POLICE BHAVAN KALABURAGI

POLICE BHAVAN KALABURAGI

16 February 2019

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.02.2019 ರಂದು ಬೆಳ್ಳಿಗ್ಗೆ ರಾಘವೇಂದ್ರ  ನಗರ  ಠಾಣಾ ವ್ಯಾಪ್ತಿಯ ವಿನೊಭಾ ಬಾವೆ ಚೌಕ ಹತ್ತಿರ ಪಂಪಚರ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ವಿನೊಭಾ ಬಾವೆ ಚೌಕ ದಿಂದ ಬೊರಾಬಾಯಿ ನಗರದ ಕಡೆಗೆ ಹೋಗುವ ರಸ್ತೆಗೆ ಉತ್ತರಕ್ಕೆ ಮುಖ ಮಾಡಿಕೊಂಡಿರುವ ಒಂದು ಪಂಪಚರ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ವಿಜಯಕುಮಾರ ತಂದೆ ರಾಮಚಂದ್ರ ಮಾನೆ ಸಾ: ಚಾಣುಕ್ಯ ಬಾರ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 225/- ರೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 90 ಎಮ್.ಎಲ್.ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 54 ಟೇಟ್ರಾ ಪಾಕೇಟಗಳಿದ್ದು ಒಂದು ಟೇಟ್ರಾ ಪಾಕೇಟ ಬೇಲೆ 30.ರೂ 32 ಪೈಸೆ. ಇದ್ದು ನಂತರ ಸದರಿಯವನಿಗೆ ಮಧ್ಯ ಎಲ್ಲಿಂದ ತಂದು ಮಾರಾಟ ಮಾಡುತ್ತಿರುವೆ ಅಂತ ವಿಚಾರಿಸಿದಾಗ ಸದರಿಯವನು ಗೊಪಿ ವೈನ ಶ್ಯಾಪ ದಿಂದ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿದ್ದು ಸ್ಥಳದಲ್ಲಿ ದೊರೆತ ಟೇಟ್ರಾ ಪ್ಯಾಕೆಟಗಅ:ಕಿ: 1606 ರೂ 96 ಪೈಸೆ ನೇದ್ದನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.02.2019 ರಂದು ರಾಘವೇಂದ್ರ ನಗರ ಠಾಣಾ  ವ್ಯಾಪ್ತಿಯ ಡಬರಾಬಾದ ಕ್ರಾಸ ಹತ್ತಿರ ಸಂತೊಷ ಕಾಲೋನಿ ಹೋಗು ಮುಖ್ಯ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್‌‌.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ  ಡಬರಾಬಾದ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಡಬರಾಬಾದ ಕ್ರಾಸ ದಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ  ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು  ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ಶಫೀ ತಂದೆ ಮಹ್ಮದ ಲಿಯಾಖತ ಪ್ರೂಟವಾಲೆ ಸಾ: ಡಬರಾಬಾದ ಕ್ರಾಸ ಲಕ್ಷ್ಮಿ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1050 ರೂ,2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 15-02-2019  ರಂದು ಗುಡ್ಡೆವಾಡಿ ಕಡೆಯಿಂದ ಆನೂರ ಗ್ರಾಮದ ಕಡೆಗೆ ಅನದಿಕೃತವಾಗಿ ಕಳ್ಳತನದಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ಗ್ರಾಮದ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಆನೂರ ಗ್ರಾಮದ ಕಡೆಯಿಂದ ಎರಡು ವಾಹನಗಳು ಬರುತ್ತಿದ್ದು ನೋಡಿ, ನಾವು ನಮ್ಮ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಸದರಿ ವಾಹನಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ವಾಹನದ ಚಾಲಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ನಮ್ಮ ಇಲಾಖಾ ವಾಹನವನ್ನು ನೋಡಿ ತಮ್ಮ ವಾಹನಗಳನ್ನು ರೋಡಿನ ಮೇಲೆ ನಿಲ್ಲಿಸಿ ಕತ್ತಲಲ್ಲಿ ತಪ್ಪಿಸಿಕೊಂಡು ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ವಾಹನಗಳ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-32 ಡಿ-9850 ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇತ್ತು.  ಟಿಪ್ಪರ ಅಂದಾಜು ಕಿಮ್ಮತ್ತು 10,00,000/- ರೂ ಮತ್ತು ಸದರಿ ಟಿಪ್ಪರನಲ್ಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. 2) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-32ಸಿ-9850 ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇತ್ತು.  ಟಿಪ್ಪರ ಅಂದಾಜು ಕಿಮ್ಮತ್ತು 10,00,000/- ರೂ ಮತ್ತು ಸದರಿ ಟಿಪ್ಪರನಲ್ಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಎರಡು ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಸದರ ಬಾಹನಗಳೋಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ:15-02-2019 ರಂದು  ಶ್ರೀ ಮಹಾರಾಜ ತಂದೆ ರೇವಣಸಿದ್ದಪ್ಪಾ ಕೆರೂರ ಸಾ:ಕಡಗಂಚಿ ಗ್ರಾಮ ರವರು ಮತ್ತು  ಮಗನಾದ ಮಾಳಪ್ಪಾ ಈತನ ಮೊಟಾರ್ ಸೈಕಲ್ ಸ್ಪೈಲಂಡರ್ ಪ್ಲಸ್ ಸಿಲಿವರ್ ಕಲರ ಅದರ ನಂ: ಕೆಎ32-ಇಟಿ0939 ನೇದ್ದರ ಮೇಲೆ 0900 ಎ.ಎಂ ಸುಮಾರಿಗೆ ಕಡಗಂಚಿ ಗ್ರಾಮಕ್ಕೆ ಹೋಗಿದ್ದ ಅಲ್ಲಿ ಕೂಲಿಜನರಿಗೆ ಜೋಳಾ ಕಟಾವು ಮಾಡಲು ಹೇಳಿ ವಾಪಸ್ಸು ಹೊಲಕ್ಕೆ ಹೊರಟಾಗ ಕಡಗಂಚಿ ಬಸ್ ನಿಲ್ದಾಣ ದಾಟಿದಾಗ ನನ್ನ ಮಗ ಮಾಳಪ್ಪಾ ತನ್ನ ಸ್ವಧಿನದ ಮೊಟಾರ್ ಸೈಕಲ್ ಅತೀವೇಗ ಮತ್ತು ನಿಷ್ಕಾಳಜಿತನಿಂದ ನಡೆಯಿಸುತ್ತಿದ್ದನು. ಹಿಂದೆ ಕುಳಿತಿದ್ದ ನಾನು ಅವನಿಗೆ ಎಸ್ಟೇ ಸಮಜಾಯಿಸಿದರು ಕೇಳದೆ ಹಾಗೆ ನಿಷ್ಕಾಳಜಿತನಿಂದ ಮೊಟಾರ್ ಸೈಕಲ್ ಓಡಿಸಿ ಸ್ವಾಮಿ ಸಮರ್ಥ ಪೆಟ್ರೋಲ್ ಬಂಕ್ ದಾಡುತ್ತಿದ್ದಾಗ  ಜಂಪಿನಲ್ಲಿ ಜೋರಾಗಿ ಹೋಗಿ ವಾಹನದ ಆಯಾತಪ್ಪಿ ಎಡಭಾಗಗಕ್ಕೆ ವಾಹನ ಸ್ಕಿಡಾಗಿ ಜೋರಾಗಿ ನೆಲಕ್ಕೆ ಬಿಳಿಸಿದನು ಅದರಿಂದ ನನ್ನ ಎಡಭಾಗದ ತೊಡೆಯಿಂದ ಪಾದದ ವರೆಗೆ ಭಾರಿ ಗಾಯವಾಗಿದ್ದು ನಮ್ಮ ಗ್ರಾಮದ ಗುರಣ್ಣಾ ಹೊನ್ನಾನವರ, ವಿಠಲ್ ಹಿರೇಕುರುಬರ, ಭೀಮಾಶಂಕರ ಪಟ್ಟಣ, ಅಣ್ಣಾರಾವ ಬಬಲಾದಿ ಇವರುಗಳು ಬಂದು ನನಗೆ ಒಂದು ಜೀಪಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಮಗ ಮಾಳಪ್ಪಾ ಈತನು ತನ್ನ ಮೊಟಾರ್ ಸೈಕಲ್ ನಂ: ಕೆಎ32-ಇಟಿ0939 ನೇದ್ದು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಅಪಘಾತ ಪಡಿಸಿ ನನಗೆ ದುಖಃಪಾತ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: