POLICE BHAVAN KALABURAGI

POLICE BHAVAN KALABURAGI

26 March 2017

Kalaburagi District Reported Crimes

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದವರ ಬಂಧನ :
ಶಾಹಾಬಾದ ನಗರ ಠಾಣೆ : ಶ್ರೀ ನಾಗೇಂದ್ರ ಪಿಸಿ 651 ಶಹಾಬಾದ  ರವರು ದಿನಾಂಕ 24/03/17 ರಂದು ರಾತ್ರಿ 11 -00 ಪಿ.ಎಂ ದಿಂದ 5-00 ಪಿ.ಎಂ ಎ ವರಗೆ ರಾತ್ರಿ ವಿಶೇಷ ಗಸ್ತು ಕರ್ತವ್ಯದ್ದಲಿದ್ದಾಗ ಬೆಳಗಿನ ಜಾವ 3-15 ಎ.ಎಂ ಕ್ಕೆ ಕೆ.ಇ.ಬಿ ಹೋಟೇಲ ಹತ್ತಿರ ಇಬ್ಬರೂ ಕವಿ ನೆರಳಿನಲ್ಲಿ ನಿಂತಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಕೈಯಲ್ಲಿ ಒಂದು ರಾಡು ಹಿಡಿದುಕೊಂಡಿದ್ದು ನಮಗೆ ನೋಡಿ ಮರೆ ಮಾಚುತ್ತಿರುವಾಗ ಸದರಿಯವರಿಗ ಬೆನ್ನು ಹತ್ತಿ ಹಿಡಿದು ವಿಚಾರಿಸಲು ತಮ್ಮ ಹೆಸರು 1]ದಿನೇಶ ತಂದೆ ರಾಮಕೀಶನ ರಾಠೋಡ 2] ರಾಘವೇಂದ್ರ ತಂದೆ ಭೀಮಾಶಂಕರ ಸಾ: ಇಬ್ಬರೂ ಮರತೂರ ಅಂತ ತಿಳಿಸಿದರು. ಸದರಿಯವರಿಗೆ ಹಿಡಿದುಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಗಮೇಶ ತಂದೆ ಗಂಗಾಧರ ಹುಂಡೇಕಾರ ಸಾ|| ಸ್ವಾಮಿ ವಿವೇಕಾನಂದ ನಗರ ವೀರಭದ್ರೇಶ್ವರ ಮಂದಿರ ಹತ್ತಿರ ಕಲಬುರಗಿ ಇವರು ದಿನಾಂಕ:25/03/2017 ರಂದು ಬೆಳಗ್ಗೆ ನಾವೇಲ್ಲರು ನಮ್ಮ ನಮ್ಮ ಕೆಲಸಕ್ಕೆ ಹೋಗಿರುತ್ತೆವೆ ನಮ್ಮ ತಾಯಿಯವರು ಮಾತ್ರ ಮನೆಯಲ್ಲಿ ಇರುತ್ತಿದ್ದರು, ನಮ್ಮ ತಾಯಿಯವರು ಮದ್ಯಾಹ್ನ 12-00 ಗಂಟೆಗೆ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆ ಹತ್ತಿರ ಇರುವ ಶಾಂತಪ್ಪ ಕೊರಳ್ಳಿಯವರ ಮನೆಗೆ ಹೋಗಿದ್ದು ನಮ್ಮ ತಮ್ಮ ಜಗಧೀಶ ಇತನು ಮದ್ಯಾಹ್ನ 1-30 ಗಂಟೆಗೆ ಆಟೋ ತೆಗೆದುಕೊಂಡು ಮನೆಗೆ ಬಂದು ನೋಡಲು ಮನೆಯ ಬಾಗಿಲು ಖುಲ್ಲಾ ಇದ್ದು ನಮ್ಮ ತಮ್ಮ ನನಗೆ ಫೋನ್ ಮಾಡಿ ತಿಳಿಸಿದಾಗ ನಾನು ಮನೆಗೆ ಬಂದು ನೋಡಲು ಮನೆ ಬಾಗಿಲು ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲು ಅಲಮಾರದ ಚಾವಿ ಮುರಿದು ನಮ್ಮ ತಾಯಿಯವರಿಗೆ ಕರೇಯಿಸಿ ವಿಚಾರ ಮಾಡಲು ಲಾಕರನಲ್ಲಿ ಇಟ್ಟಿದ್ದ ಹತ್ತು ವರ್ಷ ಹಿಂದೆ ಖರಿದಿ ಮಾಡಿದ 10 ಗ್ರಾಂ ಬಂಗಾರದ ಕರಿಮಣಿ ತಾಳಿ .ಕಿ 20,000/-ರೂ ಹಾಗೂ ಬೆಳ್ಳಿ ಲಕ್ಷ್ಮಿ ಮುರ್ತಿ , ಬೆಳಿಯ ನಾಣ್ಯ, ಬೆಳ್ಳಿಯ ಚೈನ್ ಹೀಗೆ ಒಟ್ಟು ತುಕ 150 ಗ್ರಾಂ ಅದರ .ಕಿ 4,500/- ರೂ ಹೀಗೆ ಒಟ್ಟು 24,500/-ರೂ ಬೇಲೆಯ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ವಿಶ್ವಭೂಷಣ ತಂದೆ ಚಂದ್ರಕಾಂತ ಪೋಸ್ತೆ ಉ: ಅಸಿಸ್ಟೇಂಟ ಬ್ಯಾಂಕ ಮಾನೆಂಜರ ಸಾ:ಬಸವೇಶ್ವರ ನಗರ ಜೇವರಗಿ ರವರು ಆಂದೋಲಾ ಪಿ.ಕೆ.ಜಿ ಬ್ಯಾಂಕದಲ್ಲಿ ಸುಮಾರು 2 ವರ್ಷಗಳಿಂದ ಅಸಿಸ್ಟೇಂಟ ಬ್ಯಾಂಕ ಮಾನೆಂಜರ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ: 24.03.2017 ರಂದು ಎಂದಿನಂತೆ ನಾನು ಮತ್ತು ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಜನರಾದ ಮಲ್ಲಣ್ಣಾ ತಂದೆ ಹೊನ್ನಪ್ಪ ನಾಟಿಕರ್ ಹಾಗೂ ಖಾಸಗಿಯಾಗಿ ಕೆಲಸ ಮಾಡುವ ರಿಯಾಜ ತಂದೆ ಚಾಂದಸಾಬ ಕಟ್ಟಿಮನಿ, ಬಾಬಣ್ಣಾ ತಂದೆ ಶಂಕರೆಪ್ಪ ಬರ್ಮಶೆಟ್ಟಿ ಎಲ್ಲರೂ ಸಾಯಾಂಕಾಲ 6.00 ಗಂಟೆಯ ವರೆಗೆ ಕೆಲಸ ಮಾಡಿ ಬ್ಯಾಂಕಿನ ಬಾಗಿಲು ಕೀಲಿ ಹಾಕಿ ಮನೆಗೆ ಬಂದಿದ್ದು ದಿನಾಂಕ: 25.03.2017 ರಂದು ಮುಂಜಾನೆ 10.00 ಗಂಟೆ ಸುಮಾರಿಗೆ ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಲ್ಲಣ್ಣಾ ನಾಟಿಕರ್ ಇವರು ಫೋನ ಮಾಡಿ ನಮ್ಮ ಪಿಕೆಜಿ ಬ್ಯಾಂಕಿನ ಕೀಲಿ ಮುರಿದಿರುತ್ತದೆ ಅಂತ ತಿಳಿಸಿದ ಕೂಡಲೆ ನಾನು ಆಂದೋಲಾದ ನಮ್ಮ ಪಿಕೆಜಿ ಬ್ಯಾಂಕಿಗೆ ಹೋಗಿ ನೋಡಲು ಬ್ಯಾಂಕಿನ ಮುಂದಿನ ಕಬ್ಬಿಣದ ಗೀರಿಲ್ ಗೇಟ ಖುಲ್ಲಾ ಆಗಿ ಒಳಗಿನ ಬಾಗಿಲು ಕೂಡಾ ಖುಲ್ಲಾ ಇತ್ತು. ನಾನು ಮತ್ತು ಮಲ್ಲಣ್ಣಾ, ಶ್ರೀಕಾಂತ ಬಿರಾಜದಾರ ಹಾಗೂ ಬಾಬಣ್ಣ ಬರ್ಮಶೇಟ್ಟಿ ಎಲ್ಲರೂ ಕೂಡಾ ಒಳಗೆ ಹೋಗಿ ನೋಡಲು ಕ್ಯಾಶ ಕೌಂಟರದ ಡ್ರಾಗಳು ಖುಲ್ಲಾ ಆಗಿದ್ದವು. ಯಾವುದೇ ಹಣ ವಗೃರೆ ವಸ್ತುಗಳು ಕಳ್ಳತನ ಆಗಿರಲಿಲ್ಲಾ. ಯಾರೋ ಕಳ್ಳರು ದಿನಾಂಕ: 24.03.2017 ಮತ್ತು 25.03.2017ರ ಮದ್ಯ ರಾತ್ರಿಯಲ್ಲಿ ನಮ್ಮ ಪಿಕೆಜಿ ಬ್ಯಾಂಕಿನ ಕಬ್ಬೀಣದ ಗೇಟು ಮತ್ತು ಒಳಗಿನ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: