POLICE BHAVAN KALABURAGI

POLICE BHAVAN KALABURAGI

24 November 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:23/11/2016 ರಂದು ಸಾಯಂಕಾಲ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೋರಾಬಾಯಿ ನಗರ ಬಡಾವಣೆಯ ಆದಿ ಜಾಂಬವ ಶಾಲೆ ಮುಂದೆ  ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೋರಾಬಾಯಿ ನಗರದ ಆದಿ ಜಾಂಬವ ಶಾಲೆ ಧರ್ಮಶಾಲೆಯ ಕಂಪೌಂಡ ಮರೆಯಲ್ಲಿ ನಿಂತು ನೋಡಲು ಅಲ್ಲಿ ಖುಲ್ಲಾ ಸ್ಥಳದ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂತಾ ಇಸ್ಪೀಟ್‌ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿಮಾಡಿ 4 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ತಮ್ಮ ಹೆಸರು 1) ರಾಜು ತಂದೆ ತ್ರೀಮಲರಾವ ತೇಲಂಗಿ ಸಾ:ಬೋರಾಬಾಯಿ ನಗರ ಕಲಬುರಗಿ 2)ಸಂಜುಕುಮಾರ ತಂದೆ ಪರಶುರಾಮ ಹೋಳ್ಕರ ಸಾ:ವಿಜಯ ನಗರ ಕಾಲೋನಿ ಕಲಬುರಗಿ 3) ರಮೇಶ ತಂದೆ ಭೀಮಶಾ ಸಾ:ಬೋರಾಬಾಯಿ ನಗರ ಕಲಬುರಗಿ 4) ಸುಜೀತ ಕುಮಾರ ತಂದೆ ಬಾಬುರಾವ ಗೋಸ್ಲೆ ಸಾ:ಧನಗರಗಲ್ಲಿ ಬ್ರಹ್ಮಪೂರ ಕಲಬುರಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ಒಟ್ಟು 4260=00 ರೂ ಮತ್ತು 52  ಇಸ್ಪೇಟ ಎಲೆಗಗಳುನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಶಂಕರ ಭಾವೇ ಸಾ: ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ರವರ ತಂದೆಯವರು ಈ ಮೊದಲು ತಹಸೀಲ ಕಾರ್ಯಾಲಯದಲ್ಲಿ ಕಾರಕೂನ (ಪಿವ್ಯೂನ) ಅಂತಾ ಕೆಲಸ ನಿರ್ವಹಿಸುತ್ತಿದ್ದು. ಅವರು ಈ ಒಂದು ವರ್ಷದ ಹಿಂದೆ ನಿವೃತ್ತಿಯಾಗಿರುತ್ತಾರೆ. ನಮ್ಮ ತಂದೆಯವರು ಒಂದು ಟಿವಿಎಸ್‌ ಎಕ್ಸ್‌‌ಲ್ ಸೂಪರ ಹೆವಿ ಡ್ಯೂಟಿ ದ್ವೀ ಚಕ್ರ ವಾಹನ ನಂಬರ ಕೆಎ 32 ಈಡಿ-0331 ಯಿದ್ದು. ಅದನ್ನು ತಮ್ಮ ಕೆಲಸಕ್ಕೆ ಉಪಯೋಗಿಸುತ್ತಾ ಬಂದಿದ್ದು ದಿನಾಂಕ 23/11/2016 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಖಾಸಗಿ ಕೆಲಸದ ನಿಮಿತ್ಯ ಉಪ ತಹಸೀಲ್ದಾರ ಕಚೇರಿ ಫರಹತಾಬಾದ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ  ಮನೆಯಿಂದ ತಮ್ಮ ದ್ವೀ ಚಕ್ರವಾಹನದ ಮೇಲೆ ಹೋದರು.ನಂತರ ಮದ್ಯಾಹ್ನ 3:38 ಗಂಟೆಯ ಸುಮಾರಿಗೆ ನಮ್ಮ ತಂದೆಯವರ ಮೋಬೈಲದಿಂದ ನನ್ನ ನಂಬರಿಗೆ ಯಾರೋ ಪೋನ ಮಾಡಿ ತಿಳಿಸಿದೆನೆಂದರೆ ಟಿವಿಎಸ್‌ ಎಕ್ಸ್‌ಲ್‌ ಹೇವಿ ಡ್ಯೂಟಿ ದ್ವೀ ಚಕ್ರ ವಾಹನ ನಂಬರ ಕೆಎ 32 ಈಡಿ-0331 ನೇದ್ದರ ಮೇಲೆ ಇದ್ದವರು ಫರಹತಾಬಾದ ರಿಂಗ ರೋಡ ಹತ್ತಿರ ಬಲಗಡೆ ಊರಲ್ಲಿ ಹೋಗಲು ತಮ್ಮ ವಾಹನ ತಿರುಗಿಸುತ್ತಿದ್ದತೆ ಎದುರಿನಿಂದ ಅಂದರೆ ಜೇವರ್ಗಿ ಕಡೆಯಿಂದ ಒಬ್ಬ ಅಶೋಕ ಲೈಲೆಂಡ್‌ ಮಿನಿ ಗೂಡ್ಸ್‌ ವಾಹನ ನಂಬರ ಕೆಎ 33 ಎ- 2675 ನೇದ್ದರ ಚಾಲಕ ತನ್ನ ವಾಹನ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ತಂದೆಯ ದ್ವೀಚಕ್ರ ವಾಹನಕ್ಕೆ ಡಿಕ್ಕಿ ಪಡೆಯಿಸಿ ಪಲ್ಟಿಯಾಗಿದ್ದು ಅಫಘಾತ ಮಾಡಿದ್ದಾಗ ಮಿನಿ ಗೂಡ್ಸ್‌ ವಾಹನದ ಹಿಂದೆ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಬಂದು ನಿಯಂತ್ರಣ ಕಳೆದುಕೊಂಡು ಸದರಿ ಗೂಡ್ಸ್‌ ವಾಹನದ ಹಿಂಭಾಗಕ್ಕೆ ಹುಡೈ ಕ್ರೇಟಾ ಟಿಪಿ ನಂ ಕೆಎ 32 ಟಿಪಿ ನಂ 020131 ಹಾಯಿಸಿ ಬಲಕ್ಕೆ ಡಿಗ್ರಿ ಕಾಲೇಜ ಸೈಡದಲ್ಲಿ ನಿಂತಿದ್ದು.. ಈ ಅಫಘಾತದಲ್ಲಿ ನಿಮ್ಮ ತಂದೆಯವರಿಗೆ ತಲೆಯ ಮೇಲೆ ಭಾರಿ ರಕ್ತಗಾಯ ಬಲಗಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂಥಾ ತಿಳಿಸಿದ್ದು ನಾವು ಬಂದು ನೋಡಲಾಗಿ ಮೇಲಿನಂತೆ ಭಾರಿ ರಕ್ತಗಾಯವಾಗಿದ್ದರಿಂದ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಠಾಣೆ :ಶ್ರೀಮತಿ ಕಲಾವತಿ ಗಂಡ ಬಂಡೇಪ್ಪ ರಾಜೇಶ್ವರ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ರವರ ಗಂಡನಾದ ಬಂಡೇಪ್ಪ ತಂದೆ ಮಾಣಿಕಪ್ಪ ರಾಜೇಶ್ವರ ಇವರು ಸೂಮಾರು ದಿನಗಳಿಂದ ಮಾನಸಿಕವಾಗಿ ಅಶ್ವಸ್ಥನಾಗಿದ್ದು. ಒಬ್ಬಂಟಿಗನಾಗಿ ತಿರುಗಾಡುತ್ತ ಯಾವುದೋ ವಿಷಯದಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಂತೆ ಇರುತ್ತಿದ್ದು. ಇಂದು ದಿನಾಂಕ:23.11.2016 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನನ್ನ ಗಂಡನು ನಮ್ಮ ಹೋಲದಲ್ಲಿ ಬೆಳೆದ ತೋಗರಿ ಬೆಳೆಗೆ ಹುಳ ಬಂದಿವೆ ಹೋಗಿನೋಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿದ್ದು. ಮದ್ಯಾಹ್ನ 12 ಗಂಟೆಯ ಸೂಮಾರಿಗೆ ಡೊಂಗರಗಾಂವ ಸೀಮಾಂತರದ ನಮ್ಮ ಹೋಲದ ಪಕ್ಕದಲ್ಲಿರುವ ಶ್ರೀ ರೇವಣಸಿದ್ದಪ್ಪ ರಾಂಪೂರೆ ಇವರ ಹೋಲದ ಬಂದಾರಿಯಲ್ಲಿ ಬೆವಿನ ಮರಕ್ಕೆ ಕಬ್ಬಿಣದ ತಂತಿ ಕಟ್ಟಿ ಆ ತಂತಿಗೆ ಟವಾಲ ಸುತ್ತಿಕೊಂಡು ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22-11-2016 ರಂದು  ಜೇವರಗಿ ಠಾಣಾ ವ್ಯಾಪ್ತಿಯ ಕೋಳಕೂರ ಗ್ರಾಮದ ಸಿದ್ದ ಬಸವೇಶ್ವರ ದೇವರ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರು ಜನರು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ನಾಗಬೂಷಣ ಎ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳಕೂರ ಗ್ರಾಮಕ್ಕೆ ಹೋಗಿ ಬಾತ್ಮಿ ಇರುವ  ಜಾಗ ಸ್ವಲ್ಪ ದೂರ ಗುಡಿಯ ಗೊಡೆಯ ಮರೆಯಾಗಿ ನಿಂತು ನೋಡಲು ಸಿದ್ದಬಸವೇಶ್ವರ ಗುಡಿಯ ಪಕ್ಕದ ಸಾರ್ವಜನಿಕ ರಸ್ತೆ ಮೇಲೆ ಇಬ್ಬರು ಮನುಷ್ಯರು ಹೋಗಿ ಬರುವ ಸಾರ್ವನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ಹೆಸರು ವಿಳಾಸ ಕೇಳಲು ಅವನು ತನ್ನ ಹೆಸರು ಸಿದ್ದಣ್ಣ ತಂದೆ ಶಿವಲಿಂಗಪ್ಪ ಕೂಡಿ ಸಾ: ಕೋಳಕೂರ ತಾ: ಜೇವರಗಿ ಅಂತ ಹೇಳಿದನು. ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 6,200=00 ರೂಪಾಯಿ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು , ಒಂದು ಮೊಬೈಲ, ಒಂದು ಟಿ.ವ್ಹಿ.ಎಸ್ ಎಕ್ಸ ಎಲ್ ಮೊಟಾರ ಸೈಕಲ ನಂ ಕೆಎ-32-ಇ.ಎಮ್-4317 ಅ.ಕಿ 15,000/-ರೂ ಸಿಕ್ಕಿದು ಇನ್ನೊಬ್ಬನನ್ನು ವಿಚಾರಿಸಲು ಮಹಬೂಬಸಾಬ ತಂದೆ ಖಾಜಾಸಾಬ ಬುರಾನ ಸಾ: ಕೋಳಕೂರ ಅಂತಾ ತಿಳಿಸಿದ್ದು ಅವನ ಹತ್ತಿರ ನಗದು ಹಣ 5110=00 ರೂ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಒಂದು ಮೋಬೈಲ, ಅವರಿಗೆ ಮಟಾಕ ಚೀಟಿ ಮತ್ತು ಹಣ ಯಾರಿಗೆ ಕೊಡುವ ಬಗ್ಗೆ ಕೇಳಿದಾಗ ಅವರು ಅಪ್ಪಾಸಾಬ ತಂದೆ ಅಯ್ಯಪ್ಪ ಜಾತಿ: ಲಿಂಗಾಯತ ಸಾ: ಅವರಾದ ತಾ: ಕಲಬುರಗಿ ಅಂತ ಹೇಳಿದರು. ಅವರ ಹತ್ತಿರ  ಜಪ್ತ ಮಾಡಿದ ವಸ್ತುಗಳು  ಹೀಗೆ ಒಟ್ಟು ನಗದು ಹಣ 11,310=00 ರೂ, ಎರಡು ಬಾಲ ಪೆನ್ನು, ಎರಡು ಮಟಕಾ ಚೀಟಿಗಳು, ಒಂದು ಮೊಟಾರ ಸೈಕಲ, ಎರಡು ಮೊಬೈಲ ಫೋನ ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: