ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಹುಸೇನಸಾಬ ತಂದೆ ಅಹ್ಮದ ಸಾಬ ಭಾಗವಾನ ಸಾ : ಹರಸೂರ ರವರು ದಿನಾಂಕ:
02/12/2016 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ತನ್ನ ಮನೆಯ ಮುಂದೆ ನಿಂತುಕೊಂಡಾಗ ಮಕ್ಬುಲಸಾಬ ತಂದೆ
ಅಹ್ಮದ ಸಾಬ ಭಾಗವಾನ ಸಂಗಡ ನಾಲ್ಕುಜನರು ಸಾ : ಎಲ್ಲರು ಹರಸೂರ ರವರು ಕುಡಿಕೊಂಡು ಕಲ್ಲಿನಿಂದ
ಬಡಿಗೆಯಿಂದ ಹೊಡೆಬಡೆ ಮಾಡಿದ್ದಲ್ಲದೇ ನನ್ನ ಹೆಂಡತಿಯ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು
ಪ್ರಯತ್ನಿಸಿ, ಜೀವ ಬೇದರಿಕೆ ಹಾಕಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಗಫುರ ತಂದೆ ಮಕ್ಬುಲ ಭಾಗವಾನ ಸಾ ಹರಸೂರ ರವರು ದಿನಾಂಕ: 02/12/2016 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ತಾನು ಮತ್ತು
ತನ್ನ ತಂದೆ ಮಕ್ಬೂಲ ಇಬ್ಬರು ತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಹುಸೇನಸಾಬ ತಂದೆ ಅಹ್ಮದ
ಸಾಬ ಭಾಗವಾನ ಸಂಗಡ ನಾಲ್ಕು ಜನರು ಸಾ : ಎಲ್ಲರು ಹರಸೂರ ಕೂಡಿಕೊಂಡು ಹೊಲ ಹಂಚಿಕೆ ವಿಷಯದಲ್ಲಿ ಕಲ್ಲಿನಿಂದ
ಬಡಿಗೆಯಿಂದ ಹೊಡೆಬಡೆ ಮಾಡಿದ್ದಲ್ಲದೇ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 01.12.2016 ರಂದು ಮುಂಜಾನೆ 10:30 ಗಂಟೆಗೆ ಮಾರಡಗಿ ಎಸ್.ಎ
ಸಿಮಾಂತರದ ಆರೋಪಿತರ ಹೊಲ ಸರ್ವೇ ನಂ 175 ನೇದ್ದರಲ್ಲಿ ಸಂಗಣ್ಣ ತಂದೆ ನಾಗಣ್ಣ ದಂಡಿನ್ ಸಾ|| ಮಾರಡಗಿ ಎಸ್.ಎ, ದೇವಿಂದ್ರ ತಂದೆ ನಾಗಣ್ಣ
ದಂಡೀನ್ ಸಾ|| ಇಬ್ಬರು ಮಾರಡಗಿ ಎಸ್.ಎ ಗ್ರಾಮ ರವರು ಕೇನಾಲ್ ಮೂಲಕ ನಾಲ್ಕೈದು ಕಡೆಗೆ ಕೆನಾಲ್ ದಿಂದ ನೀರನ್ನು
ತೆಗೆದುಕೊಳ್ಳುತ್ತಿದ್ದಾಗ ನಾನು ಮತ್ತು ಗ್ರಾಮದ ಇತರರು ಸೇರಿಕೊಂಡು ಆರೋಪಿತರಿಗೆ ಎಲ್ಲಾ ನೀರು ನೀವ
ಒಬ್ಬರೆ ತೆಗೆದುಕೊಂಡರೆ ಬೇರೆಯವರ ಬೆಳೆ ಒಣಗಿ ಹೋಗುತ್ತದೆ ಅಂತ ಕೇಳಿದ್ದಕ್ಕೆ ಆರೋಪಿ ದೇವಿಂದ್ರ ಈತನು
ನನಗೆ ರಂಡಿ ಮಗನೆ ನೀನು ಇವರ ಮೇಲು ಕಟ್ಟಿ ಬಂದು ಅಂಜಸ್ತಿ, ನಿಂದು ಊರಲ್ಲಿ ಭಾಳ ಸೊಕ್ಕು
ಬಂದದ ಅಂತ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳದ ಮೇಲೆ ಬೆನ್ನ ಮೇಲೆ ಹೊಡೆದನು. ಸಂಗಣ್ಣ ಈತನು
ಕೊಡಲಿ ಕಾವಿನಿಂದ ಬೆನ್ನ ಮೇಲೆ ಹೊಡೆದನು. ನಂತರ ದೇವಿಂದ್ರ ಈತನು ಕೋಲೆ ಮಾಡುವ ಉದ್ದೇಶದಿಂದ ನನ್ನ
ಕುತ್ತಿಗೆ ಹಿಡಿದು ಒತ್ತಿ ಕೊಲೆಗೆ ಪ್ರಯತ್ನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಚಾಂದಪಾಷಾ ತಂದೆ ಖಾಜಾಲಾಲ್ ಜಮಾದಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ನಿಂಗಪ್ಪಾ ತಂದೆ ಹಣಮಂತ ಹಿರಣಾ ಸಾ ಪಸ್ತಾಪೂರ ತಾ ಶಾಹಾಪೂರ ಜಿಲ್ಲಾ :
ಯಾದಗೀರ ರವರು ದಿನಾಂಕ: 02/12/2016 ರಂದು 6-00 ಪಿಎಂ ಸುಮಾರಿಗೆ ತಾನು ಕಾಯುತ್ತಿರುವ ಕುರಿಗಳನ್ನು ಮೇಯಿಸಿಕೊಂಡು
ಹುಮನಾಬಾದ-ಕಲಬುರಗಿ ರೋಡಿನ ಮುಖಾಂತರ ಮಹಾಗಾಂವ ಕ್ರಾಸಿನಲ್ಲಿರುವ ತಮ್ಮ ಕ್ಯಾಂಪಿಗೆ ಬರುತ್ತಾ
ಚಂದ್ರನಗರ ದಾಟಿ ಸ್ವಲ್ಪ ಮುಂದೆ ಕುರಿಗಳನ್ನು ರೋಡ
ಕ್ರಾಸ ಮಾಡುತ್ತಿರುವಾಗ ಅಪಾದಿತನು ತನ್ನ ಲಾರಿ ನಂ. ಕೆಎ:32-2725 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು
ಕುರಿಗಳಿಗೆ ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ 14 ಕುರಿಗಳು ಅ:ಕಿ: 90,000-00 ಕಿಮ್ಮತ್ತಿನ ವುಗಳು
ಮೃತಪಟ್ಟಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 01.12.2016 ರಂದು ಮುಂಜಾನೆ 10:30 ಗಂಟೆಗೆ ಮಾರಡಗಿ ಎಸ್.ಎ
ಸಿಮಾಂತರದ ನಮ್ಮ ಹೊಲ ಸರ್ವೇ ನಂ 175 ನೇದ್ದರಲ್ಲಿ ಕೆನಾಲ್ ಮೂಲಕ ನೀರು ಹೋಲಕ್ಕೆ ಬಿಡುತ್ತಿದ್ದಾಗ
ಅದೇ ಸಮಯಕ್ಕ ಚಾಂದಪಾಷಾ
ತಂದೆ ಖಾಜಾಲಾಲ್ ಜಮಾದಾರ್ ಮತ್ತು ಶಫೀಕ್ ತಂದೆ ಖಾಜಾಲಾಲ್ ಜಮಾದಾರ್ ಸಾ|| ಇಬ್ಬರು ಮಾರಡಗಿ ಎಸ್.ಎ ಗ್ರಾಮ ರವರು ಕೂಡಿಕೊಂಡು ಬಂದು ರಂಡಿ ಮಗನೆ ನೀನೆ
ನಾಲ್ಕೈದು ಕಡೆ ಕೇನಾಲ್ ಮೂಲಕ ನೀರು ತೆಗೆದುಕೊಂಡರೆ ಉಳಿದವರು ಹೇಗೆ ನೀರು ತೆಗೆದುಕೊಳ್ಳಬೇಕು ಅಂಥ
ಅಂದು ಕೈಯಿಂದ ಚೆಪ್ಪಲಿಯಿಂದ ಹೊಡೆದು, ಕಾಲೀನಿಂದ ಒದ್ದು ಕೋಲೆ ಮಾಡುವ ಉದ್ದೇಶದಿಂದ ನನಗೆ ಮುಂದಕ್ಕೆ ಹೋಗದಂತೆ
ತಡೆದು ನನ್ನ ಕುತ್ತಿಗೆ ಒತ್ತಿ ಹಿಡಿದು ಕೊಲೆಗೆ ಪ್ರಯತ್ನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ನಾಗಣ್ಣ ದಂಡಿನ್ ಸಾ|| ಮಾರಡಗಿ ಎಸ್.ಎ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 03.07.2016 ರಂದು 11:00 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ
ಸರಕಾರಿ ಪದವಿ ಪೂರ್ವ ಕಾಲೇಜು ಹತ್ತಿರ ನಿಲ್ಲಿಸಿದ್ದ ನನ್ನ ಲಾರಿ ನಂ ಕೆ.ಎ32ಎ4359 ಅ.ಕಿ 5.0೦.೦೦೦/-
ರೂ ನೆದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಮತ್ತು ಕಳ್ಳತನವಾದ ಲಾರಿಯನ್ನು
ಪತ್ತೆ ಹಚ್ಚಿ ಕ್ರಮ ಕೈಕೊಳ್ಳಬೇಕು ಅಂತ ಶ್ರೀ ಅಲ್ಲಾಭಕ್ಷ್ ತಂದೆ ಲಾಲ್ ಅಹ್ಮದ್ ಶೇಖ್
@ ಲಾಲ್ ಮೇತಾಬ್
ಸಾಬ್ ಸಾ|| ಶಾಸ್ತ್ರಿ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment