POLICE BHAVAN KALABURAGI

POLICE BHAVAN KALABURAGI

27 February 2017

Kalaburagi District Reported Crimes

ನೀರಿನಲ್ಲಿ ಮುಳುಗಿ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ  26-2-2017 ರಂದು  ಶ್ರೀ ಅಮೀರ ಅಲಿಖಾನ ತಂದೆ ಇಬ್ರಾಹಿಂ ಅಲಿಖಾನ ಸಾ : ಶರ್ಫ ಮಡ್ಡಿ ಇಸ್ಲಾಮಾಬಾದ ಕಾಲೂನಿ ಕಲಬುರಗಿ  ರವರ  ಮಗಳು ಅಮತುಸಬುರ ವಯ;13 ವರ್ಷ , ಮರಿಯಮ್ಮಾ ವಯ;16 ವರ್ಷ ಇವರು ತಮ್ಮ ಹೊಲದ ಪಕ್ಕದಲ್ಲಿ ಇರುವ ಕುಮಸಿ ಗ್ರಾಮದ ಸೀಮಾಂತರದಲ್ಲಿ ಬರುವ ಕೆರೆಯ ನೀರಿನಲ್ಲಿ ಆಡಲು ಹೋದಾಗ ಆಯಾ ತಪ್ಪಿ  ಕೇರೆ ನೀರಲ್ಲಿ ಬಿದ್ದಾಗ  ಅವರನ್ನು  ಕರೆಯಲು/ತೆಗೆಯಲು ಹೋದ ಫಿರ್ಯಾದಿ ಅಳಿಯ ಸಾದುಲ್ ರೆಹಮಾನ ಮತ್ತು  ನನ್ನ ಅಣ್ಣನ ಮಗ ಬಸಿರ ಅಲಿಖಾನ ಇವರೂ ಕೂಡಾ  ಆಯಾತಪ್ಪಿ  ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-02-2017 ರಂದು 3 ಪಿ.ಎಮ್ ಕ್ಕೆ  ಶ್ರೀ ಗುಂಡಪ್ಪ ತಂದೆ  ಸಂಗಪ್ಪ ಜವಾಜಿ ಮು:ರಾಜನಾಳ ಗ್ರಾಮ ತಾ:ಜಿ:ಕಲಬುರಗಿ ಇವರು ದಿನಾಂಕ : 26.02.2017 ರಂದು ನಸುಕಿನ ಜಾವ ರಾಜನಾಳ ಗ್ರಾಮದಿಂದ ನನ್ನ ಅಣ್ಣನಾದ ರಾಜಕುಮಾರ ಜವಾಜಿ ಇವರು ನನ್ನ ಮೋಬಾಯಿಲಗೆ ಫೊನ ಮಾಡಿ ಯಾರೋ ಕಳ್ಳರು ನನ್ನ ಮನೆಯಲ್ಲಿ ನಾನು ಮಲಗುವ ಕೋಣೆಯ ಬಾಗಿಲಿಗೆ ಹಾಕಿದ ಕಿಲಿಯನ್ನು ಮುರಿದು ಮನೆಯಲ್ಲಿ ಹೋಗಿ ಅಲಮಾರಿಯ ಕಿಲಿಯನ್ನು ಮುರಿದು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿ ಆಗಿ ಬಿಸಾಡಿ ಕಳ್ಳತನ ಮಾಡಿರುವ ವಿಷಯ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಮನೆ ಕಳ್ಳತನವಾದ ವಿಷಯ ನನ್ನ ಸಂಗಡ ಸಂಗಮಕ್ಕೆ ಬಂದಿದ್ದ ಜಗನ್ನಾಥ ಕಲ್ಲೂರ ಹಾಗೂ ಮಂಜುನಾಥ ಜವಾಜಿ ಹಾಗೂ ಹುಮನಾಬಾದನಲ್ಲಿರುವ ನನ್ನ ಹೆಂಡತಿಗೆ ತಿಳಿಸಿದ್ದು. ನಾವೇಲ್ಲರೂ ಕೂಡಿ ಮುಂಜಾನೆ ವಾಪಸ್ಸ ರಾಜನಾಳ ಗ್ರಾಮದ ನನ್ನ ಮನೆಗೆ ಬಂದು ನೋಡಲು ನನ್ನ ಅಣ್ಣ ಫೊನನಲ್ಲಿ ಹೇಳಿದಂತೆ ನಾನು ಮಲಗುವ ಕೋಣೆಯ ಬಾಗಿಲಕಿಲಿ ಮುರಿದು ಒಳಗೆ ಹೋಗಿ ಅಲಮಾರಿಯ ಕಿಲಿ ಮುರಿದು ಅಲಮಾರಿಯಲ್ಲಿಟ್ಟ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಟಾಕಿದ್ದು. ನಂತರ ನಾನು ನೋಡಲು ಅಲಮಾರಿಯಲ್ಲಿಟ್ಟ  ಬಮಗಾರದ ಮತ್ತು ಬೆಳ್ಳಿಯ ಆಭರಣಗಳನ್ನು , ಕೈಗಾಡಿಯಾರ ಮತ್ತು ನಗದು ಹಣ ಹೀಗೆ ಒಟ್ಟು ಒಟ್ಟು 91.800 ರೂಪಾಯಿ ಮಾಲನ್ನು ಯಾರೋ ಕಳ್ಳರು ರಾತ್ರಿ 12 ಗಂಟೆಯಿಂದ 02.00 ಗಂಟೆಯ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಲ್ಲಯ್ಯ ತಂದೆ ಕಲ್ಲಯ್ಯ ಹೊಸಮಠ ಸಾ|| ಅಫಜಲಪೂರ ಇವರು ದಿನಾಂಕ 20-02-2017 ರಂದು ಸಂಜೆ ಮಾದಾಬಾಳ ತಾಂಡಾದಲ್ಲಿ ನನ್ನ ಗೆಳೆಯರಾದ ವಿನೋದ ತಂದೆ ಮೋತಿಚಂದ ರಾಠೊಡ ಸಾ|| ಮಾದಾಬಾಳ ಇವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮ ಇದ್ದರಿಂದ, ಸದರಿ ಕಾರ್ಯಕ್ರಮಕ್ಕೆ ನಾನು ಮತ್ತು ನಮ್ಮ ಸ್ನೇಹಿತರು ಆದ ಗುರುದೇವ ತಂದೆ ಶರಣಯ್ಯ ಹಿರೇಮಠ ಸಾ|| ಅಫಜಲಪೂರ ಇಬ್ಬರು ಕೂಡಿ ಅರ್ಜುನ ಬಂಕದ ಇವರ ಮೋಟರ ಸೈಕಲ ನಂ ಕೆಎ-32 ಎಸ್-5755 ನೇದ್ದರ ಮೇಲೆ ಅಫಜಲಪೂರದಿಂದ ಮಾದಾಬಾಳ ತಾಂಡಾಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲ ನಾನೆ ನಡೆಸುತ್ತಿದ್ದೇನು. ರಾತ್ರಿ 7:45 ಗಂಟೆ ಸುಮಾರಿಗೆ ಮಾದಾಬಾಳ ತಾಂಡಾದ ಹತ್ತಿರ ಹೊಗುತ್ತಿದ್ದಂತೆ ಎದರುಗಡೆಯಿಂದ ಒಂದು ವಾಹನದ ಚಾಲಕನ ತನ್ನ ವಾಹನವನ್ನು ಲೈಟ ಹಾಕಿಕೊಂಡು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಾ ಬಂದನವನೆ ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದನು. ಆಗ ನಾವು ಕೆಳಗೆ ಬಿದ್ದೇವು. ಡಿಕ್ಕಿಯಿಂದ ನನಗೆ ಎಡಗಾಲು ಮೋಳಕಾಲಿನ ಕೆಳಗೆ ಕಾಲು ಮುರಿದಿರುತ್ತದೆ. ಮತ್ತು ಸೊಂಟಕ್ಕೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿ ಏಡ ಮೆಲಕಿಗೆ ತರಚಿದ ರಕ್ತಗಾಯವಾಗಿತ್ತು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಗುರುದೇವ ಇವರಿಗೆ ಎರಡುಕಾಲುಗಳಿಗೆ ಹಾಗೂ ಮೈ ಕೈಗೆ ಬಾರಿ ಗುಪ್ತಗಾಯಗಳು ಹಾಗೂ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ವಾಹನ ನೋಡಲಾಗಿ ಕ್ರೂಜರ ವಾಹನ ಇದ್ದು ಅದರ ನಂ ಕೆಎ-23 ಎನ್-0176 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಅದರ ಚಾಲಕ ಕ್ರೂಜರನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: