POLICE BHAVAN KALABURAGI

POLICE BHAVAN KALABURAGI

10 June 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 09.06.2019 ರಂದು ರಾತ್ರಿ  ಶ್ರೀಮತಿ ಕಮಲಾಬಾಯಿ ಗಂಡ ಲಿಂಬಾಜಿ ಚವ್ಹಾಣ ಸಾ: ಉದನೂರ ತಾಂಡಾ ತಾ:ಜಿ: ಕಲಬುರಗಿ ರವರ ಮಗನಾದ ಶ್ರೀನಿವಾಸ ಇತನು ಆಟೋ ಚಲಾಯಿಸಿಕೊಂಡು ಉಪಜಿವಿಸುತ್ತಾನೆ. ನನ್ನ ಮಗ ಶ್ರೀನಿವಾಸ ಇತನು ಈಗ 12 ವರ್ಷಗಳ ಹಿಂದೆ ನಮ್ಮ ತಾಂಡಾದ ಗಾಯತ್ರಿ ತಂದೆ ಸುಬಾಸ ರಾಠೋಡ ಇವಳೊಂದಿಗೆ ಪ್ರೀತಿಸಿ ವಿವಾಹವಾಗಿದ್ದು, ನಮ್ಮ ತಾಂಡಾದಲ್ಲಿ ಬೇರೆ ಮನೆ ಮಾಡಿಕೊಂಡು ವಾಸವಗಿದ್ದು, ಸದ್ಯ ನನ್ನ ಮಗ ಶ್ರೀನಿವಾಸ ಇತನಿಗೆ ಮೂರು ಗಂಡು ಮಕ್ಕಳಿರುತ್ತಾರೆ. ಮದುವೆಯಾದ ನಂತರ ನನ್ನ ಸೊಸೆ ಗಾಯತ್ರಿ ಗಂಡ ಶ್ರೀನಿವಾಸ ಇವಳು ತನ್ನ ದೂರದ ಸಂಬಂದಿಯಾದ ನಮ್ಮೂರಿನ ಬೀಲು ಚವ್ಹಾಣ ಇವರ ಮಗನಾಗಿರುವ ಬಬಲು @ ಸುನೀಲ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಈ ವಿಷಯದಲ್ಲಿ ಕಳೇದ 8 ತಿಂಗಳ ಹಿಂದೆ ನನ್ನ ಸೊಸೆ ಗಾಯತ್ರಿ ಇವಳು ಬಬಲು @ ಸುನೀಲ ಇತನೊಂದಿಗೆ ಹೈಕೋರ್ಟ ಹತ್ತೀರ ಹೊಲದಲ್ಲಿ ಇಬ್ಬರು ಕೂಡಿ ಸರಸ ಸಲ್ಲಾಪದ ವೇಳೆಯಲ್ಲಿ ನನ್ನ ಮಗ ಶ್ರೀನಿವಾಸ ಅಲ್ಲಿ ಖುದ್ದಾಗಿ ಹೋಗಿ ನನ್ನ ಸೊಸೆ ಗಾಯತ್ರಿ ಮತ್ತು ಅವಳೊಂದಿಗೆ ಸಂಬಂಧ ಇಟ್ಟುಕೊಂಡ ಬಬಲು @ ಸುನೀಲ ಇಬ್ಬರಿಗೂ ಆ ಸ್ಥಳದಲ್ಲಿ ಹೊಡೆಬಡೆ ಮಾಡಿದ್ದು, ಇದೇ ವಿಷಯದಲ್ಲಿ ಈಗಾಗಲೇ ನನ್ನ ಸೊಸೆ ಗಾಯತ್ರಿ ಇವಳು ನನ್ನ ಮಗ ಶ್ರೀನಿವಾಸ ಮತ್ತು ನನ್ನ ಮೇಲೆ ಕಿರುಕುಳ ನಿಡಿರುತ್ತೇವೆ ಅಂತಾ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಮುಂದೆ ಆ ಪ್ರಕರಣವು ವಿಶ್ವವಿದ್ಯಾಲಯ ಪೊಲಿಸ ಠಾಣೆಗೆ ವರ್ಗಾವಣೆಯಗಿರುತ್ತದೆ. ಅಂದಿನಿಂದ ಬಬಲು @ ಸುನೀಲ ಮತ್ತು ನನ್ನ ಸೊಸೆ ಗಾಯತ್ರಿ ಇಬ್ಬರು ನನ್ನ ಮಗನ ಮೇಲೆ ದ್ವೇಷ ಇಟ್ಟುಕೊಂಡಿದ್ದು, ನನ್ನ ಸೊಸೆ ಗಾಯತ್ರಿ ಇವಳಿಗೆ ನನ್ನ ಮಗ ಶ್ರೀನಿವಾಸ ನೀನು ಬಬಲು @ ಸುನೀಲ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಸರಿಯಲ್ಲ ನನ್ನ ಮಾನ ಮರ್ಯಾದೆ ಸಮಾಜದಲ್ಲಿ ಹಾಳು ಮಾಡಬೇಡ ಅಂತಾ ಅನೇಕ ಸಲ ಬುದ್ದಿವಾದ ಹೇಳಿದ್ದರೂ ಸಹ ನನ್ನ ಸೊಸೆ ಗಾಯತ್ರಿ ಇವಳು ಬಬಲು @ ಸುನೀಲ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಬಿಟ್ಟಿರುವುದಿಲ್ಲ. ನನ್ನ ಮಗ ಶ್ರೀನಿವಾಸ ಕೆಲಸದ ಮೇಲೆ ಹೋದಾಗ ತಾನು ಮಾಡುತ್ತಿದ್ದ ಅಂಗಡಿಯಲ್ಲಿ ಮತ್ತು ಮನೆಯಲ್ಲಿ ನನ್ನ ಮಗ ಶ್ರೀನಿವಾಸ ಇಲ್ಲದ ವೇಳೆಯಲ್ಲಿ ಬಬಲು @ ಸುನೀಲ ಇತನೊಂದಿಗೆ ಸರಾಯಿ ಕುಡಿಯುತ್ತಿದ್ದ ವಿಷಯ ಗೊತ್ತಿರುತ್ತದೆ. ಈ ಬಗ್ಗೆ ನಾನು ಮತ್ತು ನಮ್ಮ ಸಮಾಜದವರು ಬುದ್ದಿವಾದ ಹೇಳಿದ್ದು ಇರುತ್ತದೆ. ನನ್ನ ಸೊಸೆ ಗಾಯತ್ರಿ ಇವಳು ಇದೇ ವಿಷಯದಲ್ಲಿ ನನ್ನ ಮಗ ಶ್ರೀನಿವಾಸ ಒಬ್ಬನೇ ಸಿಕ್ಕಾಗಲೆಲ್ಲಾ  ಗಾಯತ್ರಿ ಇವಳು ತನ್ನ ಅಣ್ಣ ಆನಂದ ತಂದೆ ಸುಬಾಸ ರಾಠೋಡ ಮತ್ತು ತಮ್ಮನಾದ ಸುನೀಲ ತಂದೆ ಸುಬಾಸ ರಾಠೋಡ ಮತ್ತು ಬಬಲು @ ಸುನೀಲ ಇವರೆಲ್ಲರೂ ನನ್ನ ಮಗನಿಗೆ ಹೇಗಾದರೂ ಹೊಡೆಯುವಂತೆ ಹುರಿದುಂಬಿಸಿರುತ್ತಾಳೆ. ನನ್ನ ಮಗ ಮತ್ತು ಸೊಸೆ ಈಗ ಒಂದು ತಿಂಗಳಿಂದ ಕಲಬುರಗಿಯ ಕೋಟನೂರ (ಡಿ) ಹತ್ತೀರ ಬಾಡಿಗೆ ಮನೆ ಮಾಡಿಕೊಂಡಿರುತ್ತಾರೆ. ಹೀಗಿದ್ದ, ನಿನ್ನೆ ದಿನಾಂಕ 08.06.2019 ರಂದು ರಾತ್ರಿ ನಾನು ರಾಮ ಮಂದಿರದ ನನ್ನ ಮನೆಯಲ್ಲಿದ್ದಾಗ 10 ವರ್ಷದ ಮೊಮ್ಮಗ ಗಣೇಶ ಮತ್ತು ನನ್ನ ಸೊಸೆ ಗಾಯತ್ರಿ ಇಬ್ಬರು ಕೂಡಿಕೊಂಡು ನನ್ನ ಮೊಬೈಲಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ, ಅಪ್ಪ ಶ್ರೀನಿವಾಸ ಇತನಿಗೆ ಆನಂದ ಮಾಮ ಇತನು ಫೋನ್ ಮಾಡಿ ಊರಿಗೆ ಬರಲು ಹೇಳಿರುತ್ತಾನೆ ಅದಕ್ಕೆ ಅಪ್ಪ ಅಲ್ಲಿಗೆ ಹೋಗಿದ್ದು, ಊರಲ್ಲಿ ಅಪ್ಪನೊಂದಿಗೆ ಮಾಮನವರು ಜಗಳ ಮಾಡಿಕೊಳ್ಳುತ್ತಿದ್ದಾರೆ ಅಂತಾ ಅಜ್ಜಿ ತಾರಾಬಾಯಿ ಇವಳು ತಿಳಿಸಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ನನ್ನ ಅಳಿಯ ಅನೀಲ ತಂದೆ ಢಾಕು ರಾಠೋಡ ಮತ್ತು ಸೊಸೆ ಗಾಯತ್ರಿ ಮೂವರು ಕೂಡಿಕೊಂಡು ಕೋಟನೂರ (ಡಿ) ದಿಂದ ಉದನೂರ ಕಡೆಗೆ ಹೋಗುವ ರಸ್ತೆಗೆ ಅಂದಾಜು ರಾತ್ರಿ 9:00 ಗಂಟೆ ಸುಮಾರಿಗೆ ನಮ್ಮೂರ ಬಸವರಾಜ ತಂದೆ ನಾಗಪ್ಪ ಎಂಟಮನಿ ಇವರ ಹೊಲದ ಹತ್ತೀರ ಹೊರಟಾಗ ರೋಡಿನ ಪಕ್ಕದಲ್ಲಿ ಸುನೀಲ, ಬಬಲು @ ಸುನೀಲ ಮತ್ತು ಆನಂದ ಈ ಮೂವರು ಅಲ್ಲಿಯೆ ನಿಂತಿದ್ದು, ನಾವು ಅವರನ್ನು ಮಾತನಾಡಿಸದೇ ಹಾಗೇ ಉದನೂರ ತಾಂಡಾ ಕಡೆಗೆ ಹೋದೇವು, ಸ್ವಲ್ಪ ಸಮಯದ ನಂತರ ಆನಂದ ಇತನು ನನ್ನ ಸೊಸೆ ಗಾಯತ್ರಿ ಇವಳ ಮೊಬೈಲಗೆ ಫೋನ್ ಮಾಡಿ ನಿನ್ನ ಗಂಡ ಶ್ರೀನಿವಾಸ ಇತನು ನಿಮ್ಮ ಮನೆ ಕಡೆಗೆ ಹೋದನು ಅಂತಾ ತಿಳಿಸಿದ ಮೇರೆಗೆ ಮತ್ತೆ ನಾವು ಉದನೂರ ರಸ್ತೆಯಿಂದ ಕೋಟನೂರ (ಡಿ) ಕಡೆಗೆ ರಸ್ತೆಯ ಮೇಲೆ ಹುಡುಕಾಡುತ್ತಾ ನಮ್ಮೂರ ಬಸವರಾಜ ಎಂಟಮನಿ ಇವರ ಹೊಲದ ಹತ್ತೀರ ಬಂದಾಗ ಆ ಸ್ಥಳದಲ್ಲಿ ನಿಂತಿದ್ದ ಹುಡುಗರು ಇರಲಿಲ್ಲ, ಆಗ ನಮಗೆ ಸಂಶಯ ಬಂದು ಅಲ್ಲಿಯೇ ಸುತ್ತಲು ಹುಡುಕಾಡುತ್ತಾ ರಸ್ತೆಯ ಬಲಭಾಗದ ರಸ್ತೆಯ ಪಕ್ಕದ ಹೊಲದಲ್ಲಿ ಒಬ್ಬ ಮನುಷ್ಯ ಒಂದು ಮೋಟಾರ ಸೈಕಲ್ ಸಮೇತ ಬಿದ್ದಿದ್ದನ್ನು ಕಂಡು ಹೋಗಿ ನೋಡಲಾಗಿ ಆ ವ್ಯಕ್ತಿ ನನ್ನ ಮಗ ಶ್ರೀನಿವಾಸ ಇತನೇ ಇದ್ದು, ನೋಡಲು ನನ್ನ ಮಗ ಶ್ರೀನಿವಾಸ ಇದ್ದು, ಮೃತಪಟ್ಟಿದ್ದು ಕಂಡು ಬಂದಿರುತ್ತದೆ. ನನ್ನ ಮಗನಿಗೆ ಪೂರ್ತಿಯಾಗಿ ನೋಡಲು ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಮತ್ತು ಕಣ್ಣುಗಳ ಮೇಲೆ ರಕ್ತ ಗಾಯ ಮತ್ತು ಕಂದು ಗಟ್ಟಿದ ಗಾಯವಾಗಿದ್ದು ಕಂಡು ಬಂದಿರುತ್ತದೆ. ನನ್ನ ಮಗ ಶ್ರೀನಿವಾಸ ಇತನಿಗೆ ನನ್ನ ಸೊಸೆ ಗಾಯತ್ರಿ ಇವಳು ತನ್ನ ಅಣ್ಣ ಆನಂದ ತಂದೆ ಸುಬಾಸ ರಾಠೋಡ, ತಮ್ಮ ಸುನೀಲ ತಂದೆ ಸುಬಾಸ ರಾಠೋಡ ಮತ್ತು ಪ್ರಿಯಕರ ಬಬಲು @ ಸುನೀಲ ತಂದೆ ಬೀಲು ಚವ್ಹಾಣ ಸಾ: ಎಲ್ಲರೂ ಉದನೂರ ತಾಂಡಾ ಇವರಿಗೆ ಪೂರ್ವನಿಯೋಜಿತವಾಗಿ ಕರೆಯಿಸಿ ನನ್ನ ಮಗ ಶ್ರೀನಿವಾಸ ಇತನು ಉದನೂರ ಕೋಟನೂರ (ಡಿ) ರಸ್ತೆಯ ಬಸವರಾಜ ಎಂಟಮನಿ ಇವರ ಹೊಲದ ರಸ್ತೆಯ ಮೇಲೆ ತನ್ನ ಮೊಟಾರ ಸೈಕಲ್ ಮೇಲೆ ಹೊರಟಾಗ ಅವನನ್ನು ತಡೆದು ನಿಲ್ಲಿಸಿ, ತಲೆಯ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ನಿನ್ನೆ ದಿನಾಂಕ 08.06.2019 ರಂದು ರಾತ್ರಿ 9:00 ಗಂಟೆಯಿಂದ ರಾತ್ರಿ 10:00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ನನ್ನ ಮಗನ ಕೊಲೆಗೆ ಪ್ರಚೋದನೆ ನೀಡಿದ ನನ್ನ ಸೊಸೆ ಗಾಯ್ರತಿ ಮತ್ತು ಆನಂದ ತಂದೆ ಸುಬಾಸ ರಾಠೋಡ, ಸುನೀಲ ತಂದೆ ಸುಬಾಸ ರಾಠೋಡ ಹಾಗೂ ಬಬಲು @ ಸುನೀಲ ತಂದೆ ಬೀಲು ಚವ್ಹಾಣ ಸಾ: ಎಲ್ಲರೂ ಉದನೂರ ತಾಂಡಾ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆ  ಗುನ್ನೆ ನಂ: 107/2019 ಕಲಂ: 302, 120(ಬಿ) 109 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಆಯಧ ಹೊಂದಿದವರ ಬಂಧನ :
ಅಶೋಕ ನಗರ ಠಾಣೆ :ದಿನಾಂಕ:07.06.2019 ರಂದು 02:30 ಪಿ.ಎಂ.ಕ್ಕೆ ಶ್ರೀ ಜೇಮ್ಸ್ ಮಿನೇಜಸ್ ಆರಕ್ಷಕ ಉಪಾಧೀಕ್ಷಕರು, ಡಿ.ಸಿ.ಆರ್.ಬಿ. ಘಟಕ ಕಲಬುರಗಿ ರವರು ತಮ್ಮ ಸಿಬ್ಬಂದಿಯವರೊಂದಿಗೆ  ಅಕ್ರಮವಾಗಿ ಆಯುಧವನ್ನು ಇಟ್ಟುಕೊಂಡವರ ಬಗ್ಗೆ ಡಿ.ಸಿ.ಆರ್.ಬಿ. ಘಟಕದ ಪೊಲೀಸ ವಾಹನದಲ್ಲಿ  ಗಸ್ತು ಮಾಡುತ್ತಾ ಕಲಬುರಗಿ ನಗರದಲ್ಲಿ  ಮಾಹಿತಿ ಸಂಗ್ರಹಿಸುತ್ತಾ ಕೇಂದ್ರ ಬಸನೀಲ್ದಾಣದ ಹತ್ತಿರ ದಿನಾಂಕ 07/06/2019 ರಂದು 1-00 ಗಂಟೆಯ ಸುಮಾರಿಗೆ ಇದ್ದಾಗ ಅಶೋಕ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಣ್ಣಿ ಮಾರ್ಕೆಟ್  ಹತ್ತಿರ ಇರುವ ಎಮ್.ಎಸ್.ಕೆ. ಮಿಲ್ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಅತ್ತ ಇತ್ತ ತಿರಗಾಡುವದು ಮತ್ತು ಮೈದಾನಕ್ಕೆ ಹತ್ತಿರ ಇರುವ ಅಫಜಪೂರ ರೋಡಿನ ಕಡೆ ನೋಡುತ್ತಾ ಇದ್ದು, ಅವರ ಕಡೆ ಕಂಟ್ರಿಮೇಡ್ ಪಿಸ್ತೂಲ ಮತ್ತು ಜೀವಂತ ಗುಂಡುಗಳು ಇರುತ್ತವೆ ಎಂದು ಖಚಿತವಾದ ಹಾಗೂ ನಂಬತಕ್ಕ ಬಾತ್ಮಿ ಬಂದ ಮೇರೆಗೆ ತಕ್ಷಣ ಜೊತೆಯಲ್ಲಿದ್ದ ಸಿಬ್ಬಂದಿಯವರನ್ನು ಕರೆದುಕೊಂಡು ಬಾತ್ಮಿಯಂತೆ ಸ್ಥಳಕ್ಕೆ ಧಾವಿಸಿ ದೂರದಲ್ಲಿ ಜೀಪ ನಿಲ್ಲಿಸಿ ಎಮ್.ಎಸ್.ಕೆ.ಮಿಲ್ ಮೈದಾನದಲ್ಲಿ ನೋಡಲು ಇಬ್ಬರು ವ್ತಕ್ತಿಗಳು ಆ ಕಡೆ ಈ ಕಡೆ ತಿರುಗಾಡುತ್ತಿದ್ದು ಮತ್ತು ಅಫಜಲಪೂರ ಕಡೆಗೆ ಹೋಗುವ ರೋಡಿನ ಕಡೆ ನೋಡುತ್ತಾ ಮರೇಯಾಗಿ ಕುಳಿತುಕೊಳ್ಲುವದು ಹಾಗೂ ಮೇಲಿಂದ ಮೇಲೆ ತಮ್ಮ ಜೇಬುಗಳಿಗೆ ಕೈ ಹಚ್ಚಿಕೊಳ್ಳುವದು ಮಾಡುತ್ತಾ ಇದ್ದಾಗ ಅವರ ಮೇಲೆ ಹೆಚ್ಚಿನ ಅನುಮಾನ ಬಂದು ತಕ್ಷಣ ಸಿಬ್ಬಂದಿಯವರ ಸಹಾಯದಿಂದ ಸದರಿಯವರನ್ನು ಸುತ್ತುವರೆದು ಹಿಡಿಯುಲು ಪ್ರಯತ್ನಿಸಿದಾಗ ಅವರು ನಮ್ಮಿಂದ ತಪ್ಪಿಸಿಕೊಂಡು ಓಡ ಹತ್ತಿದಾಗ ರಾತ್ರಿ 1-30 ಗಂಟೆಗೆ ಬೆನ್ನು ಹತ್ತಿಕೊಂಡು ಹಿಡಿದುಕೊಂಡಿದ್ದು, ನಂತರ ಪಂಚರ ಸಮಕ್ಷದಲ್ಲಿ ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಹಸನಸಾಬ ತಂದೆ ಬಾವಾಸಾಬ ಹತ್ತರಕಿ ಸಾಃ ಕೊಗನೂರ ತಾಃ ಅಫಜಲಪೂರ ಜಿಃ ಕಲಬುರಗಿ ಅಂತ ಹೇಳಿದ್ದು, ಪೊಲೀಸರು ನಮ್ಮ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು ಸಿಕ್ಕಿದ್ದು ಇರುತ್ತದೆ. 2) ಲಕ್ಷ್ಮಿಕಾಂತ ತಂದೆ ಗುರಣ್ಣಾ ಶೇಖಜಿ ಸಾಃ ಕೊಗನೂರ ತಾಃ ಅಫಜಲಪೂರ ಅಂತ ಹೇಳಿದ್ದು ಪೊಲೀಸರು ನಮ್ಮ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಎರಡು ಜೀವಂತ ಗುಂಡು ಸಿಕ್ಕಿದ್ದು ಇರುತ್ತದೆ. ಇವುಗಳ ಬಗ್ಗೆ ಸದರಿ ಇಬ್ಬರಿಗೆ ವಿಚಾರಿಸಿದಾಗ ತಮ್ಮ ಹತ್ತಿರ ಇರುವ ಪಿಸ್ತೂಲ ಮತ್ತು ಜೀವಂತ ಗುಂಡುಗಳ ಬಗ್ಗೆ ಯಾವುದೆ ಲೈಸನ್ಸ ದಾಖಲಾತಿಗಳೂ ಇರುವುದಿಲ್ಲಾ ಅಂತಾ ತಿಳಿಸಿ ಈ ಪಿಸ್ತೂಲ ಮತ್ತು ಜೀವಂತ ಗುಂಡುಗಳು ಕಲಬುರಗಿ ತಾಲೂಕಿನ ಉದನೂರ ಗ್ರಾಮದ ಈರಣ್ಣಗೌಡ ತಂದೆ ಅಂಬಾರಾಯ ಪೊಲೀಸ ಪಾಟೀಲ ಇವರು ಅವರ ಆಸ್ತಿ ವಿಷಯಕ್ಕೆ ಸಂಬಂಧಿಸಿಂದೆ ಜಗಳ ಇರುವದರಿಂದ ನಮಗೆ ತಂದು ಕೂಡಲು ಹೇಳಿದ್ದರಿಂದ ನಾವು ಇಬ್ಬರು ಕಾಳಸಂತೆಯಲ್ಲಿ ಸುಮಾರು ರೂ 40,000/-ಗೆ ಖರಿದಿ ಮಾಡಿಕೊಂಡು ಅವನಿಗೆ ಕೊಡಲು ಇಂದು ಬಂದಿರುತ್ತೇವೆ ಅಂತಾ ವಿಚಾರಣೆಯಲ್ಲಿ ಮಾಹಿತಿ ತಿಳಿಸಿದ್ದು. ಅವರ ತಾಬೆಯಲ್ಲಿದ್ದ ಪಿಸ್ತೂಲ ಪರಿಶೀಲಿಸಲಾಗಿ ಇದು ಕಪ್ಪು ಬಣ್ಣದ ಹಿಡಿಕೆಯುಳ್ಳ ಕಂಟ್ರಿ ಮೇಡ್ ಪಿಸ್ತೂಲ ಆಗಿದ್ದು. ಇದರ ಮೇಲೆ ಯಾವುದೆ ನಂಬರ ವಗೈರೆ ಇರುವದಿಲ್ಲಾ ಇದರ ಅಂದಾಜು ಕಿಮ್ಮತ್ತು 40.000/- ಇರುತ್ತದೆ. ಮೂರು ಜೀವಂತ ಗುಂಡುಗಳ ಅ.ಕಿ. 300/- ಇರುತ್ತದೆ. ಸದರಿಯವರು ಅಕ್ರಮವಾಗಿ ಮತ್ತು ಅನಧೀಕೃತವಾಗಿ ಕಾನೂನು ಬಾಹಿರ ಕಂಟ್ರಿ ಮೇಡ್ ಪಿಸ್ತೂಲ್ ಸ್ವಾಧೀನತೆಯಲ್ಲಿ ಹೊಂದಿದ್ದು. ಮೇರೆಗೆ  ಆರೋಪಿತರು ಮತ್ತು ಮುದ್ದೆ ಮಾಲನ್ನು ಅಶೋಕ ನಗರ ಠಾಣೆಗೆ ಒಪಗಪಿಸಿದ್ದರ ಸಾರಾಂಶದ ಮೇಲಿಂದ ಅಧೋಕ ನಗರ ಠಾಣೆ ಗುನ್ನೆ ನಂ  45/2019 ಕಲಂ 25(1) (ಎ) ಭಾರತ ಆಯುಧ ಅಧೀನಿಯಮ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದವರ ವಿರುದ್ಧ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ಹೊದಲುರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 08-06-2019 ರಂದು 3:20 ಪಿಎಮ್ ದಿಂದ 8:30 ಪಿ ಎಮ್ ಅವದಿಯವರೆಗೆ ಮಾನ್ಯ ಮದುರಾಜ ತಹಸಿಲ್ದಾರರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಆದ ಪ್ರವೀಣ ಕುಲಕರ್ಣಿ, ಲೋಕೊಪಯೋಗಿ ಇಲಾಖೆಯ ಕಿರಿಯ ಅಭಿಯಂತರರು ಇಲಾಖೆಯ ಸಂಜೀವ ಕಾಂಬ್ಳೆ, ಮಣೂರ ಗ್ರಾಮ ಲೆಕ್ಕಾಧಿಕಾರಿಗಳಾದ ಮೋದಿನಸಾಬ ಭಾಗವಾನ್, ಹಾಗೂ ಪೊಲೀಸ್ ಇಲಾಖೆಯಿಂದ ಸುರೇಶ ಕಾಮಗೊಂಡ ಹೆಚ್.ಸಿ-394, ಗಿರೆಪ್ಪ ಪಿಸಿ-207 ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಸಂಗ್ರಹಿಸಿ ಮರಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವಿವರ ಕೆಳಗಿನಂತೆ ಇರುತ್ತದೆ. 01) ಶೇಖಹುಸೇನಿ ತಂದೆ ಮುಲ್ಕಾಸಾಬ ಕೋರಬು ಸಾ|| ಮಣೂರ ಸರ್ವೇ ನಂ 850/2 ರಲ್ಲಿ 200 ಟ್ರಿಪ್ ಮರಳು ಸಂಗ್ರಹಿಸಿದ್ದು ಅ.ಕಿ. 6,00,000 /-  02) ಯಲ್ಲವ್ವ ತಾಯಿ ಸುಗುಲಾಬಾಯಿ ಸಾ|| ಮಣೂರ      ಸರ್ವೇ ನಂ 848/1 ರಲ್ಲಿ 1000 ಟ್ರಿಪ್ ಮರಳು ಸಂಗ್ರಹಿಸಿದ್ದು ಅದರ ಅ.ಕಿ. 30,00,000/- 03) ಬೇಗಂಬಿ ಗಂಡ ಇಮಾಮಸಾಬ ಗೌರ ಸಾ|| ಮಣುರ ಸರ್ವೇ ನಂ 847/1 ರಲ್ಲಿ 1000 ಟ್ರೀಪ ಮರಳು ಸಂಗ್ರಹಿಸಿದ್ದು ಅ.ಕಿ. 30,00,000/- 04) ವಿಠ್ಠಲ ತಂದೆ ಮಲಕಪ್ಪ ಬಾರಾಮಣೀ ಸಾ|| ಮಣೂರ ಸರ್ವೇ ನಂ 820/2 ರಲ್ಲಿ 100 ಟ್ರೀಪ್ ಮರಳು ಸಂಗ್ರಹಿಸಿದ್ದು ಅದರ ಅ.ಕಿ. 3,00,000/-  05) ಕಲ್ಲಪ್ಪ ತಂದೆ ಚಂದ್ರಶಾ ಜಮಾದಾರ ಸಾ|| ಮಣೂರ ಸರ್ವೇ ನಂ 827/1 ರಲ್ಲಿ 1500 ಟ್ರೀಪ್ ಮರಳು ಸಂಗ್ರಹಿಸಿದ್ದು ಅದರ ಅ.ಕಿ. 45,00,000/- 06) ಭೀಮಶಾ ತಂದೆ ಚಂದ್ರಶಾ ಜಮಾದಾರ ಸಾ|| ಮಣೂರ ಸರ್ವೇ ನಂ 827/1 ನೇದ್ದರಲ್ಲಿ 400 ಟ್ರಿಪ್ ಮರಳು ಸಂಗ್ರಹಿಸಿದ್ದು ಅ.ಕಿ. 12,00,000/-  07) ಮಾಣಿಕ ತಂದೆ ಭೀಮಶಾ ಜಮಾದಾರ ಸಾ|| ಮಣೂರ ಸರ್ವೇ ನಂ 828/3 ರಲ್ಲಿ  1200 ಟ್ರೀಪ್ ಮರಳು ಸಂಗ್ರಹಿಸಿದ್ದು ಅದರ ಅ.ಕಿ. 36,00,000/-  08) ವಾಸುದೇವ ತಂದೆ ರಾಮು ಚೋಕಡೆ ಸಾ|| ಮಣೂರ ಸರ್ವೇ ನಂ 843/2 ನೇದ್ದರಲ್ಲಿ 100 ಟ್ರಿಪ್ ಮರಳು ಸಂಗ್ರಹಿಸಿದ್ದು ಅದರ ಅ.ಕಿ. 3,00,000 ಹೀಗೆ ಒಟ್ಟು 5500 ಟ್ರ್ತಾಕ್ಟರ ಟ್ರೀಪ್ ಮರಳನ್ನು ಅನಧೀಕೃತವಾಗಿ ಸಂಗರಹಿಸಿದ್ದು ಅದರ ಅ.ಕಿ. 1,65,000,00/- ರೋ ಕಿಮ್ಮತ್ತಿನ ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಸದರಿ ಎಂಟು ಜನ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮೇಲೆ ತಿಳಿಸಿದ 08 ಜನ ಪಟ್ಟೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆ ಗುನ್ನೆ ನಂ 83/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ರಾಘವೇಂದ್ರ ನಗರ ಠಾಣೆ : ದಿನಾಂಕ 08.06.2019 ರಂದು  ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಜೇ ಆರ್ ನಗರದ  ಗುಂಬಜ್ ಹತ್ತಿರದ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇ ಆರ್ ನಗರದ  ಗುಂಬಜ್ ಹತ್ತಿರದ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಜೇ ಆರ್ ನಗರದ  ಗುಂಬಜ್  ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಸಾಯಿಬಣ್ಣ ತಂದೆ ಮಲ್ಲಪ್ಪ ಪೂಜಾರಿ ಸಾ|| ಕುಂಬಾರ ಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1490/-ರೂ 2) 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಠಾಣಾ ನಂ.62/2019 ಕಲಂ:78(3) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 08.06.2019 ರಂದು ಸಾಯಂಕಾಲ  7-40 ಗಂಟೆ ಸುಮಾರಿಗೆ ನನ್ನ ಮಗ ಫರ್ದಿನಖಾನ ಇತನು ತನ್ನ ಗೆಳಯರ ಮನೆಗೆ ಹೋಗಿ ಬರುತ್ತೆನೆ ಅಂತಾ ನನಗೆ ಹೇಳದೆ ಮನೆಯಲ್ಲಿ ಇಟ್ಟಿದ ಮೋಟಾರ ಸೈಕಲ ನಂಬರ ಕೆಎ-38/ಜೆ-4343 ನೇದ್ದರ ಬೀಗವನ್ನು ತಗೆದುಕೊಂಡು ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ಚಲಾಯಿಸಿಕೊಂಡು ಎಮ್.ಆರ.ಎಮ್.ಸಿ ಕಾಲೇಜ ಎದುರುಗಡೆ ಬರುವ ಡಿವೈಡರ ಕಡೆಗೆ ಮೋಟಾರ ಸೈಕಲ ತಿರುಗಿಸುವ ಸಲುವಾಗಿ ಇಂಡಿಕೇಟರ್ ಹಾಕಿ ಸನ್ನೆ ಮಾಡುತ್ತಾ ನಮ್ಮ ಮನೆಯ ಎದುರುಗಡೆ ಹೋಗುವಾಗ ನಮ್ಮ ಮನೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32/ವಾಯ್-5110 ನೇದ್ದರ ಸವಾರ ಕರಣ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಆಕಾಶ ಇತನನ್ನು ಕೂಡಿಸಿಕೊಂಡು ಜಿ.ಜಿ ಹೆಚ್ ಸರ್ಕಲ ಕಡೆಯಿಂದ ಆರಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಫರ್ದಿನಖಾನ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿ ಗಾಯಗೊಳಿಸಿ ತಾನೂ ಗಾಯ ಹೊಂದಿ ಮೋಟಾರ ಸೈಕಲ ಹಿಂದುಗಡೆ ಕುಳಿತ ಆಕಾಶ ಇತನಿಗೂ ಗಾಯಗೊಳಿಸಿರುತ್ತಾರೆ ಅಂತಾ ಶ್ರೀಮತಿ ಸಲಮಾ ಬೇಗಂ ಗಂಡ  ಫಿರೋಜಖಾನ ಸಾ : ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು ಎದುರುಗಡೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ ಗುನ್ನೆ ನಂ 68/2019 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ  08-06-2019 ರಂದು ಶ್ರೀ  ಖಾಜಪ್ಪ ತಂದೆ ಪ್ರಧಾನಿ ಜಮಾದಾರ ಸಾ: ಬನ್ನೆಟ್ಟಿ ರವರ ಮಗಳಾದ ರೇಖಾ ಇವಳಿಗೆ ಬಂಕಲಗಾ ಗ್ರಾಮದ ನನ್ನ ತಂಗಿಯ ಮಗನಾದ ಸಿದ್ದಾರಾಮ ತಂದೆ ಬೋಮ್ಮಣ್ಣ ಅಗರಖೇಡ  ಎಂಬುವವನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಮಗಳು ಮತ್ತು ಅಳಿಯ ಇಬ್ಬರು ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಹೋಗಿರುತ್ತಾರೆ. ಹೀಗಿದ್ದು ಅಫಜಲಪೂರ ಪಟ್ಟಣದಲ್ಲಿ ಲಕ್ಷ್ಮೀ ದೇವರ ಜಾತ್ರೆ ಇದ್ದ ಕಾರಣ ನನ್ನ ಮಗಳು ಮತ್ತು ಅಳಿಯ ಇಬ್ಬರು ದಿನಾಂಕ: 30/05/2019 ರಂದು ಪುಣಾದಿಂದ ನಮ್ಮ ಗ್ರಾಮಕ್ಕೆ ಬಂದಿರುತ್ತಾರೆ. ದಿನಾಂಕ: 04/06/2019 ರಂದು ಅಫಜಲಪೂರ ಪಟ್ಟಣದಲ್ಲಿ ಲಕ್ಷ್ಮೀ ದೇವರ ಕಾರ್ಯಾ ಇದ್ದ ಕಾರಣ ಬನ್ನಟ್ಟಿ ಗ್ರಾಮದ ನಮ್ಮ ಮನೆಯಲ್ಲಿ ದೇವರು ಮಾಡಿರುತ್ತೇವೆ. ಸದರಿ ದೇವರ ಕಾರ್ಯಾಕ್ರಮಕ್ಕೆ ನನ್ನ ಅಳಿಯ ಸಿದ್ದಾರಾಮನು ಆನೂರ ಗ್ರಾಮದಲ್ಲಿರುವ ತನ್ನ ಗೇಳೆಯರನ್ನು ಕರದುಕೊಂಡು ಬರುತ್ತೇನೆ ಅಂತ ಹೇಳಿ ನನ್ನ ಮೋಟಾರ ಸೈಕಲ ನಂಬರ  ಕೆ,-32 ವ್ಹಿ-7520 ನೇದ್ದನ್ನು ತಗೆದುಕೊಂಡು ತನ್ನ ತಮ್ಮನಾದ ನಾಗೇಶ ತಂದೆ ಬೋಮಣ್ಣ ಅಗರಖೇಡ ಈತನೊಂದಿಗೆ ನಮ್ಮ ಮನೆಯಿಂದ ಹೋಗಿರುತ್ತಾನೆ ನಂತರ 6-00 ಪಿ,ಎಮ್.ಸುಮಾರಿಗೆ ನನಗೆ ಗೊತ್ತಾಗಿದ್ದೆನಂದರೆ ಸಿದ್ದಾರಾಮ ಮತ್ತು ನಾಗೇಶ ಇಬ್ಬರೂ ಕೂಡಿ ಆನೂರ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ 5-30 ಪಿ,ಎಮ್.ಸುಮಾರಿಗೆ ಅಫಜಲಪೂರ ಡಿಗ್ರಿ ಕಾಲೇಜು ದಾಟಿ ಆನೂರ ರೋಡಿನ ಮೇಲೆ ಅಪಘಾತ ಹೊಂದಿ ಬಿದ್ದಿರುತ್ತಾರೆ ಅಂತ ಸುದ್ದಿ ತಿಳಿದು ನಾನು ಮತ್ತು ನನ್ನ ಅಣ್ಣತಮ್ಮಕ್ಕಿಯ ರವೀಂದ್ರ ತಂದೆ ಅರ್ಜುನ ಜಮದಾರ ಇಬ್ಬರು ಸ್ಥಳಕ್ಕೆ ಹೋಗಿ ನೋಡಲು ಸಿದ್ದಾರಾಮನಿಗೆ ಬಲಗಾಲಿನ ಮೋಣಕಾಲಿನ ಕೆಳಭಾಗದಲ್ಲಿ ಭಾರಿ ಪೆಟ್ಟಾಗಿ ರಕ್ತಗಾಯವಾಗಿರುವದು ಕಂಡು ಬಂತು ಹಾಗೂ ನಾಗೇಶನಿಗೆ ಸಣ್ಣಪುಟ್ಟ ಗಾಯಗಳು ಆಗಿರುವದು ಕಂಡು ಬಂತು ನಂತರ ನಾನು ಮತ್ತು ರವಿ  108 ವಾಹನಕ್ಕೆ ಹಾಕಿಕೊಂಡು ಕಲಬುರ್ಗಿಯ ಕಾಮರೇಡ್ಡಿ ಆಸ್ಪತ್ರೇಗೆ ಸೇರಿಕೆ ಮಾಡಿ ಘಟನೆ ಬಗ್ಗೆ ಸಿದ್ದಾರಾಮನಿಗೆ ವಿಚಾರಿಸಲಾಗಿ ಆನೂರಕ್ಕೆ ಹೋಗುತ್ತೀರುವಾಗ ಅಫಜಲಪೂರ ಡಿಗ್ರಿ ಕಾಲೇಜು ದಾಟಿ ಆನೂರ ರೋಡಿನ ಮೇಲೆ ನಾಗೇಶನು ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ರೋಡ ಮೇಲೆ ಬಿದ್ದಿದ್ದ ಕಲ್ಲಿಗೆ ಹಾಯಿಸಿದ್ದರಿಂದ ಸ್ಕೀಡ್ ಆಗಿ ಬಿದ್ದಿರುತ್ತೇವೆ ಅಂತ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 82/2019 ಕಲಂ 279, 337, 338 ಐಪಿಸಿ ನೇದ್ದರ  ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಸಂಚಾರಿ ಠಾಣೆ 01 : ಶ್ರೀ ಪ್ರಶಾಂತ ತಂದೆ ದೇವಿಂದ್ರಪ್ಪಾ ಕಾಂಬಳೆ ರವರು  ದಿನಾಂಕ 08.06.2019 ರಂದು ಸಾಯಂಕಾಲ ಮ್ಮ ಸಂಬಂದಕರ ಮದುವೆ ಲಗ್ನ ಪತ್ರವನ್ನು ಕೊಡುವ ಕುರಿತು ತಾನು ಚಲಾಯಿಸುತ್ತರುವ ಕಾರ ನಂ ಕೆಎ-33/ಎಮ್-7337 ನೇದ್ದರಲ್ಲಿ ನನ್ನ ತಮ್ಮ ವಿನಾಯಕ ಹಾಗೂ ನನ್ನ ಗೆಳೆಯನಾದ ವೆಂಕಟೇಶ ಮೂರು ಜನರು ನಮ್ಮ ಕಾರಿನಲ್ಲಿ ಕಲಬುರಗಿಗೆ ಬಂದು ಲಗ್ನಪತ್ರವನ್ನು ಕೊಟ್ಟು ವಾಪಸ್ಸ ಶೋರಾಪೂರಕ್ಕೆ ಹೋಗುವ ಕುರಿತು ನಾನು ಚಲಾಯಿಸುತ್ತೀರುವ ಕಾರಿನಲ್ಲಿ ನನ್ನ ತಮ್ಮ ವಿನಾಯಕ ಹಾಗೂ ವೆಂಕಟೇಶ ಇವರನ್ನು ಕೂಡಿಸಿಕೊಂಡು ರಾಮ ಮಂದಿರ ಮುಖಾಂತರವಾಗಿ ಶೋರಾಪೂರ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಕಲಬುರಗಿ ಜೇವರ್ಗಿ ಮುಖ್ಯ ರಸ್ತೆಯಲ್ಲಿ ಬರುವ ಫರಹಾತಾಬಾದ ಗ್ರಾಮದ ಹತ್ತೀರ ರೋಡ ಮೇಲೆ ವಾಹನಗಳ ಸಂಚಾರಕ್ಕೆ ಜಾಮ ಆಗಿದ್ದರಿಂದ ನಾನು ನನ್ನ ಕಾರ ನಿಲ್ಲಿಸಿದಾಗ ಹಿಂದಿನಿಂದ ತರಶಮ ಸಿಂಗ ಅಶೋಕ ಲ್ಯಾಯಲೇಂಡ ಬಾಡಿ ಇಲ್ಲದ ಟ್ರಕ್ ಚೆಸ್ಸಿ ನಂ MB1KJCHDXXKPEK0871 ಇಂಜಿನ ನಂ  KEPZ122407 ನೇದ್ದರ ಚಾಲಕನು ತನ್ನ  ವಾಹನದಿಂದ ನನ್ನ ಕಾರಿಗೆ ಡಿಕ್ಕಿಪಡಿಸಿದನು ನನ್ನ ಕಾರ ಮುಂದಿನ ಒಂದು ಕಾರಿಗೆ ಟಚ ಆಗಿ ನಿಂತಿತು ನಾನು ನನ್ನ ಕಾರಿನಿಂದ ಇಳಿದು ನೋಡಲು ನನ್ನ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಬಾಡಿ ಇಲ್ಲದ ಟ್ರಕ್ ವಾಹನಕ್ಕೆ ಹಿಂದಿನಿಂದ ಬಾಡಿ ಇಲ್ಲದ ಟ್ರಕ್ ಚೆಸ್ಸಿ MB1KJCHD6KPEK0639 ಇಂಜಿನ ನಂ KEPZ124173 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಇತನು ನಿಲ್ಲಿಸಿದ ಅಶೋಕ ಲ್ಯಾಯಲೇಂಡ ಬಾಡಿ ಇಲ್ಲದ ಟ್ರಕ್ ಚೆಸ್ಸಿ ನಂ MB1KJCHDXXKPEK0871 ಇಂಜಿನ ನಂ  KEPZ122407 ನೆದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಸದರ ವಾಹನ ಚಾಲಕನು ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಕಾರ ಎದುರಿನ ಬಂಪರ, ಹೆಡ ಲೈಟ ಬೈನೆಟ್ ರೆಡಿಯೇಟರ್ ಕೂಲೆಂಟ್ ಪ್ರಂಟ ಗ್ರಿಲ್, ಎದುರಿನ ಬಲ & ಎಡ ಶೊ, ಬಲ ಮತು ಎಡ ಡೋರ ಹಿಂದಿನ ಡಿಕಿ,್ಕ ಹಿಂದನ ಗ್ಲಾಸ, ಹಿಂದಿನ ಮಡಗಾರ್ಡ, ಹಿಂದಿನ ಬಂಪರ ಡ್ಯಾಮೆಜ ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 69/2019 ಕಲಂ 279 ಐ.ಪಿ.ಸಿ. ನೇದ್ದರ ಪ್ರಕರಾರ ಪ್ರಕರಣ ದಾಖಲಿಸಲಾಗಿದೆ.  
ವರದಕ್ಷಣೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರೇಖಾ @ ಲಕ್ಷ್ಮೀ ಗಂಡ ಮಲ್ಲಿನಾಥ ದೊಡ್ಡಮನಿ ಸಾ: ಕನಗನಹಳ್ಳಿ ಗ್ರಾಮ ತಾ|| ಚಿತ್ತಾಪೂರ ಹಾ|||| ನಾಗರಹಳ್ಳಿ ತಾ: ಜೇವರಗಿ ಜಿ: ಕಲಬುರಗಿ ರವರಿಗೆ ದಿನಾಂಕ: 26-02-2012 ರಂದು ಚಿತ್ತಾಪೂರ ತಾಲೂಕಿನ ಕನಗನಹಳ್ಳಿ ಗ್ರಾಮದ ಮಲ್ಲಿನಾಥ ತಂದೆ ನೀಲಪ್ಪ ದೊಡ್ಡಮನಿ ರವರೊಂದಿಗೆ ಗುರು ಹಿರಿಯರ ಸಮಕ್ಷಮ ಕನಗನಹಳ್ಳಿ ಗ್ರಾಮದಲ್ಲೇ ಮದುವೆ ಮಾಡಿಕೊಟ್ಟಿರುತ್ತಾರೆ,  ನನ್ನ ನಿಶ್ಚಿತಾರ್ಥ ಸಮಯದಲ್ಲಿ ನನ್ನ ಗಂಡನ ಮನೆಯವರು ವರುಪಚಾರವಾಗಿ 1 ಲಕ್ಷ ರೂಪಾಯಿ ಹಾಗು 4 ತೊಲಿ ಬಂಗಾರ ಮಾತನಾಡಿರುತ್ತಾರೆ, ಆ ಸಮಯದಲ್ಲಿ ನಮ್ಮ ತಂದೆ ತಾಯಿ ಮತ್ತು ನಮ್ಮೂರ ದಯಾನಂದ ತಂದೆ ಸಿದ್ರಾಮಯ್ಯಾ ಹಿರೇಮಠ, ಈರಣಗೌಡ ತಂದೆ ಮಹಾದೇವಪ್ಪಗೌಡ ಬಿರಾದಾರ, ಕುಳಗೇರಾ ಗ್ರಾಮದ ದಂಡಪ್ಪಸೌಕಾರ ಸಾಹು ಹಾಗು ನಮ್ಮ ಮಾವ ಭೀಮರಾಯಗೌಡ ತಂದೆ ಹಣಮಂತ್ರಾಯಗೌಡ ಬಿರಾದಾರ ಸಾ|| ಬಿದರಾಣಿ ಹಿಗೆಲ್ಲರೂ ಸಮಕ್ಷಮ ಇದ್ದರು, ಅದರಂತೆ ಮದುವೆ ಸಮೆಯದಲ್ಲಿ 1 ಲಕ್ಷ ರೂಪಾಯಿ ಮತ್ತು 4 ತೊಲಿ ಬಂಗಾರ ಹಾಗು ಸುಮಾರು 1 ಲಕ್ಷ ರೂಪಾಯಿ ಕಿಮ್ಮತ್ತಿನ ಗೃಹಬಳಕೆ ಸಾಮಾನುಗಳನ್ನು ಮೇಲ್ಕಂಡ ಹಿರಿಯರ ಸಮಕ್ಷಮ ಕೊಟ್ಟಿರುತ್ತೇವೆ, ನನ್ನ ಗಂಡ ಸದ್ಯ ಗುರುಮಿಟಕಲ್ ಪೊಲೀಸ ಠಾಣೆಯಲ್ಲಿ ಪೊಲೀಸ ಕಾನ್ಸ್ಟೇಬಲ್ ಅಂತಾ ಕೆಲಸ ಮಾಡುತ್ತಿರುತ್ತಾರೆ, ಸದ್ಯ ನನಗೆ 4 ವರ್ಷದ ಒಂದು ಗಂಡು ಮಗು ಇರುತ್ತದೆ, ಮದುವೆಯಾದ ನಂತರ ನನಗೆ ನನ್ನ ಗಂಡ ಮತ್ತು ಮನೆಯವರು 6 ತಿಂಗಳ ವರೆಗೆ ಚನ್ನಾಗಿ ನೋಡಿಕೊಂಡು ನಂತರ ನನ್ನ ಗಂಡ ನನಗೆ ಮದುವೆ ಮಾಡಿಕೊಂಡು ಹಾಳಾಗಿದ್ದೇನೆ, ನನಗೆ ಇನ್ನು ವರದಕ್ಷಣೆ ತೆಗೆದುಕೊಂಡು ಬಾ, ಇಲ್ಲಾ ಅಂದರೆ ನಾನು ಬೇರೆ ಮದುವೆಯಾಗುತ್ತೇನೆ ಅಂತಾ ಅನ್ನುತ್ತಾ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತ ಬಂದಿದ್ದರು, ಈ ಬಗ್ಗೆ ನಾನು ನಮ್ಮ ತಂದೆ ತಾಯಿಗೆ ಹೇಳಿದಾಗ ನಮ್ಮ ತಂದೆ ತಾಯಿ ಹಾಗು ಮೇಲ್ಕಂಡ ಮುಖಂಡರು ಸೇರಿಕೊಂಡು ನನ್ನ ಗಂಡ 1] ಮಲ್ಲಿನಾಥ 2] ಮಾವ ನೀಲಪ್ಪ 3] ಅತ್ತೆ ಮರೇವ್ವ 4] ಭಾವ ಮಲ್ಲಿಕಾರ್ಜುನ, 5] ನೆಗೆಣಿ ನಿಂಗಮ್ಮ ಇವರಿಗೆ ತಿಳವಳಿಕೆ ಹೇಳಿರುತ್ತಾರೆ, ಆದರು ಸಹ ಅವರು ನನಗೆ ದಿನಾಲು ಚಿತ್ರಹಿಂಸೆ ಕೊಟ್ಟು ಅವಾಚ್ಯವಾಗಿ ನಿಂದಿಸಿ ತವರು ಮನೆಯಿಂದ ಇನ್ನು ಹೆಚ್ಚಿನ ಬಂಗಾರ ಬೆಳ್ಳಿ ಮತ್ತು ಕಾರು ತೆಗೆದುಕೊಂಡು ಬಾ ಎಂದು ಹಿಂಸೆ ಕೊಡುತ್ತಿದ್ದರು. ನಾನು ಗಂಡ ಬೇಕೆಂದು ಸಹಿಸಿಕೊಂಡಿದ್ದೇನೆ. ನನಗೆ ಕಿರುಕುಳ ಹೆಚ್ಚಿಗೆ ಕೊಡುತ್ತಿದ್ದರಿಂದ ಮತ್ತು ನಾನು ವರದಕ್ಷಣೆ ತರದೆ ಇದ್ದುದ್ದರಿಂದ ಮೇಲ್ಕಂಡ ನನ್ನ ಗಂಡ ಮತ್ತು ಅವರ ಮನೆಯವರು ನನಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ಈಗ 6 ತಿಂಗಳಿಂದ ನನ್ನ ತವರು ಮನೆಗೆ ಬಂದು ನಮ್ಮ ತಂದೆ ತಾಯಿಯೊಂದಿಗೆ ನಾಗರಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೇನೆ, ದಿನಾಂಕ: 24-05-19 ರಂದು ಬೆಳಿಗ್ಗೆ 11;00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ 1] ಮಲ್ಲಿನಾಥ ತಂದೆ ನೀಲಪ್ಪ ದೊಡಮನಿ, 2] ಮಾವ ನೀಲಪ್ಪ ತಂದೆ ನಾಗಪ್ಪ ದೊಡಮನಿ, 3] ಅತ್ತೆ ಮರೇವ್ವ ಗಂಡ ನೀಲಪ್ಪ ದೊಡಮನಿ, 4] ಭಾವ ಮಲ್ಲಿಕಾರ್ಜುನ ತಂದೆ ನೀಲಪ್ಪ ದೊಡಮನಿ, 5] ನೆಗೆಣಿ ನಿಂಗಮ್ಮ ಗಂಡ ಮಲ್ಲಿಕಾರ್ಜುನ ದೊಡಮನಿ ಹೀಗೆಲ್ಲರು ನಾಗರಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ನನಗೆ ಏ ರಂಡಿ ವರದಕ್ಷಣೆ ತೆಗೆದುಕೋಂಡು ಬಾ ಅಂತ ಅಂದರು ನೀನು ವರದಕ್ಷಣೆ ತರದೇ ನಿನ್ನ ತವರು ಮನೆಯಲ್ಲಿ ಬಿದ್ದಿದಿಯಾ ಅಂತಾ ಅಂದರು, ಆಗ ನನ್ನ ಗಂಡ ನನಗೆ ನೀನು ವರದಕ್ಷಣೆ ತಂದಿಲ್ಲಾ ಅಂದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅಂದನು ಆಗ ನಾನು ವರದಕ್ಷಣೆ ಕೊಡುವುದು ನಮ್ಮಿಂದ ಆಗುವುದಿಲ್ಲಾ ಅಂತಾ ಅಂದಾಗ ನನ್ನ ಗಂಡ ನನಗೆ ಏ ರಂಡಿ ಆಗಲ್ಲಾ ಅಂತಿಯಾ, ಇವತ್ತ ನಿನಗ ಖಲಾಸೆ ಮಾಡತಿನಿ ಅಂತಾ ಅಂದು ನನಗೆ ಸಾಯಿಸುವ ಉದ್ದೇಶದಿಂದ ನನ್ನ ಕುತ್ತಿಗೆ ಜೋರಾಗಿ ಹಿಡಿದು ಹಿಸುಕುತ್ತಿದ್ದನು, ಆಗ ನಮ್ಮ ತಂದೆ ತಾಯಿ ಮತ್ತು ನಮ್ಮ ತಂಗಿ ಗಂಡ ಸಿದ್ದಪ್ಪ ತಂದೆ ನಿಂಗಪ್ಪ ನರಿಬೋಳಿ ರವರು ಕೂಡಿ ಬಿಡಿಸಿಕೊಂಡಿರುತ್ತಾರೆ, ಇಲ್ಲದಿದ್ದರೆ ನನಗೆ ಸಾಯಿಸೆ ಬಿಡುತ್ತಿದ್ದನು, ಆಗ ಇನ್ನುಳಿದವರು ಈ ರಂಡಿಗಿ ಹೊಡೆದು ಖಲಾಸೆ ಮಾಡರಿ ಅಂತಾ ಅಂದು ನನಗೆ ಕೈಯಿಂದ ಮೈ ಕೈಗೆ ಹೊಡೆಬಡೆ ಮಾಡಿರುತ್ತಾರೆ, ನಂತರ ಅವರೆಲ್ಲರು ನೀನು ವರದಕ್ಷಣೆ ತಂದರೆ ನಮ್ಮ ಮನೆಗೆ ಬಾ ಇಲ್ಲಾ ಅಂದರೆ ನಾವು ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಅಂದು ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ ಗುನ್ನೆ ನಂ 61/2019 498(ಎ), 323, 307, 504, 506, ಸಂ 149 ಐಪಿಸಿ ಮತ್ತು ಕಲಂ 03, 04, ಡಿ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀ ಗೋರಕನಾಥ ತಂದೆ ಲಕ್ಷ್ಮಣ ಇಂಗಳೆ ಸಾ:ಎಸಿಸಿ ಕಾಲೋನಿ ವಾಡಿ , ರವರು ಈಗ 02 ತಿಂಗಳ ಹಿಂದೆ ನಮ್ಮ ಚಿಕ್ಕಪ್ಪನ ಮಗ ನಾಗರಾಜ ಇತನೊಂದಿಗೆ ನಮ್ಮ ಕಾಲೋನಿಯ ಲಕ್ಷ್ಮೀಕಾಂತ ಇತನ ಅಣ್ಣನ ಟಿಪ್ಪರಗೆ ಸೈಡ ಕೊಟ್ಟಿರುವದಿಲ್ಲ ಅಂತಾ ನಾಗರಾಜನೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿದ್ದು ನಂತರ ಈ ಬಗ್ಗೆ ನಮ್ಮಲ್ಲೇ ಬಗೆಹರಿಸಿಕೊಂಡಿದ್ದು ಆ ವೇಳೆಗೆ ನಾನು ಸಹ ಅವರ ಹತ್ತಿರ ಇದ್ದು ಶಶಿಕಿರಣ ಇತನಿಗೆ ನೀನು ಇನ್ನೊಮ್ಮೆ ಈ ರೀತಿ ಜಗಳ ಮಾಡಬೇಡಾ ಅಂತಾ ತಿಳಿ ಹೇಳಿದ್ದು ಅದಕ್ಕೆ ಆತನು ನನಗೆ ಧಮ್ಕಿ ಹಾಕಿರುತ್ತಾನೆ. ನಂತರ ನಿನ್ನೆ ದಿನಾಂಕ 07/06/2019 ರಂದು ರಾತ್ರಿ 10-00 ಗಂಟೆ ಸುಮಾರು ನಾನು ನನ್ನ ಗೆಳೆಯರಾದ ಅಮೀತ ಮತ್ತು ಮಲ್ಲು ಕೂಡಿಕೊಂಡು ನಮ್ಮ ಮನೆಯ ಹಿಂದಿನ ಕಟ್ಟೆಯ ಮೇಲೆ ಮಾತನಾಡುತ್ತ ಕುಳಿತುಕೊಂಡಾಗ ನಮ್ಮ ಕಾಲೋನಿಯ ಲಕ್ಷ್ಮೀಕಾಂತ , ಗೌತಮ ಮು:ಪಿಲಕಮ್ ಏರಿಯಾ ವಾಡಿ , ಸಾಗರ ಮು:ಎಸಿಸಿ ಕಾಲೋನಿ ವಾಡಿ ,ಶಿವು ಮು:ಪಿಲಕಮ್ ಏರಿಯಾ ವಾಡಿ, ನಿತೀಶ ನಾಟೀಕರ ಮು:ವಾಡಿ, ಶಿವು ಮು:ಭೀಮನಗರ ವಾಡಿ, ಪ್ರೇಮ ಮು:ಪಿಲಕಮ್ ಏರಿಯಾ ವಾಡಿ ರವರು ಕೂಡಿಕೊಂಡು ಬಂದು ಲಕ್ಷ್ಮೀಕಾಂತ ಇತನು ನನಗೆ ‘’ ರಂಡಿ ಮಗನೇ ನಿನ್ನ ಸೊಕ್ಕುಹೆಚ್ಚಾಗಿದೆ ಅಂತಾ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗಣ್ಣಿನ ಹತ್ತಿರ ಹೊಡೆದು ಗುಪ್ತಗಾಯಪಡಿಸಿದನು. ಗೌತಮ ಇತನು ತನ್ನ ಹತ್ತಿರ ಇದ್ದ ಹರಿತವಾದ ಆಯುಧದಿಂದ ನನ್ನ ಬಲ ಎದೆಗೆ ಹೊಡೆದು ಭಾರಿ ರಕ್ತಗಾಯಪಡಿಸಿದ್ದು ಅಲ್ಲದೇ ಎಡಗೈ ಹತ್ತಿರ ಹೊಡೆದು ರಕ್ತಗಾಯ ಪಡಿಸಿದನು. ಸಾಗರ ಮತ್ತು ಶಿವು ನನಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡ ಹತ್ತಿದರು. ನಾನು ಬಿಡಿಸಿಕೊಂಡು ಮುಂದೆ ಹೊರಟರೆ ನಿತೀಶ ಮತ್ತು ಶಿವು ಸಾ:ಭೀಮನಗರ ನನಗೆ ಮುಂದೆ ಹೋಗದಂತೆ ತಡೆದರು. ಪ್ರೇಮ ಇತನು ಕೈ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದಿದ್ದರಿಂದ ಬಾಯಿಯ ಮೇಲಿನ ದವಡೆಯ ಪಕ್ಕದ ಹಲ್ಲು ಬಿದ್ದಿರುತ್ತದೆ. ಆಗ ಅಮೀತ ಮತ್ತು ಮಲ್ಲು ಕೂಡಿ ಬಿಡಿಸಲು ಬಂದರೆ ಅಮೀತ ಇತನಿಗೂ ಸಹ ನಿತೀಶ ಇತನು ಹೊಡೆಯ ಹತ್ತಿದನು. ಆಗ ನಮ್ಮ ಅಣ್ಣ ಕಾಶಿನಾಥ ಮತ್ತು ಮಲ್ಲು ಕೂಡಿ ಜಗಳ ಬಿಡಿಸಿರುತ್ತಾರೆ.ಲಕ್ಷ್ಮೀಕಾಂತ ಇತನು ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಬೈಯುತ್ತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: