POLICE BHAVAN KALABURAGI

POLICE BHAVAN KALABURAGI

13 August 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 12.08.2016 ರಂದು ಮದ್ಯಾಹ್ನ ಶಹಾಬಜಾರದ ರಾಜಶೇಖರ ಕಾಂಪ್ಲೇಕ ಹತ್ತಿರದ ಸಾರ್ವಜನಿಕ ರಸ್ತೆಯ ಹತ್ತಿರ ಇಬ್ಬರು ವ್ಯಕ್ತಿಗಳು ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಹೇಳಿ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಶೇಖರ .ವಿ. ಹಳಗೋದಿ ಪಿ. ಚೌಕ ಠಾಣೆ ಕಲಬುರಗಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರಾಜಶೇಖರ ಕಾಂಪ್ಲೆಕ್ಸ್‌  ಹತ್ತಿರ ರಸ್ತೆಯ ಬದಿಯಲ್ಲಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರು ವ್ಯಕ್ತಿಗಳು  ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು  ಚೀಟಿಯ ಮೇಲೆ ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬನು ಓಡಿ ಹೋಗಿದ್ದು ಒಬ್ಬನಿಗೆ  ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ  ಹೆಸರು ಲಕ್ಷ್ಮಣ ತಂದೆ ಬಾಲಚಂದ್ರ ಮದನ್ನೆ ಸಾಃ ಜಿಡಿಎ ಕಾಲೋನಿ ಶಹಾಬಜಾರ ಕಲಬುರಗಿ  ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 12,000/- ರೂ, ಎರಡು ಮಟಕಾ ಚೀಟಿ, ಒಂದು ಬಾಲಪೆನ್ನು ಒಂದು ಮೋಬೈಲ್‌ ಅಃಕಿಃ 500/- ಹೀಗೆ ಒಟ್ಟು 12500/- ಬೆಲೆ ಬಾಳುವ ಮಟಕಾ ಜೂಜಾಟಕ್ಕೆ ಸಂಬಂದಪಟ್ಟ ಮುದ್ದೆ ಮಾಲು ವಶಪಡಿಸಿಕೊಂಡು ಓಡಿ ಹೋದವನ ಬಗ್ಗೆ ವಿಚಾರಿಸಲು ನಾಗಪ್ಪ ಜಗತಾಪ್ಪ ಸಾಃ ಕಾವೇರಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿವನನನ್ನು ವಶಕ್ಕೆ ತೆಗೆಕೊಂಡು ಚೌಕ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಕಲಿ ಡಾಬರ ಗುಲಾಬೇರಿ ಗುಲಾಬಜಲ ತಯ್ಯಾರು ಮಾಡಿ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ಶ್ರೀ ನೀರಜ ತಂದೆ ರಾಮತೀರ್ಥ ಗೌಡ ಸಾ:ಟಿ.ಕಾಲಿ ಮಠ ಸಾ:ಟಿ.ಕಾಲಿ ಮಠ ಸೇವಾ ಸಂಘ ಸಂಜಯ ಗಾಂಧಿ ನಗರ ಜನತಾ ಕಾಲೋನಿ ರೋಡ ಜೊಗೇಶ್ವರಿ ಮುಂಬಯಿ ಇವರು ಡಾಬರ ಗುಲಾಬೇರಿ ಗುಲಾಬಜಲ ಸಾಮಾನುಗಳಂತೆ ಕಲಬುರಗಿ ನಗರದ ಲಾಲಗೇರಿ ಬಡಾವಣೆ ಒಂದು ಮನೆಯಲ್ಲಿ ನಕಲಿ ಬಾಟಲಗಳು ತಯ್ಯಾರಾಗುತ್ತಿವೆ. ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಅರ್ಜಿ ಸಲ್ಲಿಸಿದ್ದರಿಂದ ಸದರಿ ಮನೆಯ ಮೇಲೆ ದಾಳಿ ಮಾಡುವಗೋಸ್ಕರ ಮಾನ್ಯ 2ನೇ ಹೆಚ್ಚುವರಿ ಜೆ.ಎಂ.ಎಫ್‌‌.ಸಿ ಕೋರ್ಟ ಕಲಬುರಗಿರವರಲ್ಲಿ ಪತ್ರದ ಮೂಲಕ ಪರವಾನಿಗೆ ಪಡೆದುಕೊಳ್ಳಲಾಗಿದೆ. ಮಾನ್ಯ ಪೊಲೀಸ ಅಧೀಕ್ಷಕರು, ಮಾನ್ಯ ಅಪರ ಪೊಲೀಸ ಅಧೀಕ್ಷಕರು ಮತ್ತು ಪೊಲೀಸ ಉಪಾಧೀಕ್ಷಕರು ಉಪ-ವಿಭಾಗ ಕಲಬುರಗಿರವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಗೋಸ್ಕರ ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಾಲಗೇರಿ, ಅಂಭಾ ಭವಾನಿ ಗುಡಿ ಹತ್ತಿರ ಸದರಿ ಮನೆಯ ಮುಂದೆ ಹೋಗಿ ನೋಡಲು ಮನೆಯ ಒಳಗೆ ಆವರಣದಲ್ಲಿ ಒಬ್ಬ ಮನುಷ್ಯ ಮತ್ತು ಒಬ್ಬ ಹೆಣ್ಣು ಮಗಳು ಕೂಡಿಕೊಂಡು ಬಾಟಲಗಳು ಮುಂದೆ ಇಟ್ಟು ಅದರ ಮೇಲೆ ಲೇಬಲ್‌ ಹಚ್ಚುತ್ತಿದ್ದರು. ಇದನ್ನು ನೋಡಿ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ತಮ್ಮ ಹೆಸರು 1)ಚಂದ್ರಕಾಂತ ತಂದೆ ಹಣಮಂತರಾವ ಸಾ:ಲಾಲಗೇರಿ ಅಂಭಾಬಾಯಿ ಗುಡಿ ಹತ್ತಿರ ಬ್ರಹ್ಮಪೂರ ಕಲಬುರಗಿ 2) ವಿಜಯಲಕ್ಷ್ಮೀ ಗಂಡ ಚಂದ್ರಕಾಂತ ಕೀರಸಾವಳಗಿ ಸಾ:ಅಂಭಾ ಭವಾನಿ ಗುಡಿ ಹತ್ತಿರ ಲಾಲಗೇರಿ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದರು. ಅವರ ಮುಂದೆ ಇದ್ದ ಬಾಟಲಿಗಳು ನೋಡಲು 30 ಎಂ.ಎಲ್‌‌ ವುಳ್ಳ ಡಾಬರ ಗುಲಾಬೇರಿ ಗುಲಾಬಜಲ ಅಂತಾ ಬರೆದ ತುಂಬಿದ ಒಟ್ಟು 63 ಬಾಟಲಗಳು ಒಂದು ಬಾಟಲಿನ ಬೆಲೆ 20/-ರೂ ಹೀಗೆ 63 ಬಾಟಲಿನ ಒಟ್ಟು ಅ.ಕಿ.1260/-ರೂ ಬೆಲೆ ಬಾಳುವದು ಮತ್ತು ಅದೇ ಡಾಬರ ಗುಲಾಬೇರಿ ಗುಲಾಬಜಲ ಅಂತಾ ಬರೆದ 30 ಎಂ.ಎಲ್‌‌ ಅಂತಾ ಬರೆದ 475 ಖಾಲಿ ಬಾಟಲಿಗಳು ಅ.ಕಿ.00 ಮತ್ತು Tracer ಕಂಪನಿಯ 10 ಎಂ.ಎಲ್‌‌ ಅಂತಾ ಬರೆದ ಒಟ್ಟು 109 ಖಾಲಿ ಬಾಟಲಿಗಳು ಅ.ಕಿ.00 ಮತ್ತು ಬಾಟಲ ಮೇಲೆ ಹಚ್ಚುವ ಡಾಬರ ಗುಲಾಬೇರಿ ಗುಲಾಬಜಲ ಅಂತಾ ಬರೆದ ಸ್ಟೀಕರಗಳು ಮತ್ತು Tracer ಅಂತಾ ಬರೆದ ಸ್ಟೀಕರಗಳು ಮತ್ತು ಒಂದು 5 ಲೀಟರ ಖಾಲಿ ಬಿಳಿ ಬಣ್ಣದ ಪ್ಲಾಸ್ಟೀಕ ಕ್ಯಾನ ಅ.ಕಿ.00 ಸದರಿ ಬಾಟಲಿಗಳು ಎಲ್ಲಿಂದ ತಂದಿರುವಿರಿ ಈ ಬಗ್ಗೆ ನಿಮ್ಮ ಹತ್ತಿರ ಯಾವುದಾದರೂ ರಶೀದಿ ವಗೈರೆ ಇದೇಯಾ ಅಂತಾ ಕೇಳಿದಾಗ ಅವರು ನಮಗೆ ಒಂದು ತಿಂಗಳ ಹಿಂದೆ ಒಬ್ಬ ಅಪರಿಚಿತ ವ್ಯಕ್ತಿ ಬಂದು ನನ್ನ ಹೆಸರು ರಾಜುರಾಮ ಮಹೇಲ ನನ್ನ ಮೊಬೈಲ ನಂ.9445550111 ಇರುತ್ತದೆ ನೀವು ಇವುಗಳನ್ನು ಮಾರಾಟ ಮಾಡಿರಿ ಇದರಲ್ಲಿ ನಿಮಗೆ ಕೂಡ ಹಣ ಕೊಡುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ. ಆದರೆ ಅವನ ವಿಳಾಸ ನಮಗೆ ಗೊತ್ತಿರುವದಿಲ್ಲಾ ಅವನಿಗೆ ನೋಡಿದರೆ ಗುರುತಿಸುತ್ತೇವೆ ಅಂತಾ ತಿಳಿಸಿರುತ್ತಾರೆ. ಸ್ಥಳದಲ್ಲಿ ನಮ್ಮ ಜೊತೆ ಬಂದಿದ್ದ ಸದರಿ ನೀರಜ ಈತನು ಈ ಎಲ್ಲಾ ಡಾಬರ ಗುಲಾಬೇರಿ ಗುಲಾಬಜಲ್‌‌ ಬಾಟಲಿಗಳು ನಮ್ಮ ಕಂಪನಿಯ ತಯಾರಿಕೆ ಮಾಡಿದ ಬಾಟಲಿಗಳು ಇರುವದಿಲ್ಲಾ ಇವು ಬಾಟಲಗಳ ಮೇಲೆ ನಕಲಿ ಲೇಬಲ ಹಾಕಿ ನಮ್ಮ ಕಂಪನಿಯಂತೆ ಮಾಡಿರುತ್ತಾರೆ ಅಂತಾ ಹೇಳಿದ್ದರಿಂದ ಸದರಿ ಮುದ್ದೆಮಾಲು ಮುಂದಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡಿರುತ್ತೇನೆ. ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಾಯಿಲೆಯಿಂದ ಗುಣಮುಖವಾಗದೆ ಅನಾಥ ಬಾಲಕಿ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಕು.ಸೌಮ್ಯ ವ:8 ವರ್ಷ ಬಾಲಕಿಯು ಅನಾಥಳಾಗಿದ್ದು ದಿನಾಂಕ: 21-07-2014 ಕಲಬುರಗಿ ಮಕ್ಕಳ ಸಹಾಯವಾಣಿ ಇವರ ಮೂಲಕ ಸಂಸ್ಥೆಗೆ ದಾಖಲಾಗಿದ್ದು ಸದರಿ ಬಾಲಕಿಯನ್ನು ಒಳ ರೋಗಿಯಾಗಿ ಜಿಲ್ಲಾ ಸರ್ಕಾರಿ  ಆಸ್ಪತ್ರೆ ಕಲಬುರಗಿಗೆ ದಿನಾಂಕ: 25-04-2016 ರಿಂದ 29-04-2016 ರ ವರೆಗೆ  ಐದು ದಿನ ದಿನಾಂಕ: 05-05-2016 ರಿಂದ 19-05-2016 ರ ವರೆಗೆ ಇಪ್ಪತ್ತು ದಿನ ಮತ್ತು ದಿನಾಂಕ:24-07-2016 ರಿಂದ 28-07-2016 ರ ವರೆಗೆ ಮೂರು ದಿನ ದಾಖಲು ಮಾಡಲಾಗಿದ್ದು ದಿನಾಂಕ 10-082016 ರಂದು ಬೆಳಗ್ಗೆ  ವೈದ್ಯಕೀಯ ತಪಾಸಣೆ ನಿಮಿತ್ಯವಾಗಿ ಜಿಲ್ಲಾ ಆಸ್ಪತ್ರೆ ಕಲಬುರಗಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ವೈದ್ಯರು ಮಾತ್ರೆಗಳು ಹಾಗೂ ಔಷಧವನ್ನು ಕೊಟ್ಟಿರುತ್ತಾರೆ. ಇದೇ ಸಾಯಂಕಾಲ 6.30 ಕ್ಕೆ ತುರ್ತು ಚಿಕಿತ್ಸಾ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು ಸದರಿ ಬಾಲಕಿಯು ಅನಾಥಳಿದ್ದು ಪೋಷಕರು ಇರುವದಿಲ್ಲ. ಬಾಲಕಿಯ ವಯಸ್ಸು ಸದ್ಯ 08 ವರ್ಷವಿದ್ದು ವೈದ್ಯರು ಚಿಕಿತ್ಸೆ ನೀಡಿ ಇವಳ ಶ್ರೀಮತಿ ನಿಂಗಮ್ಮ ಆಯಾ ಹಾಗೂ ಸ್ಟಾಫನರ್ಸ, ಗೃಹಪಾಲಕಿ ಸದರಿ ಸಿಬ್ಬಂದಿಗಳು ಬಾಲಕಿಯನ್ನು ತಕ್ಷಣದಲ್ಲಿ ರಾತ್ರಿ 6.30 ಗಂಟೆಗೆ ಆಟೋರಿಕ್ಷಾದಲ್ಲಿ ಕರೆದುಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಲಾಯಿತು. ಆ ಸಮಯದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸದರಿ ಬಾಲಕಿಯನ್ನು ತಪಾಸಣೆಗೊಳಿಸಿ ಬಾಲಕಿಯು ಮತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಭೀಮರಾಯ ಅಧೀಕ್ಷಕರು ಸರಕಾರಿ ಬುದ್ದಿ ಮಾಂದ್ಯ ಬಾಲಕಿಯರ ಬಾಲಮಂದಿರ ಸಂತೋಷ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶರಣಪ್ಪಾ ಅರಗೆನವರ ಸಾ:ಬೋರಾಬಾಯಿ ನಗರ ಕಲಬುರಗಿ ಇವರು ದಿನಾಂಕ: 11-08-2016 ರಂದು ರಾತ್ರಿ ನಮ್ಮ ಮನೆಗೆ ಮೂರು ಜನ ಬಂದು ಯಲ್ಲಪ್ಪಾ ಅಂತಾ ಕೂಗಿ ಕರೆದಾಗ ನಾನು ರೂಮೀನಿಂದ ಹೊರಗೆ ಬಂದಾಗ ಕೆಲಸ ಇದೆ ಬಾ ಅಂತಾ ಕರೆದುಕೊಂಡು ಕನಕನಗರ ಗಾರ್ಡನ ಹತ್ತಿರ ಕುಳಿತುಕೊಂಡೆವು ನೀನು ಕೆಲಸ ಮಾಡುತ್ತಿ ಅಂತಾ ಕೇಳಿದರು. ಆಗ ನಾನು ಪಾಲಿಸ ಪರ್ಶಿ ಕೆಲಸ ಮಾಡುತ್ತೇನೆ ನೀನು ನಮ್ಮಿಂದ ಹಣ ತೆಗೆದುಕೊಂಡಿದ್ದಿ ಹಣ ಕೊಡುತ್ತಿಲ್ಲ ಭೋಸಡಿ ಮಗನೆ ಎಂದು ಬೈಯುತ್ತಾ ಅಲ್ಲೇ ಇದ್ದ ಒಂದು ಬೀದರ ಬಡಿಗೆಯಿಂದ ನನ್ನ ಮೋಳಕಾಲ ಕೆಳಗೆ ಮತ್ತು ಎಡ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು. ಉಳಿದ ಇಬ್ಬರೂ ನಾಳೆ ನಿಮ್ಮ ಮನೆಗೆ ಬರುತ್ತೇವೆ ಹಣ ಹೊಂದಿಸಿ ಇಡು ಎಂದು ನನಗೆ ಕೈಯಿಂದ ಬೆನ್ನಿನ ಮೇಲೆ ಮುಖದ ಮೇಲೆ ಹೊಡೆದಿರುತ್ತಾರೆ ಆಗ ಸಮಯ ರಾತ್ರಿ 12.30 ಗಂಟೆ ಆಗಿರಬಹುದು ಅವರು ನನಗೆ ಬಿಟ್ಟು ಹೋಗಿರುತ್ತಾರೆ, ನಾನು ರಾತ್ರಿ ಮನೆಯಲ್ಲಿ ಮಲಗಿ ಕೊಂಡೆನು. ಬೆಳಗ್ಗೆ ನನ್ನ ತಂಗಿ ನಾಗಮ್ಮ ಇವಳು ನೋಡಿ ಏನಾಗಿದೆ ಅಂತಾ ಕೇಳಿದಳು ರಾತ್ರಿ ನಡೆದ ವಿಷಯ ಅವಳಿಗೆ ತಿಳಿಸಿದೆನು. ಆಗ ನಮ್ಮ ತಂಗಿ ನಮ್ಮ ಅಕ್ಕ ವಿಜಯಲಕ್ಷ್ಮೀ ಇವಳಿಗೆ ಮನೆಗೆ ಹೋಗಿರಿ ಅಂತಾ ಹೇಳಿದಾಗ ನನ್ನ ಅಕ್ಕ ವಿಜಯಲಕ್ಷ್ಮೀ ಇವಳು ಆಟೋ ರಿಕ್ಷಾದಲ್ಲಿ ಇಂದು ದಿನಾಂಕ:12/08/2016 ರಂದು ಮಧ್ಯಾನ 1.30 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಸಿದ್ದಲಿಂಗ ತಂದೆ ಸುಲ್ತಾನಪ್ಪಾ ಸಾ:ವಿಜಯ ನಗರ ಕಾಲೋನಿ ಬ್ರಹ್ಮಪೂರ ಕಲಬುರಗಿ ಇವರು  ದಿನಾಂಕ: 07-08-2016 ರಂದು ರಾತ್ರಿ ತನ್ನ ಮಕ್ಕಳಾದ ರೋಹಿತ ಮತ್ತು ರೂಪಾ ಇವರು ನಮ್ಮ ಮನೆಯ ಮುಂದೆ ಆಟವಾಡುತ್ತಾ ಒಬ್ಬರಿಗೊಬ್ಬರೂ ಜಗಳ ಮಾಡುತ್ತಿರುವಾಗ ನಾನು ಏಕೆ ಜಗಳ ಮಾಡುತ್ತಿರಿ ಅಂತಾ ಬೈಯುತ್ತಿರುವಾಗ ಅದೆ ವೇಳೆಯಲ್ಲಿ ಸದರಿ ಲಕ್ಷ್ಮಣ ಸೇರಿಕಾರ ಇತನ ಮಗ ಚಂದ್ರಕಾಂತ ಇತನು ಬಂದು ಏ ಭೋಸಡಿ ಮಗನೆ ಸಿದ್ದಲಿಂಗ ನೀನು ಯಾರಿಗೆ ಬೈಯುತ್ತಿದ್ದಿ ಅಂತಾ ಕೇಳಿದಾಗ ನಾನು ನನ್ನ ಮಕ್ಕಳಿಗೆ ಬೈಯುತ್ತಿದ್ದೆನೆ ಏಕೆ ಜಗಳ ಮಾಡುತ್ತಿರಿ ಅಂತಾ ಹೇಳಿದಾಗ ಅವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ಭೋಸಡಿಕೆ ನೀನು ನನಗೆ ಬೈಯುತ್ತಾ ಇದ್ದಿ ಸೂಳೆ ಮಗನೆ ಅಂತಾ ಒಂದು ಸೆಂಟ್ರೀಂಗ ಫಳಿ ತೆಗೆದುಕೊಂಡು ನನ್ನ ಎಡಗಡೆ ಹಣೆಯ ಮೇಲೆ, ಎಡ ಭುಜದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಅದೆ ವೇಳೆಯಲ್ಲಿ ಆತನ ಮಗ ನಿಧಿ ಮತ್ತು ಆತನ ತಂದೆ ಲಕ್ಷ್ಮಣ ಸೇರಿಕಾರ, ಆತನ ತಾಯಿ ಲಕ್ಷ್ಮೀಬಾಯಿ ಇವರೆಲ್ಲರೂ ಬಂದವರೆ ನನ್ನ ಜೊತೆಯಲ್ಲಿ ಜಗಳಕ್ಕೆ ಬಿದ್ದು ನಿಧಿ ಇತನು ಏ ಭೋಸಡಿ ಮಗನೆ ಸಿದ್ದಲಿಂಗ ನೀನು ನನ್ನ ತಂದೆಯವರ ಜೊತೆಯಲ್ಲಿ ಏಕೆ ಜಗಳ ಮಾಡುತ್ತಿದ್ದಿ ಈಗ ನಿನ್ನ ಸುದ್ದಿ ಏನಿದೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿ ಒಂದು ಇಟ್ಟಂಗಿ ತುಕಡಿಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಲಕ್ಷ್ಮಣ ಸೇರಿಕಾರ ಈತನು ಏ ಸಿದ್ದಲಿಂಗ ನನ್ನ ಮಗನ ಜೊತೆಯಲ್ಲಿ ಏಕೆ ಜಗಳ ಮಾಡುತ್ತಿ ಅಂತಾ ಒಂದು ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಲಕ್ಷ್ಮೀಬಾಯಿ ಗಂಡ ಚಂದ್ರಕಾಂತ ಇವಳು ಬಾಡು, ಹಾಟಿಯಾ ಅಂತಾ ಬೈಯುತ್ತಾ ನನಗೆ ಕೈಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾಳೆ. ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: