POLICE BHAVAN KALABURAGI

POLICE BHAVAN KALABURAGI

21 May 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಂತೋಷ ತಂದೆ ಮಡಿವಾಳಪ್ಪ ತುಪ್ಪದ ಸಾ|| ಯಡ್ರಾಮಿ ರವರು ದಿನಾಂಕ 16-04-2019 ರಂದು ಬೆಳಿಗ್ಗೆ ನಾನು ಜೇವರ್ಗಿಗೆ ಕೆಲಸದ ನಿಮಿತ್ಯ ನಮ್ಮೂರ ಶ್ರೀಕಾಂತ ತಂದೆ ಗುರುಲಿಂಗಪ್ಪ ಸಾತಿಹಾಳ ರವರ ಸ್ವಿಫ್ಟ್ ಕಾರ ನಂ ಕೆ.-27/ಎಮ್-2979 ನೇದ್ದರಲ್ಲಿ ಕುಳಿತು ಜೇವರ್ಗಿಗೆ ಹೋಗುತ್ತಿದ್ದೇವು, ಕಾರನ್ನು ಶ್ರೀಕಾಂತ ಇವನು ಚಲಾಯಿಸುತ್ತಿದ್ದನು,ನಂತರ 08;30 .ಎಂ ಸುಮಾರಿಗೆ ಕುಕ್ಕನೂರ ಕ್ರಾಸ್ ದಾಟಿ ಹೋಗುತ್ತಿದ್ದಾಗ ಕರಕಿಹಳ್ಳಿ ಗ್ರಾಮದ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾಬರುತ್ತಿದ್ದನು, ನಂತರ ರೋಡಿನ ಬಲಗಡೆ ಒಂದು ಮಣ್ಣಿನ ಡಿಬ್ಬಿ ಇದ್ದಿದ್ದರಿಂದ ಲಾರಿ ಚಾಲಕನು ಲಾರಿಯನ್ನು ಒಮ್ಮಲೆ ನಮ್ಮ ಮೈ ಮೇಲೆ ತಂದಿದ್ದರಿಂದ ನಾವು ನಮ್ಮ ಕಾರನ್ನು ಎಡಕ್ಕೆ ತಿರುವಿದಾಗ ಲಾರಿ ಚಾಲಕನು ನಮ್ಮ ಕಾರಿನ ಬಲಗಡೆ ಹಿಂದೆ ಡಿಕ್ಕಿ ಹೊಡೆದನು, ಆಗ ನಮ್ಮ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಲಾರಿ ಹಿಂದೆ ಬರುತ್ತಿದ್ದ ಮೋಟರ ಸೈಕಲ ಮೇಲೆ ನಮ್ಮ ಕಾರು ಬಿದ್ದು ನಂತರ ಎರಡು ಪಲ್ಟಿಯಾಗಿ ತೆಗ್ಗಿನಲ್ಲಿ ಬಿದ್ದಿತು, ನಂತರ ನಾನು ಕಾರಿನಿಂದ ಹೊರಗೆ ಬಂದು ನೋಡಿದಾಗ ನನ್ನ ಎಡಗಾಲಿನ ಮೊಳಕಾಲ ಕೆಳಗೆ ತರಚಿದಗಾಯ, ಬಲಮೊಳಕೈಗೆ ಮತ್ತು ಎದೆಗೆ ಒಳಪೆಟ್ಟಾಗಿತ್ತು, ಶ್ರೀಕಾಂತನಿಗೆ ಬಲಕಿವಿ ಹಿಂದೆ, ಬಲರಟ್ಟೆಗೆ ಮತ್ತು ಬಲತೊಡೆಗೆ ಒಳಪೆಟ್ಟಾಗಿರುತ್ತವೆ, ನಂತರ ಮೋಟರ ಸೈಕಲ್ ನೋಡಲಾಗಿ ಅದರ ನಂಬರ ಕೆ.-22/.ಎಮ್-7112 ನೇದ್ದು ಇತ್ತು, ಮೋಟರ ಸೈಕಲ್ ಮೇಲಿದ್ದ ವ್ಯಕ್ತಿಯನ್ನು ನೋಡಲಾಗಿ ಅವನು ಅಲ್ಲೆ ರೋಡಿನ ಬಲಗಡೆ ಬಿದ್ದಿದ್ದು, ಅವನ ಬಲತೊಡೆಗೆ ಭಾರಿ ಒಳಪೆಟ್ಟಾಗಿರುತ್ತದೆ, ತಲೆಗೆ ಭಾರಿ ಒಳಪೆಟ್ಟಾಗಿ ರಕ್ತಗಾಯವಾಗಿರುತ್ತದೆ, ಗದ್ದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಬಳಭುಜಕ್ಕೆ, ಮತ್ತು ಮೈಮೇಲೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ, ನಂತರ ಮೋಟರಸೈಕಲ್ ಸವಾರನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಮಡಿವಾಳಪ್ಪ ತಂದೆ ಪೀರಪ್ಪ ಹೊಸಮನಿ ಸಾ|| ಗೊಬ್ಬರಡಗಿ ಅಂತಾ ಹೇಳಿದನು, ನಮಗೆ ಡಿಕ್ಕಿ ಪಡಿಸಿದ ಲಾರಿ ನೋಡಲಾಗಿ ಅಲ್ಲೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅದರ ಚಾಲಕ ಓಡಿ ಹೋಗಿದ್ದನು, ಲಾರಿ ನಂಬರ ನೋಡಲಾಗಿ ಕೆ.-32/ಬಿ-3110 ನೇದ್ದು ಇತ್ತು, ನಂತರ ನಮ್ಮ ಸಂಬಂಧಿಕಾನ ಶಾಂತಕುಮಾರ ತಂದೆ ಸಂಗಣ್ಣ ಹೆರೂರ ರವರಿಗೆ ಪೋನ ಮಾಡಿ ಕರೆಯಿಸಿದೆನು, ಅಷ್ಟರಲ್ಲಿ ವಿಷಯ ತಿಳಿದು ಮಡಿವಾಳಪ್ಪನ ಸಂಬಂಧಿಕರಾದ ನಿಂಗಣ್ಣ ತಂದೆ ಭೀಮರಾಯ ಗಂಗಾಕರ ಸಾ|| ಹರನಾಳ ರವರು ಸ್ಥಳಕ್ಕೆ ಬಂದು ಮಡಿವಾಳಪ್ಪನಿಗೆ 108 ಅಂಬೂಲೆನ್ಸಲ್ಲಿ ಹಾಕಿ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ತೆಗೆದುಕೊಂಡು ಹೋದರು, ನಂತರ ಶ್ರೀಕಾಂತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿ ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ,  ರಸ್ತೆ ಅಪಘಾತದಲ್ಲಿ ಗಾಯಹೊಂದಿದ ಮಡಿವಾಳಪ್ಪ ತಂದೆ ಪೀರಪ್ಪ ಹೊಸಮನಿ ಸಾ|| ಗೊಬರಡಗಿ ರವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ 20-05-2019 ರಂದು 10;35 ಪಿ.ಎಂ ಕ್ಕೆ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಈಶ್ವರ ತಂದೆ ಚಿದಾನಂದ ಹೊನ್ನಕಿರಣಗಿ ಸಾ|| ಕೃಷ್ಣಾನಗರ ಕಲಬುರಗಿ ರವರು ದಿನಾಂಕ; 20/05/2019 ರಂದು 2;30 ಪಿ.ಎಮ್ ಸುಮಾರಿಗೆ ನಾನು ಹಾಗು  ನಮ್ಮ ಮವನಾದ ಖುಷಿರಾಜ ಇಟಗಿ ಇಬ್ಬರು ಕೂಡಿಕೊಂಡು ಮಾತನಾಡುತ್ತಾ ನಮ್ಮ ಮನೆಯ ಕಡೆಗೆ ಹೊಗುತ್ತಿದ್ದಾಗ ನಮ್ಮ ತಮ್ಮನಾದ ಯಲ್ಲಪ್ಪ ಇತನು ಬಂದವನೆ ನಮ್ಮ ಮನೆಯಲ್ಲಿ ಸರಿಯಾಗಿ ಪಾಲ ಕೊಡುತ್ತಿಲ್ಲ ಮಗನೇ ಅಂದವನೆ ನನಗೆ ತಡೆದು ಕೈಯಿಂದ ಮನಸ್ಸಿಗೆಬಂದಂಗೆ ನನ್ನ ಮೈ ಕೈಗೆ ಹೊಡೆಯ ಹತ್ತಿದನು. ಆಗ ನಾನು ಯಾಕೆ ಹೊಡೆಯುತ್ತಿಯಾ ನಿನಗೆ ಕೊಡಬೇಕಾದ ಪಾಲ ಸರಿಯಾಗಿ ಹಂಚಿಕೊಟ್ಟಿದೆಯಲ್ಲ ಅಂದಾಗ ಮಗನ್ಯಾ ಮತ್ತೆ ಎದುರು ಮಾತನಡುತ್ತಿಯಾ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಬೈಯುತ್ತಾ ಕೈಯಿಂದ ಹೊಡಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ಮಾವನಾದ ಖುಷಿರಾಜ ಇಟಗಿ ಮತ್ತು ನನ್ನ ಹೆಂಡತಿ ಸುಮಿತ್ರಾ ಇವರುಗಳು ಜಗಳ ಬಿಡಿಸಿಕೊಂಡರು. ಕಾರಣ ನಮ್ಮ ತಮ್ಮನಾದ ಯಲ್ಲಪ್ಪ ಇತನು ಸುಮ್ಮಸುಮ್ಮನೆ ಮನೆಯಲ್ಲಿ ಪಾಲ ಸರಿಯಾಗಿ ಕೊಟ್ಟಿರುವದಿಲ್ಲ ಅಂತಾ ಜಗಳ ತೆಗೆದು ಅವಚ್ಯವಾಗಿಬೈದು ಜೀವಬೆದರಿಕೆ ಹಾಕಿ ಕೈಯಿಂದ ನನ್ನ ಮೈಕೈಗೆಹೊಡೆಬಡಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಯಲ್ಲಪ್ಪ ತಂದೆ ಚಿದಾನಂದ ಹೊನ್ನಕಿರಣಗಿ ಸಾ|| ಕೃಷ್ಣಾನಗರ ಕಲಬುರಗಿ ರವರು ದಿನಾಂಕ; 20/05/2019 ರಂದು 2;30 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಅಂಗಳದಲ್ಲಿದ್ದಾಗ ನಮ್ಮ ಅಣ್ಣನಾದ ಈಶ್ವರ ಹಾಗು ನಮ್ಮ ಮಾವನಾದ ಖುಷಿರಾಜ ಇಟಗಿ ಇಬ್ಬರು ಕೂಡಿಕೊಂಡು ಮತನಾಡುತ್ತಾ ನಮ್ಮ ಮನೆಯ ಕಡೆಗೆ ಬರುತ್ತಿದ್ದರು ಆಗ ನಮ್ಮ ಅಣ್ಣನಾದ ಈಶ್ವರ ಇತನಿಗೆ ನಮ್ಮ ಮನೆಯಲ್ಲಿ ಸರಿಯಾಗಿ ಪಾಲ ಕೊಡುತ್ತಿಲ್ಲ ತಂದೆ ತಾಯಿಯವರು ಎಲ್ಲಿರಬೇಕು ಅಂತಾ ಕೇಳಿದೆ ಅದಕ್ಕೆ ನಮ್ಮ ಅಣ್ಣ ಈಶ್ವರ ಇತನು ನನಗೆ ಏ ಬೋಸಡಿ ಮಗನೆ ನಿನಗೆ ಕೊಡಬೇಕಾದ ಪಾಲ ಕೊಡಲಾಗಿದೆ ಮತ್ತೆ ಪಾಲ ಕೇಳುತ್ತಿರಯಾ ಅಂತಾ ಕೈಯಿಂದ ಮನಸ್ಸಿಗೆಬಂದಂಗೆ ನನ್ನ ಮೈಕೈಗೆಹೊಡೆಯಹತ್ತಿದನು. ಆಗ ನಾನು ಯಾಕೆ ಹೊಡೆಯುತ್ತಿಯಾ ನನಗೆ ಕೊಡಬೇಕಾದ ಪಾಲ ಸರಿಯಾಗಿ ಹಂಚಿಕೊಡು ಅಂತಾ ಅಂದಾಗ ಮಗನ್ಯಾ ಮತ್ತೆ ಎದುರು ಮತನಡುತ್ತಿಯಾ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಬೈಯುತ್ತಾ ಕೈಯಿಂದ ಹೊಡಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ನಮ್ಮ ಮಾವನಾದ ಖುಷಿರಾಜ ಇಟಗಿ ಇತನು ಸಹ ನನಗೆ ಈ ಮಗನಿಗೆ ಬಿಡಬೇಡ ಅಂತಾ ಬೈದು ಕೈಯಿಂದ ಹೋಡೆಯ ಹತ್ತಿದನು ಆಗ ನಮ್ಮ ತಾಯಿ ಕಸ್ತೂರಿಬಾಯಿ ಹಾಗೂ ಅಕ್ಕಳಾದ ಮಹಾದೇವಿ ಇವರು ಬಿಡಿಸಲು ಬಂದರೆ ಅವರಿಗೂ ದಬ್ಬಿಸಿಕೊಟ್ಟು ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿ ಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಪಾಂಡುರಂಗ ತಂದೆ ಬೀಮರಾವ ಕುಲಕರ್ಣಿ ಸಾ: ವೀರಭದ್ರೇಶ್ವರ ಕಾಲೋನಿ ಪ್ಲಾಟ ನಂ 185 ಉದನೂರ ಕ್ರಾಸ್  ಅತಿಥಿ ಬಾರ ಹಿಂದುಗಡೆ ಕಲಬುರಗಿ ರವರು ದ್ವಿ-ಚಕ್ರವಾಹನ ಟಿವಿಎಸ್ ಎಕ್ಸಲ್  ವಾಹನ ಸಂಖ್ಯೆ ಕೆಎ 32  ಇಕೆ 6203 ನೆದ್ದನ್ನು 3 ವರ್ಷಗಳ ಹಿಂದೆ ಖರೀಧಿಸಿದ್ದು ಅದನ್ನು ಇಲ್ಲಿಯವರೆಗೆ ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ.  ವಾಹನದ ಸಂಖ್ಯೆ ಕೆಎ 32  ಇಕೆ 6203 ಚೆಸ್ಸಿ ನಂ MD621BD15F2K14976, ಇಂಜಿನ ನಂ 0D1KF1581229  ಅಂದಾಜು ಕಿಮ್ಮತ್ತು  25000/- ರೂ ಈ ರೀತಿ ವಿವರವನ್ನೊಳ ಗೊಂಡ ಈ ನನ್ನ ವಾಹನವನ್ನು ನಾನು ಕೆಲಸದ ನಿಮಿತ್ಯ ದಿನಾಂಕ 11.05.2019 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಎಲ್.ಐ.ಸಿ ಆಪೀಸ್ದಲ್ಲಿ ಸಾಲ ಪಡೆದ ಹಣ ತುಂಬಲು ಹೋದಾಗ ನನ್ನ ವಾನವನ್ನು ಹೆಡ್ ಪೋಷ್ಟ ಆಫೀಸ್ ಮುಂದುಗಡೆ ಗೇಟ ಹತ್ತಿರದಲ್ಲಿ ನಿಲ್ಲಿಸಿ ಆಫೀಸದಲ್ಲಿ ಹೋಗಿ ಹಣ ತುಂಬಿದ ನಂತರ ಅಲ್ಲಿಯೇ ಇರುವ ಮಾರ್ಕೇಟದಿಂದ ಸಂತೆ ಮಾಡಿಕೊಂಡು ಬಂದು ನೋಡುವಷ್ಟರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇರಲಿಲ್ಲ ನಾನು ಹತ್ತಿರದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ ಇರಲಿಲ್ಲ ಆಗ ನಾನು ನನ್ನ ಗೆಳೆಯರಾದ ಉದಯಕುಮಾರ ಕುಲಕರ್ಣಿ ಮತ್ತು ಜಯತೀರ್ಥ ಸಾವಳಗಿ ಇವರಿಗೆ ನನ್ನ ಮೋಟರ ಸೈಕಲ ಕಳುವು ಆಗಿರುತ್ತದೆ ಅಂತಾ ತಿಳಿಸಿದ್ದು ಆಗ ಅವರೂ ಕೂಡಾ ಅಲ್ಲಿಗೆ ಬಂದು ನನ್ನ ವಾಹನ ಇಲ್ಲದ್ದನ್ನು ನೋಡಿದ್ದು ನಂತರ ನಾವೆಲ್ಲರೂ ಕೂಡಿಕೊಂಡು ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿದ್ದು ಅದು ಸಿಕ್ಕಿರುವುದಿಲ್ಲ. ಇಲ್ಲಿಯವರೆಗೆ ಎಲ್ಲಿಯಾದರೊ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: