POLICE BHAVAN KALABURAGI

POLICE BHAVAN KALABURAGI

14 December 2016

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ಯ್ರಾಕ್ಟರಗಳ ವಶ :
ಶಾಹಾಬಾದ ನಗರ ಠಾಣೆ : ದಿನಾಂಕ: 13/12/2016 ರಂದು ಮುತ್ತಗಾ ಗ್ರಾಮದ ಕಾಗಿಣಾ ನದಿಯಿಂದ ಟ್ಯ್ರಾಕ್ಟರದಲ್ಲಿ ಮರಳು ಕಳ್ಳತನದಿಂದ ಸಾಗಿತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ  ಶಾಹಾಬಾದ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರಾಚರೊಂದಿಗೆ  ಕಾಗಿಣಾ ನದಿಯ ಬ್ರಿಡ್ಜ ಕಂ ಬ್ಯಾರೇಜ ಹತ್ತಿರ ರಸ್ತೆಯಲ್ಲಿ  ಒಂದು ಮರಳು ತುಂಬಿದ ಮಹೆಂದ್ರ ಕಂಪನಿಯ ಕೆಂಪು ಬಣ್ಣದ ಟ್ಯ್ರಾಕ್ಟರ ನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾಗ ಸದರಿ ಟ್ಯ್ರಾಕ್ಟರ ಚಾಲಕನು ತನ್ನ ಟ್ಯ್ರಾಕ್ಟರ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ಯ್ರಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಟ್ಯ್ರಾಕ್ಟರ ನಂಬರ ಇರುವುದಿಲ್ಲಾ ಇಂಜಿನ ನಂಬರ ZKJT00142 ಅಂತಾ ಇರುತ್ತದೆ. ಸದರಿ ಟ್ಯ್ರಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ 13/12/2016 ರಂದು ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಟ್ಯ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ  ಶಾಹಾಬಾದ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರಾಚರೊಂದಿಗೆ  ಮುತ್ತಗಾ ಗ್ರಾಮದ ಕಾಗಿಣಾ ಬ್ರೀಜ ಕಂ ಬ್ಯಾರೇಜ ನದಿಯಿಂದ ಒಂದು  ಟ್ಯ್ರಾಕ್ಟರ ನಂಬರ ಮಶೀ ಫರಗೂಷನ ಕಂಪನಿ ಟ್ಯ್ರಾಕ್ಟರ  ಮರಳು  ತುಂಬಿಕೊಂಡು ಬರುತ್ತಿದ್ದು  ನಮ್ಮನ್ನು ನೋಡಿ ಸದರ ಟ್ಯ್ರಾಕ್ಟರ ಚಾಲಕ ಓಡಿಹೋಗಿದ್ದು ಅದರ ನಂಬರ ಪ್ಲೇಟ ಇರುವುದಿಲ್ಲಾ ಸದರಿ ಟ್ಯ್ರಾಕ್ಟರ ಇಂಜಿನ ನಂಬರ S325C95271 ಅಂತಾ ಇರುತ್ತದೆ ಸದರಿ ಟ್ಯ್ರಾಕ್ಟರ ಹಿಡಿದು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟ್ಯ್ರಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ 13/12/2016 ರಂದು ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಟ್ಯ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ  ಶಾಹಾಬಾದ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರಾಚರೊಂದಿಗೆ  ಭಂಕೂರ ಗ್ರಾಮದ ಹತ್ತಿರ ಇರುವ ರೈಲ್ವೆ ಬ್ರೀಡ್ಜ ಹತ್ತಿರ ರೋಡಿನಲ್ಲಿ ಮುತ್ತಗಾ ಗ್ರಾಮದ ಕಡೆಯಿಂದ  ಒಂದು  ಮಶೀ ಫರಗೂಷನ ಕಂಪನಿ ಟ್ಯ್ರಾಕ್ಟರ ನಂಬರ ಕೆ.ಎ. 33 1282 ನೇದ್ದರಲ್ಲಿ   ಮರಳು  ತುಂಬಿಕೊಂಡು ಬರುತ್ತಿದ್ದು  ಸದರಿ ಟ್ಯ್ರಾಕ್ಟರ ಹಿಡಿದು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟ್ಯ್ರಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪ್ರಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ಸಾ|| ಕಡಚರ್ಲಾ ಗ್ರಾಮ ಇವರ ಮಗಳಾದ ಕುಮಾರಿ. ಇವಳಿಗೆ ನಮ್ಮ ಮನೆಯ ಹಿಂದುಗಡೆ ನಮ್ಮರ ಆಶೋಕ ತಂದೆ ಆಶಪ್ಪಾ ಎನಿಕ್ಯಾ ಇವರ ಮನೆ ಇರುತ್ತದೆ. ಸದರಿ ಅಶೋಕ ಇತನು ನಮ್ಮೂರದಿಂದ ಮುಧೋಳಕ್ಕೆ ಅಟೋ ಓಡಿಸುತಿದ್ದು ಇತನು ನಮ್ಮ ಮಗಳಿಗೆ ಹೊಗುವಾಗ ಬರುವಾಗ ನೊಡುವದು ಮತ್ತು ಆಗಾಗ ಮಾತಾಡುವದು ಮಾಡುತಿದ್ದನು. ನಾವು ಅತನಿಗೆ ನಮ್ಮ ಮಗಳಿಗೆ ನೊಡಬೇಡ ಮತ್ತು ಮಾತಾಡಬೆಡ ಅಂತಾ ತಿಳಿಸಿ ಹೇಳಿದ್ದೆವು. ದಿನಾಂಕ;30-11-2016 ರಂದು ರಾತ್ರಿ ನಾನು ನಮ್ಮುರಲ್ಲಿ ನರಸಯ್ಯಾ ಕಲಾಲ ಇವರ  ಮನೆಯ ಬಾಗಿಲುಗಳು ಕುಡಿಸುವದು ಇದ್ದರಿಂದ ನಾನು ರಾತ್ರಿ ಅಲ್ಲಿಗೆ ಕೆಲಸಕ್ಕೆ ಹೊಗಿದ್ದೆನು ಮನೆಯಲ್ಲಿ ನನ್ನ ಮಗಳು ಮತ್ತು ನನ್ನ ಹೆಂಡತಿ ಸಣ್ಣ ಮಕ್ಕಳು ಮನೆಯಲ್ಲಿದ್ದರು ನಾನು ದಿನಾಂಕ 01-12-2016 ರಂದು ಬೇಳಗ್ಗೆ 5-00 ಗಂಟೆ ಸುಮಾರಿಗೆ ಸದರಿ ನರಸಯ್ಯಾ ಇವರ ಮನೆಯಲ್ಲಿದ್ದಾಗ ನನ್ನ ಹೆಂಡತಿ ನನ್ನ ಹತ್ತಿರ ಬಂದು ನಮ್ಮ ಮಗಳು ಬೇಳಗ್ಗೆ 4-00 ಗಂಟೆ ಸುಮಾರಿಗೆ ಮನೆಯಿಂದ ಎದ್ದು ಹೊರಗಡೆ ಎಕಿ ಮಾಡಲು ಹೊದವಳು ತಿರುಗಿ ಮನೆಗೆ ಬಂದಿರುವದಿಲ್ಲಾ ಅಂತಾ ತಿಳಿಸಿದಳು ನಾನು ಹಾಗು ನನ್ನ ಹೆಂಡತಿ ಮತ್ತು ಇತರರು ಕೂಡಿ ನಮ್ಮುರಲ್ಲಿ ಹುಡಕಾಡಿ ನಂತರ ಇಂದು ಬೇಳಗ್ಗೆ 7-00 ಗಂಟೆ ಸುಮಾರಿಗೆ ನಾವು ಮುಧೋಳ ಬಸ್ಸನಿಲ್ದಾಣದ ಹತ್ತಿರ ನಮ್ಮ ಮಗಳಿಗೆ ಹುಡುಕಾಡುತಿದ್ದಾಗ ಅಲ್ಲಿ ಬಸ್ಸನಿಲ್ದಾಣದ ಹತ್ತಿರ ನಮಗೆ ಪರಿಚಯವಿರುವ ಮುಧೋಳ ಗ್ರಾಮದ ತುಕಾರಾಮ ತಂದೆ ರಾಮರಾವ ಬಸುದೆ ಇತನು ಬೇಟಿಯಾಗಿದ್ದು ಇತನು ನಮಗೆ ನೊಡಿ  ಮಾತಾಡಿಸಿದ್ದು ನಾವು ಅತನಿಗೆ ನಮ್ಮ ಮಗಳು ಮನೆಯಿಂದ ಹೊರಗಡ ಹೊಗಿದ್ದು ಕಾಣಿಸುತ್ತಿಲ್ಲಾ ಅವಳಿಗೆ ಹುಡುಕಾಡುತಿದ್ದೆವೆ ಅಂತಾ ಹೇಳಿದಕ್ಕೆ ಆತನು ನಮಗೆ ನಿಮ್ಮ ಮಗಳು ಬೇಳಗ್ಗೆ 6-30 ಗಂಟೆ ಸುಮಾರಿಗೆ ಇಲ್ಲೆ ಬಸ್ಸನಿಲ್ದಾಣದಲ್ಲಿ ನೊಡಿದ್ದು ಇವಳಿಗೆ ನಿಮ್ಮುರ ಅಟೋ ನಡೆಸುವ ಆಶೋಕ ತಂದೆ ಆಶಪ್ಪಾ ಎನಿಕ್ಯಾ ಇತನು ತನ್ನ ಜೊತೆಯಲ್ಲಿ ಇಲ್ಲಿ ಮುಧೋಳ ಬಸ್ಸನಿಲ್ದಾಣದಿಂದ ಬಸ್ಸಿನಲ್ಲಿ ಕರೆದುಕೊಂಡು ಹೊದನು ನಾನು ನೊಡಿರುತ್ತನೆ ಅಂತಾ ಹೇಳಿದನು ನಂತರ ನಾವು ನಮ್ಮ ಮನಗಳಿಗೆ ಇಲ್ಲಿಯವರೆಗೆ ಸೇಡಂ ಕೊಡಂಗಲ ಇತರ ಎಲ್ಲಾ ಕಡೆ  ಹುಡುಕಾಡಲಾಗಿ ಇದುವರೆಗೆ ನನ್ನ ಮಗಳು ಪತ್ತೆ ಆಗಿರುವದಿಲ್ಲಾ ಈ ಬಗ್ಗೆ  ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 13-12-2016 ರಂದು ಬೇಳಗ್ಗೆ 10-00 ಗಂಟೆಗೆ ತನ್ನ ಸಂಗಡಿಗನಾದ ಅಶೋಕ ತಂದೆ ಆಶಪ್ಪಾ ಎನಿಕ್ಯಾ ಸಾ|| ಕಡಚೆರ್ಲಾ ಇತನ ಜೊತೆಯಲ್ಲಿ ಮುಧೋಳ ಠಾಣೆಗೆ ಬಂದು ಹೇಳಿಕೆ ನಿಡಿದ್ದೆನಂದರೆ ನಾನು 10 ನೇ ತರಗತಿಯವರೆಗೆ ಶಾಲೆ ಕಲಿತಿದ್ದು .ನಮ್ಮ ಮನೆಯ ಹಿಂದುಗಡೆ ನಮ್ಮುರ ಅಶೋಕ ತಂದೆ ಆಶಪ್ಪಾ ಎನಿಕ್ಯಾ ಜಾತಿ; ಕಬ್ಬಲಿಗೇರ ಇವರ ಮನೆ ಇದ್ದು ಸದರಿ ಅಶೋಕ ಇತನು ಅವರ ಮನೆಗೆ ಹೊಗುವಾಗ ಬರುವಾಗ ನಮ್ಮ ಮನೆಯ ಮುಂದಿನಿಂದ ಹೊಗಿ ಬರುತಿದ್ದು  ಇತನು ನನಗೆ ಮನೆಗೆ ಹೊಗುವಾಗ ಬರುವಾಗ ಆಗಾಗ ನನ್ನ ಜೊತೆ ಮಾತಾಡುತಿದ್ದನು ನಾವಿಬ್ಬರು ಇಗ 2 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರಿತಿಮಾಡುತಿದ್ದು  ಇರುತ್ತದೆ ಸದರಿ ವಿಷಯವು ನಮ್ಮ ಮನೆಯರಿಗೆ ಗೊತ್ತಾಗಿ ಇಗ 5-6 ತಿಂಗಳಿಂದ ನಮ್ಮ ಮನೆಯಲ್ಲಿ ನಮ್ಮ ತಂದೆ ತಾಯಿಯವರು ನನಗೆ ಮದುವೆ ಮಾಡುವದಕ್ಕೆ ಗಂಡು ನೊಡುತಿದ್ದು ಇರುತ್ತದೆ ಇದರಿಂದ ನಾನು ಸದರಿ ಅಶೋಕ ಇತನಿಗೆ ಇಷ್ಟಪಟ್ಟಿದ್ದರಿಂದ ನಾವಿಬ್ಬರು ಮದುವೆ ಮಾಡಿಕೊಳ್ಳಬೆಕು ಅಂತಾ ಮಾತಾಡಿಕೊಂಡು ಸದರಿ ಅಶೋಕ ಇತನು ಹೈದ್ರಾಬಾದನಲ್ಲಿ ಒಂದು ಬಾಡಿಗೆ ಮನೆ ಹಿಡದಿದ್ದು ಇತನು ನನಗೆ ಹೈದ್ರಾಬಾದಕ್ಕೆ ಕೆರೆದುಕೊಂಡು ಹೊಗಿ ಮದುವೆ ಮಾಡಿಕೋಳ್ಳುವದಾಗಿ ತಿಳಿಸಿದ್ದು ಇರುತ್ತದೆ. ದಿನಾಂಕ 30-11-2016 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಮನೆಯಲ್ಲಿ ನಾನು ಹಾಗು ನಮ್ಮ ತಾಯಿ ಇಬ್ಬರು ಮನೆಯಲ್ಲಿ ಮಲಗಿಕೊಂಡಿದ್ದೆವು ನಮ್ಮ ತಂದೆ ಶೇಷಪ್ಪಾ ಕಂಬಾರ ಇವರು ನಮ್ಮುರಲ್ಲಿ ನರಸಯ್ಯಾ ಕಲಾಲ ಇವರ ಮನೆಗೆ ಬಾಗಿಲುಗಳು ಕೂಡಿಸುವ ಕೆಲಸಕ್ಕೆ ಹೊಗಿದ್ದು ರಾತ್ರಿ ದಿನಾಂಕ 01-12-2016 ರಂದು 1-00 ಗಂಟೆ ಸುಮಾರಿಗೆ ಸದರಿ ನಮ್ಮ ಮನೆಯ ಹಿಂದುಗಡೆ ಇರುವ ಅಶೋಕ ತಂದೆ ಆಶಪ್ಪಾ ಎನಿಕ್ಯಾ ಇತನು ನಮ್ಮ ಮನೆಗೆ ಬಂದು ನನಗೆ ಕರೆದಿದ್ದು ನಾನು ಮನೆಯಲ್ಲಿ ನಮ್ಮ ತಾಯಿ ಮಲಗಿಕೊಂಡಿದ್ದು ನೋಡಿ ಮನೆಯಿಂದ ಹೊರಗಡೆ ಬಂದಿದ್ದು  ಸದರಿ ಅಶೋಕ ಇತನು ನನಗೆ ನಾವಿಬ್ಬರು ಓಡಿ ಹೊಗಿ ಹೈದ್ರಾಬಾದನಲ್ಲಿ ಮದುವೆ ಮಾಡಿಕೊಂಡು ಅಲ್ಲೆ ಇರೋಣ ಅಂತಾ ಹೇಳಿದ್ದು ಅದಕ್ಕೆ ನಾನು ಆತನಿಗೆ ನನಗೆ ಇನ್ನು ಮದುವೆಯ ವಯಸ್ಸು ಆಗಿರುವದಿಲ್ಲಾ ಸ್ವಲ್ಪ ದಿನ ಹೊಗಲಿ ಮದುವೆ ಮಾಡಿಕೊಳ್ಳೊಣ ಅಂತಾ ಹೇಳಿದರು ಸಹ ಕೇಳದೆ ಅತನು ನನಗೆ ತನ್ನ ಸೈಕಲ ಮೋಟರ ಮೆಲೆ ಕೂಡಿಸಿಕೊಂಡು ಗುರಮಿಟಕಲವರೆಗೆ ಕರೆದುಕೊಂಡು ಹೊಗಿ ಗುರಮಿಟಕಲ ಬಸ್ಸನಿಲ್ದಾಣದ ಹತ್ತಿರ ತನ್ನ ಮೊಟಾರ ಸೈಕಿಲ ಬಿಟ್ಟು ಅಲ್ಲಿಂದ ನನಗೆ ಹೈದ್ರಾಬಾದಗೆ ಹೊಗುವ ಬಸ್ಸಿನಲ್ಲಿ ಕೂಡಿಸಿಕೊಂಡು ಹೈದ್ರಾಬಾದಕ್ಕೆ ಕರೆದುಕೊಂಡು ಹೊಗಿ ಹೈದ್ರಾಬಾದನ ಸನಸಿಟಿ ಎರೀಯಾದಲ್ಲಿ ತಾನು ಹಿಡಿದ್ದದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೊಗಿ ದಿನಾಂಕ 01-12-2016 ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಸದರಿ ಅಶೋಕ ಇತನು ನನಗೆ ಮದುವೆ ಮಾಡಿಕೊಳ್ಳುತ್ತನೆ ಅಂತಾ ಹೇಳಿ ನಂಬಿಸಿ ನನಗೆ ಅತ್ಯಾಚಾರ ಮಾಡಿ ಲೈಗಿಂಗ ದೌರ್ಜನ್ಯ ಮಾಡಿದ್ದು ಅಲ್ಲದೆ ದಿನಾಂಕ 02-12-2016 ರಂದು ಮುಂಜಾನೆ ಅದೆ ಎರಿಯಾದಲ್ಲಿರುವ ಸಾಯಿಬಾಬ ದೇವರ ಗುಡಿಗೆ ಕರೆದುಕೊಂಡು ಹೊಗಿ ನನಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡು ನನಗೆ ಅಲ್ಲೆ ಹೈದ್ರಾಬಾದನಲ್ಲಿ ಬಾಡಿಗೆ ಮನೆಯಲ್ಲಿ ಇಟ್ಟು ದಿನಾಲು ರಾತ್ರಿ ನನ್ನ ಮೆಲೆ ಲೈಂಗಿಕ ದೌರ್ಜನ್ಯ ಮಾಡಿದ್ದು ಇರುತ್ತದೆ. ದಿನಾಂಕ 12-12-2016 ರಂದು ಬೇಳಗ್ಗೆ ಸದರಿ ಆಶೋಕ ಇತನ ತಂದೆ ಆಶಪ್ಪಾ ಇವರು ಅಶೋಕ ಇತನಿಗೆ ಪೋನ ಮಾಡಿ ನಿನ್ನ  ಮೆಲೆ ಮುಧೋಳ ಠಾಣೆಯಲ್ಲಿ ಕೇಸ್ ಮಾಡಿರುತ್ತಾರೆ ನಿನಗೆ ಪೊಲೀಸರು ಹುಡಕಾಡುತಿದ್ದಾರೆ ನಿನು  ಆ ಹುಡುಗಿಗೆ ಕರೆದುಕೊಂಡು ಊರಿಗೆ ಬಾ ಅಂತಾ ತಿಳಿಸಿದ್ದು ಅದರಂತೆ ಸದರಿ ಅಶೋಕ ಇತನು ನನಗೆ ಹೈದ್ರಾಬಾದನಿಂದ ಇಂದು ದಿನಾಂಕ 13-12-2016 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ಮುಧೋಳ ಪೊಲೀಸ ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 11-12-20166 ರಂದು ಶ್ರೀ ಬಸಣ್ಣಗೌಡ ತಂದೆ ಲೋಕಪ್ಪಗೌಡ ಪೊಲೀಸ ಪಾಟೀಲ ಸಾ: ಸೀತನೂರ ರವರು  ತನ್ನ ಖಾಸಗಿ ಕೆಲಸದ ಪ್ರಯುಕ್ತ ಕಲಬುರಗಿ ಹೋಗಿ ಮರಳಿ ಖಾಸಗಿ ವಾಹನದಲ್ಲಿ ಎನ್ ಎಚ್  218 ನೇದ್ದರ ಮೇಲೆ ತಮ್ಮೂರ ಕ್ರಾಸದಲ್ಲಿ ಇಳಿದು ರಸ್ತೆ ದಾಟುತ್ತಿದ್ದಾಗ ಕಲಬುರಗಿ ಕಡೆಯಿಂದ ಸುರೇಶ ತಂದೆ ಅಂಬಾರಾಯ ಚಿಂಚೋಳಿ  ಸಾ: ತಾಡತೆಗನೂರ  ಮೋ ಸೈಕಲ ನಂ ಕೆಎ- 30 ಹೆಚ್- 6792 ಮೋಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡೆಸಿದ್ದರಿಂದ ಪಫಿರ್ಯಾದಿಗೆ  ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: