ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 25/08/16 ರಂದು ಅಂಬರೀಷ ಇತನು ಹಿರೋ ಹೊಂಡಾ ಸ್ಪೆಂಡರ
ಮೋಟಾರ ಸೈಕಲ ನಂ. ಕೆಎ 32 ಇಕೆ 1570 ನೇದ್ದರ ಹಿಂದೆ ಫಿರ್ಯಾದಿಗೆ ಕೂಡಿಸಿಕೊಂಡಿದ್ದು ಮತ್ತು
ಫಿರ್ಯಾದಿ ಹಿಂದೆ ಮೃತ ಸೂರ್ಯಕಾಂತನಿಗೆ ಕೂಡಿಸಿಕೊಂಡು ಯುನಿವರಸಿಟಿಯಿಂದ ಕಲಬುರಗಿ ತಮ್ಮೂರಾದ ಕಲ್ಲಹಂಗರಗಾಕ್ಕೆ ಹೊರಟಿದ್ದು,
ಮಧ್ಯಾಹ್ನ ಹುಮನಾಬಾದ ರಿಂಗ ರೋಡದಿಂದ ರೋಡ ಸೈಡ
ಹಿಡಿದುಕೊಂಡು ನಿಧಾನವಾಗಿ ಆಳಂದ ಚೆಕ್ಕ ಪೋಸ್ಟ್
ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ
ಅಂದರೆ ಸೇಡಂ ರಿಂಗ ರೋಡ ಕಡೆಯಿಂದ
ಟಿಪ್ಪರ ಕೆಎ 32 ಬಿ 2811 ಚಾಲಕನು ತನ್ನ
ಟಿಪ್ಪರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತಿವೇಗದಿಂದ ಮತ್ತು ನಿಷ್ಕಾಳಿಜಿತನಿದಂದ
ನಡೆಯಿಸಿಕೊಂಡು ಬಂದವನೇ ಹಿಂದಿನಿಂದ ಫಿರ್ಯಾದಿಗೆ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು
ಅಪಘಾತಪಡಿಸಿ, ಟಿಪ್ಪರ ಚಾಲಕ ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದು
ಇರುತ್ತದೆ. ಇದರಿಂದಾಗಿ ಮೋಟಾರ ಸೈಕಲ ಮೇಲಿಂದ
ಮೂರು ಜನರು ರೋಡಿನ ಮೇಲೆ ಬಿದ್ದಿದ್ದು, ಇದರಿಂದಾಗಿ ಶ್ರೀಮಂತ ಮತ್ತು ಸೂರ್ಯಕಾಂತ @ ಸುರೇಶ
ಇವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅಂಬರೀಷ ಇತನಿಗೆ ಅಂತಹ ಪೆಟ್ಟಾಗದ ಕಾರಣ
ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲಾ. ಸೂರ್ಯಕಾಂತ @ ಸುರೇಶ ಇತನು ತನಗೆ ಆದ ರಸ್ತೆ
ಅಪಘಾತಗಾಯಗಳಿಂದ ಗುಣ ಮುಖ ಹೊಂದದೇ ಮಧ್ಯಾಹ್ನ
03-20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಶ್ರೀಮಂತ ತಂದೆ ರಾಜೇಂದ್ರ
ಒಡೆಯರಾಜ ಸಾ : ಕಲ್ಲಹಂಗರಗಾ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:
24-08-2016 ರಂದು ಬೆಳಿಗ್ಗೆ ನಾನು ಎಂ.ಆರ್.ಎಂ.ಸಿ ಕಾಲೇಜಿನಲ್ಲಿ
ಕೆಲಸದ ಮೇಲೆ ಇದ್ದಾಗ ಆಗ ನಮ್ಮ ಓಣಿಯ ಆಳಂದದ ಶಶಿಕುಮಾರ ತಂದೆ ಶ್ರೀಕಾಂತ ಪಾಟೀಲ ಇತನು ನನಗೆ
ಪೋನ್ ಮಾಡಿ ತಿಳಿಸಿದ್ದೆನೆಂಧರೆ, ನಾನು ಆಳಂದದಿಂದ ಕಲಬುರಗಿಗೆ ಕೆ.ಎಸ್.ಆರ್.ಟಿ.ಸಿ
ಬಸ್ಸಿನಲ್ಲಿ ಕುಳಿತುಕೊಂಡು ಹೊರಟಿದ್ದೇನು. ಭೀಮಳ್ಳಿ ಕ್ರಾಸ್ ಹತ್ತಿರ ನಮ್ಮ ಬಸ್ಸು
ಬರುತ್ತಿದ್ದಾಗ ನಮ್ಮ ಬಸ್ಸಿನ ಮುಂದುಗಡೆ ಒಬ್ಬ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದು
ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಇನ್ನೊಬ್ಬ ಮೋಟರ್ ಸೈಕಲ್ ಸವಾರ ಬರುತ್ತಿದ್ದು ಎರಡು
ಮೋಟರ್ ಸೈಕಲ್ ಸವಾರನು ತನ್ನ ಮೋಟರ ಸೈಕಲ್ ಗಳನ್ನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಡಿಕ್ಕಿಪಡಿಸಿ ಅಪಘಾತಪಡಿಸಿಕೊಂಡು ರೋಡಿನ ಮೇಲೆ ಇಬ್ಬರೂ
ಮೋಟರ್ ಸೈಕಲ್ ಗಳೊಂದಿಗೆ ಬಿದ್ದಿರುತ್ತಾರೆ. ಆಗ ನಮ್ಮ ಬಸ್ಸು ನಿಂತಿದ್ದು ನಾನು ಕೆಳಗಡೆ ಹೋಗಿ
ನೋಡಲಾಗಿ ಆಳಂದ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಮೋಟರ್ ಸೈಕಲ್ ಸವಾರ ನಿಮ್ಮ ಚಿಕ್ಕಪ್ಪನಾದ ಸಂತೋಷ ತಂದೆ ಸಂಗಣಪ್ಪ ಪಾಟೀಲ ಇತನು
ಇದ್ದು ಸದರಿಯವನಿಗೆ ತುಟಿಗೆ, ಗದ್ದಕ್ಕೆ,
ಭಾರಿ ರಕ್ತಗಾಯ. ತಲೆಗೆ ಗುಪ್ತ ಗಾಯವಾಗಿ
ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದು ಎಡಕಾಲು ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು
ಎಡಕಾಲ ಹಿಮ್ಮಡಿಯ ಮೇಲಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಕಲಬುರಗಿ
ಕಡೆಯಿಂದ ಆಳಂದ ಕಡೆಗೆ ಬರುತ್ತದ್ದ ಮೋಟರ್ ಸೈಕಲ್ ಸವಾರನಿಗೆ ನೋಡಲಾಗಿ ಆತನಿಗೆ ಹಣೆಗೆ ತಲೆಯ
ಹಿಂದೆ, ಮತ್ತು ಕಾಲುಗಳಿಗೆ ಭಾರಿ ರಕ್ತಗಾಯ ಮತ್ತು ಗುಪ್ತ
ಗಾಯಗಳಾಗಿರುತ್ತವೆ. ಆತನಿಗೆ ಹೆಸರು ಕೇಳಲಾಗಿ ಶಾಂತಲಿಂಗ ತಂದೆ ರವೀಂದ್ರ ಚಿಂಚೊಳ್ಳಿ ಸಾ: ಗೋಳಾ
ಬಿ ಹಾವ: ಜಿಆರ್ ನಗರ ಕಲಬುರಗಿ ಅಂತಾ ತಿಳಿಸಿದನು. ಚಿಕ್ಕಪ್ಪನ ಮೋಟರ್ ಸೈಕಲ್ ನೋಡಲಾಗಿ ಅದು
ಹೊಂಡಾ ಶೈನ್ ಕಂಪನಿಯದಿದ್ದು ಅದರ ನಂ ಕೆಎ 32 ಡಬ್ಲೂ 3623 ಅಂತಾ ಇರುತ್ತದೆ ಮತ್ತು ಕಲಬುರಗಿ ಕಡೆಯಿಂದ ಬರುತ್ತಿದ್ದ ಶಾಂತಲಿಂಗ ಈತನ ಮೋಟರ್ ಸೈಕಲ್ ಬಜಾಜ
ಪಲ್ಸರ್ ಕಂಪನಿಯದಿದ್ದು ಅದರ ನಂ ಕೆಎ 32 ಇಸಿ 1248 ಅಂತಾ ಇರುತ್ತದೆ ಯಾರೋ 108
ಅಂಬುಲೆನ್ಸ್ ಗೆ ಪೋನ್ ಮಾಡಿದ್ದು ಅಂಬುಲೆನ್ಸ ಬಂದಿದ್ದು ಅದರಲ್ಲಿ ಇಬ್ಬರನ್ನು ಹಾಕಿಕೊಂಡು
ಕಲಬುರಗಿಯ ತಂದು ಶಾಂತಲಿಂಗ ಈತನಿಗೆ ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಚಿಕ್ಕಪ್ಪ ಸಂತೋಷ
ಇವರಿಗೆ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೆನೆ ನೀವು ಅಲ್ಲಿಗೆ ಬನ್ನಿರಿ ಅಂತಾ
ತಿಳಿಸಿದ್ದು ನಾನು ಗಾಬರಿಗೊಂಡು
ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ತಮ್ಮ ಸಂತೋಷ ಈತನಿಗೆ ನೋಡಲಾಗಿ ಹಕಿಕತ್
ನಿಜವಿದ್ದು ಆತನಿಗೆ ನೋಡಲಾಗಿ ನನ್ನ ತಮ್ಮನಿಗೆ ತುಟಿಗೆ ಗದ್ದಕ್ಕೆ, ಹರಿದ
ಭಾರಿ ರಕ್ತಗಾಯ ತಲೆಗೆ ಗುಪ್ತಗಾಯವಾಗಿ ಮೂಗನಿಂದ ರಕ್ತ ಸ್ರಾವವಾಗುತ್ತಿದ್ದು ಎಡಕಾಲು ತೊಡೆಗೆ ,ಹಿಮ್ಮಡಿಯ
ಮೇಲ್ಬಾಗಕ್ಕೆ ಭಾರಿಗುಪ್ತ ಗಾಯವಾಗಿ ಮುರಿದಂತೆ ಆಗಿರುತ್ತದೆ ನಂತರ ವೈದ್ಯಾಧಿಕಾರಿಳು ನಮ್ಮ
ತಮ್ಮನಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀಮತಿ ನಿರ್ಮಲಾ ಗಂಡ ಹಣಮಂತರಾವ ಕವಾಡೆ ಸಾ: ಸಂಗಮೇಶ್ವರ ಕಾಲೋನಿ
ಎಸ್.ಬಿ ಕಾಲೇಜ್ ಹತ್ತಿರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಲಕ್ಷ್ನಣ ತಂದೆ
ಭೀಮಶ್ಯಾ ಮುದ್ನಾಳ ಸಾ; ಸೊಂತ ತಾ;ಜಿ ಕಲಬುರಗಿ ಇವರು ದಿನಾಂಕ:23.08.2016 ರಂದು ರಾತ್ರಿ ಸೊಂತ ಗ್ರಾಮದ ಮನೋಹರ ಮುದ್ನಾಳ ಇವರ ಮನೆಯ ಹತ್ತೀರ ಹೋಗಿ ನನಗೆ
ಸಾಲ ಬಹಾಳ ಆಗಿದ್ದು. ನಾನು ಕೆಲಸ ಮಾಡಿದ ಬಾಕಿ 8 ಸಾವಿರ ರುಪಾಯಿಗಳನ್ನು ಕೊಡು ಅಂತಾ ಕೇಳಿದಾಗ ಮನೋಹರ ಇವರು ಸದ್ಯ ನನ್ನ ಹತ್ತೀರ ರೋಕ್ಕ ಇಲ್ಲಾ ಅಂತಾ
ಹೇಳಿದ್ದು. ಆಗ ನಾನು ನನಗೆ ಕೋಡಬೇಕಾದ ರೋಕ್ಕ ಕೋಡದೆ ಸತಾಯಿಸುವುದು ಸರಿಯಲ್ಲಾ ಅಂತಾ ಹೇಳಿದಾಗ
ಮನೋಹರ ಇವರು ನನಗೆ ಹೋಗಲೆ ಸೂಳೆ ಮಗನೆ ನಮ್ಮ ಹತ್ತೀರ ರೋಕ್ಕ ಇಲ್ಲಾ ಅಂತಾ ಹೇಳಿದ್ದರು ಮನೆ ಮುಂದ
ನಿಂತು ನಮ್ಮ ಮರ್ಯಾದೆ ತೆಗಿತಿ ಅಂತಾ ಹೋಲಸಾಗಿ ಬೈಯುತ್ತ ಮನೋಹರ ಮುದ್ನಾಳ
ಅಂಬಣ್ಣ ಮುದ್ನಾಳ ಮತ್ತು ಸಂಜು ಮುದ್ನಾಳ ಇವರು ನನಗೆ ಏಳೆದುಕೊಂಡು ಅವರ ಮನೆಯ ಹತ್ತೀರ ಇರುವ
ನಿರಿನ ಟಾಕಿ ಹತ್ತೀರ ತಂದು ಮನೋಹರ ಇವನು ಕಲ್ಲಿನಿಂದ ನನ್ನ ತಲೆಯ ಬಲಭಾಗಕ್ಕೆ ಹೋಡೆದು ರಕ್ತಗಾಯ
ಮಾಡಿದ್ದು. ಅಲ್ಲದೆ ನನ್ನ ಹಣೆಯ ಮಧ್ಯದಲ್ಲಿ ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿದನು. ಅಂಬಣ್ಣ
ಇವನು ತನ್ನ ಕಾಲಿನಿಂದ ನನ್ನ ಎಡಕಾಲ ಮೋಣಕಾಲಿಗೆ ಜೋರಾಗಿ ಒದ್ದಾಗ ನಾನು ಜೋಲಿ ಹೋಗಿ ಕೆಳಗೆ
ಬಿದ್ದೇನು. ಆಗ ಸಂಜು ಇವನು ನನ್ನ ಹೋಟ್ಟೆ ಮೇಲೆ ಕುಂತು ನನ್ನ ಎದೆಯ ಮೇಲೆ ಕೈಯಿಂದ ಹೋಡೆದು ನನ್ನ
ಎದೆಯ ಎಡಬಾಗಕ್ಕೆ ಚೂರಿದನು. ಆಗ ನಾನು ಅಂಜಿ ಚಿರಾಡುತ್ತಿದ್ದು ನನಗೆ ಹೋಡೆಯುತ್ತಿದ್ದನ್ನು
ನಿಂತು ನೋಡುತ್ತಿದ್ದ ನಮ್ಮೂರ ಆಕಾಶ ಮತ್ತು ಇಂದುಬಾಯಿ ಇವರು ಬಂದು ನನಗೆ ಹೋಡೆಯುದನ್ನು ಬಿಡಿಸಿ
ಕಳಿಸುತ್ತಿದ್ದಾಗ ಮನೋಹರ ಇವನು ರಂಡಿ ಮಗನೆ ಮುಂದೆ ಏನಾದರು ರೋಕ್ಕ ಕೊಡು ಅಂತಾ ನಮಗೆ ಕೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಮಿನಾಶಕ
ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಫರತಾಬಾದ
ಠಾಣೆ : ಶ್ರೀಮತಿ ಬಸಮ್ಮ ಗಂಡ
ಕಲ್ಲಪ್ಪ ಮಾಳಬೋ ಮು: ಮಂದರವಾಡ ತಾ: ಜೇವರ್ಗಿ ಜಿ: ಕಲಬುರಗಿ ರವರ ಮಗಳಾದ ಜೈಯಶ್ರೀ ಇವಳಿಗೆ ದಿನಾಂಕ 10/07/16
ರಂದು ಸರಡಗಿ (ಬಿ) ಗ್ರಾಮದ ದೇವಿಂದ್ರಪ್ಪಾ ತಂದೆ ದಿ: ಸುಭಾಷ ಲಕ್ಕಬೋ ಎಂಬುವವರಿಗೆ ಧಾರ್ಮಿಕ ಪದ್ದತಿಯಂಯೆ ಫರಹತಾಬಾದ
ಶರಣಬಸವೇಶ್ವರ ದೇವಸ್ಥಾನದಲ್ಲಿ
ಮದುವೆ ಮಾಡಿದ್ದು ಇದೆ ನನ್ನ ಮಗಳು ಜಯಶ್ರೀ ಅಳಿಯ ದೇವಿಂದ್ರಪ್ಪ
ಒಬ್ಬರಿಗೋಬ್ಬರು ಪ್ರೀತಿಯಿಂದ
ಇದ್ದು ಅವಳಿಗೆ ಅವಳ ಗಂಡನ ಮನೆಯಲ್ಲಿ ಆಕೆಯ
ಅತ್ತೆ ಮೈದುನ ತೊಂದರೆ ಕೂಡ
ಇದ್ದಿರುವುದಿಲ್ಲಾ ಎಲ್ಲರೂ ನನ್ನ ಮಗಳಿಗೆ
ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.ನನ್ನ ಮಗಳಿಗೆ ಆಗಾಗ ಹೊಟ್ಟೆ ಕಡೆಯುತ್ತಿದ್ದು ತೋರಿಸಿದರು
ಕಡಿಮೆಯಾಗಿರುವುದಿಲ್ಲಾ ದಿನಾಂಕ 17/08/2016 ರಂದು ನನ್ನ ಮಗಳ ಗಂಡ ಅಳಿಯ ದೇವಿಂದ್ರಪ್ಪಾ ನಮ್ಮ
ಊರಿಗೆ ಬಂದು ನನ್ನ ಮಗಳಿಗೆ
ಕರೆದುಕೊಂಡು
ಸರಡಗಿ (ಬಿ) ಗ್ರಾಮಕ್ಕೆ ಹೋದನು ದಿನಾಂಕ 18/08/16 ರಂದು
ಮದ್ಯಾಹ್ನ ಒಂದು ಗಂಟೆ ಸುಮಾರಿಗೆ
ನನ್ನ ಮಗಳು
ಹೊಟ್ಟೆ ಕಡೆಯುತ್ತಿದೆ ಎಂದು ಹೇಳಿರುವದರಿಂದ ಆಕೆಗೆ ಕಲಬುರಗಿಯ
ಸ್ಪರ್ಶ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ ಕೂಡಲೇ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು
ನನ್ನ ಮಗ ಮಲ್ಲಿಕಾರ್ಜುನ ಕುಸನೂರು ಗ್ರಾಮದಲ್ಲಿರುವ ಇನ್ನೊಬ್ಬ ಮಗಳು ಈಶಮ್ಮ
ಗಂಡ ಲಿಂಗಪ್ಪ ಜಾಪೂರ ಕೂಡಿ ದವಾಖಾನೆಗೆ ಬಂದು ನೋಡಲಾಗಿ ನನ್ನ ಮಗಳು ಪ್ರಜ್ಞೆಯಲ್ಲಿ ಇರಲಿಲ್ಲಾ
ಅಲ್ಲಿ ಉಪಚಾರ ಪಡೆದು ಹೆಚ್ಚಿನ
ಉಪಚಾರಕ್ಕಾಗಿ ದಿನಾಂಕ 23/08/2016 ರಂದು ಬಸವೇಶ್ವರ ಆಸ್ಪತ್ರೆ ಕಲಬರುಗಿಗೆ
ತಂದು ದಾಖಲು ಮಾಡಿದ್ದು ನನ್ನ ಮಗಳು ತನಗಾದ ಹೊಟ್ಟೆ ನೋವಿನ ತಾಪ ತಾಳದೇ ಯಾವುದೋ ಕ್ರೀಮಿನಾಶಕ ಜೌಷದ
ಕುಡಿದಿದ್ದು ಆಕೆ ಉಪಚಾರ ಹೊಂದುತ್ತಾ
ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 24/08/2016 ರಂದು
ಮದ್ಯಾಹ್ನ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment