POLICE BHAVAN KALABURAGI

POLICE BHAVAN KALABURAGI

13 April 2018

KALABURAGI DISTRICT REPORTED CRIMES

ಪೊಲೀಸ ಅಧೀಕಾರಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಆತ್ಮರಕ್ಷಣೆಗೊಸ್ಕರ ಗುಂಡಿನ ದಾಳಿ :
ಗ್ರಾಮೀಣ ಠಾಣೆ : ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಇತ್ತೀತ್ತಲಾಗಿ ಕಲಬುರಗಿ ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ಸುಲಿಗೆ  ಪ್ರಕರಣಗಳು ದಾಖಲಾಗಿದ್ದು, ಆ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಮಾನ್ಯ ಎ.ಎಸ್.ಪಿ. (ಎ) ಉಪವಿಭಾಗ ಕಲಬುರಗಿ ರವರ ಮೇಲು ಉಸ್ತುವಾರಿಯಲ್ಲಿ  ಒಟ್ಟು 06 ತಂಡಗಳು ರಚನೆ ಮಾಡಿದ್ದು. ಸದರಿ 06 ತಂಡಗಳಲ್ಲಿ  ನನ್ನ ನೇತೃತ್ವದಲ್ಲಿ ಹುಸೇನಬಾಷಾ ಸಿ.ಹೆಚ.ಸಿ.224, ಬಂದೇನವಾಜ ಸಿ.ಹೆಚ.ಸಿ. 546, ಭೀಮನಾಯಕ ಸಿಪಿಸಿ 855 ಇವರುಗಳು ಇದ್ದು, ಪಿ.ಎಸ್.ಐ. ವನಂಜಕರ ರವರ ನೇತೃತ್ವದಲ್ಲಿ  ರಾಜಕುಮಾರ ಸಿಪಿಸಿ 1100 ಸ್ಟೇಷನ ಬಜಾರ ಠಾಣೆ ಕಲಬುರಗಿ, ತೌಸೀಫ ಸಿಪಿಸಿ 1265 ಸ್ಟೇಷನ ಬಜಾರ ಠಾಣೆ ಕಲಬುರಗಿ, ಮತ್ತು ಸಿಪಿಸಿ 108 ನಿಂಗಪ್ಪ ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಇವರುಗಳಿರುತ್ತಾರೆ. ಈ ಮೇಲ್ಕಂಡ ಎರಡು ತಂಡಗಳೊಂದಿಗೆ  ಕಲಬುರಗಿ ನಗರದಲ್ಲಿ ವಿಶೇಷ ಗಸ್ತು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ  ಬೆಳಗಿನ 03-45  ಗಂಟೆ ಸುಮಾರಿಗೆ ಶಹಾಬಾದ ರಿಂಗ ರೋಡಿನ ವಿ.ಟಿ.ಯು. ಕಾಲೇಜ ಹತ್ತಿರ ಯಾರೋ ಅಪರಿಚಿತ ನಾಲ್ಕು ಜನರು ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ ಮೇಲೆ ಬಂದು  ಅದೇ ದಾರಿಯಿಂದ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ ಸವಾರನಿಗೆ ಅಡ್ಡಗಟ್ಟಿ  ಅವನ ಮೋಟಾರ ಸೈಕಲ ಮತ್ತು ಮೋಬಾಯಿಲ ಕಸಿದುಕೊಂಡು ಹೋಗಿರುತ್ತಾರೆ ಎಂದು ಕಂಟ್ರೋಲ ರೂಮಿನಿಂದ ಮಾಹಿತಿ ತಿಳಿದು ಬಂದ ಮೇರೆಗೆ ವಿಟಿಯು ಕಾಲೇ ಹತ್ತಿರ ಹೋಗಿ ಘಟನಾ ಸ್ಥಳ ಪರಿಶೀಲಿಸುತ್ತಿರುವಾಗ ಬೆಳಗಿನ 04-30 ಗಂಟೆ ಸುಮಾರಿಗೆ ಮತ್ತೆ ಕಂಟ್ರೋಲ ರೂಮಿನವರು ಹೀರಾಪೂರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ನಾಲ್ಕು ಜನ ಅಪರಿಚಿತರು  ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ  ಮೇಲೆ ಬಂದು ತಡೆದು ನಿಲ್ಲಿಸಿ ಆತನ ಹತ್ತಿರ ಲ್ಯಾಪಟ್ಯಾಪ, ಮೋಬಾಯಿಲ್, ನಗದುಹಣ  ಕಸಿದುಕೊಂಡು ಹೋಗಿರುತ್ತಾರೆ ಎಂದು ಮಾಹಿತಿ ಮೇರೆಗೆ ಪುನ:ಹ ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಹಾಗೂ ಪಿ.ಎಸ್.ಐ. ವನಂಜಕರ ಹಾಗೂ ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರು ಕೂಡಿಕೊಂಡು ಹೀರಾಪೂರ ಕ್ರಾಸ ಕಡೆಗೆ ಬಂದು ಪರಿಶೀಲಿಸಿ  ನಂತರ ಆರೋಪಿತರ ಪತ್ತೆ ಕುರಿತು ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರು  ಬಿದ್ದಾಪೂರ ಕಾಲನಿ, ಹೈ ಕೋರ್ಟ, ಉದನೂರ ರಿಂಗ ರೋಡ ಕಡೆಗೆ ಹೋಗಿದ್ದು. ನಾನು ಮತ್ತು ಸಿಬ್ಬಂದಿಯವರು ಹೀರಾಪೂರ,  ಮಿಜಾಬ ನಗರ, ಡಬರಾಬಾದ, ಕಡೆಗಳಲ್ಲಿ ಹೋಗಿದ್ದು, ಸದರಿ  ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದಾಗ ಬೆಳಗಿನ 06-30 ಗಂಟೆ ಸುಮಾರಿಗೆ ರೇಲ್ವೆ ಬ್ರೀಡ್ಜ ದಾಟಿ ಇರುವ ಡಬರಾಬಾದ ಸೀಮಾಂತರದಲ್ಲಿ ಇರುವ ಆಶ್ರಯ ಕಾಲನಿಯಲ್ಲಿ ಇರುವ ಹಾಳು ಬಿದ್ದ ಮನೆಯಲ್ಲಿ ಈ ಮೇಲೆ ಹೇಳಿದ ಸ್ಥಳಗಳಲ್ಲಿ ಸುಲಿಗೆ ಮಾಡಿದ ಅರೋಪಿತರು ಅಡಗಿ ಕುಳಿತುಕೊಂಡಿದ್ದಾರೆ ಎಂಬ ಬಾತ್ಮಿ ಮೇರೆಗೆ  ಹೈ ಕೋರ್ಟ ಕಡೆಗೆ ಹೋದ ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರಿಗೆ ಡಬರಾಬಾದ ರೇಲ್ವೆ ಬ್ರೀಡ್ಜ ಹತ್ತಿರ ಬರುವಂತೆ ಹೇಳಿದ ಪ್ರಕಾರ ಅವರು ಅಲ್ಲಿಗೆ ಬಂದಾಗ ನಾವೆಲ್ಲರೂ ಕೂಡಿಕೊಂಡು ಆರೋಪಿತರನ್ನು ಹಿಡಿಯಲು ಹಾಳು ಬಿದ್ದ ಡಬರಾಬಾದ ಆಶ್ರಯ ಕಾಲನಿಯ ಹತ್ತಿರ ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಹೋದಾಗ ಒಂದು ಹಾಳು ಬಿದ್ದ ಮನೆ ಹತ್ತಿರ ಒಂದು ಹೊಂಡಾ ಎಕ್ಟೀವ್ ಮತ್ತು ಹೊಂಡಾ ಡಿಯೋ ಗಾಡಿ ನಿಂತಿದಿದ್ದು ನೋಡಿ ಸುಲಿಗೆ ಮಾಡಿದ ಆರೋಪಿತರು ಇಲ್ಲೇ ಅಡಗಿ ಕುಳಿತಿದ್ದಾರೆ ಎಂದು ಖಚಿತವಾದ ಮೇರೆಗೆ ಅವರನ್ನು ಹಿಡಿಯಲು ಸದರಿ ಮನೆಯ ಹತ್ತಿರ ಹೋದಾಗ ಒಳಗಡೆ ಇದ್ದ ನಾಲ್ಕು ಜನರು ಪೊಲೀಸ ಸಮವಸ್ತ್ರ ನೋಡಿ ನಮ್ಮ ಮೇಲೆ ಬಿಯರ ಬಾಟಲಿಗಳು ಎಸೆದಾಗ ಅದನ್ನು ಕಂಡು ನಾನು ಮತ್ತು  ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು ಅವರಿಗೆ ಬಿಯರ ಬಾಟಲಿ ಎಸೆಯಬೇಡಿರಿ ಶರಣಾಗಿರಿ ನಾವು ಪೊಲೀಸರಿದ್ದೆವೆ ಎಂದು ತಿಳಿ ಹೇಳಿದಾಗ ಅವರು ನಮ್ಮ ಮಾತಿಗೆ ಬೆಲೆ ಕೊಡದೇ  ಇದ್ದಾಗ ಅವರನ್ನು ಹಿಡಿಯಲು ಹೋದಾಗ ಒಳಗಡೆ ಇದ್ದ ಇಬ್ಬರು ತಮ್ಮ ತಮ್ಮ ಕೈಯಲ್ಲಿ ಜಂಭಾ ಹಿಡಿದುಕೊಂಡು  ರೂಮಿನಿಂದ ಹೊರಗಡೆ ಬಂದು ನನ್ನ ಮತ್ತು ಜೊತೆಗಿದ್ದ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅವರಿಗೆ ಶರಣಾಗಿರಿ ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿ ಅಲ್ಲಾ ಎಂದು ತಿಳಿ ಹೇಳಿದರೂ ಕೂಡಾ  ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಜಂಭೆಯಿಂದ  ಬಂದೇನವಾಜ ಹೆಚಸಿ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರ ಬಲ ಕುತ್ತಿಗೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿದನು. ನಾನು ಮತ್ತು ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು  ಹಲ್ಲೆ ಮಾಡಬೇಡಿರಿ ಶರಣಾಗಿರಿ ಎಂದು ಹೇಳಿ ಮತ್ತೆ ಅವರಿಗೆ ಹಿಡಿಯಲು ಹೋದಾಗ  ಅವರುಗಳು ಮತ್ತೆ ನಮ್ಮ ಮೇಲೆ ಜಂಭೆಯಿಂದ ಹಲ್ಲೆ ಮಾಡಲು ಮುಂದಾದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಜೊತೆಯಲ್ಲಿದ್ದ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನ ಸರ್ವಿಸ ಪಿಸ್ತೂಲನಿಂದ  ಒಂದು ಸುತ್ತು ಗುಂಡು ಗಾಳಿಯಲ್ಲಿ ಹಾರಿಸಿ ಶರಣಗಾಗಿರಿ ಎಂದು ಎಚ್ಚರಿಕೆ ನೀಡಿದರೂ ಇನ್ನೊಬ್ಬ ತನ್ನ ಕೈಯಲ್ಲಿದ್ದ ಜಂಭೆಯಿಂದ  ಭೀಮನಾಯಕ ಸಿಪಿಸಿ ರವರ  ಬಲಭಜುದ ಮೇಲೆ ಮರಣಾಂತಿಕ ಹಲ್ಲೆ ಮಾಡಿದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಯವರ ಪ್ರಾಣ  ರಕ್ಷಣೆಗಾಗಿ ಸರ್ವಿಸ ಪಿಸ್ತೂಲನಿಂದ ಭೀಮನಾಯಕನಿಗೆ  ಹಲ್ಲೆ ಮಾಡಿದ ವ್ಯಕ್ತಿಯ ಎಡಗಾಲಿಗೆ ಒಂದು ಸುತ್ತು ಗುಂಡು ಹೊಡೆದನು. ಅದನ್ನು ನೋಡಿ ಅವನ ಜೊತೆಯಲ್ಲಿದ್ದ ಬಂದೇನವಾಜನಿಗೆ ಹಲ್ಲೆ ಮಾಡಿದವನು ಮತ್ತೆ ಜಂಭೆದಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನನ್ನ ಆತ್ಮ ರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಆತನ ಎಡಗಾಲ ಮೇಲೆ ಹೊಡೆದನು. ಅದರಿಂದ ಇಬ್ಬರು ಸ್ಥಳದಲ್ಲಿ ಕುಸಿದು ಬಿದ್ದರು. ರೂಮಿನಲ್ಲಿದ್ದ ಇನ್ನಿಬ್ಬರು ಅಲ್ಲಿಂದ ಓಡಿ ಹೋದರು.  ಬಂದೇನವಾಜನಿಗೆ ಹಲ್ಲೆ ಮಾಡಿದವನ ಹತ್ತಿರ ಹೋಗಿ ಅವನ ಹೆಸರು ಕೇಳಲಾಗಿ ಶೇಖರ @ ಶೇಖು ತಂದೆ ಹಣಮಂತ ಖೇತ್ರಿ ಸಾ: ರಾಮ ತೀರ್ಥ ನಗರ ಕಲಬುರಗಿ ಅಂತಾ ಗೊತ್ತಾಯಿತು. ಮತ್ತು ಭೀಮನಾಯಕನ ಮೇಲೆ  ಹಲ್ಲೆ ಮಾಡಿದವನ ಹೆಸರು ಕೇಳಲಾಗಿ ಅಜೀಂಖಾನ  ತಂದೆ ರಹೇಮಾನಖಾನ ಖಾನಸಾಬ ಸಾ: ಆದರ್ಶ ನಗರ ಕಲಬುರಗಿ  ಅಂತಾ ಗೊತ್ತಾಯಿತು. ನಂತರ ಶೇಖರ ಮತ್ತು ಅಜೀಂ ಇಬ್ಬರಿಗೆ ಓಡಿ ಹೋದವರ ಹೆಸರು  ವಿಳಾಸ ಕೇಳಲಾಗಿ  3)ಅಮರ 4) ಸಾಗರ  ಅಂತಾ ಗೊತ್ತಾಯಿತು. ಈ ವಿಷಯ ಪೊಲೀಸ ಕಂಟ್ರೋಲ್ ರೂಮಿಗೆ ಮಾಹಿತಿ ತಿಳಿಸಿ ನಮ್ಮ ಮೇಲಾಧಿಕಾರಿಯವರಿಗೆ ತಿಳಿಸುವಂತೆ ಹೇಳಿದನು. ಅಲ್ಲದೇ ದು:ಖಾಪತಗೊಂಡು ಬಂದೇನವಾಜ ಮತ್ತು ಭೀಮಾನಾಯ್ಕ  ಹಾಗೂ ಶೇಖರ, ಅಜೀಂಖಾನ ಇವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಲು ಕಂಟ್ರೋಲ ರೂಮಿಗೆ ತಿಳಿಸಿದೆನು. ಶೇಖರ ಮತ್ತು ಅಜೀಂಖಾನ ಇವರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ 108 ಅಂಬುಲೈನ್ಸ ಗಾಡಿ ಬರಲು ತಡವಾಗುತ್ತಿದ್ದರಿಂದ, ಮತ್ತು ಗಾಯಗೊಂಡ ಸಿಬ್ಬಂದಿಯವರ ಜೊತೆಯಲ್ಲಿ ಪಿ.ಎಸ್.ಐ. ವನಂಜಕರ ಮತ್ತು ಅವರ ಸಿಬ್ಬಂದಿಯವರನ್ನು ಬಿಟ್ಟು  ಶೇಖರ ಮತ್ತು ಅಜೀಂಖಾನ ಇವರಿಗೆ ರಕ್ತಸ್ರಾವ ಆಗುತ್ತಿದ್ದರಿಂದ ಪ್ರಾಣ ರಕ್ಷಣೆಗಾಗಿ  ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಜೀಪು ನಂಬರ ಕೆಎ 32 ಜಿ 295 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ ಶ್ರೀ ವಾಹೇದ್ ಹೆಚ.ಕೋತ್ವಾಲ್ ಪಿ.ಎಸ್.ಐ. ಫರತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 12-04-2018 ರಂದು  ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಸಿ.ಪಿ.ಐ ಅಫಜಲಪೂರ ರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹಿಂಚಗೇರಾ ಗ್ರಾಮಕ್ಕೆ  ಹೋಗಿ, ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಶರಣ ತಂದೆ ಸಿದ್ದಪ್ಪ ಕುಂಬಾರ ಸಾ|| ಹಿಂಚಗೇರಾ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 64 ರಟ್ಟಿನ ಪೌಚಗಳು ಅಕಿ- 1800/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 64 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ಪಡೆದುಕೊಂಡೆನು, ಉಳಿದ ಪೌಚಗಳನ್ನು ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣವನ್ನು  ವಶಪಡಿಸಿಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.

No comments: