POLICE BHAVAN KALABURAGI

POLICE BHAVAN KALABURAGI

29 April 2017

KALABURAGI DIST REPORTED CRIMES.


ಸೇಡಂ ಪೊಲೀಸ್ ಠಾಣೆ: ದಿನಾಂಕ:29-04-2017 ರಂದು ಮುಂಜಾನೆ 0430 ಎ.ಎಮ್.ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮಾನ್ಯ ಪಿ.ಎಸ್.ಐ ಸಾಹೇಬರು ಪಡೆದುಕೊಂಡ ಫಿರ್ಯಾದಿ ಹೇಳಿಕೆಯನ್ನು ಮುಂದಿನ ಕ್ರಮಕ್ಕಾಗಿ ಹೆಚ್.ಜಿ-567 ಶಿವಾನಂದ ಇವರು ಠಾಣೆಗೆ ತಂದು ನನ್ನ ಮುಂದೆ ಹಾಜರುಪಡಿಸಿದ್ದು, ಫಿರ್ಯಾದಿ, ಶ್ರೀ. ಸುಭಾಸ ತಂದೆ ಲಕ್ಷ್ಮಣ ಮದ್ದೂರ, ವಯ:30 ವರ್ಷ, ಜಾತಿ:ಮಾದಿಗ, ಉ:ಒಕ್ಕಲುತನ, ಸಾ:ಹಾಬಾಳ(ಟಿ), ತಾ:ಸೇಡಂ ಇವರ ಹೇಳಿಕೆ ಸಾರಂಶವೇನೆಂದರೆ, ಇಂದು ದಿನಾಂಕ:28-04-2017 ರಂದು ಮದ್ಯಾಹ್ನ ನನ್ನ ಅಣ್ಣನಾದ ಸಿದ್ದಾರ್ಥ ಮತ್ತು ನಮ್ಮ ಅಣ್ಣ-ತಮ್ಮಕಿಯ ಅಣ್ಣನಾದ ಉದಯ ಇಬ್ಬರೂ ಕೂಡಿಕೊಂಡು ಖಾಸಗಿ ಕೆಲಸಕ್ಕೆಂದು ಮೊಟಾರು ಸೈಕಲ್ ನಂ-KA32EM9777 ನೇದ್ದರ ಮೇಲೆ ಕಲಬುರಗಿಗೆ ಹೋಗಿದ್ದರು. ರಾತ್ರಿ 09-30 ಗಂಟೆಗೆ ಯಾರೋ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ಸಿದ್ದಾರ್ಥ ಮತ್ತು ಉದಯ ಇವರು ಕಲಬುರಗಿಯಿಂದ ಸೇಡಂಕ್ಕೆ ಬರುವಾಗ ಕೊಂಕನಳ್ಳಿ ಗೇಟ್ ದಾಟಿದ ನಂತರ ರಸ್ತೆ ಅಪಘಾತವಾಗಿ ಭಾರಿ ಗಾಯಗಳಾಗಿವೆ ಅಂತ ತಿಳಿಸಿದಾಗ ನಾನು ಮತ್ತು ನಮ್ಮೂರ ಜನರು ಕೂಡಿಕೊಂಡು ಖಾಸಗಿ ವಾಹನ ಮಾಡಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದೇವು ಅಲ್ಲಿ ನೋಡಲಾಗಿ ಗಾಯಗೊಂಡ ಉದಯ ಹೇಳಿದ್ದೇನೆಂದರೆ, ನಾವು ಇಬ್ಬರೂ ಡಿವೂ KA32EM9777 ಮೊಟಾರು ಸೈಕಲ್ ಮೇಲೆ ಸೇಡಂಕ್ಕೆ ಬರುವಾಗ ಕೊಂಕನಳ್ಳಿ ಗೇಟ್ ದಾಟಿದ ನಂತರ ರಾತ್ರಿ 09-00 ಗಂಟೆಗೆ ನಮ್ಮ ಹಿಂದಿನಿಂದ ಲಾರಿ ನಂ-MH-25-U-3387 ನೇದ್ದರ ಚಾಲಕನು ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನಮ್ಮ ಮೊಟಾರು ಸೈಕಲಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಆಗ ನಾವು ರೋಡಿನಲ್ಲಿ ಬಿದ್ದೇವು. ನನಗೆ ಬಲಗಾಗಲಿನ ಮೊಳಕಾಲಿನ ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯವಾಯಿತು. ಸಿದ್ದಾರ್ಥ ಈತನಿಗೆ ಎದೆಗೆ ಹಾಗೂ ಬಲಗಾಲು ತೊಡೆಯಲ್ಲಿ ಕಾಲು ಮುರಿದು ಭಾರಿ ರಕ್ತಗಾಯವಾಯಿತು, ನಾವು ಏಳುವಷ್ಟರಲ್ಲಿ ಲಾರಿ ಚಾಲಕನು ಲಾರಿ ಬಿಟ್ಟು ಓಡಿ ಹೋದನು. ನಂತರ ನಾವು ಅಂಬುಲೇನ್ಸದಲ್ಲಿ ಬಂದು ಬಸವೇಶ್ವರ ಆಸ್ಪತ್ರೆಗೆ ಬಂದಿರುತ್ತೇವೆ ಅಂತ ತಿಳಿಸಿದನು ನನ್ನ ಅಣ್ಣ ಸಿದ್ದಾರ್ಥ ಇತನಿಗೆ ನೋಡಲಾಗಿ ಆತ ಮೃತಪಟ್ಟಿದ್ದನು.  ಅಪಘಾತ ಪಡಿಸಿ ಓಡಿ ಹೋದ ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ನಾನು ಲಿಂಗಣ್ಣ ಹೆಚ್.ಸಿ-374 ಸೇಡಂ ಪೊಲೀಸ್ ಠಾಣೆ ಗುನ್ನೆ ನಂ-122/2017 ಕಲಂ 279, 338, 304() .ಪಿ.ಸಿ & 187 .ಎಮ್.ವಿ ಆಕ್ಟ್ ನೆದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು   ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ:   ದಿನಾಂಕ 28-04-2017 ರಂದು 4:00 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಒಬ್ಬ ಆರೋಪಿತನನ್ನು ಹಾಜರು ಪಡಿಸಿ ವರದಿ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ ನಿನ್ನೆ ದಿನಾಂಕ 27-04-2017 ರಂದು ಸಾಯಂಕಾಲ 6:00 ಪಿ ಎಮ್ ಕ್ಕೆ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಮಣೂರ ಗ್ರಾಮದಲ್ಲಿ  ಅಂಬೇಡ್ಕರ ಜಯಂತಿ ಆಚರಣೆ ಮತ್ತು ಮೇರವಣಿಗೆ ಇದ್ದು, ಸದರಿ ಮೇರವಣಿಗೆ ಸಮಯದಲ್ಲಿ ಮಣೂರ ಗ್ರಾಮದ ಓಂಕಾರ ತಂದೆ ಪ್ರಕಾಶ ಠಕ್ಕಾ ಈತನು ಕೋಮು ಸೌಹಾರ್ದತೆ ಕದಡುವ ರೀತಿ ಜನರಿಗೆ ಪ್ರಚೋದನೆ ನೀಡುತ್ತಾ ತಿರುಗಾಡುತ್ತಿದ್ದನು. ಇವನಿಂದ  ಗ್ರಾಮದಲ್ಲಿ ಉದ್ದಿಗ್ನ ವಾತಾವರಣ ವುಂಟಾಗಿರುತ್ತದೆ. ಅದರಂತೆ ಇಂದು ದಿನಾಂಕ 28-04-2017 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ಮಣೂರ ಗ್ರಾಮಕ್ಕೆ ಬೇಟ್ಟಿ ನೀಡಿದಾಗ ಗ್ರಾಮದ ಬಾತ್ಮಿದಾರರು ತಿಳಿಸಿದ್ದೆನೆಂದರೆ, ಗ್ರಾಮದ ಓಂಕಾರ ತಂದೆ ಪ್ರಕಾಶ ಠಕ್ಕಾ ವಯಾ|| 23 ವರ್ಷ ಜಾ|| ಲಿಂಗಾಯತ || ವಿದ್ಯಾರ್ಥಿ ಸಾ|| ಮಣೂರ ಗ್ರಾಮ ಈತನು ನಿನ್ನೆ ನಡೆದ ಅಂಬೇಡ್ಕರ ಜಯಂತಿಯ ಆಚರಣೆ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಜನರಿಗೆ ಪ್ರಚೋದನೆ ನೀಡುತ್ತಾ ಕೋಮು ಗಲಬೆ ಆಗುವಂತೆ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾನೆ ಹಾಗೂ ಸದರಿಯವನು ಮಣೂರ ಗ್ರಾಮದಲ್ಲಿ ಉದ್ದಿಗ್ನ ವಾತಾವರಣವುಂಟು ಮಾಡುವವನಾಗಿದ್ದಾನೆ, ಮತ್ತು ಸದ್ಯ ಸದರಿಯವನು ಗ್ರಾಮದಲ್ಲಿ ಪ್ರಚೋದನೆ ನೀಡುತ್ತಾ ತಿರುಗಾಡುತ್ತಿದ್ದಾನೆ ಎಂದು ಗ್ರಾಮದ ಗ್ರಾಮಸ್ತುರು ಹಾಗೂ ಬಾತ್ಮಿದಾರರು ತಿಳಿಸಿದ ಮೇರೆಗೆ ಸದರಿಯವನನ್ನು ಇಂದು ದಿನಾಂಕ 28-04-2017 ರಂದು 3:00 ಪಿ ಎಮ್ ಕ್ಕೆ ಮಣೂರ ಗ್ರಾಮದಲ್ಲಿ ದಸ್ತಗಿರಿ ಮಾಡಿಕೊಂಡು ಸದರಿಯವರೊಂದಿಗೆ 4:00 ಪಿ ಎಮ್ ಕ್ಕೆ ಠಾಣೆಗೆ ಬಂದು ಸದರಿಯವನ ವಿರುದ್ದ ಮುಂಜಾಗ್ರತಾ ಕ್ರಮ ಜರೂಗಿಸಿ, ಸದರಿಯವನನ್ನು ಮಾನ್ಯ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರ ಮುಂದೆ ಹಾಜರು ಪಡಿಸುವಂತೆ ಸೂಚಿಸಿ ವರದಿ ನೀಡಿದ್ದರ ಮೇರೆಗೆ ಠಾಣೆಯ ಗುನ್ನೆ ನಂ  102/2017 ಕಲಂ 108. ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಕಮಲಾಪೂರ ಪೊಲೀಸ ಠಾಣೆ : ದಿನಾಂಕ 28-04-2017 ರಂದು ಬೆಳಗ್ಗೆ 8-15  ಗಂಟೆಗೆ ಜಿಲ್ಲಾ ನಿಸ್ತಂತು ಕೋಣೆಯಿಂದ  ಶ್ರೀ ವಿಕ್ರಮ ತಂದೆ ಪುಂಡಲಿಕ ಗೊಗ್ಗರೆ ಸಾ: ನಾಂದೇಡ ಇತನು ರಸ್ತೆ ಅಪಘಾತದಲ್ಲಿ ದು:ಖಾಪತ ಹೊಂದಿ ಉಪಚಾರ ಕುರಿತು ಜಿ.ಜಿ.ಹೆಚ್   ಕಲಬುರಗಿಯಲ್ಲಿ ಸೇರಿಕೆಯಾಗಿದ್ದು ಬಂದು ಮುಂದಿನ ಕ್ರಮ ಕ್ರಮ ಕುರಿತು ಎಮ್.ಎಲ್.ಸಿ ವಸೂಲಾದ ಪ್ರಯುಕ್ತ  ಜಿ.ಜಿ ಹೆಚ್ ಕ್ಕೆ ಭೆಟ್ಟಿ ನೀಡಿ ಗಾಯಾಳು ವಿಕ್ರಮ ಇತನಿಗೆ ವಿಚಾರಿಸಿ ಇತನ ಹೇಳಿಕೆ ಸಾರಾಂಶವೆನೆಂದರೆ ನಾನು ಮೇಲ್ಕಾಣಿಸಿದ ಹೆಸರು ವಿಳಾಸದವನಿದ್ದು ಲಾರಿ ಕ್ಲೀನರ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ಉಪಜೀವನ ಸಾಗಿಸುತ್ತೆನೆ. ನಾನು ಈಗ 3-4 ತಿಂಗಳಿಂದ ನಾದೇಡ ಪಟ್ಟಣದ ಕೌರವರಜಿತ ಸಿಂಗ್ ಕೌರ ಗಂಡ ಹರ್ಜಿತ  ಸಿಂಗ್ ರಾಯ್  ಇವರ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರ ಮೇಲೆ ಹಮಾಲಿ ಮತ್ತು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನನ್ನಂತೆ ನಾರಾಯಣ ತಂದೆ ಮೋತಿರಾಮ ಗಡ್ಡಮವಾಡ ವಯ: 18 ವರ್ಷ ಜಾತಿ: ಕೋಳಿ ಸಾ: ಬುತ್ತೆಚವಾಡಿ ತಾ: ಕಂದಹಾರ ಜಿ: ನಾಂದೇಡ ಇತನು ಕೂಡಾ ನಮ್ಮ ಲಾರಿ ಮೇಲೆ ಹಮಾಲಿ ಮತ್ತು ಕ್ಲೀನರ ಕೆಲಸ ಮಾಡಿಕೊಂಡು ಬಂದಿದ್ದು. ನಮ್ಮ ಅಣ್ಣತಮ್ಮಕಿಯ ರಾಹುಲ ತಂದೆ ಬಾಬುರಾವ ಗೊಗರೆ ಇವರು ನಮ್ಮ ಲಾರಿ ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಇರುತ್ತದೆ.ಈಗ ಒಂದು ತಿಂಗಳಿಂದ ನಮ್ಮ ಮಾಲಿಕರು ಹೇಳಿದಂತೆ ನಾವು ಮಳಖೇಡ ದಿಂದ ಸಿಮೆಂಟ ತುಂಬಿಕೊಂಡು ನಾಂದೇಡಕ್ಕೆ ತೆಗೆದುಕೊಂಡು ಹೋಗಿ ಬರುತ್ತಿದ್ದು ಅದರಂತೆ ನಿನ್ನೆ ದಿನಾಂಕ 27.04.2017 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಮಳಖೇಡ ರಾಜೇಶ್ರೀ ಸಿಮೆಂಟ ಕಂಪನಿಯಿಂದ ನಮ್ಮ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರಲ್ಲಿ ಸಿಮೆಂಟ ತುಂಬಿಕೊಂಡು ನಾಂದೇಡ ಕಡೆಗೆ ಹೊರಟಿದ್ದು ನಾನು ಮತ್ತು ನಾರಾಯಣ ಇಬ್ಬರು ಲಾರಿಯಲ್ಲಿ ಕುಳಿತುಕೊಂಡಿದ್ದು ನಮ್ಮ ಲಾರಿ ಚಾಲಕ ರಾಹುಲ ಇತನು ಲಾರಿಯನ್ನು ನಡೆಯಿಸಿಕೊಂಡು ಬರುತ್ತಿದ್ದು ರಾತ್ರಿ 9 ಗಂಟೆಯ ಸುಮರಿಗೆ ನಾವು ಕಮಲಾಪೂರಕ್ಕೆ ಬಂದು ದಾಬಾದಲ್ಲಿ ಊಟ ಮಾಡಿ ನಂತರ ನಾಂದೇಡಕ್ಕೆ ಹೋಗುವ ಕುರಿತು ರಾತ್ರಿ 10 ಗಂಟೆಯ ಸುಮಾರಿಗೆ ಕಮಲಾಪೂರ ಬಿಟ್ಟು ಕಲಬುರಗಿ-ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ಹುಮನಾಬಾದ ಕಡೆಗೆ ಹೊರಟಿದ್ದು ಕಮಲಾಪೂರ ಬಿಟ್ಟ ನಂತರ ನಮ್ಮ ಲಾರಿ ಚಾಲಕ ರಾಹುಲ ಇತನು ನಮ್ಮ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದು ಆಗ ನಾನು ಮತ್ತು ನಾರಾಯಣ ನಮ್ಮ ಲಾರಿ ಚಾಲಕನಿಗೆ ಲಾರಿಯನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವನು ನಮ್ಮ ಮಾತನ್ನು ಕೇಳದೆ ಅದೇ ವೇಗದಲ್ಲಿ ಲಾರಿಯನ್ನು ನಡೆಯಿಸಿಕೊಂಡು ಹೋಗುತ್ತಿದ್ದು ರಾತ್ರಿ 10;25 ಗಂಟೆಯ ಸುಮಾರಿಗೆ ಕಿಣ್ಣಿ ಬ್ರಾರಡರ್ ಹತ್ತಿರ ಇರುವ ಬ್ರೀಜ್ಗೆ ನಮ್ಮ ಲಾರಿಚಾಲಕನು ಲಾರಿಯನ್ನು ಹಾಯಿಸಿದ್ದು ಆಗ ನಮ್ಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಬ್ರೀಡ್ಜ್ ಕೆಳಗೆ ಬಿದಿದ್ದು ಲಾರಿ ಬಿದ್ದ ನಂತರ ನಾನು ಸಾವರಿಸಿಕೊಂಡು ಲಾರಿಯಿಂದ ಹೊರಗೆ ಬಂದು ನೋಡಲು ನನ್ನ ಎಡಭಾಗದ ಬುಜಕ್ಕೆ, ಎಡಗೈ ಮುಂಗೈ ಹತ್ತಿರ, ಎಡಗೈ ಹಸ್ತದ ಹತ್ತಿರ ರಕ್ತಗಾಯ, ಗುಪ್ತಗಾಯವಾಗಿದ್ದು ಮತ್ತು ದೇಹದ ಮೇಲೆ ಅಲಲ್ಲಿ ಗುಪ್ತಗಾಯವಾಗಿದ್ದು ಇರುತ್ತದೆ ನಂತರ ನಾನು ನಮ್ಮ ಲಾರಿ ಚಾಲಕನಾದ ರಾಹುಲ ಇತನಿಗೆ ನೋಡಲು ಅವನ ಎಡಬುಜಕ್ಕೆ ಭಾರಿ ಗುಪ್ತಗಾಯವಾಗಿದ್ದು, ಬಲಗೈ ಮುಂಗೈ ಮುಂದೆ ಹೊಟ್ಟೆಗೆ ತರಚಿದ ಗಾಯವಾಗಿದ್ದು ಇರುತ್ತದೆ ನಂತರ ನಾರಾಯಣ ಇತನಿಗೆ ನೋಡಲು ಅವನ ಎಡಭಾಗದ ತಲೆಗೆ ಭಾರಿ ರಕ್ತಗಾವಾಗಿದ್ದು, ಕಪಾಳಕ್ಕೆ, ಗದ್ದಕ್ಕೆ, ರಕ್ತಗಾಯವಾಗಿದ್ದು ಮೂಗಿನಿಂದ ರಕ್ತ ಬರುತ್ತಿದ್ದು ಮತ್ತು ಸದರಿಯವನ ಎಡಭಾಗದ ಪಕ್ಕೆಗೆ ಭಾರಿ ಗುಪ್ತಗಾಯವಾಗಿ ಪಕ್ಕೆಲಬುಗಳು ಮುರಿ ಹಾಗ ಗಂಡು ಬಂದಿದ್ದು ಸದರಿಯನು ನರಳಾಡುತ್ತಿದ್ದು ಆಗ ನಾನು ಮತ್ತು ರಾಹುಲ ಇಬ್ಬರು ಕೂಡಿಕೊಂಡು ಸದರಿಯವನಿಗೆ ಎಬ್ಬಿಸಿ ನೋಡಲು ಸದರಿ ನಾರಾಯಣ ಇತನು ಸ್ವಲ್ಪ ಸಮಯ ನರಳಾಡಿ ರಾತ್ರಿ 10:45 ಗಂಟೆಯ ಸುಮಾರಿಗೆ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ನಂತರ ಯಾರೊ 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದು ನನಗೆ ಮತ್ತು ರಾಹುಲ ಇತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ಲಾರಿ ಚಾಲಕ ರಾಹುಲ ಇತನು ನಮ್ಮ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಿಣ್ಣಿ ಗ್ರಾಮದ ಹತ್ತಿರ ಇರುವ ಬ್ರೀಜ್ಡ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ನನಗೆ ದು:ಖಾಪತ ಗೊಳಿಸಿದ್ದು ಮತ್ತು ನಾರಾಯಣ ಇತನ ಸಾವಿಗೆ ಕಾರಣನಾಗಿದ್ದು ಕಾರಣ ಸದರಿ ಚಾಲಕ ವಿರುದ್ದ ಕಾನೂನು ಕ್ರಮ ಕೈಖೊಳ್ಳಬೇಕು ಅಂತ ಹೇಳಿ ಬರೆಯಿಸಿದ ಹೇಳಿಕೆ ಪಡೆದುಕೊಂಡು  ಮರಳಿ ಇಂದೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ಪಿರ್ಯಾದಿಯ  ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ  54/2017 ಕಲಂ. 279, 337, 304(ಎ)  ಐಪಿಸಿ ಅಡಿಯಲ್ಲಿ ಗುನ್ನೆ  ದಾಖಲಿಸಿಕೊಂಡು ತನಿಖೆ  ಕೈಕೊಂಡ ಬಗ್ಗೆ ವರದಿ.
ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ : ದಿನಾಂಕ 27/04/17 ರಂದು ಫಿರ್ಯಾದಿ ತನ್ನ ಸಡಕ ವಿಠಲ ತಂದೆ ಹಣಮಂತರಾಯ ಗುಂಡದ  ಇತನ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ನೇದ್ದರ ಹಿಂದೆ ಕುಳಿತುಕೊಂಡು ಸುಂಟನೂರ ಗ್ರಾಮದ ಅಪ್ಪಾಪೀರ ಜಾತ್ರೆಗೆ ಹೋಗಿ ವಾಪಸ್ಸ ಕಲಬುರಗಿ ಕಡೆ ಹೊರಟಿದ್ದು, ಫಿರ್ಯಾದಿ ವಿಠಲ ಇತನಿಗೆ ಸಾವಾಕಾಶವಾಗಿ ನಡೆಯಿಸು ನಡೆಯಿಸು ಅಂತಾ ಹೇಳಿದರೂ ನನ್ನ ಮಾತಿಗೆ ಲಕ್ಷ ಕೊಡದೇ ಅತಿವೇಗದಿಂದ ಮೋಟಾರ ಸೈಕಲ ನಡೆಸುತ್ತಾ ಹೊರಟಾಗ ರಾತ್ರಿ 10-00 ಗಂಟೆ ಸುಮಾರಿಗೆ ಆಳಂದ-ಕಲಬುರಗಿ ರೋಡಿನ ಪಟ್ಟಣ ಸೀಮಾಂತರದಲ್ಲಿ ಬರುವ ಜವಳಿ ದಾಬಾದ ಎದುರುಗಡೆ ಬಂದಾಗ ಯಾವುದೋ ಲಾರಿ ಮೈಮೇಲೆ ಬಂದತಾಗಲು ವಿಠಲ ಇತನು ಮೋಟಾರ ಸೈಕಲ ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದ ಮೋಟಾರ ಸೈಕಲ ಒಮ್ಮಿಂದ ಒಮ್ಮೇಲೆ ಬಲ ರೋಡ ಬದಿಯಲ್ಲಿ ತೆಗೆದುಕೊಂಡಾಗ ವೇಗದ ನಿಯಂತ್ರಣ ತಪ್ಪಿ ಬಲ ರೋಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವಯಸ್ಸಾದ ಅಪರಿಚಿತ ಮನುಷ್ಯ 55 ರಿಂದ 60 ವರ್ಷ ವಯಸ್ಸಿನವನಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಅವನು ನೆಲಕ್ಕೆ ಬಿದ್ದಾಗ ಅವನ ಎಡಗಣ್ಣಿನ ಹುಬ್ಬಿನ ಮೇಲೆ, ತಲೆಯ ಮಧ್ಯದಲ್ಲಿ  ಎಡ ಕಪಾಳ ಮೇಲೆ ಭಾರಿ ರಕ್ತಗಾಯುಗಳಾಗಿದ್ದು, ಎಡ ಮೆಲಕಿನ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದು, ಎರಡು ಕೈಗಳ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ಅದರಂತೆ ಫಿರ್ಯಾದಿ ಮತ್ತು ಮೋಟಾರ ಸೈಕಲ ಚಾಲಕ ವಿಠಲ ಇಬ್ಬರಿಗೂ ಹಣೆಗೆ, ಮುಖಕ್ಕೆ ಮತ್ತು ಮೈಮೇಲೆ ಅಲ್ಲಿಲ್ಲಿ ರಕ್ತಗಾಯಗಳಾಗಿರುತ್ತೇವೆ ಮೋಟಾರ ಸೈಕಲ ಚಾಲಕ ವಿಠಲನ ಮೇಲೆ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಮ. 164/17 ಕಲಂ 279,337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡ ಬಗ್ಗೆ ವರದಿ.


No comments: