POLICE BHAVAN KALABURAGI

POLICE BHAVAN KALABURAGI

01 November 2018

KALABURAGI DISTRICT REPORTED CRIMES

ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೇಬಿಬಾಯಿ  ಗಂಡ ದತ್ತು ಪವಾರ ಸಾ|| ಬಳೂರ್ಗಿ ರವರು ಸುಮಾರು 20 ವರ್ಷಗಳ ಹಿಂದೆ ಗೋಬ್ಬುರವಾಡಿ ತಾಂಡಾದ ದತ್ತು ತಂದೆ ಧನಸಿಂಗ ಪವಾರ ಇವರ ಜೋತೆ ಬಳೂರ್ಗಿಯಲ್ಲಿ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನಾದ ದತ್ತು ರವರು ಸೇಡಂ ನಲ್ಲಿ ಪ್ರಾಥಮಿಕ ಶಾಲೆ ಶೀಕ್ಷಕ ಅಂತ ಕೆಲಸ ಮಾಡುತ್ತಾರೆ. ನನ್ನ ಗಂಡ ನಾಲ್ಕು ವರ್ಷ ನನ್ನ ಜೋತೆಗೆ ಸರಿಯಾಗಿ ಸಂಸಾರ ಮಾಡಿ ನಂತರ ಕಿರುಕುಳ ಕೊಡಲಿಕ್ಕೆ ಪ್ರಾರಂಬ ಮಾಡಿರುತ್ತಾರೆ. ಆಗಾಗ್ಗೆ ವರದಕ್ಷೀಣೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನ್ಯಾಯ ಪಂಚಾಯತಿ ಮಾಡಿದರೂ ಕೇಳಿರುವುದಿಲ್ಲ. ನಂತರ ನಾನು ನನ್ನ ತವರು ಮನೆಯಲ್ಲಿ ಮಕ್ಕಳ ಜೋತೆಗೆ ಇದ್ದಿರುತ್ತೆನೆ . ನನ್ನ ಗಂಡನು ಸುಮಾರು 8 ವರ್ಷದ ಹಿಂದೆ ನನ್ನನ್ನು ಬಿಟ್ಟು ಇನ್ನೊಂಧು ಲಗ್ನ ಮಾಡಕೊಂಡಿರುತ್ತಾನೆ. ಇನ್ನೊಂದು ಲಗ್ನ ಮಾಡಿಕೊಂಡ ಬಗ್ಗೆ ಕೋರ್ಟಿನಲ್ಲಿ ಖಾಸಗಿ ದೂರು ಮಾಡಿರುತ್ತೇನೆ. ದಿನಾಂಕ 27-10-2018 ರಂದು ಅಫಜಲಪೂರದ ನ್ಯಾಯಾಲಯದಲ್ಲಿ ಕೇಸಿನ ಹಾಜರಿ ಇದ್ದರಿಂದ ನ್ಯಾಯಾಲಯಕ್ಕೆ ಬಂದಿರುತ್ತೇನೆ. ನಾನು ಹಾಗೂ ನನ್ನ ಮಗನಾದ ಬಸವರಾಜ ಇಬ್ಬರೂ ಕೋರ್ಟಿಗೆ ಹೋಗಿ ಹಾಜರಿ ಕೊಟ್ಟು ಹೊರಗೆ ಬರುತ್ತಿದ್ದಾಗ ಮದ್ಯಾಹ್ನ 2:35 ಗಂಟೆ ಸುಮಾರಿಗೆ ಕೋರ್ಟ ಎದುರುಗಡೆ ಸಿಸಿ ರಸ್ತೆಯ ಮೇಲೆ ನನ್ನ ಗಂಡ ಹಾಗೂ ಸುಬಾಷ ತಂದೆ ಜೋಕಲು, ಅಶೋಕ ತಂದೆ ಗುರುನಾಥ ಪವಾರ, ಲಿಂಬಾಜಿ ತಂದೆ ಧನಸಿಂಗ್ ಪವಾರ, ಗುರುನಾಥ ತಂದೆ ಧನಸಿಂಗ್ ಪವಾರ, ತಾರ್ಯಾ ತಂದೆ ಸೆವ್ಯಾ ರಾಠೋಡ, ಅಂಬ್ರುಬಾಯಿ ಗಂಡ ತಾರ್ಯಾ, ಶಾಂತಾಬಾಯಿ ಗಂಡ ದತ್ತು ದತ್ತು (ಎರಡನೆ ಹೆಂಡತ) ಇವರೆಲ್ಲರೂ ಇದ್ದಾಗ, ಸುಬಾಷ ತಂದೆ ಜೋಕಲು ಇವರು ನನ್ನ ಗಂಡನಿಗೆ ನಿನ್ನ ಹೆಂಡತಿಗೆ ನೀನು ಹೋಡಿತಿ ಇಲ್ಲಾ ನಾನು ಹೊಡಿಲಿ ಅಂತಾ ಹೇಳಿದ್ದರಿಂದ ನನ್ನ ಗಂಡನು ನನ್ನ ತಲೆಯ ಕೂದಲು ಹಿಡಿದು ನೆಲಕ್ಕೆ ತಲೆ ಬಡಿದು ಹಣೆಗೆ ರಕ್ತಗಾಯ ಪಡಿಸಿದ್ದು, ಅಶೋಕನು ನನ್ನ ಮಗನಾದ ಬಸವರಾಜನಿಗೆ ಕೈಯಿಂದ ಕಾಲಿನಿಂದ ದ್ದು ಒಳಪೆಟ್ಟು ಪಡಿಸಿರುತ್ತಾನೆ. ಅಲ್ಲಿ ನೆರೆದ ಜನರು ಜಗಳ ಬಿಡಿಸಿರುತ್ತಾರೆ. ಗುಂಡಾ ವರ್ತನೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀಮು ತಂದೆ ಮಹಾಧೇವ ರಾಠೋಡ ಸಾ|| ಮಾದಾಬಾಳ ತಾಂಡಾ ರವರು ದಿನಾಂಕ 31-10-218 ರಂದು ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿದ್ದಾಗ, ನಮ್ಮ ತಾಂಡಾದ ಬಾಜು ಹೊಲದಲ್ಲಿ ದುಡಿಯಲಿಕ್ಕೆ ಇದ್ದ ರಮೇಶ ಸಮಗಾರ ಈತನು ನಮ್ಮ ಹತ್ತಿರ ಬಂದು ನನ್ನ ಮಗ ಮಹೇಶನಿಗೆ ರಾತ್ರಿ ಕರೆಂಟ ಬರುತ್ತವೆ. ಕರೆಂಟ ಬಂದಾಗ ನೀರು ಬಿಡುತ್ತಾ ಹೊಲಕ್ಕೆ ಗೊಬ್ಬರ ಹಾಕುವುದಿದೆ ಅಫಜಲಪೂರಕ್ಕೆ ಹೋಗಿ ಗೋಬ್ಬರ ತಗೆದುಕೊಂಡು ಬರೋಣ ನನಗೆ ಮೋಟರ ಸೈಕಲ ನಡೆಸಲು ಬರುವುದಿಲ್ಲ ನೀನು ಬಾ ಎಂದು ಕೇಳಿದ ಮೇರೆಗೆ ನನ್ನ ಮಗ ಅವರ ಹಿರೊ ಹೊಂಡಾ ಪ್ಯಾಶನ್ ಪ್ರೋ ಮೋಟರ ಸೈಕಲ ನಂ ಕೆಎ-32 ವಿ-7599 ನೇದ್ದರ ಮೇಲೆ ರಮೇಶ ಸಮಗಾರ ಈತನನ್ನು ಕೂಡಿಸಿಕೊಂಡು ಅಫಜಲಪೂರಕ್ಕೆ ಹೋಗಿರುತ್ತಾನೆ. ನನ್ನ ಮಗ ಹೋದ 15-20 ನಿಮಿಷಕ್ಕೆ ನಮ್ಮ ತಾಂಡಾದ ಸುರೇಶ ತಂದೆ ಚಂದು ರಾಠೋಡ ಈತನು ನನ್ನ ಮಗ ಪರಶುರಾಮನಿಗೆ ಪೋನ ಮಾಡಿ ನಿನ್ನ ತಮ್ಮನಿಗೆ ಬಸ್ ಡೀಪೊ ಹತ್ತಿರ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ತಾಂಡಾದವರಾದ ರಮೇಶ ಜಾಧವ, ಶ್ರೀಧರ ರಾಠೋಡ ಇನ್ನು ಕೆಲವು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದನು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ರಮೇಶ ಸಮಗಾರ ಈತನಿಗೂ ಸಹ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸೇರಿದ ಜನರು ರಮೇಶ ಸಮಗಾರನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ಅಲ್ಲೆ ಇದ್ದ ಸುರೇಶ ರಾಠೋಡನಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದರೆ, ನಾನು ನನ್ನ ಟಂ ಟಂ ನಡೆಸಿಕೊಂಡು ತಾಂಡಾಕ್ಕೆ  ಬರುತ್ತಿದ್ದಾಗ  ನನ್ನ ಟಂ ಟಂ ಗೆ  ಟ್ಯಾಕ್ಟರ ಚಾಲಕನು  ಟ್ಯಾಕ್ಟರನ್ನು ಸೈಡ ಹೊಡೆದುಕೊಂಡು ಹೋಗಿ ಮುಂದೆ ಡೀಪೊ ಹತ್ತಿರ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಹೇಶನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾನೆ ಎಂದು ತಿಳಿಸಿದನು. ನನ್ನ ಮಗನಿಗೆ ಅಫಘಾತ ಪಡಿಸಿದ ಟ್ಯಾಕ್ಟರ ನಂಬರ ನೋಡಲು ಮಹೇಂದ್ರಾ ಅರ್ಜುನ ಕಂಪನಿಯ ಟ್ಯಾಕ್ಟರ ಇದ್ದು ನಂ ಕೆಎ-32 ಟಿಎ-4630 ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಶಂಕರ ತಂದೆ ಶಿವಪುತ್ರ ಕವಲಗಾ ಸಾ||ಹುಲ್ಲುರ ತಾ||ಜೆವರ್ಗಿ ರವರ ಅಣ್ಣನಾದ ಸುರೇಶ ಈತನು ಟ್ರ್ಯಾಕ್ಟರ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಇಂದು ದಿನಾಂಕ 31/10/2018 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಮನೆಯಲಿದ್ದಾಗ ನಮ್ಮ ಅಣ್ಣ ಸುರೇಶನು ತಿಳಿಸಿದ್ದೆನೆಂದರೆ ನಾನು ಹಾಗು ಮಲ್ಲಿಕಾರ್ಜುನ ಬಾಣಿ ಇಬ್ಬರು ಕಬ್ಬಿನ ಟೋಳಿ ಸಲುವಾಗಿ ಅಫಜಪೂರಕ್ಕೆ ಮಲ್ಲಿಕಾರ್ಜುನ ರವರ ಮೋಟಾರ ಸೈಕಲ್ ನಂ ಕೆಎ-32 ಇಬಿ-7838 ನೇದ್ದರ ಮೇಲೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ.     ರಾತ್ರಿ 9.00 ಗಂಟೆ ಸುಮಾರಿಗೆ ನನಗೆ ಪರಿಚಯಸ್ಥರಾದ ಘತ್ತರಗಾ ಗ್ರಾಮದ ಮಲ್ಲಿಕಾರ್ಜುನ ತಂದೆ ಗುರಪ್ಪಾ ಕುರಿ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ ಮೇಲೆ 8.30 ಪಿಎಮ್ ಗಂಟೆ ಸುಮಾರಿಗೆ ಅಫಜಲಪೂರದಿಂದ ನಮ್ಮ ಘತ್ತರಗಾ ಗ್ರಾಮಕ್ಕೆ ಹೋಗುತಿದ್ದಾಗ ಇಂಗಳಗಾ(ಕೆ) ಗ್ರಾಮ ದಾಟಿ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಸಮೀಪ ಇದ್ದಾಗ .ನನ್ನ ಮೋಟಾರ್ ಸೈಕಲ ಮುಂದೆ ಒಂದು ಮೋಟಾರ್ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಘತ್ತರಗಾ ಕಡೆಗೆ ಹಾಗು ಘತ್ತರಗಾ ಕಡೆಯಿಂದ ಅಫಜಲಪೂರ ಕಡೆಗೆ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಬಂದು  ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಮೇಲೆ ಬಿದ್ದರು ಆಗ ನಾನು ನನ್ನ ಮೋಟಾರ್ ಸೈಕಲ ನಿಲ್ಲಿಸಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆಎ-32 ಇಬಿ-7838 ನೇದ್ದರ ಹಿಂದೆ ಕುಳಿತಿದ್ದವನು ನಿಮ್ಮ ಅಣ್ಣ ಸುರೇಶ ಇರುತ್ತಾನೆ ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮೋಟಾರ್  ಸೈಕಲ  ಸವಾರನ  ಹೆಸರು  ಗೊತ್ತಿರುವುದಿಲ್ಲ  ಅವನಿಗೂ  ತಲೆಗೆ  ಮೈ  ಕೈ ಗೆ ರಕ್ತಗಾಯಗಳಾಗಿರುತ್ತವೆ ಹಾಗು ಎದುರಿನ ಮೋಟಾರ್ ಸೈಕಲ ಸವಾರನಿಗೂ ಹಿಂದೆ ಕುಳಿತಿದ್ದವನಿಗೂ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾ ರಕ್ತಗಾಯಗಳಾಗಿರುತ್ತವೆ ಸದರಿ ಘಟನೆ ಹವಳಗಾ ಸಕ್ಕರೆ ಕಾರ್ಖಾನೆ ಸಮೀಪ ಇಂಗಳಗಾ (ಕೆ) ಗ್ರಾಮದ ಮಲ್ಲಯ್ಯ ತಂದೆ ಸಿದ್ದಯ್ಯ ಹಿರೇಮಠ ರವರ ಹೊಲ ಹತ್ತಿರ ಜರುಗಿರುತ್ತದೆ ಅಂತ ತಿಳಿಸಿದನು. ನಂತರ ನಾನು ವಿಷಯವನ್ನು  ನಮ್ಮ ಕಾಕನ ಮಗನಾದ ಬಸವಂತ್ರಾಯ ಕವಲಗಾ ಹಾಗು ನಮ್ಮ ಗ್ರಾಮದ ಶ್ರೀಶೈಲ ತಂದೆ ಈರಪ್ಪಾ ಬಾಣಿ, ಭೀಮಾಶಂಕರ ತಂದೆ ಬೈಲಪ್ಪ ಸರಡಗಿ, ಅಣ್ಣರಾಯ ತಂದೆ ಬಸವರಾಜ ಪರಗೊಂಡ, ಮಾಳಪ್ಪ ತಂದೆ ಬಾಗಪ್ಪ ಇಂಗಳಗಿ  ತಿಳಿಸಿ ಎಲ್ಲರು ಕೂಡಿಕೊಂಡು ಹವಳಗಾ ಕಾರ್ಖಾನೆ ಹತ್ತಿರ ಘಟನೆ  ಸ್ಥಳಕ್ಕೆ ಹೋಗಿ ನೋಡಲಾಗಿ  ನಮ್ಮ ಅಣ್ಣ ಸುರೇಶ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಮೋಟಾರ್ ಸೈಕಲ್ ಸವಾರನಾದ ನಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ಸಿದ್ದರಾಮಪ್ಪ ಬಾಣಿ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ನೋಡಲಾಗಿ ಕಪ್ಪು ಬಣ್ಣದ ಪ್ಯಾಶನ್ ಪ್ರೋ ಮೋಟಾರ್ ಸೈಕಲ ಇದ್ದು ಅದರ ಮೇಲೆ ನೊಂದಣಿ ನಂಬರ ಇರುವುದಿಲ್ಲ ಅದರ ಚೆಸ್ಸಿ ನಂ MBLH10EWBGB0460 ಅಂತ ಇರುತ್ತದೆ ಸದರಿ ಮೋಟಾರ ಸೈಕಲ ಸವಾರ ಹಾಗು ಹಿಂದೆ ಕುಳಿತಿದ್ದವರಿಗೆ ಅವರ ಕಡೆಯವರು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋಗಿರುತ್ತಾರೆ ಪ್ಯಾಶನ್ ಪ್ರೋ ಮೊಟಾರ ಸೈಕಲ್ ಸವಾರನ ಹೆಸರು ಗೊಲ್ಲಾಳಪ್ಪ ತಂದೆ ಆನಂದ ಬಿರಾದಾರ ಅಂತ ನನಗೆ ಅಲ್ಲಿದ್ದ ಜನರು ಮಾತನಾಡುವದರಿಂದ ಗೊತ್ತಾಗಿರುತ್ತದೆ ಸದರಿ ಮೊಟಾರ ಸೈಕಲ್ ಹಿಂದೆ ಕುಳಿತವನ ಹೆಸರು ಗೊತ್ತಿರುವುದಿಲ್ಲ ನಾವು ಮ್ಮಲ್ಲಿಕಾರ್ಜುನನಿಗೆ ಅಂಬ್ಯೂಲೆನ್ಸ್ ದಲ್ಲಿ ಹಾಕಿ ಚಿಕಿತ್ಸೆ ಕುರಿತು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಕಳುಯಿಸಿ ನಮ್ಮ ಅಣ್ಣನ ಮೃತ ಸುರೇಶನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆ ಬಂದು ಶವಗಾರದಲ್ಲಿ ನಮ್ಮ ಅಣ್ಣನ ಮೃತ ದೇಹವನ್ನು ಹಾಕಿ ಠಾಣೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಫರತಾಬಾದ ಠಾಣೆ : ದಿನಾಂಕ 30/10/18 ರಂದು ರಾಷ್ಟ್ರೀಯ ಹೆದ್ದಾರಿ 218ರ ನಂದಿಕುರ ತಾಂಡಾದ ಹತ್ತಿರ ರೋಡಿನ ಮೇಲೆ ಇನ್ನೊವಾ ಕಾರ ನಂ ಕೆಎ-34 ಎನ್-0566 ನೇದ್ದರ ಚಾಲಕ  ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ.ಶ್ರೀಶೈಲ ತಂದೆ ಅಣ್ಣಪ್ಪ ಸಾಃ ಇಕ್ಕಳಕಿ ತಾಃ ಆಳಂದ ರವರ  ಮೋಟಾರ ಸೈಕಲ ನಂ ಕೆಎ-2 ಇ.ಹೆಚ್-3296 ನೇದ್ದಕ್ಕೆ ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ್ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ  ಶಿವಾನಂದ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು,, ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಬ್ಯಾಂಕಿನಲ್ಲಿ & ವಯಕ್ತಿಕ ಸಾಲ ಮಾಡಿಕೊಂಡಿದ್ದು, ಸಾಲ ಹೇಗೆ ತಿರಿಸಬೇಕು ಅಂತಾ ಚಿಂತಿಸುತ್ತಾ,  ದಿನಾಂಕ 30/10/18 ರಂದು 9.00 ಪಿ.ಎಮ ದಿಂದ ದಿನಾಂಕ 31/10/2018 ರಂದು 6.00 ಎ.ಎಮ ಅವಧಿಯಲ್ಲಿ ಗರೂರು(ಬಿ) ಗ್ರಾಮದ ಸಿಮಾಂತರದ ಹೊಲದಲ್ಲಿನ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಯಾವುದೇ ಸಂಶಯ ಇರುವುದಿಲ್ಲ  ಅಂತಾ ಶ್ರೀಮತಿ ಪಾರ್ವತಿ  ಗಂಡ ಶರಣಪ್ಪಾ ಕಾಂತಾ ಸಾಃ ಹಾವನೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: