POLICE BHAVAN KALABURAGI

POLICE BHAVAN KALABURAGI

29 May 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 28/05/2017 ರಂದು  ಮುಂಜಾನೆ ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗುತ್ತಿರುವಾಗ ಹೊನಗುಂಟಾ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಕೆ.ಎ. 32 ಟಿಎ 2725 2726 ಅ.ಕಿ     2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 23-05-2017 ರಂದು ಬೆಳಿಗ್ಗೆ ನನಗೆ ವಿಜಯಪೂರಕ್ಕೆ ಹೋಗ ಬೇಕಾಗಿದ್ದರಿಂದ ಬಾಳಾಸಾಹೇಬನು ತನ್ನ ಮೋಟಾರ್ ಸೈಕಲ ನಂ ಎಮ್ ಹೆಚ್-13/ ಎವ್ಹಿ-6352 ನೇದ್ದರ ಮೇಲೆ ಕರಜಗಿಯಿಂದ ಮಣುರ ಕಡೆ ಹೋಗುವ ರೋಡಿಗೆ ಇರುವ ಹೈದ್ರಾ ಕ್ರಾಸ ಹತ್ತಿರ ಬಿಟ್ಟು ಹೋಗಲು ಬಂದಿದ್ದನು ಬೆಳಿಗ್ಗೆ ಹೈದ್ರಾ ಕ್ರಾಸದಿಂದ ತನ್ನ ಮೋಟಾರ್ ಸೈಕಲ್ ಹೈದ್ರಾ ರೋಡಿನ ಕಡೆಗೆ ತಿರುಗಿಸುತಿದ್ದಾಗ ಮಣುರ ಕಡೆಯಿಂದ ಒಂದು ಕ್ರೂಜರ್ ವಾಹನ ಬರುತಿದ್ದು ಅದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಬಾಳಾಸಾಹೇಬನ ಮೋಟಾರ್ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿ ಅಫಘಾತ ಪಡಿಸಿದನು ಆಗ ಬಾಳಾಸಾಹೇಬನು ರೋಡಿನ ಮೇಲೆ ಬಿದ್ದಿದ್ದು ಕ್ರೂಜರ ವಾಹನ ಮೋಟಾರ್ ಸೈಕಲ್ ಸಮೇತ ಎಳೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿರುವ ವಿದ್ಯೂತ್ ಕಂಬದ ಹತ್ತಿರ ನಿಂತಿರುತ್ತದೆ.ಸದರಿ ಘಟನೆಯಲ್ಲಿ ಬಾಳಸಾಹೇಬನ ಎದೆಯಿಂದ ಸೊಂಟದವರೆಗೆ ಭಾರಿ ಒಳಪೆಟ್ಟಾಗಿ ಎಡಕಾಲಿನ ಕೆಳಭಾಗದಲ್ಲಿ ಎಲುಬು ಮೂರಿದು ಭಾರಿ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ.ಅಪಘಾತ ಸಂಬವಿಸಿದ ಕೂಡಲೆ ಕ್ರೂಜರ ವಾಹನದ ಚಾಲಕನು ತನ್ನ ವಾಹನದಿಂದ ಇಳಿದು ಓಡಿ ಹೋಗಿರುತ್ತಾನೆ ನಂತರ ಅಪಘಾತ ಪಡಿಸಿದ ಕ್ರೂಜರ ವಾಹನದ ನಂಬರ ನೋಡಲು ಕೆಎ-28 /ಎನ್-9326 ಇತ್ತು ಅಪಘಾತ ಸಂಬವಿಸಿದ ವಿಷಯವನ್ನು ನಾನು ಸಂತೋಷ ಬಿರಾಜದಾರ ರವರಿಗೆ ಪೋನ ಮೂಲಕ ತಿಳಿಸಿದರಿಂದ ಅವರು ಒಂದು ಜೀಪಿನಲ್ಲಿ ಚಂದ್ರಶೇಖರ ಕರೂಟಿ, ದುಂಡುಗೌಡ ಬಿರಾಜದಾರ, ಮಲ್ಲು ರೋಡಗಿ ಮತ್ತಿತರರಿಗೆ ಕರೆದುಕೊಂಡು ಘಟನಾ ಸ್ಥಳಕ್ಕೆ ಬಂದರು ಆಗ ನಾವೇಲ್ಲರು ಬಾಳಸಾಹೇಬನಿಗೆ ಚಿಕಿತ್ಸೆಗಾಗಿ ಜೀಪಿನಲ್ಲಿ ಹಾಕಿಕೊಂಡು ಅಕ್ಕಲಕೋಟಕ್ಕೆ ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ನಾಗಣಸೂರ ಗ್ರಾಮದ ಹತ್ತಿರ ಎದುರುಗಡೆಯಿಂದ ಅಂಬ್ಯೂಲೆನ್ಸ ವಾಹನ ಬಂದಿದ್ದು ನಾವೇಲ್ಲರು ಬಾಳಾಸಾಹೇಬನಿಗೆ ಅದರಲ್ಲಿ ಹಾಕಿಕೊಂಡು ಹೋಗಿ ಅಕ್ಕಲಕೋಟದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಚಿಕಿತ್ಸೆ ಫಲಕಾರಿಯಾಗದೇ ಬಾಳಾಸಾಹೇಬನು ಮದ್ಯಾಹ್ನ 2.30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ.ಅಂತಾ ಶ್ರೀ  ಶ್ರೀಮಂತ ತಂದೆ ಈರಣ್ಣ ರೂಗಿ ಸಾ|| ಹೈದ್ರಾ ತಾ|| ಅಕ್ಕಲಕೋಟ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-05-2017 ರಂದು ಶ್ರೀ ಸುರೇಶ ಅಮ್ಮಣ್ಣ ಸಾ : ಗೋಗಿ ಕೆ.ರವರು  ಮತ್ತು ನನ್ನ ಹೆಂಡಿತಿ ಭಾಗ್ಯಶ್ರೀ ತಂದೆ ರಾಮು ಚಂದ್ರ ತಾಯಿ ಕಮಲಾಬಾಯಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದೆವು ಬೆಳಗಿನ ಜಾವ ಅಂದಾಜು ನಾಲ್ಕು ಗಂಟೆ ಸುಮಾರಿಗೆ ನಾನು ಕಾಲು ಮಡಿಯಲೆಂದು ಎದ್ದು ಕಾಲಮಡೇದು ಬಂದೆನು ಆಗ ನನ್ನ ಹೆಂಡತಿ ಭಾಗ್ಯಶ್ರೀ ಮನೆಯಲ್ಲಿ ಇರಲಿಲ್ಲಾ ನಾನು ಭಾಗ್ಯಶ್ರೀ ಸಂಡಸ ಅಥವಾ ಕಾಲು ಮಡೆಯಲು ಹೋಗಿರಬಹದೆಂದು ತಿಳಿದು ಮಲಗಿಕೊಂಡೆನು -ಬೆಳಗಿನ ಜಾವ ಐದು ಗಂಟೆಗೆ ನೋಡಲಾಗಿ ಭಾಗ್ಯಶ್ರೀ ಎಲ್ಲಿ ಹೋಗಿದ್ದಾಳೆ ಎಂದು ಅಲ್ಲಿ ಇಲ್ಲಿ ಹುಡುಕಲು ಪ್ರಾರಂಭಿಸಿ ಆರು ಗಂಟೆ ಹೊತ್ತಿಗೆ ಅವಳ ತವರು ಮನೆಯವರಿಗೆ ಗುಂಡರಕ್ಕೆ ಪೋನ ಮಾಡಿ ಅವಳ ತಂದೆಯಾದ ಚಂದ್ರಕಾಂತ ರವರಿಗೆ ತಿಳಿಸಿದೆ ಅವರು ಸಹ ಅವಳು ಊರಿಗೆ ಬಂದಿಲ್ಲ ಅಂತ ತಿಳಿಸಿದರು , ನನ್ನ ಮಾವ ಚಂದ್ರಕಾಂತ ಮತ್ತು ಸಂಭಂದಿ ದೀಪಕ ಮತ್ತು ನಮ್ಮ ಊರಿನ ಅಣ್ಣ ತಮ್ಮಂದಿರೊಂದಿಗೆ  ಹುಡುಕಾಡಿದರು ಪತ್ತೆಯಾಗಿರುವದಿಲ್ಲ. ದಿನಾಂಕ 26-05-2017 ರಿಂದ ದಿನಾಂಕ 27-05-2017 ರಂದು ರಾತ್ರಿ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: