POLICE BHAVAN KALABURAGI

POLICE BHAVAN KALABURAGI

22 May 2017

KALABURAGI DISTRICT REPORTED CRIMES

ಮಟಕಾ ಜೂಜು ಕೋರರ ಬಂಧನ:
ರಾಘವೇಂಧ್ರ ನಗರ ಠಾಣೆ: ದಿನಾಂಕ:20/05/2017 ರಂದು ಶ್ರೀ ಕಪಿಲದೇವ ಪಿಐ ಡಿಸಿಬಿ ಘಟಕ ಕಲಬುರಗಿ ಇವರು ನಗರದ ಗಸ್ತಿನಲ್ಲಿದ್ದಾಗ ಶೇಟ್ಟಿ ಕಾಂಪ್ಲೆಕ್ಸ ಆಳಂದ ರೋಡ ಹತ್ತಿರ ಇಬ್ಬರು ವ್ಯಕ್ತಿಗಳು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಡಿ.ಸಿಬಿ ಘಟಟಕ ಸಿಬ್ಬಂದಿ ಮತ್ತು ಪಂಚರೊಂದಿಗೆ ಶೆಟ್ಟಿ ಕಾಂಪ್ಲೆಕ್ಸ ಹತ್ತಿರದ ಶೆಟ್ಟಿ ಟಾಕಿಸ್ನ ಮೇನ್ಗೇಟ್ಹತ್ತಿರ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಅಯ್ಯಾಂಗಾರ ಬೆಕರಿ ಮುಂದಗಡೆ ಸಾರ್ವಜನಿಕ ಸ್ಥಳದ ಬೇವಿನ ಗೀಡ ನೆರಳಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಕೊಡುತ್ತಾ ಮೋಸ ಮಾಡುತ್ತಿರುವದನ್ನು ನೋಡಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ2 ಜನರನ್ನು ವಶಕ್ಕೆ ಪಡೆದು ಅವರಲ್ಲಿ 1) ಚಂದ್ರಕಾಂತ ತಂದೆ ಹಣಮಂತಪ್ಪಾ ಪಾಟೀಲ್ಸಾ:ಕೈಲಾಸ ನಗರ ಕಲಬುರಗಿ ಈತನಿಂದ ಆತನಿಂದ ಮಟಕಾ ಚೀಟಿ ಬರೆಯಲು ಉಪಯೋಗಿಸುತ್ತಿದ್ದ  ಒಂದು ಬಾಲ್ಪೆನ್, 6 ಮಟಕಾ ಚೀಟಿಗಳು, ನಗದು ಹಣ ರೂ 2090/- ಮತ್ತು ಒಂದು ಸ್ಯಾಮಸಂಗ್ಮೋಬೈಲ್ಫೊನ್ಮತ್ತು 2) ಸಂಗಣ್ಣಾ ತಂದೆ ಬಸವಂತಪ್ಪಾ ಸಾಲಿ ಸಾ:ಶಿವಾಜಿ ನಗರ ಕಲಬುರಗಿ ಇತನಿಂದ ನಗದು ರೂ 1800/- ಹಣ ಮತ್ತು 3 ಮಟಕಾ ಚೀಟಿಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಯತ್ನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:- ದಿನಾಂಕ: 18-05-2017 ರಂದು ಶ್ರೀ ಗುರುಲಿಂಗಪ್ಪ ಆತನೂರ ಸಾ: ಬಡದಾಳ ಇವರು ಠಾಣೆಗೆ ಹಾಜರಾಗಿ ತಾನು ಗ್ರಾಮದ ಶರಣಬಸಪ್ಪ ತಂದೆ ಮಲಕಾಜಪ್ಪ ಮೇತ್ರೆ ರವರ ಬಡದಾಳ ಸಿಮಾಂತರದ  ಹೊಲ ಸರ್ವೇ ನಂ 268 ನೇದ್ದರಲ್ಲಿ 4 ಎಕರೆ ಹೊಲ ಎರಡು ವರ್ಷಕ್ಕೆ 1,15,000/-ರೂಪಾಯಿಗೆ ಕಂಡಿಷನ ನಂತೆ ಉಳುಮೆ ಮಾಡುತ್ತಿದ್ದು. ಅದರಲ್ಲಿ ನಾನು ಶರಣಬಸಪ್ಪ ರವರಿಗೆ 5,000/-ರೂ ಮುಂಗಡವಾಗಿ ಕೊಟ್ಟಿದ್ದು ಉಳಿದ ಹಣ ಕೆಲವು ದಿನಗಳಲ್ಲಿ ಕೊಡುವ ಮಾತಾಗಿದ್ದು, ಶರಣಬಸಪ್ಪರವರ ತಂದೆ ಮಲಕಾಜಪ್ಪ ಮೇತ್ರೆ ಇವರು ನನಗೆ ಹೊಲದ ಉಳಿದ ಬಾಕಿ ಹಣ ನನಗೆ ಕೊಡು ನನ್ನ ಮಗನಿಗೆ ಕೊಡಬೇಡ ಎಂದು ಹೇಳಿದಾಗ ನಾನು ಹೊಲ ನಿಮ್ಮ ಮಗನ ಹೆಸರಿಗೆ ಇರುತ್ತದೆ ಅವರು ನನಗೆ ಹೊಲ ಕಂಡಿಷನಗೆ ಹಾಕಿರುತ್ತಾರೆ ನಾನು ಹಣ ನಿಮ್ಮ ಮಗನಿಗೆ ಕೊಡುತ್ತೇನೆ ನೀವು ನಿಮ್ಮ ಮಗನ ಕಡೆಯಿಂದ ತಗೆದುಕೊಳ್ಳಿ ಅಂತ ಹೇಳಿದ್ದು. ಈ ವಿಷಯಕ್ಕೆ ಮಲಕಾಜಪ್ಪ ರವರು ನನ್ನ ಮೇಲೆ ದ್ವೇಷ ಮಾಡಿಕೊಂಡಿದ್ದು ಇರುತ್ತದೆ.
            ದಿನಾಂಕ 16/05/2017 ರಂದು ಹೊಲದಲ್ಲಿನ ಹುಲ್ಲು ತಗೆಯಲು ನನ್ನ ಹೆಂಡತಿಯಾದ ಶಿವಲಿಲಾ  ನಾನು ಹಾಗು ನಮ್ಮ ಗ್ರಾಮದ ಕಲಾವತಿ, ಚನ್ನಬಸವ್ವ ಸವಳಿ ಹಾಗು ಮಲ್ಲಮ್ಮಾ ಮಠಪತಿ ರವರನ್ನು ಕೂಲಿಕೆಲಸಕ್ಕಾಗಿ  ಕರೆದುಕೊಂಡು ಹೊಲಕ್ಕೆ ಹೋದಾಗ ಹೊಲದಲ್ಲಿ ಮಲಕಾಜಪ್ಪ ರವರು ಸಹ ಉಳಿದ ತಮ್ಮ ಎರಡು ಏಕರೆ ಹೊಲದಲ್ಲಿ ಕೂಲಿ ಕೆಲಸಕ್ಕೆ ನಮ್ಮ ಗ್ರಾಮದ ಶಾಮಬಾಯಿ ರುದ್ದೆವಾಡಿ, ಸಿದ್ದಮ್ಮ ತೋಟನಾಕ, ಗುಂಡಮ್ಮಾ ತೋಟನಾಕ ರವರಿಗೆ ಕರೆದುಕೊಂಡು ಬಂದಿದ್ದು. ನಾವು ಬೆಳಿಗ್ಗೆ 10.00  ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಕಬ್ಬಿನ ಬೆಳೆಯಲ್ಲಿ ಕಸ ತಗೆಯುತಿದ್ದಾಗ ಮಲಕಾಜಪ್ಪ ರವರು ನಾನು ಪಾಲಿಗೆ ಮಾಡಿದ ಹೊಲಕ್ಕೆ ಬಂದು ನಾವು ತುಂಬಿ ಇಟ್ಟಿದ ನೀರಿನ ಕೊಡದಿಂದ ನೀರು ಕುಡಿದು ಬಹಳ ಸಮಯ ಅಲ್ಲಿಯೇ ಕುಳಿತುಕೊಂಡಿದ್ದು.  ನಂತರ ಹೊಲದಲ್ಲಿ ಕೆಲಸ ಮಾಡುತಿದ್ದ ನನ್ನ ಹೆಂಡತಿ ಹಾಗು  ಕಲಾವತಿ, ಚನ್ನಬಸವ್ವ, ಮಲ್ಲಮ್ಮ ಇವರು ಬಂದು ನಾವು ತುಂಬಿ ಇಟ್ಟಿದ್ದ ಕೊಡದಿಂದ ನೀರು ಕುಡಿದ ಸ್ವಲ್ಪ ಸಮಯದಲ್ಲೆ ಹೊಟ್ಟೆ ನೋಯಿತ್ತಿದೆ ಅಂತ ಚಿರಾಡುತ್ತಾ ನಾಲ್ಕು ಜನರೊ ನೆಲಕ್ಕೆ ಬಿದ್ದು ಒದ್ದಾಡುತಿದ್ದರು ಆಗ ನಾನು ಗಾಬರಿಯಾಗಿ ಹಾಗು ಅಲ್ಲೆ ಕೆಲಸ ಮಾಡುತಿದ್ದ  ಶಾಮಬಾಯಿ, ಸಿದ್ದಮ್ಮ, ಗುಂಡಮ್ಮ ಇವರು ಬಂದಿದ್ದು ಎಲ್ಲರೊ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಕ್ರಿಮಿನಾಷಕ ಔಷದಿಯ ವಾಸನೆ ಬರುತಿದ್ದು, ತುಂಬಿಟ್ಟ ಕೊಡದಲ್ಲಿ ನೋಡಲಾಗಿ ಕ್ರಿಮಿನಾಷಕ ಔಷಧಿಯ ವಾಸನೆ ಬರುತಿತ್ತು. ನಂತರ ಅಲ್ಲಿಯವರೆ ಅಲ್ಲೆ ಇದ್ದ ಮಲಕಾಜಪ್ಪ ತನ್ನ ಮನೆಯ ಕಡೆಗೆ ಹೋಗಿದ್ದು ನಾನು ಮತ್ತು ನಮ್ಮ ಗ್ರಾಮದ ಅಮೋಘಿ ವಸ್ಥಾಳ, ಈರಣ್ಣ ಬಿರಾದಾರ ರವರಿಗೆ ಪೋನ ಮಾಡಿ ವಿಷಯ ತಿಳಿಸಿ ಖಾಸಗಿ ವಾಹನ ತಗೆದುಕೊಂಡು ನಾಲ್ಕು ಜನರಿಗೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಅಲಿಂದ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರ್ಪಡೆ ಮಾಡಿದ್ದು .
        ಮಲಕಾಜಪ್ಪ ತಂದೆ ಪರಮೇಶ್ವರ ಮೇತ್ರೆ ಇವರು ತನ್ನ ಮಗ ನನಗೆ ಪಾಲಿಹೆ ಹಚ್ಚಿದ್ದ ಹೊಲದ ಬಾಕಿ ಹಣ ಮಲಕಾಜಪ್ಪನಿಗೆ ಕೊಡದ ಕಾರಣ ಸದರಿಯವನು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ನನಗೆ ನನ್ನ ಹೆಂಡತಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಲದಲ್ಲಿ ನಾವು ಕೂಡಿಯುವ ನೀರಿನ ಕೊಡದಲ್ಲಿ ಕ್ರಮೀನಾಷಕ ಔಷದಿ ಬೇರೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವನ ಮೇಲೆ   ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕಣ:
ಫರಹತಾಬಾದ ಪೊಲೀಸ್ ಠಾಣೆ :
ದಿನಾಂಕ 20/05/2017 ರಂದು  ಶ್ರೀಮತಿ ತಾರಮ್ಮಾ ಗಂಡ ಭೀಮನಗೌಡ ಮಾಲಿ ಪಾಟೀಲ ಸಾ: ರಬನಳ್ಳಿ ತಾ:ಶಹಾಪೂರ  ಇವರು ಠಾಣೆಗೆ ಹಾಜರಾಗಿ ದಿನಾಂಕ 19/05/2017 ರಂದು  ಕೆ.ಎಸ್.ಆರ್.ಟಿ.ಸಿ ಬಸ್ಸ ನಂ ಕೆ-38 ಎಫ್ 830 ನ್ಭೆದ್ದರ ಚಾಲಕ ಸಾ: ಬೀದರ ದಿಪೋ ಚಾಲಕ ಸುಭಾಶ ಖಾಶೆಂಪೂರ ಈತನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಫರಹತಾಬಾದ ಗ್ರಾಮದ ಹತ್ತೀರ ಎನ್.ಹೆಚ್ 218 ರೋಡಿನ ಮೇಲೆ ನಿಯಂತ್ರಣ ಕಳೆದುಕೊಂಡು  ಎದುರಿಗೆ ಹೋಗುತ್ತೀರುವ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಒಳಗಿದ್ದ ಒಳಗಿದ್ದ ಫಿರ್ಯಾದಿ ಶ್ರೀಮತಿ ತಾರಮ್ಮಾ ಮತ್ತು ಇತರ ಪ್ರಯಾಣಿಕರಿಗೆ ಭಾರಿ ಮತ್ತು ಚಿಕ್ಕಪುಟ್ಟ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಸದರಿ ಬಸ್ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 20-05-2017 ರಂದು ಶ್ರೀ ವಿಜಯಕುಮಾರ ತಂದೆ ನಾಗಪ್ಪ ಲಾಳಸಂಗಿ ಸಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ದಿನಾಂಕ 16-05-2017 ರಂದು ತನ್ನ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದನ್ನು ಪ್ರತಿ ದಿನದಂತೆ ತನ್ನ ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು,. ತಾನು ಹಾಗು ನನ್ನ ಹೆಂಡತಿಯಾದ ಚಂದ್ರಕಲಾ ಇಬ್ಬರು ತಮ್ಮ  ಮನೆಯ ಬಾಗಿಲಲ್ಲಿ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ರಿವರ್ಸ್ ಆಗಿ ಬರುತಿರುವಾಗ  ನಾನು ನನ್ನ ಹೆಂಡತಿ ಹಾಗು ಸ್ವಲ್ಪ ದೂರ ನಿಂತಿದ್ದ ಮಲ್ಲಯ್ಯ ಮಠ, ಚಿದಾನಂದ ಮಠ, ಬಾಳುಗೌಡ ಪಾಟೀಲ, ವಿಶ್ವನಾಥ ಕರಜಗಿ ಎಲ್ಲರೊ ಸದರಿ ಚಾಲಕನಿಗೆ ಚಿರುತ್ತಾ ಹಿಂದೆ ಕಾರು ಇದೆ ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ರಿವರ್ಸ ಗೇರನಲ್ಲಿ ಹಿಂದಕ್ಕೆ ಬಂದು ನಮ್ಮ ಕಾರಿನ ಹಿಂದಿನ ಭಾಗಕ್ಕೆ ಜೋರಾಗಿ ಅಪಘಾತಪಡಿಸಿದ್ದರಿಂದ ನಮ್ಮ ಕಾರು ಮುಂದಕ್ಕೆ ಹೋಗಿ ಗೋಡೆಗೆ ಡಿಕ್ಕಿಯಾಗಿ ಮುಂದಿನ ಭಾಗ ಹಾಗು ಹಿಂದಿನ ಸಂಪೂರ್ಣ ಜಕಂ ಆಗಿದ್ದು. ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು. ನಂತರ ಲಾರಿ ಚಾಲಕನ ಹೆಸರು ವಿಚಾರಿಸಿದಾಗ ಮಹ್ಮದ್ ಹಜರತ್ ಸಾಬ ಸಾ||ಬಸವಕಲ್ಯಾಣ ಎಂದು ತಿಳಿದು ಬಂದಿರುತ್ತದೆ.
             ಕಾರಣ ಮೇಲೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ಲಾರಿಯನ್ನು ಅತಿವೇಗವಾಗಿ ಹಾಗು ನಿಸ್ಕಾಳಜಿತನದಿಂದ ರಿವರ್ಸ ಗೇರನಲ್ಲಿ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದಕ್ಕೆ ಅಪಘಾತಪಡಿಸಿ ಕಾರಿನ ಹಿಂದಿನ ಭಾಗ ಸಂಪೂರ್ಣವಾಗಿ ಹಾಗು ಮುಂದಿನ ಭಾಗ ಜಖಂ ಮಾಡಿದ್ದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:ದಿನಾಂಕ: 20/05/2017 ರಂದು ಮುಂಜಾನೆ ಶ್ರೀ ವಸೀಮ ತಂದೆ ಅಬ್ದುಲ ರಹಿಮಾನಸಾಬ ಮಲ್ಲೆವಾಲೆ ಸಾ: ಹೊನಗುಂಟಾ ಇಇವರು ಫಿರ್ಯಾದಿ ಸಲ್ಲಿಸಿದ್ದೇನೆನೆಂದರೆ ದಿನಾಂಕ: 19/05/2017 ರಂದು ತಮ್ಮ ಗ್ರಾಮದ ಯೂನುಸ ತಂದೆ ಮಹ್ಮದ ಖಾಜಾ ಹುಸೇನ ನೋಂದೆ ಆತನ ಮೋಟಾರ ಸೈಕಲ ನಂ ಕ.ಎ.ಎ. 32 ಇ ಎನ್ 7935 ನೇದ್ದು ತೆಗೆದುಕೊಂಡು ತಮ್ಮ ಸಂಬಂಧಿಕರ ಮದುವೆಯ ಏಂಗೇಜಮೆಂಟ ಕಾರ್ಯಕ್ರಮಕ್ಕೆ ಕಲಬುರಗಿಗೆ ಹೋಗಿ ಅಲ್ಲಿಂದ ರಾತ್ರಿ ಮರಳಿ ಹೊನಗುಂಟಾಕ್ಕೆ ಬರುತ್ತಿರುವಾಗ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಯೂನುಸನು ಮೋಟಾರ ಸೈಕಲ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಮರತೂರ ಕ್ರಾಸ ದಾಟಿ ದೇವನ ತೆಗನೂರ ಗ್ರಾಮದ ಹತ್ತಿರ ಇರುವ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಮಾಡಿಸಿದ್ದರಿಂದ ನಗೆ ತಲೆಹಿಂಬಾಗಕ್ಕೆ ಪೆಟ್ಟಾಗಿತನ್ನ  ಎಡಗೈ ಮುರಿದಂತಾಗಿದ್ದು ಮತ್ತು ಯೂನುಸನಿಗೆ ಸಹ ತಲೆಗೆ ಭಾರಿ ನಮಗೆ ಉಪಚಾರ ಕುರಿತು 108 ಅಂಬುಲೇನ್ಸನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮದ್ಯದಲ್ಲಿ ಯೂನುಸನು ಮೃತ ಪಟ್ಟಿರುತ್ತಾನೆ.. ಕಾರಣ ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಸದರಿ ಯೂನುಸ ಇತನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ 20/05/2017 ರಂದು  ಶ್ರೀಮತಿ ಜಾಹಿದಾ ಗಂಡ ಮೆಹೆಬೂಬ್ ಅಂದೋಲ ಸಾ: ರಾವೂರು ಇವರು ಠಾಣೆಗೆ ಹಾಜರಾಗಿ ದಿನಾಂಕ 18/05/2017 ರಂದು ತನ್ನ ಗಂಡ ಮೆಹೆಬೂಬ್ ಈತನು ನಂದೂರ ಗ್ರಾಮದ  ಸಂಬಂದಿಕರ ದೇವರ ಕಾರ್ಯಕ್ರಮಕ್ಕೆ ಮೋಟಾರ ಸೈಕಲ್ ನಂಬರ್ ಕೆ ಎ 34 ಎಸ್ 0543 ನೇದ್ದನ್ನು ತೆಗೆದುಕೊಂಡು ನಂದೂರಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ರಾವೂರಕ್ಕೆ ಮೊಟಾರ ಸೈಕಲ್ ಮೇಲೆ ಬರುತ್ತಿರುವಾಗ ಭಂಕೂರು ಕ್ರಾಸ್ ಹತ್ತಿರ ಶಹಾಬಾದ ಕಡೆಯಿಂದ ಬರುತ್ತಿದ್ದ ಗೂಡ್ಸ ವಾಹನದ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ತನ್ನ ಗಂಡ ನಡೆಸಸುತ್ತಿದ್ದ ಮೊಟಾರು ಸೈಕಲ್ ಅಪಘಾತಪಡಿಸಿದ್ದರಿಂಧ ತನ್ನ ಗಂಡನಿಗೆ ತೆಲೆಗೆ ಮತ್ತು ಕಾಲಿಗೆ ಭಾರಿ ಗಾಯವಾಗಿದ್ದು ಸದರಿ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ತನ್ನ ಗಂಡನಿಗೆ ಅಪಘಾತಪಡಿಸಿದ ಗೂಡ್ಸ ಚಾಲಕನವಿರುದ್ದ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: