ಪತ್ರಿಕಾ ಪ್ರಕಟಣೆ.
ಹಾಡುಹಗಲೆ ಗೃಹಿಣೆಯನ್ನು ಕೊಲೆ ಮಾಡಿ ಫರಾರಿಯಾದ ಘಾತಕನ ಭಂಧನ
ದಿನಾಂಕ. 15-11-2018 ರಂದು
ಬೆಳಗ್ಗೆ 11-00 ಎ.ಎಂ ದಿಂದ ಮದ್ಯಾನ 1-30
ಪಿ.ಎಂ.ದ ಮದ್ಯದ ಅವಧಿಯಲ್ಲಿ ನನ್ನ ಮಗಳು ಶರ್ಮಿಳಾ ಇವಳು ಒಬ್ಬಳೆ ಮನೆಯಲ್ಲಿರುವಾಗ ಯಾರೋ ದುಷ್ಕರ್ಮಿಗಳು
ಯಾವುದೋ ದುರುದ್ದೇಶದಿಂದ ಮಾರಕಾಸ್ತ್ರ್ರಗಳಿಂದ ಅವಳ ಕುತ್ತಿಗೆ ಇತರೆಕಡೆಗೆ ಹೋಡೆದು
ಭಾರಿಗಾಯಗೊಳಿಸಿ ಕೊಲೆ ಮಾಡಿಹೋಗಿರುತ್ತಾರೆ ಅಂತಾ ಶ್ರೀಮತಿ ಯಶೋಧಾ ಗಂಡ ದಿ;ಮಾಹಾದೇವ
ಸಿಂಧೆ ಸಾ;ಸರಸಂಬಾ ತಾ:ಆಳಂದ ಜಿ;ಕಲಬುರಗಿ
ಇವರು ಕೊಟ್ಟ ಇತ್ಯಾದಿ ಫಿರ್ಯಾದಿ ಮೇಲಿಂದ ಕಲಬುರಗಿ ಗ್ರಾಮೀಣ ಠಾಣೆ ಗುನ್ನೆ ನಂ. 328/2018
ಕಲಂ. 302 ಐಪಿಸಿ ಪ್ರಕರಣದಾಖಲಾಗಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ
ಕುರಿತು ಮಾನ್ಯ ಎಸ್.ಪಿ. ಸಾಹೇಬ ಕಲಬುರಗಿ ಶ್ರೀ. ಎನ್. ಶಶಿಕುಮಾರ ಮತ್ತು ಮಾನ್ಯ ಹೆಚ್ಚುವರಿ
ಎಸ್.ಪಿ. ಸಾಹೇಬ ಕಲಬುರಗಿ ಶ್ರೀ. ಜಯಪ್ರಕಾಶ ಹಾಗೂ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮೀಣ
ಉಪವಿಭಾಗ ಕಲಬುರಗಿ ಶ್ರೀ.
ಎಸ್.ಎಸ್.ಹುಲ್ಲುರ ರವರ ಮಾರ್ಗ ದರ್ಶನದಲ್ಲಿ ಪ್ರಕರಣದ
ತನಿಖಾಧಿಕಾರಿಯಾದ ಶ್ರೀ. ರಾಘವೇಂದ್ರ ಸಿ.ಪಿ.ಐ.ಗ್ರಾಮೀಣ ವೃತ್ತ ಕಲಬುರಗಿ ಇವರ ನೇತೃತ್ವದಲ್ಲಿ
ಶ್ರೀ ಚಂದ್ರಶೇಖರ ತಿಗಡಿ ಪಿ.ಎಸ್.ಐ. ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಹುಸೇನ
ಬಾಷಾ ,ಕುಪೆಂದ್ರ,
ಎಂ.ಎ.ಬೇಗ, ದತ್ತಾತ್ರೇಯಾ, ಶಿವಶರಣಪ್ಪಾ, ಪ್ರಕಾಶ
,ಬಂಡೆಪ್ಪಾ, ಕೇಶುರಾಯ,
ಅಂಬಾಜಿ ,ಶರಣಗೌಡ , ರಾಜಕುಮಾರ
ಗಂಧೆ, ಕುಷಣ್ಣಾ ಇವರುಗಳನ್ನೊಳಗೊಂಡ ತಂಡವನ್ನು ರಚನೆ
ಮಾಡಿ ಸದರಿ ಕೊಲೆ ಆರೋಪಿ ಪತ್ತೆ ಬಗ್ಗೆ ಸೂಕ್ಷ್ಮ
ಬಾತ್ಮಿಯನ್ನು ಸಂಗ್ರಹಣೆ ಮಾಡಿ ಆರೋಪಿತನಾದ ಕೃಷ್ಣಾ ತಂದೆ ಲಾಲಪ್ಪ ಗಾಜರೆ, ಸಾ:
ಶಿವಾಜಿ ನಗರ, ಡೋರ ಗಲ್ಲಿ,
ಕಲಬುರಗಿ ಇತನಿಗೆ ಇಂದು ದಿನಾಂಕ. 17-11-2018
ರಂದು ದಸ್ತಗೀರ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ಕೊಲೆಯಾದ ಶರ್ಮಿಳಾ ಗಂಡನ ಅಕ್ಕನ ಮಗನಾಗಿದ್ದು ಅವಳ ತಂಗಿಪೂಜಾ ಇವಳಿಗೆ ಸಂಜಯಕುಮಾರನಿಗೆ
ಕೊಟ್ಟು ಮದುವೆ ಮಾಡಿಲು ಮಾತುಕತೆಯಗಿದ್ದು ಸಂಜಯಕುಮಾರ ಇತನು ಸರಸಂಬಾ ಗ್ರಾಮದ ಶರ್ಮಿಳಾ ಇವಳಿಗೆ
ಮದುವೆಯಾಗುತ್ತೇನೆ ಅಂತಾ ಹೇಳಿ ನಮ್ಮ ತಂಗಿಗೆ
ಮದುವೆಯಾಗಲು ನಿರಾಕರಿಸಿರುತ್ತಾನೆ. ಅದೆ ವಿಚಾರದಲ್ಲಿ ಪೂಜಾ ಇವಳು ಅನಾರೋಗ್ಯದಿಂದ
ಬಳಲುತಿದ್ದರಿಂದ ಮೂಗಿನಿಂದ, ಹಲ್ಲಿನಿಂದ ರಕ್ತ ಬಂದಿದ್ದು ಅವಳನ್ನು ಸೋಲಾಪೂರ ಯಶೋಧರ
ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಶರ್ಮಿಳಾ ಇವಳು ಆಸ್ಪತ್ರೆಗೆ ಬಂದು ನಮ್ಮ ತಂಗಿಗೆ ಮಾತನಾಡಿಸಿದ
ಅರ್ಧ ಗಂಟೆಯಲ್ಲಿ ಪೂಜಾ ಮೃತ ಪಟ್ಟಿದ್ದು ಅವಳಿಗೆ ಶರ್ಮಿಳಾಳೆ ಭಾನಮತಿ ಮಾಡಿಸಿದ್ದರಿಂದ ಮೃತ
ಪಟ್ಟಿರಬಹುದೆಂದು ಎಂಬ ದ್ವೇಷ ಮನೋಭಾವನೆಯಿಂದ ಶರ್ಮಿಳಾನ್ನು ಕೊಲೆ ಮಾಡಲು ಪ್ಲ್ಯಾನ
ಮಾಡಿರುತ್ತೇನೆ ಈ ಮೇಲಿನ ದ್ವéಷ ಮನೋಭಾವನೆಯಿಂದ ದಿನಾಂಕ. 15-11-2018
ರಂದು 11-30 ಗಂಟೆಗೆ ಸುಮಾರಿಗೆ ನನ್ನ ಗೆಳೆಯ ವಿಕ್ಕಿ ಧಡಕೆ ಇತನೊಂದಿಗೆ ಮೋಟಾರ ಸೈಕಲ್ ಮೇಲೆ ಬಂದು ರಿಂಗರೋಡಿನ
ಮುತ್ಯಾನ ಬಬಲಾದ ಮಠದ ಹತ್ತಿರ ಮೋಟಾರ ಸೈಕಲ್ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ರಾಮನಗರ
ದಲ್ಲಿರುವ ಶರ್ಮಿಳಾ ಇವಳ ಮನೆಗೆ ನಡೆದುಕೊಂಡು ಹೋಗಿ ಮನೆ ಹೊರಗಡೆ ವಿಕ್ಕಿ ಇತನಿಗೆ ನಿಲ್ಲಿಸಿ
ತಾನೊಬ್ಬನೆ ಮನೆಯೋಳಗೆ ಹೋಗಿ ನೋಡಲಾಗಿ ಶರ್ಮಿಳಾ ಇವಳು ಒಬ್ಬಳೆ ಮನೆಯಲ್ಲಿರುವದನ್ನು ಗಮನಿಸಿ ಇಂತಹ ಸಮಯ ಸಿಗುವದಿಲ್ಲಾ ಅಂತಾ ಅಂದುಕೊಂಡು
ಮನೆಯಲ್ಲಿ ಟಿ.ವಿಯ ಹತ್ತಿರ ಇದ್ದ ಒಂದು ಚಾಕು ತೆಗೆದುಕೊಂಡು ಅವಳ ಕುತಿಗೆ, ಹೊಟ್ಟೆಯಲ್ಲಿ
ಹೊಡೆದು ಕೊಲೆ ಮಾಡಿ ಅವಳ ಮೈಮೇಲೆ ಇದ್ದ ತಾಳಿ ಸರ, ಬಂಗಾರದ
ಮತ್ತು ಬೆಳ್ಳಿಯ ಜೈನು , ಕಿವಿಯೊಲೆ ಮತ್ತು ಮೋಬಾಯಿಲ್ ಹಾಗೂ ಹಣ ತೆಗೆದುಕೊಂಡು
ಮನೆಯಲ್ಲಿ ಸಾಮಾನುಗಳನ್ನು ಚಲ್ಲಾಪಲ್ಲಿ ಮಾಡಿದ್ದು ಬೇರೆ ಯಾರಾದರೂ ಜನರು ಮನೆಯಲ್ಲಿ ಬಂದರೆ ಶರ್ಮಿಳಾ
ಇವಳಿಗೆ ಕೊಲೆ ಮಾಡಿ ಹಣ , ಬಂಗಾರ ದೋಚಿಕೊಂಡು ಹೋಗಿರುತ್ತಾರೆ ಅನ್ನುವ ರೀತಿಯಲ್ಲಿ
ಮಾಡಿರುತ್ತೇನೆ . ಅಂತಾ ತಿಳಿಸಿರುತ್ತಾನೆ. ಮತ್ತು ಕೃತ್ಯಕ್ಕೆ ಉಪಯೋಗಿಸಿದ ಚಾಕು ಹಾಗೂ ಶರ್ಮಿಳಾ
ಮೈಮೇಲೆ ಇದ್ದ ಬಂಗಾರದ ಮತ್ತು ಬೆಳ್ಳಿ ಆಭರಣ ಹಾಗೂ ಮೋಬಾಯಿಲನ್ನು ಜಪ್ತಪಡಿಸಿಕೊಂಡಿದ್ದು
ಇರುತ್ತದೆ. ಸದರಿ ಪ್ರಕರಣವನ್ನು ಭೇದಿಸುವಲ್ಲಿ
ಸಫಲರಾದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.
No comments:
Post a Comment