ಸುಳ್ಳು
ಸಾಕ್ಷಿ ಹೇಳುವಂತೆ ಜೀವದ ಬೇದರಿಕೆ ಹಾಕಿದ ಪ್ರಕರಣ :
ಫರತಾಬಾದ
ಠಾಣೆ : ಶ್ರೀ ಲಕ್ಪ್ಷಣ ತಂದೆ ರಾಮಚಂದ್ರ ಕಟಬಾಣ ಸಾ:
ಜೋಗುರ ರವರ ಮಗಳನ್ನು 2013 ನೇ ಸಾಲಿನಲ್ಲಿ 1)
ಚಾಂದಪಾಶಾ ತಂದೆ ಬಾಬು ಡಾಂಗೆ 2) ಬಾಬು ಡಾಂಗೆ ಸಾ: ಇಬ್ಬರು ಜೋಗುರ
ಗ್ರಾಮಇವರು ಅಪಹರಿಸಿ ಅತ್ಯಾಚಾರ ಮಾಡಿದ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು.
ಈ ಪ್ರಕರಣದಲ್ಲಿ ಫಿರ್ಯಾದಿಗೆ ಕೋರ್ಟನಲ್ಲಿ ಸುಳ್ಳು ಸಾಕ್ಷಿ ಹೇಳ ಬೇಕು ಇಲ್ಲದಿದ್ದರೆ ನಿನಗೆ ಜೀವ
ಸಹಿತ ಬಿಡುವುದಿಲ್ಲಾ ಅಂತಾ ಹೆದರಿಸಿ ಅವಚ್ಯವಾಗಿ
ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿರಕ್ಷಯಲ್ಲಿ
ಇದ್ದ ಆರೋಪಿ ಓಡಿಹೋದ ಪ್ರಕರಣ :
ಶಾಹಾಬಾದ
ನಗರ ಠಾಣೆ : ದಿನಾಂಕ: 02/07/2017 ರಂದು ಮದ್ಯಾಹ್ನ ಠಾಣಾ ದಿನಚರಿ
ಕರ್ತವ್ಯದಲ್ಲಿದ್ದಾಗ ರಾತ್ರಿ 7-00 ಪಿ. ಎಮ್ ಸುಮಾರಿ ಶಹಾಬಾದ ನಗರ ಪೊಲೀಸ ಠಾಣೆಯ ಗುನ್ನೆ ನಂಬರ
09/2017 ಕಲಂ 457 380 ಐಪಿಸಿ ಪ್ರಕರಣದಲ್ಲಿನ ಅರೋಪಿತನಾದ ವೀರಭದ್ರ ತಂದೆ ಸದಾಶಿವ ಪಂಚಾಳ ಸಾ:
ಮುತ್ತಾಗಾ ಇತನಿಗೆ ಹಾಜರುಪಡಿಸಿದ್ದು ಸದರಿಯವನಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಸ್ತಗಿರಿ ನಿಯಮ
ಪಾಲಿಸುವ ಕುರಿತು ಠಾಣೆಯಲ್ಲಿ ಅಭಿರಕ್ಷೆಯಲ್ಲಿಟ್ಟಾಗ ರಾತ್ರಿ 8-00 ಗಂಟಗೆ ಮೂತ್ರ ವಿಸರ್ಜನೆಗೆ
ಹೋದಾಗ ಕಾಲಿಗೆ ಹಾಕಿರುವ ಹ್ಯಾಂಡಕಪ್ ಜೊತೆಗೆ ತಪ್ಪಿಸಿಕೊಂಡು ಹೋಗಿರುತ್ತಾನೆ ತಾನು ಅವನಿಗೆ
ಹುಡುಕಾಡಲು ಹಳೆ ಶಹಾಬಾದ ರಸ್ತೆಗೆ ಹೋದಾಗ ಇದೆ ರಸ್ತೆಯಿಂದ ಓಡಿ ಹೋಗಿರುತ್ತಾನೆ ಅಂತಾ
ಗೊತ್ತಾಗಿರುತ್ತದೆ. ಸುತ್ತಲೂ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಕಾರಣ ಕಾನೂನು ಕ್ರಮ
ಕೈಗೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪರಿಚಿತ
ವ್ಯಕ್ತಿ ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ. ಶಿವಾನಂದ ತಂದೆ ರೇವಪ್ಪಾ ಚಿಂಚೋಳಿ ಸಾ;ಹೀರಾಪೂರ
ತಾ;ಜಿ;ಕಲಬುರಗಿ. ಇವರು ದಿನಾಂಕ. 3-7-2017
ರಂದು ಮುಂಜಾನೆ ತಮ್ಮ ಹೋಲಕ್ಕೆ ಗಳ್ಯಾ
ಹೊಡೆಯುವದಕ್ಕೆ ಹೋಗಿದ್ದು ಹೊಲಕ್ಕೆ ಹೋದ ನಂತರ
ನಮ್ಮ ಹೊಲದ ಉತ್ತರದ ಬಂದಾರಿಗೆ ಇರುವ ಬೇವಿನ ಗಿಡಕ್ಕೆ ಒಬ್ಬ ವ್ಯಕ್ತಿ ನೇಣು ಹಾಕಿಕೊಂಡ ತರಹ
ದೂರಿಂದ ಕಂಡು ಬಂದಿತ್ತು ಆಗ ನಾನು ಮತ್ತು ರಾಜು
ತಾಡಪಳ್ಳಿ ಇಬ್ಬರು ಸ್ಥಳಕ್ಕೆ ಹೋಗಿ ನೋಡಲು ಒಬ್ಬ
ಅಪರಿಚಿತ ವ್ಯಕ್ತಿಯು ಒಂದುನೀಲಿ, ಕಂದು ಬಣ್ಣದ ಪಟ್ಟಾಪಟ್ಟಿ ಲುಂಗಿಯಿಂದ ನೇಣು ಹಾಕಿಕೊಂಡಿದ್ದು
ಎರುಡು ಕಾಲುಗಳು ನೇರವಾಗಿದ್ದು ನೆಲದಿಂದ ½ ಪೀಟ ಅಂತರದಲ್ಲಿ ಕಾಲುಗಳಿಗೂ ಮತ್ತು ನೆಲಕ್ಕೆ ಅಂತರವಿರುತ್ತವೆ.
ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 30-35
ವರ್ಷದವನಿದ್ದು ತಳ್ಳನೆಯ ಮೈಕೊಟ್ಟು ಹೊಂದಿದ್ದು
,ಎತ್ತರ 5 ಫೀಟ , 6 ಇಂಚು ಇದ್ದು , ದುಂಡು ಮುಖ ,ಸಾಧಗಪ್ಪು
ಮೈಬಣ್ಣ ಹೊಂದಿದ್ದು ,ಮೈ ಮೇಲೆ ಆರೇಂಜಕಲರಮತ್ತು ಹಸಿರು ಕಲರನ ಲೈನಿಂಗ ಶರ್ಟ,ಒಂದು ನೀಲಿ
ಕಲರನ ಪ್ಯಾಂಟ ಧರಿಸಿದ್ದನು,ತೆಳ್ಳನೆಯ ಕಪ್ಪು ದಾಡಿ ಮಿಸೆ ಇರುತ್ತವೆ,ಸದರಿಯವನು ತನ್ನ ಯಾವುದೇ
ವೈಯಕ್ತಿ ಸಮಸ್ಯಯಿಂದ ಮನಸಿನ ಮೇಲೆ ದುಷ್ಪರಿಣಾಮ ಮಾಡಿಕೊಂಡು ದಿನಾಂಕ. 3-7-2017 ರಂದು
ಬೆಳಗ್ಗಿನ ಜಾವಾದಿಂದ 9-00 ಎ.ಎಂ.ದ ಮಧ್ಯದ ಅವಧಿಯಲ್ಲಿ ಒಂದು ನೀಲಿ , ಕಂದು ಬಣ್ಣದ ಪಟ್ಟಾ ಪಟ್ಟಿ ಲುಂಗಿನಿಂದ
ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ, ಆದುದರಿಂದ ಸದರಿ
ವ್ಯಕ್ತಿಯ ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ
ವಾಹನ ಕಳವು ಪ್ರಕರಣ :
ಸ್ಟೇಷನ
ಬಜಾರ ಠಾಣೆ : ಶ್ರೀ
ಶರಣಪ್ಪ
ತಂದೆ ವೀರಭದ್ರಪ್ಪ ಕೊಂಡಾ ವ
ಸಾ: ಬಾಲಗಾಟ ಕಂಪೌಂಡ ಹತ್ತಿರ ನಾಗಪ್ಪ ಅಡ್ವಿಕೇಟ ಹೌಸ ಕಲಬುರಗಿ ರವರು ದಿನಾಂಕ. 07/05/2017 ರಂದು ಮದ್ಯಾಹ್ನ 2:30 ಪಿ.ಎಂ
ಸುಮಾರಿಗೆ ನಾನು
ನನ್ನ ಹೊಂಡಾ ಎಕ್ವಿವ್ ಮೋಟಾರ ಸೈಕಲ್ ನಂ. KA-32
EG-4042 ಚೆಸ್ಸಿನಂ. ME4JF502GET168202,
ಇ.ನಂ.
JF50ET1168406
ಅ,ಕಿ||
40,000/- ರೂ ನೇದ್ದು ಖುಬಾ ಪ್ಲಾಟದ ಬಾಲಗಾಟ ಕಂಪೌಂಡದ ನನ್ನ ಮನೆ ಮುಂದೆ ನಿಲ್ಲಿಸಿ ನಂತರ ಸಾಯಂಕಾಲ
6
ಪಿ.ಎಮ್ ಸುಮಾರಿಗೆ ಬಂದು
ನೋಡಲಾಗಿ
ನನ್ನ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ಇರಲಿಲ್ಲ ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ
ಹೊಂಡಾ ಎಕ್ಟಿವ್ ನನ್ನ ಹೆಂಡತಿಯಾದ ಶ್ರೀಮತಿ ಸೂನಿ ಗಂಡ ಶರಣಪ್ಪ ಇವರ ಹೆಸರಿನಲ್ಲಿ ಇರುತ್ತದೆ. ಕಾರಣ ಸದರಿ
ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ಪತ್ತೆ ಮಾಡಿ
ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment