ಹಲ್ಲೆ ಪ್ರಕರಣ :
ನೆಲೋಗಿ
ಠಾಣೆ : ಶ್ರೀ ಪಂಡಿತರಾವ ಬದನಿಹಾಳ ಗ್ರಾಮ ಪ್ರಾಚಾರ್ಯರು
ಸರಕಾರಿ ಪದವಿ ಪೂರ್ವ ಕಾಲಏಜು ನೆಲೋಗಿ ಇವರ ಹೋಲ
ಬದನಿಹಾಳ ಸಿಮಾಂತರದಲ್ಲಿ ಸರ್ವೇ ನಂ: 3.ಎ 17-23 ಗುಂಟೆ ಜಮೀನು ಹೊಂದಿದ್ದು ಘನ ನ್ಯಾಯಾಲಯ
ಜೇವರ್ಗಿ ರವರ ಆದೇಶದಂತೆ ನನ್ನ ಪರವಾಗಿ ಆದೇಶವಾಗಿದ್ದು ಸದರಿ ಹೊಲಕ್ಕೆ ಸಾಗುವಳಿ ಮಾಡಲು
ಪರವಾನಿಗೆ ಆದೇಶವಾಗಿದ್ದು ಸದರಿ ಹೋಲಕ್ಕೆ ಸಾಗುವಳಿ ಮಾಡಲು ದಿನಾಂಕ: 04/05/2017 ರಂದು ಹೋದಾಗ
ನನ್ನ ಜೋತೆಗೆ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂದು ನನ್ನ ಸಹೋದರರನ್ನು ಕರೆದು ನ್ಯಾಯಾಲಯದ ಆದೇಶ
ಪಂಡಿತ ಪರವಾಗಿದ್ದು ಅವರನ್ನು ಸಾಗುವಳಿ ಮಾಡಲು ಯಾವುದೆ ರೀತಿಯಿಂದ ತೊಂದರೆ ಕೊಡಬಾರದು ಅಂತ
ಎಚ್ಚರಿಕೆ ಕೊಟ್ಟರು ಅವರೆದರು ಸುಮ್ಮನಿದ್ದು ಸಾಗುವಳಿ ಮಾಡಲು ಬೆಳಿಗ್ಗೆ 10:00 ಗಂಟೆಗೆ
ಒಪ್ಪಿಕೊಂಡರು ನಂತರ ದಿನಾಂಕ: 13/05/2017 ರಂದು ನಾನು ಮೂರು ಟ್ರ್ಯಾಕ್ಟರ ಹಾಗೂ ಕೂಲಿ
ಕಾರ್ಮಿಕರೊಂದಿಗೆ ಹೋಲಕ್ಕೆ ಹೋಗಿ ಕೆಲಸ ಮಾಡಲು ಪ್ರಾರಂಬಿಸಿದೆ ಟ್ರ್ಯಾಕ್ಟರ ನೇಗಿಲು ಹೋಡೆಯುವಾಗ
ನನ್ನ ಅಣ್ಣ ಸದಾನಂದ ತಂದೆ ರಾಮುಕೊಜ, ಮಹಾದೇವಿ ಗಂಡ ಸದಾನಂದ, ಜಂಬು ತಂದೆ ರಾಮಕೊಜ, ಗೋವಿಂದ ಹಾಗೂ ಇವರ ಹೆಂಡತಿಯವರಾದ
ಮಹಾಂತಮ್ಮಾ ಮತ್ತು ಮಿನಾಕ್ಷಿ , ಗುಂಡು ತಂದೆ
ಸದಾನಂದ ಹಾಗೂ ಲಲೀತಾ ಗಂಡ ಗುಂಡು ಇವರೆಲ್ಲರೂ ಬಂದು ನನ್ನ ಮೇಲೆ ಹಲ್ಲೆ ಮಾಡಿದರು
ಸದಾನಂದ ಇತನು ನನ್ನ ತಲೆಗೆ ರಕ್ತಗಾಯ ಮಾಡಿ ಕಟ್ಟಿಗೆಯಿಂದ ಹೋಡೆದು ಹಾಗೂ ಜಂಬು, ಮಾಂತಮ್ಮಾ ನನ್ನ
ಪಕ್ಕೆಲಬಿಗೆ ಹೊಡೆದಳು ಪ್ರಾಕ್ಚರ ಆಗುವಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಗೊವಿಂದ ಸಾಯಿಸಿರಿ
ಹೋಡೆಯಿರಿ ಕೊಂದು ಹಾಕಿರಿ ಪೇಟ್ರೋಲ ಸುರಿದು ಬೆಂಕಿ ಹಚ್ಚಿರಿ ಎಂದು ಕೂಗಾಡಿ ನನ್ನನ್ನೂ
ನಿಂದಿಸಿದರು ನಂತರ ನನ್ನ ಮೈಮೇಲೆ ಇದ್ದ ವಾಚ ಮೋಬಾಯಿಲ ಹಾಗೂ 20 ಗ್ರಾಂ ಬಂಗಾರ ಬ್ಯಾಗನಲ್ಲಿ
ಇದ್ದ 50,000 ರೂ ಬಿದ್ದಿರುತ್ತವೆ. ನಂತರ ನನ್ನನ್ನೂ ನಮ್ಮ ತಾಂಡಾ ಸೇವಾಲಾಲ ಮಂದಿರಕ್ಕೆ
ಕರೆದುಕೊಂಡು ಹೋಗಿ ಕಾನೂನು ಬಾಹಿರ ಬಂಧನವಿರಿಸಿ ಸುಮಾರು 20,ರಿಂದ 30 ರಷ್ಟು ಗುಂಡಾಗಳು
ನನ್ನನ್ನೂ ಒತ್ತಾಯಮಾಡಿ ಅವರು ಹೇಳಿದಂತೆ ಈ-ಬಾಂಡ ಪತ್ರದಲ್ಲಿ ಪಾಲು ಪತ್ರ ಬರೆಸಿಕೊಂಡು ಸಹಿ
ಹಾಕಿಸಿದ್ದಾರೆ. ನನ್ನ ಸಂತ ಹ್ಯಾಂಡ ರೈಟಿಂಗನಿಂದ ಪಾಲು ಪತ್ರ ಬರೆಯಿಸಿಕೊಂಡಿದ್ದಾರೆ. ಹೊಲದಲ್ಲಿ
ಜಗಳ ನಡೆಯುವಾಗ ನನ್ನಕಾಕಾನವರಾದ ಕಮೋಲ,ಬಾಬು, ಮೋಹನ ಹಾಗೂ ವಕೀಲ ತಂದೆ ಮೋತಿಲಾಲ ತಿಕಾರಾಮ ತಂದೆ
ರಾಮಸಿಂಗ ಎಲ್ಲರೂ ಬಂದು ಜಗಳ ಬಿಡಿಸಿದರು ಆಗುವತನಕ ಸಹಾಯದಿಂದ ನಾನು ಕಲಬುರಗಿಗೆ ಬಂದು
ದವಾಖೆನೆಯಲ್ಲಿ ಉಪಚಾರ ಪಡೆದು ಗುಣಮುಖನಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ
: ಶ್ರೀ ವಿಕ್ರಮ ತಂದೆ ವಿಜಯಾನಂದ ಗಂಗನೆ ಸಾ:
ದೇಶಮುಖ್ ಕಾಲೋನಿ ಆಳಂದ ರವರು ಆಳಂದ ಪಟ್ಟಣದ ದೇಶಮುಖ ಕಾಲೋನಿಯಲ್ಲಿ ನನ್ನದೊಂದು ಸ್ವಂತ
ಮನೆಯಿದ್ದು ದಿನಾಂಕ: 31/05/2017 ರಂದು ಬೆಳಗ್ಗೆ 9-30 ಎ.ಎಮ್ ವೇಳೆಗ ನಾನು ಮನೆಯ ಕೀಲಿ ಹಾಕಿ
ಕರ್ತವ್ಯಕ್ಕೆ ಹೋಗಿರುತ್ತೇನೆ. ನಂತರ ನಾನು ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 1-45 ಪಿಎಮ್
ವೇಳೆಗೆ ಮನೆಗ ಬಂದು ನೋಡಲು ನಮ್ಮ ಮನೆಯ ಮುಖ್ಯ
ದ್ವಾರದ ಕೀಲಿ ಮುರಿದಿದ್ದು ನಂತರ ನಾನು ಒಳಗಡೆ ಹೋಗಿ ನೋಡಲು ನಾನು ಮಲಗುವ ಕೋಣೆಯಲ್ಲಿದ್ದ ಎರಡು
ಅಲ್ಮಾರದ ಕೀಲಿ ಮುರಿದಿದ್ದು ಅದರಲ್ಲಿರುವ 01) 65,000/- ರೂ ನಗದು ಹಣ 02) 5 ಗ್ರಾಂ ದ ಎರಡು ಬಂಗಾರದ ಚೈನುಗಳು 03) 01 ಗ್ರಾಂ ದ 05
ಮಕ್ಕಳ ಕೈಯಲ್ಲಿ ಹಾಕುವ ಬಂಗಾರದ ಉಂಗುರುಗಳು ಹೀಗೆ ಒಟ್ಟು 15 ಗ್ರಾಂ ಬಂಗಾರದ ಆಭರಣಗಳು ಅಕಿ;
40,000/- ರೂ ಮತ್ತು 04) ಒಂದು 250 ಗ್ರಾಂ ದ
ಬೆಳ್ಳಿಯ ವಿಭೂತಿ ಬುಟ್ಟಿ 05) 30 ಗ್ರಾಂ ದ.ಎರಡು ಬೆಳ್ಳಿಯ ಗ್ಲಾಸ್‌ಗಳು 06) 500 ಗ್ರಾಂ ದ
ಒಂದು ಬೆಳ್ಳಿಯ ಆರತಿ ಸೆಟ್ ಹೀಗೆ ಒಟ್ಟು 780 ಗ್ರಾಂ ಬೆಳ್ಳಿಯ ಆಭರಣಗಳು ಅಕಿ: 25,000/- ಹೀಗೆ ಎಲ್ಲಾ ಸೇರಿ
ಒಟ್ಟು 1,30,000/- ರೂ ಕಿಮ್ಮತ್ತಿನ
ಸ್ವತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ
ಠಾಣೆ : ಶ್ರೀ ಶ್ರಿಕಾಂತ ತಂದೆ ಹಣಮಂತ ದುಮ್ಮನಸೂರ ಸಾ : ಚುನ್ನಾಭಟ್ಟಿ ಬಾರಿ ನಗರ ಶಹಬಾದ ರವರು ಮತ್ತು ತನ್ನ
ಗೆಳೆಯನಾದ ಶರಣಪ್ಪ ತಂದೆ ಭೀಮಶ್ಯಾ ಮುದ್ನಾಳ ಸಾ : ಶಹಬಾದ ಇಬ್ಬರೂ ಕೂಡಿಕೊಂಡು ಮೊನ್ನೆ ದಿನಾಂಕ
04/06/2017 ರಂದು ಬೆಳಿಗ್ಗೆ ಮದುವೆ ಕಾರ್ಯಕ್ರಮಕ್ಕೆ ಶಹಾಪೂರಕ್ಕೆ
ಶರಣಪ್ಪನ ಮೋ/ಸೈ ನಂ ಕೆಎ-25 ಇ.ಎಲ್ -7771 ನೇದ್ದರ ಮೇಲೆ ಹೋಗಿ ಮದುವೆ ಮುಗಿಸಿಕೊಂಡು ಮರಳಿ ಶಹಾಬಾದ ಕ್ಕೆ ಸದರಿ ಮೋ/ಸೈ
ನಂ ಕೆಎ-25 ಇ.ಎಲ್ -7771 ನೇದ್ದರ ನಾವಿಬ್ಬರೂ ಬರುತ್ತೀರುವಾಗ ಮೋ/ಸೈ ಶರಣಪ್ಪನು ಚಲಾಯಿಸುತ್ತಿದ್ದು
ನಾನು ಹಿಂದೆ ಕುಳಿತ್ತಿದ್ದೇನು ನಮ್ಮ ಮೋ/ಸೈ ಜೆವರ್ಗಿ ನಗರದ ಸಿಂದಗಿ
ಕ್ರಾಸ್ ನಲ್ಲಿ ಹೋಗುತ್ತಿದ್ದಂತೆ ಎದುರಿನಿಂದ ಒಂದು ಕ್ರುಜರ ಜೀಪ
ನಂ ಕೆಎ-28 ಎಮ್- 5803 ನೇದ್ದರ
ಚಾಲಕನು ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋ/ಸೈ ಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಮೊ/ಸೈ ಸಮೇತವಾಗಿ ಕೆಳಗೆ ಬಿದ್ದ ಪರಿಣಾಮವಾಗಿ ನನಗೆ ಎಡಗಡೆ ಕಣ್ಣಿನ ಮೆಲೆ
ರಕ್ತಗಾಯ ,ಬಾಯಿಯಲ್ಲಿನ ಐದು ಹಲ್ಲುಗಳು ಬಿದ್ದಿರುತ್ತವೆ ಮತ್ತು ತಲೆಗೆ ಗುಪ್ತಗಾಯ ವಾಗಿರುತ್ತದೆ.ಶರಣಪ್ಪನಿಗೆ ಬಲಗೈ ಮೋಳಕೈ ಕೆಳಗೆ ಗುಪ್ತಗಾಯವಾಗಿ ಕೈ ಮುರಿದಿದ್ದು, ಎಡಗೈ
ಮೊಳಕೈಗೆ, ತುಟಿಗೆ, ಗದ್ದಕ್ಕೆಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ.
ಈ ಘಟನೆಯ ನಂತರ ಸದರಿ ಕ್ರುಜರ ಚಾಲಕನು ತನ್ನ ಕ್ರುಜರ ಜೀಪ ಸಮೇತ
ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment