ಪಿಸ್ತೂಲನಿಂದ
ಗುಂಡು ಹಾರಿಸಿ ಬಂಗಾರದ ಆಭರಣಗಳನ್ನು ಕಸಿದುಕೊಂಡು ಹೋದ ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ ವಿರೇಶ ತಂದೆ ವಿಜಯಕುಮಾರ ಸಿದ್ರಾಮಠ ಸಾ:ಕಮಲಾಪೂರ
ರವರ ಅಣ್ಣ ಬಸವರಾಜ ಇವರ ಕಮಲಾಪೂರದಲ್ಲಿ ಬಂಗಾರದ ಅಂಗಡಿ ಇಟ್ಟಿಕೊಂಡಿದ್ದು, ನಮ್ಮ ತಂದೆ ವಿಜಯಕುಮಾರ ಇವರು
ನಿವೃತ್ತಿಯಾಗಿರುವದ್ದರಿಂದ ಆಗಾಗ ಅಂಗಡಿಯಲ್ಲಿ ಕುಳಿತುಕೊಂಡಿರುತ್ತಾರೆ. ದಿನಾಂಕ 28-01-2019 ರಂದು ಬೆಳಗ್ಗೆ ನಮ್ಮ
ಅಣ್ಣ ಕಲಬುರಗಿಗೆ ಹೋಗಿರುವದ್ದರಿಂದ ಅಂಗಡಿಯಲ್ಲಿ ನಮ್ಮ ತಂದೆ ಕುಳಿತಿದ್ದು ಸಾಯಂಕಾಲ ನಾನು ಸಾಹ
ಅಂಗಡಿ ಕಡೆಗೆ ಹೋಗಿದೆನು, 6 ಪಿ.ಎಮ್ ಸುಮಾರಿಗೆ ನಮ್ಮ ಮನೆಯಲ್ಲಿ ಸಂಭಂದಿಕರು ಬಂದಿರುವದ್ದರಿಂದ ನಾನು ಮನೆಗೆ
ಹೋಗಿದ್ದರಿಂದ ನಮ್ಮ ತಂದೆ ಒಬ್ಬರೆ ಅಂಗಡಿಯಲ್ಲಿ ಇದ್ದರು. ನಾನು ಮನೆಯಲ್ಲಿ ಇದ್ದಾಗ 6-35 ಪಿ.ಎಮ್ ಸುಮಾರಿಗೆ
ನನ್ನ ಸ್ನೇಹಿತ ಶಶಿಕಾಂತ ಕುಮ್ಮಣ್ಣ ಇವರು ನನಗೆ ಪೋನ ಮಾಡಿ ನಿಮ್ಮ ತಂದೆಗೆ ಯಾರೋ ಅಂಗಡಿಯಲ್ಲಿ
ಹೊಡೆದಿರುತ್ತಾರೆ ಬೇಗ ಹೋಗಿ ನೋಡು ಅಂತಾ ಹೇಳಿರುತ್ತಾರೆ. ನಾನು ಗಾಬರಿಯಾಗಿ ಮೋಟಾರ ಸೈಕಲ್
ತೆಗೆದುಕೊಂಡು ನಮ್ಮ ಅಂಗಡಿಗೆ ಹೋಗಿ ನೋಡಲಾಗಿ ಜನರು ನೆರದಿದ್ದು, ನಮ್ಮ ತಂದೆಯ ತೆಲೆಗೆ
ರಕ್ತಗಾಯವಾಗಿದ್ದು ತೆಲೆಗೆ ಕೈ ಹಿಡಿದುಕೊಂಡು ಕುಳಿತಿದ್ದರು, ನಾನು ನಮ್ಮ ತಂದೆಗೆ ವಿಚಾರಿಸಲಾಗಿ
ತಿಳಿಸಿದೆನೆಂದರೆ ಇಬ್ಬರು ವ್ಯಕ್ತಿಗಳು 6-30 ಪಿ.ಎಮ್ ಸುಮಾರಿಗೆ ಅಂಗಡಿಗೆ ಮೋಟಾರ ಸೈಕಲ್ ಮೇಲೆ ಬಂದು ಅಂದಾಜು 30-35 ವಯಸ್ಸಿನವರು ಇದ್ದು, ತಾವು ಸೊಂತ
ಗ್ರಾಮದವರಿದ್ದು ನಮ್ಮ ತಾಯಿಯ ಹುಟ್ಟುಹಬ್ಬದ
ನಿಮಿತ್ಯ ಕೀವಿಯ ಬೆಂಡೊಲಿ ಬೇಕಾಗಿವೆ ತೋರಿಸು
ಅಂತಾ ಕೇಳಿದರು. ಆಗಾ ನಾನು ಅಂಗಡಿಯಲ್ಲಿನ ಬೆಂಡೊಲಿಗಳು
ತೋರಿಸಿದ್ದು ಅದರಲ್ಲಿ ಒಬ್ಬನು ನಿಮ್ಮ ಅಂಗಡಿಯಲ್ಲಿರುವ ಎಲ್ಲಾ ಬೆಂಡೋಲಿಗಳು ತೋರಿಸು ಅಂತಾ
ಹೇಳಿದನು. ಆಗ ನಾನು ತೆಗೆದು ತೋರಿಸಿದ್ದು. ಇನ್ನೋಬ್ಬ ತನ್ನ ಹತ್ತಿರ ಇದ್ದ ಪಿಸ್ತೂಲ ತೆಗೆದು
ನನ್ನ ಕಡೆಗೆ ತೋರಿಸಿ ಎಲ್ಲಾ ಬೆಂಡೋಲಿಗಳು ಕೊಡು ಅಂತಾ ಹೆದರಿಸಿದನು. ನಾನು ಆಗ ಸುಮ್ಮನೆ
ಕುಳಿತಿದ್ದ ಇನ್ನೊಬ್ಬ ಅಂಗಡಿಯಲ್ಲಿನ ಬಂಗಾರದ ಬೆಂಡೊಲಿ, ತಾಳಿ ಮತ್ತು ಸಣ್ಣ ಉಂಗರುಗಳು ಅಂದಾಜು 2 ರಿಂದ 2.1/2 ತೋಲೆ ಬಂಗಾರದ
ಸಾಮುನುಗಳು ತೆಗೆದುಕೊಂಡಿದ್ದು, ಇನ್ನೋಬ ಪಿಸ್ತೂಲ ಹಿಡಿದುಕೊಂಡ ವ್ಯಕ್ತಿ ನನ್ನ ತೆಲೆಯ ಕಡೆ ಒಂದು ಗುಂಡು
ಹಾರಿಸಿದ್ದು, ನನ್ನ ತೆಲೆಗೆ ಬಡಿದಿರುತ್ತದೆ, ಆದ್ದರಿಂದ ನನ್ನ ತೆಲೆಗೆ ರಕ್ತ ಬಂದಿದ್ದು, ಇಬ್ಬರು ವ್ತಕ್ತಿಗಳು ತಾವು ತಂದ ಮೋಟಾರ ಸೈಕಲ್
ಮೇಲೆ ಕಮಲಾಪೂರ ಬಸ್ ಸ್ಟಾಂಡ ಕಡೆ ಹೋಗಿರುತ್ತಾರೆ. ಅವರನ್ನು ನಾನು ಪುನ: ನೋಡಿದರೆ
ಗುರುತ್ತಿಸುತ್ತೇನೆ ಅಂತಾ ಹೇಳಿದರು . ಕೂಡಲೆ ನಾನು ಮತ್ತು ಶಶಿಕಾಂತ ಕೋರಿ ದೇವಾನಂದ ಮಠಪತಿ
ಕೂಡಿಕೊಂಡು ನಮ್ಮ ತಂದೆಗೆ ಉಪಚಾರ ಕುರಿತು ನಮ್ಮೂರ ಡಾ. ವಿಜಯಕುಮಾರ ಇವರ ಹತ್ತಿರ ತೋರಿಸಿ, ನಂತರ ಒಂದು ಖಾಸಗಿ
ಕಾರಿನಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿರುತ್ತೇವೆ ,ಕಾರಣ ನಮ್ಮ ತಂದೆಗೆ
ಯಾರೋ ಅಪರಿಚಿತ ದುಷ್ಕರ್ಮಿಗಳು ಪಿಸ್ತುಲದಿಂದ ಹೆದರಿಸಿ ತೆಲೆಗೆ ಒಂದು ಗುಂಡು ಹೊಡೆದು
ಗಾಯಗೊಳಿಸಿ, ಅಂಗಡಿಯಲ್ಲಿದ್ದ ಅಂದಾಜು 2 ರಿಂದ 2 .1/2 ತೋಲೆ ಬಂಗಾರದ ಸಾಮಾನುಗಳು ಅ.ಕಿ 60,000/-
ರೂ ಕಿಮ್ಮತ್ತಿನ ಸಾಮುನುಗಳು ಜಬರದಸ್ತಿದಿಂದ ಖಸೀದಿಕೊಂಡು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ
ಪ್ರಕರಣ :
ದೇವಲಗಾಣಗಾಪೂರ
ಠಾಣೆ : ದಿನಾಂಕ 27-06-2018 ರಂದು ಮುಂಜಾನೆ ನಾನು ನನ್ನ ಹೆಂಡತಿ,
ಮತ್ತು ನನ್ನ ಮಕ್ಕಳು ನಮ್ಮ ಹೊಲಕ್ಕೆ ಕೆಲಸಕ್ಕೆ ಹೋಗಿರುತ್ತೇವೆ, ಹೊಲದಿಂದ ಮರಳಿ ಮುಂಜಾನೆ
11-00 ಗಂಟೆಯ ಸುಮಾರಿಗೆ ನಾವೆಲ್ಲರೂ ಮನೆಗೆ ಬಂದಾಗ ನನ್ನ ಮಗಳು ಕುಮಾರಿ ಮನೆಯಲ್ಲಿ ಅಳುತ್ತ ಕುಳಿತ್ತಿದ್ದಳು ಆಗ ನಾವು ಅಳುತ್ತಿರುವ
ಬಗ್ಗೆ ವಿಚಾರಿಸಲಾಗಿ ಅವಳು ತಿಳಿಸಿದ್ದೇನೆಂದರೆ, ಮುಂಜಾನೆ 10-00 ಗಂಟೆಯ ಸುಮಾರಿಗೆ
ನಾನು ಒಬ್ಬಳೆ ಮನೆಯಲ್ಲಿದ್ದಾಗ ನಮ್ಮೂರಿನ ಅರ್ಜುನ ತಂದೆ ಮಡ್ಡೆಪ್ಪ ಜೋಗೂರ ಎಂಬಾತನು ನಮ್ಮ
ಮನೆಯೊಳಗೆ ಬಂದು ನನಗೆ ಕೂಗಾಡದಂತೆ, ಬಾಯಿ ಒತ್ತಿ ಹಿಡಿದು ಒಳಗಿನ ಕೋಣೆಯಲ್ಲಿ ಎಳೆದುಕೊಂಡು ಹೋಗಿ
ನೆಲಕ್ಕೆ ಹಾಕಿ ಒತ್ತಾಯ ಪೂರ್ವಕವಾಗಿ ನನಗೆ ಸಂಭೋಗ ಮಾಡಿರುತ್ತಾನೆ, ಅವನು ಮರಳಿ ಹೋಗುವಾಗ ಈ
ವಿಷಯವನ್ನು ನಿಮ್ಮ ತಂದೆ-ತಾಯಿಗೆ ಆಗಲಿ ಮತ್ತು ಇನ್ನಿತರ ಯಾರಿಗಾದರು ಹೇಳಿದರೆ ಮತ್ತೆ ಇನ್ನೊಂದು
ಸಲ ನೀನೊಬ್ಬಳೆ ಮನೆಯಲ್ಲಿದ್ದಾಗ ಬಂದು ಹೊಡೆದು ಖಲಾಸ ಮಾಡುತ್ತೇನೆ ಅಂತ ಜೀವದ ಭಯ ಹಾಕಿ
ಹೋಗಿರುತ್ತಾನೆ, ಅಂತ ತಿಳಿಸಿದಳು ಪೊಲೀಸ ಕೇಸು ಮಾಡಿದರೆ ನನ್ನ ಮಗಳ ಮುಂದಿನ ಜೀವನ
ಹಾಳಾಗುತ್ತದೆ. ಮತ್ತು ಊರಲ್ಲಿ ನಮ್ಮ ಮನೆತನದ ಮರ್ಯಾದೆ ಹರಾಜು ಆಗುತ್ತದೆ ಅಂತ ತಿಳಿದುಕೊಂಡು
ಸುಮ್ಮನಿದ್ದೆವು, ನಂತರದ ದಿನಗಳಲ್ಲಿಯು ಅರ್ಜುನ ತಂದೆ ಮಡ್ಡೆಪ್ಪ ಜೋಗೂರ ಈತನು ನಮ್ಮ ಮನೆಗೆ
ಬಂದು ಬುದ್ದಿಮಾಂದ್ಯ ಮತ್ತು ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆ,
ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ ಕೇಸು ಮಾಡಿದರೆ ನನ್ನ ಮಗಳ ಮುಂದಿನ ಜೀವನ ಹಾಳಾಗುತ್ತದೆ.
ಮತ್ತು ಊರಲ್ಲಿ ನಮ್ಮ ಮನೆತನದ ಮರ್ಯಾದೆ ಹರಾಜು ಆಗುತ್ತದೆ ಅಂತ ಸುಮ್ಮನಿದ್ದರು ಮತ್ತೆ ದಿನಾಂಕ
25-01-2019 ನನ್ನ ಮಗಳಿಗೆ ಮನೆಯಲ್ಲಿ ಬಿಟ್ಟು ಹೊಲಕ್ಕೆ ಹೋಗಿರುತ್ತೇವೆ ನಂತರ ಸಾಯಾಂಕಾಲ 5-00
ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನನ್ನ ಮಗಳು ಅಳುತ್ತಾ ಮನೆಯಲ್ಲಿ ಕುಳಿತಿದ್ದಾಗ ಆಗ ನಾವು ಅಳುತ್ತಿರುವ
ಬಗ್ಗೆ ವಿಚಾರಿಸಲಾಗಿ ಅವಳು ತಿಳಿಸಿದ್ದೇನೆಂದರೆ, ಮದ್ಯಾಹ್ನ 3-00 ಗಂಟೆಯ ಸುಮಾರಿಗೆ
ನಾನು ಒಬ್ಬಳೆ ಮನೆಯಲ್ಲಿದ್ದಾಗ ಮತ್ತೆ ನಮ್ಮೂರಿನ ಅರ್ಜುನ ತಂದೆ ಮಡ್ಡೆಪ್ಪ ಜೋಗೂರ ಎಂಬಾತನು
ಮನೆಗೆ ಬಂದು ಒಳಗಿನ ಕೋಣೆಯಲ್ಲಿ ಎಳೆದುಕೊಂಡು ಹೋಗಿ ನೆಲಕ್ಕೆ ಹಾಕಿ ಒತ್ತಾಯ ಪೂರ್ವಕವಾಗಿ ನನಗೆ
ಸಂಭೋಗ ಮಾಡಿರುತ್ತಾನೆ ಅಂತ ತಿಳಿಸಿದಳು ನಂತರ ನಾನು ನನ್ನ ಹೆಂಡತಿ ಮಕ್ಕಳೆಲ್ಲರು ಇವನಿಗೆ ಹೀಗೆ
ಬಿಟ್ಟರೆ ಮುಂದೆ ನಮಗೆ ಊರಲ್ಲಿ ಜೀವನ ಮಾಡುವುದು ಕಷ್ಟ ಆಗುತ್ತದೆ ಅಂತ ವಿಚಾರಿಸಿಕೊಂಡು ಅಪ್ರಾಪ್ತ
ವಯಸ್ಕಳಾದ ನನ್ನ ಮಗಳಿಗೆ ಸಂಬೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿ ಜೀವದ ಭಯ ಹಾಕಿದ ಅರ್ಜುನ ತಂದೆ
ಮಡ್ಡೆಪ್ಪ ಜೋಗೂರ ಸಾ|| ಅವರಳ್ಳಿ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment