POLICE BHAVAN KALABURAGI

POLICE BHAVAN KALABURAGI

19 February 2017

Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಈರಣ್ಣ ತಂದೆ ಮಹಾದೇವಪ್ಪ ವಿಶ್ವಕರ್ಮ ಸಾ|| ಕುಮ್ಮನಸಿರಸಗಿ ಇವರು, 2007 ನೇ ಸಾಲಿನಲ್ಲಿ ನನ್ನ ಇಬ್ಬರು ತಂಗಿಯಂದಿರಾಗ ಭೀಮಬಾಯಿ ಮತ್ತು ಬೌರಮ್ಮಳಿಗೆ ನಮ್ಮ ಸೋದರ ಅತ್ತೆ ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಸಾ|| ಕಾಚಾಪೂರ ಇವರ ಮಕ್ಕಳಾದ ಹೇಮಂತರಾಜ ಇವನಿಗೆ ಭೀಮಬಾಯಿಗೆ ಹಾಗು ಗಂಗಾಧರ ಈತನಿಗೆ ಬೌರಮ್ಮಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಮದುವೆಯಾದ ನಂತರ ನಮ್ಮ ತಂಗಿಯಂದಿರು ತಮ್ಮ ಗಂಡನ ಮನೆಯಲ್ಲಿ ಅನ್ನೊನ್ನೆವಾಗಿದ್ದರು. ಭೀಮಬಾಯಿಗೆ 3 ಜನ ಹೆಣ್ಣು ಮತ್ತು ಒಂದು ಗಂಡು ಮಗನಿದ್ದು, ಬೌರಮ್ಮಳಿಗೆ 2 ಜನ ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ಹೆಮಂತರಾಜ ಮತ್ತು ಗಂಗಾಧರ ಇಬ್ಬರಿಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಬಂದ ನಂತರ ನಮ್ಮ ತಂಗಿಯಂದಿರು ಆಗಾಗ ನಮ್ಮ ಮನೆಗೆ ಬಂದು ನಮಗೆ ನಮ್ಮ ಗಂಡಂದಿರು ಮತ್ತು ಅತ್ತೆ ಸರಸ್ವತಿ ಇವರು ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬನ್ನಿ ಅಂತಾ ಅನ್ನುತ್ತಾ ನಮಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾರೆ ಅಂತಾ ಹೇಳುತ್ತಿದ್ದರು. ನಂತರ ಬಗ್ಗೆ ನಾನು ಮತ್ತು ನಮ್ಮ ತಾಯಿ ಕಾಳಮ್ಮ ಹಾಗು ಊರಿನ ಹಿಯರು  ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸೋದರ ಅತ್ತೆ ಸರಸ್ವತಿ ಹಾಗು ಅವರ ಮಕ್ಕಳಾದ ಹೇಮಂತರಾಜ ಮತ್ತು ಗಂಗಾಧರ ರವರಿಗೆ ತಿಳವಳಿಕೆ ಹೇಳಿ ಬಂದಿರುತ್ತೇವೆ ಆದರು ಸಹ ಅವರು ಅದೇರೀತಿ ನಮ್ಮ ತಂಗಿಯಂದಿರಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಬೌರಮ್ಮ ಇವಳು ಅವರ ಹಿಂಸೆ ತಾಳಲಾರದೆ ಈಗ 3 ತಿಂಗಳಿಂದ ನಮ್ಮ ಮನೆಯಲ್ಲಿ ಬಂದು ಇದ್ದಿರುತ್ತಾಳೆ. ಭೀಮಬಾಯಿ ಮಾತ್ರ ಅವಳ ಗಂಡನ ಮನೆಯಲ್ಲಿದ್ದಳು. ದಿನಾಂಕ 17-02-2017 ರಂದು ಬೆಳಿಗ್ಗೆ ಯಡ್ರಾಮಿಯಲ್ಲಿ ನಮ್ಮ ಸಂಬಂಧಿಕರ ಮುಂಜಿ ಕಾರ್ಯಕ್ರಮಕ್ಕೆ ಇದ್ದಿದ್ದರಿಂದ ನಾನು ಬಂದಿರುತ್ತೇನೆ. ನಂತರ ನಾನು 11;30 .ಎಂ ಸುಮಾರಿಗೆ ನಮ್ಮ ತಂಗಿ ಭೀಮಬಾಯಿ ರವರ ಮನೆಗೆ ಫೋನ ಮಾಡಿದಾಗ ಯಾರೋ ಫೋನ ಎತ್ತಿ ನಿಮ್ಮ ತಂಗಿ ನೆಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮೌನೇಶ ತಂದೆ ವಿಠೋಬಾ, ಮಲ್ಲಿಕಾರ್ಜುನ ತಂದೆ ಕಾಳಪ್ಪ ವಿಶ್ವಕರ್ಮ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ನಮ್ಮ ತಂಗಿ ಭೀಮಬಾಯಿ ವಯ; 30 ವರ್ಷ ಇವಳ ಶವವು ಅವರ ಮನೆಯ ಮುಂದೆ ಹಾಕಿದರು, ಹೇಮಂತರಾಜ ತಂದೆ ಶ್ರೀಶೈಲ ಇನಾಮದಾರ, ಗಂಗಾಧರ ತಂದೆ ಶ್ರೀಶೈಲ ಇನಾಮದಾರ, ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಇವರುಗಳು ನಮ್ಮ ತಂಗಿ ಭೀಮಬಾಯಿಗೆ ಹೊಡೆ ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಗುಂಡಪ್ಪ ತಂದೆ ಭೀಮಣ್ಣಾ ಹೂಗೊಂಡರ್ ಸಾ:ಆಲಗೂಡ ಇತನು ದಿನಾಂಕ:-04/02/2017 ರಂದು ಬೆಳಿಗ್ಗೆ ಸೈಯ್ಯದ ಚಿಂಚೋಳಿ ಕ್ರಾಸ ಕಡೆಯಿಂದ ತಾಜ ಸುಲ್ತಾನಪುರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಚೆಕ್ಕ ಪೊಸ್ಟ ಕಡೆಯಿಂದ ಟಂ ಟಂ ನಂ ಕೆಎ-32 ಎ-2934 ನೇದ್ದರ ಚಾಲಕನಾದ ಗೌಸ ಅಹೆಮ್ಮದ ತಂದೆ ಚಾಂದಸಾಬ ಸಾ:ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಇತನು ತನ್ನ ವಶದಲ್ಲಿದ್ದ ಟಂ ಟಂನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಗುಂಡಪ್ಪ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಆತನ ತಲೆಗೆ ರಕ್ತಗಾಯ, ಎಡ ಭುಜಕ್ಕೆ ಮತ್ತು ಎಡ ತೊಡೆಗೆ ಭಾರಿ ಗುಪ್ತಗಾಯ ಹಾಗು ಇತರೇ ಕಡೆ ಗಾಯಗಳಾಗಿದ್ದು ನಂತರ ಅದೇ ದಿವಸ ಆತನಿಗೆ ಉಪಚಾರ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿಯವನು ದಿನಾಂಕ:- 04/02/2017 ರಿಂದ ದಿನಾಂಕ:- 17/02/2017 ರವರೆಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಇಂದು ನಮ್ಮ ಹತ್ತಿರ ಹಣ ಖಾಲಿ ಆಗಿದ್ದರಿಂದ್ದ ಗುಂಡಪ್ಪ ಇತನು ಇಂದು ದಿನಾಂಕ:-17/02/2017 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿ ಗುಂಡಪ್ಪ ಇತನಿಗೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಬೆಳಿಗ್ಗೆ ಮೃತಪಟ್ಟಿರುತ್ತಾನೆ. ಅಂತಾ ಮೃತನ ಮಗ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಭಗವಂತ್ರಾಯ ಬಸವಣ್ಣಪ್ಪಾ ಹರಳಯ್ಯ ಸಾ: ಹೊನ್ನಕಿರಣಗಿ ಇವರು ತನ್ನ ನಿತ್ಯದ ಖರ್ಚಿಗಾಗಿ ತನ್ನ ಹೆಂಡತಿಗೆ ಕೆಳುತ್ತಿದ್ದರಿಂದ ಹೆಂಡತಿಯಾದ ವಿಜಯಲಕ್ಷ್ಮಿ ಗಂಡ ಭಗವಂತ್ರಾಯ ಹರಳಯ್ಯ ಇನ್ನೂ ಇಬ್ಬರು ಸಾ: ಎಲ್ಲರು ಹೊನ್ನಕಿರಣಗಿ ಕುಡಿಕೊಂಡು  ನೀನು ದುಂದು ವೆಚ್ಚ ಮಾಡುತ್ತಿ ಅಂತಾ ದಿನ ನಿತ್ಯ ಕಿರಿ ಕಿರಿಮಾಡುತ್ತಾ ಬಂದಿದ್ದು ದಿನಾಂಕ 07/02/17 ರಂದು ಮುಂಜಾನೆ 10 ಗಂಟೆಗೆ ಪಿರ್ಯಾದಿ ತಮ್ಮೂರ ಅಗಸಿ ಹತ್ತಿರ ನಡೆದು ಕೊಂಡು ಹೋಗುತ್ತಿದ್ದಾಗ ಮಗ ಹಾಗೂ ಅವನ ಪತ್ನಿ & ಅತ್ತೆ 3 ಜನರು ಬಂದವರೆ ಇಂದು ಕೂಲಿಕೆಲಸಕ್ಕೆ ಏಕೆ ಹೋಗಿಲ್ಲಾ ರಂಡಿ ಮಗನೇ ಅಂತಾ ತಡೆದು ನಿಲ್ಲಸಿ ಹೊಡೆ ಬಡೆ ಮಾಡಿ ಅವ್ಯಾಚ್ವವಾಗಿ ಬೈದು ಜೀವದ ಭಯ ಹಾಕಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: