POLICE BHAVAN KALABURAGI

POLICE BHAVAN KALABURAGI

26 October 2018

KALABURAGI DISTRICT REPORTED CRIMES

ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ವೆಂಕಟೇಶ ತಂದೆ ಬಸವರಾಜ ತಲ್ಕಾಪಲ್ಲಿ ಸಾ|| ಮುನಕನಪಲ್ಲಿ ಗ್ರಾಮ ತಾ|| ಸೇಡಂ, ರವರ ತಂದೆಯಾದ ಬಸವರಾಜ ಇವರು ಈಗ 7-8 ವರ್ಷಗಳ ಹಿಂದೆ ಬೆಂಗಳೂರಿನಿಂದ ನಮ್ಮೂರಿಗೆ ಬಂದು ನಮ್ಮೂರ ಊರ ಹೊರಗಡೆ ನಮ್ಮ ಹೊಲದಲ್ಲಿ ಒಂದು ಮನೆಯ ಕಟ್ಟಿಸಿ, ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ನಾನು ನಮ್ಮ ತಾಯಿಯಾದ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಹಾಗು ತಂಗಿ ನಾವು 04 ಜನರು ಬೆಂಗಳೂರಿನಲ್ಲಿ ಇದ್ದೇವು. ನನಗೆ ಈಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ತೆಲಂಗಾಣಾದ ಪರಗಿ ಹತ್ತಿರ ಇರುವ ರೂಪಕಾನಪೇಟ ಗ್ರಾಮದ ಸವಿತಾ ತಂದೆ ಕಿಷ್ಟಪ್ಪ ಇವರೊಂದಿಗೆ ಮದುವೆ ಮಾಡಿದ್ದು, ನಾನು ನನ್ನ ಹೆಂಡತಿಯೊಂದಿಗೆ ನಮ್ಮೂರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದೇನು. ನಮ್ಮ ತಾಯಿ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಅಶೋಕ ನಮ್ಮ ತಂಗಿ ಸವಿತಾ ಇವರು ತಲಘಟಪೂರ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುತ್ತಾರೆ. ಇಲ್ಲಿ ನಮ್ಮೂರಲ್ಲಿ ನಾನು ಹಾಗು ನನ್ನ ಹೆಂಡತಿ ಸವಿತಾ ಮತ್ತು ನಮ್ಮ ತಂದೆ ಬಸವರಾಜ ಹಾಗು ತಂದೆಯ ತಾಯಿ(ಅಜ್ಜಿ) ಬಾಲಮ್ಮ ಗಂಡ ಆಶಪ್ಪ ನಾವು 4 ಜನರು ಇರುತ್ತೇವೆ. ದಿನಾಂಕ: 24-10-2018 ರಂದು ರಾತ್ರಿ ನಾನು ನಮ್ಮ ತಂದೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ನಾನು ಹಾಗು ನನ್ನ ಹೆಂಡತಿಯಾದ ಸವಿತಾ ಇಬ್ಬರು ಮನೆಯೋಳಗೆ ಬೇಡ ರೂಮನಲ್ಲಿ ಮಲಗಿಕೊಂಡಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ತಂದೆ ಹಣಮಂತು ಮುನಕನಪಲ್ಲಿ ಇವರಿಬ್ಬರು ನಮ್ಮ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದು, ನಮ್ಮ ಬಂದೆ ಬಸವರಾಜ ತಂದೆ ಆಶಪ್ಪ ಇವರು ನಮ್ಮ ಮನೆಯ ಮುಂದುಗಡೆ ಮಂಚದ ಮೇಲೆ ಮಲಗಿಕೊಂಡಿದ್ದರು, ನಾವು ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ದಿನಾಂಕ: 25-10-2018 ರಂದು 1200 ಗಂಟೆ ಸುಮಾರಿಗೆ ಹೊರಗಡೆ ನಮ್ಮ ತಂದೆ ಚೀರಿದ ಸಪ್ಪಳ ಕೇಳಿಬಂದು ಆಗ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದ ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನು ಮನೆಯ ಬಾಗಿಲು ತೆರೆದಾಗ, ಹೊರಗಡೆಯಿಂದ ಯಾರೋ 3 ಜನ ಕೈಯಲ್ಲಿ ಬಡಿಗೆ ಹಿಡಿದುಕೊಂಡು, ತಲೆಗೆ ಹಾಗು ಮುಖಕ್ಕೆ ಟೋಪಿ ಹಾಕಿಕೊಂಡು, ಮನೆಯೋಳಗೆ ಬಂದು, ನಮಗೆ ಏನು ಮಾತನಾಡದೆ, ಓಮ್ಮೇಲೆ ನಮ್ಮ ತಮ್ಮನಾದ ರವಿ ಇತನಿಗೆ ಬಡಿಗೆಯಿಂದ ಹೊಡೆಯ ಹತ್ತಿದರು, ಆಗ ನಾನು ಮತ್ತು ನಮ್ಮ ಅಜ್ಜಿಯಾದ ಬಾಲಮ್ಮ ಬಿಡಿಸಲು ಹೋದಾಗ ಈ 3  ಜನರು ನನಗು ಹಾಗು ನಮ್ಮ ಅಜ್ಜಿಯಾದ ಬಾಲಮ್ಮ ಇವರಿಗೆ ಕಟ್ಟಿಗೆಯಿಂದ ಹೊಡೆದು, ಅವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರ ಸಣ್ಣ ಗುಂಡಿನ ಸರವನ್ನು ಕಿತ್ತಿಕೊಂಡಿದ್ದು, ಇದು ಅರ್ದ ತುಂಡಾಗಿ ಮನೆಯಲ್ಲಿ ಬಿದಿದ್ದು ಇರುತ್ತದೆ. ನಂತರ ಇವರು ಮನೆಯಲ್ಲಿದ್ದ ನನ್ನ ಹೆಂಡತಿಯಾದ ಸವಿತಾ ಇವಳ ಹತ್ತಿರ ಹೋಗಿ ನನ್ನ 07 ತಿಂಗಳ ಗಂಡು ಮಗುವಿಗೆ ಕಸಿದುಕೊಳ್ಳಲು ಹೋದಾಗ, ನನ್ನ ಹೆಂಡತಿಯು ನನ್ನ ಮಗುವಿಗೆ ಏನು ಮಾಡಬೇಡಿರಿ ಕಾಲು ಬಿಳುತ್ತೇನೆ ಅಂತಾ ಬೇಡಿಕೊಂಡಳು, ಆಗ ನಾವು ಚೀರಾಡುತ್ತಿದ್ದಾಗ, ಸದರಿಯವರು ಮನೆಯಿಂದ ಹೊರೆ ಬಂದರು, ನಂತರ ನಾವು ಹೊರಗಡೆ ಬಂದು ನೋಡಲಾಗಿ ಅವರ ಜೋತೆಯಲ್ಲಿ ಬಂದಿದ್ದ ಇನ್ನು ಇಬ್ಬರು ವ್ಯಕ್ತಿಗಳು ಹೊರಗಡೆಯಿಂದ ಯಾರು ಬರದಂತೆ ನೋಡುತ್ತಾ ನಿಂತಿದ್ದರು. ನಾನು ಹೇದರಿಕೊಂಡು ಮನೆಯಿಂದ ಊರೋಳಗೆ ಓಡಿ ಹೋಗಿ ಅಲ್ಲೇ ಮನೆಯ ಸಮೀಪದಲ್ಲಿರುವ ದಯಾನಂದ ಸ್ವಾಮಿ, ರಾಜಾ ಅಹೇಮದ್ ತಂದೆ ಲಾಲ ಅಹೇಮದ್ ಇತರರಿಗೆ ಕರೆದುಕೊಂಡು ಬಂದಿದ್ದು, ಅಷ್ಟರಲ್ಲಿ ಅವರು ಮನೆಯಿಂದ ಓಡಿಹೋಗಿದ್ದು ಇರುತ್ತದೆ. ನಂತರ ನೋಡಲಾಗಿ ಮನೆಯ ಹೊರಗಡೆ ಮಲಗಿದ ನಮ್ಮ ತಂದೆ ಬಸವರಾಜ ಇತನಿಗೆ ಬಲಗಡೆ ಕಿವಿಯ ಹತ್ತಿರ ರಕ್ತಗಾಯವಾಗಿ ಇವರು ಮಲಗಿದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ನನಗೆ ಸದರಿಯವರು ಕಟ್ಟಿಗೆಯಿಂದ ಹೊಡದಿದ್ದರಿಂದ ನನ್ನ ತಲೆಗೆ ಮುಂದುಗಡೆ ಹಣೆಗೆ ಹಾಗು ಸೊಂಟಕ್ಕೆ, ಎಡಗೈ ಮೊಣಕೈ ಹತ್ತಿರ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಇವಳಿಗೆ ಹಣೆಗೆ ಹಾಗು ಕಣ್ಣಿಗೆ ಹಾಗು ಮುಖಕ್ಕೆ ಇತರೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನ ಮುಖಕ್ಕೆ, ಕಣ್ಣಿನ ಹತ್ತಿರ ಹಾಗು ಇತರೆ ಕಟ್ಟಿಗೆಯಿಂದ ಹೊಡೆದು ಭಾರಿಗಾಯ ಪಡಿಸಿದ್ದು ಇದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿಯ ಮೊರೆ ಕಾಂಪ್ಲೇಕ್ಸ ಹತ್ತಿರ ಇರುವ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೊರೆ ಕಾಂಪ್ಲೇಕ್ಸ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಮೊರೆ ಕಾಂಪ್ಲೇಕ್ಸ ಮುಂದಿ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯರು ತಮ್ಮ ಹೆಸರು 1. ಯಲ್ಲಾಲಿಂಗ ತಂದೆ ಸುಭಾಷ ಚಿನ್ನಪಳ್ಳಿ ಸಾ: ಗಂಗಾನಗರ ಹನುಮಾನ ದೇವರ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 650/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಬಾಬು ತಂದೆ ದತ್ತು ಗಾಣಗಾಪೂರ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 550/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು ಒಟ್ಟು ನಗದು ಹಣ 1200/- ರೂಪಾಯಿ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ದ್ವಿಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ನಾಗರಾಜ ತಂದೆ ಹಣಮಂತಪ್ಪ ಹಡಪದ ಮು:ಕಮಲಾಪೂರ ತಾ:ಜಿ:ಕಲಬುರಗಿ ರವರು ದಿನಾಂಕ:22.10.2018 ರಂದು ಮದ್ಯಾಹ್ನದ ವೇಳೆಯಲ್ಲಿ ಕಮಲಾಪೂರನಲ್ಲಿರುವ ಮಾಣಿಕೇಶ್ವರ ಶೋರೂಮನಿಂದ ಹೋಸದಾಗಿ ಕಪ್ಪು ಬಣ್ಣದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರಸೈಕಲ ನೇದ್ದು ಖರಿದಿ ಮಾಡಿದ್ದು. ಅದರ ಟಿ.ಪಿ. ನಂಬರ- KA/32TMP/2018/10299 ಮತ್ತು ಅದರ ಇಂಜಿನ ನಂಬರ HA10AGJHH11308 ಹಾಗೂ ಅದರ ಚೆಸ್ಸಿ ನಂಬರ- MBLHAR086JHH03621 ಇದ್ದು. ಇನ್ನೂ ನನ್ನ ಹೆಸರಿಗೆ ಕಾಗದ ಪತ್ರಗಳು ನೊಂದಣಿ ಆಗಿರುವುದಿಲ್ಲ. ಹೀಗಿದ್ದು ದಿನಾಂಕ:22-10-2018 ರಂದು ಸಾಯಂಕಾಲ 07.15 ಗಂಟೆಯ ಸೂಮಾರಿಗೆ ನಾನು ಮೇಲ್ಕಂಡ ನನ್ನ ಮೋಟರ ಸೈಕಲ ಮೇಲೆ ಕಮಲಾಪೂರನ ಕೃಷ್ಣಾ ಗ್ರಾಮೀಣ ಬ್ಯಾಂಕನ ಪಕ್ಕದಲ್ಲಿರುವ ಬಸವೇಶ್ವರ ಫೈನಾನ್ಸಲ್ಲಿ ಕೆಲಸ ಮಾಡುತ್ತಿರುವ ನನ್ನ ಹಿರಿಯ ಮಗನಾದ ಆಕಾಶ ಹಡಪದ ಈತನಿಗೆ ಭೇಟಿಯಾಗಲು ಹೋಗಿದ್ದು. ಮೋಟರ ಸೈಕಲನ್ನು ಫೈನಾನ್ಸನ ಹೋರಗಡೆ ನಿಲ್ಲಿಸಿ ನಾನು ಫೈನಾನ್ಸನ ಒಳಗಡೆ ನನ್ನ ಮಗನಿಗೆ ಭೇಟಿಯಾಗಲು ಹೋಗಿ ವಾಪಸ್ಸ ಅಂದೇ 07.30 ಪಿ.ಎಮ್.ಕ್ಕೆ ನಾನು ಫೈನಾನ್ಸ ಒಳಗಿನಿಂದ ಹೋರಗಡೆ ಬಂದು ನೋಡಲು ಮೇಲ್ಕಂಡ ನನ್ನ ಮೋಟರೆಸೈಕಲ ನಾನು ಇಟ್ಟ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಆಕಾಶ ಹಡಪದ ಮತ್ತು ಶಿವಕುಮಾರ ತಂದೆ ಗುಂಡಪ್ಪ ಟೆಂಗಳಿ ಇವರಿಗೆ ತಿಳಿಸಿದು. ನಂತರ ನಾವೇಲ್ಲರೂ ಕೂಡಿ ಅಂದಿನಿಂದ ಇಂದಿನ ವರೆಗೆ ಕಮಲಾಪೂರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಗಿ ಮೇಲ್ಕಂಡ ನನ್ನ ಮೋಟರ ಸೈಕಲನ್ನು ಹುಡುಕಾಡಿದರು ನನ್ನ ಮೋಟರಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: