POLICE BHAVAN KALABURAGI

POLICE BHAVAN KALABURAGI

03 August 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-08-2018 ರಂದು ನಂದರ್ಗಾ ಗ್ರಾಮದ  ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಖಾಸಗಿ ಜೀಪನ್ನು  ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೋಡಲು ಗ್ರಾಮದ ಶ್ರೀ ಹನುಮಾನ ಗುಡಿಯ ಹತ್ತಿರ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ 06 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ನಾಗಪ್ಪ ತಂದೆ ಭೈಲಪ್ಪ ಪಾಟೀಲ 2) ವಜೀರ ತಂದೆ ಠಾಕೂರಸಾಬ ಇನಾಮದಾರ 3) ಯಲ್ಲಪ್ಪ ತಂದೆ ಶರಣಪ್ಪ ಬಿಂಜಗೇರಿ 4) ಖಾಜಾಬಾಯಿ ತಂದೆ ಹುಸೇನಸಾಬ ಖ್ಯಾಡಗಿ 5) ಕಾಂತಪ್ಪ ತಂದೆ ಶಿವಲಿಂಗಪ್ಪ ಅಳ್ಳಗಿ 6) ಇಮ್ತಿಯಾಜ ತಂದೆ ವಜೋದ್ದೀನ್ ಜಾಗಿರದಾರ ಸಾ|| ಎಲ್ಲರು ನಂದರ್ಗಾ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 2000/- ರೂ ಮತ್ತು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-08-2018 ರಂದು ನಂಧರ್ಗಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಖಾಸಗಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೋಡಲು ಸರಕಾರಿ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ಶರಣಪ್ಪ ತಂದೆ ಸಾತಲಿಂಗಪ್ಪ ಪಾಸೋಡಿ ಸಾ||ನಂದರ್ಗಾ ತಾ||ಆಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 760/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಬಸಮ್ಮಾ @ ಪವಿತ್ರಾ ಗಂಡ ಶ್ಯಾಮಸುಂದರ ಹುಲಿ ಸಾ:ಸಂಜೀವ ನಗರ ನೆಹರು ಗಂಜ ಕಲಬುರಗಿ ಇವರ ಗಂಡ ಶ್ಯಾಮಸುಂದರ ಮತ್ತು ಅವರ ಸ್ನೇಹಿತ ಹುಸನಪ್ಪ ಇಬ್ಬರು ಕೂಡಿಕೊಂಡು KA-32 EF-6625 ನೇದ್ದರ ಮೇಲೆ ಕಲಬುರಗಿಯಿಂದ ಭೀಮಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಪಟ್ಟಣ ಗ್ರಾಮಕ್ಕೆ ಹೋಗಿ ನಂತರ ಮರಳಿ ಕಲಬುರಗಿ ಬರುವ ಕುರಿತು ಅಭಿ ವ್ಯಾಲಿ ರೆಸ್ಟಾರಂಟ್ ಹತ್ತಿರ ಮದ್ಯಹ್ನ 12:30 ಗಂಟೆಗೆ ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ರೋಡ ಕಡೆಯಿಂದ ಲಾರಿ ನಂ MH-44- 2771 ನೇದ್ದರ ಚಾಲಕ ರಾಮೇಶ್ವರ ತಂದೆ ಬಾಬಾಸಾಹೇಬ ಗೋಗಲೇ ಸಾ:ಆನಂದಗಾಂವ ತಾ:ಕೇಜ್ ಜಿ:ಬೀಡ್ ರಾಜ್ಯ ಮಹಾರಾಷ್ರ್ಟಇತನು ತನ್ನ ಲಾರಿಯನ್ನು ಅಡ್ಡಾ-ತಿಡ್ಡಿಯಾಗಿ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸದರಿ ಮೋಟಾರ ಸೈಕಲದ ಹಿಂದುಗಡೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಮೃತ ಶ್ಯಾಮಸುಂದರ ಇತನ ತಲೆಗೆ ಹಾಗು ಇತರೇ ಕಡೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ತಂದಾಗ ಮೃತಪಟ್ಟಿರುತ್ತಾನೆ. ಸದರಿ ಅಪಘಾತವಾದ ನಂತರ ಲಾರಿ ಚಾಲಕ ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅನಂತ ತಂದೆ ಮೋಹನರಾವ ಜವಳಕರ ಸಾ: ಪ್ಲಾಟ್ ನಂ.15 ಎಸ್.ಬಿ ಟೆಂಪಲ ರೋಡ ಮುಕ್ತಾಂಬಿಕಾ ಕಾಲೇಜ ಹತ್ತಿರ ಲಾಲಗೇರಿ ಕ್ರಾಸ ಕಲಬುರಗಿ ಇವರ ಕಾಕನವರಾದ ರಾಜೇಂದ್ರ ತಂದೆ ಬದ್ರೀನಾಥ ಜವಳಕರ ಇವರ ಮನೆ ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದು ಆ ಮನೆಯಲ್ಲಿ ನಮ್ಮ ಕಾಕ ಮತ್ತು ಕಾಕಿಯವರಾದ ಶ್ರೀಮತಿ ಅನುರಾಧಾ ಇವರು ವಾಸವಾಗಿರುತ್ತಾರೆ. ಹೀಗಿದ್ದು ನಮ್ಮ ಕಾಕ ಮತ್ತು ಕಾಕಿ ಇಬ್ಬರೂ ಕೂಡಿಕೊಂಡು ದಿನಾಂಕ:11/07/2018 ರಂದು ರಾತ್ರಿ 9.00 ಪಿ.ಎಂ ಸುಮಾರಿಗೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ಬೆಂಗಳೂರಿಗೆ ಪ್ರವಾಸ ಕುರಿತು ಹೋಗಿದ್ದು ಹೋಗುವಾಗ ನಮಗೆ ಮನೆಯ ಕಡೆ ನೋಡಿಕೊಳ್ಳಲು ತಿಳಿಸಿದ್ದು ಹಾಗೂ ನಮ್ಮ ಕಾಕನವರ ಕರ್ನಾಟಕ ಫೂಡಪ್ರೋಡೆಕ್ಸ್ ಆಫೀಸನಲ್ಲಿ ಕೆಲಸ ಮಾಡುವ ಹುಡುಗನಾದ ಅಜಯ ಕದಂ ಇತನಿಗೆ ಮನೆಯ ಗೇಟಿನ ಚಾವಿ ಕೊಟ್ಟು ಮನೆಯ ಕಂಪೌಂಡ ಒಳಗಡೆಯ ಕಸ ಸ್ವಚ್ಛತೆ ಮಾಡಿ ಹೋಗುವಂತೆ ಹೇಳಿದ್ದು ಅದರಂತೆ ನಾವು ದಿನಾಲು ಆಗಾಗ ನಮ್ಮ ಕಾಕನವರ ಮನೆಯ ಕಡೆ ನಿಗಾ ಮಾಡುತ್ತಾ ಇದ್ದು ಅಜಯ ಕದಂ ಇತನು ದಿನಾಲು ಬೆಳಗ್ಗೆ ನಮ್ಮ ಕಾಕನ ಮನೆಗೆ ಬಂದು ಕಂಪೌಂಡನಲ್ಲಿಯ ಕಸ ಹೊಡೆದು ಹೋಗಿದ್ದು ದಿನಾಂಕ:13/07/2018 ರಂದು ಬೆಳಗ್ಗೆ 9.00 ಎ.ಎಂ ಸುಮಾರಿಗೆ ಮನೆಯ ಕಂಪೌಂಡನಲ್ಲಿಯ ಕಸ ಹೊಡೆದು ಸ್ವಚ್ಛಮಾಡಿ ಮನೆಯ ಕಂಪೌಂಡ ಕೀಲಿ ಹಾಕಿಕೊಂಡು ಹೋಗಿದ್ದು ಇಂದು ಬೆಳಗ್ಗೆ ಅಂದರೆ ದಿನಾಂಕ:14/07/2018 ರಂದು ಬೆಳಗ್ಗೆ 9.00 ಎ.ಎಂಕ್ಕೆ ಅಜಯ ಕದಂ ಇತನು ಮತ್ತೆ ಮನೆಗೆ ಬಂದು ಕಂಪೌಂಡ ಕೀಲಿ ತೆಗೆದು ಕಂಪೌಂಡನಲ್ಲಿಯ ಕಸ ಹೊಡೆಯಲು ಬಂದಾಗ ಮನೆಯ ಬಾಗಿಲಿಗೆ ಹಾಕಿದ ಕೊಂಡಿ ಮುರಿದಿದ್ದನ್ನು ನೋಡಿ ನನಗೆ ಬಂದು ತಿಳಿಸಿದನು ನಾನು ಕೂಡಲೆ ನಮ್ಮ ಕಾಕನ ಮನೆಗೆ ಹೋಗಿ ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದನ್ನು ನೋಡಿ ನಮ್ಮ ಕಾಕನವರಿಗೆ ಪೋನ ಮಾಡಿದಾಗ ಪೋನ ನಾಟರೀಚ್ಏಬಲ್ ಬಂದಿದ್ದು ನಾನು ಕೂಡಲೆ ಪೊಲೀಸ ಠಾಣೆಗೆ ಬಂದು ಅರ್ಜಿ ಸಲ್ಲಿಸಿದ್ದು ನಮ್ಮ ಕಾಕನವರು ಮನೆಗೆ ಬಂದ ನಂತರ ಕಳ್ಳತನವಾದ ವಸ್ತುಗಳ ಮಾಹಿತಿ ತಿಳಿಸುತ್ತೇವೆ ನಮ್ಮ ಕಾಕನವರ ಮನೆಯ ಬಾಗಿಲ ಕೊಂಡಿ ಮುರಿದು ಯಾರೋ ಕಳ್ಳರು ಮನೆಯಲ್ಲಿಯ ಬೆಲೆ ಬಾಳುವ 9,20,000/- ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಒಡವೆಗಳು ಕಳ್ಳತನವಾಗಿರುತ್ತವೆ  ಕಳ್ಳತನ ಮಾಡಿದವರನ್ನು ಪತ್ತೆಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಕರಬಸಪ್ಪಾ ತಂದೆ ವಿಠಲ ಕಂಠೇಕರ್ ಸಾ:ಕಡಗಂಚಿ ಗ್ರಾಮ ಇವರು  ಕಲಬುರಗಿಯ ಬ್ರಹ್ಮಪೂರ ದನಗರ ಗಲ್ಲಿಯಾ ಕಾಂತಪ್ಪ ತಂದೆ ಶಿವಲಿಂಗಪ್ಪಾ ಸಾವಳಗಿ ಇವರ ಮಗಳಾದ ಚಂದ್ರಭಾಗ ಇವಳನ್ನು ನಾನು ಮೇ-2011 ರಂದು ಮದುವೆಯಾಗಿದ್ದು ಇರುತ್ತದೆ. ಹೀಗಿದ್ದು ಮದುವಯಾದ ಕೆಲವು ದಿಗಳಲ್ಲಿ ನನ್ನ ಹೆಂಡತಿ ವಿನಾಕಾರಣ ಮನೆಯಲ್ಲಿ ನನ್ನ ತಂದೆ-ತಾಯಿಗೆ ಮತ್ತು ನನಗೆ ಕಿರಳಕುಳ ನೀಡುವುದು ಜಗಳ ತಗೆಯುವುದು ಪ್ರಾರಂಭಿಸಿದಳು ಆದರು ಸಹ ನಾವು ಎಲ್ಲರೂ ಸುಮಾರು ಎರಡು ವರ್ಷಗಳ ವರೆಗೆ ಅವಳು ನೀಡುವ ಕಿರಕುಳ ಸಹಿಸಿಕೊಂಡಿದ್ದು ಇದ್ದೇವೆ. ಮದುವೆಯಾದ ಕೆಲವು ತಿಂಗಳ ನಂತರ ನನ್ನ ಹೆಂಡತಿ ಗರ್ಭದಾರಣೆಯಾಗಿದ್ದು ತರುವಾಯ ಹೆಣ್ಣುಮಗು ಜನ್ಮ ನೀಡಿದ್ದು ಇರುತ್ತದೆ. ಆನಂತರ ಪುನ: ನಮ್ಮೊಂದಿಗೆ ಜಗಳ ತಗೆದು ನನ್ನ ಕುರಿತು ನೀನು ನಿನ್ನ ತಂದೆ-ತಾಯಿ ಬಂದುಗಳೂ ಎಲ್ಲರನ್ನು ಬಿಟ್ಟು ಕಲಬುರಗಿಗೆ ನನ್ನ ಜೊತೆ ಬರಬೇಕು ನಾನು ಹೇಳಿದ ಕೆಲಸ ಮಾಡಬೇಕು ಎಂದು ಷರತ್ತು ಹಾಕಿದಾಗ ಆದರೆ ಮನೆಯ ಹಿರಿಯ ಮಗನಾದ ನಾನು ನನ್ನ ತಂದೆ-ತಾಯನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ ವಾಗಿದ್ದರಿಂದ ಮತ್ತು ಅವರಿಗೆ ವಯಸ್ಸಾಗಿರುವುದುರಿಂದ ಅವರು ಬದುಕಲು ಯಾವುದೇ ಮೂಲ ಆದಾಯ ಇರದ ಕಾರಣ ನಾನು ನನ್ನ ಹೆಂಡತಿ ನೀನು ಹೇಳಿದಂತೆ ನಾನು ಕೇಳಲು ಆಗುವುದಿಲ್ಲ ಎಂದು ಹೇಳಿದೇನು. ತದನಂತರ ದಿನಂಪ್ರತಿ ಸಣ್ಣಪುಟ್ಟ ವಿಷಯಗಳಿಗೆ ನಮ್ಮೊಂದಿಗೆ ಜಗಳ ಆಡುವುದು ಹೆಚ್ಚಿಗೆ ಮಾಡಿದಳು. ಮತ್ತು ಎರಡನೆ ಬಾರಿಗೆ ಗರ್ಭದರಿಸಿ ಮೂರು ತಿಂಗಳು ಗರ್ಭವತಿ  ಇದ್ದಾಗ ಕಲಬುರಗಿ ತವರು ಮನೆಗೆ ಹೋಗಿ ನಾನು ಅಲ್ಲೇ ಡಾಕ್ಟರಗೆ ತೋರಿಸಿ ಡೆಲೆವರಿ ಆಗುವುರೆಗು ಅಲ್ಲೆ ಇರುತ್ತೇನೆಂದು ಹೇಳಿ ಹೋದಳು. ತವರು ಎರಡನೆ ಸಲ ಹೆಣ್ಣುಮಗು ಜನಿಸಿತ್ತು ಆದರೆ ನನಗಾಲಿ ಅಥವಾ ನನ್ನ ತಂದೆ-ತಾಯಿಯವರಿಗೆ ಆಗಲಿ ಬಂದುಬಳಗದವರಿಗಾಗಲಿ ತನ್ನ ತವರು ಮನೆಗೆ ಬರದಂತೆ ತಾಕಿತ್ತು ಮಾಡಿದ್ದು ಇದರಿಂದ ನಾನು ಮತ್ತು ನನ್ನ ತಂದೆ-ತಾಯಿ ಮಾನಸಿಕವಾಗಿ ನೊಂದೆವು. ಮಗು ಐದು ತಿಂಗಳು ಆದ ನಂತರ ನಾನು ನನ್ನ ಅತ್ತೆಮಾವನ ಮನೆಗೆ ಬಂದು ನನ್ನ ಹೆಂಡತಿಯನ್ನು ಕರದುಕೊಂಡು ನನ್ನ ಮನೆಗೆ ಹೋಗುತ್ತೇನೆ ಅಂದಾಗ ನನ್ನ ಅತ್ತೆಮಾವ ಅವರು ಎಲ್ಲಿಗೂ ಬರುವುದಿಲ್ಲ ಹೆಂಡತಿ ಮಕ್ಕಳು ಬೇಕಾದರೆ. ನೀನು ನಿನ್ನ ಸಂಬಂಧಿಕರನ್ನು ಬಿಟ್ಟು ನಮ್ಮ ಮನೆಯಲ್ಲಿದ್ದು ನಾವು ಹೇಳಿದ ಕೆಲಸ ಮಾಡಬೇಕೆಂದು ಹೇಳಿದರು. ಆಗ ನಾನು ನನ್ನ ಹೆಂಡತಿಯನ್ನು ನನ್ನೊಂದಿಗೆ ಬಾ ಎಂದು ಕರೆದಾಗ ಅವಳು ಬರಲು ಸ್ಪಷ್ಟವಾಗಿ ನಿರಾಕರಿಸಿ ಅವರ ತಂದೆ-ತಾಯಿ ಹೇಳಿದಂತೆ ಕೇಳು ಎಂದಳು ಆಗ ನಾನು ಊರಿಗೆ ವಾಪಸ್ಸು ಹೋದೇನು. ಪುನಃ 2-3 ಸಲ ನಾವು ಕರೆಯಲು ಹೋದಾಗ ಅವಳು ಬರಲಿಲ್ಲ ಸರಿಸುಮಾರು 5 ವರ್ಷದಿಂದ ಅಂದರೆ 2013ನೇ ಇಸ್ವಿಯಿಂದ ನನ್ನಿಂದ ನನ್ನ ಹೆಂಡತಿ ದೂರವಿದ್ದಾಳೆ. ತದನಂತರ ನನ್ನ ವಿರುದ್ಧ ನನ್ನ ಹೆಂಡತಿ ತನ್ನ ಜೀವನಾಂಶಕ್ಕಾಗಿ ಕೇಸ ಮಾಡಿದ್ದು ಪುನ: ಕೇಸ್ ವಾಪಸ್ಸು ಪಡೆದಿರುತ್ತಾಳೆ. ಅಲ್ಲದೇ ಒಂದು ತಿಂಗಳ ಹಿಂದೆ ಸುಳ್ಳು ಸೃಷ್ಟಿಸಿ ನನ್ನ ಮೇಲೆ ಮತ್ತು ನನ್ನ ಸಂಬಂಧಿದಕರ ಮೇಲೆ ಕ್ರಿಮಿನಲ್ ಕೇಸ ಮಾಡಿರುತ್ತಾಳೆ. ಆದರು ಸಹ ನಾವು ಎಲ್ಲವನ್ನು ಸಹಿಸಿಕೊಂಡು ಸುಮ್ಮನಾದೇವು.      ದಿನಾಂಕ:29/07/2018 ರಂದು ಸರಿಸುಮಾರು ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ-ತಾಯಿ ಎಲ್ಲರೂ ಮನೆ ಮುಂದಿನ ರಸ್ತೆಯ ಮೇಲೆ ನಿಂತು ಮಾತನಾಡುತ್ತಿರುವಾಗ ನನ್ನ ಹೆಂಡತಿಯಾದ ಶ್ರೀಮತಿ.ಚಂದ್ರಭಾಗ, ಅತ್ತೆಯಾದ ಶಾಂತಾಬಾಯಿ, ಮಾವ ಕಾಂತಪ್ಪ ಇವರು ಬಂದವರೆ ನಮಗೆ ಅವಾಚ್ಯವಾಗಿ ಬೈದು ನಿಮ್ಮ ಮೇಲೆ ಕೇಸ್ ಮಾಡಿ ಒಂದು ತಿಂಗಳುಗಳು ಆದರು ಪೊಲೀಸರು ನಿಮ್ಮನ್ನು ಹಿಡಿದಿಲ್ಲ ಜೈಲಿಗೆ ಕಳಿಸಿಲ್ಲಾ ಆದರೆ ನಾವು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ್ಲ ಎಂದು ಕೈಯಿಂದ ನಮ್ಮ ಮೂರುಜನಿರಗೆ ಮನಬಂದಂತೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನನ್ನ ಮಾವ ಮತ್ತು ನನ್ನ ಹೆಂಡತಿ ಇಬ್ಬರು ಕಾಲಿನ ಚಪ್ಪಲಿ ತಗೆದು ನನಗೆ ಮತ್ತು ನನ್ನ ತಾಯಿಗೆ ಮುಖದ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾರೆ. ನಮ್ಮ ಹಿಂದೆ ರೌಡಿಗಳು ಇದ್ದಾರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಮೊನ್ನೆ ಕಲಬುರಗಿಯಲ್ಲಿ ನಾಲ್ಕು ಜನರನ್ನು ಮನೆಯಲ್ಲಿ ಪೆಟ್ರೋಲ್ ಸುರಿದು ಸುಟ್ಟಂತೆ ನಿಮಗೂ ಸಹ ಅತೀ ಶೀಘ್ರದಲ್ಲಿ ಸುಟ್ಟು ಸಾಯಿಸುತ್ತೇವೆಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಸುಮಯ್ಯಾ ಬೇಗಂ ಇವರ ತವರೂರು ಕಲಬುರಗಿ ತಾಲ್ಲೂಕಿನ ಯಳವಂತಗಿ ಬಿ ಗ್ರಾಮವಿದ್ದು ನನಗೆ ದಿನಾಂಕ:12/04/2018 ರಂದು ಆಳಂದ ತಾಲ್ಲೂಕಿನ ಮಡಕಿ ಗ್ರಾಮದ ಖಾಜಾ ಪಟೇಲ್ ತಂದೆ ಮದರ ಪಟೇಲ್ ಬಿರಾದಾರ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ಒಂದು ತಿಂಗಳವರೆಗೆ ನನ್ನ ಗಂಡ ಹಾಗೂ ಅತ್ತೆಯಾದ ಗೋರಿಬಿ ರವರುಗಳು ನನಗೆ ಚನ್ನಾಗಿ ನೊಡಿಕೊಂಡಿರುತ್ತಾರೆ, ನಂತರದ ದಿನಗಳಲ್ಲಿ ನಮ್ಮ ಅತ್ತೆಯವರು ನನಗೆ ನೀನೂ ಚನ್ನಾಗಿ ಅಡುಗೆ ಮಾಡುವುದಿಲ್ಲ ಸರಿಯಾಗಿ ಮನೆಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾ ನನಗೆ ರಂಡಿ ಬೋಸಡಿ ಎಂದು ಅವಾಚ್ಯವಾಗಿ ಬೈಯುವುದು ಮತ್ತು ಈ ವಿಷಯವನ್ನು ನನ್ನ ಗಂಡನಿಗೆ ಹೇಳುವುದು ಮಾಡುವುದು ಮಾಡುತ್ತಿದ್ದರಿಂದ ನನ್ನ ಗಂಡನು ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದು ಅಲ್ಲದೇ ನಮ್ಮ ಅತ್ತೆಯವರು ನನಗೆ ನನ್ನ ಗಂಡನೊಂದಿಗೆ ಸೇರಲು ಬಿಡದೆ ನನಗೊಬ್ಬಳಿಗೆ ಒಂದು ಕೋಣೆಯಲ್ಲಿ ಮಲಗುಸುತ್ತಿದ್ದಳು. ಮತ್ತು ನನ್ನ ಗಂಡನು ಕೂಡ ನನಗೆ ರಂಡಿ ನೀನು ನಮ್ಮ ಮನೆಯಲ್ಲಿ ಇರಬೇಡ ಇಲ್ಲಿಂದ ಹೋಗು ಎಂದು ಬಿಡಿಸುತ್ತಿದ್ದನು ಈ ವಿಷವಯನ್ನು ಆಗಾಗ ನಾನು ನಮ್ಮ ತಂದೆ ತಾಯಿಗೆ ಫೋನ್ ಮಾಡಿ ಹೇಳಿರುತ್ತೇನೆ ಅಲ್ಲದೇ ನಮ್ಮ ಚಿಕ್ಕಮ್ಮಳಾದ ನಫಿಸಾ ಬೇಗಂ ಹಾಗೂ ಅಜ್ಜಿಯಾದ ಮಕ್ತುಂಬಿ ರವರಲ್ಲಿ ಕೂಡ ಫೋನ ಮೂಲಕ ತಿಳಿಸಿದ್ದು ಅವರು ಸಮಾಧಾನ ಹೇಳಿರುತ್ತಾರೆ. ದಿನಾಂಕ:31/07/2018 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ ಖಾಜಾ ಪಟೇಲ್ ಹಾಗೂ ಅತ್ತೆಯಾದ ಗೋರಿಬಿ ರವರುಗಳು ಕೂಡಿ ನನಗೆ ರಂಡಿ ಭೋಸಡಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಕೈಯಿಂದ ತಲೆಗೆ ಬೆನ್ನ ಮೇಲೆ ಹೊಡೆದಿರುತ್ತಾರೆ. ಅಲ್ಲದೇ ನೀನು ನಮ್ಮ ಮನೆಯಲ್ಲಿದ್ದರೆ ನಿನಗೆ ಖಲಾಸ ಮಾಡುತ್ತೆವೆಂದು ಹೆದರಿಸಿದ್ದರಿಂದ ನಾನು ಅವರ ತ್ರಾಸ ತಾಳಲಾರದೆ ಮನೆಯಲ್ಲಿದ್ದ ಕ್ರಿಮಿನಾಷಕ ಅಔಷದ ಸೇವೆನೆ ಮಾಡಿದ್ದು ನಂತರ ಈ ವಿಷಯವನ್ನು ನನ್ನ ಗಂಡನು ನಮ್ಮ ಅಣ್ಣನಾದ ಫತ್ರು ಪಟೇಲ್ ಇವರಿಗೆ ತಿಳಿಸಿದ್ದು ಅವರು ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: