POLICE BHAVAN KALABURAGI

POLICE BHAVAN KALABURAGI

30 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ :  ದಿನಾಂಕ 29/01/18 ರಂದು ಈರಣ್ಣಾ ತಂದೆ ದೇವಿಂದ್ರ ಮಮ್ಮಾಣಿ ಸಾ; ಪಿರೋಜಾಬಾದ ತಾ: ಜಿ: ಕಲಬುರಗಿ  ಇತನು ಪಿರೋಜಾಬಾದ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆ ದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಫರಥಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸದರಿಯವನ್ನನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 2200/-ರೂ ಹಾಗೂ ಒಂದು ಬಾಲ ಪೆನ್ನ, 2 ಮಟಕಾ ಚೀಟಿ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ಧಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 28/01/18 ರಂದು ಮೃತ ರಾಘವೇಂದ್ರ ಈತನು ಸರಡಗಿ (ಬಿ) ಗ್ರಾಮದ ಬ್ರೀಡ್ಜ ಕಮ್ ಬ್ಯಾರೇಜಗೆ ಮೃತ ರಾಘವೇಂದ್ರ ಹಾಗೂ ಆತನ ಸೇಹ್ನಿತರು ಇಜಾಡಲು ಹೋದಾಗ ರಾಘವೇಂದ್ರ ಈತನು ಇಜಾಡುತ್ತಾ ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ ಸದರಿಯವನ ಸಾವಿನಲ್ಲಿ ಯಾರ ಮೇಲೆ ಸಂಶಯ  ಇರುವುದಿಲ್ಲಾ ಅಂತ  ಶ್ರೀಮತಿ ಸುವರ್ಣ ಗಂಡ ದಿ: ರಾಜು ಮಡಿವಾಳ ಸಾ; ಬಿದ್ದಾಪೂರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಮೇಶ ತಂದೆ ಭೀಮಸಿಂಗ ಚವ್ಹಾಣ  ಸಾ: ಕೆರೂರ ತಾಂಡಾ ತಾಜಿ/ಕಲಬುರಗಿ  ಇವರು ದಿನಾಂಕ. 11-01-2018 ರಂದು ಬೆಳಗ್ಗೆ ನಮ್ಮ ಗ್ರಾಮದ ಕೇರೂರ ಬಸ್ಸಸ್ಟ್ಯಾಂಡ ಹತ್ತಿರ ಅನೀಲ್ ಪವಾರ ಇವರ ಹೋಟೆಲ ಎದರುಗಡೆ  ನಾನು ಮತ್ತು ನಮ್ಮ ಗ್ರಾಮದ ಮೂಸಾಖಾನ ಇಬ್ಬರು ಮಾತಾಡುತ್ತಾ ನಿಂತಿರುವಾಗ  ಅದೇ ವೇಳಗೆ ನಮ್ಮ ಗ್ರಾಮದ ಮೂಸಾಖಾನ ಇವರ ಅಣ್ಣನ ಮಗ ನಯಿಮಖಾನ ತಂದೆ ಸರದಾರ ಖಾನ  ಇತನು ನಮ್ಮ ಹತ್ತಿರ ಬಂದು ,, ಏನೋ ಲಮಾಣಿ ಸೂಳೆ ಮಗನೆ ನಮ್ಮ ಕಾಕನಿಗೆ ಏನು ಚುಗಲಿ ಹೇಳುತೀ ಅಂತಾ ಅವಾಚ್ಯ ಶಬ್ದಗಳಿಂದ ಜ್ಯಾತಿ ನಿಂದನೆ ಮಾಡಿ ಬೈಯ್ದನು ಆಗ ನಾನು ಬೇರೆ ವಿಷಯ ಮಾತಾಡುತಿದ್ದೇವೆ ನಿನಗ್ಯಾಕೆ ಬೇಕು ಅಂತಾ ಕೇಳಿದ್ದಕ್ಕೆ ನನನ್ನು ತಡೆದು  ಎದೆಯ ಮೇಲಿನ ಅಂಗಿ ಹಿಡಿದು  ಲಮಾಣಿ ರಾಂಡಕೆ  ಚಿನಾಲಕೆ  ಬಹುತ ಹುವಾ ತೇರಾ  ಅಂತಾ ಜ್ಯಾತಿ ನಿಂದನೆ ಮಾಡಿ ಕೈಯಿಂದ ಕಪಾಳಕ್ಕೆ ಹೊಡೆದನು  ಅಷ್ಟರಲ್ಲಿ ಅಲ್ಲಿಯೇ ಇದ್ದ ಸುಭಾಶ ತಂದೆ ಲೋಬು ಚವ್ಹಾಣ, ಉಮೇಶ ರಾಠೋಡ ,ವಿಯಕುಮಾರ ಚವ್ಹಾಣ ,ಮನೋಹರ ರಾಠೋಡ  ಬೀರಪ್ಪಾ ಪೂಜಾರಿ ಹಾಗೂ ಮೂಸಾಖಾನ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಆಗ ನಯಿಮಖಾನ ಇತನು ನನಗೆ ಅಡಿಜಂಗಲಿ ಸೂಳೆ ಮಗನೆ ಲಮಾಣ್ಯ ಇನ್ನೊಂದು ಬಾರಿ ನಮ್ಮ ವಿಷಯದಲ್ಲಿ ಅಡ್ಡ ಬಂದರೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: