POLICE BHAVAN KALABURAGI

POLICE BHAVAN KALABURAGI

25 April 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗಪ್ಪಾ ಜೇವರಗಿ ಸಾ: ಅಂಕಲಗಿ ತಾ:ಜಿ:ಕಲಬುರಗಿ ರವರು ದಿನಾಂಕ: 23/04/2018 ರಂದು ರಾತ್ರಿ ನಾನು, ನನ್ನ ಹೆಂಡತಿ ಮತ್ತು ತಾಯಿ ಎಲ್ಲರೂ ಊಟ ಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಾಯಿ ಸುಶೀಲಾಬಾಯಿ ಇವರು ನನಗೆ ಬಹಳಷ್ಟು ಶಕೆ ಆಗುತ್ತಿದೆ ಅಂತಾ ಹೇಳಿ ಮ್ಯಾಳಿಗೆ ಮೇಲೆ ಮಲಗಲು ಹೊಗಿದ್ದು. ನಾನು, ನನ್ನ ತಾಯಿ ಮಲಗುವ ಕೋಣೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ನಮ್ಮ ಬೆಡ್ ರೂಮಿಗೆ ಹೋಗಿ ಮಲಗಿಕೊಂಡಿರುತ್ತೇವೆ. ಇಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನನ್ನ ತಾಯಿ ಗಾಬರಿಯಿಂದ ನಮ್ಮ ರೂಮಿನ ಬಾಗಿಲು ಬಡಿದು ಕರೆದಾಗ ನಾನು ನನ್ನ ಹೆಂಡತಿ ಹೊರಗೆ ಬಂದಾಗ ನನ್ನ ತಾಯಿ ನಾನು ಮಲಗುವ ಕೊಣೆಯ ಬಾಗಿಲ ಕೊಂಡಿ ಮುರಿದು ತರೆದಿದ್ದು ಇರುತ್ತದೆ. ಮತ್ತು ಅಲ್ಮಾರದ ಬಾಗಿಲು ಕೂಡಾ ಮುರಿದಂತಾಗಿ ತೆರೆದಿರುತ್ತದೆ. ಅಂತಾ ತಿಳಿಸಿದಾಗ ನಾವು ಕೂಡಾ ಗಾಬರಿಗೊಂಡು ರೂಮಿನಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ, ಅಲಮಾರದಲ್ಲಿಟ್ಟಿರುವ 6,70,000-00 ಕಿಮತ್ತಿನ ಬಂಗಾರ ಮತ್ತು ಬೆಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು. ನಂತರ ನಮ್ಮ ಅಣ್ಣತಮ್ಮಕೀಯ ನೀಲಕಂಠ ಜೇವರಗಿ ಇವರ ಫತ್ರಾ ಶಡ್ಡ್ ಹಾಕಿರುವ ಮನೆಗೆ ಹೋಗಿ ನೋಡಲಾಗಿ ಅಲಮಾರದಲ್ಲಿಟ್ಟಿರುವ 1,28,000-00 ರೂ. ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣ ಕಳ್ಳತನವಾಗಿದ್ದು ಇರುತ್ತದೆ. ನಮ್ಮ ಮನೆಯ ಅಲ್ಮಾರದಲ್ಲಿಟ್ಟಿರುವ ಮತ್ತು ನಮ್ಮ ಅಣ್ಣತಮ್ಮಕಿಯ ನೀಲಕಂಠ ಇವರ ಮನೆಯ ಅಲ್ಮಾರದಲ್ಲಿಟ್ಟಿರುವ ಒಟ್ಟು ಅ:ಕಿ: 7,98,000-00 ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಮತ್ತು ನಗದು ಹಣವನ್ನು ನಿನ್ನೆ ದಿನಾಂಕ: 23/04/2018 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ: 24/04/2018 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 17/04/2018 ರಂದು 10 ಪಿಎಮ್ ಸುಮಾರಿಗೆ ಕಲಬುರಗಿಯಿಂದ ನಮ್ಮ ವಾಹನದಲ್ಲಿ  DIsel ತಗೆದುಕೊಂಡು ಅಫಜಲಪೂರ ತಾಲೂಕಿನ ಕರಜಗಿ, ಮಾಶಾಳ ಟವಾರಗಳಿಗೆ DIsel ತಲುಪಿಸಿ ಮರಳಿ ಕಲಬುರಗಿಗೆ ಬರುವಾಗ ಅಫಜಲಪೂರ ದಾಟಿದ ಬಳಿಕ ನಮ್ಮ ವಾಹನದ ಚಾಲಕನಾದ ಗೌರಿಶಂಕರ ಈತನು ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸುತಿದ್ದನು ನಾನು ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ಚಲಾಯಿಸುತ್ತಾ ಮಲ್ಲಾಬಾದ ಗ್ರಾಮದ ಬಸ್ಟ್ಯಾಂಡ ಹತ್ತಿರ ರೋಡಿನ ಬಾಜು ಇದ್ದ ಕನಕದಾಸ ಚೌಕ ಕಟ್ಟೆಗೆ ಡಿಕ್ಕಿ ಪಡಿಸಿದ ರಬಸಕ್ಕೆ ನನಗೆ ಎಡಗೈ ಭುಜಕ್ಕೆ ಟೊಂಕಕ್ಕೆ , ಭಾರಿ ಗುಪ್ತ ಗಾಯಗಳಾಗಿದ್ದು ಬಲಗಣ್ಣಿನ ಕೆಳಗೆ ರಕ್ತಗಾಯವಾಗಿದ್ದು ನಮ್ಮ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ನಮ್ಮ ವಾಹನ ಡಿಕ್ಕಿ ಪಡಿಸಿದ  ಶಬ್ದಕ್ಕೆ ಅಲ್ಲೆ ಹೊಟೇಲಗಳಲ್ಲಿ ಮಲಗಿದ ಜನರು ಎದ್ದು ಬಂದಿದ್ದು ನಮ್ಮ ಚಾಲಕ ಗೌರಿಶಕರ 108 ವಾಹನಕ್ಕೆ ಕಾಲ್ ಮಾಡಿ ಕರೆಯಿಸಿ ನನಗೆ ಅದರಲ್ಲಿ ಹಾಕಿಕೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೋಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ ಕಾರಣ ಟಾಟಾ ಎಸಿ ನಂ ಕೆಎ-32 ಸಿ-3396 ನೆದ್ದರ ಚಾಲಕ ಗೌರಿಶಂಕರನು ತನ್ನ ವಶದಲಿದ್ದ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ  ಮಲ್ಲಾಬಾದ ಗ್ರಮಾದ ರೋಡಿನ ಬಾಜು ಇರುವ ಕನಕದಾಸ ಚೌಕ ಕಟ್ಟೆಗೆ ಜೋರಾಗಿ ಡಿಕ್ಕಿ ಪಡಿಸಿ ನನಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿದ್ದು ಸದರಿ ಚಾಲಕನ  ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: