POLICE BHAVAN KALABURAGI

POLICE BHAVAN KALABURAGI

10 August 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ತೊಡಗಿದವರ ಬಂಧನ :
ಚೌಕ ಠಾಣೆ : ದಿನಾಂಕ 09.08.2016 ರಂದು ಮದ್ಯಾಹ್ನ ಸಿಟಿ ಬಸ್ ಸ್ಟ್ಯಾಂಡ್ ಹತ್ತೀರದ ಕನಿಷ್ಕಾ ಲಾಡ್ಜ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯ ಹತ್ತಿರ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಹೇಳಿ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಶೇಖರ.ವಿ ಹಳಗೋದಿ ಪಿ.ಐ ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕನಿಷ್ಕ ಲಾಡ್ಜ ಹತ್ತೀರ ರಸ್ತೆಯ ಬದಿಯಲ್ಲಿ ಹತ್ತಿರ ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಚೀಟಿಯ ಮೇಲೆ ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಂಗಣ್ಣಾ ತಂದೆ ಶಿವಪ್ಪಾ ಶಿಲವಂತ ಸಾಃ ಶಿವಾಜಿ ನಗರ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 13070/- ರೂ, ಎರೆಡು ಮಟಕಾ ಚೀಟಿ, ಒಂದು ಬಾಲಪೆನ್ನು, ವಶಪಡಿಸಿಕೊಂಡು ಈ ಮಟಕಾ ಚೀಟಿಗಳನ್ನು ಯಾರಿಗೆ ಕೊಡುವುದಾಗಿ ವಿಚಾರಿಸಿದಾಗ ಸಂಜು @ ಸಂಜ್ಯಾ ತಂದೆ ರಾಮಚಂದ್ರ ಮಂಜಾಳ್ಕರ್ ಸಾ: ಆಶ್ರಯ ಕಾಲೋನಿ ಫೀಲ್ಟರ್ ಬೇಡ್ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಸಂಜು @ ಸಂಜ್ಯಾ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ವಿಳಾಸದಲ್ಲಿಂದ ಈ ಆರೋಪಿತನು ಓಡಿ ಹೋಗಿದ್ದು  ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ದಿನಾಂಕ 09.08.2016 ರಂದು ಸಾಯಂಕಾಲ ಹುಮುನಾಬಾದ ಬೇಸ್ ಹತ್ತೀರದ ಶಹಾ ಸೈಕಲ್ ಅಂಗಡಿಯ ಹತ್ತೀರದ ಸಾರ್ವಜನಿಕ ರಸ್ತೆಯ ಹತ್ತಿರ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಹೇಳಿ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ಚೌಕ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹುಮುನಾಬಾದ ಬೇಸ್ ಹತ್ತೀರದ ಶಹಾ ಸೈಕಲ್ ಅಂಗಡಿಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಇದು ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಚೀಟಿಯ ಮೇಲೆ ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹಿಬೂಬ ಅಲಿಸಾಬ ತಂದೆ ಫತ್ರುಸಾಬ ಜಮಾದಾರ ಸಾಃ ಅಪ್ಪರ ಲೇನ್ ಸಂತ್ರಸವಾಡಿ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1800/- ರೂ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು, ವಶಪಡಿಸಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ:09/08/2016 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಕೋರಿಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್ಪಿ.ಎಸ್‌‌. ರಾಘವೇಂದ್ರ ನಗರ ಪೊಲೀಸ ಠಾಣೆ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋರಿಮಠದಹತ್ತಿರ ಹೋಗಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟು ಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶರಣಬಸಪ್ಪಾ ತಂದೆ ಕಂಟೆಪ್ಪಾ ಕುಂಬಾರ ಸಾ:ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ  ಅಂತಾ ತಿಳಿಸಿದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 2170=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಹಾಗೂ 3 ಮೊಬೈಲ ಪೋನಗಳಿದ್ದು 1) ಕಾರ್ಬನ ಮೊಬೈಲ ಪೋನ್.ಕಿ.500/-ರೂ  2)ಸ್ಯಾಮಸಂಗ ಮೊಬೈಲ ಪೋನ .ಕಿ.400/- 3).ಪ್ಲೇ ಮೊಬೈಲ್ಪೋನ್‌‌ .ಕಿ.300/-ರೂ ಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

No comments: