POLICE BHAVAN KALABURAGI

POLICE BHAVAN KALABURAGI

04 April 2017

Kalaburagi District Reported Crimes

ಕರ್ತವ್ಯಕ್ಕೆ ಅಡೆ ತಡೆ ಮಾಡಿ ಲಾಂನಿಂದ ಹಲ್ಲೆ ಮಾಡಿದ ರೌಡಿಯ ಮೇಲೆ ಆತ್ಮ ರಕ್ಷಣೆಗೋಸ್ಕರ ಗುಂಡು ಹಾರಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಕಲಬುರಗಿ ಚೌಕ ಪೊಲೀಸ ಠಾಣೆ  ಪ್ರಕರಣದ ಆರೋಪಿತರಾದ 1)ರಘು ತಂದೆ ಭವಾನಿ ಕಲ್ಲಕೇರಿ ವ:22 ವರ್ಷ ಸಾ: ಕೊಟ್ಟರಗಾ  ಗ್ರಾಮ ತಾ:ಆಳಂದ 2)ಶಿವರಾಜ ತಂದೆ ಚಂದ್ರಕಾಂತ ಕಡಬರ ವ:20 ವರ್ಷ ಸಾ: ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ 3)ಮಲ್ಲಿಕಾಜರ್ುನ @ ಕರಿಚಿರತೆ ತಂದೆ ಶಿವಾನಂದ ವಿಶ್ವಕರ್ಮ ವ:21ವರ್ಷ ಸಾ:ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ 4)ವಿಕ್ರಮ ತಂದೆ ಬಸವರಾಜ ಮೂಲಿಮನಿ ವ:23 ವರ್ಷ ಸಾ: ಮಾಲಗತ್ತಿ ಗ್ರಾಮ ತಾ:ಚಿತ್ತಾಪೂರ ಇವರನ್ನು ದಸ್ತಗಿರಿ ಮಾಡಿದ್ದು. ಅವರನ್ನು ವಿಚಾರಣೆ  ಮಾಡಲು ದಿನಾಂಕ 02-04-2017 ರಂದು ರಾತ್ರಿ ಶ್ರೀ ಕಪಿಲದೇವ ಪಿ.ಐ. ರವರ ತನಿಖಾ ತಂಡದ ಸದಸ್ಯರಾಗಿ ನನ್ನನ್ನು ಮತ್ತು ಸಿಬ್ಬಂದಿಯವರನ್ನು ನೇಮಕ ಮಾಡಿದ್ದು ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ಬರಲು ತಿಳಿಸಿದ್ದಕ್ಕೆ ನಾನು  ಮತ್ತು ಸಿಬ್ಬಂದಿಯವರು  ಪಿ.ಐ. ರವರ ಕಡೆಗೆ ಹೋಗಿದ್ದು, ಅಲ್ಲಿ ಪಿ.ಐ. ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಹಾಜರಿದ್ದುಆಗ ಪಿ.ಐ. ಸಾಹೇಬರು  ತಮ್ಮ ಹತ್ತಿರವಿದ್ದ ಈ ಮೇಲಿನ ಪ್ರಕರಣದಲ್ಲಿ 04 ಜನ ಆರೋಪಿತರನ್ನು ವಿಚಾರಣೆ ಮಾಡೋಣಾ ಅಂತಾ ತಿಳಿಸಿದ್ದಕ್ಕೆ ಪಿ.ಐ. ಸಾಹೇಬರು ಮತ್ತು ನಾನು ಹಾಗೂ ಸಿಬ್ಬಂದಿ ಜನರು ಕುಲಕುಶವಾಗಿ ವಿಚಾರಣೆ ಮಾಡಲಾಗಿ ಈ ಮೇಲಿನ ಎಲ್ಲಾ ಆರೋಪಿತರು ತಿಳಿಸಿದ್ದೆನೆಂದೆರೆ, ಶ್ರೀಕಾಂತರಡ್ಡಿ ಮತ್ತು ಆತನ ತಮ್ಮ ಕೃಷ್ಣಾರಡ್ಡಿ ಇವರು ಸತೀಷ ಭಯ್ಯಾ ಇತನಿಗೆ ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಬಗ್ಗೆ ಸತೀಷನಿಗೆ ಗೊತ್ತಾಗಿದ್ದು, ಅದಕ್ಕಾಗಿ ಶ್ರೀಕಾಂತರಡ್ಡಿ ಇತನಿಗೆ ಕೊಲೆ ಮಾಡುವಂತೆ ಸತೀಷನು ನಮಗೆಲ್ಲಾ ಮತ್ತು ಅಲ್ಲದೇ ನಾಗರಾಜ @ ಸ್ಮಾರ್ಟ ನಾಗಾ, ಅವಿನಾಶ, ಅಶಿತೋಷ @ ಅಷ್ಯು, ಸಂದೀಪ, ಕೊಡ್ಲಿ ರಾಜಾ, ಉತ್ತಪ್ಪ ಚನ್ನವೀರ ನಗರ, ಕುಂಡಾ @ ಪುಂಡಾ ಮಾಲಗತ್ತಿ, ಮತ್ತು ಆತನ ಇತರ ಸಹಚರರಿಗೆ ತಿಳಿಸಿದ್ದರಿಂದ ಆತನನ್ನು ಕೊಲೆ ಮಾಡುವ ನಿರ್ಧಾರ ಮಾಡಿ ಸ್ಕೆಚ ಹಾಕಿ ದಿನಾಂಕ 23/03/2017 ರಂದು ಬೆಳಿಗ್ಗೆ 11-00 ರಿಂದ  11-15 ಗಂಟೆ ಸುಮಾರಿಗೆ ಶ್ರೀಕಾಂತರಡ್ಡಿ ಜಿಮ್ಮನಿಂದ ಹೊರೆಗೆ ಬಂದಾಗ ಆತನ ಮೇಲೆ ನಾವೆಲ್ಲರೂ ತಲವಾರ, ಮಚ್ಚು, ಲಾಂಗ, ಬಡಿಗೆಗಳಿಂದ ಮರಣಾಂತಿಕ ಹಲ್ಲೆ ಮಾಡಿ ಓಡಿ ಹೋಗಿರುತ್ತೇವೆ ಅಂತಾ ತಿಳಿಸಿರುತ್ತಾರೆ. ಈ ಮೇಲಿನ ಸತೀಷನ ಸಹಚರರ ಮೇಲೆ ಕಲಬುರಗಿ ಜಿಲ್ಲೆ ಮತ್ತು ಇತರೇ ಕಡೆಗಳಲ್ಲಿ ಸುಮಾರು ಕೊಲೆ, ಸುಲಿಗೆ, ದರೋಡೆ, ಇತ್ಯಾದಿ ಪ್ರಕರಣಗಳು ದಾಖಲಾಗಿರುತ್ತೇವೆ.  ಈ ಕೇಸಿನ ತನಿಖಾಧಿಕಾರಿ ಆದ ಪೊಲೀಸ್ ಇನ್ಸಪೇಕ್ಟರ ಕಪೀಲದೇವ ಹಾಗೂ ನಾನು ಆರೋಪಿ ವಿಕ್ರಮನನ್ನು ಕುಲಂಕೂಶವಾಗಿ ವಿಚಾರಣೆಗೆ ಒಳಪಡಿಸಿದಾಗ ಅವನಿಂದ ತಿಳಿದು ಬಂದಿದ್ದೇನೆಂದರೆ, ಈ ಪ್ರಕರಣ ಮಾಡುವಕ್ಕಿಂತ ಮುಂಚಿತವಾಗಿ ಕೊಲೆಗೆ ಯತ್ನ, ದರೋಡೆಗೆ ಯತ್ನ, ಅತ್ಯಾಚಾರ, ಪೊಲೀಸ ವಶದಿಂದ ತಪ್ಪಿಸಿಕೊಂಡು ಹೋದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಆರೋಪಿ ವಿಕ್ರಮ ಈತನು ಮೈಸೂರ ಜೇಲಿನಲ್ಲಿರುವ ಕುಖ್ಯಾತ ರೌಡಿ ಮಾರ್ಕೆಟ  ಸತೀಷನ ಬಲಗೈ ಭಂಟ ಹಾಗೂ ಪ್ರಬಲ ಸಹಚರರ ಸದಸ್ಯನಾಗಿರುತ್ತಾನೆ. ಸತೀಷನು ಮೈಸೂಸು ಜೇಲಿನಿಂದ ಕಳುಹಿಸುವ ಸಂದೇಶದ ಮೇರೆಗೆ ಸತೀಷ ಅಕ್ರಮ ದಂಧೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಅವನ ನಿರ್ದೇಶನದಂತೆ ನೋಡಿಕೊಂಡು ಬರುವುದು ಮತ್ತು ಜನರಿಗೆ ಹೆದರಿಸಿ, ಬೆದರಿಸಿ ಹಣವನ್ನು ಕಿತ್ತುಕೊಳ್ಳುವುದು, ಮೀಟರ್ ಬಡ್ಡಿ ದಂಧೆ, ಅಕ್ರಮ ಭೂ ವ್ಯವಹಾರ, ಮಟಕಾ ಮತ್ತು ಜೂಜಾಟ, ಹಾಗೂ ಇತರೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ದಿನಾಂಕ 03/04/2017 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರು ರಾದ ಸಿ.ಹೆಚ.ಸಿ. 224 ಹುಸೇನಬಾಷಾ, ಸಿಪಿಸಿ 1211 ಕೇಶುರಾಯ ಕೂಡಿಕೊಂಡು ಕಲಬುರಗಿ ಜಿಲ್ಲಾ ಪೊಲೀಸ ಕಾರ್ಯಾಲಯದ  ಡಿ.ಸಿ.ಬಿ. ಘಟಕದಲ್ಲಿ ಇದ್ದಾಗ ಅಲ್ಲಿ ಶ್ರೀ ಕಪಿಲದೇವ ಪಿ.ಐ. ಡಿ.ಸಿ.ಬಿ. ಘಟಕ ಮತ್ತು ಅವರ ಸಿಬ್ಬಂದಿಯವರಾದ ಶ್ರೀ ಶಿವಪ್ಪ ಕಮಾಂಡೋ ಎ.ಎಸ್.ಐ., ಹೆಚ.ಸಿ.222 ಅಂಬಾದಾಸ ಇವರು ಹಾಜರಿದ್ದರು. ಅಷ್ಟೊತ್ತಿಗೆ ನಮ್ಮ ಕಲಬುರಗಿ ಗ್ರಾಮಾಂತರ ಉಪವಿಭಾಗದ ಡಿ.ಎಸ್.ಪಿ.ಸಾಹೇಬರಾದ ಶ್ರೀ ಎಸ್.ಎಸ್. ಹುಲ್ಲೂರ ಮತ್ತು ಹೆಚ.ಸಿ. 482 ಆನಂದ, ಪಿ.ಸಿ. 527 ಅಶೋಕ ಇವರೆಲ್ಲರೂ ಬಂದಿದ್ದು. ಆಗ ಡಿ.ಸಿ.ಬಿ. ಪಿ.ಐ. ರವರು ಈ ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರಾದ 1)ರಘು ತಂದೆ ಭವಾನಿ ಕಲ್ಲಕೇರಿ ವ:22 ವರ್ಷ ಸಾ: ಕೊಟ್ಟರಗಾ  ಗ್ರಾಮ ತಾ:ಆಳಂದ ಇತನನ್ನು ಸಿಪಿಐ ಗ್ರಾಮೀಣ ಮತ್ತು ಟೀಮ  2) ಆರೋಪಿ ಶಿವರಾಜ ತಂದೆ ಚಂದ್ರಕಾಂತ ಕಡಬರ ವ:20 ವರ್ಷ ಸಾ: ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ ಆರೋಪಿ 3)ಮಲ್ಲಿಕಾರ್ಜುನ @ ಕರಿಚಿರತೆ ತಂದೆ ಶಿವಾನಂದ ವಿಶ್ವಕರ್ಮ ವ:21ವರ್ಷ ಸಾ:ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ ಸಿಪಿಐ ಎಂ.ಬಿ.ನಗರ ವೃತ್ತ ಕಲಬುರಗಿ ರವರ ಟೀಮಗೆ ಆರೋಪಿತರು ಕೃತ್ಯಕ್ಕೆ ಉಪಯೋಗಿಸುವ ಆಯುಧಗಳನ್ನು ಜಪ್ತ ಪಡಿಸಿಕೊಂಡು ತನಿಖೆ ಕೈ ಕೊಂಡು ಮರಳಿ ತಮಗೆ ಒಪ್ಪಿಸುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದು ತದನಂತರ ಆರೋಪಿ ವಿಕ್ರಮ ತಂದೆ ಬಸವರಾಜ ಮೂಲಿಮನಿ ವ:23 ವರ್ಷ ಸಾ: ಮಾಲಗತ್ತಿ ಗ್ರಾಮ ತಾ:ಚಿತ್ತಾಪೂರ ಇತನು  ಹಲವಾರು ಪ್ರಕಣಗಳಲ್ಲಿ ಭಾಗಿಯಾಗಿರುವದರಿಂದ ಈ ಮೊದಲು ಪೊಲೀಸರ ವಶದಿಂದ ತಪ್ಪಿಸಿಕೊಂಡು ಹೋಗಿದ್ದರ ಪ್ರಯುಕ್ತ ಮತ್ತು ಇನ್ನೂ ಮುಂದೆ ಕೂಡಾ ಓಡಿ ಹೋಗುವ ಸಾಧ್ಯತೆ ಇರುವುದರಿಂದ ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನು ಕೆಲವಷ್ಟು ಆರೋಪಿತರು ಆ ಸ್ಥಳದಲ್ಲಿ ಅಡಗಿಕೊಂಡಿರುತ್ತಾರೆಂಬ ಮಾಹಿತಿ ಮೇರೆಗೆ ಮತ್ತು ಅವರ ವಿರುದ್ಧ ಈ ಮೇಲಿನಂತೆ ಘೋರ ಸ್ವರೂಪ ಪ್ರಕರಣದಲ್ಲಿ ಆರೋಪಿತರಾಗಿರುವುದರಿಂದ ನಾವು ಪ್ರಬಲವಾದ ಮತ್ತು ಸುಸಜ್ಜಿತವಾದ ಒಂದು ತಂಡವನ್ನು ರಚಿಸಿಕೊಂಡು ಇತನಿಂದ ಕೃತ್ಯ ಉಪಯೋಗಿಸಿರುವ ಲಾಂಗನ್ನು ಕೆರಿಭೋಸಗಾ ಕ್ರಾಸ ಹತ್ತಿರ ಇರುವ ಹಾಳು ಬಿದ್ದ ಮನೆಯ ಹತ್ತಿರ ಆರೋಪಿತರು ಅಡಗಿಕೊಂಡಿರುವ ಸ್ಥಳವನ್ನು ಮತ್ತು ಕೃತ್ಯಕ್ಕೆ ಬಳಸಿದ ಲಾಂಗನ್ನು ಮುಚ್ಚಿಟ್ಟಿರುವುದನ್ನು ನನ್ನ ಜೊತೆ ಬಂದರೆ ತೋರಿಸಿ ಹಾಜರಪಡಿಸುತ್ತೇನೆಂದು ಹೇಳಿಕೆಯ ಮೇರೆಗೆ ನಾನು ಮತ್ತು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಕಲಬುರಗಿ ಹಾಗೂ ಶ್ರೀ ಕಪಿಲದೇವ ಪಿ.ಐ. ಡಿಸಿಬಿ ಘಟಕ ಮತ್ತು ಅವರ ಡಿ.ಸಿ.ಬಿ. ಘಟಕ ಸಿಬ್ಬಂದಿಯವರಾದ ಶ್ರೀ ಶಿವಪ್ಪ ಕಮಾಂಡೋ ಎ.ಎಸ್.ಐ. ಶ್ರೀ ಅಂಬಾದಾಸ ಸಿಹೆಚಸಿ 222, ತಾವು ಸಿಬ್ಬಂದಿ ಜನರಾದ ಹೆಚ.ಸಿ.224 ಹುಸೇನಬಾಷಾ, ಆನಂದ ಹೆಚ.ಸಿ.482 ಸಿಪಿಸಿ 1211 ಕೇಸುರಾಯ ಸಿಪಿಸಿ 527 ಅಶೋಕ ರವರೊಂದಿಗೆ ಹೋಗಿ ಬರೋಣಾ ಅಂತಾ ತಿಳಿಸಿ ನಮ್ಮ ಜೀಪುನಲ್ಲಿ ನಾನು ಮತ್ತು ಸಿಬ್ಬಂದಿಯವರು ಕುಳಿತುಕೊಂಡಿದ್ದು, ನಮ್ಮ ಜೀಪು ಹುಸೇನಬಾಷಾ ಹೆಚ.ಸಿ.224 ಹುಸೇನಬಾಷಾ ಇವರು ಚಾಲನೆ ಮಾಡುತ್ತಿದ್ದರು. ಶ್ರೀ ಕಪಿಲದೇವ ಪಿ.ಐ. ರವರ ಜೀಪಿನಲ್ಲಿ ಆರೋಪಿ ವಿಕ್ರಮನೊಂದಿಗೆ ಶ್ರೀ ಶಿವಪ್ಪ ಕಮಾಂಡೋ ಎ.ಎಸ್.ಐ. ಹೆಚ.ಸಿ.222 ಅಂಬಾದಾಸ, ಇಬ್ಬರು ಪಂಚರನ್ನು ಕುಡಿಸಿಕೊಂಡು ಮಾನ್ಯ ಡಿ.ಎಸ್.ಪಿ. ಸಾಹೇಬ ಕಲಬುರಗಿ ರವರ ಜೀಪಿನಲ್ಲಿ ಆನಂದ ಹೆಚಸಿ.482  ಸಿಪಿಸಿ 527 ಅಶೋಕ ಇವರು ಕುಳಿತುಕೊಂಡರು. ಇಂದು ಬೆಳಿಗ್ಗೆ 06-30 ಗಂಟೆಗೆ ಬಿಟ್ಟು ಆರೋಪಿ ವಿಕ್ರಮ ಮೂಲಿಮನಿ ಇತನು ಹೇಳಿದ ಪ್ರಕಾರ ಕಲಬುರಗಿ ರಿಂಗ ರೋಡ ಮುಖಾಂತರವಾಗಿ ಮುಂದೆ ಆಳಂದ ರೋಡಿಗೆ ಹೊರಟು ಕೆರಿಭೋಸಗಾ ಕ್ರಾಸಿನ ಹತ್ತಿರ ಇರುವ  ಹಾಳು ಬಿದ್ದ ಮನೆಯ ಹತ್ತಿರ ಹೋಗುತ್ತಿದ್ದಂತೆ ಆರೋಪಿ ವಿಕ್ರಮ ಇತನು  ಕೈ ಮಾಡಿ ಒಂದು ಹಾಳು ಬಿದ್ದ ಮನೆಯ ಕಡೆ ತೋರಿಸಿದ್ದಕ್ಕೆ ಎಲ್ಲರೂ ಜೀಪುಗಳನ್ನು ನಿಲ್ಲಿಸಿದಾಗ ಎಲ್ಲರೂ ಜೀಪಿನಿಂದ ಇಳಿದಾಗ ಆರೋಪಿತನು ಮುಂದೆ ಹೋಗುವಾಗ ಆತನ ಹಿಂದೆ ನಾವೆಲ್ಲರೂ ಮತ್ತು ಪಂಚರು ಹೋಗುತ್ತಿದ್ದಾಗ ಅಲ್ಲೇ ಇರುವ ಒಂದು ಹಾಳು ಬಿದ್ದ ಮನೆಯ ಹತ್ತಿರ  ಕರೆದುಕೊಂಡು ಹೋಗಿ ಲಾಂಗ ಇಟ್ಟ ಸ್ಥಳ ಇದೇ ಸ್ಥಳದಲ್ಲಿ ಇರುತ್ತದೆ ಎಂದು ಹೇಳಿ ಬೆಳಿಗ್ಗೆ 07-10 ಗಂಟೆಯ ಸಮಯಕ್ಕೆ  ಆರೋಪಿ ವಿಕ್ರಮ ಇತನು ಲಾಂಗ ತೆಗೆದಂತೆ ನಟನೆ ಮಾಡಿ ಒಮ್ಮೇಲೆ ಲಾಂಗ ತೆಗೆದವನೇ ಮುಂಭಾಗದಲ್ಲಿ ಇರುವ ಅಂಬಾದಾಸ ಹೆಚ.ಸಿ. ಇತನಿಗೆ ಲಾಂಗನಿಂದ ಕುತ್ತಿಗಿಗೆ ಹೊಡೆಯಲು ಲಾಂಗ ಬೀಸಿದಾಗ ಅಂಬಾದಾಸನು ತಪ್ಪಿಸಿಕೊಂಡಾಗ ಆ ಏಟು ಕುತ್ತಿಗೆಯ ಬದಲು ಅವನ ಎಡ ರಟ್ಟೆಯ ಮೇಲೆ ಬಿದ್ದು ಭಾರಿ ರಕ್ತಗಾಯಪಡಿಸಿ ಓಡಿ ಹೋಗುತ್ತಿದ್ದಾಗ ಆಗ ನಾನು ಮತ್ತು ಪಿ.ಐ. ಸಾಹೇಬರು ಇಬ್ಬರು ಆತನಿಗೆ  ಏ ವಿಕ್ರಮ ನಿಲ್ಲು ಓಡಿ ಹೋಗಬೇಡಾ ಅಂತಾ ಎಚ್ಚರಿಕೆ ನೀಡಿ ಈ ರೀತಿಯಾಗಿ ಕಾನೂನಿನ ವಿರುದ್ಧ ನಡೆದುಕೊಳ್ಳಬೇಡಾ ಎಂದು ಪದೇ, ಪದೇ ತಿಳಿಸಿದರೂ ಕೂಡಾ ಅವನು ತನ್ನ ಕೈಯಲ್ಲಿದ್ದ ಲಾಂಗನ್ನು ನಮ್ಮ ಪೊಲೀಸರ ಮೇಲೆ ಮತ್ತೆ ಬೀಸುತ್ತಿದ್ದಾಗ ಆಗ ನಾನು ಮತ್ತು ಜೊತೆಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ಅವನಿಗೆ ನಿನ್ನ ಮೇಲೆ ಫೈಯರ ಮಾಡಬೇಕಾಗುತ್ತದೆ ಅಂತಾ ಹೇಳಿ ನನ್ನ ಸವರ್ಿಸ ಪಿಸ್ತೂಲನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದೆನು. ಆಗ ಶ್ರೀ ಕಪಿಲದೇವ ಪಿ.ಐ. ರವರು ಕೂಡಾ ಎ ವಿಕ್ರಮ ಓಡಿ ಹೋಗಬೇಡಾ ಅಂದಾಗ ಅವರ ಮಾತು ಕೇಳದೇ ಅದೇ ಲಾಂಗನಿಂದ ನಮ್ಮ ಪೊಲೀಸ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಮೇಲಿಂದ ಮೇಲೆ ಲಾಂಗ ಬೀಸುತ್ತಾ ಅಲ್ಲೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನಮ್ಮ ಕಡೆಗೆ ಬೀಸಾಡಿದ್ದು, ಅದನ್ನು ನಾನು ಮತ್ತು ಸಿಬ್ಬಂದಿಯವರು ತಪ್ಪಿಸಿಕೊಂಡಾಗ ನಮ್ಮ ಠಾಣೆಯ ಜೀಪಿನ ಮುಂದಿನ ಗ್ಲಾಸು ಒಡೆದು ಜಖಂಗೊಳಿಸಿ ನಮ್ಮ ಕಡೆಗೆ ಲಾಂಗನ್ನು ಬೀಸುತ್ತಾ ಓಡಲು ಪ್ರಾರಂಭಿಸಿದಾಗ ಆಗ ಪಿ.ಐ. ಸಾಹೇಬರು ತಮ್ಮ ಮತ್ತು ಜೊತೆಗಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯವರ ಪ್ರಾಣ ರಕ್ಷಣೆ ಮಾಡುವ ಉದ್ದೇಶ ಮತ್ತು ಸ್ಥಳದಲ್ಲಿದ್ದ ಇತರೇ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಅನಿವಾರ್ಯವಾಗಿ  ತಮ್ಮ ಹತ್ತಿರವಿದ್ದ ಸರ್ವಿಸ  ಪಿಸ್ತೂಲನಿಂದ ಒಂದು ಗುಂಡು ವಿಕ್ರಮನ ಕಡೆ ಹಾರಿಸಿದಾಗ  ಆತನ ಬಲ ಮೊಳಕಾಲಿನ ಹಿಂಭಾಗದಲ್ಲಿ ಗುಂಡು ತಗುಲಿ ರಕ್ತಗಾಯವಾಗಿದ್ದು. ಆಗ ವಿಕ್ರಮ ಮೂಲಿಮನಿ ಇತನು ಅಲ್ಲೇ ಕುಸಿದು ಬಿದ್ದನು. ಅತನನ್ನು ಹಿಡಿದು ಆತನ ಕಾಲಿಗೆ ಆದ ಗಾಯದ ಉಪಚಾರ ಕುರಿತು ಪಿ.ಐ. ಕಪಿಲದೇವ ರವರ ಜೀಪನಲ್ಲಿ ಹಾಕಿಕೊಂಡರು. ಮಾನ್ಯ ಡಿ.ಎಸ್.ಪಿ. ಸಾಹೇಬರು ತಮ್ಮ ಜೀಪಿನಲ್ಲಿ  ಗಾಯಗೊಂಡ ಅಂಬಾದಾಸ ಹೆಚ.ಸಿ.222 ಇವರನ್ನು ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು. ಪಿ.ಐ. ಕಪಿಲದೇವ ಆರೋಪಿ ವಿಕ್ರಮನಿಗೆ ಸರ್ಕಾರಿ  ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿರುತ್ತಾರೆ.  ಅಂತಾ ಶ್ರೀ ಚಂದ್ರಶೇಖರ ತಿಗಡಿ ಪಿ.ಎಸ್.ಐ.  ಗ್ರಾಮೀಣ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬಿಡಿಸಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ದೇವಿಂದ್ರ ಸಜ್ಜನ ಮುಖ್ಯ ಅಧೀಕ್ಷಕರು QQ961 (HM ಆದರ್ಶ ವಿದ್ಯಾಲಯ ಭೀಮಳ್ಳಿ ತಾ:ಜಿ: ಕಲಬುರಗಿ ದಕ್ಷ್ಮೀಣ ವಲಯ ಕಲಬುರಗಿ) ಇವರು 2017 ಮಾರ್ಚ/ಎಪ್ರೀಲ್ನಲ್ಲಿ ಜರುಗಿರುವ 10 ನೇ ತರಗತಿ ಪರೀಕ್ಷೆಯ ಪರೀಕ್ಷಾ ಕೇಂದ್ರ ಸಂಖ್ಯೆ  QQ961 ನೇದ್ದರಲ್ಲಿ ಕೋಣೆ ಸಂಖ್ಯೆ.08 ರಲ್ಲಿ ಇಂದು ದಿನಾಂಕ:03/04/2017 ರಂದು ಗಣಿತ ವಿಷಯದ ಪರೀಕ್ಷೆಯಲ್ಲಿ ಕೆಳಗಿನ ಅಭ್ಯರ್ಥಿ 1)ಲಕ್ಷ್ಮೀಕಾಂತ ತಂದೆ ಶ್ರೀಮಂತ .ಪ್ರೌ ಶಾಲೆ ಆಳಂದ ಶಾಲೆಯಲ್ಲಿ ಖಾಸಗಿ ಅಭ್ಯರ್ಥಿ ನೊಂದಣಿ ಸಂಖ್ಯೆ 20170874375 ಹಾಗೂ 2)ಮಹೇಬೂಬ ತಂದೆ ಖಾಜಾಸಾಬ ಚೌದರಿ ನೊಂದಣಿ ಸಂಖ್ಯೆ 20170874391 .ಪ್ರೌ.ಶಾಲೆ ಬಂದರವಾಡಾ ತಾ:ಅಫಜಲಪೂರ ಖಾಸಗಿ ಅಭ್ಯರ್ಥಿಗಳಾಗಿ ಪ್ರವೇಶ ಪಡೆದಿರುತ್ತಾರೆ. ಇಂದು ದಿನಾಂಕ:03/04/2017 ರಂದು ಬೆಳಗ್ಗೆ 9.45 ಸಮಯದಲ್ಲಿ ಕೇಂದ್ರದ ವೀಕ್ಷಕರು ಮತ್ತು ಕೋಣೆಯ ಮೇಲ್ವಿಚಾರಕರು ಅಭ್ಯರ್ಥಿಗಳ ಭಾವ ಚಿತ್ರಗಳನ್ನು ಮತ್ತು ಮಾದರಿ ಸಹಿಗಳನ್ನು ಪರಿಶೀಲಿಸುವ ಸಮಯದಲ್ಲಿ ಅಭ್ಯರ್ಥಿಗಳ ಮಾದರಿ ರುಜುಗಳನ್ನು ತಾಳೆ ನೋಡಿದಾಗ ವ್ಯತ್ಯಾಸ ಇರುವದು ಕಂಡು ಬಂದಿರುತ್ತದೆ. ಕುರಿತು ನನ್ನ ಗಮನಕ್ಕೆ ತಂದಾಗ ನಾನು ಕೂಡಾ ಇನ್ನೊಮ್ಮೆ ಪರಿಶೀಲನೆ ಮಾಡಿದ್ದೇನೆ. ಮೇಲೆ ನಮೂದಿಸಿದ ವಿದ್ಯಾರ್ಥಿಗಳ ಬದಲಾಗಿ ಬೇರೆ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿರುವದು ಕಂಡು ಬಂದಿತು. ಇಬ್ಬರು ಅಭ್ಯರ್ಥಿಗಳನ್ನು ಪರೀಕ್ಷೆ ಕಛೇರಿಯಲ್ಲಿ ಕೂಡಿಸಿ ಲಿಖಿತ ಹೇಳಿಕೆಗಳನ್ನು ಪಡೆಯಲು ಸೂಚಿಸಲಾಯಿತು. ಲಿಖಿತ ಹೇಳಿಕೆಗಳನ್ನು ಪಡೆಯುವ ಸಂದರ್ಭದಲ್ಲಿ ಸದರಿ ಅಭ್ಯರ್ಥಿಗಳು ಕೇಂದ್ರದಿಂದ ಹೊರಗಡೆ ಹೋದರು. ಅಷ್ಟೋತ್ತಿಗೆ ಪೊಲೀಸರನ್ನು ಕೂಗುವಷ್ಟರಲ್ಲಿ ಅಭ್ಯರ್ಥಿಗಳು ಹೊರಗೆ ಹೋದರು. ಪರೀಕ್ಷೆ ಕೇಂದ್ರಕ್ಕೆ ಸಂದರ್ಶನ ನೀಡಿದ ಜಿಲ್ಲಾ ಮಟ್ಟದಿಂದ ನೇಮಕವಾದ ವೀಕ್ಷಕರು ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ತಹಸೀಲ್ದಾರರಾದ ಪ್ರಕಾಶ ಚಿಂಚೋಳಿರವರು ಸದರಿ ಅಭ್ಯರ್ಥಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದರ ಮೇರೆಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ  ಮುತ್ತುರಾಜ ತಂದೆ ಸಿದ್ದಣ್ಣ ದೊಡ್ಮನಿ ಸಾ|| ದೇಸುಣಗಿ ಇವರು ಸಿದ್ದಯ್ಯ ತಂದೆ ರಾಚಯ್ಯ ಹಿರೇಮಠ ಇವರದು ರಂಜಣಗಿ ಸಿಮಾಂತರ ಸರ್ವೇ ನಂ. 143 ವಿಸ್ತಿರ್ಣ 30 ಎಕರೆ ಜಮೀನು ಇದ್ದು ಈ  ಜಮೀನಿನಲ್ಲಿ ನಾನು 6 ಎಕರೆ ಜಮೀನು ಸುಮಾರು 7-8 ವರ್ಷಗಳಿಂದ ಪಾಲಿನಿಂದ ಮಾಡುತ್ತಾ ಬಂದಿರುತ್ತೇನೆ, ನನ್ನಂತೆ ನಮ್ಮೂರ ಸುಭಾಷ ಬಿರೆದಾರ ಇವರು 12 ಎಕರೆ ಜಮೀನು, ರಮೇಶ ಬಿರೆದಾರ ಇವರು 12 ಎಕರೆ ಜಮೀನು ಪಾಲಿನಿಂದ ಮಾಡಿದ್ದು ಇರುತ್ತದೆ. ನಾವು ಪಾಲಿನಿಂದ ಮಾಡಿದ ಹೊಲದಲ್ಲಿ ಕ್ಯಾನಲ್ ಹಾಯ್ದು ಹೋಗಿರುತ್ತದೆ. ದಿನಾಂಕ: 31-03-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಪಾಲಿನಿಂಧ ಮಾಡಿದ ರಂಜಣಗಿ ಸಿಮಾಂತರದ ನಮ್ಮೂರ ಸಿದ್ದಯ್ಯಸ್ವಾಮಿ ಇವರ ಹೊಲದಲ್ಲಿ ನೀರು ಬಿಡಲು ಕ್ಯಾನಲ್ ಹತ್ತಿರ ಹೋಗುತ್ತಿರುವಾಗ ಅದೆ ಹೊತ್ತಿಗೆ ರಂಜಣಗಿ ಗ್ರಾಮ ರುಕುಂಪಟೇಲ್ ತಂದೆ ಅಮೀರಪಟೇಲ ಹೊಸ್ಮನಿ, ರಫೀಕ ತಂದೆ ಅಮೀರಪಟೇಲ ಹೊಸ್ಮನಿ, ಅಮೀರಪಟೇಲ ತಂದೆ ರುಕುಂಪಟೇಲ ಹೊಸ್ಮನಿ ಎಲ್ಲರೂ ಕೂಡಿ ನನಗೆ ತಡೆದು ನಿಲ್ಲಿಸಿ ಏ ಹೊಲ್ಯಾ ಸೂಳೆ ಮಗನೆ ಕ್ಯಾನಲ್ ನೀರ ದಿನಾಲು ನಿವೆ ತಗೊಂಡ್ರ ತಳಗಿನ ಹೊಲದವರು ನಾವೆನು ಮಾಡಮು ಅಂತಾ ಬೈದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ನೆಲಕ್ಕೆ ಹಾಕಿ ಚಪ್ಪಲಿಯಿಂದ ನನ್ನ ಮೈಕೈಗೆ ಹೊಡೆದನು ಆಗ ಅಲ್ಲೆ ಹೊಲದಲ್ಲಿ ನೀರು ಬಿಡುತ್ತಿದ ನಮ್ಮೂರ ಸುಭಾಷ ಬಿರೆದಾರ, ರಮೇಶ ಬಿರೆದಾರ ಇವರು ಬಿಡಿಸಲು ಬಂದರೆ ಅವರಿಗೆ ರಫೀಕಪಟೇಲ ಇವನು ಕೈಯಿಂದ ಅವನ ಎಡಗಣ್ಣಿಗೆ ಹೊಡೆದು, ಕೊಡಲಿ ಕಾವಿನಿಂದ ಸುಭಾಷನ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ರಮೇಶ ಬಿಡಿಸಲು ಬಂದರೆ ಅವನಿಗೆ ಅಮೀರಪಟೇಲ ಇವನು ನೂಕಿ ಕೊಟ್ಟಿದ್ದು ಇರುತ್ತದೆ.ರುಕುಂಪಟೇಲ ಇವನು ಏ ಹೊಲ್ಯಾ ಸೂಳೆ ಮಗನ್ಯಾ ಹೊಲ ಪಾಲಿಗೆ ಮಾಡಿ ನಮ್ಮ ಹೊಲಕ್ಕೆ ನೀರ ಬಿಡಲ್ಲಾ ಆಂತಿರಾ ರಂಡಿ ಮಗನೆ ನಮಗೆ ಕ್ಯಾನಲ್ ನೀರು ಬಿಡದಿದ್ದರೆ ನಿಮಗೆ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 01/04/2017 ರಂದು ರಾತ್ರಿ ನನ್ನ ಹೆಂಡತಿಯ ತಮ್ಮನಾದ ಸಚೀನ ತಂದೆ ತುಕಾರಾಮ ಭೋಗಲೆ ಸಾ||ಸಲಗರ ತಾ||ಅಕ್ಕಲಕೋಟ ಎಂಬಾತನು ಕರಜಗಿ ಅಫಜಲಪೂರ ರೋಡಿಗೆ ಶಿರವಾಳ ಗ್ರಾಮದ ಹತ್ತಿರ  ತಾನು ನಡೆಸುತಿದ್ದ ಮೋಟಾರ ಸೈಕಲ್ ನಂ ಕೆಎ-32 ಇಜೆ-6459 ನೇದ್ದರ ಸಮೇತ ಬಿದ್ದಿದ್ದರಿಂದ ಸದರಿಯವನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತದೆ ಅಂತ ನಮ್ಮೂರಿನ ಚಿದಾನಂದ ತಂದೆ ತಾತಪ್ಪ ಸಲಗರ ಎಂಬಾತನು ನನಗೆ ಪೋನ ಮೂಲಕ ತಿಳಿಸಿದ್ದರಿಂದ ನಾನು ಮತ್ತು ಗೌರಾಬಾಯಿ ಇಬ್ಬರು ನಮ್ಮೂರಿನಿಂದ ಬಂದು ಒಂದು ಖಾಸಗಿ ವಾಹನದಲ್ಲಿ ಸಚೀನನಿಗೆ ಹಾಕಿಕೊಂಡು ಅಫಜಲಪೂರದಲ್ಲಿರುವ ಟಕ್ಕಳಕಿ ರವರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ. ಸಚೀನನ ತಲೆಗೆ ಭಾರಿ ರಕ್ತ ಗಾಯವಾಗಿದ್ದರಿಂದ ಅವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ತಗೆದುಕೊಂಡು ಹೋಗು ಅಂತ ತಿಳಿಸಿದ್ದರಿಂದ ಅಂಬ್ಯೂಲೆನ್ಸ ವಾಹನದಲ್ಲಿ ತಗೆದುಕೊಂಡು ಹೋಗಿ ಕಲಬುರಗಿಯ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಸಚೀನನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 02/04/2017 ರಂದು ಸಾಯಂಕಾಲ ಗಂಗಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಖಾಜಪ್ಪ ತಂದೆ ಶಿವಗುಂಡಪ್ಪ ಆಲಮೇಲಕರ ಸಾ||ಗೌರ(ಬಿ) ತಾ||ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ 03-04-2017 ರಂದು ಬೆಳಿಗ್ಗೆ ಗೊಲ್ಲಾಳಪ್ಪ ಈತನು ಫ್ಯಾಕ್ಟ್ರೀ ಕೆಲಸಕ್ಕೆಂದು ತನ್ನ ಮೋಟರ ಸೈಕಲ್ ನಂ ಕೆ.ಎ-32/ಇ.ಹೆಚ್-1808 ನೇದ್ದು ತೆಗೆದುಕೊಂಡು ಹೋದನು, ಸ್ಲಲ್ಪ ಹೊತ್ತಾದನಂತರ ನಮ್ಮೂರ ನಾಗಯ್ಯ ತಂದೆ ಬಸಲಿಂಗಯ್ಯಾ ಸ್ಥಾವರಮಠ ಈತನು ನಮಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಿಮ್ಮ ಮಗನ ಮೋಟರ ಸೈಕಲ್ ಶರಣಯ್ಯ ಸ್ಥಾವರಮಠ ರವರ ಹೊಲದ ಹತ್ತಿರ ಅಪಘಾತವಾಗಿ ಬಿದ್ದಿದ್ದು, ನಿಮ್ಮ ಮಗ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ದೇವಕ್ಕಿ, ನನ್ನ ಮಗ ನಿಂಗಣ್ಣ ಮತ್ತು ನಮ್ಮ ಅಣ್ಣತಮ್ಮಕಿಯ ಸುರೇಶ ತಂದೆ ಬಸಣ್ಣ ಕೋಟ್ಯಾಳ ಹಿಗೆಲ್ಲರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗನ ಬಲಗಡೆ ಮೆಲಕಿನ ಹತ್ತಿರ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದನು, ನನ್ನ ಮಗ ಗೊಲ್ಲಾಳಪ್ಪ ಈತನು ಫ್ಯಾಕ್ಟ್ರೀ ಕೆಲಸಕ್ಕೆ ಹೋಗುವಾಗ ಅಂದಾಜು 05;15 ಎ.ಎಂ ಸುಮಾರಿಗೆ ಶರಣಯ್ಯಸ್ವಾಮಿ ಸ್ಥಾವರಮಠ ರವರ ಹೊಲದ ಹತ್ತಿರ ನಿಸ್ಕಾಳಜಿತನದಿಂದ ಮತ್ತು ಅತಿವೇಗವಾಗಿ ತನ್ನ ಮೋಟರ ಸೈಕಲನ್ನು ನಡೆಸುತ್ತಾಹೋಗಿ ಎದುರುಗಡೆ ಹೋಗುತ್ತಿದ್ದ ನಾಗರಳ್ಳಿ ಗ್ರಾಮದ ಗೊಲ್ಲಾಳಪ್ಪ ತಂದೆ ನಾಗಪ್ಪ ಡಂಬಳ ರವರ ಎತ್ತಿನ ಗಾಡಿಗೆ ಹಿಂದಿನಿಂದ ಹಾಯಿಸಿದ್ದರಿಂದ ನನ್ನ ಮಗನ ಬಲಗಡೆ ಮೆಲಕಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ,  ಅಂತಾ ಶ್ರೀ ನೀಲಪ್ಪ ತಂದೆ ಚಂದ್ರಾಮಪ್ಪ ಅಮರಗೊಂಡ ಸಾ|| ಮಳ್ಳಿ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: