POLICE BHAVAN KALABURAGI

POLICE BHAVAN KALABURAGI

01 July 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:30/06/2017 ರಂದು ರಾತ್ರಿ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಮೌಲಾಲಿ ಕಟ್ಟಾದ ಹತ್ತರಿ ಒಬ್ಬ ವ್ಯಕ್ತಿ ದೈವ ಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ  ಸಂಜೀವಕುಮಾರ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕದ ಹತ್ತಿರ ಹೋಗಿ ಮೌಲಾಲಿ ಕಟ್ಟದ ಹತ್ತರ ಇರುವ ಹೊಟೆಲ್ ಹಿಂದಗಡೆಯಲ್ಲಿ  ನಿಂತು ನೋಡಲು ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಅಬ್ದುಲ್ ರವುಫ್ ತಂದೆ ಅಬ್ದುಲ್ ಗನಿ ಸಾ: ಮೌಲಾಲಿ ಕಟ್ಟಾ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್ ಪೆನ್, 1 ಮಟಕಾ ಬರೆದ ಚೀಟಿ, ನಗದು ಹಣ 1070/-ರೂಗಳು ಮತ್ತು ಕೃತ್ಯ ಬಳಸಿದ ಒಂದು ಮೊಬೈಲ್ ಅಂ.ಕಿ:500/- ನೇದ್ದವುಗಳು ದೊರಕಿದ್ದು. ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 30/06/2017 ರಂದು ಮಧ್ಯಾಹ್ನ ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋಳಾ.ಬಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ,  ಗೋಳಾ.ಬಿ ಗ್ರಾಮಕ್ಕೆ ಬಾತ್ಮಿ ಬಂದ ಸ್ಥಳವಾದ ಸರ್ಕಾರಿ ಶಾಲೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಾಜಕುಮಾರ @ ರಾಜು ತಂದೆ ಬಾಬು ರಾಠೋಡ, ಸಾ||ಗೋಳಾ ಬಿ ತಾಂಡಾ ಅಂತಾ ತಿಳಿಸಿದ್ದು ಸದರಿಯವನಿಗೆ  ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ   1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 550/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 30/06/2017 ರಂದು ಮುಂಜಾನೆ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟ್ರರ್ ನಲ್ಲಿ ಜೇವರ್ಗಿ ಕ್ರಾಸ್ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಶಾಹಾಬದ ನಗರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಜೇವರ್ಗಿ ಕ್ರಾಸ್ ಹತ್ತಿರ ಹೋದಾಗ ಹೊನಗುಂಟಾ ರಸ್ತೆ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ಬರುತಿದ್ದು ಅದರ ಚಾಲಕ ಪೊಲೀಸ್ ಜೀಪ್ ನೋಡಿ  ಟ್ರಾಕ್ಟರ್ ನಿಲ್ಲಿಸಿ ಓಡಿ ಹೋದಾಗ  ಅದರ ನಂಬರ್ ಕೆ ಎ 33 ಟಿ 7695-7696 ಇದ್ದು ಅ ಕಿ 2,00,000 ಅದರಲ್ಲಿ ಮರಳು ತುಂಬಿದ್ದು ಅಂ.ಕಿ . 1000/- ಪಂಚರ ಸಮಕ್ಷಮ  ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಿಸುತ್ತಿದ್ದವರ ಮೇಲೆ   ಕಾನೂನು ಕ್ರಮ  ಕೈಗೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ದೇವಿಂದ್ರ ಉದ್ದನವರ ಸಾ||ಲಾಡಚಿಂಚೋಳಿ ಇವರು ದಿನಾಂಕ:30/06/2017. ನನ್ನ ಗಂಡನು ಈಗ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದು ಈಗ ಸದ್ಯ ನಾನು ಮತ್ತು ನನ್ನ ರಂದು ಬೆಳಿಗ್ಗೆ ನನಗೆ ಒಬ್ಬಳು ಮಗಳು ಮಾತ್ರ ಇದ್ದು ಅವಳ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿರುತ್ತಾಳೆ ತಾಯಿಯಾದ ಸೋನುಬಾಯಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವೆ. ಈಗ ಸುಮಾರು 7-8 ದಿವಸಗಳ ಹಿಂದೆ ನಮ್ಮ ಅತ್ತಿಗೆಯಾದ ಗುಂಡಮ್ಮ ಇವಳು ನಮ್ಮ ಮನೆಯಲ್ಲಿರುವ ದಿನಬಳಕೆಯ ಬಾಂಡ್ಯಾಗಳು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ನಮ್ಮೊಂದಿಗೆ ಬಾಯಿ ತಕರಾರು ಮಾಡಿದ್ದು ದಿನಾಂಕ:29/06/2017 ರಂದು ಮುಂಜಾನೆ ನಾನು ಮತ್ತು ನನ್ನ ತಾಯಿಯಾದ ಸೋನುಬಾಯಿ ಇಬ್ಬರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಅತ್ತಿಗೆಯ ಸಂಬಂಧಿಕನಾದ ನಮ್ಮೂರಿನ ಅಶೋಕ ತಂದೆ ಮಲ್ಲಪ್ಪ ಉದ್ದನವರ ಅತ್ತಿಗೆಯಾದ ಗುಂಡಮ್ಮ ಗಂಡ ಸಿದ್ದಪ್ಪ ಉದ್ದನವರ ಅವಳ ಮಗನಾದ ಕಾಶಿನಾಥ ತಂದೆ ಸಿದ್ದಪ್ಪ ಉದ್ದನವರ ಮತ್ತು ಅಶೋಕನ ತಾಯಿಯಾದ ಶಾಂತಬಾಯಿ ಗಂಡ ಮಲ್ಲಪ್ಪ ಉದ್ದನವರ ರವರುಗಳು ಕೂಡಿಕೊಂಡು ಬಂದು ಗುಂಡಮ್ಮಳು ನನಗೆ ಏ ಸೂಳಿ ನಿಮ್ಮ ಮನೆಯಲ್ಲಿರುವ ಬಾಂಡ್ಯಾಗಳು ನಮ್ಮವು ಅವಾ ನಮಗೆ ವಾಪಸ್ಸು ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಆಗ ನಾನು ಮತ್ತು ನನ್ನ ತಾಯಿ ನಿಮ್ಮ ಬಾಂಡ್ಯಾಗಳು ನಮ್ಮ ಮನೆಯಲ್ಲಿ ಏಕೆ ಇರುತ್ತವೆಂದು ಹೇಳುತ್ತಿರುವಾಗ ಅಶೋಕನು ತನ್ನಲ್ಲಿದ್ದ ಚಾಕು ತಗೆದು ನನಗೆ ಚುಚ್ಚುತ್ತಿರುವಾಗ ನಾನು ನನ್ನ ಎರಡು ಕೈಗಳು ಅಡ್ಡ ಹಿಡಿದ್ದರಿಂದ ಸದರಿ ಚಾಕು ನನ್ನ ಎರಡು ಅಂಗೈಗಳಿಗೆ ಚುಚ್ಚಿದ್ದರಿಂದ ಭಾರಿ ರಕ್ತಗಾಯಗಳು ಆಗಿರುತ್ತವೆ. ಗುಂಡಮ್ಮ ಮತ್ತು ಶಾಂತಬಾಯಿ ಇವರುಗಳು ಬಡಿಗೆಯಿಂದ ನನ್ನ ತಾಯಿಯ ಬಲಗೈಗೆ ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ. ಮತ್ತು ಬಡಿಗೆಯಿಂದ ಅವಳ ತೊಡೆಗೆ ಗುಂಡಿಚೆಪ್ಪಿಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದೆ ಕಾಶಿನಾತನು ಸಹ ಬಡಿಗೆಯಿಂದ ನನ್ನ ಹಣೆಯ ಮೇಲ್ಭಾಗ ಬಲಗಡೆ ತೆಲೆಗೆ ಹೊಡೆದ್ದಿದ್ದರಿಂದ ರಕ್ತಗಾಯವಾಗಿದೆ. ಮತ್ತು ಕಾಶಿನಾಥನು ಹಾಗೂ ಅಶೋಕ ಇಬ್ಬರು ಸೇರಿ ನನ್ನ ತಾಯಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಹಾಗೂ ಹೊಟ್ಟೆ ಕೇಳಭಾಗಗಕ್ಕೆ ವದ್ದಿದ್ದರಿಂದ ಒಳಪೆಟ್ಟು ಆಗಿದೆ. ಅಷ್ಟರಲ್ಲಿಯೆ ಅಲ್ಲಯೇ ಇದ್ದ ನಮ್ಮ ಒಣಿಯವರಾದ ಸರುಬಾಯಿ ಗಂಡ ಬಾಬು ಶಿಲ್ಡ, ಲಕ್ಷ್ಮೀಬಾಯಿ ಗಂಡ ಶಾಮರಾಯ ಕೋರೆ ಮತ್ತು ಸಿದ್ದಪ್ಪ ತಂದೆ ಶಾಮರಾಯ ಕೋರೆ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನಾಲ್ಕು ಜನರು ನನಗೆ ಹಾಗೂ ನನ್ನ ತಾಯಿಗೆ ಇವತ್ತು ನೀವು ಉಳಿದ್ದಿದ್ದಿರಿ ಮುಂದೆ ಒಂದಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಸೇಡಂ ಠಾಣೆ  : ಶ್ರೀ. ರಾಜು ತಂದೆ ಹಲಗಪ್ಪ ಕೊಡೆಕಲ್, ಸಾ:ಲಕ್ಷ್ಮೀಪುರ ವಾಡಿ, ತಾ:ಚಿತ್ತಾಪೂರ ರವರು  ದಿನಾಂಕ:30-06-2017 ರಂದು ನಮ್ಮ ಅಳಿಯನಾದ ಶ್ರೀ. ಲಕ್ಷ್ಮಣ ತಂದೆ ಗಿಡ್ಡಪ್ಪ ಭಾಗೋಡಿ ಈತನ ಮದುವೆಯು ಕರನಕೋಟದಲ್ಲಿ ಇದ್ದುದ್ದರಿಂದ ನಾನು ಸಂಗಡ ನಮ್ಮ ಸಂಭಂದಿಕರು ಹಾಗೂ 50 ರಿಂದ 60 ಜನರು ಲಾರಿ ನಂ-KA26-4305 ನೇದ್ದನ್ನು ಬಾಡಿಗೆ ಮಾಡಿಕೊಂಡು ನಮ್ಮೂರ ಲಕ್ಷ್ಮೀಪೂರದಿಂದ ಕರನಕೋಟಗೆ ಹೊರಟಾಗ ಸೇಡಂದಲ್ಲಿ ಚಿಂಚೊಳಿ ರೋಡಿನ .ಪಿ.ಎಮ್.ಸಿ ಮುಂದುಗಡೆ ಚಿಂಚೋಳಿ ಕಡೆಯಿಂದ ಲಾರಿ ನಂ-MH12LT-0584 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಲಾರಿ ಬಲಗಡೆಯ ಹಿಂದಿನ ಟೈರಗೆ ಒಮ್ಮೆಲೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು ಆಗ ಲಾರಿಯಲ್ಲಿ ಹಿಂದುಗಡೆ ಕುಳಿತ 1] ಹಣಮಂತ ತಂದೆ ಗಿಡ್ಡಪ್ಪ ಭಾಗೋಡಿ ಸಾ:ಲಕ್ಷ್ಮೀಪುರ ಈತನ ಹಣೆಗೆ ತಲೆಗೆ ಬಡಿದು ಬುರುಡೆ ಒಡೆದು ಭಾರಿ ರಕ್ತಗಾಯವಾಗಿ ಲಾರಿಯಲ್ಲಿಯೇ ಮೃತಪಟ್ಟಿದ್ದು  2] ಭೋಜಪ್ಪ ತಂದೆ ಭೀಮಯ್ಯ ಕರನಕೋಟ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, 3] ನಾಗೇಶ ತಂದೆ ಭೀಮಯ್ಯ ಕುನ್ನೂರ ಈತನಿಗೆ ಬಲಗೈ ಮುಂಗೈಗೆ ಬೆರಳುಗಳಿಗೆ ರಕ್ತಗಾಯಗಳಾಯಿತು. 4] ಮಹೇಶ ತಂದೆ ದೇವಿಂದ್ರಪ್ಪ ಅಚ್ಚೇಲಿ ಈತನಿಗೆ ಬಲಗೈ ಮೊಳಕೈಗೆ ಗುಪ್ತ ಪೆಟ್ಟಾಯಿತು. 5] ಅವಿನಾಶ ತಂದೆ ಶರಣಪ್ಪ ಜೇವರ್ಗಿ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, ನನಗೆ ಯಾವುದೇ ಗಾಯಗಳಾಗಿರುವದಿಲ್ಲ. ಡಿಕ್ಕಿ ಪಡೆಯಿಸಿದ ಲಾರಿ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಸಚಿನ ತಂದೆ ಸುರೇಶ ಸಾ:ಪಂಡರಪುರ ಅಂತ ತಿಳಿಸಿದನು. ಗಾಯಾಳು ಜನರಿಗೆ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: