POLICE BHAVAN KALABURAGI

POLICE BHAVAN KALABURAGI

09 August 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸವಿತಾ ಇವಳು ಈಗ 5-6 ತಿಂಗಳ ಹಿಂದೆ ಅವಳ ಗಂಡ ಸಂತೋಷ ಇತನ ಮೇಲೆ ರೇವೂರ ಪೊಲೀಸ ಠಾಣೆಯಲ್ಲಿ ಕೇಸು ಮಾಡಿಸಿ ಜೈಲಿಗೆ ಕಳಿಸಿದ್ದರಿಂದ್ದ ಅದೇ ವೈಮನಸ್ಸಿನಿಂದ ದಿನಾಂಕ:- 08/08/2018 ರಂದು ರಾತ್ರಿ 09:00 ಗಂಟೆಗೆ ಸಂತೋಷ ಇತನು ಮೃತ ಸವಿತಾ ಇವಳೊಂದಿಗೆ ಜಗಳ ತೆಗೆದು ಅವಳಿಗೆ ಕಬ್ಬಿಣದ ಖಾರ ಕುಟ್ಟುವ ಹಾರಿಯಿಂದ ಅವಳ ಬಲ ತಲೆಗೆ, ಬಲಕಿವಿಯ ಹತ್ತಿರ, ಕಿವಿಯ ಹಿಂದುಗಡೆ, ಬಲಗಡೆ ಕಣ್ಣಿನ ಹತ್ತಿರ, ಮೆಲಕಿನ ಮೇಲೆ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಕಾರಣ ಕೊಲೆ ಮಾಡಿ ಓಡಿ ಹೋದ ಸಂತೋಷ ತಂದೆ ಅಣ್ಣಾರಾಯ ಬಮ್ಮಳಗಿ ಸಾ:ರೇವೂರ ತಾ:ಅಫಜಲಪೂರ ಹಾವ:ಹೀರಾಪುರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಶರಣಮ್ಮಾ ಗಂಡ ಸಿದ್ದಾರೂಡ  ಸಾ : ಹಿರಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶ್ರೀದೇವಿ ಗಂಡ ರಾಯಪ್ಪ ದೊಡಮನಿ ಸಾ|| ಕುಕ್ಕನೂರ ತಾ|| ಜೇವರ್ಗಿ ಇವರಿಗೆ ತಮ್ಮೂರ ಸಿಮಾಂತರದಲ್ಲಿ ಸರಕಾರದ ಹೊಲ ಸರ್ವೆ ನಂ 44 ನೇದ್ದರಲ್ಲಿ 4 ಎಕರೆ ಜಮೀನು ನಮ್ಮ ಭಾವ ರಾಮು ತಂದೆ ನಿಂಗಪ್ಪ ದೊಡಮನಿ ರವರ ಹೆಸರಿಗೆ ಗ್ರಾಂಟ ಆಗಿದ್ದು ಇರುತ್ತದೆ, ಅದರಲ್ಲಿ ನಾನು 2 ಎಕರೆ ಮತ್ತು ನಮ್ಮ ಭಾವ 2 ಎಕರೆ ಜಮೀನು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ,  ನಮ್ಮ ಭಾವ ರಾಮು ರವರು ನಮ್ಮೂರ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರ ಹತ್ತಿರ ತನ್ನ ಸ್ವಂತಕ್ಕೆ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಗಂಡ ಈಗ 5 ವರ್ಷದ ಹಿಂದೆ ತೀರಿಕೊಂಡಿರುತ್ತಾರೆ, ಈ ವರ್ಷ ನಮ್ಮ ಪಾಲಿಗೆ ಬಂದ ಹೊಲದಲ್ಲಿ  ನಾನು ಹತ್ತಿ ಬೆಳೆ ಬೆಳೆದಿದ್ದು ಇರುತ್ತದೆ. ನಮ್ಮ ಭಾವ ತಮ್ಮ ಹೊಲದಲ್ಲಿ ತೊಗರಿ ಬೆಳೆ ಬೆಳೆದಿರುತ್ತಾರೆ,ದಿನಾಂಕ 02-08-2018 ರಂದು ಬೆಳಿಗ್ಗೆ 08;00 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಶಿವಶರಣಪ್ಪ ರಾಮಕೋಟಿ ಸಾ|| ಕೂಟನೂರ ರವರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರು ನಮ್ಮ ಮತ್ತು ನಮ್ಮ ಮಾವನ ಬೆಳೆ ಸಂಪೂರ್ಣ ಹರಗಿ ನಾಶ ಮಾಡಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ನಮ್ಮ ಬೇಳಿ ಯಾಕ ಹಾಳ ಮಾಡಿರಿ ಅಂತಾ ಕೇಳಿದಾಗ ಬಸವರಾಜ ರವರು ಏ ರಂಡಿ ನಿಮ್ಮ ಮಾವ ನಮಗ ಹೊಲ ಮಾರ್ಯಾನ, ಇದು ನಮ್ಮ ಹೊಲ ಇದೆ, ಇದರಲ್ಲಿ ನಾವು ಏನ ಬ್ಯಾಕದ್ದು ಮಾಡುತ್ತೇವೆ, ಇದರಲ್ಲಿ ನಿನ್ಯಾಕ ಬಿತ್ತಬೇಕು ಅಂತಾ ಅಂದನು, ಕಲ್ಯಾಣಿ ಇವನು ಈ ಹೊಲ್ಯಾರಗಿ ನಾವು ಹಣ ಕೊಡಬಾರದಿತ್ತು, ಇವರಿಗಿ ಸ್ವಕ್ಕ ಬಹಳ ಬಂದಾದ, ಇನ್ನೊಮ್ಮೆ ಈ ಹೊಲದಲ್ಲಿ ಬಂದರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾವು ಅವರಿಗೆ ಅಂಜಿ ಅಲ್ಲಿಂದ ಮನೆಗೆ ಹೋಗಿರುತ್ತೇವೆ, ಮೇಲ್ಕಂಡ ಬಸವರಾಜ ಮತ್ತು ಕಲ್ಯಾಣಿ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಅಂದಾಜು 80,000/- ರೂ ಕಿಮ್ಮತ್ತಿನ ಬೆಳೆ ಹಾಳು ಮಾಡಿ ಜೀವ ಭಯ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅನ್ವರ ತಂದೆ  ಹಾಸೀಮಪೀರ್ @ಹಾಸಿಮಸಾಬ  ಹೊನ್ನುಟಗಿ ಸಾ;ನಾಗಠಾಣ ಜಿ:ಬಿಜಾಪೂರ  ದಿನಾಂಕ 03-08-2018 ರಂದು ಇವರ ಮೂರನೆಯ ಮಗನಾದ ಅನ್ವರ ವಯ 25 ವರ್ಷ ಈತನಿಗೆ ರಸ್ತೆ ಅಪಘಾತವಾದ ವಿಷಯದಲ್ಲಿ ವಿಚಾರಣೆ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಬಂದಿದ್ದ ಕಮಲಾಪೂರ ಪೊಲೀಸ ಠಾಣೆಯ ಪಿ.ಎಸ್.ಐ ಸಾಹೇಬರ ಮುಂದೆ ಅಪಘಾತದಲ್ಲಿ ಭಾರಿ ಗಾಯಗಳನ್ನು ಹೊಂದಿದ್ದ ನನ್ನ ಮಗ ಅನ್ವರ ಈತನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದುರಿಂದ ನನ್ನ ಮಗ ಅನ್ವರ ವಯ 25 ವರ್ಷ ಈತನಿಗೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಸುಮಾರಿಗೆ ನಾವದಗಿ ಬ್ರೀಡ್ಜ್ ಹತ್ತಿರ ನನ್ನ ಮಗ ನಡೆಸಿಕೊಂಡು ಹೋಗುತ್ತಿದ್ದ ಅಶೋಕ ಲೈಲಂಡ ದೋಸ್ತಿ ಗೂಡ್ಸ್ ನಂ ಕೆಎ-29-ಬಿ-0577 ನೇದ್ದಕ್ಕೆ ಲಾರಿ ನಂ  MH-12-PQ-903l ನೇದ್ದರ ಚಾಲಕ ನವನಾಥ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿ ಭಾರಿ ಗಾಯಗಳು ಪಡಿಸಿದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿರುತ್ತೇನೆ. ಇಂದು ದಿನಾಂಕ 08-08-2018 ರಂದು 10-00 ಎ.ಎಮ್ ಕ್ಕೆ ನನ್ನ ಮಗ ಅನ್ವರ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುತ್ತಿರುವ ಪುರವಣಿ ಹೇಳಿಕೆವೆನೆಂದರೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಆದ ರಸ್ತೆ ಅಪಘಾತದಲ್ಲಿ ನನ್ನ ಮಗ ಅನ್ವರ ಈತನಿಗೆ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ, ಬಲಗಾಲ ಮುಂಗಾಲಿಗೆ ಭಾರಿ ಗುಪ್ತಗಾಯಗಳು, ಬಲಗಡೆ ಮೇಲಕಿಗೆ ಹಾಗೂ ಬಲಗಡೆ ಹಣೆಗೆ ತರಚಿದ ರಕ್ತಗಾಯಗಳು, ಬಲಗಡೆ ಮಗ್ಗಲಿಗೆ ಭಾರಿ ಗುಪ್ತಗಾಯವಾಗಿ ಮುಂಗೈಗೆ(ಬಲ) ಹಾಗೂ ತೆಲೆಯ ಮೇಲ್ಭಾಗಕ್ಕೆ ರಕ್ತಗಾಯಗಳು ಆಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ಮಗನಿಗೆ ಅಂದೆ ರಾತ್ರಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಬಿಜಾಪೂರನ ಯಶೋಧರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನನ್ನ ಮಗ ಅನ್ವರ ಈತನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08-08-2018 ರಂದು 4-00 ಎ.ಎಮ್ ಕ್ಕೆ ಬಿಜಾಪೂರನ ಯಶೋಧರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಂಗಮ್ಮ ಗಂಡ ದಿ.ಶ್ರೀಮಂತ ಕಟ್ಟಿಮನಿ ಸಾ:ಕೈಲಾಸ ನಗರ ಕಲಬುರಗಿ ಇವರು ವಿಧವೆ ಹೆಣ್ಣುಮಗಳಿದ್ದು ಸರಕಾರಿ ನೌಕರಿಯಲ್ಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇನೆ. ಶ್ರೀ ರವಿ ಮುದ್ದಡಗಿ ಎ.ಎಸ್‌.ಐ ಮಾಡಬೂಳ ಠಾಣೆ ಸಾ:ಮನೆ.ನಂ.11-8098 ಎಸ್‌‌.ಬಿ ಕಾಲೇಜು ರಾಮನಗರ ಹತ್ತಿರ ಕಲಬುರಗಿ ಮೊ.ನಂ.9972808648 ಇತನು ಮತ್ತು ನಮ್ಮ ದಿವಂಗತ ಪತಿಯವರ ಗೆಳೆಯನಾಗಿದ್ದು ಯಾವಾಗಲೂ ನಮ್ಮ ಪತಿಯೊಂದಿಗೆ ಮನೆಗೆ ಬರುವುದು ಹೋಗುವದು ಮಾಡುತ್ತಿದ್ದರು. ಮತ್ತು ಅವರಿಗೆ ಹಣದ ಅಡಚಣೆ ಆದಾಗ ನನ್ನಿಂದ ಕೈಗಡವಾಗಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಈ ರೀತಿ ನಮ್ಮ ಸಂಗಡ ಒಂದು ಆತ್ಮೀಯ ಸಂಬಂಧ ಇಟ್ಟುಕೊಂಡು ಬಂದಿದ್ದರು. ಆದರೆ ಜನೇವರಿ 2018 ರಲ್ಲಿ ಮೇಲ್ಕಾಣಿಸಿದ ರವಿ ಎ.ಎಸ್‌.ಐ ರವರಿಗೆ ನಾವು ಕೈಗಡವಾಗಿ ಕೊಟ್ಟಂತಹ ಹಣವನ್ನು ಮರಳಿ ಕೊಡುವಂತೆ ಕೇಳಿಕೊಂಡಾಗ ಅವರು ನಮ್ಮ ಜೊತೆ ಜಗಳವಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಮ್ಮನ್ನು ಹೊಡೆಬಡೆ ಮಾಡಿ ಮೈಮೇಲೆ ಹಲ್ಲೆ ಮಾಡಿ ಹೋಗಿದರು. ಹೀಗಿರುವಾಗ ನಾನು ದಿನಾಂಕ:07/02/2018 ರಂದು ಮಾನ್ಯ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಯವರ ಕಛೇರಿಗೆ ದೂರು ಸಲ್ಲಿಸಿದ್ದೆ ಮತ್ತು ಅದರ ಒಂದು ಪ್ರತಿ ನಮಗೆ ಕೊಟ್ಟಿರುತ್ತಾರೆ. ಆದರೆ ಮಾನ್ಯ ಜಿಲ್ಲಾ ವರೀಷ್ಠಾಧಿಕಾರಿಯವರ ಕಛೇರಿಯಿಂದ ನಮಗೆ ದಿನಾಂಕ:07/03/2018 ರಂದು ಒಂದು ಹಿಂಬರಹ ಪ್ರತಿ ಬಂದಿದ್ದು ಅದರಲ್ಲಿ ನಮಗೆ ಸುರಕ್ಷಿತವಾದ ಸೂಕ್ತ ರಕ್ಷಣೆ ನೀಡಲಾಗುವುದೆಂದು ಮತ್ತು ಏನಾದರೂ ತೊಂದರೆ ಆದ್ದಲ್ಲಿ ನೀವು ಠಾಣೆಗೆ ಹಾಜರಾಗಿ ದೂರು ನೀಡಲು ಸೂಚಿಸಿದರು. ಆದರೆ ನಮಗೆ ಯಾವುದೇ ರಕ್ಷಣೆ ಸಿಗದ ಕಾರಣ ದಿ:28/07/2018 ರಂದು ಮೇಲ್ಕಾಣಿಸಿದ ರವಿ ಮುದ್ದಗಡಿ ಎ.ಎಸ್‌.ಐ ರವರು ನಮ್ಮ ಮನೆಗೆ ಬಂದು ಹೊಡೆಬಡೆ ಮಾಡಿ ನನ್ನ ಮೇಲೆ ಮೈಮೇಲೆ ಹಲ್ಲೆ ಮಾಡಿ ಕೈಯಲ್ಲಿ ಕೊಡಲಿ ತೆಗೆದುಕೊಂಡು ಬಂದು ಅಲ್ಲೆ ಮನೆಯಲ್ಲಿದ್ದ ಹಿತ್ತಾಳೆಯ ತಂಬಿಗೆಯಿಂದ ನನ್ನ ತಲೆಗೆ ಬಲವಾಗಿ ಹೊಡೆದ ಕಾರಣ ನನ್ನ ತಲೆಗೆ ಭಾರಿ ಪ್ರಮಾಣದ ರಕ್ತಗಾಯ ಮಾಡಿದೆನು. ಹಾಗೂ ನನ್ನ ಮಗಳಾದ ಅಕ್ಷತಾಳನು ಕೂಡಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿಕೊಳ್ಳುತ್ತೇನೆಂದು ಬೈದು ನಿಮ್ಮೆಲ್ಲರನ್ನು ಜೈಲಿಗೆ ಕಳುಹಿಸುತ್ತೇನೆಂದು ಜೀವದ ಬೆದರಿಕೆ ಹಾಕಿ ನಮ್ಮನ್ನೆಲ್ಲಾ ಅಂಜಿಸಿ ಹೋಗಿರುತ್ತಾನೆ. ಆ ಹಿತ್ತಾಳೆಯ ತಂಬಿಗೆಯಿಂದ ಹೊಡೆದ ಕಾರಣ ನನ್ನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ನನ್ನ ಮೈಯೆಲ್ಲಾ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖ ನಿಜಾಮೋದ್ದಿನ ತಂದೆ ಶೇಖ ಬಸಿರೋದ್ದಿನ ಸಾ:ಮದೀನಾ ಕಾಲೋನಿ ಕಲಬುರಗಿ ಇವರು ಪ್ರತಿ ದಿವಸ ಸೆಂಟ್ರಿಂಗ ಕೆಲಸಕ್ಕೆ ಹೋಗುತ್ತಿದ್ದು ನನ್ನಂತೆ ಸೆಟ್ರಿಂಗ ಕೆಲಸಕ್ಕೆ ಬರುವ ಶಾಹೀದ ಶೇಖ ಸಾ:ಮಿಜಬಾ ನಗರ, ನೌಶಾದ ಪಟೇಲ ಸಾ: ಮಿಜಬಾ ನಗರ, ಮತ್ತು ಜಿಲಾನ ಪಾಶಾ ಸಾ: ಇಕ್ಬಾಲ ಕಾಲೋನಿ ಇವರು ಕೂಡ ನನ್ನಂತೆ ಕೆಲಸಕ್ಕೆ ಬರುತ್ತಿದ್ದು ನಮ್ಮ ಮಧ್ಯೆಗೆಳೆತನವಾಗಿದ್ದು ಇರುತ್ತದೆ  ದಿನಾಂಕ 05.08.2018 ರಂದು ಬೆಳ್ಳಿಗ್ಗೆ 9 ಗಂಟೆಗೆ ನಾನು ಕೆಲಸಕ್ಕೆ ಹೋಗಿದ್ದು ನನ್ನಂತೆ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶಾ ಇವರು ಕೂಡಾ ಕೆಲಸಕ್ಕೆ ಬಂದಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಕೆಲಸ ಮಾಡಿ ರಾತ್ರಿ 08.00 ಗಂಟೆ ಸುಮಾರಿಗೆ ಮದಿನಾ ಕಾಲೋನಿಯಲ್ಲಿರುವ ಬಾಭಾ  ಹೋಟೆಲ ಎದುರುಗಡೆ ಇರುವ ಪುರಸಭೆ ಕಾರ್ಯಾಲಯದ ಮುಂದೆ ಇರುವ ಕಟ್ಟೆ ಮೇಲೆ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 08.30 ಗಂಟೆ ಸುಮಾರಿಗೆ ನನಗೆ ಪರಿಚಯದ  1. ಮಹ್ಮದ ಖಾನ ಸಾ:ಬಸವೇಶ್ವರ ಕಾಲೋನಿ 2. ಇಬ್ರಾನ ಸಾ:ಕೃಷ್ಣಾ ಕಾಲೋನಿ 3. ಗೌಸ ಸಾ:ಇಕ್ಬಾಲ ಕಾಲೋನಿ ಮತ್ತು 4. ಸೈಯದ ಇಸ್ಮಾಲ ಸಾ:ಮಹ್ಮದಿ ಚೌಕ ಕಲಬುರಗಿ ಇವರುಗಳು ಕೂಡಿಕೊಂಡು ಬಂದವರೆ ನನ್ನ ಹತ್ತಿರ ಕುಳಿತ್ತಿದ್ದ ನೌಶಾದ ಪಟೇಲ ಇತನೊಂದಿಗೆ ಜಗಳ ತೆಗೆದ್ದು ಅವನಿಗೆ ಹೊಡೆ ಬಡೆ ಮಾಡುತ್ತಿದ್ದು ಆಗ ನಾನು ಸದರಿಯವರಿಗೆ ನೌಶಾದ ಪಟೇಲ ಇತನಿಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿ ನಾನು ಬಿಡಿಸಲು ಹೊದಾಗ ಸದರಿ ನಾಲ್ಕು ಜನರು ಕೂಡಿಕೊಂಡು ರಂಡಿ ಮಗನೆ ನೀನು ಜಗಳ ಬಿಡಿಸಲು ಬರುತ್ತಿ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಹಿಡಿದುಕೊಂಡು ಅವರಲ್ಲಿ ಮಹ್ಮದ ಖಾನ ಇತನು ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಇಮರಾನ ಇತನು ತನ್ನ ಕೈಯಿಂದ ನನ್ನ ಬಲಗೈ ಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಮತ್ತು ಗೌಸ ಇತನು ತನ್ನ ಕೈ ಮುಷ್ಠಿ ಮಾಡಿ ನನ್ನ ಬೆನ್ನಿಗೆ ಹೊಡದು ಗುಪ್ತಗಾಯ ಪಡಿಸಿದು ಹಾಗೂ ಸೈಯದ ಇಸ್ಮಾಯಿಲ ಇತನು ನನಗೆ ಕೈ ಹಿಡಿದು ಎಳೆದಾಡುತ್ತಿದ್ದು ಆಗ ನನ್ನ ಸಂಗಡ ಇದ್ದ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶ್ಯಾ ಇವರುಗಳು ಸದರಿಯವರಿಗೆ ಬೈದು ನನಗೆ ಹೊಡೆಯುದನ್ನು ಬಿಡಿಸಿದ್ದು ಇರುತ್ತದೆ. ಸದರಿಯವರು ಹೋಗುವಾಗ ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತೇವೆ ಅಂತ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಜೀಮೊದಿನ ಪಟೇಲ ತಂದೆ ಖಯುಮ ಪಟೇಲ ಸಾ:ಮಕ್ಕಾ ಮಜೀದ ಹತ್ತಿರ ಮದೀನಾ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಇವರು ದಿನಾಂಕ:06/08/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನಾನು ಮಹ್ಮದಿ ಮಜೀದಕ್ಕೆ ನಮಾಜ ಮಾಡಲು ಹೋಗಿದ್ದು ಆಗ ಅಲ್ಲೆ ಇದ್ದ ಅಬ್ದುಲ್‌ ರಸೀದ ಚಡಗಿ ಮತ್ತು ಅವನ ಮಕ್ಕಳು ನನ್ನನ್ನು ನೋಡಿ ಮಗನೆ ನಿನ್ನದು ಬಹಳ ಆಗಿದೆ ನಿನಗೆ ಲಂಗಾ (ಬೆತ್ತಲೆ) ಮಾಡಿ ಹೊಡೆಯುತ್ತೇನೆ ಅಂತಾ ಅಂದಿದ್ದ ಆಗ ನಾನು ಸದರಿಯವರಿಗೆ ಯಾಕೆ ಬೈಯುತ್ತಿರಿ ನನ್ನ ಪಾಡಿಗೆ ನಾನು ನಮಾಜ ಮಾಡಲು ಬಂದಿದ್ದೇನೆ ಅಂತಾ ಹೇಳಿದ್ದು ಆಗ ಸದರಿಯವರು ನನಗೆ ಹೊಡೆಯಲು ಬಂದಿದ್ದು ಆ ಸಮಯದಲ್ಲಿ ನಾನು ಸುಮ್ಮನಾಗಿ ನಮ್ಮ ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ:08/08/2018 ರಂದು ಮಧ್ಯಾನ 12.30 ಗಂಟೆಯ ಸುಮಾರಿಗೆ ಮಹ್ಮದಿ ಮಜೀದ ಮುಂದಿನ ರಸ್ತೆಯ ಮೇಲಿಂದ ನಡೆದುಕೊಂಡು ಪೊಲೀಸ ಠಾಣೆ ಕಡೆಗೆ ಹೋಗುತ್ತಿದ್ದು ಆಗ ಅಲ್ಲೆ ಕುಳಿತ 1)ಅಬ್ದುಲ ರಸೀದ ತಂದೆ ನಜೀರ ಚಡಗಿ ಇತನು ನನ್ನನು ನೋಡಿ ಎ ರಾಂಡಕಾ ಭೇಟೆ ಕಹಾ ಜಾರಹಾ ಅಂತಾ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ವಿನಾಕಾರಣ ನನಗೆ ಯಾಕೆ ಬೈಯುತಿದ್ದಿರಿ ಅಂತಾ ಕೇಳಿದ್ದು ಅದೆ ವೇಳೆಗೆ 2)ರಸೂಲ ತಂದೆ ಅಬ್ದುಲ ರಸೀದ ಚಡಗಿ 3)ರುಸ್ತುಮ ತಂದೆ ಅಬ್ದುಲ ರಸೀದ ಚಡಗಿ 4)ಸಮದ ತಂದೆ ಅಬ್ದುಲ ರಸೀದ ರಸೀದ ಚಡಗಿ 5)ಅಮೀರ ತಂದೆ ಮಸೂದಖಾನ 6)ಬಾಬಾ ತಂದೆ ಮಹಿಬೂಬ ಮಳ್ಳಿ 7)ಹಾರುನ ಹಾಗೂ ಇನ್ನೂ 7-8 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ತಲವಾರ, ಚಾಕು, ಹಾಕಿಸ್ಟೀಕ, ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ರಸೂಲ ಇತನು ರಂಡಿಮಗನೆ ನೀನು ನಮ್ಮ ತಂದೆಗೆ ಎದರು ಮಾತನಾಡುತ್ತಿ ಅಂತ ಬೈಯುತ್ತ ತನ್ನ ಕೈಯಲಿದ್ದ ತಲವಾರದಿಂದ ನನ್ನ ತಲೆ ಬಲ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ರುಸ್ತುಮ ಇತನು ತನ್ನ ಕೈಯಲ್ಲಿ ಇದ್ದ ಹಾಕಿಸ್ಟೀಕ ದಿಂದ ನನ್ನ ಮೈಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಉಳಿದವರು ನನಗೆ ಹಿಡಿದುಕೊಂಡು ಹೊಡೆಬಡೆ ಮಾಡುತಿದ್ದ ಸದರಿಯವರು ನನಗೆ ಹೊಡೆಯುತ್ತಿರುವದರಿಂದ ತ್ರಾಸ ತಾಳದಕ್ಕೆ ನಾನು ಚಿರಾಡುತ್ತಿದ್ದು ಆಗ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ 1)ಮಹಿಬೂಬ ಅಲಿ ತಂದೆ ಅಲಿಸಾಬ ಸೈಯದ ಸಾ:ಮದೀನಾ ಕಾಲೋನಿ ಮತ್ತು 2) ಸೈಯದ ಮೊಬಿನ ತಂದೆ ಸೈಯದ ಇಸ್ಮಾಯಿಲ್‌ ಸಾ:ಮದೀನಾ ಕಾಲೋನಿ ಇವರು ಜಗಳ ನೋಡಿ ನನಗೆ ಬಿಡಿಸಿಕೊಳ್ಳಲು ಬಂದಿದ್ದು ಆಗ ಸಮದ ತಂದೆ ಅಬ್ದುಲ ರಸೀದ ಇತನು ತನ್ನ ಹತ್ತಿರ ಇದ್ದ ಚಾಕುದಿಂದ ಮಹೀಬೂಬ ಅಲಿ ಇವರ ಬಲಗೈ ರಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅಮೀರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಮಹಿಬೂಬ ಅಲಿಯ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಮಹಿಬೂಬ ಅಲಿಗೆ ಹಿಡಿದುಕೊಂಡು ಹೊಡೆಬಡೆ ಮಾಡಿ ಎಡಗಣ್ಣಿನ ಕೆಳಗೆ ಬಲ ಕಿವಿ ಹಿಂದೆ ಮತ್ತು ಎಡಭಾಗದ ಹೊಟ್ಟೆಯ ಮೇಲೆ ರಕ್ತಗಾಯ, ಗುಪ್ತಗಾಯ ಪಡಿಸಿದ್ದು ಇರುತ್ತದೆ. ಮತ್ತು ಜಗಳ ಬಿಡಿಸಲು ಬಂದೆ ಸೈಯದ ಮೊಬಿನ ಇತನಿಗೆ ಬಾಬಾ ತಂದೆ ಮಹಿಬೂಬ ಮಳ್ಳಿ ಇತನು ತನ್ನ ಹತ್ತಿರ ಇದ್ದ ಕೊಯಿತಾದಿಂದ ಸೈಯದ ಮೊಬಿನ ಎಡಗೈ ಹಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಕೈಗಳಿಂದ ಸೈಯದ ಮೊಬಿನಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಸದರಿಯವರು ನಮಗೆ ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ರಸೂಲ ಅಹ್ಮದ ತಂದೆ ಅಬ್ದುಲ ರಸೀದ ಉ:ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಸಾ:ಮನೆ.ನಂ.11-1041/48/ಇ2, ಜೀಲಾನಾಬಾದ ಮಹ್ಮದಿ ಮಜೀದ ಹತ್ತಿರ ಎಂ.ಎಸ್.ಕೆ ಮೀಲ್ ಕಲಬುರಗಿ ಇವರು ಕಲಬುರಗಿ ನಗರದ ವಾಡಂ ನಂ.20 ರಲ್ಲಿ ಹೆಚ್.ಕೆ.ಆರ್.ಡಿ.ಬಿ ವತಿಯಿಂದ ನೂರಾನಿ ಚೌಕ ಹಿಂದುಗಡೆ ಇರುವ ಶಹಾಜಿಲಾನಿ ದರ್ಗಾ ಹಿಂದೆ ರೋಡಿನ ಟೆಂಡರ ನನ್ನ ಗೆಳೆಯನಾದ ಇಫ್ತೆಖಾರ ಅಫಜಲ ನಕ್ಸಬಂದಿ ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಇವರ ಹೆಸರಿಗೆ ಕಾಮಗಾರಿ ಪಡೆದುಕೊಂಡಿದ್ದು ಅಂದಾಜು ಮೊತ್ತೆ 51,95,384.36/-ರಲ್ಲಿ ಇರುತ್ತದೆ. ಸದರಿ ನನ್ನ ಗೆಳೆಯನ ಕೆಲಸವು ನಾನು ಕೂಡಾ ವಹಿಸಿಕೊಂಡು ಕೆಲಸಮಾಡುತ್ತಿದ್ದು ಸದರಿ ನನ್ನ ಗೆಳೆಯನು ನನ್ನೊಂದಿಗೆ ಪಾಲುದಾರನಾಗಿರುತ್ತಾನೆ. ಈ ಕೆಲಸದ ಟೆಂಡರ ನಮ್ಮ ಹೆಸರಿಗೆ ಆದ ದಿನದಿಂದ 20 ನೇ ವಾರ್ಡನ ಕಾರ್ಪೊರೇಟರ ಆದ ಅಲೀಂ ಪಟೇಲ ತಂದೆ ಖಯುಮ ಪಟೇಲ ಇತನು ನಮಗೆ ಈ ಕೆಲಸ ನೀವು ಮಾಡಬಾರದು ಎಂದು ವಿನಾಕಾರಣ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನಾವು ಅದಕ್ಕೆ ಸರ್ಕಾರದಿಂದ ಮಂಜೂರಾದ ಕೆಲಸ ಮಾಡಬೇಕಾಗುತ್ತದೆ ಅದಕ್ಕೆ ನೀವು ತಕರಾರು ಮಾಡುವಂತಿಲ್ಲಾ ಎಂದು ಹೇಳಿದರೂ ಕೂಡಾ ಆತನು ನೀವು ನಮ್ಮ ವಾರ್ಡನಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂದು ಧಮಕಿ ಹಾಕುತ್ತಾ ಬಂದಿರುತ್ತಾನೆ. ಮತ್ತು ನಾವು ಕೆಲಸ ಪ್ರಾರಂಭಿಸುವ ಉದ್ದೇಶದಿಂದ 3 ದಿನಗಳಿಂದ ಕಾಮಗಾರಿ ಸ್ಥಳಕ್ಕೆ ಭೇಟಿಕೊಟ್ಟು ಕೆಲಸ ಪ್ರಾರಂಭಿಸಬೇಕೆಂದು ಪ್ರಯತ್ನಿಸುತ್ತಿರುವಾಗ ಸದರಿ ಅಲೀಂ ಪಟೇಲ ಕಾರ್ಪೊರೇಟರ ನಮ್ಮ ಮನೆಗೆ ಬಂದು ನಾವು ಈ ಮುಂಚೆ ಅಸ್ಲಂ ಬಾಂಜೆ ಅವರ ತಮ್ಮ ಹಮೀದ ಬಾಂಜೆ ಅವರಿಗೆ ಕೊಲೆ ಮಾಡಿ ಉಳಿಸಿಕೊಂಡಿದ್ದೇವೆ ಹಲವಾರು ಪೊಲೀಸ ಕೇಸ್ಗಳಲ್ಲಿ ಗೆದ್ದಿದ್ದೇವೆ ಒಂದು ವೇಳೆ ನೀವು ನಾವು ಹೇಳಿದಂತೆ ಕೇಳಲಿಲ್ಲಾ ಅಂದರೆ ಕೆಲಸದೊಂದಿಗೆ ನಿಮಗೂ ಮುಗಿಸಿಬಿಡುತ್ತೇವೆ ಎಂದು ಹೇಳಿ ಹೋಗಿರುತ್ತಾನೆ ಅಲ್ಲದೆ ವಾರ್ಡ ನಂ.20 ರಲ್ಲಿ ಯಾವೋಬ್ಬ ಗುತ್ತೇದಾರನಿಗೆ ಕೆಲಸ ಮಾಡಲು ಬಿಟ್ಟಿರುವದಿಲ್ಲಾ ಎಲ್ಲಾ ಕೆಲಸಗಳು ಅಲೀಂ ಪಟೇಲ ಇವನೆ ನೋಡಿಕೊಂಡು ಹೋಗುತ್ತಾನೆ. ಹೀಗಿದ್ದು ಇಂದು ದಿನಾಂಕ:08/08/2018 ರಂದು ಮುಂಜಾನೆ ಮಧ್ಯಾನ 12.30 ಗಂಟೆಗೆ ನಾನು ನಮ್ಮ ಮನೆಯಲ್ಲಿದ್ದಾಗ ಮೇಲೆ ತೋರಿಸಿದ ಎಲ್ಲಾ ವ್ಯಕ್ತಿಗಳು ತಮ್ಮ ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಹೆಸರು ತೆಗೆದುಕೊಂಡು ಹೊರಗೆ ಕರೆದು ಹೊಡೆಯಲು ಪ್ರಯತ್ನಿಸಿದಾಗ ನಮ್ಮ ತಮ್ಮಂದಿರಾದ ರುಸ್ತಂ ಅಹ್ಮದ ಮತ್ತು ಅಬ್ದುಲ ಸಮದ ಇಬ್ಬರೂ ವಿಚಾರಣೆ ಮಾಡಲು ಹೊರಗೆ ಬಂದ ತಕ್ಷಣ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಈ ಮಕ್ಕಳಿಗೆ ನೋಡಿಯೇ ಬಿಡೋಣಾ ಎಂದು ನಮ್ಮ ತಮ್ಮನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ನಮ್ಮ ತಮ್ಮ ಅಬ್ದುಲ್ ಸಮದ ಇತನು ಜಗಳ ಬಿಡಿಸಲು ಬಂದಾಗ ಅವನಿಗೆ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ಪುನ:ಹ ನಮ್ಮ ತಮ್ಮನ ತಲೆಯ ಮೇಲೆ ಅದೆ ತಲವಾರದಿಂದ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಅಲೀಮ ಪಟೇಲ ಇತನು ನನಗೆ ತಲವಾರದಿಂದ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಮೇಲೆ ಹೊಡೆದಾಗ ನಾನು ಅದನ್ನು ಎರಡು ಕೈಗಳಿಂದ ತಡೆದಿದ್ದು ನನಗೂ ಗಾಯಗಳಾಗಿವೆ ಜಗಳ ಬಿಡಿಸಲು ಬಂದ ನಮ್ಮ ತಂದೆಗೂ ಕೂಡಾ ಸಲೀಂ ಪಟೇಲ ಇತನು ತಾನು ತಂದಿರುವ ವಾಹನದ ವ್ಹೀಲ್ ಪಾನಾದಿಂದ ಬೆನ್ನಿನ ಮೇಲೆ, ತಲೆಯ ಮೇಲೆ ಹೊಡೆದು ಗಾಯಮಾಡಿರುತ್ತಾನೆ. ವಸೀಮ ಪಟೇಲ ಇತನು ನಮ್ಮ ಮನೆಯಲ್ಲಿದ್ದ ಕುರ್ಚಿಗಳನ್ನು  ತಗೆದುಕೊಂಡು ನಮ್ಮ ತಂದೆಯ ಬೆನ್ನಿನ ಮೇಲೆ ಕೈಕಾಲುಗಳ ಮೇಲೆ ಹೊಡೆದಿರುತ್ತಾನೆ. ನಮ್ಮ ತಂದಯವರು ಮೂರ್ಚೆ ಹೋದರು ಕೂಡಾ ಸದರಿ ಸಲೀಮ ಪಟೇಲ ಮತ್ತು ವಸೀಮ ಪಟೇಲರವರು ಕೈಕಾಲುಗಳಿಂದ ಹೊಡೆದಿರುತ್ತಾರೆ. ಸದರಿ ಜಗಳವನ್ನು ನಮ್ಮ ಮನೆಯ ನೇರೆಹೊರೆಯವರು ನೋಡಿ ನಾವು ಚಿರಾಡುತ್ತಿರುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಇಸ್ಮಾಯಿಲ್‌ ತಂದೆ ಸೈಯದ ಮಸ್ತಾನ ಸಾ:ವಲೀಯಾ ಚೌಕ ಡಾಲ್ಪೀನ ಸ್ಕೂಲ್‌ ಹತ್ತಿರ ಮದೀನಾ ಕಾಲೋನಿ ಕಲಬುರಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:08/08/2018 ರಂದು 2.00 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಬಾಬಾ ಮಳ್ಳಿ ಇತನು ಕೈಯಲ್ಲಿ ತಲವಾರ ಹಿಡಿದು ಬಂದವನೆ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದ ನಮ್ಮ ಮೋಟಾರ ಸೈಕಲ ಸ್ಪೇಂಡರ ನಂ.ಕೆಎ.32 ಜೆ.6896 ನೇದ್ದಕ್ಕೆ ತಲವಾರ ದಿಂದ ಹೊಡೆದನು. ಆಗ ನಾನು ಯಾಕೆ ಹೊಡೆಯುತ್ತಿ ಗಾಡಿಗೆ ಎಂದು ಕೇಳಿದಾಗ ನಿನ್ನ ಮಗ ಸೈಯದ ಮೋಬಿನ ಮತ್ತು ನಿಮ್ಮ ಮನೆಯವರೆಲ್ಲರಿಗೂ ತಲವಾರ ದಿಂದ ಹೊಡೆದು ಕೊಲೆ ಮಾಡುತ್ತೇನೆ ನಿಮ್ಮ ಮಗ ನಮ್ಮ ರುಸ್ತುಂಬಾಯಿ ಯೊಂದಿಗೆ ಜಗಳ ತಗೆದಾನ ರುಸ್ತುಂ ಹಾಗೂ ಅವರ ಅಪ್ಪ ಅಬ್ದುಲ ರಸೀದ ನಿಮಗೆ ಕೊಲೆ ಮಾಡಲು ಕಳುಹಿಸಿದ್ದಾರೆ ಅಂತಾ ಅಂದವನೆ ನಮ್ಮ ಮನೆಯಲ್ಲಿ ಬಂದು ತಲವಾರದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ತಂದೇನು. ಆಗ ನನ್ನ ಎಡಗೈಗೆ ತಲವಾರ ಹತ್ತಿ ರಕ್ತಗಾಯವಾಯಿತು. ಆಗ ನನ್ನ ಹೆಂಡತಿ ಫರ್ಜಾನಾ ಬೇಗಂ ಚಿರಾಡಲು ಹತ್ತಿದಾಗ ಬಾಬಾ ಮಳ್ಳಿ ಇತನು ಮನೆಯಿಂದ ಹೋಗುವಾಗ ನಿಮಗೆ ಮರಳಿ ಬಂದು ಕೊಲೆ ಮಾಡುತ್ತೇನೆ ಅನ್ನುತ್ತಾ ಹೋದನು ನಮ್ಮ ಮನೆಯ ಮುಂದೆ ಒಂದು ಕಾರ ನಿಂತಿದ್ದು ಅದರಲ್ಲಿ ಇನ್ನೂ 7-8 ಜನರು ಇದ್ದರು ಅವರು ಸಹ ನಮಗೆ ಕೊಲೆ ಮಾಡಲು ಬಂದವರಾಗಿದ್ದು ನಂತರ ಬಾಬಾ ಮಳ್ಳಿ ಇತನು ಅದೆ ಕಾರಿನಲ್ಲಿ ಕುಳಿತು ಹೋದನು. ಕಾರಣ ಇಂದು ರುಸ್ತುಂ ಹಾಗೂ ಅಜೀಂ ಪಟೇಲರವರಿಗೂ ಜಗಳವಾಗಿದ್ದು ಆ ಜಗಳ ಬಿಡಿಸಿಕೊಳ್ಳಲು ನನ್ನ ಮಗ ಸೈಯದ ಮೋಬಿನ ಹೋದ ಸಲುವಾಗಿ ನನ್ನ ಮಗನಿಗೂ ಹಾಗೂ ನಮ್ಮ ಮನೆಯವರಿಗೂ ಕೊಲೆ ಮಾಡುವ ಉದ್ದೇಶದಿಂದ ಬಾಬಾ ಮಳ್ಳಿ ಹಾಗೂ ಇತರೆ 7 ಜನರಿಗೆ ರುಸ್ತುಂ ಹಾಗೂ ಅವರ ತಂದೆ ಅಬ್ದುಲ್ ರಸೀದ ಇವರುಗಳು ಕಳುಹಿಸಿದ್ದು ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾಶರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: