ಕಳವು
ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬುತುಲ್ ಫಾತಿಮಾ ಗಂಡ ಸೈಯದ ಜಮೀಲ್ ಅಹ್ಮದ ಸಾ:ಆರೀಫ ಕಾಲೋನಿ
ಕಲಬುರಗಿ ರವರ ಗಂಡನಾದ ಸೈಯದ ಜಮೀಲ್ ಇವರು ಸೌಧಿ ಅರಬಿಯಲ್ಲಿ ಕೆಲಸ ಮಾಡುತ್ತಿದ್ದು ನಾನು, ನಮ್ಮ ತಂದೆ ಮತ್ತು ನನ್ನ ನಾಲ್ಕು (4) ಜನ ಮಕ್ಕಳು ಇರುತ್ತೆವೆ
ನನ್ನ ತಾಯಿಯವರ ಮನೆಯ ಎಮ್.ಎಸ್.ಕೆ. ಮೀಲ್ ಬಡವಾವಣೆಯ ಮಹ್ಮದಿ ಮಜ್ಜಿದ ಹತ್ತಿರ ಇದ್ದು ನಾನು
ಆಗಾಗ ನನ್ನ ತಾಯಿ ಮನೆಗೆ ಹೋಗಿ ಬರುವದು ಮಾಡುತ್ತಾ ಇರುತ್ತೆನೆ.ದಿನಾಂಕ 20.09.2018 ರಂದು ಮೊಹರಮ ಹಬ್ಬ ಇದ್ದ ಪ್ರಯುಕ್ತ ನಾನು, ನನ್ನ
ಮಕ್ಕಳು ಹಾಗೂ ನಮ್ಮ ತಂದೆ ಕೂಡಿಕೊಂಡು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ
ಮನೆಯ ಬಾಗಿಲಕ್ಕೆ ಕೀಲಿ ಹಾಕಿ ನಮ್ಮ ತಾಯಿಯ ಮನೆಗೆ ಹೋಗಿ ನಮ್ಮ ತಾಯಿ ಮನೆಯಲ್ಲಿ ರಾತ್ರಿ
ಉಳಿದುಕೊಂಡಿದ್ದು ಇರುತ್ತದೆ. ಇಂದು ದಿನಾಂಕ 21.09.2018 ರಂದು
ಬೆಳ್ಳಿಗ್ಗೆ 11:30 ಗಂಟೆಗೆ ನಾನು ನನ್ನ ಮನೆಗೆ ಬಂದು ನೋಡಲು ನಮ್ಮ ಮನೆಗೆ ಬಂದು ಮನೆಯ ಗೇಟ ಕೀಲಿ
ತೆರೆದು ಒಳಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರದ ಬಾಗೀಲ ಕೊಂಡಿ ಕತ್ತರಿಸಿದ್ದು, ಗಾಬರಿಗೊಂಡು ನಾನು ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಅಲಮಾರಿಗಳು ತೆರೆದಿದ್ದು
ಅದರಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ಆಗ ನಾನು
ಅಲಮಾರಿಯಲ್ಲಿ ಪರಿಶಿಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು
ಮತ್ತು ನಗದು ಹಣ 3,97,000/- ರೂ
ಕಿಮ್ಮತ್ತಿನವುಘಳನ್ನು . ದಿನಾಂಕ 20.09.2018 ರಂದು ಸಾಯಂಕಾಲ 4 ಗಂಟೆಯಿಂದ ದಿನಾಂಕ 21.09.2018 ರಂದು ಬೆಳ್ಳಿಗ್ಗೆ 11:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ
ಪ್ರವೇಶ ಮಾಡಿ ಮೇಲೆ ನಮೂದಿಸಿದ ಬಂಗಾರ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳತನ
ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ
ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವೀಣಾ ಗಂಡ ಬಾಲಾಜಿ ಘನಾತೆ ಸಾ: ವಿಶ್ವರಾಧ್ಯ ಕಾಲೋನಿ ಕಲಬುರಗಿ ರವರು ವಿಶ್ವರಾಧ್ಯ ಕಾಲೋನಿಯ ಶಟ್ಟಿ ಕಾಂಪ್ಲೇಕ್ಸ ಪಕ್ಕದಲ್ಲಿ ನಮ್ಮ ಸ್ವಂತ ಮನೆ ಇದ್ದು
ನಮ್ಮ ಮನೆಯ ಕೆಳಗೆ ಶ್ರೀನಿವಾಸ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು
ನನ್ನ ಗಂಡನೆ ನೋಡಿಕೊಂಡು ಬಂದಿರುತ್ತಾರೆ. ನಮ್ಮ ಅಂಗಡಿಯ ಮೇಲಿನ ಅಂತಸ್ಥಿನಲ್ಲಿ ನಾವು ಮನೆ
ಮಾಡಿಕೊಂಡು ವಾಸವಾಗಿರುತ್ತೆವೆ. ನನ್ನ ಗಂಡನಾದ ಶ್ರೀ ಬಾಲಾಜಿ ತಂದೆ ಅಂಬಾಜಿರಾವ ಘನಾತೆ ರವರು ಈಗ
ಸುಮಾರು ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬಂದಿದ್ದು ವ್ಯಾಪಾರ ಸಂಬಂದ ಬ್ಯಾಂಕಿನಲ್ಲಿ
ಸಾಲ ಮತ್ತು ನನ್ನ ಗಂಡನಿಗೆ ಪರಿಚಯಸ್ಥರಲ್ಲಿ ವ್ಯಾಪಾರದ ಸಂಬಂದ ಸಾಲ ಮಾಡಿದ್ದು ಇರುತ್ತದೆ. ಹಣ
ಮರಳಿಸುವ ಕುರಿತು ಯಾರು ಕೂಡಾ ನನ್ನ ಗಂಡನಿಗೆ ಒತ್ತಾಯ ಮಾಡಿರುವದಿಲ್ಲ. ನನ್ನ ಗಂಡನು ಸಾಲದ
ವಿಷಯವಾಗಿ ಪ್ರತಿ ದಿವಸ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು. ನಾನು, ನಮ್ಮ ಮಾವ ಹಾಗೂ ನಮ್ಮ ಮನೆಯವರು ನನ್ನ ಗಂಡನಿಗೆ ಮಧ್ಯ ಸೇವನೆ ಮಾಡದಂತೆ ತಿಳಿ
ಹೇಳಿದರು ಕುಡಾ ನನ್ನ ಗಂಡ ಮಧ್ಯ ಸೇವೆನೆ ಮಾಡುತ್ತಾ ಬಂದಿದ್ದು ಇರುತ್ತದೆ. ಇತಿತ್ತಲಾಗಿ ಹಗಲು
ಹೊತ್ತಿನಲ್ಲಿ ಕೂಡಾ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಇರುತ್ತದೆ. ಮೊನ್ನೆ ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಅಂಗಡಿಯ
ಪಕ್ಕದಲ್ಲಿರುವ ಶಟ್ಟಿ ಕಾಂಪ್ಲೇಕ್ಸ ಹತ್ತಿರ ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿದ್ದು
ಬೆಳ್ಳಿಗ್ಗೆ 10:30 ಗಂಟೆಯಾದರು ನನ್ನ ಗಂಡನು ಬರದೆ ಇದ್ದಾಗ ನಾನು ನನ್ನ ಗಂಡನ ಮೊನಂ 8310968774, 9008014351 ನೇದ್ದಕ್ಕೆ ಕರೆ ಮಾಡಿದ್ದು ಆಗ ನನ್ನ ಗಂಡನು ಕರೆ ಸ್ವಿಕರಿಸಿ ಮನೆಗೆ ಬರುತ್ತೆನೆ
ಅಂತ ಹೇಳಿದ್ದು ಅದೆ ರೀತಿ ನಾನು ಆಗಾಗ ನನ್ನ ಗಂಡನಿಗೆ ಪೋನ ಮಾಡಿದ್ದು ಮನೆಗೆ ಬರುತ್ತೆನೆ ಅಂತ
ಹೇಳುತ್ತಾ ಬಂದಿದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮತ್ತೆ ಪೋನ ಮಾಡಿದಾಗ ನನ್ನ ಗಂಡ ಮನೆಗೆ ಬರುತ್ತಾ ಇದ್ದೆನೆ
ಅಂತ ಹೇಳಿದ್ದು ನಂತರ ಅವರ ಪೋನಿಗೆ ಕರೆ ಮಾಡಿದಾಗ ಸ್ವಿಚ್ ಆಪ್ ಅಂತ ಬಂದಿದ್ದು ಇರುತ್ತದೆ.
ಸಾಯಂಕಾಲ 5 ಗಂಟೆಯಾದರು ನನ್ನ ಗಂಡನು ಮನೆಗೆ ಬರದೆ ಇದ್ದಾಗ ನಾನು ನಮ್ಮ ಮಾವ ಮತ್ತು
ಮನೆಯವರೆಲ್ಲರು ಕೂಡಿಕೊಂಡು ನಮಗೆ ಪರಿಚಯಸ್ಥರಲ್ಲಿ ವಿಚರಿಸಿದ್ದು ಮತ್ತು ಕಲಬುರಗಿ ನಗರದ ಎಲ್ಲಾ
ಕಡೆಗೆ ಹುಡುಕಾಡಿದ್ದು ನನ್ನ ಗಂಡನು ಪತ್ತೆಯಾಗಿರುವದಿಲ್ಲ ಮತ್ತು ಇಲ್ಲಿಯವರೆಗೆ ನನ್ನ ಗಂಡನು
ಮರಳಿ ನಮ್ಮ ಮನೆಗೆ ಬಂದಿರುವದಿಲ್ಲ. ನಾನು ನನ್ನ ಗಂಡನ ಮೊಬೈಲ ನಂಬರಗಳಿಗೆ ಪದೆ ಪದೆ ಕರೆ
ಮಾಡುತ್ತಿದ್ದು ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿದೆ. ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯಿಂದ ನನ್ನ ಗಂಡನು ಕಾಣೆಯಾಗಿದ್ದು
ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ನನ್ನ ಗಂಡನ ಚಹರಾ ಪಟ್ಟಿ ಈ
ಕೆಳಗಿನಂತಿರುತ್ತದೆ.
ಅಸ್ವಾಭಾವಿಕ
ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:10/08/2018 ರಂದು ಜೇವರ್ಗಿ ತಾಲ್ಲೂಕಿನ ಮುತ್ತಕೋಡ ತಾಂಡಾದಲ್ಲಿಯ ನವಜಾತ
ಹೆಣ್ಣುಮಗು ನಮ್ಮ ಶಿಶುಗೃಹದಲ್ಲಿ ಪಾಲನೆ ಪೋಷಣೆಗಾಗಿ ಸೇರ್ಪಡೆಯಾಗಿದ್ದು ಆ ಮಗುವಿಗೆ ಶ್ರಾವ್ಯ ಅಂತಾ
ಹೆಸರಿಟ್ಟಿದ್ದು ಸದ್ಯ ಆ ಮಗುವಿಗೆ 40 ದಿವಸವಾಗಿದ್ದು ದಿನಾಂಕ:10/09/2018 ರಂದು ಮಗುವಿಗೆ ಆರೋಗ್ಯ
ಸರಿಯಿಲ್ಲದ ಕಾರಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಸದರಿ ಮಗು ಇಂದು
ದಿನಾಂಕ:21/09/2018 ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ವೈದ್ಯರ ಸಲಹೆ ಮೇರೆಗೆ ಕೀಡ್ಸ
ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮಗು 4.30 ಪಿ.ಎಂ ಸುಮಾರಿಗೆ ಮೃತ ಪಟ್ಟಿದ್ದು
ಸದರಿ ಮಗುವಿನ ಮೃತದೇಹ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ಕಾರಣ ಶ್ರಾವ್ಯ 40 ದಿವಸದ
ಹೆಣ್ಣುಮಗು ಅನಾರೋಗ್ಯದಿಂದ ಬಳಲಿ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತದೆ ಅಂತಾ ದ್ದು ಈ ಬಗ್ಗೆ
ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಲಕರಣಿ ಮಠ
ಉ:ಅಮೂಲ್ಯ ಶಿಶುಗೃಹದ ಅಧೀಕ್ಷಕರು ಸಾ:ವಿಜಯನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ. 23-7-2018 ರಂದು
ಮದ್ಯಾನ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇಬ್ಬರು ಕೂಡಿಕೊಂಡು ಮದ್ಯಾನ 1-00 ಗಂಟೆಯ
ಸುಮಾರಿಗೆ ನಾವು ಕಣ್ಣಿ ಮಾರ್ಕಟನಲ್ಲಿ ನಮ್ಮ ಬ್ಯಾಗಗಳನ್ನು ಇಟ್ಟು ಹೀರಾಪೂರದಲ್ಲಿರುವ ನಮ್ಮ
ಸಮ್ಮಂದಿಕರಿಗೆ ಮಾತಾಡಿಸಿಕೊಂಡು ಬರಲು ನಾವಿಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೆಟದಿಂದ
ಹೀರಾಪೂರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾನ 1-40 ಗಂಟೆಯ ಸುಮಾರಿಗೆ ಹೀರಾಪೂರ
ಸರ್ಕಲದಲ್ಲಿ ರೋಡ ಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳಗೆ ನಮ್ಮ ಹಿಂದಿನಿಂದ ಅಂದರೆ
ಬಸ್ಸ ಸ್ಟ್ಯಾಂಡ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ
ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನಿಂದ
ನಡೆಯಿಸಿಕೊಂಡು ಬಂದು ನನ್ನ ಪಕ್ಕದಲ್ಲಿ ಬರುತಿದ್ದ ನನ್ನ ಹೆಂಡತಿಗೆ ಡಿಕ್ಕಿ ಹೊಡೆದಾಗ ನನ್ನ
ಹೆಂಡತಿ ಜೋರಾಗಿ ಕೆಳಗೆ ಬಿದ್ದಳು ಆಗ ಅವಳ ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ಅಲಲ್ಲಿ ತರಚಿದ
ಗಾಯಗಳಾಗಿದ್ದು, ಆಗ ಸದರಿ ಬಸ್ಸ ಚಾಲಕ ಬಸವರಾಜ
ತಂದೆ ಪ್ರಭು ಶಟ್ಟಿ ಡಿಪೂ ನಂ.1 ಬೀದರ ಹಾಗೂ ಕಂಡಕ್ಟರ ಲಕ್ಷ್ಮಣ ತಂದೆ ವೈನಾಥ ವಗ್ಗೆ ಡಿ.ಪೂನಂ.1
ಬೀದರ ಮೂರು ಜನರು ಕೂಡಿಕೊಂಡು ನನ್ನ ಹೆಂಡತಿ ಅದೇ
ಬಸ್ಸಿನಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿರುತ್ತೇವೆ. ಸದ್ಯ ನನ್ನ ನಾಗಮ್ಮಾ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ.ಕಾರಣ ಸದರಿ
ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ
ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ್ದು ನನ್ನ ಹೆಂಡತಿ ನಾಗಮ್ಮ ಇವಳು ದಿನಾಂಕ. 23-7-2018 ರಿಂದ
ಇವತ್ತಿನವೆರೆಗೆ ಸದರಿ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು ಉಪಚಾರದಲ್ಲಿ ಗುಣ ಮುಖಳಾಗದೆ ಇಂದು ದಿನಾಂಕ.
21-8-2018 ರಂದು ಮದ್ಯಾನ 2-00 ಪಿ.ಎಂ.ಕ್ಕೆ. ಗಂಗಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಅಂತಾ ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಹಣಮಂತ ತಂದೆ ಹಿರಗೆಪ್ಪಾ ಮುಗಡಿ ಸಾ/ ತಾವರಗೇರಾ ತಾಜಿ/
ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾಂತೇಶ ತಂದೆ ಗಿರೇಪ್ಪ ಚನ್ನೂರ ಸಾ||ಹಳ್ಯಾಳ ತಾ||ಅಫಜಲಪೂರ ರವರು ದಿನಾಂಕ 18/09/2018 ರಂದು ನಾನು
ಹಾಗು ನನ್ನ ತಮ್ಮನಾದ ಸಂತೋಷ ಇಬ್ಬರು ಕೂಡಿಕೊಂಡು ಅಫಜಲಪೂರದ ಬಸಡಿಪೋದಲ್ಲಿ ಮೆಕ್ಯಾನಿಕ್ ಅಂತ ಕೆಲಸ
ಮಾಡುತಿದ್ದ ನಮ್ಮೂರ ಪ್ರಕಾಶನಿಗೆ ನಾವಿಬ್ಬರು ಬೇಟಿಯಾಗಿ ಬಸ ಡಿಪೋದಿಂದ ಅಫಜಲಫೂರದ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದಾಗ ಬಸಡಿಪೋ ಹತ್ತಿರ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ ಸವಾರನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ
ತಮ್ಮನಾದ ಸಂತೋಷನಿಗೆ ಡಿಕ್ಕಿಪಡಿಸಿದನು ಎಬ್ಬಿಸಿ ನೋಡಲು ಬಲ ತಲೆಗೆ
ಮೆಲಕಿಗೆ ಮುಖದ ಮೇಲೆ
ಭಾರಿ ರಕ್ತಗಾಯವಾಗಿದ್ದು ಮೋಟಾರ್ ಸೈಕಲ ಸವಾರನು ಸ್ವಲ್ಪ ಮುಂದೆ ಹೋಗಿ ನಿಂತನು ಸದರಿ ಮೋಟಾರ್ ಸೈಕಲ್ ನಂಬರ ಕೆಎ-32
ಇಆರ್ -5455 ನೇದ್ದು ಇದ್ದು ಸದರಿಯವನಿಗೆ ಹೆಸರು ಕೆಳಲು ತನ್ನ ಹೆಸರನ್ನು ಹೆಳದೆ ಮೋಟಾರ್ ಸೈಕಲ್ ಸಮೇತ ಹೋದನು
ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ನಂತರ ಅಫಜಲಪೂರದ ಖಾಸಗಿ ದವಾಖಾನೆಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ
ನಿರ್ಮಲಾ
ಗಂಡ ರಮೇಶ ಜಗದಿ
ಸಾ: ಚಿಂಚೋಳಿ ಹಾ:ವ:
ಅಫಜಲಪೂರ ರವರು ದಿನಾಂಕ 20-09-2018: ರಂದು ತನ್ನ
ಮಗಳಾದ ಲಕ್ಷ್ಮಿ ಇವಳನ್ನು ಕರೆದುಕೊಂಡು ಮೋಟಾರ ಸೈಕಲ್ ನಂ ಕೆಎ-33-ಕೆ-3656 ನೇದ್ದರ ಮೇಲೆ ಪ್ರತಿ
ದಿನದಂತೆ ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗುತ್ತಿದ್ದಾಗ ಬೆಳಿಗ್ಗೆ
8:30 ಗಂಟೆಗೆಯ ಸುಮಾರಿಗೆ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಸೇವಾ ಗ್ಯಾಸ್ ಎಜನ್ಸಿ ಹತ್ತಿರ ಎಡ ರೋಡಿಗೆ ಇಂಡಿಕಾ ಕಾರ ನಂ
ಕೆಎ-29-ಪಿ-500 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು
ನಿಸ್ಕಾಳಜಿತನದಿಂದ ನಡೆಸಿಕೊಂಡು ಡಿಕ್ಕಿ ಪಡೆಸಿ ವಾಹನ ನಿಲ್ಲಿಸದೇ ಓಡಿ ಹೋಗಿ ಅಫಜಲಪೂರ ಹತ್ತಿರ ಇರುವ ನೀರಾವರಿ ಆಫೀಸ್ ಹತ್ತಿರ ಪಲ್ಟಿ ಮಾಡಿದ್ದು ಇರುತ್ತದೆ. ಸದರಿ
ವಾಹನ ಚಾಲಕನ ಮೇಲೆ ಕ್ರಮ
ಕೈಕೊಳ್ಳಬೇಕೆಂದು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:19/09/2018 ರಂದು ನಾನು ಕೂಲಿಕೆಲಸ ಮೂಗಿಸಿಕೊಂಡು ಸಯಂಕಾಲ ಮನೆಗೆ
ಬಂದಿದ್ದು ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಮಹಾದೇವ ತಂದೆ ನಿಂಗರಾಜ ಸಾವಳಗಿ ಇವರು ನನಗೆ
ಫೋನಮಾಡಿ ತಿಳಿಸಿದ್ದೇನಂದರೆ ನಿನ್ನ ಮಗನಾದ ರುತಿಕನು ದೀಪಕ ಖಂಡೊಳ ಇವರ ಮನೆಯ ಮುಂದಿನ ರೋಡಿನ
ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಮೊಟಾರ್ ಸೈಕಲ್ ಸವಾರನು ಅತೀವೇಗ ಹಾಗೂ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಿನ್ನ ಮಗ ರುತಿಕನ ಎಡಗಾಲ ಮೊಳಕಾಲ
ಎಡಗಹಣೆಗೆ ತರಚಿದ ರಕ್ತಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗುಪ್ತಗಾಯವಾಗಿ ಎಡಗ ಕಿವಿಯಿಂದ ರಕ್ತ
ಸೊರುತಿದೆ. ಅಂತಾ ತಿಳಿಸಿದ್ದರಿಂದ ನಾನು ಹಾಗೂ ನನ್ನ ಹೆಂಡತಿಯಾದ ಮಹಾದೇವಿ ಇಬ್ಬರು ಕೂಡಿಕೊಂಡು
ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಅಪಾಘತವಾಗಿದ್ದು ನಿಜವಿದ್ದು ನನ್ನ ಮಗನ ತಲೆಯ
ಹಿಂಭಾಗಗಕ್ಕೆ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿತ್ತು ಹಾಗೂ ಎಡಗಾಲ ಮೊಳಕಾಲಿಗೆ
ಎಡಹಣೆಗೆ ತರಚಿದ ರಕ್ತಗಾಯವಾಗಿದ್ದು ಈ ಘಟನೆಯಾದಾಗ ಸಾಯಂಕಾಲ 6-00 ಗಂಟೆ ಆಗಿರುತ್ತದೆ ಅಂತಾ
ಮಹಾದೇವನು ತಿಳಿಸಿರುತ್ತಾನೆ. ಅಪಘಾತ ಪಡಿಸಿದ ಮೊ.ಸೈ ನೋಡಲಾಗಿ ಬಜಾಜ್ ಕಂಪನಿಯ ಅವೆಂಜರ್ ನಂಬರ್, ಕೆಎ32-ಇಎಲ್0195 ಕಪ್ಪು
ಬಣ್ಣದದಿದ್ದು ಅದರ ಚಾಲಕನು ಅಲ್ಲಿ ಜನರು ಸೇರುವುದನ್ನು ಕಂಡು ಮೊಟಾರ್ ಸೈಕಲ್ ಚಾಲಕನು
ವಾಹನವನ್ನು ಅಲ್ಲಿಯೇ ಬಿಟ್ಟಿ ಓಡಿಹೊಗಿರುತ್ತಾನೆ. ಮತ್ತೆ ನೊಡಿದ್ದಲ್ಲಿ ಅವನನ್ನು ಗುರ್ತಿಸುತ್ತೇನೆ.
ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ಹಾಗೂ ನಮ್ಮೂರಿನ ಮಹಾದೇವ ಸಾವಳಗಿ ಹಾಗೂ ಅನೀಲ
ಹೊಸಮನಿ ಸೇರಿಕೊಂಡು ಬಂದು ಖಾಸಗಿ ವಾಹನದಲ್ಲಿ ಯುನಿಟೇಡ್ ಆಸ್ಪತ್ರೆ ಕಲಬುರಗಿಗೆ ತಂದು ಉಪಚಾರ
ಕುರಿತು ಮಾಡಿರುತ್ತೇವೆ. ಕಾರಣ ನನ್ನ ಮಗನಿಗೆ ಅಪಘಾತ ಪಡಿಸಿದ ವಾಹನ ಹಾಗೂ ಅದರ ಚಾಲಕ ಮೇಲೆ
ಕಾನೂನು ಕ್ರಮ ಜರುಗಿಸುವಂತೆ ಶ್ರೀ ರುತಿಕನ ತಂದೆ ಹಣಮಂತ ತಂದೆ ಹವಳಪ್ಪಾ ಭಾವಿಕಟ್ಟಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment