ಮಟಕಾ
ಜೂಜಾಟ ಪ್ರಕರಣ:
ಅಫಜಲಪೂರ
ಪೊಲೀಸ್ ಠಾಣೆ: ದಿನಾಂಕ 17-08-2017 ರಂದು ಶ್ರೀ ಮಾರುತಿ ಎಎಸ್ಐ ಮತ್ತು ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-ಶರಣಪ್ಪ ರವರು ಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಯಿಸಿ ಸಿಪಿಐ
ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ
ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ರವರನ್ನು ಬರಮಾಡಿಕೊಂಡು ಅವರೊಂದಿಗೆ ಸಿಬ್ಬಂದಿಯವರಾದ
ಶರಣಪ್ಪ ಪಿಸಿ, ಸಿದ್ದರಾಮ ಪಿಸಿ , ಇನಿಯುಸ್ ಪಿಸಿ ರವರೊಂದಿಗೆ ದಾಳಿ ಮಾಡಿ ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕರಿಂದ
ಹಣ ಪಡೆದು ಅವರಿಗೆ ಮಟಕಾ ಚೀಟಿಗಳು ಕೊಡುತ್ತಿದ್ದ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ|| ಮಾಶಾಳ ಈತನಿವೆ ವಶಕ್ಕೆ ಪಡೆದು ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 640/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ
ಮಾಡಿಕೊಂಡ ಸದರಿಯವನ ವಿರುದ್ದ ಆಪಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 17.08.2017 ರಂದು ಶ್ರೀ
ವಿಜಯಕುಮಾರ ಸ್ಥಾವರ ಮಠ ಸಾಃ ಜೇವರಗಿ ಹಾಜರಾಗಿ ನಾನು
ಈಗ 8 ದಿನಗಳ ಹಿಂದೆ ನಮ್ಮ ಮನೆಯಲ್ಲಿ
ನನ್ನ ಅಕ್ಕ ಶ್ವೇತಾ ಇವಳು ಅಕಾಲಿಕವಾಗಿ ಮರಣ
ಹೊಂದಿದ್ದರಿಂದ ಜಾಗ ಬದಲಾಯಿಸಿದಂತೆ ಆಗುತ್ತದೆ
ಅಂತಾ ನಾನು ,ನನ್ನ ನನ್ನ ತಂದೆ ತಾಯಿಗಳು ಎಲ್ಲರೂ
ಕಲಬುರಗಿ ನಗದರಲ್ಲಿರುವ ನಮ್ಮ ಸಂಬಂದಿಕರ
ಮನೆಗೆ ಹೋಗಿ ಅಲ್ಲಿಯೇ ಇದ್ದೇವೆ. ಮೊನ್ನೆ ದಿನಾಂಕ
15/08/2017 ರಂದು ನನ್ನ ತಂದೆ
ಮಧುವೀರಯ್ಯಾ ಇವರು ತಮ್ಮ ಕರ್ತವ್ಯಕ್ಕೆ
ಜೇವರಗಿಗೆ ಬಂದು ಕರ್ತವ್ಯ ಮುಸಿಕೊಂಡು ಸಾಯಂಕಾಲ ಮರಳಿ ಕಲಬುರಗಿಗೆ ಬಂದಿರುತ್ತಾರೆ. ಮರು ದಿನ ದಿನಾಂಕ 16/08/2017
ರಂದು ರಂದು ಮದ್ಯಾನ್ಹ ನನ್ನ ತಂದೆ
ಜೇವರಗಿಗೆ ಬಂದು ನಮ್ಮ ಮನೆಗೆ ಹೊಗಿ
ನೋಡಲಾಗಿ ನಮ್ಮ ಮನೆಯ ಮುಖ್ಯಬಾಗಿಲ ಕೀಲಿ
ಕೊಂಡಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ
ಅಲಮಾರಿಯ ಕೊಂಡಿ ಸಹಿತ ಮುರಿದಿದ್ದನ್ನು ನೋಡಿ ಈ ವಿಷಯ ನಮ್ಮ ತಂದೆ ನಮಗೆ ತಿಳಿಸಿದ್ದರಿಂದ
ನಾನು ಮತ್ತು ನನ್ನ ತಾಯಿ ಸುನಂದಾ ಇಬ್ಬರೂ ಗಾಬರಿಗೊಂಡು ಕೂಡಲೆ ಜೇವರಗಿಗೆ ಬಂದು
ನಮ್ಮ ಮನೆಯ ಅಲಮಾರಿಯಲ್ಲಿ ಇಟ್ಟಿರುವ ಹಣ ಮತ್ತು
ಬಂಗಾರದ ಸಾಮಾನುಗಳು ನೋಡಲಾಗಿ ಅಲಮಾರಿಯಲ್ಲಿ
ಇಟ್ಟಿರುವ ನಗದು ಹಣ 75000/- ಮತ್ತು
4 ತೋಲೆಯ ಬಂಗಾರದ ಕೊರಳ ಚೈನ ಅ//ಕಿ// 112000/- , 2
ಗ್ರಾಂನ ಚಿಕ್ಕ ಮಕ್ಕಳ 5 ಉಂಗುರ ಅ//ಕಿ//
28000/-, 1 ಗ್ರಾಂನ ಚಿಕ್ಕಮಕ್ಕಳ 5 ಉಂಗುರ ಅ//ಕಿ// 14000/- ಮತ್ತು ಎರಡು ತೊಲೆಯ ಚಿಕ್ಕ ಮಕ್ಕಳ 6 ಬೆಳ್ಳಿಯ ಕಾಲ ಚೈನ
ಅ//ಕಿ// 4800/- ಹೀಗೆ ನಗದು ಹಣ
ಸೇರಿ ಒಟ್ಟು 2,33,800/_ ಮೌಲ್ಯದ ಬಂಗಾರದ
ಮತ್ತು ಬೇಳಿಯ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ
ಪ್ರಕರಣ:
ಚೌಕ್
ಪೊಲೀಸ್ ಠಾಣೆ: ದಿನಾಂಕ: 17.08.2017
ರಂದು ಶ್ರೀ ಮಾಶಪ್ಪಾ ತಂದೆ ರಾಮಣ್ಣಾ ಕುಂಚಿಕೊರವೆರ ಇವರು ಹಲ್ಲೆಗೆ ಒಳಗಾದ ಬಗ್ಗೆ ಮಾಹಿತಿ ಬಂದ
ಮೇರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನಿಡಿ ಹಲ್ಲೆಗೆ
ಒಳಗಾದ ಗಾಯಾಳು ಶ್ರೀ ಮಾಶಪ್ಪಾ ಸಾಃ ಎಸ್.ಬಿ ಕಾಲೇಜ್ ಹತ್ತಿರ ರಾಮ ನಗರ ಕಲಬುರಗಿ ಇವರ ಹೇಳಿಕೆಯನ್ನು
ಪಡೆಯಲಾಗಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ, ತಾನು
ಪ್ಲಾಸ್ಟೀಕ್ ಸಾಮಾನು, ಚಾಪೆಗಳನ್ನು
ಮಾರಾಟ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು . ನಮ್ಮ ಬಡಾವಣೆಯಲ್ಲಿಯೆ ವಾಸವಾಗಿರುವ
ಗಂಗಾರಾಮ ತಂದೆ ಮರೆಪ್ಪಾ ಕುಂಚಿಕೊರವೆರ ಹಾಗೂ ಭೀಮಾ , ಯಲ್ಲಪ್ಪಾ &
ಶಿವರಾಜ್ ಕುಂಚಿಕೊರವೆರ, ಹಾಗೂ
ತಿರುಮಲ್. ಇವರೊಂದಿಗೆ ಕಳೆದ 10-12 ದಿವಸಗಳ ಹಿಂದೆ ನಮ್ಮ ಓಣಿಯಲ್ಲಿ ನನ್ನ ತಮ್ಮ ಧನ್ನಪ್ಪಾನಿಗೆ
ಮದುವೆ ಮಾಡುವ ವಿಚಾರದಲ್ಲಿ ನನ್ನ ಮಗ ಪ್ರಶಾಂತನೊಂದಿಗೆ ತಕರಾರು ಆಗಿದ್ದು, ಅಲ್ಲದೆ
ಇವರೇಲ್ಲರು ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಅಂದು ಭೀಮಾ &
ತಿರುಮಲ್, ಶಿವರಾಜ್ ಇವರು
ನನಗೆ ಈ ಒಣಿಯಲ್ಲಿ ನೀನು ಹೇಗೆ ಜೀವನ ಮಾಡುತ್ತಿ ನಿನಗೆ ನೋಡಿಕೋಳ್ಳುತ್ತೆವೆ ಅಂತಾ ಜೀವ ಬೆದರಿಕೆ
ಹಾಕಿದ್ದು, ಭೀಮಾ ಈತನು ಈ ಒಣಿಯಲ್ಲಿ ನಿನಾದರೂ ಇರಬೇಕು, ನಾನಾದರೂ
ಇರಬೇಕು ಅಂತಾ ನನಗೆ ಧಮಕಿ ಸಹಃ ಹಾಕಿರುತ್ತಾನೆ.ಗಿದ್ದು ಇಂದು ದಿಃ 17.08.2017 ರಂದು ನಾನು &
ನನ್ನ ಹೆಂಡತಿ ರೇಣುಕಾ ಹಾಗೂ ನನ್ನ ಅತ್ತೆ ಬಸಮ್ಮಾ ಮೂವರು ಕೂಡಿಕೊಂಡು ಪ್ಲಾಸ್ಟೀಕ
ಸಾಮಾನು ಖರೀದಿ ಮಾಡುವ ಕುರಿತು ಮಾರ್ಕೆಟಗೆ ಬಂದು ಮಾಹಾದೇವ ಪ್ರಿಂಟರ್ಸ ಅಂಗಡಿಯ ಎದುರು ಬರುತ್ತಿದ್ದಾಗ, ನನ್ನ
ಹಿಂದುಗಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ಕುಳಿತುಕೊಂಡು ಬಂದವರೆ ತಮ್ಮ ಕೈಯಲ್ಲಿದ್ದ
ಚಾಕುವಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಬೇನ್ನಿನಲ್ಲಿ ಮೇಲೆ ಜೋರಾಗಿ ಹೊಡೆದಿದ್ದು , ನಾನು
ಚೀರುತ್ತಾ ಕೆಳಗೆ ಬಿಳಲು, ನನ್ನ ಹೆಂಡತಿ &
ಅತ್ತೆ ಹಿಂದಿನಿಂದ ಓಡುತ್ತಾ
ಬರುತ್ತಿದ್ದನ್ನು ನೋಡಿ ಆ ಹುಡುಗರು ತಮ್ಮ ಕೈಯಲ್ಲಿದ್ದ ಚಾಕುವನ್ನು ಅಲ್ಲಿಯೆ ಬಿಸಾಕಿ ತಾವು
ತಂದಿದ್ದ ಬೈಕನಲ್ಲಿ ಅಲ್ಲಿಂದ ಓಡಿ ಹೋಗಿರುತ್ತಾರೆ. ನನ್ನೊಂದಿಗೆ ಈ ಹಿಂದೆ 10-12 ದಿವಸಗಳ
ಹಿಂದೆ ಜಗಳ ಮಾಡಿಕೊಂಡಿದ್ದ ನಮ್ಮ ಒಣಿಯ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಈ
ನಾಲ್ಕು ಜನರೆ ಹಳೆಯ ವೈಮನಸ್ಸಿನಿಂದಲೆ, ನನಗೆ
ಕೊಲೆ ಮಾಡಲು ಕಳುಹಿಸಿ ನನ್ನ ಮೇಲೆ ಈ ರೀತಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿಸಿದ್ದು . ಚಾಕುವಿನಿಂದ
ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ದ ಹಾಗೂ ನಮ್ಮ ಒಣಿಯ
ನಮ್ಮ ಸಂಬಂಧಿಕರೆ ಆದ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಇವರ ವಿರುದ್ದ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು
ಪ್ರಕರಣ:
ಮಳಖೇಡ
ಪೊಲೀಸ್ ಠಾಣೆ: ದಿನಾಂಕ 17-08-2017 ರಂದು ಶ್ರೀ ನೀಲಕಂಠ
ತಂದೆ ಶಿವರಾಯ ಪಿಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ, ಸಾ: ಹೂಡಾ(ಕೆ), ಇವರು
ಠಾಣೆಗೆ ಹಾಜರಾಗಿ ತಾನು ಒಂದುವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಸದರಿ ಸಂಘದ
ಅಧ್ಯಕ್ಷರು ಗುರಣ್ಣ ತಳಕಿನ್, ಉಪಾಧ್ಯಕ್ಷರು ಖಾಜಾಮಿಯ್ಯಾ ಬಳಗಾರ, ನಿರ್ದೇಶಕರು ಶರಣಯ್ಯಾ
ಸ್ವಾಮಿ ಹಾಗು ಇತರೆ ನಿರ್ದೇಶಕರು ಇರುತ್ತಾರೆ, ನಮ್ಮ ಸಹಕಾರ ಸಂಘದಲ್ಲಿ ರೈತರು
ಸದಸ್ಯರಿರುತ್ತಾರೆ. ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36
ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ
(ಸೊಸೈಟಿ) ಸಂಘದೊಂದಿಗೆ ಮಾಡುತ್ತಿರುತ್ತಾರೆ,
ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ
ವ್ಯವಹಾರ ಇದ್ದು. ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ, ಮತ್ತು ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ
ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಬಂದ ಹಣ ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000/- ರೂ ನಗದು
ಹಣ ನಮ್ಮ ಸಂಘದಲ್ಲಿ ಇದ್ದವು. ಪ್ರತಿ ನಿತ್ಯದಂತೆ ದಿನಾಂಕ 16-08-2017 ರಂದು ಬೆಳಿಗ್ಗೆ ಯಿಂದ
ಸಾಯಂಕಾಲದವರೆಗೆ ಕೆಲಸ ನಿರ್ವಹಿಸಿ 1,60,000/- ರೂನಗದು ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ
ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ
ಮನೆಗೆ ಹೋಗಿದ್ದು .ದಿನಾಂಕ 17-08-2017 ರಂದು ಬೆಳಿಗ್ಗೆ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿದ
ಬಗ್ಗೆ ತಿಳಿಸಿದ್ದು. ನಾನು ಗಾಬರಿಗೊಂಡು ನಮ್ಮೂರಿಂದ
ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಬಂದು ನೋಡಲಾಗೆ ನಾನು ಕುಳಿತು ಕೆಲಸ ಮಾಡುವ
ಟೇಬಲ್ ನ ಡ್ರಾ ಮುರಿದಿದ್ದು ನಾನು ಅದರಲ್ಲಿ ಇಟ್ಟಿದ್ದ ನಗದು ರೂ 1,60,000/- ಇರಲಿಲ್ಲ ಹಾಗೂ
ಆಲಮೇರಾದ ಕೀಲಿ ಮುರಿದಿ್ದು ಅದರಲ್ಲಿ ಇಟ್ಟಿದ್ದ ಸಾಮಾನುಗಳಿ ಚಲ್ಲಾ ಪಿಲ್ಲಿಯಾಗಿದ್ದು, ದಿನಾಂಕ
16-08-2017 ರಂದು ರಾತ್ರಿ ಯಾರೀ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕು ರಾಡಗಳನ್ನು ಕಿತ್ತು
ಹಾಕಿ ಇಳಗಡೆ ಪ್ರವೇಶ ಮಾಡಿ ಅಲ್ಲಿದ್ದ ನಗದು
ಕಳವು ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುದಿಸುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ
ಮಳಖೇದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment