POLICE BHAVAN KALABURAGI

POLICE BHAVAN KALABURAGI

23 August 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 02/08/2017 ರಂದು ಬೆಳಿಗ್ಗೆ ನನ್ನ ಗಂಡನು ನಮ್ಮ ಹೊಲದಲ್ಲಿನ ಕೆಲಸದ ಸಲುವಾಗಿ ಹೊಲಕ್ಕೆ ಹೋಗಿದ್ದನು ಸಾಯಂಕಾಲ ನಾನು ಮನೆಯಲಿದ್ದಾಗ ನಮ್ಮೂರಿನ ಸುರೇಶ ತಂದೆ ಲಚ್ಚಪ್ಪ ಮೈಂದರ್ಗಿ ಎಂಬಾತನು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನಿನ್ನ ಗಂಡನಾದ ಗುರಪ್ಪ ಪೂಜಾರಿ ಇತನು ಹರ್ಷವರ್ಧನ ಕಾಲೇಜ ಹತ್ತಿರ ಅಫಜಲಪೂರ ಕಲಬುರಗಿ ರೋಡಿನ ಮೇಲಿಂದ ನಡೆದುಕೊಂಡು ಮನೆಗೆ ಬರುತಿದ್ದಾಗ ಮೋಟಾರ್ ಸೈಕಲ್ ನಂ ಕೆಎ-32 ಇಜೆ-4985 ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಗುರಪ್ಪನ ಹಿಂದಿನಿಂದ ನಡೆಸಿಕೊಂಡು ಗುರಪ್ಪನಿಗೆ ಡಿಕ್ಕಿಹೊಡೆಸಿ ಅಫಘಾತ ಪಡೆಸಿ ಮೋಟಾರ್ ಸೈಕಲ ಸಮೇತ ಓಡಿ ಹೋಗಿರುತ್ತಾನೆ ನಾನು ಗುರಪ್ಪನ ಹತ್ತಿರ ಹೋಗಿ ನೋಡಲು ಆತನ ತಲೆಗೆ ಭಾರಿ ರಕ್ತಗಾಯವಾಗಿ ಬಾಯಿಂದ ರಕ್ತ ಸೋರುತಿದ್ದು ಬಲಗಾಲಿನ ಎಲುಬು ಮುರಿದಂತೆ ಆಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಂತ ಬಂದು ತಿಳಿಸಿದನು ಆಗ ನಾನು ಮತ್ತು ನನ್ನ ತಮ್ಮನಾದ ಯಲ್ಲಪ್ಪ ಪೂಜಾರಿ, ನನ್ನ ಅಣ್ಣನಾದ ಹಣಮಂತ ಪೂಜಾರಿ, ನಮ್ಮ ಗ್ರಾಮದ ಸಿದ್ದಪ್ಪ ತಂದೆ ಚನ್ನಮಲ್ಲಪ್ಪ ಮೂಲಿ, ಯಲ್ಲಪ್ಪ ತಂದೆ ಮಲ್ಲಪ್ಪ ಕಲ್ಲೂರ ಮತ್ತು ಇತರರು ಕೂಡಿಕೊಂಡು ಸುರೇಶ ಮೈಂದರ್ಗಿಯೊಂದಿಗೆ ಘಟನೆ ಸ್ಥಳಕ್ಕೆ ಹೋಗಿ ನನ್ನ ಗಂಡನಿಗೆ ಆಗಿರುವ ಗಾಯಗಳನ್ನು ನೋಡಿ ನಾವೇಲ್ಲರು ನನ್ನ ಗಂಡನಿಗೆ ಚಿಕಿತ್ಸೆಗಾಗಿ 108 ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ತಗೆದುಕೊಂಡು ಹೋಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ.ದಿನಾಂಕ 09/08/2017 ವರೆಗೆ ಚಿಕಿತ್ಸೆ ಮಾಡಿಸಿದರು ನನ್ನ ಗಂಡನಿಗೆ ಪ್ರಜ್ಞೆ ಬಂದಿರುವುದಿಲ್ಲ  ನಂತರ  ದಿನಾಂಕ 09/08/2017 ರಂದು ಸಾಯಂಕಾಲ ನಾನು ಮತ್ತು ನನ್ನ ತಮ್ಮನಾದ ಯಲ್ಲಪ್ಪ ಪೂಜಾರಿ ಹಾಗು ಹಾಲಪ್ಪ ತಂದೆ ಗಂಗಪ್ಪ ಪೂಜಾರಿ ರವರು ನನ್ನ ಗಂಡನಿಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಕರೆದುಕೊಂಡು ಹೋಗಿ ಸೋಲಾಪೂರದ ಚಂದನ ನ್ಯೂರೋ ಸೈನ್ಸೆಸ್ಸ(CNS) ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಲ್ಲಿಯೂ ನನ್ನ ಗಂಡನಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10/08/2017 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಸಿದ್ದಮ್ಮ ಗಂಡ ಗುರಪ್ಪ ಪೂಜಾರಿ (ಅತನೂರ) ಸಾ|| ಮಲ್ಲಾಬಾದ ತಾ|| ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ  ಚಾಂದಸಾಬ ತಂದೆ ಮಶಾಕಸಾಬ ಕುಂದೆ ಸಾ; ನದಿಸಿನ್ನೂರ ತಾ; ಜಿ: ಕಲಬುರಗಿ ಇವರು ನ್ನದೊಂದು ಮೋಟಾರ ಸೈಕಲ ಹಿರೋ ಹೊಂಡಾ ನಂಬರ ಕೆಎ-06 ಇಎ- 2959 ಇದ್ದು ನಾನೇ ಚಲಾಯಿಸುತ್ತಾ ಬಂದಿರುತ್ತೇನೆ. ದಿನಾಂಕ 21/08/2017 ರಂದು ಮುಂಜಾನೆ  ಕಲಬುರಗಿಯಲ್ಲಿ ಕೆಲಸವಿದ್ದು ಪ್ರಯುಕ್ತ ಸದರಿ ಮೋಟಾರ ಸೈಕಲ ಮೇಲೆ ಹೋಗುವಾಗ ಎನ್‌ಹೆಚ್‌‌- 218 ರ ರೋಡಿಗೆ ಇರುವ  ಸರಡಗಿ ಪೆಟ್ರೋಲ ಪಂಪ ಹತ್ತಿರ ಪೆಟ್ರೋಲ ಹಾಕಿಕೊಳ್ಳಲು ನನ್ನ ಮೋಟಾರ ಸೈಕಲ ಸಿಗ್ನಲ ಹಾಕಿ ಕೈ ಸನ್ನಿ ಮಾಡಿ ತಿರುಗಿಸುವಾಗ  ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗದಿಂದ ಅಲಕ್ಷತನದಿಂದ ಓಡಿಸುತ್ತಾ ಬಂದು ನನ್ನ ಮೊಟಾರ ಸೈಕಲಿಗೆ ಡಿಕ್ಕಿ ಪಡೆಯಿಸಿ ಅಫಘಾತ ಮಾಡಿದಾಗ ನಾನು ಮೋಟಾರ ಸೈಕಲ ಸಮೇತ ರೋಡನ ಮೇಲೆ ಬಿದ್ದೇನು. ಆಗ ನಾನು ಬಿದಿದ್ದುರುವುದು ನೋಡಿ ರೋಡಿಗೆ ಹೋಗಿ ಬರುವವರು ಎಬ್ಬಿಸಿದ್ದು ಅಫಘಾತದಿಂದ ನನ್ನ ಬಲಗೈಗೆ ಗುಪ್ತಗಾಯವಾಗಿದ್ದು ಟೊಂಕಕ್ಕೆ ಬಾರಿ ಗುಪ್ತಗಾಯವಾಗಿದ್ದು ಮುಖಕ್ಕೆ, ಬಲಗಣ್ಣಿನ ಹತ್ತಿರ ತರಚಿದ ಗಾಯವಾಗಿದೇ ಅಫಘಾತ ಪಡಿಸಿದ ಕಾರ ನಂಬರ ಕೆಎ 32 ಎನ್‌ 8858 ಇದ್ದು ಅದರ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ ನಂತರ ನನ್ನ ಮಗ ಅಹ್ಮದ ಅಲಿಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದು ನನಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾನೆ. ಕಾರಣ ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡೆಯಿಸಿ ನನಗೆ ಬಾರಿಗಾಯಗೊಳಿಸಿ ವಾಹನ ಸಮೇತ ಓಡಿ ಹೋದ ಸದರಿ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕಿರುಕಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಪುತಳಬಾಯಿ ಗಂಡ ಭೀಮಶ್ಯಾ ಪೊಲೀಸ ಪಾಟೀಲ್ ಸಾ: ಬಾಚನಾಳ ತಾ;ಜಿ ಕಲಬುರಗಿ ರವರ ಹೊಲ ಬಾಚನಾಳ ಗ್ರಾಮ ಸೀಮಾಂತರದಲ್ಲಿ ನನ್ನ ಹೆಸರಿನಲ್ಲಿ ಹೋಲ ಸರ್ವೆ ನಂ.57 ನೇದ್ದರಲ್ಲಿ 2 ಎಕರೆ.13 ಗುಂಟೆ ಜಮೀನ ಇದ್ದು ಅದಕ್ಕೆ ಹತ್ತಿ ಸರ್ವೆ ನಂ.58 ರಲ್ಲಿ 1 ಎಕರೆ 21 ಗುಂಟೆ ಜಮೀನ ಇದ್ದು. ಸರ್ವೆ ನಂ.57 ರ ಪಕ್ಕದಲ್ಲಿ ಅಡ್ಡ ಹಳ್ಳ ಅಂತಾ ಇದ್ದು. ಅದು ಬಾಚನಾಳದಿಂದ ರಾಜನಾಳಕೆರೆಗೆ ಹರಿದು ಹೋಗುತ್ತದೆ. ಆಹಳ್ಳಕ್ಕೆ ನಮ್ಮ ಹೋಲದ ಪಕ್ಕದಲ್ಲಿ ನಮ್ಮೂರ ನಿಂಗಪ್ಪ ಪ್ರಬುದ್ದಕರ ವಿಜಯಕುಮಾರ ಪವಾರ ಭೀಮಾಶಂಕರ ರಾಜೇಶ್ವರ ವಿನಾಯಕರಾವ ಪೋಲಿಸ ಪಾಟೀಲ ಮತ್ತು ಶಿವಕುಮಾರ ಧನ್ನೂರ ಇವರೆಲ್ಲರೂ ಕೂಡಿ ಅನಧಿಕೃತವಾಗಿ ಒಡ್ಡು ಹಾಕಿ ಹಳ್ಳದ ನೀರು ನನ್ನ ಹೋಲದಲ್ಲಿ ಬರುವಂತೆ ಮಾಡಿದ್ದು ಈ ವಿಷಯದಲ್ಲಿ ನಾನು ಮತ್ತು ನನ್ನ ಮನೆಯವರು ಕೂಡಿ ನಿಂಗಪ್ಪ ಪ್ರಬುಧ್ದಕರ ಇತರರಿಗೆ ಹಳ್ಳದ ನೀರು ನಮ್ಮ ಹೋಲದಲ್ಲಿ ಬಂದು ಹೋಲಮತ್ತು ಬೆಳೆ ಹಾಳಾಗುತ್ತದೆ ಅಂತಾ ಸಾಕಷ್ಟು ಬಾರಿ ಕೇಳಿದರು ಕೂಡಾ ಒಡ್ಡು ತೆಗೆಯದೆ ಪ್ರತಿದಿನ ನನಗೆ ಮೇಲೆ ಹೇಳಿದವರು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಮಾನಸಿಕ ಕಿರುಕುಳ ನಿಡುತ್ತ ಬಂದಿರುತ್ತಾರೆ. ನಿನ್ನೆ ದಿನಾಂಕ 21-08-2017 ರಂದು ಮುಂಜಾನೆ ವೇಳೆಯಲ್ಲಿ ನನ್ನ ಮೊಮ್ಮಕ್ಕಳು ಎಲ್ಲರೂ ಕೂಡಿ ಲಿಂಗದ ಗುಡಿ ಜಾತ್ರೆಗೆ ಹೋಗಿದ್ಸು ನಾನು ಒಬ್ಬಳೆ ಮನೆಯಲ್ಲಿದ್ದು. ಮುಂಜಾನೆ 10:00 ಸುಮಾರಿಗೆ ನಾನು ನನ್ನ ಮನೆಯ ಮುಂದೆ ಹೆಂಡಿ ಹಿಡಿಯುತ್ತಿದಿದ್ದಾಗ ನಿಂಗಪ್ಪ ಪ್ರಭುದ್ದಕರ್, ಮೇಲೆ ಹೇಳಿದ ಇತರೆ ನಾಲ್ಕು ಜನರು ಕೂಡಿ ನನ್ನ ಹತ್ತಿರ ಬಂದು ಏ ಮುದುಕಿ ಹಳ್ಳದಲ್ಲಿ ಹಾಕಿದ ಒಡ್ಡು ತೆಗೆಯಂತ ನಮ್ಮ ಮೇಲೆ ಕೇಸು ಮಾಡಿದ ನಿನಗೆ ಬಹಳ ಸೊಕ್ಕು ಇದೆ ನಾವು ಹಳ್ಳದ ಓಡ್ಡು ತೆಗೆಯುವದಿಲ್ಲ ನಿನ್ನ ಹೊಲ ಹಾಳು ಮಾಡುತ್ತೇವೆ ಮತ್ತೆ ನಮ್ಮ ಮೇಲೆ ನೀನು ಕೇಸ ಮಾಡಿದರೆ ನಾನು ನಿಮ್ಮ ಮೇಲೆ 18 ಸಿಟಿ ಕೇಸು ಮಾಡುತ್ತೇನೆ ಅಂತಾ ನಿಮ್ಮೆಲ್ಲರಿಗು ಒಳಗೆ ಹಾಕಿಸುತ್ತೇನೆ ಅಂತಾ ನನಗೆ ಬೆದರಿಕೆ ಹಾಕಿ ಮಾನಸಿಕವಾಗಿ ಕಿರುಕುಳ ನಿಡಿದ್ದರಿಂದ ನನಗೆ ದಿಕ್ಕು ತೋಚದೆ ನಾನು ಸಾಯುವಂತೆ ಪ್ರಚೋದನೆ ಕೋಟ್ಟಂತಾಗಿದ್ದರಿಂದ ನಿನ್ನೆ ಮದ್ಯಾಹ್ನ 12.00 ಗಂಟೆಯ ಸೂಮಾರಿಗೆ ನನ್ನ ಮನೆಯಲ್ಲಿ ಹೂವಿನ ಬೆಳೆಗೆ ಹೋಡೆಯು ರೊಗರ್ ಕ್ರಿಮಿನಾಷಕ ಔಷದಿ ಕುಡಿದು ವಾಂತಿ ಮಾಡಿ ಮನೆಯಲ್ಲಿ ಒದ್ದಾಡುತ್ತಿದ್ದಾಗ ಅದೇ ವೇಳೆಗೆ ಶಿವರಾಜ ಪಾಟೀಲ ಶರಣಬಸಪ್ಪ ಇವರು ಬಂದು ನನಗೆ ಉಪಚಾರ ಕುರಿತು ಮೋಟರ ಸೈಕಲ ಮೇಲೆ ಕರೆದುಕೊಂಡು ನಾವದಗಿ ವರೆಗೆ ಬಂದು ಅಲ್ಲಿಂದ 108 ಅಂಬುಲೆನ್ಸನಲ್ಲಿ ಕರೆದುಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತಾರೆ. ನಿನ್ನೆ ನನ್ನೊಂದಿಗೆ ನಿಂಗಪ್ಪ ಪ್ರಬುದ್ದಕರ ಹಾಗೂ ಇತರರು ಜಗಳ ಮಾಡಿ ಕಿರುಕುಳ ನಿಡಿದ್ದನ್ನು ನಮ್ಮೂರ ಕಾಶಿನಾಥ ವಾಡಿ ಹಾಗೂ ಬಸವರಾಜ ದಾಡಗಿ ಇವರು ನಿಂತು ನೋಡಿದ್ದು ಇರುತ್ತದೆ. ನನ್ನ ಹೋಲಕ್ಕೆ ಹತ್ತಿ ಹಾಕಿದ ಒಡ್ಡು ತೆಗೆಯುವ ವಿಷಯದಲ್ಲಿ ನನಗೆ ಪದೆಪದೆ ಮಾನಸಿಕ ಕಿರುಕುಳ ನೀಡಿ ಹೆದರಿಸಿ ನನಗೆ ಆತ್ಮ ಹತ್ಯ ಮಾಡಿಕೋಳ್ಳುವಂತೆ ಪ್ರಚೋದನೆ ನಿಡಿದವರ ಮೇಲೆ ಕಾನೂನ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: