ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪಾರುಕ ತಂದೆ ಸೊಂದುಸಾಬ ಮನಿಯಾರ ಸಾಕಿನ:- ಬಜಾರ ಏರಿಯಾ ಅಫಜಲಪೂರ ಇವರ ತಂದೆಯಾದ ಸೊಂದುಸಾಬ ತಂದೆ ಇಸ್ಮಾಯಿಲಸಾಬ ಮನಿಯಾರ ಇವರ ಹೆಸರಿನಲ್ಲಿ ಅಫಜಲಪೂರ ಸೀಮಾಂತರದಲ್ಲಿ 3 ಎಕರೆ ಹಾಗೂ ನನ್ನ ತಾಯಿಯಾದ ಸಾಹೇರಬಾನು ರವರ ಹೆಸರಿನಲ್ಲಿ 3 ಎಕರೆ ಜಮೀನು ಒಟ್ಟು 6 ಎಕರೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ನಾನು ಮತ್ತು ನನ್ನ ತಂದೆ ತಾಯಿ ಒಕ್ಕಲುತನದ ಕೆಲಸ ಮಾಡಿಕೊಂಡಿರುತ್ತೇವೆ. ಈಗ 3-4 ವರ್ಷಗಳಿಂದ ನಮ್ಮ ಹೊಲದಲ್ಲಿ ಕಲಂಗಡಿ, ಬಾಳೆ, ಕಬ್ಬು, ತೊಗರಿ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದು, ಹೊಲದಲ್ಲಿ ಬೆಳೆದೆ ಬೆಳೆಗೆ ಸರಿಯಾಗಿ ಬೆಲೆ ಸಿಗದ ಕಾರಣ ಹಾಗೂ ಬೆಳೆಗಳು ಸರಿಯಾಗಿ ಬೆಳೆಯದ ಕಾರಣ ಪ್ರತಿ ವರ್ಷ ನಾವು ಬೆಳೆದ ಬೆಳೆ ಲಾಸ್ ಆಗುತ್ತಾ ಬಂದಿರುತ್ತದೆ. ಈ ವರ್ಷ ನಮ್ಮ ಹೊಲದಲ್ಲಿ ಕಬ್ಬು ಮತ್ತು ತೊಗರಿ ಬೆಳೆ ಇರುತ್ತದೆ. ಬೆಳೆದ ಬೆಳೆಯಲ್ಲಿ ಲಾಸ್ ಆಗಿದ್ದರಿಂದ ನಮ್ಮ ತಂದೆ ಹೊಲದ ಸಾಗುವಳಿಗಾಗಿ ತನ್ನ ಹೆಸರಿನಲ್ಲಿದ್ದ ಹೊಲ ಸ ನಂ 452 ರ ಮೇಲೆ ಹಾಗೂ ನನ್ನ ತಾಯಿಯ ಹೆಸರಿನಲ್ಲಿದ್ದ ಹೊಲದ ಮೇಲೆ ಅಫಜಲಪೂರದ ಕೇನಾರ ಬ್ಯಾಂಕಿನಲ್ಲಿ ತಲಾ 2 ಲಕ್ಷ 20 ಸಾವಿರ ರೂಪಾಯಿಗಳು ಒಟ್ಟು ಇಬ್ಬರ ಹೆಸರಿನಿಂದ ಒಟ್ಟು ಅಂದಾಜು 4,50,000/- ರೂಪಾಯಿ ಬೆಳೆ ಸಾಲ ಮಾಡಿರುತ್ತಾನೆ. 3-4 ವರ್ಷಗಳಿಂದ ನಮ್ಮ ಹೊಲ ಸರಿಯಾಗಿ ಬೆಳೆಯದ ಕಾರಣ ಹಾಗೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ನಮ್ಮ ತಂದೆ ಬ್ಯಾಂಕಿನಲ್ಲಿ ಅಲ್ಲದೆ ಕೈಗಡ ವಾಗಿ ಖಾಸಗಿ ಜನರ ಹತ್ತಿರವು ಸಹ 15 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ನಮ್ಮ ತಂದೆ ಸಾಲ ತಿರಿಸಲು ಹೊಲ ಮಾರಬೇಕೆಂದು ಈಗ 6 ತಿಂಗಳಿಂದ ಹೊಲಕ್ಕೆ ದಾರಣಿ ಹಚ್ಚಿ “ ಹೊಲ ಮಾರುವುದಿದೆ ” ಎಂದು ಅಫಜಲಪೂರದ ಟಿವಿ ಚಾನಲನಲ್ಲಿಯೂ ಸಹ ಹಾಕಿಸಿರುತ್ತಾರೆ. ನಮ್ಮ ಹೊಲ ತಗೆದುಕೊಳ್ಳಲು ಇಲ್ಲಿಯವರೆಗೆ ಯಾರು ಸಹ ಬಂದಿರುವುದಿಲ್ಲ. ಹಾಗೂ ಈ ವರ್ಷ ಮಳೆ ಸಹ ಸರಿಯಾಗಿ ಬಂದಿಲ್ಲ ಹೀಗೆ ಆದರೆ ನಾವು ಸಾಲ ತಿರಿಸುವುದು ಹೇಗೆ ಎಂದು ನಮ್ಮ ತಂದೆ ಚಿಂತೆ ಮಾಡುತ್ತಿದ್ದನು.ನಮ್ಮ ತಂದೆ ಹೊಲ ಮಾರಾಟವಾಗುತ್ತಿಲ್ಲ ಹೀಗೆ ಆದರೆ ಬ್ಯಾಂಕಿನಲ್ಲಿ ಮಾಡಿದ ಸಾಲ ಹಾಗೂ ಕೈಗಡ ಮಾಡಿದ ಸಾಲ ಹೇಗೆ ತಿರಿಸುವುದು ಎಂದು ಸುಮಾರು 1 ತಿಂಗಳಿಂದ ಮನಸ್ಸಿಗೆ ಹಚ್ಚಿಕೊಂಡು ಊಟ ಸರಿಯಾಗಿ ಮಾಡದೆ ಅದನ್ನೆ ಚಿಂತೆ ಮಾಡುತ್ತಾ ಇದ್ದನು. ದಿನಾಂಕ 22-11-2018 ರಂದು ಬೆಳಿಗ್ಗೆ 07:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಸಾಹೇರಬಾನು ಹಾಗೂ ನನ್ನ ತಂಗಿಯಾದ ಅಂಜುಮಾ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಕೆಲಸ ಮಾಡಲು ಹೋಗಿರುತ್ತೇವೆ. ಮನೆಯಲ್ಲಿ ನನ್ನ ತಂದೆಯಾದ ಸೊಂದುಸಾಬ ಹಾಗೂ ನನ್ನ ಇಬ್ಬರು ತಂಗಿಯರಾದ ವಜೇಫಾ ಹಾಗೂ ರಾಹೀಲಾ ಮೂರು ಜನರು ಇದ್ದಿರುತ್ತಾರೆ. ದಿನಾಂಕ 22-11-2018 ರಂದು ಮದ್ಯಾಹ್ನ 12:15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ತಂಗಿಯಾದ ಅಂಜುಮಾ ಮೂರು ಜನರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮನೆಯ ಎದರುರಿನ ಅಂಗಡಿಯವರಾದ ಪಾರುಕ ತಾಂಬೋಳೆ ರವರು ನನಗೆ ಪೋನ್ ಮಾಡಿ ನಿಮ್ಮ ತಂದೆ ನಿಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾನೆ ಬಾ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ, ನಮ್ಮ ಮನೆಯ ಮುಂದಿನ ಕೋಣೆಯಲ್ಲಿ ನಮ್ಮ ತಂದೆ ಸ್ಲಾಪಿಗೆ ಇದ್ದ ಕೊಂಡಿಗೆ ವೇಲನಿಂದ (ಓಡ್ನಿ) ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದನು. ನಂತರ ನಮ್ಮ ತಂದೆಯ ಶವವನ್ನು ನೇಣಿನಿಂದ ಬಿಡಿಸಿ ಕೆಳಗೆ ಹಾಕಿ ಮನೆಯಲ್ಲಿ ನನ್ನ ತಂಗಿಯರಾದ ವಜೇಫಾ ಮತ್ತು ರಾಹೇಲಾ ರವರಿಗೆ ವಿಚಾರಿಸಲು ಅವರು ತಿಳಿಸಿದ್ದೆನೆಂದರೆ, ನಾವಿಬ್ಬರು ಬೆಳಿಗ್ಗೆ 10:00 ಗಂಟೆಗೆ ಮನೆಯಲ್ಲಿನ ಕೆಲಸ ಮುಗಿಸಿ ಟಿವಿ ನೋಡಬೆಕೆಂದು ಮನೆಯ ಮಾಲಿಕರಾದ ಅಲಿಸಾಬ ಮಸಳಿ ರವರ ಮನೆಯಲ್ಲಿ ಟೀವಿ ನೋಡಲು ಹೋಗಿರುತ್ತೇವೆ ಮನೆಯಲ್ಲಿ ತಂದೆ ಒಬ್ಬನೆ ಇದ್ದಿರುತ್ತಾನೆ. ಮರಳಿ 11:45 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಂದಿನ ಕೋಣೆಯ ಬಾಗಿಲು ಒಳಕೊಂಡಿ ಮುಚ್ಚಿತ್ತು, ನಾವು ಎಷ್ಟೆ ಬಾಗಿಲು ಬಡೆದರು, ಕೂಗಿದರು ಬಾಗಿಲು ತಗೆಯಲ್ಲಿದ್ದ ನಂತರ ನಾವು ಗಾಬರಿಯಾಗಿ ನಮ್ಮ ಮನೆಯ ಮುಂದೆ ಇದ್ದ ಕಿರಾಣಿ ಅಂಗಡಿಯ ಪಾರೋಕ ತಾಂಬೋಳೆ ಹಾಗೂ ಅಲ್ಲೆ ಇದ್ದ ಅಸಮತ್ ಜಾಗಿರದಾರ ರವರಿಗೆ ತಿಳಿಸಿದಾಗ ಸದರಿಯವರು ಬಂದು ನಮ್ಮ ಮನೆಯ ಕೊಂಡಿ ಮುರಿದು ಮನೆಯಲ್ಲಿ ನೋಡಲಾಗಿ ನಮ್ಮ ತಂದೆ ನೇಣು ಹಾಕಿಕೊಂಡಿದ್ದನು ಎಂದು ತಿಳಿಸಿದರು.ನಮ್ಮ ತಂದೆಯಾದ ಸೊಂದುಸಾಬ ಈತನು ಒಬ್ಬ ರೈತನಾಗಿದ್ದು, 3-4 ವರ್ಷಗಳಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬರದ ಕಾರಣ ಹಾಗೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಬರದೆ ಇದ್ದರಿಂದ ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಹೊಲದಲ್ಲಿನ ಬೆಳೆ ಒಣಗಿದ್ದರಿಂದ ಹೊಲದ ಸಾಗುವಳಿಗಾಗಿ ಹಾಗೂ ಹೊಲದಲ್ಲಿ ಹಾಕಿಸಿದ ಬೋರಗಳಿಗಾಗಿ ಬ್ಯಾಂಕಿನಲ್ಲಿ ಮಾಡಿದ
4,50,000/- ರೂ ಸಾಲ ಹಾಗೂ ಖಾಸಗಿ ವ್ಯೆಕ್ತಿಗಳ ಹತ್ತಿರ ಕೈಗಡವಾಗಿ ಮಾಡಿ 15 ಲಕ್ಷ ರೂಪಾಯಿ ಸಾಲ ತೀರಿಸಲು ಆಗದೆ ಹಾಗೂ ಹೊಲ ಮಾರಾಟ ವಾಗದ ಕಾರಣ ನಮ್ಮ ತಂದೆ ಇಂದು ದಿನಾಂಕ 22-11-2018 ರಂದು 10:00 ಎ ಎಮ್ ದಿಂದ 11:45 ಎ ಎಮ್ ಮದ್ಯದ ಅವದಿಯಲ್ಲಿ ನಾವು ಬಾಡಿಗೆ ಇದ್ದ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.
20-11-2018 ರಂದು ಸಂಜೆ ನನ್ನ ಗಂಡ ಅಣ್ಣರಾಯ ಇವರು ನಮ್ಮ ಓಣೀಯಯ ಪಂಡಿತ ಕೆರಿಅಂಬಲಗಿ ಇತನ
ಟಂ.ಟಂ. ಮೇಲೆ ಎಲ್ಲಿಯೋ ಕೆಲಸಕ್ಕೆಂದು ಮನೆಯಿಂದ ಹೋದರು ಟಂ.ಟಂನ್ನು ಪ???? ಇತನು ನಡೆಯಿಸುತಿದ್ದನು ನನ್ನ ಗಂಡ
ಅಂಬರಾಯ ಹಿಂದೆ ಕುಳಿತಿದ್ದನು ಸಚಿಜೆ. 6-40 ಪಿ.ಎಂ. ಸುಮಾರಿಗೆ ನನ್ನ ಮೈದುನನಾದ ಬಸವರಾಜ ವಗ್ಗೆ ಇತನು ತಿಳಿಸಿದ್ದು ಏನೆಂದರೆ ಪಟ್ಟಣ್ಣ
ಕ್ರಾಸ ದಾಟಿ ಹತಗುಂದಾ ರೋಡಿಗೆ ಹಣಮಂತರಾಯ ಕಾಡ್ಲಾ ಇವರ ಹೊಲದ ಎದರುಗಡೆ ಪಂಡಿತ ಕೆರಿಅಂಬಲಗಿ ಇತನ
ಟಂ.ಟಂ. ಪಲ್ಟಿಯಾಗಿ ನನ್ನ ಗಂಡ ಅಣ್ಣರಾಯ ವಗ್ಗೆ
ಇತನ ತಲೆಗೆ ಪೆಟ್ಟಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ತಿಳಿದನು ಆಗ ನಾನು ಮತ್ತು ಲಕ್ಷ್ಮಣ
ವಗ್ಗೆ ಹಾಗೂ ಅಂಬರಾರಯ ವಗ್ಗೆ ಮೂರು ಜನರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ
ನಮ್ಮ ಮೈದುನ ಬಸವರಾಜ ವಗ್ಗೆ , ಗುಂಡಪ್ಪಾ ಪೂಜಾರಿ
ಇದ್ದು ನನ್ನ ಗಂಡ ಅಣ್ಣರಾಯನಿಗೆ ನೋಡಲು ಅವರ ತಲೆಯ ಹಿಂಬಾಗದಲ್ಲಿ ಭಾರಿ ಗುಪ್ತಪೆಟ್ಟು , ಎಡಕಿವಿಯ ಹಿಂದು ತಲೆಗೆ ಭಾರಿರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗುತಿತ್ತು , ಎದೆಗೆ ಪೆಟ್ಟಾಗಿತ್ತು . ಆಗ ನನ್ನ ಗಂಡ ಅಣ್ಣರಾಯನಿಗೆ ವಿಚಾರಿಸಲು ಕೂಲಿಜನರನ್ನು
ಕರೆದುಕೊಂಡು ಬರುವ ಕುರಿತು ಮತ್ತು ಪಂಡಿತ ನ ಟಂ.ಟಂ.ದಲ್ಲಿ ಹೊಲೆಕ್ಕೆ ಹೋಗುತ್ತಿರುವಾಗ ಪಂಡಿತನು
ಟಂ.ಟಂ.ನ್ನು ಬಹಳವೇಗವಾಗಿ ನಡೆಯಿಸುತಿದ್ದು ರೋಡ ತಗ್ಗು ಬಂದಾಗ ಒಮ್ಮಲೆ ಬ್ರೇಕ್ ಹಾಕಿದಾಗ ಟಂ.ಟಂ. ಪಲ್ಟಿಯಾಗಿದ್ದರಿಂದ
ನನಗೆ ಗಾಯಗಳಾಗಿರುತ್ತವೆ ಅಂತಾ ತಿಳಿಸಿದ್ದನು ಹಾಗೂ ಟಂ.ಟಂ. ನಡೆಸುತ್ತಿದ್ದ ಪಂಡಿತ ತಂದೆ
ಲಕ್ಕಪ್ಪಾ ಕೆರಿಅಂಬಲಗಿ ಇತನಿಗೂ ಕೂಡಾ ಟೊಂಕಕೆ, ಬೆನ್ನಿಗೆ , ಹಾಗೂ ಮೊಳಕಾಲಿಗೆ ಅಲಲ್ಲಿ ಚರಚಿದ ಗಾಯಗಳಾಗಿರುತ್ತವೆ.ಪಲ್ಟಿಯಾದ ಟಂ.ಟಂ. ಅಲ್ಲೆ ರೋಡಿನ
ಬದಿಗೆ ಬಿದ್ದು ಅದರ ನಂಬರ ಕೆ.ಎ.32. ಸಿ.1493 ನೆದ್ದು ಇತ್ತು ಆಗ ಸದರಿ ಘಟನೆಯನ್ನು ನೋಡಿ ಬಂದ
ಗುಂಡಪ್ಪಾ ಪೂಜಾರಿ ಹಾಗೂ ನಮ್ಮ ಮೈದುನ ಬಸವರಾಜ ವಗ್ಗೆ , ಲಕ್ಷ್ಮಣ ವಗ್ಗೆ , ಅಂಬರಾಯ ವಗ್ಗೆ ನನ್ನ ಗಂಡ ಅಣ್ಣರಾಯನಿಗೆ
108 ಅಂಬುಲೆನ್ಸದಲ್ಲಿ ಹಾಕಿಕೊಂಡು ಮೊದಲು ನಮ್ಮ ಊರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ
ನಂತರ ಅದೇ ಅಂಬುಲೆನ್ಸದಲ್ಲಿ ಹಾಕಿಕೊಂಡು ತಂದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿದ್ದು ಉಪಚಾರದಲ್ಲಿ ಗುಣಮುಖನಾಗದೆ ರಾತ್ರಿ.
8-30 ಪಿ.ಎಂ.ಕ್ಕೆ. ಮೃತ ಪಟ್ಟಿರುತ್ತಾನೆ . ಹಾಗೂ ಪಂಡಿತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಮದ
ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುವದಿಲ್ಲಾ ದಿನಾಂಕ20-11-2018 ರಂದು 6-30 ಪಿ.ಎಂ.ದ ಸುಮಾರಿಗೆ
ನನ್ನ ಗಂಡ ಅಣ್ಣರಾಯ ವಗ್ಗೆ ಇವರು ಟಂ.ಟಂ.ನಂ. ಕೆ.ಎ.32.ಸಿ.1493 ಇದರ ಮೇಲೆ ಕೆಲಸಕ್ಕೆ
ಹೋಗುತ್ತಿರುವಾಗ ಈ ಟಂ.ಟಂ. ಚಾಲಕ ಪಂಡಿತ ಕೆರಿಅಂಬಲಗಿ ಇತನು ಟಂ.ಟಂ.ನ್ನು ಅತೀವೇಗ ಮತ್ತು
ನಿಸ್ಕಾಳಜಿತನದಿಂದ ನಡೆಯಿಸಿದ್ದರಿಂದ ಟಂ.ಟಂ. ಪಲ್ಟಿಯಾಗಿ ನನ್ನ ಗಂಡ ಅಣ್ಣರಾಯನಿಗೆ ತಲೆಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ
ಶ್ರೀಮತಿ ಲಕ್ಷ್ಮೀ ಗಂಡ ಅಣ್ಣರಾಯ ವಗ್ಗೆ ಸಾ; ಪಟ್ಟಣಗ್ರಾಮ ತಾ;ಜಿ;ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment