ಗ್ರಾಮೀಣ ಠಾಣೆ : ದಿನಾಂಕ 30/11/17 ರಂದು ರಾತ್ರಿ 10-45 ಗಂಟೆಗೆ
ಫಿರ್ಯಾದಿ ಮತ್ತು ಆತನ ಹತ್ತಿರ ವೇಟರ ಕೆಲಸ ಮಾಡುವ ಶಿವಶಂಕರ ಮಡಕಿ ಇಬ್ಬರು ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಮಿರ್ಚಿ ಗೋದಾಮ ಹಿಂದುಗಡೆ ಇರುವ ಮೊಯೀನ ಫಂಕ್ಷನ ಹಾಲಕ್ಕೆ ಹೋಗಿ ಶಫೀ
ಅಣ್ಣನ ಮಗನ ಮದುವೆಗೆ ಹಾಜರಾಗಿ ಊಟ ಮಾಡಿಕೊಂಡು ಇಬ್ಬರು ಮನೆಗೆ ಹೋಗುವ ಕುರಿತು ಫಂಕ್ಷನ ಹಾಲದಿಂದ
ನಮ್ಮ ನಮ್ಮ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಮಿರ್ಚಿ ಗೋದಾಮ ಹತ್ತಿರ ದಿನಾಂಕ 01/12/17 ರಂದು ರಾತ್ರಿ 12-25 ಗಂಟೆ ಸುಮಾರಿಗೆ ಬಂದಾಗ ಶಿವಶಂಕರ ಇತನು ಲಂಗರ ಹನುಮಾನ
ಕಾಲನಿಯಲ್ಲಿ ಇರುವ ತನ್ನ ಮನೆಯ ಕಡೆಗೆ ಹೋದನು. ನಾನು ನಮ್ಮ ಮನೆಗೆ ಹೋಗುವ ಕುರಿತು ನನ್ನ TVS
XL Heavy Duty KA 32 EB 3457 ಮೇಲೆ ಒಬ್ಬನೇ ಕುಳಿತುಕೊಂಡು ಹೊರಟಿದ್ದು, ರಾತ್ರಿ 12-35 ಗಂಟೆ ಸುಮಾರಿಗೆ ಹೀರಾಪೂರ ರೇಲ್ವೆ ಬ್ರೀಡ್ಜ ಅಂಡರ
ಬ್ರೀಡ್ಜ ಒಳಗೆ ಹೋಗಬೇಕೆಂದು ಹೊರಟಾಗ ಆಗ ಹಿಂದಿನಿಂದ ಒಂದು ಮೋಟಾರ ಸೈಕಲ ಮೇಲೆ ಮೂರು ಜನರು
ಕುಳಿತುಕೊಂಡು ನನ್ನ ಟಿವಿಎಸಗೆ ಗಾಡಿ ಅಡ್ಡಗಟ್ಟಿ ನಿಲ್ಲಿಸಿದರು. ಮೂರು ಜನರು ಮೋಟಾರ ಸೈಕಲ
ಮೇಲಿಂದ ಕೆಳೆಗೆ ಇಳಿದರು. ಮೂರು ಜನರು ಮಂಕಿ ಕ್ಯಾಪ ಹಾಕಿಕೊಂಡು ಮುಖಕ್ಕೆ ಬಟ್ಟೆ
ಕಟ್ಟಿಕೊಂಡಿದ್ದರು. ಅವರಿಗೆ ನೋಡಿ ಹೆದರಿದೆನು. ಅವರಲ್ಲಿ ಒಬ್ಬನು ನನ್ನ TVS
XL Heavy Duty KA 32 EB 3457 ಅ:ಕಿ: 25,000/- ರೂ. ಮೇಲಿಂದ ಕೆಳೆಗೆ ಇಳಿಸಿ ಜಬರದಸ್ತಿಯಿಂದ ನನ್ನ ಗಾಡಿಯ ಮೇಲೆ
ಕುಳಿತುಕೊಂಡೆನು. ಇನ್ನಿಬ್ಬರು ನನ್ನ ಎದೆಯ ಮೇಲೆ ಅಂಗಿ ಹಿಡಿದು ಹಿಂದಿಯಲ್ಲಿ ಚಲ್ಲ್ ಅಂತಾ
ಅನ್ನುತ್ತಾ ಸ್ವಲ್ಪ ದೂರದ ವರೆಗೆ ಜಬರದಸ್ತಿಯಿಂದ ಎಳೆದುಕೊಂಡು ಹೋಗಿ ಒಬ್ಬನು ನನ್ನ ಎದೆಯ ಮೇಲಿನ
ಕಿಸೆಯಲ್ಲಿದ್ದ ಮೈಕ್ರೋಮಾಕ್ಸ ಮೋಬಾಯಿಲ್ ಅ:ಕಿ:500/- ರೂ. ಅದರ ಒಳಗಡೆ ಇದ್ದ ಎರಟೆಲ್ ಸಿಮ್ ನಂಬರ 9632214268
ನೇದ್ದು ಜಬರದಸ್ತಿಯಿಂದ ಕಸಿದುಕೊಂಡೆನು. ಮತ್ತು ಬಲ
ಮತ್ತು ಎಡ ಪ್ಯಾಂಟಿನ ಕಿಸೆ ಚೆಕ್ಕ ಮಾಡಲು ಯಾವುದೇ ಹಣ ಸಿಗಲಿಲ್ಲಾ., ಇನ್ನೊಬ್ಬ ನನ್ನ ಹಿಂದಿನ ಪ್ಯಾಂಟಿನ ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ
ಹಿಂದಿನ ಕಿಸೆಯಲ್ಲಿದ್ದ ನಗದು ಹಣ 3420/- ರೂ. ಕಸಿದುಕೊಂಡೆನು. ನಂತರ ಅವರಿಬ್ಬರು ನನಗೆ ಅಲ್ಲೇ ಬಿಟ್ಟು ತಾವು ತಂದಿದ್ದ ಮೋಟಾರ ಸೈಕಲ
ಹತ್ತಿರ ಹೋದಾಗ ನನ್ನ ಟಿವಿಎಸ ಗಾಡಿಯ ಮೇಲೆ ಕುಳಿತು ನನ್ನ ಟಿವಿಎಸ ಚಾಲು ಮಾಡಿದನು. ಮತ್ತು ನನ್ನ
ಹತ್ತಿರವಿದ್ದ ಮೋಬಾಯಿಲ ಮತ್ತು ಹಣ
ಕಸಿದುಕೊಂಡವರು ತಾವು ತಂದಿದ್ದ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಹೀರಾಪೂರ ಕ್ರಾಸ ಕಡೆಗೆ
ಹೋದರು. ಸದರಿ ಮೂರು ಅಪರಿಚಿತರ ಜನರು ಅಂದಾಜ 20 ರಿಂದ 25 ವರ್ಷ ವಯಸ್ಸಿನವರಿದ್ದು, ಪ್ಯಾಂಟು,ಷರ್ಟು ಧರಿಸಿರುತ್ತಾರೆ. ಅವರು ನನಗೆ ಹಿಂದಿಯಲ್ಲಿ ಚಲ್ಲ್ ಅಂತಾ ಅಂದಿದ್ದರಿಂದ ಅವರು ಹಿಂದಿ ಭಾಷೆ ಮಾತಾಡುತ್ತಾರೆ ಎಂದು
ಗೊತ್ತಾಗಿರುತ್ತದೆ.. ಕಾರಣ ನನ್ನ ಟಿವಿಎಸ ಗಾಡಿ ಹೀಗೆ ಒಟ್ಟು ಅ:ಕಿ:
28,920/- ರೂ. ನೇದ್ದವುಗಳು
ಜಬರದಸ್ತಿಯಿಂದ ಕಸಿದುಕೊಂಡು ಹೋದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ
ಮೋಬಾಯಿಲ್,ಹಣ, ಟಿವಿಎಸ ಗಾಡಿ ಮರಳಿ ಕೊಡಿಸಬೇಕೆಂದು ಎಂದು ಕೊಟ್ಟ ಇತ್ಯಾದಿ ಹೇಳಿಕೆ ಪಿರ್ಯಾದಿ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರುತ್ತದೆ.
±ÀºÁ¨ÁzÀ £ÀUÀgÀ oÁuÉ : ದಿನಾಂಕಃ 30/11/2017 ರಂದು ಸಾಯಂಕಾಲ 5-00 ಗಂಟೆಗೆ ನಾನು ಕಚೇರಿಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಶಹಾಬಾದ ನಗರದ ಬಸವೇಶ್ವರ ನಗರದಲ್ಲಿ ಮಟಕಾ ನಂಬರೆ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೆಬರ ಮಾರ್ಗದರ್ಶನದಲ್ಲಿ ಆರಕ್ಷಕ ಉಪಾಧೀಕ್ಷಕರ ಕಚೇರಿಯ ವಿಶೇಷ ದಳದ ಸಿಬ್ಬಂದಿಯವರಾದ 1] ಶ್ರೀ ಸುಬಾಷ ಹಚ.ಸಿ 178 2] ಶ್ರೀ ಬಸವರಾಜ ಪಿಸಿ 705 3] ಶ್ರೀ ಗಜಾನಂದ ಪಿಸಿ 821 ಪಂಚರಾದ 1)ಶ್ರೀ ಮನೋಜಕುಮಾರ ತಂದೆ ದೇವದಾಸ ವ:43 ಉ:ಖಾಸಗಿ ಕೆಲಸ ಸಾ:ಹೆಚ.ಎಂ..ಪಿ ಕಾಲೋನಿ ಶಹಾಬಾದ 2)ಶ್ರೀ ದೇವಿಂದ್ರ ತಂದೆ ಶರಣಪ್ಪ ನಗನೂರ ವಃ45ವರ್ಷ ಉಃವ್ಯಾಪಾರ ಸಾಃಹನುಮಾನ ನಗರ ಶಹಾಬಾದ ರವರೊಂದಿಗೆ ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ ಇಂದು 5-45 ಗಂಟೆಗೆ ಹೋರಟು ಬಸವೇಶ್ವರ ನಗರದ ಅಂಬಿಗರ ಚೌಡಯ್ಯಾ ಕಟ್ಟೆಯ ಹತ್ತಿರ ಹೋಗಿ ನೋಡಲಾಗಿ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳೂತ್ತಾ ಒಂದು ರೂಪಾಯಿ 80 ರೂ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಮೋಸದಿಂದ ಹಣ ಪಡೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಇಂದು ಸಾಯಂಕಾಲ 6-00 ಗಂಟೆಗೆ ನಾವು ಪಂಚರೊಂದಿಗೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಭೀಮಶಾ ತಂದೆ ಶಿವಾಜಿ ಗಜ್ಜಿನಮನಿ ವ:38
ಉ:ಖಣಿಕೆಲಸ ಜಾ:ವಡ್ಡರ ಸಾ:ಬಸವೇಶ್ವರ ನಗರ ಶಹಾಬಾದ. ಅಂತಾ ತಿಳಿಸಿದನು ಸದರಿವನಿಗೆ ಅಂಗ ಶೋದನೆ ಮಾಡಲಾಗಿ ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 15,560/- ರೂ ಹಾಗೂ 1 ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ ಪೆನ್ನು ಮತ್ತು ಸ್ಯಾಮಸಂಗ್ ಕಂಪನಿಯ ಮೋಬೈಲ ದೊರೆತ್ತಿದ್ದು ನಂತರ ಅಲ್ಲಿ ಮಟಕಾ ನಂಬರ ಬರೆಯಿಸಲು ಬಂದ ವಿಜಯಕುಮಾರ ತಂದೆ ನಾಗಪ್ಪ ತರಪಲ್ ವ:45 ಸಾ:ಶಹಾಬಾದ ಇತನಿಗೆ ವಿಚಾರಿಸಲು ಸದರಿಯವನು ತಿಳಿಸಿದ್ದೇನೆಂದರೆ ಸದರಿ ಭೀಮಶ್ಯಾ ಗಚ್ಚಿನಮನಿ ಇತನು ಸುಮಾರು ದಿವಸಗಳಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ಈ ಹಿಂದೆ ನಾನು ಬರೆಯಿಸಿದ ಮಟಕಾ ನಂಬರ ಬಂದಿದ್ದು 01 ರೂಗೆ 80 ರೂ ಕೊಡುತ್ತೇನೆ ಅಂತಾ ತಿಳಿಸಿದ್ದು ಆ ಪ್ರಕಾರ ನಿನ್ನೆ ದಿನಾಂಕಃ 29/11/2017 ರಂದು 7 ನಂಬರಿಗೆ 20 ರೂ ಮಟಕಾ ನಂಬರ ಬರೆಸಿದ್ದೇನು ನಂಬರ ಹತ್ತಿದರು ಕೂಡ ನನಗೆ ಹಣ ಕೊಡದೇ & ತಿಳಿಸದೇ ತಾನೆ ಸ್ವಂತಕ್ಕೆ ಬಳಸಿಕೊಂಡು ನನಗೆ ಮೋಸ ಮಾಡಿರುತ್ತಾನೆ ಅಂತಾ ತಿಳಿಸಿದನು. ನಂತರ ಪಂಚರ ಸಮಕ್ಷಮದಲ್ಲಿ ಇಂದು ದಿನಾಂಕಃ 30/11/2017 ರಂದು 6-00 ಗಂಟೆಯಿಂದ 7-00
ಗಂಟೆಯವರಿಗೆ ಜಪ್ತಿ ಪಂಚನಾಮೆಯನ್ನು ಕೈಗೊಂಡು ಜಪ್ತಿ ಪಂಚನಾಮೆ, ಮುದ್ದೆಮಾಲು ಅರೋಪಿತನೊಂದಿಗೆ ಬಂದಿದ್ದು ಸದರಿವನ ವಿರುದ್ದ ಸೂಕ್ತ
ಕ್ರಮ ಜರುಗಿಸ ಬಗ್ಗೆ ವರಿದಿ ಇರುತ್ತದೆ.
C¥sÀd®¥ÀÆgÀ
oÁuÉ : ದಿನಾಂಕ 30.11.2017
ರಂದು 6.20 ಎ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಎರಡು ಜನ ಆರೋಪಿತರೊಂದಿಗೆ ಬಂದು ವರದಿ
ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೇನೆಂದರೆ ದಿನಾಂಕ 30-11-2017
ರಂದು ಬೆಳಿಗ್ಗೆ 06:00 ಗಂಟೆಗೆ ಹೆಚ್ ಸಿ-412 ಯಲ್ಲಪ್ಪ ರವರನ್ನು ಸಂಗಡ
ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ 6:10 ಎ ಎಮ್ ಕ್ಕೆ ಅಫಜಲಪೂರ ಪಟ್ಟಣದ
ಬಸ್ ನಿಲ್ದಾಣದ ಹತ್ತಿರ ಬಂದಾಗ ಬಸ್ ನಿಲ್ದಾಣದ ಮುಂದೆ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ
ಬರುವ ಜನರಿಗೆ ಹಾಗೂ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಅಸಬ್ಯವಾಗಿ ಬೈಯುವುದು ಅಸಬ್ಯ
ರೀತಿಯಿಂದ ವರ್ತಿಸುವುದು, ಹಾಗೂ ಒದರಾಡುವುದು– ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದರು ಮತ್ತು
ಸದರಿಯವರು ಬಸ್ ನಿಲ್ದಾಣದ ಆವರಣದಲ್ಲಿ ಜನರಿಗೆ ನಾವು ಇದೇ ತಾಲೂಕಿನವರು ಇದ್ದಿವಿ, ಯಾರು ಏನು ಮಾಡುತ್ತಾರೆ
ನೋಡಿಕೊಳ್ಳುತ್ತೆವೆ ಎಂದು ಜನರಿಗೆ ಭಯವುಂಟಾಗುವಂತೆ ವರ್ತಿಸುತ್ತಿದ್ದರು. ಸದರಿಯವರು
ಸಾರ್ವಜನಿಕರ ಶಾಂತಿ ಭಂಗ ಮಾಡುತ್ತಿದ್ದರಿಂದ ಅವರ ಹತ್ತಿರ ಹೋಗಿ ಅವರನ್ನು ಹಿಡಿದು ಹೆಸರು ವಿಳಾಸ
ವಿಚಾರಿಸಲಾಗಿ 1) ಸಾಯಿಬಣ್ಣ ತಂದೆ ಸಿದ್ರಾಮ ಚಿಕ್ಕಮಣೂರ ವ||33
ವರ್ಷ ಜಾ||ಕಬ್ಬಲಿಗೇರ ಉ||ಒಕ್ಕಲುತನ ಸಾ||ಮಣೂರ 2) ಕುಪೇಂದ್ರ ತಂದೆ ಗೋಪಾಲ ಜಮಾದಾರ ವ||28 ವರ್ಷ ಜಾ||ಕಬ್ಬಲಿಗೇರ ಉ||ಒಕ್ಕಲುತನ ಸಾ||ಕೂಡಿಗಾನೂರ ಅಂತಾ ಏರು ಧ್ವನಿಯಲ್ಲಿ ಹೇಳಿದರು. ಸದರಿಯವರನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ
ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಸದರಿಯವರನ್ನು ಹಿಡಿದುಕೊಂಡು ಠಾಣೆಗೆ 6.20 ಎ ಎಮ್ ಕ್ಕೆ ತಂದು ಸದರಿಯವರ
ವಿರುದ್ದ ಕಾನೂನು ಕ್ರಮ ಜರೂಗಿಸ ಬೇಕು ಎಂದು ಸೂಚಿಸಿ ವರದಿ ಸಲ್ಲಿಸಿದ್ದ ಮೇರೆಗೆ ಠಾಣೆ ಗುನ್ನೆ
ನಂ 307/2017 ಕಲಂ 110 (ಈ & ಜಿ) ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು
ಬಗ್ಗೆ ವರಿದಿ ಇರುತ್ತದೆ. .
C¥sÀd®¥ÀÆgÀ
oÁuÉ : ದಿನಾಂಕ 30-11-2017 ರಂದು 5:30 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು
ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೇನೆಂದರೆ ದಿನಾಂಕ 30-11-2017
ರಂದು 4.00 ಪಿಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ,
ಸುಧಾರಿತ ಗಸ್ತು ಸಂ 07 ಅಫಜಲಪೂರ ಪಟ್ಟಣದ ಬೀಟ್
ಸಿಬ್ಬಂದಿಯಾದ ಗುರುರಾಜ ಸಿಪಿಸಿ-1087 ರವರು ಮಾಹಿತಿ ತಿಳಿಸಿದ್ದೆನೆಂದರೆ ಅಫಜಲಪೂರ ಪಟ್ಟಣದ ಡಿಗ್ರಿ ಕಾಲೇಜ ಮುಂದೆ ಒಬ್ಬ ವ್ಯಕ್ತಿ
ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು ನಾನು
ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ||
ಇಬ್ಬರು ಅಫಜಲಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ
ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಸಿಬ್ಬಂದಿಯವರಾದ ರುರುರಾಜ
ಸಿಪಿಸಿ-1087, ಶಿವಪ್ಪ ಸಿಹೆಚ್ ಸಿ-547, ಶಿವಪುತ್ರ ಸಿಪಿಸಿ-1139 ಕೂಡಿಕೊಂಡು ಪಂಚರೊಂದಿಗೆ 4.10 ಪಿಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು.4:15 ಪಿ ಎಮ್ ಕ್ಕೆ ಅಫಜಲಪೂರ
ಡಿಗ್ರಿ ಕಾಲೇಜ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಡಿಗ್ರಿ ಕಾಲೇಜ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ
ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ
ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ವಿಠ್ಠಲ
ಕಾಮಗೊಂಡ ವ||60 ವರ್ಷ ಜಾ||ಮಾಳಿ ಉ||ಒಕ್ಕಲುತನ ಸಾ||ಲಿಂಬಿತೋಟ ಅಫಜಲಪೂರ ಅಂತಾ ತಿಳಿಸಿದ್ದು,
ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 500/- ರೂಪಾಯಿ ನಗದು ಹಣ ಹಾಗೂ ಅಂಕಿ
ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ 4:20 ಪಿ.ಎಮ್ ದಿಂದ 5:20 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ
ಮರಳಿ ಠಾಣೆಗೆ 5:30 ಪಿ.ಎಮ್ ಕ್ಕೆ ಬಂದು ಸದರಿ
ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದರ ಮೇರೆಗೆ ಠಾಣೆ
ಗುನ್ನೆ ನಂ 308/2017 ಕಲಂ 78 (3) ಕೆ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರುತ್ತದೆ.
gÁWÀªÉÃAzÀæ £ÀUÀgÀ oÁuÉ : ದಿನಾಂಕ:30/11/2017 ರಂದು
ಮಧ್ಯಾನ 2.00 ಗಂಟೆಗೆ ಸರ್ಕಾರಿ ತರ್ಫೇಯಾಗಿ ಗಂಗಾಧರ ಸಿಪಿಸಿ-642 ಆರ್.ಜಿ ನಗರ ಠಾಣೆರವರು ಠಾಣೆಗೆ ಹಾಜರಾಗಿ ವರದಿ
ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಪಿಸಿ-1241 ಇಬ್ಬರೂ ಕೂಡಿಕೊಂಡು ಈದ್ ಮೀಲಾದ ಹಬ್ಬದ ಪ್ರಯುಕ್ತ
ಇಂದು ದಿನಾಂಕ 30.11.2017 ರಂದು ಬೆಳಗ್ಗೆ 10.00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ
ಕರ್ತವ್ಯ ಮಾಡುತ್ತಾ ಲಾಲಗೇರಿ ಕ್ರಾಸ, ಬ್ರಹ್ಮಪೂರ, ಸಂತೋಷ ಕಾಲೋನಿ, ಕಾಳೆ ಲೇಔಟ, ಮಾಣಿಕೇಶ್ವರಿ ಕಾಲೋನಿ,
ವಿಶ್ವರಾಧ್ಯ ಕಾಲೋನಿ ಪೆಟ್ರೋಲಿಂಗ
ಮಾಡುತ್ತಾ ಮಧ್ಯಾನ 1.30 ಗಂಟೆಗೆ ಖದೀರ ಚೌಕ ಹತ್ತಿರ ಹೋದಾಗ ಸಾರ್ವಜನಿಕರಿಂದ ತಿಳಿದು
ಬಂದ ಮಾಹಿತಿ ಏನೆಂದರೆ, 3-4 ದಿವಸಗಳಿಂದ ಮಹೇಶ, ಸಾಗರ ಇವರುಗಳು ಸಾರ್ವಜನಿಕರಿಗೆ ತೊಂದರೆ ಕೊಡುವದು
ಭಯ ಹುಟ್ಟಿಸುವದು ಮಾಡುತ್ತಿದ್ದಾರೆ ಅಂತಾ ತಿಳಿದು ಬಂದ ಮೇರೆಗೆ ಖದೀರ ಚೌಕ ಹತ್ತಿರ ಹೋದಾಗ
ಇಬ್ಬರೂ ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತು ಹೋಗಿ ಬರುವ ಜನರಿಗೆ ಹೆದರಿಸುವದು ತೊಂದರೆ
ಕೊಡುವದು ಅವಾಚ್ಯ ಶಬ್ದಗಳಿಂದ ನಿಂದಿಸುವದು ಮಾಡುತ್ತಿದ್ದು ಸದರಿಯವರಿಗೆ ಹಿಡಿದು ವಿಚಾರಿಸಲು
ತಮ್ಮ ತಮ್ಮ ಹೆಸರು 1)ಮಹೇಶ ತಂದೆ ಹಣಮಂತರಾವ ಗೊಬ್ಬೂರ ಜಾ:ಲಿಂಗಾಯತ ವ:25 ಉ:ಖಾಸಗಿ ಕೆಲಸ
ಸಾ:ವಿಜಯ ನಗರ ಕಾಲೋನಿ ಕಲಬುರಗಿ 2)ಸಾಗರ ತಂದೆ ಶರಣಪ್ಪಾ ಕಟ್ಟಿಮನಿ ವ:22 ಉ:ವ್ಯಾಪಾರ ಜಾ:ಕಟಬೂರ ಸಾ:ದೇವಿನಗರ ಹನುಮಾನ ಗುಡಿ
ಹತ್ತಿರ ಕಲಬುರಗಿ ಅಂತಾ ಹೇಳಿದರು. ಸದರಿಯವರ ವರ್ತನೆಯಿಂದ ಈದ್ ಮೀಲಾದ ಹಬ್ಬದಲ್ಲಿ ಸಾರ್ವಜನಿಕ
ನೆಮ್ಮದಿಗೆ ಭಂಗವುಂಟಾಗಿ ಆಸ್ತಿ-ಪಾಸ್ತಿ ಹಾನಿವುಂಟಾಗುವ ಸಂಭವವಿರುವದರಿಂದ ಸದರಿಯವರನ್ನು ನಾವು
ಇಬ್ಬರೂ ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದಿದ್ದು ಇವರ ಮೇಲೆ ಮುಂಜಾಗೃತ ಕ್ರಮ ಕೈಕೊಳ್ಳಲು
ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.223/17 ಕಲಂ:151,107 ಸಿಆರ್‌ಪಿಸಿ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರಿದಿ ಇರುತ್ತದೆ.
No comments:
Post a Comment