POLICE BHAVAN KALABURAGI

POLICE BHAVAN KALABURAGI

06 August 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆನಂದ ತಂದೆ ಬಸವಂತರಾವ ಗರಡಶಟ್ಟಿ ಸಾ:ಮನೆ.ನಂ.10-935/18/19/69 ಮಹಾಲಕ್ಷ್ಮೀ ಲೇಔಟ ಅಗ್ನೀಶಾಮಕ ಠಾಣೆ ಎದರುಗಡೆ ಕಲಬುರಗಿ ರವರು ದಿನಾಂಕ:02/08/2018 ರಂದು  ನಾನು ಸಾಯಂಕಾಲ 6.30 ಗಂಟೆಗೆ ಇಂಗಳಗಿ ಗ್ರಾಮಕ್ಕೆ ಹೋಗಿದ್ದು ಹೋಗುವಾಗ ನಮಗೆ ಬೇಕಾದ ಒಡನಾಡಿ ಯುವಕ ಗಂಗಾಧರನನ್ನು ಮನೆಯಲ್ಲಿ ಮಲಗಿ ಕೊಳ್ಳಲು ಹೇಳಿದ್ದು ಅದರಂತೆ ಆತ 8.30 ಪಿ.ಎಂ ವರೆಗೆ ಮನೆಯಲ್ಲಿ ಇದ್ದು ಅನಿವಾರ್ಯ ಕಾರಣ ದಿಂದ ಬೇರೆ ಕಡೆ ಹೋಗಿ ಮಲಗಿಕೊಂಡು ಬೆಳಗ್ಗೆ ಅಂದರೆ ದಿನಾಂಕ:03/08/2018 ರಂದು 9.00 ಎ.ಎಂ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿ ನನಗೆ ಪೋನ ಮುಖಾಂತರ ವಿಷಯ ತಿಳಿಸಿದ್ದು ನಾನು ನನ್ನ ತಂದೆಯವರಿಗೆ ಮತ್ತು ಸಂಬಂಧಿಕರಿಗೆ ಮನೆಯ ಹತ್ತಿರ ಹೋಗಲು ತಿಳಿಸಿದ್ದು ಅದರಂತೆ ನಮ್ಮ ತಂದೆ ಹಾಗೂ ಇತರ ಸಂಬಂಧಿಕರು ನಮ್ಮ ಮನೆಗೆ ಹೋಗಿದ್ದು ನಾನು ಇಂದು ಮರಳಿ ಮನೆಗೆ ಬಂದು ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 320 ಗ್ರಾಂ ಬಂಗಾರದ ಒಡವೆಗಳು ಹಾಗೂ 490 ಗ್ರಾಂ ಬೆಳ್ಳಿಯ ವಸ್ತುಗಳು ಒಟ್ಟು ಅ.ಕಿ.6,30,000/-ರೂ ನೇದ್ದವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ರವಿಂದ್ರ ಸಾ||ಕಪನೂರ ಗ್ರಾಮ ತಾ||ಜಿ||ಕಲುಬುರಗಿ, ರವರ ಮಗ ಗಣೇಶ ಈತನು ದಿನಾಂಕ 10-11-2017 ರಂದು ಬೆಳಿಗ್ಗೆ 10-45 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು, ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವದಿಲ್ಲಾ. ಮತ್ತು ಸಂಭಂಧಿಕರ ಮನೆಯಲ್ಲಿ ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಲಾಗಿ ಇಲ್ಲಿಯವರೆಗೂ ಪತ್ತೆಯಾಗಿರುವದಿಲ್ಲಾ. ನನ್ನ  ಮಗನನ್ನು ಪತ್ತೇಮಾಡಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಸರುಬಾಯಿ ಗಂಡ ಪಾಂಡುರಂಗ ಸೋನಕವಡೆ ಸಾ:ಬೆಳಮಗಿ ಗ್ರಾಮ, ಹಾ.ವ:ಕಲಬುರಗಿ ರವರು ದಿನಾಂಕ: 02/08/2018 ರಂದು ಬೆಳಿಗ್ಗೆ ನಾನು ನನ್ನ ಗಂಡ ಇಬ್ಬರು ಕೂಡಿ ಕಲಬುರಗಿಯಿಂದ ನಮ್ಮ ಗ್ರಾಮ ಬೆಳಮಗಿ ಹೋದೆವು ಹೋಗುವಾಗ ಊರ ಸಮೀಪದಲ್ಲಿ ಹೊರಟಾಗ ದಾರಿಯಲ್ಲಿ ನನ್ನ ಭಾವ ಅಂಬಾರಯ ಇವನ ಮಗನಾದ ಮನೋಜಕುಮಾರನಿಗೆ ಮುಂಬಯಿಗೆ ಫೋನ್ ಮುಖಾಂತರ ನಿನ್ನ ತಂದೆ ಊರಲ್ಲಿ ಇದ್ದಾನೆ ಹೊಲದ ತಕರಾರು ವಿಷಯದಲ್ಲಿ ಜಗಳ ತಗೆಯಬಹುದು ತಿಳಿಸಿ ಹೇಳು ಅಂತಾ ಹೇಳಿ ಊರಿಗೆ ಹೋದೆವು ಊರಲ್ಲಿ ನಮ್ಮ ಮನೆಗೆ ಹೋದಾಗ ನನ್ನ ಭಾವ ಅಂಬಾರಾಯ ಮೈಧುನ ಪಾರಪ್ಪಾ ನೆಗೇಣಿ ಕಮಲಾಬಾಯಿ ಮೈಧುನ ಮಕ್ಕಳಾದ ಪೂಜಾ ಮತ್ತು ಅಜಯಕುಮಾರ ಎಲ್ಲರೂ ಮನೆಯಲ್ಲಿ ಕುಳಿತ್ತಿದ್ದರು. ನನ್ನ ಭಾವ ಅಂಬಾರಾಯ ಫೋನಿನಲ್ಲಿ ಮಾತನಾಡುತ್ತಿದ್ದನು. ಸದರಿ ಫೊನಿನಲ್ಲಿ ಪಾಂಡ್ಯಾ ಊರಿಗೆ ಬರುತ್ತಿದ್ದಾನೆ ಬರಲಿ ಅವನ ಹೆಂಡತಿನಹಡ ಆ ಭೋಸಡಿ ಮಗ ಯಾಕೆ ಇಲ್ಲಿಗೆ ಹೇಲು ತಿಲ್ಲಲು ಬರುತ್ತಿದ್ದಾರೆ. ನೋಡುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದನು. ನಾವು ಅವನ ಪಕ್ಕದಲ್ಲೇ ನಿಂತರು ನೋಡದೆ ಬೈಯುತ್ತಿದ್ದನು. ಇದನ್ನು ಕೇಳಿ ನಾನು ಹೀಗೆಕೆ ನಮ್ಮ ಹೆಸರುಗೊಂಡು ಹೊಲಸು ಶಬ್ದಗಳಿಂದ ಬೈಯುತ್ತಿದ್ದಿ ಅಂತಾ ಕೇಳಿದಾಗ ಒಮ್ಮಲೇ ಎದ್ದು ನನಗೆ ರಂಡಿ ಭೊಸಡಿ ಅಂತಾ ಅವಾಚ್ಯವಾಗಿ ಬೈಯ್ದು ತಲೆಯ ಮೇಲಿನ ಕೂದಲು ಹಿಡಿದು ಎತ್ತಿ ನೆಲ್ಲಕ್ಕೆ ಅಪ್ಪಳಿಸಿದನು. ಇದನ್ನು ನೋಡಿ ನನ್ನ ಗಂಡ ಬಿಡಿಸಲು ಬಂದಾಗ ಆತನಿಗೆ ಕೈಯಿಂದ ಹೊಡೆದನು. ಇದನ್ನು ನೋಡಿ ಕಮಲಾಬಾಯಿ ಅಜಯಕುಮಾರ, ಪೂಜಾ ಎಲ್ಲರೂ ಬಿಡಿಸಿದರು. ನನ್ನ ಮೈಧುನ ಪಾರಪ್ಪು ಈತನು ಇನ್ನು ಹೊಡೆಯರಿ ಅಂತಾ ಅಂದನು. ನನಗೆ ತಲೆಗೆ ಕಿವಿ ಹತ್ತಿರ ಸಣ್ಣ ತರಚಿದ ರಕ್ತಗಾಯ ತಲೆಗೆ ಒಳಪೆಟ್ಟು ಬೆನ್ನಿಗೆ ಗುಪ್ತಗಾಯ ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: