತನು ಕೂಡ ರಾತ್ರಿ ಮನೆಗೆ ಬಂದಿರುವದಿಲ್ಲ ಅಂತಾ ಗೋತ್ತಾಯಿತ್ತು. ದಿನಾಂಕ:
12/09/2019 ರಂದು ಬೆಳಿಗ್ಗೆ ಮರಗುತ್ತಿ ಕ್ರಾಸಿನ ಹತ್ತಿರ ಇರುವ ಆನಂದ
ಶಾಲೆಯಲ್ಲಿ ಓದುತ್ತಿರುವ ನಮ್ಮ ತಾಂಡಾದ ಪ್ರವೀಣ ತಂದೆ ಸೀತಾರಾಮ ರಾಠೋಡ ಇತನು ನನ್ನ ಮಗ
ಶ್ಯಾಮರಾವನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ ನಾನು ಮರಗುತ್ತಿ ಕ್ರಾಸಿನ ಶಾಲೆಯ
ಹತ್ತಿರ ಇರುವಾಗ ಮರಗುತ್ತಿಗೆ ಹೋಗುವ ರೋಡಿನ ಕಂಬಾರ ತೋಟದ ಹತ್ತಿರದಲ್ಲಿ ಯಾರೋ ಮೋಟಾರ ಸೈಕಲ
ಮೇಲಿಂದ ಬಿದ್ದು ಮೃತಪಟ್ಟಿರುತ್ತಾರೆ ಅಂತಾ ಜನರಾಡುವ ಮಾತನ್ನು ಕೇಳಿ ನಾನು ಕಂಬಾರ ತೋಟದ ಹತ್ತಿರ
ಮುಂದೆ ಅಣ್ಣಪ್ಪ ಭರಣಿ ಇವರ ಹೋಲದ ರೋಡಿನ ಪಕ್ಕದಲ್ಲಿ ಹೋಗಿ ನೋಡಲಾಗಿ ರೋಡಿನ
ಬದಿಯಿರುವ ಬಂದಾರಿಯ ಮೇಲೆ ನಿಮ್ಮ ತಮ್ಮ ಅವಿನಾಶ ಹಾಗೂ ಹೀರಾಮಣ ಇಬ್ಬರೂ ಭಾರಿಗಾಯಗೊಂಡು
ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿರುತ್ತಾರೆ ಮತ್ತು ಮೋಟಾರ ಸೈಕಲ್ ಜಖಂ ಆಗಿರುತ್ತದೆ ಬೇಗನೇ
ಬರುವಂತೆ ಹೇಳಿದಕ್ಕೆ ಮಗ ಶ್ಯಾಮರಾವನು ಈ ವಿಷಯವನ್ನು ನನಗೆ ತಿಳಿಸಿದಾಗ ನಾನು ಮಗ ಶ್ಯಾಮರಾವ
ಹಾಗೂ ಹೀರಾಮಣನ ತಂದೆ ಭೀಮಸಿಂಗನ ಹತ್ತಿರ ಹೋಗಿ ಫೋನ್ ಮಾಡಿದ ವಿಷಯವನ್ನು ಆತನಿಗೆ ಹೇಳಿ ಆತನು
ಮತ್ತು ನಾವು ಕೂಡಿಕೊಂಡು ಗಾಬರಿಗೊಂಡು ಕಂಬಾರ ತೋಟದ ಹತ್ತಿರ ಇರುವ ಅಣ್ಣಪ್ಪ ಭರಣಿ ಇವರ ಹೋಲದ
ಬಂದಾರಿಯ ಹತ್ತಿರ ಬಂದಾಗ ಅಲ್ಲಿ ಪ್ರವೀಣ ರಾಠೋಡನ್ನು ಇದ್ದು ಎಲ್ಲರೂ ನೋಡಲಾಗಿ ನನ್ನ ಮಗ
ಅವಿನಾಶನ ತಲೆಗೆ ರಕ್ತಗಾಯ,
ಮುಖಕ್ಕೆ ಭಾರಿಗಾಯವಾಗಿ ಮುಖದ ಎಡಭಾಗ
ಚಪ್ಪಟೆಯಾಗಿದ್ದು ಬಲಗಾಲಿನ ಮೊಳಕಾಲಿಗೆ ಹಾಗೂ ಹಿಂಬ್ಬಡಿ ಹತ್ತಿರ ಭಾರಿಪ್ರಮಾಣ ಗಾಯವಾಗಿ ಒಳಗಿನ
ಎಲುಬುಗಳು ಕಾಣುತ್ತಿದ್ದು ಮಗನಿಗೆ ಹೊರಳಿಸಿ ನೋಡಲಾಗಿ ಆತನು ಮೃತಪಟ್ಟಿದ್ದನು. ಅಲ್ಲಿಯೇ
ಪಕ್ಕದಲ್ಲಿರುವ ಹೀರಾಮಣ ಇತನಿಗೂ ಕೂಡ ನೋಡಲಾಗಿ ಇತನ ತಲೆಗೆ ಭಾರಿರಕ್ತಗಾಯ ಮತ್ತು ಬಲಗಾಲಿನ
ಮೊಳಕಾಲು ಹತ್ತಿರ ಕಪ್ಪಗಂಡ ಹತ್ತಿರ ಕಾಲು ಮುರಿದು ಒಳಗಿನ ಎಲುಬು ಮುರಿದಂತೆ ಆಗಿದ್ದು ಆತನಿಗೂ
ಕೂಡ ಹೊರಳಿಸಿ ನೋಡಲು ಆತನು ಮೃತಪಟ್ಟಿದ್ದನು. ನಮ್ಮ ಮೋಟಾರ ಸೈಕಲನ್ನು ನೋಡಲಾಗಿ ಮುಂದಿನ ಭಾಗ, ಟ್ಯಾಂಕ್ ಜಖಂಗೊಂಡಿದ್ದು ಇರುತ್ತದೆ. ಪ್ರವೀಣನಿಗೆ
ವಿಚಾರಿಸಲಾಗಿ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ: 11/09/2019 ರಂದು ರಾತ್ರಿ 7:00 ಗಂಟೆಗೆ ಅವಿನಾಶ ಅಣ್ಣ ಮತ್ತು ಹೀರಾಮಣ ಇಬ್ಬರೂ ಮೋಟಾರ ಸೈಕಲ ಮೇಲೆ ನಮ್ಮ ಶಾಲೆಗೆ ಬಂದು
ತಾವು ಬೇಲೂರಕ್ಕೆ ಹೋಗಬೇಕು ಅಂತಾ ಕಮಲಾಪೂರಕ್ಕೆ ಹೋಗಿದ್ದು ಕಮಲಾಪೂರದಲ್ಲಿಯೇ ಊಟ ಮಾಡಿ ಮರಳಿ
ಊರಿಗೆ ಹೋಗಬೇಕೆಂದು ಬಂದಿರುತ್ತೇವೆ ಎಂದು ಹೇಳಿ ಹಾಗೆ ಮಾತನಾಡಿ ಚನ್ನಾಗಿ ಓದು ಅಂತಾ ಹೇಳಿ ತಾವು
ಊರಿಗೆ ಹೋಗುತ್ತೇವೆ ಅಂತಾ ಅವಿನಾಶ ಅಣ್ಣನೇ ಮೋಟಾರ ಸೈಕಲ ನಡೆಸುತ್ತಿದ್ದನು ಹೀರಾಮಣನು ಹಿಂದೆ
ಕುಳಿತುಕೊಂಡು ಊರು ಕಡೆಗೆ ಹೋದರು. ಅಂತಾ ತಿಳಿಸಿದನು. ಮುಂದೆ ನಾವು ಹಾಗೇ ಗಾಬರಿಗೊಂಡು ನನ್ನ ಮಗ
ಅವಿನಾಶನನ್ನು ಹಾಗೂ ಹೀರಾಮಣನನ್ನು ಯಾವುದೋ ಒಂದು ಟಂಟಂನಲ್ಲಿ ಹಾಕಿಕೊಂಡು ಕಮಲಾಪೂರ ಸರ್ಕಾರಿ
ಆಸ್ಪತ್ರೆಗೆ ತಂದಿರುತ್ತೇವೆ ವಿಚಾರಣೆಯಲ್ಲಿ ನನ್ನ ಮಗ ಮತ್ತು ಹೀರಾಮಣ ಇಬ್ಬರೂ ಕೂಡಿ ನಮ್ಮ
ತಾಂಡಾದಿಂದ ಬೇಲೂರಕ್ಕೆ ಹೋಗುತ್ತೇವೆ ಎಂದು ಹೋಗುವಾಗ ಕಮಲಾಪೂರದಿಂದಲೇ ಮರಳಿ ಊರಿಗೆ ಬರುವ
ಕುರಿತು ಮೋಟಾರ ಸೈಕಲ್ ಮೇಲೆ ಮಗ ಅವಿನಾಶನೇ ಮೋಟಾರ ಸೈಕಲ್ ಹಿಂದೆ ಹೀರಾಮಣನಿಗೆ ಕೂಡಿಸಿಕೊಂಡು
ಹೋಗುವಾಗ ರಾತ್ರಿ ಮರಗುತ್ತಿ ರೋಡಿನ ಕಂಬಾರ ತೋಟದ ಬದಿಯಲ್ಲಿರುವ ಅಣ್ಣಪ್ಪ ಭರಣೀ ಇವರ ಹೋಲದ
ಹತ್ತಿರ ಯಾವುದೋ ಒಂದು ವಾಹನ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ
ಮಕ್ಕಳು ಬರುವ ಮೋಟಾರ ಸೈಕಲಗೆ ಅಪಘಾತ ಪಡಿಸಿದ ಪರಿಣಾಮ ಅವರು ರೋಡಿನಿಂದ ಬದಿಗೆ ಇರುವ ಹೋಲದ
ಬಂದಾರಿಯ ಮೇಲಿರುವ ಗಿಡಕ್ಕೆ ತಾಗಿ ಮತ್ತು ಬಂದಾರಿಯ ಕಲ್ಲುಗಳ ಮೇಲೆ ಬಿದ್ದು ಭಾರಿಪ್ರಮಾಣದ
ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಂಡುಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment