ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ :- ದಿನಾಂಕ 20-4-2017 ರಂದು ಶ್ರೀ ಪರೀನ ಸುಲ್ತಾನಖತೀಬ ಗಂಡ ನಿಯಾಜೊದ್ದಿನ ಸಾ:ಯಾದುಲ್ಲಾ ಕಾಲೋನಿ
ಕಲಬುರಗಿ ಇವರು ಠಾಣೆಗೆ ಹಾಜರಾಗಿ 2ವರ್ಷದ ಹಿಂದೆ ನಿಯಾಜೊದ್ದಿನ ಇತನ್ನೊಂದಿಗೆ ತನ್ನ ಮದುವೆ ಆಗಿದ್ದು ಸದ್ಯ ಈಗ ಒಂದು ವರ್ಷ6 ತಿಂಗಳು
ಗಂಡು ಮಗು ಇದ್ದು ನನ್ನ ಗಂಡ ವಿನಾಃಕಾರಣ
ಹೊಡೆಯುವುದು ಬಡೆಯುವುದು ಹಾಗೂ ಕುಡಿದು ಜಗಳ
ತೆಗೆದು ಅವಾಚ್ಯ ಶಬ್ದಗಳಂದ ಬೈದು ಮಾಡುತ್ತಾ ನನ್ನ ಗಂಡ ತವರು ಮನೆಯಿಂದ 5ಲಕ್ಷ ರೂಪಾಯಿ ಹಣ
ಬಂಗಾರ ತೆಗೆದುಕೊಂಡು ಬಾ ಎಂದು ಹಿಂಸೆ ಮಾಡುತ್ತಿದ್ದಾನೆ. ನನ್ನ ಪತಿಯು ಕೊಡುವ ಕಿರುಕುಳ
ತಾಳಲಾರದೇ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದು ಇರುತ್ತದೆ. ದಿನಾಂಕ 6-4-2017 ರಂದು
ನನ್ನ ಗಂಡ ನನಗೆ ಬೆದರಿಸಿ ಹೊಡೆದು ಮಗುವನ್ನು ಅಪಹರಿಸಿಕೊಂಡು ಹೋಗಿರುತ್ತಾನೆ. ಅಲ್ಲದೆ ದಿನಾಂಕ
17-4-2017 ರಂದು ನನ್ನ ಗಂಡ ತನ್ನ ಇಬ್ಬರು ಅಣ್ಣಂದಿರಾದ
ರಿಯಾಜೊದ್ದೀನ ಶಹಬಾಜೊದ್ದೀನ, ಬಾಬರೋದ್ದೀನ, ಶಹನಾಜ , ಅಸ್ರಾ ಪರವೀನ ಮಿನಾಜೊದ್ದೀನ, ಸಿರಾಜೊದ್ದೀನ ತಾಜೋದ್ದೀನ ಹಾಗೂ ಇಮ್ತಿಯಾಜ ಸಿದ್ದಕಿ,ಕಲಮೊದ್ದೀನ
ಕತೀಬ ಹಾಗೂ ಇನ್ನೀತರ ಗುಂಡಾ ವ್ಯಕ್ತಿಗಳನ್ನು
ಕರೆದುಕೊಂಡು ಬಂದು ಧಮಕಿ ಹಾಕಿ ನನ್ನ ಹಾಗೂ ನನ್ನ
ತಾಯಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ನನಗೆ ವರದಕ್ಷಿಣೆ ತೆಗೆದುಕೋಂಡು ಬಾ ಎಂದು
ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ದಿನಾಂಕ:20/04/2017 ರಂದು ಶ್ರೀಮತಿ ಕಾಂಚನಾ ಗಂಡ ಗೌತಮ ಸಜ್ಜನ್ ಸಾ: ಮಮದಾಪೂರ (ಹೊಸಳ್ಳಿ) ತಾ:ಆಳಂದರವರು
ಠಾಣೆಗೆ ಹಾಜರಾಗಿ ತನ್ನ ಗಂಡ ಗೌತಮ ಇತನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು. ದಿನಾಂಕ 09/03/2017 ರಂದು ಖಾಸಗಿ ಕೆಲಸದ ನಿಮಿತ್ಯ ನನ್ನ ಗಂಡ ಗೌತಮ ಆಳಂದಕ್ಕೆ ಹೋಗಿ ಮರಳಿ ನಮ್ಮ
ಗ್ರಾಮಕ್ಕೆ ಬರುವ ಕುರಿತು ನಮ್ಮ ಗ್ರಾಮದ ಲಕ್ಷ್ಮಣ ತಂದೆ ಹಣಮಂತ ತಳಕೇರಿ ಇವರ ಟಾಟಾ ಮ್ಯಾಜಿಕ್
ವಾಹನ ನಂ:ಕೆ.ಎ-38 5572 ನೇದ್ದರ ಟಾಪಿನ ಮೇಲೆ ಕುಳಿತು ಬರುವಾಗ ಆಳಂದ– ತಡಕಲ ರಸ್ತೆಯ
ಕಸ ವಿಲೇವಾರಿ ಸ್ಥಳದ ಹತ್ತಿರ ರೋಡಿನ ಮೇಲೆ ಟಾಟಾ ಮ್ಯಾಜಿಕ ನೇದ್ದರ ಚಾಲಕ ಚಾಲಕ ಸೋಮನಾಥ ತಂದೆ
ಮಾಧವರಾವ ಪಾಟೀಲ ಸಾ:ಶಕಾಪೂರ ಅತಿವೇಗದಿಂದ ಮತ್ತು ಅಲಕ್ಷತನದಿಂದ ಓಡಿಸುತ್ತಾ ಒಮ್ಮೆಲೆ ಬ್ರೇಕ್
ಹಾಕಿದ್ದರಿಂದ ಟಾಪಿನ ಮೇಲೆ ಕುಳಿತ ನನ್ನ ಗಂಡ ಕೆಳಗಡೆ ಬಿದ್ದು ತಲೆಗೆ ಬಾರಿ ರಕ್ತಗಾಯವಾಗಿ
ಬಿದಿದ್ದಾಗ ಅದೇ ವಾಹನದ ಒಳಗಡೆ ಇದ್ದ ಆನಂದ ನಡಗೇರಿ ಮತ್ತು ಪುಂಡಲಿಕ ಕಲಾಲ ಇವರು ಆಳಂದ
ಆಸ್ಪತ್ರೆ ತಂದು ನಂತರ ಹೆಚ್ಚಿನ ಉಪಚಾರ ಕುರಿತು
ಸೋಲಾಪೂರದ ಸಿದ್ಧೇಶ್ವರ ಆಸ್ಪತ್ರೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಂತರ ದಿನಾಂಕ 11/03/2017 ರಂದು ಸರಕಾರಿ ಆಸ್ಪತ್ರೆ (ಸಿವಿಲ್ ) ಸೋಲಾಪೂರದಲ್ಲಿ ಸೇರಿಕೆ ಮಾಡಿದಾಗ ದಿನಾಂಕ 13/03/2017 ರಂದು ರಾತ್ರಿ 1:45 ಗಂಟೆಗೆ ರಸ್ತೆ ಅಪಘಾತದಲ್ಲಿ ಆದ
ಗಾಯದಿಂದ ಚೇತರಿಕೆ ಆಗದೆ ಉಪಚಾರ ಪಡೆಯುತ್ತಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಕಾರಣ ಟಾಟಾ
ಮ್ಯಾಜಿಕ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಶಹಾಬಾದ ನಗರ ಠಾಣೆ :- ಇಂದು ದಿನಾಂಕ 20/04/2017 ರಂದು ಶ್ರೀ
ಮಹಿಮೂದ ಪಟೇಲ ತಂದೆ ರಜಾಕಪಟೇಲ ಸಾ:ಜೆ.ಪಿ ಕಾಲೋನಿ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ 06/04/2017 ರಂದು
ರಾತ್ರಿ ಮನೆಯಲ್ಲಿ ಮಲಗಿದ್ದ ನನ್ನ ಮಗಳು
ಆಪ್ರೀನ್ ಕಾಣೆಯಾಗಿದ್ದು ನಾನು ,ನನ್ನ ಹೆಂಡತಿ ಮತ್ತು ತಮ್ಮನಾದ ರಹೆಮಾನ
ಪಟೇಲ ಎಲ್ಲರೂ ಕೂಡಿ ಆಫ್ರಿನ ಇವಳಿಗೆ ಸುತ್ತ ಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲಾ. ನಂತರ ನನ್ನ ತಮ್ಮಂದಿರಾದ ರಹೇಮಾನ ಪಟೇಲ, ರುಕ್ಕುಮ ಪಟೇಲ ಮತ್ತು ಲಾಡ್ಲೇಪಟೇಲ ಎಲ್ಲರೂ ಕೂಡಿ ಶಹಾಬಾಧ ನಗರದ ರೈಲುನಿಲ್ದಾಣ,
ಮಜೀದಚೌಕ, ಬಸ್ಸನಿಲ್ದಾಣ, ಹಾಗೂ
ಅಲ್ಲಿಂದ ಇಲ್ಲಿಯವರೆಗೂ ನಮ್ಮ ಸಂಬಂದಿಕರ ಊರಾದ ಪುಣೆ, ಹೈದ್ರಾಬಾದ,
ಸೊಲ್ಲಾಪೂರ, ಕಲಬುರಗಿ, ಅಕ್ಕಲಕೋಟ,
ಕಡೆಗಳಲ್ಲಿ ಕಾಣೆಯಾದ ನನ್ನ ಮಗಳು ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ
ಮಗಳಿಗೆ ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment